Website designed by @coders.knowledge.

Website designed by @coders.knowledge.

What are the Sources of Passive Income | ನಿಷ್ಕ್ರಿಯ ಆದಾಯದ ಮೂಲಗಳು ಯಾವುವು?

 0

 Add

Please login to add to playlist

Watch Video

ನೀವು ರಾತ್ರಿ ಮಲಗಿರುವಾಗಲೂ ಹಣವನ್ನು ಗಳಿಸುವ ಮಾರ್ಗವನ್ನು ಕಂಡುಕೊಳ್ಳದಿದ್ದರೆ, ನಿಮ್ಮ ಜೀವನದ ಕೊನೆ ಉಸಿರಿನವರೆಗೂ ಕೆಲಸ ಮಾಡಬೇಕಾಗುತ್ತದೆ. ಇದನ್ನು ಹೂಡಿಕೆಯ ಮಾಂತ್ರಿಕ ವಾರೆನ್ ಬಫೆಟ್ ಹೇಳಿರುವುದು.

ಇಂದು ಈ ವೀಡಿಯೊದಲ್ಲಿ ನಾವು ಪ್ಯಾಸಿವ್ ಇನ್ಕಮ್ ಬಗ್ಗೆ ತಿಳಿಸುತ್ತಿದ್ದೇವೆ. ಆದರೆ ಅದಕ್ಕೂ ಮೊದಲು ನೀವು ಆ್ಯಕ್ಟಿವಿ ಇನ್ಕಮ್ ಎಂದರೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಆ್ಯಕ್ಟಿವ್ ಇನ್ಕಮ್ ಎಂದರೆ ಉದ್ಯೋಗಿಗೆ ತಿಂಗಳು ಸಿಗುವ ಸಂಬಳ, ಸ್ವಯಂ ಉದ್ಯೋಗಿಗಳಾಗಿರುವವರು ಅಂದರೆ ಡಾಕ್ಟರಿನ ಕ್ಲಿನಿಕ್, ಲಾಯರ್, ಕಲೆಗಾರ. ಇವರೆಲ್ಲಾ ತಮ್ಮ ಸಮಯದ ಬದಲು ಹಣವನ್ನು ಗಳಿಸುತ್ತಾರೆ. ಇವರೆಲ್ಲರ ಹತ್ತಿರ ಆ್ಯಕ್ಟಿವ್ ಇನ್ಕಮ್ ಇದೆ. ಅಂದರೆ ಇವರು ಕೆಲಸ ಮಾಡುವ ತನಕ ಇವರ ಹತ್ತಿರ ಹಣ ಬರುತ್ತಿರುತ್ತದೆ. ಯಾವುದಾದರೂ ದಿನ ರಜೆ ತೆಗೆದುಕೊಂಡರೆ ಅಂದು ಇವರಿಗೆ ಹಣ ಗಳಿಸಲು ಆಗುವುದಿಲ್ಲ.

ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರ

ಪ್ಯಾಸಿವ್ ಇನ್ಕಮ್ ಎಂದರೆ ಏನು?

what is the best source of passive income in kannada
passive income

ನಿಷ್ಕ್ರಿಯ ಆದಾಯದ(passive income) ಉದಾಹರಣೆ ಹೇಳಬೇಕೆಂದರೆ, ನೀವು ಬಾಡಿಗೆಗೆ ನೀಡುವ ಮನೆಯಾಗಿದೆ. ಇದರಲ್ಲಿ ನೀವು ರಾತ್ರಿ ಮಲಗಿದ್ದರೂ ನಿಮಗೆ ಹಣ ಸಿಗುತ್ತದೆ. ರಿಯಲ್ ಎಸ್ಟೇಟ್ನಲ್ಲಿ ದೀರ್ಘಾವಧಿ ಹಣ ಹೂಡಿಕೆ ಮಾಡಿ ಇಂಟರೆಸ್ಟಿನ ಲಾಭ ಪಡೆಯುವುದು. ನಿಮ್ಮ ಕೆಲವು ಆನ್‌ಲೈನ್‌ ಆಸ್ತಿ, ಅದರಿಂದಲೂ ನಿಮಗೆ ಯಾವಾಗಲೂ ರೆವೆನ್ಯೂ ಬರುತ್ತಿರುತ್ತದೆ. ಪ್ಯಾಸಿವ್ ಇನ್ಕಮ್ ಎಷ್ಟೆಷ್ಟು ತರಹದಿದೆ ಮತ್ತು ಇದರಿಂದ ಹೇಗೆ ಗಳಿಸಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ನಿಮ್ಮಲ್ಲಿ ಅನೇಕರು ಬ್ಯುಸಿನೆಸ್ ಪ್ರಾರಂಭಿಸಿದ ವಿದ್ಯಾರ್ಥಿಗಳು ಇರಬಹುದು ಅಥವಾ ಈಗ ತಾನೇ ಬ್ಯುಸಿನೆಸ್‌ ಪ್ರಾರಂಭಿಸಿರಬಹುದು. ಈ ಸಮಯದಲ್ಲಿ ನಿಮ್ಮ ಹತ್ತಿರ ಸಾಕಷ್ಟು ಹಣವಿದ್ದು ಅದನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬುದರ ಚಿಂತೆ ನಿಮಗೆ ಇರಬಹುದು.

ಕೆಲವು ವರ್ಷಗಳ ಹಿಂದೆ ಜನರು ರಿಯಲ್ ಎಸ್ಟೇಟ್ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ತಿಳಿಸುತ್ತಿದ್ದರು. ಈ ರಿಯಲ್ ಎಸ್ಟೇಟ್ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಅನೇಕ ರೀತಿಗಳ ಬಗ್ಗೆ ನಾವು ಇಲ್ಲಿ ತಿಳಿಸುತ್ತಿದ್ದೇವೆ ಮತ್ತು ನೀವು ವಿದ್ಯಾರ್ಥಿಯಾಗಿ, ಹಣದ ಕೊರತೆ ಇದ್ದರೆ ಯಾವ ರೀತಿ ಹಣ ಗಳಿಸಬಹುದು ಎಂಬುದರ ಬಗ್ಗೆ ತಿಳಿಸಲಿದ್ದೇವೆ. ಆದರೆ ಇದರಲ್ಲಿ ನೀವು ಸ್ವಲ್ಪ ಕಷ್ಟ ಪಡಬೇಕಾಗುತ್ತದೆ. ಏಕೆಂದರೆ ಜೀವನದಲ್ಲಿ ಎಲ್ಲವೂ ಸುಲಭವಾಗಿ ಸಿಗುವುದಿಲ್ಲ. ಹಾಗೆ ಸಿಕ್ಕಿದರೆ ಎಲ್ಲರೂ ಅದನ್ನು ಪಡೆದಿರುತ್ತಿದ್ದರು.

ಇದನ್ನು ಓದಿ: ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ?

ನಾವು ಜನರನ್ನು 4 ಕೆಟಗರಿಯಾಗಿ ವಿಂಗಡಿಸಬಹುದು.

ಅವರಲ್ಲಿ ಮೊದಲನೆಯವರು ಉದ್ಯೋಗಿ, ಇವರು ಗಂಟೆಗಟ್ಟಲೆ ಕೆಲಸ ಮಾಡಿ ಹಣ ಗಳಿಸುತ್ತಾರೆ. ಎರಡನೆಯವರು ಸ್ವಂತ ಉದ್ಯೋಗಿ, ಇವರ ಉದಾಹರಣೆ ಹೇಳಬೇಕೆಂದರೆ ಕ್ಲಿನಿಕ್ ನಡೆಸುವ ಡಾಕ್ಟರ್, ಲಾಯರ್, ಆರ್ಟಿಸ್ಟ್. ಈ ಎರಡೂ ಕೆಟಗರಿಗೆ ಬರುವ ಜನರ ಹಣದ ಮೂಲ ಆ್ಯಕ್ಟಿವ್ ಇನ್ಕಮ್ ಆಗಿದೆ. ಇವರು ಎಷ್ಟು ಗಂಟೆ ಕೆಲಸ ಮಾಡುತ್ತಾರೋ ಅಷ್ಟು ಹಣ ಗಳಿಸುತ್ತಾರೆ. ಯಾವ ದಿನ ಕೆಲಸ ಮಾಡುವುದಿಲ್ಲವೋ ಅಂದು ಹಣ ಗಳಿಸುವುದಿಲ್ಲ.

ಇನ್ನು ಮೂರನೇ ಕೆಟಗರಿ ಹೇಳಬೇಕೆಂದರೆ ಬ್ಯುಸಿನೆಸ್ ಮಾಲೀಕ, ಇವರು ಹಣ ಪಡೆದು ಒಂದು ಟೀಮ್(team) ಮಾಡುತ್ತಾರೆ. ಆ ಟೀಮ್ ನಲ್ಲಿ ಇರುವ ಜನರು ಹಣವನ್ನು ಗಳಿಸುತ್ತಾರೆ. ಇನ್ನು ನಾಲ್ಕನೆ ಕೆಟಗರಿ ಹೂಡಿಕೆದಾರ(investor). ಹೂಡಿಕೆದಾರ ಎಂದ ತಕ್ಷಣ ನಾವು ತುಂಬಾ ಶ್ರೀಮಂತ ವ್ಯಕ್ತಿಗಳು ಎಂದು ಭಾವಿಸುತ್ತೇವೆ. ಆದರೆ ಅದು ಸತ್ಯವಲ್ಲ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ಹೂಡಿಕೆದಾರ ಆಗಿದ್ದಾನೆ.

ಈ ಮೂರನೇ ಮತ್ತು ನಾಲ್ಕನೇ ಕೆಟಗರಿಯವರು ಗಳಿಸುವ ಹಣವನ್ನು ಪ್ಯಾಸಿವ್ ಇನ್ಕಮ್ ಎನ್ನಲಾಗುತ್ತದೆ. ಮೊದಲೆರಡು ಕೆಟಗರಿಯವರು ಜೀವನ ಪೂರ್ತಿ ಕೆಲಸ ಮಾಡುತ್ತಿರುತ್ತಾರೆ ಮತ್ತು ಅವರು ಆರ್ಥಿಕವಾಗಿ ಸ್ವತಂತ್ರರಾಗುವುದು ತುಂಬಾ ಕಷ್ಟ ಎಂದು ಅನೇಕರು ತಿಳಿಸುತ್ತಾರೆ. ನೀವು ಇದನ್ನು ಬದಲಾಯಿಸಬಹುದು. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿ ಕೇವಲ ಬ್ಯುಸಿನೆಸ್ ಮ್ಯಾನ್ ಆಗಲು ಸಾಧ್ಯವಿಲ್ಲ, ಪ್ರತಿಯೊಬ್ಬ ವ್ಯಕ್ತಿ ಕೇವಲ ಉದ್ಯೋಗಿಯಾಗಲು ಸಾಧ್ಯವಿಲ್ಲ, ಮತ್ತು ಪ್ರತಿಯೊಬ್ಬ ವ್ಯಕ್ತಿ ಪೂರ್ತಿಯಾಗಿ ಹೂಡಿಕೆದಾರನಾಗಲು ಸಾಧ್ಯವಿಲ್ಲ. ಆಗಿದ್ದರೆ ಇದಕ್ಕೆ ಇರುವ ಪರಿಹಾರವೇನು?

ಇದಕ್ಕೆ ಇರುವ ಪರಿಹಾರವೆಂದರೆ ಕ್ವಾರ್ಟರ್ ರೂಲ್. ನೀವು ಗಳಿಸುವ ಹಣದಲ್ಲಿ 1/4 ನಷ್ಟು ಭಾಗವನ್ನು ಖರ್ಚು ಮಾಡಿ. ಉಳಿದ 3/4 ನಷ್ಟು ಹೂಡಿಕೆ ಮಾಡಿದರೆ ನೀವು ಹೂಡಿಕೆದಾರರ ಕೆಟಗರಿಗೆ ಬರುತ್ತೀರಾ. ನೀವು 1 ಲಕ್ಷ ಸಂಬಳ ಪಡೆಯುತ್ತಿದ್ದಾರೆ, 25,000 ಖರ್ಚು ಮಾಡಿ, ಇನ್ನೂಳಿದ 75,000 ಹಣವನ್ನು ಹೂಡಿಕೆ ಮಾಡಿ. ಈ ಹಣವನ್ನು FDಯಲ್ಲಿ(fixed deposit), ಷೇರು ಮಾರುಕಟ್ಟೆಯ ಕೆಲವು ಕಂಪನಿಗಳಲ್ಲಿ ಹಾಕಿ. ಕೆಲವು ಪರ್ಸೆಂಟನ್ನು ಕ್ರಿಪ್ಟೋದಲ್ಲೂ(crypto) ಹಾಕಬಹುದು. ಈ ರೀತಿ ನೀವು ಒಬ್ಬ ಹೂಡಿಕೆದಾರ ಆಗಬಹುದು.

ಒಬ್ಬರ ಸಂಬಳ 15 ರಿಂದ 20 ಸಾವಿರ ಇದ್ದರೆ. ಅವರು ಹೇಗೆ 75 ಸಾವಿರ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ನೀವು ಕೂಡ ಇದರಲ್ಲಿ ಒಬ್ಬರಾಗಿದ್ದರೆ ನಾವು ಹೇಳುವುದು ಇಷ್ಟೆ, ಅನವಶ್ಯಕ ಖರ್ಚು ಮಾಡುವುದನ್ನು ನಿಲ್ಲಿಸಿ. ನಿಮ್ಮ ಖರ್ಚೆಲ್ಲಾ ಮಾಡಿ ಎಷ್ಟೆಲ್ಲ ಹಣವನ್ನು ಉಳಿಸಲು ಸಾಧ್ಯವಾಗುತ್ತದೆಯೋ ಅದನ್ನು ಹೂಡಿಕೆ ಮಾಡಿ. ಇದರಿಂದ ಅದು ಪ್ಯಾಸಿವ್ ಇನ್ಕಮ್ ಆಗಿ ಬೆಳೆಯುತ್ತದೆ.

ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್

ಪ್ಯಾಸಿವ್ ಇನ್ಕಮನ್ನು 4 ಕೆಟಗರಿಯಾಗಿ ವಿಂಗಡಿಸಬಹುದು.

ರಿಯಲ್ ಎಸ್ಟೇಟ್.

is real estate a good way to make passive income in kannada
real estate

ಇದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ರಿಯಲ್ ಎಸ್ಟೇಟ್ ನಿಂದ ಹಣ ಗಳಿಸಲು ಹಣ ಗಳಿಸಲು 4 ರೀತಿ ಇದೆ. ಅವೆಂದರೆ

ಬಾಡಿಗೆಗೆ ನೀಡುವ ಮನೆ: ಇದರಿಂದ ನಿಮಗೆ ಬಾಡಿಗೆ ದೊರೆಯುತ್ತದೆ.

ಸುಸಜ್ಜಿತ ಫ್ಲಾಟ್(furnished flat): ನಿಮ್ಮ ಹತ್ತಿರ ಒಂದು ಸುಂದರ ಸ್ಥಳದಲ್ಲಿ ಫ್ಲ್ಯಾಟ್ ಇದ್ದರೆ ಅದರಲ್ಲಿ ಜನರು ಬಂದು 2 - 3 ದಿನ ಇರಬಹುದು. ಅದಕ್ಕೆ ನೀವು ಚಾರ್ಜ್ ಮಾಡಬಹುದು.

ಉಗ್ರಾಣ(warehouse): ಇಂದು ಅಮೆಜಾನ್, ಫ್ಲಿಪ್ಕಾರ್ಟ್ ರೀತಿ ಅನೇಕ ಕಂಪನಿಗಳು ನಿಮ್ಮ ಮನೆ ತನಕ ವಸ್ತುಗಳನ್ನು ಡೆಲಿವರಿ ಮಾಡುತ್ತಾರೆ. ಇವರು ಆ ವಸ್ತುಗಳನ್ನು ಉಗ್ರಾಣದಲ್ಲಿ ಇಡಬೇಕಾಗುತ್ತದೆ. ಉಗ್ರಾಣವೆಂದರೆ ದೊಡ್ಡ ಪ್ರದೇಶದಲ್ಲಿ ದೊಡ್ಡದಾದ ಟೆಂಟ್ ರೀತಿ ಮಾಡಿರುವ ಮನೆಗಳಾಗಿರುತ್ತವೆ. ನೀವು ನಗರದಲ್ಲಿ ಈ ರೀತಿಯ ಉಗ್ರಾಣ ಹೊಂದಿದ್ದರೆ, ತಿಂಗಳಿಗೆ 3 ರಿಂದ 4 ಲಕ್ಷದಷ್ಟು ಬಾಡಿಗೆ ಪಡೆಯಬಹುದು.

ವಾಣಿಜ್ಯ ಆಸ್ತಿ(commercial property): ನೀವು ಯಾವುದಾದರೂ ಅಂಗಡಿ ನಡೆಸಲು ಕಟ್ಟಡ ಹೊಂದಿದ್ದರೆ ಅದನ್ನು ಬಾಡಿಗೆಗೆ ನೀಡಬಹುದು ಅಥವಾ ನಿಮ್ಮ ಹತ್ತಿರ ಇರುವ ಖಾಲಿ ಜಾಗವನ್ನು ಪಾರ್ಕಿಂಗ್ ಲಾಟ್ ರೀತಿಯಲ್ಲೂ ನೀಡಬಹುದು.

ಷೇರು ಮಾರುಕಟ್ಟೆ(share market).

how do i generate passive income in stock market in kannada
share market

ನೀವು ಷೇರು ಮಾರುಕಟ್ಟೆಗೆ ಪೂರ್ತಿ ಸಮಯ ನೀಡಲು ಸಾಧ್ಯವಾಗದೇ ಹೂಡಿಕೆ ಮಾಡಲು ಬಯಸುವವರಾಗಿದ್ದರೆ, ನೀವು ಒಂದು ಒಳ್ಳೆಯ ಕಂಪನಿಯ ಮೇಲೆ ದೀರ್ಘಾವಧಿ ಹೂಡಿಕೆ ಮಾಡಬಹುದು. ನೀವು ಹೂಡಿಕೆ ಮಾಡುವ ಮೊದಲು ಸ್ವಲ್ಪ ರಿಸರ್ಚ್ ಮಾಡಿ ಒಳ್ಳೆಯ ಕಂಪನಿ ಎಂದು ಕಂಡುಕೊಂಡ ಕೆಲವು ಕಂಪನಿಗಳಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಿ.

ಇದಾದ ನಂತರ ನೀವು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬಹುದು. ಮ್ಯೂಚುವಲ್ ಫಂಡ್ ಬಗ್ಗೆಯೂ ಅಷ್ಟು ಗೊತ್ತಿಲ್ಲದಿದ್ದರೆ, ಇಂಡೆಕ್ಸ್ ಫಂಡ್‌ನಲ್ಲಿ ಹೂಡಿಕೆ ಮಾಡಬಹುದು. ಇಂಡೆಕ್ಸ್ ಫಂಡ್ ಎಂದರೆ ದೇಶದ ಟಾಪ್ 30 ಅಥವಾ ಟಾಪ್ 50 ಕಂಪನಿಗಳನ್ನು ಒಳಗೊಂಡ ಫಂಡ್ ಆಗಿದೆ. ಇದರಿಂದ ದೇಶದ ಆರ್ಥಿಕ ಸ್ಥಿತಿ ಬೆಳೆದಂತೆ ನಿಮ್ಮ ಆರ್ಥಿಕ ಸ್ಥಿತಿಯು ಬೆಳೆಯುತ್ತದೆ.

ವಿಶ್ವಯುದ್ಧ 3 ಅದರೆ, ಇಲ್ಲ ಕೊರೋನಕ್ಕಿಂತ ಭಯಾನಕ ಮಹಾಮಾರಿ ಬಂದು ಜಗತ್ತಿನ ಜನಸಂಖ್ಯೆಯಲ್ಲಿ ಹೆಚ್ಚಿನ ಭಾಗ ನಾಶವಾದರೆ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ನಷ್ಟ ಆಗಬಹುದು. ಏಕೆಂದರೆ ಆ ಸಮಯದಲ್ಲಿ ಸಪ್ಲೆ ಮತ್ತು ಡಿಮ್ಯಾಂಡ್ ಎಲ್ಲವೂ ನಿಂತು ಬಿಡುತ್ತದೆ. ಆ ಸಮಯದಲ್ಲಿ ಮಾತ್ರ ನಿಮ್ಮ ಇಂಡೆಕ್ಸ್ ಫಂಡ್ ಬೀಳುವ ಸಾಧ್ಯತೆ ಇರುತ್ತದೆ. ಕ್ರಿಪ್ಟೋ ಕರೆನ್ಸಿಯಲ್ಲಿ ನಿಮ್ಮ ಸ್ವಲ್ಪ ಹಣವನ್ನು ಹೂಡಿಕೆ ಮಾಡಬಹುದು.

ಅಫಿಲಿಯೇಟ್ ಮಾರ್ಕೆಟಿಂಗ್.

how do affiliates make passive income in kannada
affiliate marketing

ನೀವು ತುಂಬಾ ಟೆಕ್ ವಿಡಿಯೋ ನೋಡುತ್ತಿದ್ದರೆ ಯಾವುದಾದರೂ ಮೊಬೈಲ್ ಅಥವಾ ಇತರೆ ಗ್ಯಾಜೆಟ್ ಗಳನ್ನು ನೀವು ಖರೀದಿಸಲು ಬಯಸಿದರೆ ಅವರು ಕೆಳಗಿನ ಲಿಂಕ್‌ಗೆ ಹೋಗಿ ಎಂದು ಹೇಳುತ್ತಾರೆ. ನೀವು ಆ ಲಿಂಕ್‌ನಿಂದ ವಸ್ತು ಖರೀದಿಸಿದರೆ ಅದು ದುಬಾರಿ ಆಗುವುದಿಲ್ಲ. ಒಂದು ವಸ್ತುವಿನ ಬೆಲೆ 200 ರೂ ಇದ್ದರೆ, ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಹೋದರೂ ಅದರ ಬೆಲೆ 200 ರೂನೆ ಇರುತ್ತದೆ. ಆದರೆ ಆ ಲಿಂಕ್ ನೀಡಿದವನಿಗೆ 4 ರಿಂದ 6 ರೂಪಾಯಿ ಸಿಗುತ್ತದೆ.

ಈ extra ರೂಪಾಯಿಯನ್ನು ನೀವು ನೀಡುವುದಿಲ್ಲ. ಬದಲಿಗೆ ಅಮೆಜಾನ್‌(amazon) ಅಂತ ಕಂಪನಿಗಳು ಆ ಲಿಂಕ್‌ನಿಂದ ಗ್ರಾಹಕರನ್ನು ತಂದಿದ್ದಕ್ಕೆ, 4 ರಿಂದ 6 ರೂ ನೀಡುತ್ತಾರೆ. ಇದರಿಂದ ಕ್ರಿಯೇಟರ್ಗೂ ಲಾಭವಾಗುತ್ತದೆ ಮತ್ತು ನಿಮಗೂ ಒಳ್ಳೆಯ ವಸ್ತು ಸಿಗುತ್ತದೆ. ಇದಾಗಿದೆ ಅಪಿಲೇಟ್ ಪ್ರೋಗ್ರಾಂ. ಅಫಿಲಿಯೇಟ್ ಲಿಂಕ್‌ನಿಂದ ಸಾಕಷ್ಟು ವೆಬ್‌ಸೈಟ್‌, ಬ್ಲಾಗ್ ಅನ್ನು ನೀವು ನಡೆಸಬಹುದು.

ನೀವು ಫ್ಲಿಪ್ಕಾರ್ಟ್ ನಲ್ಲಿ(flipkart) ಆನ್‌ಲೈನ್ ಸ್ಟೋರ್ ತೆಗೆಯಬಹುದು. ನಿಮ್ಮ ಸ್ಟೋರಿನ ರೇಟಿಂಗ್ ಹೆಚ್ಚಾದಂತೆ, ರಿವಿವ್ಸ್ ಚೆನ್ನಾಗಿ ಬಂದಂತೆ, ನಿಮ್ಮ ಸ್ಟೋರ್ ಬೆಳೆಯುತ್ತದೆ. ಹೀಗಾಗಿ ಆನ್‌ಲೈನ್‌ ಸ್ಟೋರ್ ತೆಗೆಯುವುದು ಪ್ಯಾಸಿವ್ ಇನ್ಕಮಿನ ಸೋರ್ಸ್ ಆಗಿದೆ.

ಇದನ್ನು ಓದಿ: Rich Dad Poor Dadನ ಮುಖ್ಯ ಐದು ಕಲಿಕೆಗಳು

E-book ಮಾರಾಟ ಮಾಡಿ.

how do i get passive income through ebook in kannada
e-book writing

ನೀವು ವಿದ್ಯಾರ್ಥಿಯಾಗಿದ್ದು ಜನರಿಗೆ ತಿಳಿಯದ ವಿಷಯವನ್ನು ತಿಳಿಸಬಹುದೆಂದು ಭಾವಿಸಿದ್ದಾರೆ ಇದು ನಿಮಗೆ ಸೂಕ್ತವಾಗಿದೆ. E-book ಬರೆಯಲು ತುಂಬಾ ಹಣ ಖರ್ಚು ಆಗುವುದಿಲ್ಲ. ಆದರೆ ತುಂಬಾ ಸಮಯ ತೆಗೆದುಕೊಳ್ಳಬಹುದು. ನಿಮ್ಮ E-book ಚೆನ್ನಾಗಿದ್ದರೆ ಜನರನ್ನು ತಲುಪಲು ಅದು ತುಂಬಾ ಸಮಯ ತೆಗೆದುಕೊಳ್ಳುವುದಿಲ್ಲ.

ನೀವು ಒಳ್ಳೆಯ ಕಾಂಟೆಂಟ್ ಕ್ರಿಯೇಟ್ ಮಾಡುವ ಬ್ಲಾಗರ್ ಆಗಿದ್ದರೆ, ನೀವು ಬ್ಲಾಗ್‌ನಲ್ಲಿ ಜಾಹೀರಾತು ತೋರಿಸಬಹುದು. ನೀವು ಒಂದು ಪ್ರೊಫೆಶನಲ್ ವೆಬ್‌ಸೈಟ್‌ ಮಾಡಿ ಅದರಲ್ಲೂ ನಿಮ್ಮ ಗೂಗಲ್ ಜಾಹೀರಾತು(google ads) ಓಡುತ್ತಿದ್ದರೆ, ಅದರಿಂದಲೂ ನೀವು ಹಣ ಗಳಿಸಬಹುದು.

ನೀವು ಒಂದು ಆ್ಯಪ್ ಮಾಡಬಹುದು. ಆ್ಯಪ್ ಈ ಸಮಯದಲ್ಲಿ ಒಂದು ಪವರ್ ಫುಲ್ ವಿಷಯವಾಗಿದೆ. ನೀವು ಆ್ಯಪ್ ನಿಂದ ಯಾವುದೇ ಸರ್ವೀಸ್ ನೀಡಿದರು, ವಸ್ತುಗಳನ್ನು ಮಾರಿದರೂ ಅದರಿಂದ ರೆವೆನ್ಯೂ ಗಳಿಸಬಹುದು. ನಿಮ್ಮ ಸರ್ವಿಸ್ ಉಚಿತವಿದ್ದರೆ ಅದನ್ನು google adsence ಜೊತೆ ಲಿಂಕ್ ಮಾಡುವುದರಿಂದ ಲಾಭ ಪಡೆಯಬಹುದು. ಇವೆಲ್ಲದರಲ್ಲಿ ನಿಮ್ಮ ಆರಂಭಿಕ ಆದಾಯ 0 ಗೆ ಹತ್ತಿರವಿದೆ. ನಿಮಗೆ ತಂತ್ರಜ್ಞಾನ ಗೊತ್ತಿದ್ದರೆ, ಕೋಡಿಂಗ್ ಗೊತ್ತಿದ್ದರೆ ನೀವು ನಿಮ್ಮ ವೆಬ್ ಪೇಜ್ ಮಾಡಬಹುದು.

ನಿಮಗೆ ಆಂಡ್ರಾಯ್ಡ್ ಅಭಿವೃದ್ಧಿ(android development) ಬಂದರೆ ಆಂಡ್ರಾಯ್ಡಾ ಆ್ಯಪ್ ಮಾಡಬಹುದು. 2 - 3 ಜನ ಸೇರಿ ಒಂದು ಆ್ಯಪ್ ನಿಂದ ಸರ್ವಿಸ್ ನೀಡಬಹುದು.

ನೀವು ಇನ್ಸ್ಟಾಗ್ರಾಂ ಪೇಜ್(instagram page) ಮಾಡಬಹುದು. ಅದರಲ್ಲಿ ಹೆಚ್ಚಿನ ಫಾಲೋವರ್ಸ್ ಅದಂತೆ, ನಿಮಗೆ ಸ್ಪಾನ್ಸರ್ ಶಿಪ್ ಸಿಗುತ್ತದೆ. ಇದೇ ರೀತಿಯೇ ನೀವು ಫೇಸ್‌ಬುಕ್‌ ಪೇಜ್ ಕೂಡ ಮಾಡಬಹುದು. ಯೂಟ್ಯೂಬ್ ಚಾನೆಲ್(youtube channel) ತೆಗೆಯಬಹುದು. ಇವುಗಳಲ್ಲಿ ನೀವು ಮಾಡುವ ಕಂಟೆಂಟ್ ಅನೇಕರಿಗೆ ತಲುಪಿದರೆ ನೀವು ಅಧಿಕ ರೆವೆನ್ಯೂ ಗಳಿಸಬಹುದು. ಕಂಟೆಂಟ್ ಮಾಡುವುದರಿಂದ ನಿಮಗೆ ಒಂದು subscription base ಕೂಡ ಸಿಗುತ್ತದೆ. ಇದರಿಂದ ನೀವು ಒಂದು subscription model ಮಾಡಿ ತಿಂಗಳು ಅದರಿಂದ ರೆವೆನ್ಯೂ ಪಡೆಯಬಹುದು.

ನೀವು ನಿಮ್ಮ 4 ರಿಂದ 5 ಸ್ನೇಹಿತರ ಜೊತೆಗೆ ಸಾಫ್ಟ್‌ವೇರ್ ಸಲ್ಯೂಷನ್ ನೀಡಬಹುದು. ನಿಮಗೆ ತಂತ್ರಜ್ಞಾನದ ಬಗ್ಗೆ ತಿಳಿದಿದ್ದು, ಇತರ ಬ್ಯುಸಿನೆಸ್‌ಗೆ ಉಪಯೋಗವಾಗುವ ಸಾಫ್ಟ್‌ವೇರ್‌ ನೀವು ಮಾಡಿದರೆ ಅದರಿಂದ ರೆವೆನ್ಯೂ ಪಡೆಯಬಹುದು. ಇದರ ಉದಾಹರಣೆ ಹೇಳಬೇಕೆಂದರೆ ಝೂಮ್ ರೀತಿಯ ವೀಡಿಯೋ ಕಾನ್ಫರೆನ್ಸಿಂಗ್ ಆ್ಯಪ್. ಈ ಆ್ಯಪನ್ನು ವೀಡಿಯೋ ಕಾನ್ಫರೆನ್ಸಿಂಗಾಗಿ ಅನೇಕ ಬ್ಯುಸಿನೆಸ್‌ನಲ್ಲಿ ಬಳಸಲಾಗುತ್ತದೆ. ನೀವು ಇದರಲ್ಲೂ subscription base ಮಾಡಬಹುದು. ಅಂದರೆ ತಿಂಗಳಿಗೆ ಇಷ್ಟು ಸರ್ವಿಸ್ ನೀಡಲು ಇಷ್ಟು ಚಾರ್ಜ್ ತೆಗೆದುಕೊಳ್ಳಬಹುದು. ಇದರಲ್ಲಿ ನಿಮಗೆ ಹೆಚ್ಚಿನ ಫಂಡಿಂಗ್ ಸಿಕ್ಕರೆ ದೊಡ್ಡ ಕಂಪನಿಯಾಗಿಯೂ ಬೆಳಸಬಹುದು.

ಇದನ್ನು ಓದಿ: ಗಣಿತವನ್ನು ವೇಗವಾಗಿ ಕಲಿಯುವುದು ಹೇಗೆ?

ಆರ್ಟಿಸ್ಟ್.

how do artists make passive income in kannada
artist

ನೀವು ಒಬ್ಬ ಆರ್ಟಿಸ್ಟ್ ಆಗಿದ್ದರೆ ಇಂದಿನ ಸಮಯದಲ್ಲಿ NFT ಅಂದರೆ non fungible tokens ಮಾಡಬಹುದು. ಈ nft ಯನ್ನು ಜನರು ಖರೀದಿಸಬಹುದು. ಕೆಲವು ಸಮಯದ ಹಿಂದೆ ಒಬ್ಬ ವ್ಯಕ್ತಿ 3$ಗೆ nftಯನ್ನು ಖರೀದಿಸಿದ ಅದು ಮಿಲಿಯನ್ ಡಾಲರ್‌ಗೆ ಮಾರಾಟವಾಯಿತಂತೆ, ಇದು ಎಲ್ಲರಿಗೂ ಆಗಲು ಸಾಧ್ಯವಿಲ್ಲ. ಆದರೆ ನೀವು ಒಬ್ಬ ಆರ್ಟಿಸ್ಟ್ ಆಗಿದ್ದರೆ ಇದನ್ನು ಪ್ರಯತ್ನಿಸಬಹುದು.

ಇದನ್ನು ಓದಿ: ಯಶಸ್ಸು ಕಾಣಲು ಚಾಣಕ್ಯರ ನಾಲ್ಕು ನೀತಿಗಳು

ಟೀಚಿಂಗ್.

is online teaching a passive income in kannada
teaching

ನಿಮಗೆ ಪಾಠ ಹೇಳಿಕೊಡುವುದರಲ್ಲಿ ಆಸಕ್ತಿ ಇದ್ದರೆ ನಿಮ್ಮದೇ ಆದ ಒಂದು ಕೋರ್ಸ್ ಅನ್ನು ಪ್ರಾರಂಭಿಸಬಹುದು. ಇಂದು ಟೀಚಿಂಗ್ ಮಾಡಲು ಉಪಯುಕ್ತವಾಗುವ ಅನೇಕ ಪ್ಲ್ಯಾಟ್ ಫಾರ್ಮ್ ಗಳು ಬಂದಿವೆ. ಅಲ್ಲಿ ನೀವು ಹೋಗಿ ಪಾಠ ಮಾಡಬೇಕಾಗಿದೆ ಅಷ್ಟೇ. ನೀವು ಈ ರೀತಿಯ ಪ್ಲ್ಯಾಟ್ ಫಾರ್ಮ್ ಬಳಸಿ ಅನೇಕ ಜನರನ್ನು ತಲುಪಬಹುದು ಮತ್ತು ಇದಕ್ಕೆ ನಿಮಗೆ ಅಪ್ಲಿಕೇಶನ್ ಮಾಡುವ ಅಗತ್ಯವೂ ಇರುವುದಿಲ್ಲ.

ನೀವು ಒಂದು ಶರ್ಟ್ ಮಾಡಿ ಅದನ್ನು 100 ರೂ ಕೊಟ್ಟು ಫೇಸ್‌ಬುಕ್‌ ads ಗೆ(facebook ads) ಹಾಕುತ್ತೀರಾ. ನಿಮ್ಮ ಬಟ್ಟೆ ಚೆನ್ನಾಗಿದ್ದರೆ 500 ರೂ ಕ್ಕಿಂತ ಹೆಚ್ಚು ಗಳಿಸಬಹುದು. 500 ರೂ ಗಳಿಸಿದ ನಂತರ ಮತ್ತೆ 200 ರೂ ಗೆ ಫೇಸ್‌ಬುಕ್ ads ಹಾಕಿ. ಅದು ಇನ್ನಷ್ಟು ಗಳಿಸಿ ಕೊಡುತ್ತದೆ. ಇದೇ ರೀತಿ ಮುಂದುವರೆಸಿ. ಇಲ್ಲಿ ಸಮಸ್ಯೆ ಏನೆಂದರೆ ಯಾರಾದರೂ ಆರ್ಡರ್ ಮಾಡಿದರೆ ಅವರಿಗೆ ಹೇಗೆ ಡೆಲಿವರಿ ಮಾಡುವುದು. ಇದಕ್ಕೆ ನೀವು ಶಾಫಿಫೈ(shopify) ಮುಖಾಂತರ ನಿಮ್ಮ ಡೆಲಿವರಿಯನ್ನು ಲಿಂಕ್ ಮಾಡಬಹುದು.

ಇದಾಗಿತ್ತು ಪ್ಯಾಸಿವ್ ಇನ್ಕಮ್ ಕೆಲವು ರೀತಿ. ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

commenters

bhagya • March 16th,2022

It's wonderful information to eran money in different ways helpful.