Website designed by @coders.knowledge.

Website designed by @coders.knowledge.

ರಾತ್ರಿ ಪದೇಪದೇ ಎಚ್ಚರವಾಗುತ್ತಾ? ಸುಖನಿದ್ರೆಗೆ ಇಲ್ಲಿದೆ ಸಿಂಪಲ್ ಟಿಪ್ಸ್ | Health Tips Part- 3

Watch Video

  • • ರಾತ್ರಿ ಪದೇಪದೇ ಎಚ್ಚರವಾಗುತ್ತಾ? ಸುಖನಿದ್ರೆಗೆ ಇಲ್ಲಿದೆ ಸಿಂಪಲ್ ಟಿಪ್ಸ್.
  • • ನೀರು ಅಮೃತ ಸಮಾನ. ಆದರೆ ಹೀಗೆ ಮಾಡಿದರೆ ಅದು ವಿಷವಾಗಬಹುದು.
  • ಮಕ್ಕಳಿಗೆ ಐದು ಆಹಾರಗಳನ್ನು ತಿನ್ನಿಸಿ, ಮೆದುಳು ಕಂಪ್ಯೂಟರ್‍ಗಿಂತ ಶಾರ್ಪ್ ಆಗುತ್ತದೆ.

ಈ ಎಲ್ಲ ಪ್ರಶ್ನೆಗಳ ಜೊತೆಗೆ ಇನ್ನಷ್ಟು ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ಸಿಗಲಿದೆ. ಹೀಗಾಗಿ ಲೇಖನ ಪೂರ್ತಿ ಓದಿ.

ಇದನ್ನು ಓದಿ: ಉತ್ತಮ ಆರೋಗ್ಯಕ್ಕೆ ಆರೋಗ್ಯಕರ ಸಲಹೆಗಳು ಭಾಗ- 1

1. ರಾತ್ರಿ ಪದೇಪದೇ ಎಚ್ಚರವಾಗುತ್ತಾ? ಸುಖನಿದ್ರೆಗೆ ಇಲ್ಲಿದೆ ಸಿಂಪಲ್ ಟಿಪ್ಸ್.

good sleep tips in kannada
good sleep

ಸುಖನಿದ್ರೆ ಸಿಕ್ಕಿದರೆ ಅದೇ ಸ್ವರ್ಗ. ಆದರೆ ಕೆಲವರಿಗೆ ಸಣ್ಣ ಸದ್ದಾದರೂ ರಾತ್ರಿ ಪದೇಪದೇ ಎಚ್ಚರವಾಗುತ್ತದೆ. ಇನ್ನೂ ಕೆಲವರಿಗೆ ರಾತ್ರಿ ನಿದ್ದೆಯೇ ಬರೋದಿಲ್ಲ. ನಿಮಗೆ ರಾತ್ರಿ ನಿದ್ರಾಭಂಗವಾಗುತ್ತಿದ್ದರೆ, ನಿಮ್ಮ ಜೀವನಶೈಲಿ ಬದಲಾಗಿದೆ ಎಂದೇ ಅರ್ಥ. ಹೀಗಾಗಿ ನಿಮ್ಮ ಸುಖ ನಿದ್ರೆಗೆ ನಾವು ಕೆಲವು ಸಲಹೆಗಳನ್ನು ತಿಳಿಸುತ್ತಿದ್ದೇವೆ. ಅವೆಂದರೆ,

  • • ಮಲಗುವ ಮುನ್ನ ಭರ್ಜರಿ ಭೋಜನ ಬೇಡ. ಊಟಕ್ಕೂ ನಿದ್ದೆಗೂ ಕನಿಷ್ಠ 2 ಗಂಟೆ ಅಂತರವಿರಲಿ.
  • • ನಿದ್ರೆಗೆ ಮುನ್ನ ಬಿಸಿನೀರಿನಲ್ಲಿ ಸ್ನಾನಮಾಡಿ. ಇದರಿಂದ ಶರೀರಕ್ಕೆ ವಿಶ್ರಾಂತಿ(relax) ಸಿಗುತ್ತದೆ.
  • • ಮನಸ್ಸಿಗೆ ಮುದ ನೀಡುವ ಸಂಗೀತ ಕೇಳಿ ನೋಡಿ.
  • • ಮಲಗುವ ಅರ್ಧಗಂಟೆ ಮೊದಲು ಮೊಬೈಲ್ ಬಂದ್ ಮಾಡಿ. ಇದು ಸ್ವಲ್ಪ ಕಷ್ಟವೇ ಆದರೂ ಪ್ರಯತ್ನಿಸಿ.
  • • ನಿಮ್ಮ ಮಲಗುವ ಕೋಣೆ(bedroom) ಸ್ವಚ್ಛವಾಗಿರಲಿ.
  • • ಆಲ್ಕೋಹಾಲ್(alcohol) ಏರಿಸಿದರೆ ನಿದ್ರೆ ಬರುತ್ತದೆ ಅನ್ನೋದು ತಪ್ಪು ಗ್ರಹಿಕೆ. ಒಂದು ಪೆಗ್ ಆಲ್ಕೋಹಾಲ್ ಏರಿಸಿದರೆ ನಿದ್ರೆ ಬರುತ್ತೆ, ಏಕೆಂದರೆ ಅದರಲ್ಲಿ ನಿದ್ರೆಗೆ ಉತ್ತೇಜಿಸುವ ಅಂಶಗಳಿವೆ. ಆದರೆ ಪೆಗ್ ಹಾಕೋದು ಅಭ್ಯಾಸವಾಗಿಬಿಟ್ಟರೆ, ಆರೋಗ್ಯದ ಇತರ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಹೀಗಾಗಿ ಮಲಗುವ ಮುನ್ನ ಆಲ್ಕೊಹಾಲ್ ಬೇಡ.
  • • ಇವೆಲ್ಲದಕ್ಕೂ ಮುಖ್ಯವಾಗಿ ನಿದ್ರೆಗೆ ಒಂದು ವೇಳಾಪಟ್ಟಿ(timetable) ಇರಲಿ. ಯಾವುದೋ ಸಮಯಕ್ಕೆ ಮಲಗುವುದು, ಏಳುವುದು ಸರಿಯಲ್ಲ.
ಇದನ್ನು ಓದಿ: ಉತ್ತಮ ಆರೋಗ್ಯಕ್ಕೆ ಆರೋಗ್ಯಕರ ಸಲಹೆಗಳು

2. ನೀರು ಅಮೃತ ಸಮಾನ. ಆದರೆ ಹೀಗೆ ಮಾಡಿದರೆ ಅದು ವಿಷವಾಗಬಹುದು.

water benefits in kannada
water benefits

ಉತ್ತಮ ಆರೋಗ್ಯಕ್ಕೆ ನೀರು ಎಷ್ಟೊಂದು ಅವಶ್ಯಕ ಎಂಬುದು ಎಲ್ಲರಿಗೂ ತಿಳಿದಿದೆ. ನೀರಿಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಬಾಯಾರಿಕೆಯಾದಾಗ ನೀರಿನ ಬದಲು ಬೇರೆ ದ್ರವ ಕುಡಿದರೆ ಖಂಡಿತವಾಗಿಯೂ ಬಾಯಾರಿಕೆ ನೀಗಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯು ಆರೋಗ್ಯಕರವಾಗಿರಲು ದಿನಕ್ಕೆ ಕನಿಷ್ಠ 5 ರಿಂದ 6 ಲೀಟರ್ ನೀರು(water) ಕುಡಿಯಬೇಕು. ಇವೆಲ್ಲಾ ನೋಡಿದರೆ ನೀರು ಅಮೃತಕ್ಕೆ ಸಮಾನವೆನಿಸುತ್ತದೆ, ಆದರೆ ಹೀಗೆ ಮಾಡಿದರೆ ಅದು ವಿಷವಾಗಬಹುದು.

  • • ಕಾಫಿ ಕುಡಿದ ಮೇಲೆ ನೀರು ಕುಡಿಯಬೇಡಿ. ಇದರಿಂದ ಗಂಟಲು ಒಣಗುತ್ತದೆ, ಜೀರ್ಣಕ್ರಿಯೆ ಸಮಸ್ಯೆಯು ಬರಬಹುದು.
  • • ಹಣ್ಣು(fruit) ತಿಂದ ಕೂಡಲೇ ನೀರನ್ನು ಕುಡಿಯಬೇಡಿ. ಇದರಿಂದ ಕೆಮ್ಮು, ಅಜೀರ್ಣ, ಶುಗರ್ ಹೆಚ್ಚಾಗುವ ಸಾಧ್ಯತೆ ಇದೆ.
  • • ಇನ್ನು ಕಡಲೆ ತಿಂದು ನೀರು ಕುಡಿಯಬೇಡಿ. ಇದರಿಂದ ಹೊಟ್ಟೆನೋವು ಆಗಬಹುದು.
  • • ಕೊನೆಯದಾಗಿ ಸಿಹಿ(sweet) ತಿಂದು ನೀರನ್ನು ಕುಡಿಯಬೇಡಿ. ಇದರಿಂದ ಬಾಯಾರಿಕೆಯಾಗುತ್ತದೆ. ಮಧುಮೇಹ(diabetes) ಬರುವ ಸಾಧ್ಯತೆಯೂ ಹೆಚ್ಚುತ್ತದೆ.
ಇದನ್ನು ಓದಿ: ಕಣ್ಣಿನ ದೃಷ್ಟಿ ಸುಧಾರಿಸುವ ಕಣ್ಣಿನ ವ್ಯಾಯಾಮಗಳು

3. ತುಪ್ಪದ ತಪ್ಪುಕಲ್ಪನೆ ಬಿಟ್ಟುಬಿಡಿ, ತುಪ್ಪ ತಿಂದರೆ ಈ ಲಾಭಗಳಿವೆ.

eating ghee benifits in kannada
ghee benifits

ತುಪ್ಪ ಇಲ್ಲದೆ ಭಾರತೀಯರ ಅಡುಗೆ ಮನೆ ಅಪೂರ್ಣ. ಅಡುಗೆಮನೆ, ಪೂಜೆ, ಇತ್ಯಾದಿ ವಿಷಯದಲ್ಲಿ ತುಪ್ಪಕ್ಕೆ ವಿಶೇಷ ಸ್ಥಾನಮಾನವಿದೆ. ದೇಹಾರೋಗ್ಯಕ್ಕೆ ತುಪ್ಪ ಯಾಕೆ ಸಹಕಾರಿ ಎಂಬುದನ್ನು ನೋಡೋಣ.

  • • ತುಪ್ಪ ಕೊಬ್ಬು, ಪರಿಷ್ಕರಿಸಿದ ಕೊಬ್ಬು(saturated fat), ವಿಟಮಿನ್ C, D, E ಮತ್ತು K ಯನ್ನು ಹೊಂದಿದೆ. ಇದರಿಂದ ಅದು ನಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ.
  • • ಹಸುವಿನ ತುಪ್ಪದಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ. ಹೀಗಾಗಿ ಬೊಜ್ಜು ಬರಲು ಸಾಧ್ಯವಿಲ್ಲ.
  • • ತುಪ್ಪದಲ್ಲಿ ವಿಟಮಿನ್ K2 ಹೇರಳವಾಗಿರುವುದರಿಂದ ಮೂಳೆಗಳು ಬಲಿಷ್ಠಗೊಳ್ಳುತ್ತವೆ.
  • • ತುಪ್ಪ ಕಣ್ಣಿನ ಆರೋಗ್ಯಕ್ಕೆ ಸಹಕಾರಿ. ತುಪ್ಪದಲ್ಲಿ ಕೊಬ್ಬಿನಾಮ್ಲ(fatty acid) ಹೇರಳವಾಗಿರುವುದರಿಂದ, ನಿಮ್ಮ ಕೂದಲಿನ ಡ್ಯಾಮೇಜ್ ತಡೆಯಲು ಸಹಕಾರಿಯಾಗಿದೆ.
ಇದನ್ನು ಓದಿ: ಇಂಟೆಲಿಜೆಂಟ್ ಇನ್ವೆಸ್ಟರ್ ಪುಸ್ತಕದ ವಿಶ್ಲೇಷಣೆ

4. ಮಕ್ಕಳಿಗೆ ಐದು ಆಹಾರಗಳನ್ನು ತಿನ್ನಿಸಿ, ಮೆದುಳು ಕಂಪ್ಯೂಟರ್‍ಗಿಂತ ಶಾರ್ಪ್ ಆಗುತ್ತದೆ.

brain foods for children in kannada
foods for children

ಇದು ಸ್ಪರ್ಧೆಯ ಯುಗ. ಇಲ್ಲಿ ಸ್ಪರ್ಧೆ(compitation) ಹೇಗಿದೆಯೆಂದರೆ ಪ್ರತಿಯೊಬ್ಬ ತಂದೆ ತಾಯಿ ತನ್ನ ಮಕ್ಕಳು ಕಂಪ್ಯೂಟರ್ ರೀತಿ ತೀಕ್ಷ್ಣವಾಗಿ(sharp) ಇರಲು ಬಯಸುತ್ತಾರೆ. ಹೀಗಾಗಿ ಮಕ್ಕಳ ಮೆದುಳಿನ ಶಕ್ತಿ ಹೆಚ್ಚಿಸಲು ಈ ಆಹಾರಗಳನ್ನು ತಿನ್ನಿಸಿ.

  • • ಮಕ್ಕಳು ದಿನಕ್ಕೊಂದು ಮೊಟ್ಟೆ ತಿನ್ನಬೇಕು. ಏಕೆಂದರೆ ಮೊಟ್ಟೆಯಲ್ಲಿ ವಿಟಮಿನ್, ಕ್ಯಾಲ್ಸಿಯಂ ಮತ್ತು ಪ್ರೋಟಿನ್ ಹೇರಳವಾಗಿದೆ.
  • • ಊಟದ ಜೊತೆ ಮೊಸರು ತಿನ್ನುವುದರಿಂದ ಮಕ್ಕಳಿನ ಮೆದುಳಿನ ಕೋಶಗಳು ಫ್ಲೆಕ್ಸಿಬಲ್ ಆಗುತ್ತವೆ.
  • • ಮೀನು ತಿಂದರೆ ಮೀನಿನಷ್ಟೇ ಚುರುಕಾಗುತ್ತಾರೆ ಎಂದು ಹೇಳುತ್ತಾರೆ. ಇದಕ್ಕೆ ಕಾರಣ ಮೀನಿನಲ್ಲಿ ಇರುವ ವಿಟಮಿನ್ D ಮತ್ತು ಒಮೆಗಾ-3ಯಾಗಿದೆ.
  • • ಚೆರ್ರಿ ಹಣ್ಣುಗಳಾದ ಸ್ಟ್ರಾಬೆರ್ರಿ, ಬ್ಲ್ಯೂಬೆರ್ರಿಗಳನ್ನು ಸಾಕಷ್ಟು ತಿನ್ನುವುದು ಮಕ್ಕಳ ಮೆದುಳಿನ ವಿಕಾಸನಕ್ಕೆ ಅನಿವಾರ್ಯವಾಗಿದೆ.
  • • ಇನ್ನು ದುಬಾರಿ ಇರುವ ಒಣ ಹಣ್ಣುಗಳು(dryfruits) ಮೆದುಳಿಗೆ ಸಾಕಷ್ಟು ಸಹಕಾರಿಯಾಗಿದೆ.
ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರ

5. ಗೂಗಲ್‌ನ ನೂತನ ವೈಶಿಷ್ಟ್ಯ, ಶೀಘ್ರವೇ ಸ್ಮಾರ್ಟ್‌ಫೋನ್ ಮೂಲಕ ಹಾರ್ಟ್ ರೇಟ್ ಪರೀಕ್ಷೆ.

google fit application in kannada
google fit application

ಈಗ ನೀವು ಮೊಬೈಲ್ ಫೋನ್ ಮೂಲಕ ಹೃದಯ ಬಡಿತ ಮತ್ತು ಉಸಿರಾಟದ ಪ್ರಮಾಣವನ್ನು ಪರಿಶೀಲಿಸಬಹುದು. ಆರೋಗ್ಯವನ್ನು ನಿಯಂತ್ರಿಸಲು ಸಾಮಾನ್ಯವಾಗಿ ಬಳಸಲಾಗುವ ಎರಡು ಪ್ರಮುಖ ಸಂಕೇತ ಇವುಗಳಾಗಿವೆ. ಗೂಗಲ್ ಈ ವೈಶಿಷ್ಟ್ಯವನ್ನು ಗೂಗಲ್ ಪಿಕ್ಸೆಲ್ ಫೋನ್‍ನಲ್ಲಿ ಗೂಗಲ್ ಫಿಟ್ ಅಪ್ಲಿಕೇಶನ್ ಮೂಲಕ ತರುತ್ತಿದೆ.

ಇದಕ್ಕಾಗಿ ಗೂಗಲ್ ಕ್ಯಾಮೆರಾ ಮತ್ತು ಕಂಪ್ಯೂಟರ್ ವಿಷನ್‌ ತಂತ್ರಜ್ಞಾನ ಬಳಸುತ್ತಿದೆ. ಇದನ್ನು "ಆಪ್ಟಿಕಲ್ ಡಿಟೆಕ್ಟ್" ಎಂದು ಕರೆಯುತ್ತಾರೆ. ನೀವು ತಾಜಾ ಆಮ್ಲಜನಕವನ್ನು ತೆಗೆದುಕೊಂಡಾಗಲೆಲ್ಲ ಅದು ಇಡೀ ದೇಹಕ್ಕೆ ಹೋಗುತ್ತದೆ. ಇಲ್ಲಿ ನಿಮ್ಮ ಫೋನ್ ಕ್ಯಾಮೆರಾ ಬೆರಳುಗಳ ಬಣ್ಣದ ಬದಲಾವಣೆಯ ಮೇಲೆ ಹೃದಯಬಡಿತವನ್ನು ಕಂಡುಹಿಡಿಯುತ್ತದೆ. ಇದು ಗೂಗಲ್‌ನ ಗೂಗಲ್ ಫಿಟ್ ಅಪ್ಲಿಕೇಶನ್‌ನಲ್ಲಿ ಸಿಗಲಿದೆ.

ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ

Mahithi Thana

More by this author

Similar category

Explore all our Posts by categories.

No Comments