Website designed by @coders.knowledge.

Website designed by @coders.knowledge.

How Scary Space is? ಬಾಹ್ಯಾಕಾಶದ ಒಂಬತ್ತು ಭಯಾನಕ ಸಂಗತಿಗಳು

 0

 Add

Please login to add to playlist

Watch Video

ಭಯಾನಕ ಹ್ಯಾಲೋವೀನ್ ಚಲನಚಿತ್ರದಲ್ಲಿ ರಾಕ್ಷಸರು, ಪಿಶಾಚಿಗಳು ನಿಮಗೆ ಭಯ ನೀಡಬಹುದು. ಆದರೆ ನಿಮಗೆ ನಿಜವಾದ ಹೆದರಿಕೆ ಬೇಕಾದರೆ ನಮ್ಮ ಗ್ಯಾಲಕ್ಸಿಯಲ್ಲೇ ಇದೀಗ ಸಂಭವಿಸಬಹುದಾದ ಒಂಬತ್ತು ಅಜಾಗರೂಕ ದುಸ್ವಪ್ನಗಳನ್ನು ಪರಿಶೀಲಿಸಿ.

ಇದನ್ನು ಓದಿ: ಕರ್ನಾಟಕದಲ್ಲಿ ನೋಡಬೇಕಾದ ಹತ್ತು ತಾಣಗಳು

1. ಮಿರಾಂಡಾ ಎಂಬ Monster ಮೂನ್!

ಮಿರಾಂಡಾ(miranda) ಯುರೇನಸ್ ಗ್ರಹದ ಹಿಮವೃತ ಚಂದ್ರ ಯುರೇನಸ್(uranus)‌ ಸೂರ್ಯನಿಂದ ಏಳನೇ ಗ್ರಹವಾಗಿದೆ. ನೀವು ಮಿರಾಂಡಾವನ್ನು ಹತ್ತಿರದಿಂದ ನೋಡಿದರೆ ಹೊಂದಿಕೆಯಾಗದ ನೋಟವನ್ನು ಗಮನಿಸಬಹುದು.

miranda moon space scary truth in kannada
miranda moon

ನೀವು ಇದರಲ್ಲಿ ಗಮನಿಸುತ್ತಿರುವ ತೇಪೆಗಳು ಆಳವಾದ ಗುಂಡಿಗಳು, ಎತ್ತರದ ಶಿಖರಗಳು ಮತ್ತು ಬಂಡೆಗಳಾಗಿವೆ.

ಇದನ್ನು ಓದಿ: ಜಗತ್ತಿನ ಹತ್ತು ಅತೀ ಎತ್ತರದ ಪರ್ವತಗಳು

2. ಸೂರ್ಯನ ಭಯಾನಕ ಮುಖ!

scary sun space scary truth in kannada
scary sun

ಅಕ್ಟೋಬರ್ 2014ರಂದು ನಾಸಾದ(nasa) ಸೌರ ಡೈನಾಮಿಕ್ ಆಬ್ಸರ್ವೇಟರಿ ನಮ್ಮ ಸೂರ್ಯನ ಚಿತ್ರವನ್ನು ಸೆರೆ ಹಿಡಿದಾಗ, ಸೂರ್ಯ ಹ್ಯಾಲೋವೀನ್(halloween) ಆಗಲು ತಯಾರಾಗುತ್ತಿರುವಂತೆ ತೋರುತ್ತಿತ್ತು. ಇದು ಕುಂಬಳಕಾಯಿ ರೀತಿಯೂ ಕಾಣುತ್ತದೆ.

ಇದನ್ನು ಓದಿ: ವಲ್ಡ್ ವಾರ್ 1

3. ಸ್ಪಾಗೆಟಿಫಿಕೇಷನ್ನಿಂದ ಸಾವು!

real black hole space scary truth in kannada
real black hole

ಕಪ್ಪು ಕುಳಿ(black holes) ಅತಿಯಾದ ಗುರುತ್ವಾಕರ್ಷಣೆ ಹೊಂದಿರುವ ವಸ್ತುವಾಗಿದ್ದು, ಯಾವುದೇ ಬೆಳಕು ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ ನಾವು ಕಪ್ಪು ಕುಳಿಯನ್ನು ನೋಡಲಾಗುವುದಿಲ್ಲ. ಆದರೆ ಅವು ಸುತ್ತಲಿನ ನಕ್ಷತ್ರಗಳನ್ನು ಹೇಗೆ ಎಳೆಯುತ್ತಾವೆ ಎಂಬುದನ್ನು ನಾವು ನೋಡಬಹುದು.

ನಮ್ಮ ಮಿಲ್ಕಿ ವೇ ನಕ್ಷತ್ರಪುಂಜದ(milkyway galaxy) ಮಧ್ಯದಲ್ಲೂ ಒಂದು ಕಪ್ಪು ಕುಳಿ ಇದೆ. ಸಿನಿಮಾಗಳಲ್ಲಿ ಕಪ್ಪುಕುಳಿಯನ್ನು ಮತ್ತೊಂದು ಜಗತ್ತಿಗೆ ಪ್ರವೇಶ ದ್ವಾರವಾಗಿ ತೋರಿಸುತ್ತಾರೆ. ನಿಜ ಜೀವನದಲ್ಲಿ ಅದು ಸಂಭವಿಸಬಹುದೇ? ಬಹುಶಃ ಇಲ್ಲ. ವಿಜ್ಞಾನಿಗಳು ಹೇಳುವ ಪ್ರಕಾರ ನೀವು ಕಪ್ಪು ಕುಳಿಗೆ ಹತ್ತಿರವಿದ್ದರೆ ಗುರುತ್ವಾಕರ್ಷಣೆ ತುಂಬಾ ಪ್ರಬಲವಾಗಿರುತ್ತವೆ. ಇದರಿಂದಾಗಿ ನೀವು ಉದ್ದವಾದ ತೆಳುವಾದ ನೂಡಲ್(noodles) ರೀತಿ ವಿಸ್ತರಿಸಲ್ಪಡುತ್ತೀರಿ.

ಇದನ್ನು ಓದಿ: ಕಳೆದುಹೋದ ಪ್ರಾಚೀನ ಭಾರತದ ಐದು ತಂತ್ರಜ್ಞಾನಗಳು

4. ಚಂದ್ರನ ಮೇಲೆ ಕೊನೆಯಿಲ್ಲದ ಕತ್ತಲಿರುವ ಜಾಗ!

moon poles space scary truth in kannada
moon poles

ಸೂರ್ಯನ ಬೆಳಕು ಇಲ್ಲದ ಸ್ಥಳವನ್ನು ಕಲ್ಪಿಸಿಕೊಳ್ಳಿ. ಅದರ ಒಂದು ಕಿರಣವೂ ಇಲ್ಲ. ನಮ್ಮದೇ ಸೌರ ಮಂಡಲದಲ್ಲಿ(solar system) ಅಂತ ಸ್ಥಳವಿದೆ ಎಂದು ನಿಮಗೆ ತಿಳಿದಿದೆಯೇ. ಪ್ರತಿ ತಿಂಗಳು ಭೂಮಿಯನ್ನು ಸುತ್ತುವಂತೆ ಚಂದ್ರನು ತಿರುಗುತ್ತಾನೆ. ಆದರೆ ಸಂಪೂರ್ಣ ಮೇಲ್ಮೈಯನ್ನು ಸೂರ್ಯನ ಬೆಳಕಿಗೆ ಒಡ್ಡುತ್ತಾನೆ.

ಇದಾಗಿಯೂ ಚಂದ್ರನ ಧ್ರುವದ(pole) ಬಳಿ ಇರುವ ಗುಂಡಿಗಳು ಶತಕೋಟಿ ವರ್ಷಗಳಿಂದ ಸೂರ್ಯನನ್ನು ನೋಡಿಲ್ಲ. ನೀವು ಚಂದ್ರನ ಈ ಭಾಗಕ್ಕೆ ಹೋಗಲು ಬಯಸಿದರೆ ಟಾರ್ಚ್(torch) ತೆಗೆದುಕೊಂಡು ಹೋಗಲು ಮರೆಯದಿರಿ.

ಇದನ್ನು ಓದಿ: ಪಿರಮಿಡ್‌ಗಳನ್ನು ಏಕೆ ಮತ್ತು ಹೇಗೆ ಮಾಡಲಾಯಿತು?

5. ಬೆನ್ನುಮೂಳೆಯನ್ನು ಜುಮ್ಮೆನಿಸುವ ಬಾಹ್ಯಾಕಾಶದ ಧ್ವನಿ.

scary jupiter space scary truth in kannada
scary jupiter

ಬಾಹ್ಯಾಕಾಶದಲ್ಲಿ ಧ್ವನಿ ಇರುವುದಿಲ್ಲ ಅಂದರೆ ಮಾನವನ ಕಿವಿಗೆ ಬಾಹ್ಯಾಕಾಶ ತುಂಬಾ ಶಾಂತವಾದ ಸ್ಥಳವಾಗಿದೆ. ಆದರೆ ನಾವು ಇತರ ರೀತಿಯ ಅಲೆಗಳೊಂದಿಗೆ ಬಾಹ್ಯಾಕಾಶದಲ್ಲಿ ಶಕ್ತಿಯನ್ನು ಕಂಡು ಹಿಡಿಯಬಹುದು. ಕಾಸ್ಮಿಕ್(cosmic) ಘಟನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಾಸಾ ವಿಜ್ಞಾನಿಗಳು(scientists) ಶಕ್ತಿ ತರಂಗಗಳನ್ನು ಶಬ್ದ ತರಂಗಗಳ ಆಗಿ ಪರಿವರ್ತಿಸುತ್ತಾರೆ.

ಉದಾಹರಣೆಗೆ ನೀವು ಈಗ ಕೇಳುವ ಧ್ವನಿ ನಾಸಾದ ಜುನೋ ಬಾಹ್ಯಾಕಾಶ ನೌಕೆ(juno spacecraft) ಗುರುಗ್ರಹದ(jupiter) ವಿಪರೀತ ಮ್ಯಾಗ್ನೆಟಿಕ್ ಕ್ಷೇತ್ರವನ್ನು ದಾಟಿದಾಗ ಕೇಳಿದ ತರಂಗವಾಗಿದೆ.

ಇದನ್ನು ಓದಿ: ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ?

6. ಮಂಗಳ ಗ್ರಹದ 'ಜೇಡಗಳು'.

mars spiders space scary truth in kannada
mars spiders

ಮಂಗಳ ಗ್ರಹದ ವಸಂತಕಾಲದಲ್ಲಿ ಜೇಡಗಳು ನೆಲದಿಂದ ಹೊರಹೊಮ್ಮುತ್ತವೆ. ಸರಿ, ಅವುಗಳು ನಿಜವಾಗಿಯೂ ಜೇಡಗಳಲ್ಲ. ಆದರೆ ಮೇಲಿನಿಂದ ನೋಡಿದರೆ ಆ ರೀತಿ ಕಾಣುತ್ತದೆ. ಗ್ರಹದ ಮೇಲ್ಮೈ ಗಿಂತ ಕೆಳಗಿರುವ ಹೆಪ್ಪುಗಟ್ಟಿದ ಇಂಗಾಲದ ಡೈ ಆಕ್ಸೈಡ್ ಸಾಕಷ್ಟು ಬೆಚ್ಚಗಾದ ಆಗ ಅದು ಘನ(solid)ದಿಂದ ಅನಿಲ(gas)ವಾಗುತ್ತದೆ.

ಈ ಅನಿಲ ಮಂಗಳನ ಮೇಲ್ಮೈಯನ್ನು ಹೊಡೆಯುವಷ್ಟು ಒತ್ತಡವನ್ನು ನಿರ್ಮಿಸುತ್ತದೆ. ಆ ಅನಿಲ ಮೇಲ್ಮೈಯನ್ನು ಒಡೆದು ಹೊರ ಬಂದಾಗ ಅದರ ಕಪ್ಪು ಧೂಳು ಹರಡುತ್ತದೆ. ಅದು ಜೇಡದ ರೀತಿ ಕಾಣುವಂತೆ ಮಾಡುತ್ತದೆ.

ಇದನ್ನು ಓದಿ: ನಿಮಗೆ ಸಾಗರದ ಬಗ್ಗೆ ಗೊತ್ತಿರದ ಏಳು ಗುಪ್ತ ಸಂಗತಿಗಳು

7. ಮಾರಕ ಗಾಳಿ, ಕರಗಿದ ಗಾಜಿನ ಮಳೆ ಇರುವ ಗ್ರಹ.

hd189733b space scary truth in kannada
hb189733B

ನಮ್ಮ ಸೌರಮಂಡಲದ ಹೊರಗಿರುವ ಗ್ರಹಗಳನ್ನು ಎಕ್ಸೋಪ್ಲಾನೆಟ್(exoplanets) ಎಂದು ಕರೆಯಲಾಗುತ್ತದೆ. ಅಂತಹ ಎಕ್ಸೋಪ್ಲಾನೆಟಿನಲ್ಲಿ ಒಂದಾಗಿದೆ HD 189733 B. ಇದು ನೀಲಿ ಬಣ್ಣವನ್ನು ಹೊಂದಿದ್ದು ನಮ್ಮ ಭೂಮಿಯಂತೆ ಕಾಣುತ್ತದೆ. ಆದರೆ ಇದರ ಹವಾಮಾನವು ಭೂಮಿಯಂತೆ ಇಲ್ಲ.

ಇಲ್ಲಿನ ಗಾಳಿ ಶಬ್ದದ ವೇಗಕ್ಕಿಂತ ಎಳು ಪಟ್ಟು ಹೆಚ್ಚಿನ ವೇಗದಲ್ಲಿ ಚಲಿಸುತ್ತದೆ ಮತ್ತು ಇಲ್ಲಿ ಕರಗಿದ ಗಾಜಿನ ಮಳೆಯಾಗುತ್ತದೆ. ಇದಕ್ಕಿಂತ ನಮ್ಮ ನೀಲಿ ಗ್ರಹವೇ ಆರಾಮದಾಯಕವಾಗಿದೆ.

8. ನಮ್ಮ ಸೌರಮಂಡಲದಲ್ಲಿರುವ ತಲೆಬುರುಡೆ.

tb145 space scary truth in kannada
tb145

2015ರಲ್ಲಿ TB145 ಎಂಬ ತಲೆಬುರುಡೆಯ ರೀತಿ ಕಾಣುವ ಕ್ಷುದ್ರಗ್ರಹ(asteroid) ಕಾಣಿಸಿತು. ವಿಜ್ಞಾನಿಗಳು ಅದು ಧೂಮಕೇತು(comet) ಸುಟ್ಟುಹೋಗುತ್ತಿರುವ ಸಾಧ್ಯತೆ ಎಂದು ಕಂಡುಕೊಂಡರು. ಆ ತಲೆಬುರುಡೆ ಆಕಾರದ ಕ್ಷುದ್ರಗ್ರಹ 200 ಮೀಟರ್ ಅಗಲವಿತು. ಅದು ದೈತ್ಯ ಮಾನವನ ತಲೆಬುರುಡೆ ಆಗಿದ್ದರೆ ಆ ವ್ಯಕ್ತಿಯು ಗಾತ್ರದಲ್ಲಿ 4.5 ಕಿ.ಮೀ. ಎತ್ತರವನ್ನು ಹೊಂದಿರುತ್ತಿದ!!

ಇದನ್ನು ಓದಿ: ಮನೆಯಲ್ಲಿ ವಿದ್ಯುತ್ ಉಳಿಸುವುದು ಹೇಗೆ?

9. ಉಪಗ್ರಹದ ಅಂತ್ಯ ಈ ರೀತಿ ಇರುತ್ತದೆ.

satellite dying space scary truth in kannada
satellite dying

ಭೂಮಿಯನ್ನು ಪರಿಭ್ರಮಿಸುವ ಉಪಗ್ರಹಗಳು(satellite) ಬಹಳ ಸಮಯದವರೆಗೆ ಕಾರ್ಯನಿರ್ವಹಿಸಬಹುದು. ಆದರೆ ಅವುಗಳು ತಮ್ಮ ಅಂತ್ಯವನ್ನು ತಲುಪಿದಾಗ ಎಲ್ಲಿಗೆ ಹೋಗುತ್ತವೆ. ಉಪಗ್ರಹ ತುಂಬ ಚಿಕ್ಕದಿದ್ದರೆ ಮತ್ತು ಸಾಕಷ್ಟು ಹತ್ತಿರದಲ್ಲಿದ್ದರೆ ಅವು ಭೂಮಿಯ ವಾತಾವರಣಕ್ಕೆ ಧುಮುಕುತ್ತವೆ ಮತ್ತು ಸುಟ್ಟು ಹೋಗುತ್ತವೆ.

ಒಂದು ವೇಳೆ ಉಪಗ್ರಹ ಭೂಮಿಯಿಂದ ದೂರವಿದ್ದರೆ ಅದನ್ನು ಭೂಮಿಯಿಂದ ಹಲವು ಸಾವಿರ ಮೈಲಿ ದೂರದಲ್ಲಿರುವ 'ಸ್ಮಶಾನ ಕಕ್ಷೆಗೆ' ಕಳುಹಿಸಲಾಗುತ್ತದೆ. ಅಲ್ಲಿ ಉಪಗ್ರಹ ಸುಟ್ಟು ಹೋಗುವುದಿಲ್ಲ. ಆದರೆ ಕನಿಷ್ಠ ಕೆಲಸಮಾಡುವ ಉಪಗ್ರಹಗಳಿಂದ ದೂರವಿರುತ್ತದೆ.

ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಾಕ ತಿಳಿಸಿ.

Mahithi Thana

More by this author

Similar category

Explore all our Posts by categories.

commenters

sagar kotabagi • March 11th,2022

Good information sir