Watch Video
ಪರೀಕ್ಷೆ ಬಂತೆಂದರೆ ತಲೆನೋವು ಹೆಚ್ಚು. ಈ ತಲೆನೋವಿನಿಂದ ಪಾರಾಗಲು ಇರುವ ಮಾರ್ಗವೆಂದರೆ ಓದುವುದು. ಆದರೆ ಹೇಗೆ?
ಮಾಹಿತಿ ತಾಣ ನಿಮಗೆ ಪರೀಕ್ಷೆಯ ಮುಂಚೆ ಓದುವುದು ಹೇಗೆ ಎಂಬುದನ್ನು ತಿಳಿಸುತ್ತಿದೆ.
ನಿಮಗೆ ಓದಲು ಸುಲಭವಾಗುವಂತೆ ಒಂದು ಟೈಮ್ ಟೇಬಲ್ ಮಾಡಿ, ಪರೀಕ್ಷೆಯ ಕೊನೆಯವರೆಗೂ ಅದನ್ನು ಪಾಲಿಸಿ. ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಹಿಂದಿನ ದಿನ ಓದಿದರೆ ಎಲ್ಲವೂ ತಿಳಿದುಕೊಳ್ಳಬಹುದು ಅಂದುಕೊಳ್ಳುತ್ತಾರೆ. ಆದರೆ ಇದು ಅಷ್ಟು ಸರಿಯಲ್ಲ. ನೀವು ಎಷ್ಟು ಪಾಠ ಓದಬೇಕು, ಎಷ್ಟು ದಿನ ಇದೆ ಎಂದು ನೋಡಿ ಒಂದು ಟೈಮ್ ಟೇಬಲ್ ರೆಡಿ ಮಾಡಿ.
ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 18 ಅತ್ಯುತ್ತಮ ಆಹಾರಗಳುನೀವು ಒಂದು ಓದುವ ಜಾಗ ನಿಗದಿಪಡಿಸಿಕೊಂಡು ಅಲ್ಲಿ ನಿಮಗೆ ಗೊಂದಲ ಎಬ್ಬಿಸುವ ಯಾವುದೇ ವಸ್ತು ಇದ್ದರು ಅದನ್ನು ತೆಗೆಯಿರಿ. ನೀವು ಓದುವ ಕೋಣೆಯಲ್ಲಿ ಬೆಳಕು ಚೆನ್ನಾಗಿ ಬರುವಂತೆ ನೋಡಿಕೊಳ್ಳಿ. ಎಲ್ಲರಿಗೂ ಓದುವಾಗ ನಿಶಬ್ದವೇ ಇರಬೇಕೆಂದೆನಿಲ್ಲ, ಕೆಲವರಿಗೆ ಹಾಡು ಕೇಳುತ್ತಾ ಓದಿದರೆ ಬೇಗ ಅರ್ಥವಾಗುತ್ತದೆ. ಇದು ನಿಮ್ಮ ಮೇಲೆ ಬಿಟ್ಟಿದು.
ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್ನೀವು ಓದಿಕೊಂಡು ಬಂದಿದನು ಪಾಯಿಂಟ್ಸ್ ಮಾಡಿ, ಈ ಪಾಯಿಂಟ್ಸ್ ಮಾಡಿದನು ಡಯಗ್ರಮ್ ಮಾಡಿ. ಈ ರೀತಿ ಡಯಗ್ರಮ್ ಓದುವುದನ್ನು ವಿಶುಯಲ್ ಲರ್ನಿಂಗ್ ಎನ್ನುತ್ತಾರೆ. ಪರೀಕ್ಷೆಯ ಹಿಂದಿನ ದಿನ ನೀವು ಈ ಡಯಗ್ರಮ್ ನೋಡಿಯೇ ಎಲ್ಲ ವಿಷಯ ಅರ್ಥ ಮಾಡಿಕೊಳ್ಳುತ್ತೀರಾ.
ಹಳೆಯ ಪರೀಕ್ಷೆಯನ್ನು ಅಭ್ಯಾಸ ಮಾಡುವುದು ತುಂಬಾ ಪರಿಣಾಮಕಾರಿ ಮಾರ್ಗವಾಗಿದೆ. ನೀವು ಈ ರೀತಿ ಓದುವುದರಿಂದ ಪರೀಕ್ಷೆಯ ಸ್ವರೂಪ ಗೊತ್ತಾಗುತ್ತದೆ. ಪ್ರೆಶ್ನೆ ಹೇಗೆ ಬರುತ್ತದೆ, ಎಷ್ಟು ಅಂಕಗಳಿಗೆ ಬರುತ್ತದೆ ಎಂದು ತಿಳಿಯುತ್ತದೆ.
ನಿಮ್ಮ ಕುಟುಂಬ ಮತ್ತು ಗೆಳೆಯರಿಗೆ ನೀವು ಓದಿದ ಪ್ರೆಶ್ನೆಯ ಉತ್ತರವನ್ನು ಹೇಳುತ್ತೀರಿ. ಅವರಿಗೆ ನಿಮ್ಮ ಪ್ರೆಶ್ನೆಗೆ ಹೇಗೆ ಉತ್ತರ ಬಂತೆಂದು ಅರ್ಥ ಮಾಡಿಸಲು ನೀವು ಪ್ರಯತ್ನಪಟ್ಟರೆ, ನೀವು ಓದಿದಂತೆಯೇ.
ಇದನ್ನು ಓದಿ: ಯಶಸ್ಸು ಕಾಣಲು ಚಾಣಕ್ಯರ ನಾಲ್ಕು ನೀತಿಗಳುಗೆಳೆಯರ ಜೊತೆ ಗುಂಪಾಗಿ ಓದುವುದು ಓದುವುದನ್ನು ಬೇಗಾನೆ ಮುಗಿಸುತ್ತದೆ. ಆದರೆ, ನಿಮ್ಮ ಗುಂಪು ಓದಿನ ಕಡೆ ಬಿಟ್ಟು ಬೇರೆ ಕಡೆ ಗಮನ ಹರಿಸದಿದ್ದರೆ ಒಳ್ಳೆಯದು.
ರೆಗುಲರ್ ಬ್ರೇಕ್ ನಿಮ್ಮ ಮೆದುಳು ಪೋಕಸ್ ಮಾಡಲು ಬೇಕೆ ಬೇಕು. ತುಂಬಾ ಸಮಯ ಓದುವುದು ನಿಜವಾಗಿಯೂ ಕಷ್ಟ. ನಿಮಗೆ ಪಿಟ್ ಆಗುವ ರೀತಿ ನೀವು ಓದುತ್ತಾ, ಬ್ರೇಕ್ ತೆಗೆದುಕೊಳ್ಳಬೇಕು.
ನೀವು ಆರೋಗ್ಯ ಕೆಡಿಸುವ ಆಹಾರದಿಂದ ಓದುವ ಸಮಯದಲ್ಲಿ ದೂರವಿದ್ದಷ್ಟು ಒಳ್ಳೆಯದು. ನಿಮ್ಮ ದೇಹ ಮತ್ತು ಮೆದುಳಿಗೆ ನ್ಯಾಚುರಲ್, ಫ್ರೆಶ್ ಮತ್ತು ವಿಟಮಿನ್ ಇರುವ ಆಹಾರ ನೀಡಿ ಇದರಿಂದ ಕಾನ್ಸಂಟ್ರೇಶನ್ ಮತ್ತು ಮೆಮೊರಿ ಹೆಚ್ಚುತ್ತದೆ.
ಪರೀಕ್ಷೆಯ ಎಲ್ಲ ನಿಯಮ ಮತ್ತು ಬೇಕಾದ ವಸ್ತುಗಳನ್ನು ನೋಡಿಕೊಂಡು. ನೀವು ಪರೀಕ್ಷೆಗೆ ಸ್ವಲ್ಪ ಬೇಗ ಹೋಗಿ. ಲೇಟ್ ಆಗಿ ಹೋದರೆ ನಿಮಗೆ ಒಂದು ರೀತಿ ಗಾಬರಿಯಾಗಬಹುದು.
ಇದನ್ನು ಓದಿ: ಡೈನೋಸೋರ್ಗಳ ನಾಶದಿಂದ ಮನುಷ್ಯನ ಅಸ್ತಿತ್ವದ ತನಕನೀವು ಓದುವಾಗ ಮತ್ತು ಪರೀಕ್ಷೆಗೆ ಹೋಗುವಾಗ ಸಾಧ್ಯವಾದಷ್ಟು ನೀರು ಕುಡಿಯಿರಿ. ನೀವು ಹೈಡ್ರೇಟ್ ಆಗಿ ಇದ್ದರೆ ನಿಮ್ಮ ತಲೆಯಲ್ಲಿ ಯಾವಾಗಲೂ ಪಾಸಿಟಿವ್ ಯೋಚನೆ ಬರುತ್ತದೆ.
ಸ್ನೇಹಿತರೇ, ಈ ಲೇಖನದ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್‌ನಲ್ಲಿ ತಿಳಿಸಿ ಮತ್ತು ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ.
Explore all our Posts by categories.
Info Mind 2440
Info Mind 5525
See all comments...
sathish kumar • February 11th,2022
Nice tips...