Website designed by @coders.knowledge.

Website designed by @coders.knowledge.

Facts about Antarctica | ಅಂಟಾರ್ಟಿಕದ ಮೇಲೆ ಎಂಟು ಮೋಜಿನ ಸಂಗತಿಗಳು

 0

 Add

Please login to add to playlist

Watch Video

ವಿಶ್ವದ ದಕ್ಷಿಣದ ತುದಿಯಲ್ಲಿ ನೀವು ಅಂಟಾರ್ಟಿಕಾವನ್ನು ಕಾಣುತ್ತೀರಾ. ಅಂಟಾರ್ಟಿಕಾ ಐಸ್ ಕಂಬಳಿ ಹೊದಿಸಿದ ಖಂಡವಾಗಿದ್ದು, ಆಸ್ಟ್ರೇಲಿಯಾದಿಂದ ಎರಡು ಪಟ್ಟು ದೊಡ್ಡದಾಗಿದೆ. ಪ್ರಪಂಚದ ಇತರ ಭಾಗಗಳಿಗಿಂತ ಪ್ರತ್ಯೇಕಿಸಲ್ಪಟ್ಟ ಅಂಟಾರ್ಟಿಕಾ ಭೂಮಿಯ ಮೇಲಿನ ಅತ್ಯಂತ ನಿಗೂಢ ಖಂಡಗಳಲ್ಲಿ ಒಂದಾಗಿದೆ.

1. ಅಂಟಾರ್ಟಿಕಾ ವಿಶ್ವದ ಹೆಚ್ಚಿನ ಶುದ್ಧ ನೀರನ್ನು ಹೊಂದಿದೆ.

ವಿಶ್ವದ 60 ರಿಂದ 90% ಶುದ್ಧ ನೀರು ಅಂಟಾರ್ಟಿಕಾದ ಐಸ್‌ಶೀಟ್ನಲ್ಲಿ ಇದೆ. ಅಂಟಾರ್ಟಿಕಾದ ಐಸ್‌ಶೀಟ್ ಭೂಮಿಯ ದೊಡ್ಡ ಐಸ್‌ಶೀಟ್ ಆಗಿದೆ. ಇದು 14 ಮಿಲಿಯನ್ ಚದರ ಕಿಲೋಮೀಟರ್‌ಗಳಷ್ಟು ಅಂಟಾರ್ಟಿಕದ ಪರ್ವತ ಶ್ರೇಣಿ ಮತ್ತು ಕಣಿವೆಗಳಲ್ಲಿ ಹರಡಿದೆ. ಕೆಲವು ಜಾಗಗಳಲ್ಲಿ ಮಂಜುಗಡ್ಡೆ 4 ಕಿಲೋಮೀಟರ್‌ಗಿಂತ ಹೆಚ್ಚು ದಪ್ಪವಾಗಿರುತ್ತದೆ. ಅದು ಮೌಂಟ್ ಎವರೆಸ್ಟ್‌ನ ಅರ್ಧದಷ್ಟು ಎತ್ತರವಾಗಿದೆ. ಅಂಟಾರ್ಟಿಕವು ಸುಮಾರು 26.5 ಮಿಲಿಯನ್‌ನಷ್ಟು ಹಿಮವನ್ನು ಹೊಂದಿದೆ. ಅಂಟಾರ್ಟಿಕಾದ 1% ಮಾತ್ರ ಶಾಶ್ವತವಾಗಿ ಐಸ್ ಮುಕ್ತವಾಗಿದೆ.

ಇದನ್ನು ಓದಿ: ಕರ್ನಾಟಕ ಟಾಪ್ ಎಂಟು ಪ್ರವಾಸಿ ತಾಣಗಳು

2. ಅಂಟಾರ್ಟಿಕಾ ಒಂದು ಮರುಭೂಮಿ.

why antarctica is the biggest desert in kannada
desert antarctica

ಅಷ್ಟು ಹಿಮ ಇರುವ ಅಂಟಾರ್ಟಿಕಾ ಹೇಗೆ ಮರುಭೂಮಿಯಾಗುತ್ತದೆ? ನಮ್ಮಲ್ಲಿ ಮರುಭೂಮಿ ಎಂದ ತಕ್ಷಣ ಅದು ಮರಳು ಮತ್ತು ತುಂಬಾ ತಾಪಮಾನ ಇರುವ ಜಾಗ ಅಂದುಕೊಳ್ಳುತ್ತೇವೆ. ಆದರೆ ಯಾವ ಜಾಗದಲ್ಲಿ ತುಂಬಾ ಕಡಿಮೆ ಮಳೆಯಾಗುತ್ತದೆಯೋ, ಆ ಜಾಗವನ್ನು ನಾವು ಮರುಭೂಮಿ ಎಂದು ಪರಿಗಣಿಸಬಹುದು. ಅಂಟಾರ್ಟಿಕಾದಲ್ಲಿ ತುಂಬಾ ಹಿಮ ಇರಬಹುದು, ಆದರೆ ಈಗಿನ ಥಿಕ್ನೆಸ್ ಪಡೆದುಕೊಳ್ಳಲು ಅದು 45 ಮಿಲಿಯನ್ ವರ್ಷ ಕಾಯಬೇಕಾಯಿತು. ಇದು ಯಾಕೆಂದರೆ ಅಲ್ಲಿ ತುಂಬಾ ಕಡಿಮೆ ಮಳೆ ಬೀಳುತ್ತದೆ. ಕಳೆದ ಮೂವತ್ತು ವರ್ಷಗಳಲ್ಲಿ ಅಂಟಾರ್ಟಿಕಾದಲ್ಲಿ ವಾರ್ಷಿಕ ಮಳೆ ಕೇವಲ ಒಂದು ಸೆಂಟಿಮೀಟರ್ಗಿಂತ ಹೆಚ್ಚಿದೆ. ಹೀಗಾಗಿ ಅಂಟಾರ್ಟಿಕಾವನ್ನು ಮರುಭೂಮಿ ಎಂದು ಪರಿಗಣಿಸಬಹುದು.

ಇದನ್ನು ಓದಿ: ಭಾರತದ ಮೇಲೆ ಎಂಟು ಅದ್ಭುತ ಸಂಗತಿಗಳು

3. ಒಂದು ಕಾಲದಲ್ಲಿ ಅಂಟಾರ್ಟಿಕಾ ಬೆಚ್ಚಗಿತ್ತು.

is it ever warm in antarctica in kannada
warm antarctica

ಜಗತ್ತಿನ ಅತಿ ಕಡಿಮೆ ತಾಪಮಾನವಿರುವ ಅಂಟಾರ್ಟಿಕಾ ಬೆಚ್ಚಗಿತ್ತು ಎಂದರೆ ನಂಬಲು ಸಾಧ್ಯವಾಗುವುದಿಲ್ಲ. ಅಂಟಾರ್ಟಿಕಾ ಯಾವಾಗಲೂ ಐಸ್‌ನಿಂದ ಕವರ್ ಆಗಿರಲಿಲ್ಲ. 40- 50 ಮಿಲಿಯನ್ ವರ್ಷಗಳ ಹಿಂದೆ ಅಂಟಾರ್ಟಿಕದ ತಾಪಮಾನ 17° C ಇತ್ತು ಎಂದು ರಿಸರ್ಚ್‌ನಿಂದ ತಿಳಿದುಬಂದಿದೆ. ಅಂಟಾರ್ಟಿಕಾ ಒಂದು ಕಾಲದಲ್ಲಿ ಕಾಡಿನಿಂದ ಕೂಡಿದ್ದು, ತುಂಬಾ ಡೈನಸೋರ್ ಇತ್ತೆಂದು ವಿಜ್ಞಾನಿಗಳು ಫಾಸಿಲ್ ನೋಡಿ ತಿಳಿಸಿದ್ದಾರೆ.

4. ಅಂಟಾರ್ಟಿಕಾ ಪೆನಿನ್ಸುಲಾ ವೇಗವಾಗಿ ಬೆಚ್ಚಗಾಗುತ್ತಿದೆ.

ಅಂಟಾರ್ಟಿಕಾ ಪೆನಿನ್ಸುಲಾ ಭೂಮಿಯ ಇತರ ಪ್ರದೇಶಗಳಿಗಿಂತ ವೇಗವಾಗಿ ಬೆಚ್ಚಗಾಗುತ್ತಿದೆ. ಇದು ಭೂಮಿಯಲ್ಲಿ ಬೇಗನೆ ಬೆಚ್ಚಗಾಗುತ್ತಿರುವ ಜಾಗವೂ ಆಗಿದೆ. ಕಳೆದ ಐವತ್ತು ವರ್ಷದಲ್ಲಿ ಅಂಟಾರ್ಟಿಕದ ಪೆನಿನ್ಸುಲಾದ ತಾಪಮಾನ 3°C ನಷ್ಟು ಹೆಚ್ಚಾಗಿದೆ. ಇದು ಭೂಮಿಯ ಮೇಲಿನ ಸರಾಸರಿ ಹೆಚ್ಚಳಕ್ಕಿಂತ 5 ಪಟ್ಟು ಹೆಚ್ಚು.

ಇದನ್ನು ಓದಿ: ಕಳೆದುಹೋದ ಪ್ರಾಚೀನ ಭಾರತದ ಐದು ತಂತ್ರಜ್ಞಾನಗಳು

5. ಅಂಟಾರ್ಟಿಕಾದಲ್ಲಿ ಟೈಮ್ ಜೋನ್ ಇಲ್ಲ.

what time zone does antarctica use in kannada
timezone

ಅಂಟಾರ್ಟಿಕಾದಲ್ಲಿ ಸಮಯವು ಒಂದು ಟ್ರಿಕ್ಕಿ ವಿಚಾರವಾಗಿದೆ. ಬೇಸಿಗೆಯಲ್ಲಿ ಸುಮಾರು 24 ಗಂಟೆ ಬೆಳಕು ಇದ್ದರೆ, ಚಳಿಗಾಲದಲ್ಲಿ 24 ಗಂಟೆ ಕತ್ತಲಿರುತ್ತದೆ. ನೀವು ಭೂಮಿಯ ಸೌತ್‌ ಭಾಗಕ್ಕೆ ಹೋಗುವಾಗ ಲಾಂಗಿಟ್ಯೂಡ್ ಲೈನ್ ಗಳು ಹತ್ತಿರವಾಗುತ್ತವೆ. ಇದರ ಪರಿಣಾಮ ನಾವು ಸಮಯ ನೋಡಲು ಬಳಸುವ ಎಲ್ಲ ಸೂಚಕಗಳಿಂದ ಯಾವುದೇ ಸಹಾಯ ಸಿಗುವುದಿಲ್ಲ. ಅಂಟಾರ್ಟಿಕಾದಲ್ಲಿ ರಿಸರ್ಚ್ ಮಾಡುವ ವಿಜ್ಞಾನಿಗಳು ಅವರು ಅಲ್ಲಿಗೆ ಹೊರಟ ಜಾಗದ ಸಮಯವನ್ನು ಪಾಲಿಸುತ್ತಾರೆ. ಬೇರೆ ಬೇರೆ ದೇಶದ ವಿಜ್ಞಾನಿಗಳು ಇಲ್ಲಿ ಒಟ್ಟಿಗೆ ಸೇರಿದರೆ ಅವರ ಸಮಯ ತುಂಬಾ ವಿಭಿನ್ನವಾಗಿರುತ್ತದೆ.

ಇದನ್ನು ಓದಿ: ಪಿರಮಿಡ್‌ಗಳನ್ನು ಏಕೆ ಮತ್ತು ಹೇಗೆ ಮಾಡಲಾಯಿತು?

6. ಅಂಟಾರ್ಟಿಕಾದ ಪ್ರತಿಯೊಂದು ಮಾರ್ಗವು ಉತ್ತರ!

ನೀವು ಅಂಟಾರ್ಟಿಕಾದಲ್ಲಿ ಇದ್ದರೆ ನೀವು ಭೂಮಿಯ ದಕ್ಷಿಣ ಭಾಗದಲ್ಲಿ ಇದ್ದೀರಿ ಎಂದು ಅರ್ಥ. ನೀವು ಯಾವ ದಿಕ್ಕಿನಲ್ಲಿ ನೋಡಿದರೂ ಪರವಾಗಿಲ್ಲ ಪ್ರತಿಯೊಂದು ದಿಕ್ಕು ಉತ್ತರವೇ ಆಗಿರುತ್ತದೆ. ಅಲ್ಲಿ ವಿಜ್ಞಾನಿಗಳು ಸೌತ್ ಅಂಟಾರ್ಟಿಕಾ, ಈಸ್ಟ್ ಅಂಟಾರ್ಟಿಕಾ, ವೆಸ್ಟ್ ಅಂಟಾರ್ಟಿಕಾ ಎಂದು ಮಾಡಿದ್ದರೂ, ಅದು ಆ ಜಾಗದಲ್ಲಿ ಇರುವ ದಿಕ್ಕುಗಳಾಗಿವೆ. ನೀವು ಅಂಟಾರ್ಟಿಕಾದಿಂದ ವಾಪಸ್ ಬರುವಾಗ ನೀವು ಅಲ್ಲಿ ಎಲ್ಲಿಂದ ಬಿಟ್ಟರು ನೀವು ಭೂಮಿಯ ಉತ್ತರವನ್ನು ತಲುಪುತ್ತೀರಾ.

7. ಅಂಟಾರ್ಟಿಕಕ್ಕೆ ತನ್ನದೇ ಆದ ಒಪ್ಪಂದವಿದೆ.

agreement on antarctica in kannada
antarctica agreement

1820ರಲ್ಲಿ ಅಂಟಾರ್ಟಿಕಾ ಎಂಬ ಸ್ಥಳೀಯ ಜನಸಂಖ್ಯೆ ಇಲ್ಲದ ಖಂಡವನ್ನು ಮಾನವನು ಕಂಡುಹಿಡಿದನು. ಹಲವಾರು ರಾಷ್ಟ್ರಗಳು ಖಂಡಕ್ಕೆ ಶೀಘ್ರವಾಗಿ ಹಕ್ಕು ಸಾಧಿಸಿದ್ದವು. ಕೆಲವು ದೇಶಗಳು ಅಂಟಾರ್ಟಿಕ ತಮ್ಮದು ಎಂದರೆ, ಇತರ ದೇಶಗಳು ಅದನ್ನು ಒಪ್ಪುತ್ತಿರಲಿಲ್ಲ. ಈ ಉದ್ವಿಗ್ನತೆಯನ್ನು ತಡೆಯಲು 1959ರಲ್ಲಿ, 12 ದೇಶಗಳು ಅಂಟಾರ್ಟಿಕಾವನ್ನು ಶಾಂತಿ ಮತ್ತು ವಿಜ್ಞಾನದ ಮೀಸಲು ಪ್ರದೇಶವೆಂದು ಪರಿಗಣಿಸುವ ಒಪ್ಪಂದಕ್ಕೆ ಸಹಿ ಹಾಕಿತು. ಆಮೇಲೆ 41 ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿದವು..

ಇದನ್ನು ಓದಿ: ಭೂಮಿಯ ಏಳು ಅತಿದೊಡ್ಡ ಬಗೆಹರಿಯದ ರಹಸ್ಯಗಳು

8. ಗಾಳಿಯಲ್ಲಿ ಡೈಮೆಂಡ್ ಡಸ್ಟ್.

does diamond dust float in the air in antarctica in kannada
diamond dust

ಅಂಟಾರ್ಟಿಕಾದಲ್ಲಿ ಕಡಿಮೆ ಮಟ್ಟದ ಮಳೆಯಾದರೂ ಹವಾಮಾನದ ಅದ್ಭುತಗಳು ಹೆಚ್ಚು ಕಾಣಸಿಗುತ್ತವೆ. ಅವುಗಳಲ್ಲಿ ಒಂದು ಡೈಮಂಡ್ಸ್ ಡಸ್ಟ್. ಡೈಮಂಡ್ಸ್ ಡಸ್ಟ್ ಸಣ್ಣ ಐಸ್ ಕಿರ್ಸ್ಟಲ್ ಆಗಿದ್ದು, ಪಾಗ್ ರೀತಿಯೇ ಇರುತ್ತದೆ. ಐಸ್ ಕ್ರಿಸ್ಟಲ್ ಗಾಳಿಯಲ್ಲಿ ಸ್ಥಗಿತಗೊಂಡಾಗ ಸೂರ್ಯನ ಬೆಳಕು ಅವುಗಳನ್ನು ಮಿಂಚುವಂತೆ ಮಾಡುತ್ತದೆ. ಇದು ಮಿಲಿಯನ್‌ನಷ್ಟು ಸಣ್ಣದಾಗಿ ತೇಲುವ ಡೈಮೆಂಡ್ ರೀತಿ ಕಾಣುತ್ತದೆ. ಈ ಡೈಮಂಡ್ ಡಸ್ಟ ಅನೇಕ ಸುಂದರವಾದ ಆಪ್ಟಿಕಲ್ ಪಿನೊಮಿನಗಳಿಗೆ ಕಾರಣವಾಗಿದೆ..

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments