Website designed by @coders.knowledge.

Website designed by @coders.knowledge.

ETF Investing Strategy to make Regular Income | ETF ಹೂಡಿಕೆ ತಂತ್ರ

Watch Video

ಇಂದು ಈ ಲೇಖನದಲ್ಲಿ ನೀವು ದಿನದ 1 ನಿಮಿಷ ನೀಡಿ ಷೇರು ಮಾರುಕಟ್ಟೆಯಿಂದ ಪದೇ ಪದೇ ಹಣ ಗಳಿಸುವ ತಂತ್ರದ(strategy) ಬಗ್ಗೆ ತಿಳಿಸಲಿದ್ದೇವೆ. ನಾವು ಇಂದು ETF ಹೂಡಿಕೆಯ ತಂತ್ರದ ಬಗ್ಗೆ ಮಾತನಾಡದಿದ್ದೇವೆ. ಈ ತಂತ್ರ ETF ಹೂಡಿಕೆಗೆ ಮಾತ್ರ ಕೆಲಸ ಮಾಡುತ್ತದೆ. ದಯವಿಟ್ಟು ಇದನ್ನು ಸ್ಟಾಕ್ ಹೂಡಿಕೆಗೆ ಬಳಸಬೇಡಿ. ಏಕೆಂದರೆ ಈ ತಂತ್ರದಿಂದ ಸ್ಟಾಕ್ನಲ್ಲಿ ನಷ್ಟವಾಗಬಹುದು.

1. ETF ಎಂದರೇನು?

what is an etf and how does it work in kannada
what is etf

ETF ಎಂದರೆ "Exchange Traded Funds" ಆಗಿದೆ. ಇದು ಕೂಡ ಮ್ಯೂಚುಯಲ್ ಫಂಡ್(mutual fund) ರೀತಿಯೇ ಫಂಡ್ ಆಗಿದೆ. ಮ್ಯೂಚುಯಲ್ ಫಂಡ್ನಲ್ಲಿ ನೀವು ಆಸ್ತಿ ನಿರ್ವಹಣಾ ಸಮಿತಿಯಿಂದ(asset management committee) ಖರೀದಿಸುತ್ತೀರಾ. ಆದರೆ ETF ಷೇರು ಮಾರುಕಟ್ಟೆಯಲ್ಲಿ(share market) ಟ್ರೇಡ್ ಆಗುತ್ತಿರುತ್ತದೆ. ಮ್ಯೂಚುಯಲ್ ಫಂಡ್ನಲ್ಲಿ nav ಇರುತ್ತದೆ. ಆದರೆ ETF ಷೇರುಗಳ ರೀತಿಯೇ ಏರಿಳಿತ(fluctuate) ಆಗುತ್ತಿರುತ್ತವೆ. ಹೀಗಾಗಿ ನೀವು ETF ಖರೀದಿಸಿದರೆ ಷೇರು ಮಾರುಕಟ್ಟೆಯಿಂದಲೇ ಖರೀದಿ ಮತ್ತು ಮಾರಾಟ ಮಾಡುತ್ತಿದ್ದೀರೆಂದರ್ಥವಾಗಿದೆ. ETF ಒಂದು ರೀತಿ ಸ್ಟಾಕ್ ಹೂಡಿಕೆಯಾಗಿದೆ, ಆದರೆ ಮ್ಯೂಚುಯಲ್ ಫಂಡನ್ನು ಹೋಲುತ್ತದೆ. ಷೇರು ಮಾರುಕಟ್ಟೆಯಲ್ಲಿ ನಿಮಗೆ ಅನೇಕ ETF ಸಿಗುತ್ತವೆ, ಅದರ ಬಗ್ಗೆ ಮುಂದೆ ತಿಳಿಸುತ್ತೇವೆ.

ಈಗ ಉದಾಹರಣೆಗೆ ನಿಫ್ಟಿಬೀಸ್(niftybees) ತೆಗೆದುಕೊಳ್ಳೊಣ. BEES ಎಂದರೆ "Benchmark Exchange Traded Scheme" ಆಗಿದೆ. ನಿಫ್ಟಿಯಲ್ಲಿ(nifty) ಭಾರತದ ಟಾಪ್ 50 ಕಂಪನಿಗಳಿವೆ, ಸೆನ್ಸೆಕ್ಸ್ನಲ್ಲಿ(sensex) ಟಾಪ್ 30 ಕಂಪನಿಗಳಿವೆ. ಆದರೆ ನೀವು ಈ ಇಂಡೆಕ್ಸ್ ಳನ್ನು(index) ಖರೀದಿಸಲು ಸಾಧ್ಯವಿಲ್ಲ. ನೀವು ಇವುಗಳನ್ನು ಮ್ಯೂಚುಯಲ್ ಫಂಡ್ ಅಥವಾ ETF ನಿಂದ ಖರೀದಿಸಬಹುದು. ನಿಫ್ಟಿಬೀಸ್ ನಿಫ್ಟಿ 50ಯಾ(nifty 50) ಪ್ರಸಿದ್ಧ ETF ಆಗಿದೆ. ನಿಫ್ಟಿಬೀಸ್, ನಿಫ್ಟಿ 50 ಇಂಡೆಕ್ಸ್ ಅನ್ನು ಫಾಲೋ ಮಾಡುವುದರಿಂದ ನಿಫ್ಟಿ ಮೇಲೆ ಹೋದಂತೆ ಬೀಸ್ ಕೂಡ ಮೇಲೆ ಹೋಗುತ್ತದೆ. ನಿಫ್ಟಿಯ ETF ರೀತಿಯೇ ಚಿನ್ನದ(gold) ETF ಕೂಡ ಇರುತ್ತದೆ. ಅಮೆರಿಕದ S&P 500ನ ETF ಕೂಡ ಇರುತ್ತದೆ.

ಇದನ್ನು ಓದಿ: ಅನುಭವಿ ಹೂಡಿಕೆದಾರನ ಹೂಡಿಕೆಯ ಪಾಠಗಳು

2. ETF Advantage

what are the benefits of etf in kannada
etf advantages

1. Diversification benefit

ನೀವು ಸ್ಟಾಕ್ನಲ್ಲಿ ಹೂಡಿಕೆ ಮಾಡುವುದರಿಂದ ಅದು ಸೊನ್ನೆಗೆ(zero) ಬರಬಹುದು. ಆದರೆ ETF ಸೊನ್ನೆ ಆಗುವುದಿಲ್ಲ. ಇದು ಏಕೆಂದರೆ ಅದು ಅನೇಕ ಸ್ಟ್ರಾಕ್ಗಳನ್ನು ಒಳಗೊಂಡಿದೆ. ಅಂದರೆ ನೀವು ನಿಫ್ಟಿಬೀಸ್ನಲ್ಲಿ ಹೂಡಿಕೆ ಮಾಡಿದರೆ, 50 ಕಂಪನಿಗಳಲ್ಲಿ ಹೂಡಿಕೆ ಮಾಡಿದಂತಾಗುತ್ತದೆ. ETF ನಿಂದ ನಿಮಗೆ ಅಧಿಕ ವೈವಿಧ್ಯೀಕರಣ(diversification) ಸಿಗುತ್ತದೆ.

2. Professional management

ETF ಅನ್ನು ವೃತ್ತಿಪರ ನಿರ್ವಹಕರೆ ನಿರ್ವಹಣೆ ಮಾಡುತ್ತಾರೆ. ಹೀಗಾಗಿ ನಿಮಗೆ ವೃತ್ತಿಪರ ನಿರ್ವಹಕರ ಸಹಾಯ ಸಿಗುತ್ತದೆ.

3. Lowest cost

ETF ನಲ್ಲಿ ಕಡಿಮೆ ಹಣದಿಂದ ಹೂಡಿಕೆ ಮಾಡಿ. ಅಧಿಕ ವೈವಿಧ್ಯೀಕರಣವನ್ನು ನೀವು ಪಡೆಯುತ್ತೀರಾ.

ಇದನ್ನು ಓದಿ: ಹಣವನ್ನು ನಿರ್ವಹಿಸಲು ಜಪಾನಿಯರ ರಹಸ್ಯ

3. ETF Strategy

what is a etf strategy in kannada
etf strategy

ನೀವು ಎಷ್ಟು ಹಣವನ್ನು ಹೂಡಿಕೆ ಮಾಡಲು ಬಯಸುತ್ತಿದ್ದೀರಾ ಎಂಬುದು ನನಗೆ ತಿಳಿದಿಲ್ಲ. ಆದರೆ ನೀವು ನಿಮ್ಮ ತಿಂಗಳ ಸಂಬಳದ 10% ಅನ್ನು ಹೂಡಿಕೆ ಮಾಡಬೇಕು. ಇದು ಆರಂಭಿಕ ಹಂತವಾಗಿದೆ(initial level). ನೀವು ಬದುಕಿನಲ್ಲಿ ಮುಂದುವರೆದಷ್ಟು ಹೂಡಿಕೆಯನ್ನು ಹೆಚ್ಚಿಸಬೇಕು, ಖರ್ಚು ಕಡಿಮೆಗೊಳ್ಳಬೇಕು. ಇದನ್ನು ಎಷ್ಟು ಬೇಗನೇ ನೀವು ಅರ್ಥ ಮಾಡಿಕೊಳ್ಳುತ್ತೀರೋ ಅಷ್ಟು ಮಜಾ ಸಿಗುತ್ತದೆ ಮತ್ತು ಶ್ರೀಮಂತ(wealthy) ಕೂಡ ಆಗುತ್ತೀರಾ.

ಈ ತಂತ್ರದ ಪ್ರಕಾರ ನೀವು ನಿಮ್ಮ ಸಂಬಳದ 10% ಅನ್ನು ಹೂಡಿಕೆ ಮಾಡಿ. ಉದಾಹರಣೆಗೆ ನಿಮ್ಮ ತಿಂಗಳ ಸಂಬಳ 50,000 ರೂ ಇದೆ ಎಂದುಕೊಂಡರೆ ಅದರ 10% 5,000 ರೂ ಆಗುತ್ತದೆ. ನಿಮಗೆ ಹೂಡಿಕೆ ಮಾಡಲು ಸೋಮವಾರದಿಂದ ಶುಕ್ರವಾರದ ತನಕ ಸಮಯವಿದೆ. ಇದರಲ್ಲಿ ನೀವು ಪ್ರತಿದಿನ ಇಂಡೆಕ್ಸ್ ಮೇಲಿದೆಯೇ ಇಲ್ಲ ಕೆಳಗಿದೆಯೇ ಎಂಬುದನ್ನು ನೋಡಬೇಕು, ಇದಕ್ಕೆ ಕೇವಲ 1 ನಿಮಿಷವಾಗುತ್ತದೆ. ನೀವು ನಿಫ್ಟಿ 50, S&P 500 ರೀತಿಯ ಯಾವ ETF ನಲ್ಲಿ ಹೂಡಿಕೆ ಮಾಡಲು ಬಯಸುತ್ತೀರೋ, ಅದರ ಇಂಡೆಕ್ಸ್ ಅನ್ನು ನೋಡಿ.

ನೀವು ಇಂದು ಮಾರುಕಟ್ಟೆ ಕೆಳಗೆ ಇರುವುದನ್ನು ನೋಡುತ್ತೀರಾ? ಷೇರು ಮಾರುಕಟ್ಟೆ 1 ತಿಂಗಳಲ್ಲಿ 20 ದಿನ ತೆರೆದಿರುತ್ತದೆ. ನಿಮ್ಮ ಸಂಬಳ 5,000 ರೂ ಅನ್ನು 20 ರಿಂದ ಭಾಗಿಸಿದರೆ 250 ರೂ ಬರುತ್ತದೆ. ನೀವು ಪ್ರತಿದಿನ 250 ರೂ ಅನ್ನು ಹೂಡಿಕೆ ಮಾಡಬೇಕು. ಆದರೆ ಮಾರುಕಟ್ಟೆ ಯಾವಾಗ ಕೆಳಗೆ ಇರುತ್ತದೆಯೋ ಅಂದು 250 ರೂ ಅನ್ನು ಹೂಡಿಕೆ ಮಾಡಿ. ಇಂದು ನಿಫ್ಟಿ ಕೆಳಗೆ ಇರುವುದನ್ನು ನೋಡಿ ಅದರ ETF ನಲ್ಲಿ 250 ರೂ ಹೂಡಿಕೆ ಮಾಡುತ್ತೀರಾ. 2 ನೇ ದಿನ ಮಾರುಕಟ್ಟೆ 2% ಮೇಲೆ ಹೋಗಿದೆ. ಆ ದಿನ ಹೂಡಿಕೆ ಮಾಡಬೇಡಿ, 3 ನೇ ದಿನ ಮತ್ತೊಮ್ಮೆ 3% ಕೆಳಗೆ ಇರುವುದನ್ನು ನೋಡುತ್ತೀರಾ. ಆದರೆ ಈಗ ನೀವು ಕೇವಲ 250 ರೂ ಅನ್ನು ಹೂಡಿಕೆ ಮಾಡಬೇಡಿ. ಬದಲಿಗೆ 2 ನೇ ದಿನದ 250 ರೂ ಸೇರಿಸಿ 500 ರೂ ಅನ್ನು ಹೂಡಿಕೆ ಮಾಡಿ. 4 ನೇ ದಿನ ಮಾರುಕಟ್ಟೆ ಮೇಲೆ ಇತ್ತು ಮತ್ತು ದಿನ 5, 6, 7 ರಂದು ಮೇಲೆ ಇತ್ತು, ಈ ಸಮಯದಲ್ಲಿ ಹೂಡಿಕೆ ಮಾಡಬೇಡಿ. 8 ನೇ ದಿನ ಮಾರುಕಟ್ಟೆ ಕೆಳಗೆ ಇರುವುದನ್ನು ನೋಡುತ್ತೀರಾ. ಆಗ ಹೂಡಿಕೆ ಮಾಡದೆ ಇರದ ದಿನದ ಎಲ್ಲಾ ಹಣವನ್ನು ಸೇರಿಸಿ ಹೂಡಿಕೆ ಮಾಡಿ.

ಈ ಪರಿಕಲ್ಪನೆ(concept) ತುಂಬಾ ಸರಳವಾಗಿದೆ. ಯಾವಾಗ ಮಾರುಕಟ್ಟೆ ಕೆಳಗಿರುತ್ತದೆಯೋ(negative) ಇರುತ್ತದೆಯೋ ಆಗ ಹೂಡಿಕೆ ಮಾಡಿ. ಮಾರುಕಟ್ಟೆ ಮೇಲೇಳುವಾಗ(rally) ಹೂಡಿಕೆ ಮಾಡಬೇಡಿ, ಮತ್ತೊಮ್ಮೆ ಬಿದ್ದಾಗ ಮಾಡಿ. ಮತ್ತೊಮ್ಮೆ ಮೇಲೇಳಿದರೆ ಹೂಡಿಕೆ ಮಾಡಬೇಡಿ ಮತ್ತೆ ಬಿದ್ದಾಗ ಹೂಡಿಕೆ ಮಾಡಿ.

ಒಂದು ಕಂಪನಿ ಸೋಲಬಹುದು ಆದರೆ 500 ಕಂಪನಿಗಳು ಸೋಲಲು ಸಾಧ್ಯವಿಲ್ಲ. ಭಾರತದ ನಿಫ್ಟಿ, ಅಮೆರಿಕದ S&P ಯಲ್ಲಿ ಪ್ರತಿ 6 ತಿಂಗಳಿಗೊಮ್ಮೆ ಚೆನ್ನಾಗಿ ನಿರ್ವಹಿಸದ ಕಂಪನಿಗಳನ್ನು ತೆಗೆಯಲಾಗುತ್ತದೆ. ಹೀಗಾಗಿ ನಿಫ್ಟಿಯಲ್ಲಿ ಯಾವಾಗಲೂ ಟಾಪ್ 50 ಕಂಪನಿಗಳೇ ಇರುತ್ತವೆ, ಅದು ಮೇಲೆಯೇ ಹೋಗುತ್ತದೆ. ಹೀಗಾಗಿ ಇದರ ETF ನಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ವೈಫಲ್ಯ(failure) ಆಗುವ ಸಾಧ್ಯತೆ ಶೂನ್ಯ ಇರುತ್ತದೆ.

ನೀವು 2,500 ರೂ ಹೂಡಿಕೆ ಮಾಡುತ್ತೀರಿ. ಮುಂದಿನ 10 ದಿನ ಮಾರ್ಕೆಟ್ ಮೇಲೆಯೇ ಹೋಯಿತು. 10 ದಿನ ಕೆಳಗೆ ಬಂತು. ಅಂದು ಒಮ್ಮೆಲೇ 25,000 ರೂ ಅನ್ನು ಹೂಡಿಕೆ ಮಾಡಿ. ಏಕೆಂದರೆ 25,000 ರೂ, 35,000 ರೂ ಆಗುವುದನ್ನು ನೋಡುತ್ತೀರಾ. ಇದರಲ್ಲಿ ನಾವು ಮಾರುವ ಬಗ್ಗೆ ತಿಳಿಸುತ್ತಿಲ್ಲ. ಏಕೆಂದರೆ ಮ್ಯೂಚುಯಲ್ ಫಂಡ್, ETF ಮತ್ತು ಷೇರು ಹೂಡಿಕೆಯನ್ನು ದೀರ್ಘವಾಧಿಗಾಗಿ ಮಾಡುತ್ತೇವೆ. ಇವುಗಳಲ್ಲಿ ರಿಟರ್ನ್ ಭಯಂಕರವಾಗಿ ಸಿಗುತ್ತದೆ. ಈ ತಂತ್ರವು ನಿಮಗೆ ಪದೇ ಪದೇ ಹಣವನ್ನು ಗಳಿಸಿಕೊಡುತ್ತದೆ.

ನಿಮಗೆ ಸೆನ್ಸಕ್ಸ್ ಇಂಡೆಕ್ಸ್ ETF 600 ರೂ ಗೆ ಸಿಗುತ್ತದೆ. ನೀವು ಈ ತಂತ್ರವನ್ನು ಬಳಸಿದಲ್ಲಿ ಬಾರಿ ಬಾರಿ ಹೂಡಿಕೆ ಮಾಡುತ್ತಿರುತ್ತೀರಾ. ನಿಮ್ಮ ಹಣ ಬೆಳೆಯುತ್ತಿರುವುದನ್ನು ಕಾಣುವುದೇ ಮುಖ್ಯವಾಗಿದೆ. ಈ ಸರಳವಾದ ತಂತ್ರವು ನಿಮಗೆ ಹೇಗೆ ಅನಿಸಿತು ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ.

ಇದನ್ನು ಓದಿ: ಆರಂಭಿಕ ಆರ್ಥಿಕ ಸ್ವತಂತ್ರಕ್ಕಾಗಿ 5 ನಿಯಮಗಳು

4. Bonus tip

is etf better than stocks in kannada
bonus tip

ನಾವು ಈ ತಂತ್ರವನ್ನು ಷೇರುಗಳಿಗೆ ಬಳಸಬೇಡಿ ಎಂದು ಹೇಳಿದೆವು. ಇದು ಏಕೆಂದರೆ ಈ ತಂತ್ರದಲ್ಲಿ ನಾವು ಸರಾಸರಿ(average) ಮಾಡುತ್ತಿದ್ದೇವೆ ಮತ್ತು ಇಂಡೆಕ್ಸ್ ಮೇಲೆಯೇ ಹೋಗುತ್ತದೆ. ಆದರೆ ನೀವು ಷೇರುಗಳಲ್ಲಿ ಸರಾಸರಿ ಮಾಡುತ್ತಿದ್ದರೆ ಷೇರು ಸೊನ್ನೆನ್ನೂ ಆಗಬಹುದು.

ಯಾವುದಾದರೂ ಷೇರು 100 ರೂ ಗೆ ಸಿಗುತ್ತಿರುತ್ತದೆ. ನೀವು ಅದನ್ನು 80 ರೂ ಗೆ ಖರೀದಿಸುತ್ತೀರಾ. 60 ರೂ ಗೂ ಖರೀದಿಸುತ್ತೀರಾ. ಈಗ 50 ರೂ ಗೆ ಬಂದಿದೆ. ಅದು ಇನ್ನು ಕೆಳಗೆ ಹೋಗುತ್ತದೆಯೇ ಇಲ್ಲ ಮೇಲೆ ಹೋಗುತ್ತದೆಯೇ ಎಂಬುದು ನಿಮಗೆ ತಿಳಿದಿಲ್ಲ. ಆದರೆ ಇಂಡೆಕ್ಸ್ ಯಾವಾಗಲೂ ಮೇಲೆಯೇ ಹೋಗುತ್ತದೆ. ಹೀಗಾಗಿ ತಂತ್ರವು ಷೇರಿನಲ್ಲಿ ನಷ್ಟವನ್ನು ನೀಡುತ್ತದೆ.

ನೀವು ಮ್ಯೂಚುಯಲ್ ಫಂಡ್ ಮತ್ತು ಷೇರುಗಳಲ್ಲಿ sip ಮಾಡಬಹುದು. ಆದರೆ ಆ sip ನ ದಿನಾಂಕ ಖಚಿತವಾಗಿರುತ್ತದೆ. ಹೀಗಾಗಿ ಪ್ರತಿ ತಿಂಗಳು ಒಂದು ದಿನಾಂಕದಲ್ಲಿ ನಿಮ್ಮ ಹಣ ಹೂಡಿಕೆಯಾಗುತ್ತಿರುತ್ತದೆ. ನೀವು ಪ್ರತಿ ತಿಂಗಳು ಒಂದೇ ದಿನಾಂಕದಲ್ಲಿ ಹೂಡಿಕೆ ಮಾಡುತ್ತಿರುತ್ತೀರಾ. ಆ ದಿನ ಮಾರುಕಟ್ಟೆ ಯಾವ ರೀತಿ ಇದೆ ಎಂದು ನಿಮಗೆ ತಿಳಿದಿರುವುದಿಲ್ಲ. ಇದರಲ್ಲೂ ನೀವು ಸರಾಸರಿ ಮಾಡುತ್ತಿರುವಿರಾ. ಆದರೆ ಮಾರುಕಟ್ಟೆ ಮೇಲಿದ್ದಾಗಲೂ, ಹೂಡಿಕೆ ಮಾಡುತ್ತೀರಾ. ಅಂದರೆ 10 ತಾರೀಕು ಹೂಡಿಕೆ ಮಾಡಿದ್ದೀರಾ ಎಂದುಕೊಂಡರೆ, ಮುಂದೆ 10 ರಿಂದ 20 ನೇ ತಾರೀಖಿನ ತನಕ ಮಾರುಕಟ್ಟೆ ಕೆಳಗೆ ಇರುತ್ತದೆ. ಅದರ ಲಾಭ ನಿಮಗೆ ಸಿಗುವುದಿಲ್ಲ. ಆದರೆ ನೀವು ನಾವು ತಿಳಿಸಿದ ETF ತಂತ್ರವನ್ನು ಬಳಸಿದರೆ ಪ್ರತಿ ಬಾರಿ, ಪ್ರತಿದಿನ ಸರಾಸರಿಯಾಗುತ್ತಿರುತ್ತದೆ. ಇದು ಉತ್ತಮವಾಗಿದೆ. ಆದರೆ ನಾವು ನಿಮಗೆ ಮ್ಯೂಚುಯಲ್ ಫಂಡ್ ಮತ್ತು ETF ಎರಡರಲ್ಲೂ ಹೂಡಿಕೆ ಮಾಡಲು ಸೂಚಿಸುತ್ತೇವೆ.

5. ಕೆಲವು ETF

ಕೆಲವು ETF ಬಗ್ಗೆ ತಿಳಿಸಿದ್ದಾರೆ,

  • • ನಿಫ್ಟಿ 50 ಯ ನಿಫ್ಟಿ ಬೀಸ್(nifty bees) ಇದೆ. 15 ಮಾರ್ಚ್ 2024 ರಂದು ಇದರ ಬೆಲೆ 243 ರೂ ಇತ್ತು.
  • • HDFC small cap 250 ETF, 250 ಸಣ್ಣ ಕ್ಯಾಪ್ ಕಂಪನಿಗಳನ್ನು ಟ್ರ್ಯಾಕ್ ಮಾಡುತ್ತದೆ. ಇದರ ಬೆಲೆ 15 ಮಾರ್ಚ್ 2024 ರಂದು 139 ರೂ ಇತ್ತು.
  • • Midcap ETF, ಮಿಡ್ ಕ್ಯಾಪ್ ಕಂಪನಿಗಳನ್ನು ಟ್ರ್ಯಾಕ್ ಮಾಡುತ್ತದೆ. ಇದರ ಬೆಲೆ 15 ಮಾರ್ಚ್ 2024 ರಂದು 17 ರೂ ಇತ್ತು.
  • • ಗೋಲ್ಡ್ ಬೀಸ್(gold bees), ಚಿನ್ನದ ETF ಆಗಿದೆ. ಇದರ ಬೆಲೆ 15 ಮಾರ್ಚ್ 2024 ರಂದು 55 ರೂ ಇತ್ತು.

ಇನ್ನು ಅನೇಕ ETF ಗಳು ಇವೆ. ಅವುಗಳನ್ನು ಸ್ಕ್ರೀನರ್ಗಳಲ್ಲಿ(screnner) ನೀವು ಸರ್ಚ್ ಮಾಡಿ ತಿಳಿಯಬಹುದು.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments