Website designed by @coders.knowledge.

Website designed by @coders.knowledge.

Plastic Pot Manufacturing Industry Visit | ಕೊಡಪನ ತಯಾರಿಕೆಯ ಮೇಲಿನ ವಿವರ

 0

 Add

Please login to add to playlist

Watch Video

ಈ ಕಾಯಕದ ಉಪಾಯ:

ನಮ್ಮ ಪೂರ್ವಜರು ಸುಮಾರು 25 ವರ್ಷಗಳಿಂದ ಮಾಡಿಕೊಂಡು ಬಂದ ಕಾಯಕವಿದು ಎಂದು ನಾವು ಭೇಟಿ ಮಾಡಿದ ಕೊಡಪನ ಕಾರ್ಖಾನೆಯ ಮಾಲೀಕರು ಹೇಳಿದರು. ಇವರು ಈ ಕಾಯಕವನ್ನು ಅಚ್ಚುಕಟ್ಟಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಇಂಪೋರ್ಟಿಂಗ್ ಮಷೀನ್:

ಇವರು ಕೊಡಪನ ತಯಾರಿಸುವ ಯಂತ್ರವನ್ನು ವಿದೇಶದಿಂದ ತರಿಸಿಕೊಂಡಿರಬವುದೆಂದು ನೀವು ಅಂದುಕೊಂಡಿರಬಹುದು. ಆದರೆ ಅದು ಸತ್ಯವಲ್ಲ. ಅಸಲಿಗೆ ಇದು ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ದೊರೆಯುತ್ತದೆ.

ಇದನ್ನು ಓದಿ: ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ?

ಇದರ ಸಂಪೂರ್ಣ ವೆಚ್ಚ:

ಇದರಿಂದ 8 ಲಕ್ಷದಿಂದ 9 ಲಕ್ಷದವರೆಗೆ ದೊರೆಯುತ್ತದೆ.

ಅವಶ್ಯಕ ಸಾಮಗ್ರಿಗಳು:

ಪ್ಲಾಸ್ಟಿಕ್ ಪುಡಿ ತುಂಡುಗಳು, ಅನುಕೂಲಕ್ಕೆ ತಕ್ಕಂತಹ ಬಣ್ಣ, ನೀರು, ಜೆಲ್ಲಿ ಆಯಿಲ್, ವಿದ್ಯುತ್ 64HP ಅವಶ್ಯಕತೆ ಇರುವಂತಹದು, ಕಟರ್, ಇತ್ಯಾದಿ...

ಪ್ರೊಡಕ್ಷನ್:

ಇವರು ತುಂಬಾ ಕಾರ್ಮಿಕರನ್ನು ಸೇರಿಸಿಕೊಂಡು ದುಂದು ವೆಚ್ಚ ಮಾಡಿಲ್ಲ. ಬದಲಿಗೆ ಒಬ್ಬ ಕಾರ್ಮಿಕನನ್ನು ಇಟ್ಟಿದ್ದಾರೆ. ಆ ಒಬ್ಬ ಕಾರ್ಮಿಕ ಬೇರೆ ಯಾರು ಅಲ್ಲ, ಬದಲಿಗೆ ಈ ಚಿಕ್ಕ ಕಾರ್ಖಾನೆಯ ಮಾಲೀಕರೇ ಆಗಿದ್ದಾರೆ.

ಉತ್ಪಾದನೆ:

ಈ ಸಣ್ಣ ಕಾರ್ಖಾನೆಯಲ್ಲಿ ದಿನಕ್ಕೆ 500-700 ಕೊಡಪನಗಳನ್ನು ತಯಾರಿಸುತ್ತಾರೆ.

ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರ

ಕಾಸ್ಟ್ ವೇರಿಯೇಷನ್:

ನಮ್ಮ ಮನೆಯ ಉಪಯೋಗಕೆಂದು ನಾವು ಒಂದೊಂದೆ ಕೊಡಪನವನ್ನು ಖರೀದಿ ಮಾಡುತ್ತೇವೆ. ಅದಕ್ಕೆ ನಮಗೆ ಅಂಗಡಿ ಮಾಲೀಕರು 80 - 200 ರೂಪಾಯಿ ವರೆಗೆ ಬೆಲೆ ಕಟ್ಟುತ್ತಾರೆ. ಆದರೆ ನೀವು ಇಂಡಸ್ಟ್ರಿ ಅಲ್ಲಿ ಕನಿಷ್ಠ ಒಂದು ಡಜನ್ ಕೊಡಪನಗಳನ್ನು ಖರೀದಿಸಿದರೆ ಒಂದಕ್ಕೆ 50 ರೂಪಾಯಿಗಳಂತೆ ನೀವು ಮಾತಾಡಿಕೊಂಡರೆ ಕೊಡುತ್ತಾರೆ. ಈ ರೀತಿ ಮಾಡುವುದರಿಂದ ನೀವು ತುಂಬಾ ಹಣ ಉಳಿಸಬಹುದು.

ತೆರಿಗೆ(tax):

ಪ್ಲಾಸ್ಟಿಕ್ ಕೊಡಪನ ತಯಾರಿಕೆಗೆ ಯಾವುದೇ ತರಹದ ತೆರಿಗೆ ಇರುವುದಿಲ್ಲ.

ಲಾಭ ಮತ್ತು ನಷ್ಟ:

ನಾವುಗಳು ಮನೆಯಲ್ಲಿ ಮುರಿದ ಕೊಡಪನ, ಬಾಟಲಿ, ಟಬ್ ಇನಿತರ ಹಳೆಯ ಪ್ಲಾಸ್ಟಿಕ್‌ಗಳನ್ನು ಗುಜುರಿಗೆ ಹಾಕಿರುತ್ತೇವೆ. ಅದನೆಲ್ಲ ಇವರು ಕರಗಿಸಿ ಹೊಸ ರೂಪ ಕೊಡುತ್ತಾರೆ ಇದರಿಂದ ಇವರಿಗೆ ಖರ್ಚು ಕಡಿಮೆ ಆಗುತ್ತದೆ.

ಇದನ್ನು ಓದಿ: ಗಣಿತವನ್ನು ವೇಗವಾಗಿ ಕಲಿಯುವುದು ಹೇಗೆ?

ಮೇರಿಟ್ಸ್ & ಡಿಮೆರಿಟ್ಸ್:

  • • ನಾವು ಲೆಕ್ಕ ಹಾಕಿ ನೋಡುವುದಾದರೆ ಈ ದುಡಿಮೆಯಲ್ಲಿ ನಷ್ಟಕಿಂತ ಲಾಭವೇ ಅಧಿಕ.
  • • ಇತೀಚಿಗೆ ದೊಡ್ಡ ದೊಡ್ಡ ಬ್ಯಾರ್ರೆಲ್, ಸಿಂಟೆಕ್ಸ್ಗಳು ಬಂದಿರುದರಿಂದ ಸ್ವಲ್ಪ ಕೊಡಪನದ ಬೇಡಿಕೆ ಕಡಿಮೆ ಆಗಿದೆ ಅಂತ ಮಾಲೀಕರು ಹೇಳುತ್ತಾರೆ.

ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಾಕ ತಿಳಿಸಿ.

Mahithi Thana

More by this author

Similar category

Explore all our Posts by categories.

commenters

sushma • December 4th,2022

Good