Watch Video
ವಿದ್ಯುತ್(current) ಸಂರಕ್ಷಣೆ ಮಾಡುವುದು ಎರಡೂ ಉದ್ದೇಶಗಳಿಗೆ ನೆರವಾಗುತ್ತದೆ. ಒಂದು ಜಾಗತಿಕ ತಾಪಮಾನ ಏರಿಕೆಯನ್ನು ನಿಲ್ಲಿಸಲು ಮತ್ತೊಂದು ಕಾಲನಂತರದಲ್ಲಿ ನಿಮ್ಮ ಸಾಕಷ್ಟು ಹಣವನ್ನು ಉಳಿಸಲು. ನಿಮ್ಮ ಮನೆ ಮತ್ತು ಕಚೇರಿಯ ಸುತ್ತ ನೋಡೋಣ, ಇಲ್ಲಿ ನಾವು ತಿಳಿಸುವ ಸಲಹೆಗಳಿಂದ ನಿಮ್ಮ ವಿದ್ಯುತ್ ಶಕ್ತಿ ಉಳಿಯುವುದಷ್ಟೆ ಅಲ್ಲದೆ ನಿಮ್ಮ ವಿದ್ಯುತ್ ಉಪಕರಣಗಳ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ದೈನಂದಿನ ಅಭ್ಯಾಸವನ್ನು ಬದಲಾಯಿಸುವುದು ನೀವು ಬಳಸುವ ವಿದ್ಯುತ್ ಪ್ರಮಾಣವನ್ನು ಕಡಿಮೆ ಮಾಡಲು ಪರಿಣಾಮಕಾರಿ ಮಾರ್ಗಗಳಾಗಿವೆ.
ಇದನ್ನು ಓದಿ: ಫೇಸ್‌ಬುಕ್ ಬಳಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿನಿಮ್ಮ ಕಿಟಕಿಯ ಪರದೆಗಳನ್ನು ತೆರೆಯಿರಿ ಮತ್ತು ಸೂರ್ಯನ ಬೆಳಕಿಗೆ ಬೆಳಗಲು ಬಿಡಿ. ಕೃತಕ ಬೆಳಕನ್ನು(artificial light) ಬಳಸುವ ಬದಲು ಸಾಧ್ಯವಾದಾಗಲೆಲ್ಲ ನೈಸರ್ಗಿಕ ಬೆಳಕನ್ನು ಬಳಸುವುದರಿಂದ ನೀವು ಹಗಲಿನಲ್ಲಿ ಬಳಸುವ ವಿದ್ಯುತ್ ಪ್ರಮಾಣವನ್ನು ಕಡಿಮೆ ಮಾಡಬಹುದು. ನೈಸರ್ಗಿಕ ಬೆಳಕಿಗೆ(natural light) ಒಡ್ಡಿಕೊಳ್ಳುವುದು ಸಂತೋಷವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ತಿಳಿಸಿದೆ.
ಇದನ್ನು ಓದಿ: ಮೊಡವೆಗಳಿಂದ ಶಾಶ್ವತ ಪರಿಹಾರಕ್ಕೆ 14 ಸಲಹೆಗಳುಸಾಮಾನ್ಯ ಬಲ್ಬ್ ಗಳನ್ನು CFL ಅಥವಾ LED ಬಲ್ಬ್ ನೊಂದಿಗೆ ಬದಲಾಯಿಸುವುದು ದೊಡ್ಡ ಶಕ್ತಿ ಉಳಿತಾಯವಾಗಿದೆ. ಸಾಮಾನ್ಯ ಬಲ್ಬ್ ಗಳು(normal bulbd) ಶೇಕಡಾ 98ರಷ್ಟು ಶಾಖದ ಮೂಲಕ ಶಕ್ತಿಯನ್ನು ಬಿಡುತ್ತವೆ. ಆದರೆ CFL ಅಥವಾ LED ಬಲ್ಬ್ ಗಳು ಹೆಚ್ಚು ಶಕ್ತಿಯ ದಕ್ಷತೆಯನ್ನು ಹೊಂದಿರುತ್ತವೆ ಮತ್ತು ಹಲವಾರು ಹೆಚ್ಚುಕಾಲ ಉಳಿಯುತ್ತವೆ. CFL ಬಲ್ಬ್ ಗಳು ಸಾಮಾನ್ಯ ಬಲ್ಬ್ ಗಿಂತ ಕಾಲು ಭಾಗದಷ್ಟು ಶಕ್ತಿಯನ್ನು ಮಾತ್ರ ಬಳಸುತ್ತವೆ. ಇನ್ನು LED ಬಲ್ಬ್ ಗಳು CFL ಬಲ್ಬ್ ಗಿಂತ ಹೆಚ್ಚು ದುಬಾರಿ. ಆದರೆ ಅವು ಹೆಚ್ಚು ಕಾಲ ಉಳಿಯುತ್ತವೆ.
ಇದನ್ನು ಓದಿ: ಕೂದಲು ಉದುರುವುದನ್ನು ತಡೆಯಲು ಮನೆಮದ್ದುಗಳುಪ್ಲಗ್ಗಿನ್(plug in) ಮಾಡಲಾದ ವಸ್ತುಗಳು ಸ್ವಿಚ್ ಆಫ್ ಆಗಿದ್ದರೂ ಸಹ ವಿದ್ಯುತ್ ಶಕ್ತಿಯನ್ನು ಬಳಸುತ್ತವೆ ಇರುತ್ತವೆ ಎಂದು ನಿಮಗೆ ತಿಳಿದಿದೆಯೇ. ಹೀಗಾಗಿ ಬಳಕೆಯಲ್ಲಿಲ್ಲದ ಯಾವುದೇ ಉಪಕರಣಗಳನ್ನು ಅನ್ ಪ್ಲಗ್ ಮಾಡಿ. ನಿಮ್ಮ ಕಂಪ್ಯೂಟರ್, ಟಿವಿ ಅಥವಾ ಸೌಂಡ್ ಸಿಸ್ಟಂ, ನೀವು ಅವುಗಳನ್ನು ಬಳಸಿದ ನಂತರ ಅನ್ ಪ್ಲಗ್ ಮಾಡಿ. ಹಾಗೆ ಫೋನ್ ಚಾರ್ಜರ್, ಅಡುಗೆಮನೆ ವಸ್ತುಗಳು, ಹೇರ್ ಡ್ರೈಯರ್ ಹೀಗೆ ಸಣ್ಣ ವಿದ್ಯುತ್ ಚಾಲಿತ ವಸ್ತುಗಳನ್ನು ಮರೆಯಬೇಡಿ.
ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 18 ಅತ್ಯುತ್ತಮ ಆಹಾರಗಳುಹಳೆಯ ಉಪಕರಣಗಳನ್ನು(appliances) ತಯಾರಿಸಿದಾಗ ಕಂಪನಿಗಳು ವಿದ್ಯುತ್ ಉಳಿತಾಯದ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ಈಗ ಬರುವ ಉಪಕರಣಗಳು ವಿದ್ಯುತ್ ಸಂರಕ್ಷಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇವುಗಳು ನಿಮ್ಮ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ ಕಾರ್ಬನ್ ಫುಟ್ ಪ್ರಿಂಟ್(carbon footprint) ಅನ್ನು ಕಡಿಮೆ ಮಾಡುತ್ತವೆ. ನೀವು ಹಳೆಯ ರೆಫ್ರಿಜರೇಟರ್, ಎಲೆಕ್ಟ್ರಿಕ್ ಸ್ಟೋವ್, ಡಿಶ್ ವಾಶರ್, ಡ್ರೈಯರ್ ನಂಥ ದೊಡ್ಡ ಉಪಕರಣಗಳನ್ನು ಹೊಂದಿದ್ದರೆ ಅದನ್ನು ಬದಲಾಯಿಸುವುದರ ಬಗ್ಗೆ ಯೋಚಿಸಿ. ಹೊಸ ಉಪಕರಣಗಳನ್ನು ಖರೀದಿಸುವಾಗ ಎನರ್ಜಿ ಸ್ಟಾರ್(energy star) ರೇಟಿಂಗ್ ನೋಡಿ. ಇದು ಆ ಉಪಕರಣ ಎಷ್ಟು ಶಕ್ತಿ ಉಳಿಸುತ್ತದೆ ಎಂಬುದನ್ನು ತಿಳಿಸುತ್ತದೆ.
ಇದನ್ನು ಓದಿ: ಪಿರಮಿಡ್‌ಗಳನ್ನು ಏಕೆ ಮತ್ತು ಹೇಗೆ ಮಾಡಲಾಯಿತು?ಹಿಂದಿನ ದಿನಗಳಲ್ಲಿ ಜನರಿಗೆ ತಮ್ಮ ಮನೆಗಳನ್ನು ನಡೆಸಲು ದೊಡ್ಡ ಉಪಕರಣಗಳ ಅಗತ್ಯವಿರಲಿಲ್ಲ. ಉಪಕರಣಗಳನ್ನು ಬಳಸದಿದ್ದರೆ ಕೆಲವು ಕಾರ್ಯಗಳು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಹೀಗಾಗಿ ನಿಮ್ಮ ಇಡೀ ಕುಟುಂಬದ ಕಾರ್ಯವಿದ್ದರೆ ನೀವು ಈ ಉಪಕರಣಗಳನ್ನು ಬಳಸಿ. ಯಾವುದಾದರೂ ಸಣ್ಣ ಕೆಲಸಕ್ಕೆ ಇವುಗಳ ಮೇಲೆ ಅವಲಂಬಿತರಾಗುವುದನ್ನು ನಿಲ್ಲಿಸಿ. ಉದಾಹರಣೆಗೆ ನಿಮ್ಮ ಬಟ್ಟೆ ಒಣಗಿಸಲು ಬಟ್ಟೆ ಒಗೆಯುವ ಯಂತ್ರ(washing machine) ಬಳಸುವ ಬದಲು ಸೂರ್ಯನ ಬೆಳಕಿಗೆ ನೆತ್ತಾಕಿ.
ಇದನ್ನು ಓದಿ: ಪರೀಕ್ಷೆಯ ಮುಂಚೆ ಓದುವುದು ಹೇಗೆ?ಗಾಳಿ(wind) ಅಥವಾ ಸೌರ(solar) ಶಕ್ತಿಯಂತಹ ನವೀಕರಿಸಬಹುದಾದ ಶಕ್ತಿಯನ್ನು ಬಳಸಲು ಪ್ರಯತ್ನಿಸಿ. ಇದು ನಿಮಗೆ ಮೊದಲಿಗೆ ದುಬಾರಿ(costly) ಬೀಳಬಹುದು. ಆದರೆ ಒಮ್ಮೆ ನೀವು ಇದನ್ನು ಬಳಸಲು ಪ್ರಾರಂಭಿಸಿದರೆ ನಿಮ್ಮ ವಿದ್ಯುತ್ ಶಕ್ತಿ ಹಣವನ್ನು ಉಳಿಸುತ್ತವೆ.
ನಮ್ಮ ವೆಬ್‌ಸೈಟ್‌ಗೆ ರಿಜಿಸ್ಟರ್ ಆಗಿ, ಲಾಗಿನ್ ಮಾಡಿ. ವೆಬ್‌ಸೈಟ್‌ನಲ್ಲಿರುವ ಪೋಸ್ಟ್‌ಗಳನ್ನು ಓದುತ್ತೀರಿ ಮತ್ತು ಹಣವನ್ನು ಗಳಿಸಿ. ಇದರ ಮೇಲಿನ ಪೂರ್ಣ ಮಾಹಿತಿಗೆ ಲಿಂಕ್ (https://www.mahithithana.in/earn) ಮೇಲೆ ಕ್ಲಿಕ್ ಮಾಡಿ.
Explore all our Posts by categories.
Mahithi Thana 896
Info Mind 1776
Mahithi Thana 1424
See all comments...