Watch Video
ತುಂಬಾ ವಿದ್ಯಾರ್ಥಿಗಳು ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ ಎಂದು ಕೇಳುತ್ತಾರೆ. ಆಗಿದ್ದರೆ ಗಮನ ಮತ್ತು ಜ್ಞಾಪಕ ಶಕ್ತಿಯನ್ನು ಸುಧಾರಿಸುವುದು ಹೇಗೆ? ನೀವು ಕೂಡ ಈ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದೀರಾ?
ನೀವು ವಿದ್ಯಾರ್ಥಿ, ಗೃಹಿಣಿ, ಉದ್ಯೋಗಿ, ಬ್ಯುಸಿನೆಸ್ ಮ್ಯಾನ್ ಯಾರೇ ಆಗಿದ್ದರೂ, ನಿಮ್ಮ ಗಮನ ಮತ್ತು ಜ್ಞಾಪಕ ಶಕ್ತಿಯನ್ನು ಸುಧಾರಿಸಿಕೊಳ್ಳಬೇಕು. ಹೀಗಾಗಿ ನಾವು ಜ್ಞಾಪಕ ಶಕ್ತಿಯನ್ನು ಸುಧಾರಿಸುವ 3 ಸಿದ್ಧಾಂತಗಳ ಬಗ್ಗೆ ತಿಳಿಸುತ್ತಿದ್ದೇವೆ.
ನಮ್ಮ ದೇಹದ ಒಳಗೆ ಇಂದ್ರಿಯ(sense) ಅಂಗಗಳಾದ ಕಣ್ಣು, ಕಿವಿ, ಮೂಗು, ಬಾಯಿ ಮತ್ತು ಚರ್ಮಗಳಿಂದ ಮಾಹಿತಿ ಒಳಗೆ ಹೋಗುತ್ತದೆ. ನಮ್ಮ ಮೆದುಳು ಈ ರೀತಿ ಪ್ರವೇಶಿಸುವ ಎಲ್ಲ ಮಾಹಿತಿಗಳನ್ನು ನಮ್ಮ ನೆನಪಿಗೆ ತರುವುದಿಲ್ಲ.
ನಮ್ಮ ನೆನಪಿಗೆ ಬರುವ ಮಾಹಿತಿಗಳು ಜಾಗೃತ ಮನಸ್ಸಿನಲ್ಲಿ(conscious mind) ಇರುತ್ತವೆ. ಈ ಜಾಗೃತ ಮನಸ್ಸಿಗೆ ಯಾವ ಮಾಹಿತಿಯನ್ನು ನೀಡಬೇಕು, ಯಾವ ಮಾಹಿತಿಯನ್ನು ನೀಡಬಾರದು ಎಂಬುದು ಮೆದುಳಿನ ಮೇಲೆ ನಿಂತಿದೆ.
ಪ್ರತಿದಿನ ನೀವು ಶಾಲೆ ಅಥವಾ ಕಾಲೇಜಿಗೆ ಹೋಗುತ್ತೀರಾ. ನೀವು ಹೋಗುವ ಸ್ಥಳದಲ್ಲಿ ನಿಮಗೆ ಹಲವಾರು ಕಾರುಗಳು ಕಾಣಸಿಗುತ್ತವೆ. ಹಾಗಿದ್ದರೆ, ನಿಮಗೆ ಅವುಗಳಲ್ಲಿ ಎಷ್ಟು ನೆನಪಿದೆ. ತುಂಬಾ ಕಡಿಮೆ ನೆನಪಿದೆ ಎಂದು ನೀವು ಹೇಳಬಹುದು.
ಇದೇ ರೀತಿಯೇ ನೀವು ಪ್ರತಿದಿನ ಹೋಗುವ ರಸ್ತೆಯಲ್ಲಿ ಅನೇಕ ಕಟ್ಟಡಗಳನ್ನು ನೋಡುತ್ತೀರಾ. ಅದರಲ್ಲಿ ಎಷ್ಟು ಕಟ್ಟಡ ನೆನಪಿದೆ ಎಂದು ಕೇಳಿದರು, ನಿಮ್ಮ ಉತ್ತರ ಕಡಿಮೆಯೆಂಬುದು ಇರಬಹುದು. ಆಗಿದ್ದರೆ ಇವೆಲ್ಲ ನಿಮಗೆ ಏಕೆ ನೆನಪಿರುವುದಿಲ್ಲ. ಇದು ಏಕೆಂದರೆ ನಿಮ್ಮ ಮೆದುಳು ಆ ಮಾಹಿತಿಗಳನ್ನು ಜಾಗೃತ ಮನಸ್ಸಿಗೆ ಕಳುಹಿಸುವುದಿಲ್ಲ.
ಆಗಿದ್ದರೆ ನಿಮ್ಮ ಮೆದುಳು ಏಕೆ ಅದನ್ನು ಜಾಗೃತ ಮನಸ್ಸಿಗೆ ಹಾಕಲಿಲ್ಲ. ನೀವು ಇದನ್ನು ಅರ್ಥ ಮಾಡಿಕೊಂಡರೆ ನಿಮಗೆ ಜ್ಞಾಪಕ ಶಕ್ತಿ ಸುಧಾರಿಸುವುದು ಹೇಗೆ ಎಂಬುದು ತಿಳಿಯುತ್ತದೆ.
ಇದನ್ನು ಓದಿ: ರಾತ್ರಿ ನಿದ್ದೆ ಬಾರದೆ ಇದ್ದರೆ ಈ ಧ್ಯಾನವನ್ನು ಮಾಡಿನಿಮಗೆ ಪರದೆಯ(screen) ಮೇಲೆ ಕಾಣುತ್ತಿರುವ ಫೋಟೋ ತುಂಬಾ ವಿಚಿತ್ರವೆನಿಸುತ್ತಿರಬಹುದು. ಈ ರೀತಿಯ ಜನರು ನಿಮ್ಮ ಜೀವನದಲ್ಲಿ ಸಿಕ್ಕರೆ ನೀವು ಅವರನ್ನು ಮರೆಯಲು ಸಾಧ್ಯವೇ ಇಲ್ಲ.
ಒಂದು ಕಾರು ನೀರಿನಲ್ಲಿ ಹೋಗುತ್ತಿದೆ. ನೀವು ಅದನ್ನು ನೋಡಿದರೇ ವಿಚಿತ್ರವೆನಿಸುತ್ತದೆ. ಅದನ್ನು ನೀವು ವಿಚಿತ್ರ ರೀತಿಯಲ್ಲಿ ಜೀವನಪೂರ್ತಿ ನೆನಪಿನಲ್ಲಿಟ್ಟುಕೊಳ್ಳುತ್ತೀರಿ.
ಕೋತಿ ಸಿಂಹದ ಮರಿಯನ್ನು ಎತ್ತಿಕೊಂಡಿರುವುದು ಅಥವಾ ಸಿಂಹದ ಮರಿಯ ಜೊತೆ ಕೋತಿ ಆಡುತ್ತಿರುವುದನ್ನು ನೋಡಿದರೆ, ಅದು ವಿಚಿತ್ರ ರೀತಿಯಲ್ಲಿ ನೆನಪಿನಲ್ಲಿರುತ್ತದೆ.
ದೊಡ್ಡ ತಟ್ಟೆಯಲ್ಲಿ ಸ್ವಲ್ಪವೇ ಅನ್ನ ಹಾಕಿದರು. ನಿಮಗೆ ವಿಚಿತ್ರವೆನಿಸುತ್ತದೆ. ಇವೆಲ್ಲದರ ಅರ್ಥ ನಿಮಗೆ ತಿಳಿಯಿತೇ. ಜೀವನದಲ್ಲಿ ನಮಗೆ ವಿಚಿತ್ರ ಎನಿಸುವುದು ನಮ್ಮ ಮೆದುಳು ಬೇಗನೆ, ತುಂಬಾ ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ.
ನೀವು ನಿಮ್ಮ ದಿನನಿತ್ಯ ಜೀವನದಲ್ಲಿ ಈ ಸಿದ್ಧಾಂತವನ್ನು ಬಳಸಬಹುದು. ನೀವು ಏನನ್ನಾದರು ನೆನಪಿನಲ್ಲಿಟ್ಟುಕೊಳ್ಳಲು ಬಯಸಿದರೆ ಅದಕ್ಕೆ ವಿಚಿತ್ರವಾದ ಹೆಸರನ್ನು ನೀಡಿ, ವಿಚಿತ್ರವಾಗಿ ನಿಮ್ಮ ತಲೆಯಲ್ಲಿ ಅದನ್ನು ಚಿತ್ರಿಸಿ.
ನೀವು ಗಾತ್ರದ ಮೇಲೆ ವಸ್ತುಗಳನ್ನು ಪ್ರತ್ಯೇಕಿಸಿದಾಗ ನಿಮ್ಮ ನೆನಪಿನಲ್ಲಿ ಅದು ಚೆನ್ನಾಗಿ ಉಳಿಯುತ್ತದೆ. ನೀವು ವಿದ್ಯಾರ್ಥಿಯಾಗಿದ್ದರೆ ಇದನ್ನು ವಿಜ್ಞಾನ ಓದುವಾಗ, ಗಣಿತದ ಫಾರ್ಮುಲಾ ಕಲಿಯುವಾಗ, ಐಎಎಸ್ ಗೆ ತಯಾರಿ ನಡೆಸುವಾಗ ಬಳಸಬಹುದು. ನಿಮ್ಮ ಓದುವಿನ ವಿಷಯವನ್ನು ವಿಚಿತ್ರವಾದ ಪ್ರಾಣಿ, ವಸ್ತು ಯಾವುದಕ್ಕಾದರೂ ಹೋಲಿಸಿ ನೋಡಿ.
ಇದನ್ನು ಓದಿ: ನಿಮ್ಮ ಮನಸ್ಸಿನ ಶಾಂತಿಯನ್ನು ಹೆಚ್ಚಿಸಲು ಐದು ಸರಳ ಮಾರ್ಗಗಳುನಮ್ಮ ಮೆದುಳಿನಲ್ಲಿ ಅತಿಯಾದ ಭಾವನೆಯಿಂದ ಕೂಡಿದ ವಿಷಯಗಳು ತುಂಬಾ ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ. ಒಬ್ಬ ಉದ್ಯೋಗಿಗೆ ನಿನ್ನ ವೃತ್ತಿಯ ತುಂಬಾ ಉತ್ತಮ ದಿನ ಯಾವುದು ಎಂದು ಕೇಳಿದರೆ, ಆತ ನನಗೆ ಒಬ್ಬರು ಪ್ರೋತ್ಸಾಹಿಸಿದ ದಿನ ಎಂದು ಹೇಳುತ್ತಾನೆ.
ಅದೇ ನಿನ್ನ ವೃತ್ತಿಯ ತುಂಬಾ ಕೆಟ್ಟ ದಿನ ಯಾವುದು ಎಂದು ಕೇಳಿದರೆ, ಬಾಸ್ ಎಲ್ಲರ ಮುಂದೆ ಬೈದ ದಿನ ಎಂದು ಹೇಳುತ್ತಾನೆ. ಈ ರೀತಿಯಲ್ಲಿ ಅತಿಯಾದ ಭಾವನೆಯಿಂದ ಕೂಡಿದ ವಿಷಯಗಳು ನೆನಪಿನಲ್ಲಿ ಚೆನ್ನಾಗಿ ಉಳಿಯುತ್ತವೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಮನಸ್ಸು ಹೇಗೆ ಸಂಸ್ಕಾರ ಮಾಡುತ್ತದೆ ಎಂದು ತಿಳಿಸಿದ್ದಾರೆ. ಮನಸ್ಸು ದ್ವಂದ್ವತೆ(duality) ಮೇಲೆ ಸಂಸ್ಕಾರ ಮಾಡುತ್ತದೆ. ತುಂಬಾ ಸೆಕೆ - ತುಂಬಾ ಚಳಿ, ಅತೀ ಸುಖ - ಅತೀ ದುಃಖ, ಮಾನ - ಅಪಮಾನ, ತುಂಬಾ ಒಳ್ಳೆಯದು - ತುಂಬಾ ಕೆಟ್ಟದು, ಇವುಗಳ ನೆನಪಿನಲ್ಲಿ ಉಳಿಯುತ್ತವೆ. ಮನಸ್ಸು ಇವುಗಳನ್ನು ತೆಗೆದುಕೊಂಡು ಬೇಗನೆ ಸಂಸ್ಕಾರ ಮಾಡುತ್ತದೆ.
ಹೀಗಾಗಿ ನೀವು ಏನನ್ನಾದರು ನೆನಪಿಟ್ಟುಕೊಳ್ಳಲು ಬಯಸಿದರೆ ಅದನ್ನು ಅತಿಯಾದ ಭಾವನೆಯೊಂದಿಗೆ ಮಿಶ್ರಣ ಮಾಡಿ.
ಇದನ್ನು ಓದಿ: ಗಣಿತವನ್ನು ವೇಗವಾಗಿ ಕಲಿಯುವುದು ಹೇಗೆ?ನೀವು ಈ ಸಿದ್ಧಾಂತವನ್ನು ಬಳಸಿ ಆಕಸ್ಮಿಕ ಮಾದರಿಯಲ್ಲಿರುವ(accidental pattern) ಯೋಚನೆಗಳನ್ನು ರಚನಾತ್ಮಕ ಮಾದರಿ(structured pattern) ಯೋಚನೆಗಳಾಗಿ ಬದಲಿಸಬಹುದು.
ನೀವು ಗುರಿಯನ್ನು ಸಾಧಿಸುವ ಬಗ್ಗೆ ಯೋಚಿಸಿ, ಅದನ್ನು ಅತಿಯಾದ ಭಾವನೆಯಿಂದ ಮಿಶ್ರಣ ಮಾಡಿದರೆ ಅದನ್ನು ರಚನಾತ್ಮಕ ಮಾದರಿ ಯೋಚನೆ ಎನ್ನಲಾಗುತ್ತದೆ. ಇದು ನಿಮ್ಮ ಜಾಗತ ಮನಸ್ಸಿನಲ್ಲೇ ಇರುತ್ತದೆ.
ಇದು ನಿಮ್ಮ ನೆನಪಿನಲ್ಲೇ ಇದ್ದರೆ ನಿಮಗೆ ಬರುವ ಇತರ ಯೋಚನೆಗಳು ನಿಮ್ಮ ಗುರಿಗೆ ಸಂಬಂಧಿಸಿದ್ದರೆ ಮಾತ್ರ ಜಾಗೃತ ಮನಸ್ಸಿಗೆ ಬರುತ್ತದೆ. ನಿಮ್ಮ ಗುರಿಗೆ ಸಂಬಂಧಿಸಿಲ್ಲವೆಂದರೆ ಅದು ನಿಮ್ಮ ನೆನಪಿಗೆ ಬರುವುದಿಲ್ಲ.
ಉದಾಹರಣೆಗೆ ನಿಮಗೆ ಇಷ್ಟವಾದ ವಿಷಯವನ್ನು ಓದುತ್ತಿದ್ದರೆ, ಅದನ್ನು ಓದಲು ಖುಷಿಯಾಗುತ್ತದೆ. ನೆನಪಿನಲ್ಲೂ ಚೆನ್ನಾಗಿ ಉಳಿಯುತ್ತದೆ. ಅದೇ ನಿಮಗೆ ಬೇಸರ ನೀಡುವ ವಿಷಯವನ್ನು ಓದುತ್ತಿದ್ದರೆ, ಅದು ನೆನಪಿನಲ್ಲಿ ಉಳಿಯುವುದು ಅಸಾಧ್ಯವಾಗಿದೆ.
ನಮ್ಮ ಮೆದುಳು ಎಲ್ಲ ವಿಷಯಗಳನ್ನು ನೆನಪಿಗೆ ತರುವುದಿಲ್ಲ. ಆ ರೀತಿ ಎಲ್ಲಾ ವಿಷಯಗಳನ್ನು ನೆನಪಿಗೆ ತಂದರೆ, ನಾವು ಹುಚ್ಚರಾಗುತ್ತೇವೆ. ಹೀಗಾಗಿ ಮೆದುಳು ಮುಖ್ಯ ವಿಷಯಗಳನ್ನು ಮಾತ್ರ ನೆನಪಿಗೆ ತರುತ್ತದೆ.
ಈ ಮುಂಚೆ ಹೇಳಿದಂತೆ ಮೆದುಳು ಅತಿಯಾದ ಭಾವನೆಯಿಂದ ಕೂಡಿದ, ನಿಮ್ಮ ಗುರಿಗೆ ಸಂಬಂಧಿಸಿದ, ವಿಚಿತ್ರ ಎನಿಸುವ ವಿಷಯಗಳನ್ನು ಬೇಗನೆ ನೆನಪಿನಲ್ಲಿಟ್ಟುಕೊಳ್ಳುತ್ತದೆ. ನೀವು ಈ 3 ಸಿದ್ಧಾಂತಗಳನ್ನು ಒಂದೊಂದಾಗಿ ಇಲ್ಲ ಮೂರನ್ನು ಒಟ್ಟಿಗೆ ನಿಮ್ಮ ಜೀವನದಲ್ಲಿ ಪ್ರಯೋಗಿಸಿದರೆ, ನಿಮ್ಮ ಜ್ಞಾಪಕ ಶಕ್ತಿಯ ಸಾಮರ್ಥ್ಯ ಹೆಚ್ಚುತ್ತದೆ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
Info Mind 9441
Info Mind 2271
Info Mind 5408
See all comments...
sharu1307 • September 22nd,2022
It's helpful