Website designed by @coders.knowledge.

Website designed by @coders.knowledge.

"Atomic Habits" ಪುಸ್ತಕದ ವಿವರಣೆ | "Atomic Habits" Summary

 0

 Add

Please login to add to playlist

Watch Video

ನಾವು ಈ ಲೇಖನದಲ್ಲಿ ಯಶಸ್ವಿ ಜನರು ಗುರಿಯ ಬದಲು ಸಿಸ್ಟಮ್ ಮೇಲೆ ಏಕೆ ಫೋಕಸ್ ಮಾಡುತ್ತಾರೆ ಎಂಬುದನ್ನು ನೋಡಲಿದ್ದೇವೆ ಮತ್ತು ಈ ಸಿಸ್ಟಮ್‌ಗಳನ್ನು ಬಳಸಿಕೊಂಡು ನಾವು ಯಾವುದೇ ಕ್ಷೇತ್ರದಲ್ಲಿ(field) ಯಶಸ್ವಿಯಾಗುವುದು ಹೇಗೆ ಎಂಬುದನ್ನು ತಿಳಿಯಲಿದ್ದೇವೆ. ಇದರಲ್ಲಿ ನಾವು ಕೇವಲ ಮೋಟಿವೇಶನ್ನಿಂದ ಅಧಿಕ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬುದನ್ನು ಅರ್ಥೈಸಲಿದ್ದೇವೆ ಮತ್ತು ಮೋಟಿವೇಷನ್ ಬಿಟ್ಟು ಯಾವುದರ ಮೇಲೆ ಗಮನ ಹರಿಸಬೇಕು ಎಂಬುದನ್ನು ನೋಡಲಿದ್ದೇವೆ. ಕೊನೆದಾಗಿ ನಾವು ಯಾವುದೇ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಇಲ್ಲ ಬಿಡುವುದು ಹೇಗೆ ಎಂಬುದನ್ನು ತಿಳಿಯಲಿದ್ದೇವೆ. ಇವುಗಳ ಬಗ್ಗೆ ಜೇಮ್ಸ್ ಕ್ಲಿಯರ್ ಅವರ ಪುಸ್ತಕವಾದ "ಅಟಾಮಿಕ್ ಹ್ಯಾಬಿಟ್ಸ್"ನಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: "Good Vibes Good Life" ಪುಸ್ತಕದ ವಿವರಣೆ

1. Just improve by 1%.

what is a 1% improvement in atomic habits book in kannada
just improve by 1%

ನೀವು ಪ್ರತಿದಿನ 1% ಸುಧಾರಿಸಿಕೊಂಡರು(improve) ಒಂದು ವರ್ಷದ ನಂತರ 38 ಸಲ ಸುಧಾರಿಸಿಕೊಂಡಿರುತ್ತೀರಾ. ಅದೇ ರೀತಿ 1% ಕಡಿಮೆ(decrease) ಅದರೆ ನೀವು ಒಂದು ವರ್ಷದ ನಂತರ ನಿಮ್ಮ ನಿಜವಾದ ಸಾಮರ್ಥ್ಯಕ್ಕೆ(capability) ಹೋಲಿಸಿದರೆ 0.03%ನಷ್ಟು ಮಾತ್ರ ಇರುತ್ತೀರಾ. ಹೀಗಾಗಿ ಲೇಖಕರು ನಮ್ಮ ಜೀವನ ಚಿಕ್ಕ ಚಿಕ್ಕ ಕ್ರಮಗಳಿಂದ(action) ಬದಲಾಗುತ್ತದೆ ಹೊರತು, ಒಂದು ದೊಡ್ಡ ಕ್ರಮದಿಂದ ಅಲ್ಲ ಎಂದು ತಿಳಿಸುತ್ತಾರೆ.

ಜೇಮ್ಸ್ ರೈಸ್ ಅವರ ಒಂದು ಪ್ರಸಿದ್ಧ ಉಲ್ಲೇಖವಿದೆ, ಅದೆಂದರೆ, "ನಾನು ಖಿನ್ನತೆಗೆ ಒಳಗಾದಾಗ ಸ್ಟೋನ್ ಕಟರ್ ಬಗ್ಗೆ ಯೋಚಿಸುತ್ತೇನೆ. ಅದನ್ನು ಮತ್ತೆ ಮತ್ತೆ ಕಲ್ಲಿಗೆ ಗುದ್ದಲಾಗುತ್ತದೆ. ಕಲ್ಲಿನ ಮೇಲೆ ನೂರು ಬಾರಿ ಹೊಡೆದರು ಆ ಕಲ್ಲಿನಲ್ಲಿ ಒಂದು ಕ್ರ್ಯಾಕ್ ಕೂಡ ಬರುವುದಿಲ್ಲ. ಆದರೆ 101ನೇ ಬಾರಿ ಹೊಡೆದಾಗ ಆ ಕಲ್ಲು ಎರಡು ಭಾಗವಾಗುತ್ತದೆ. ಈ ವಿಷಯದಲ್ಲಿ ಕೊನೆಯ ಹೊಡೆತದಿಂದ ಆ ಕಲ್ಲು ಮುರಿದಿಲ್ಲ, ಬದಲಾಗಿ ಅದಕ್ಕೂ ಮುಂಚೆ ಅದನ್ನು ನೂರು ಬಾರಿ ಹೊಡೆಯಲಾಗಿತು. ಹೀಗಾಗಿ ಕಲ್ಲು ಮುರಿಯವುದು ನೂರು ಬಾರಿ ಹೊಡೆತದ ಸಂಯೋಜಿತ ಫಲಿತಾಂಶವಾಗಿದೆ(combined result)."

ನಮ್ಮಲ್ಲಿ ಕೆಲವರು ಚಿಕ್ಕ ಚಿಕ್ಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಇದರಿಂದ ಏನು ವ್ಯತ್ಯಾಸವಾಗುವುದಿಲ್ಲವೆಂದು ಯೋಚಿಸುತ್ತೇವೆ. "ನಾವು ಬರ್ಗರ್ ಬದಲು ಸ್ಯಾಲಡ್ ಏಕೆ ತಿನ್ನಬೇಕು?" ಮತ್ತು ಈ ರೀತಿಯ ಚಿಕ್ಕ ಕ್ರಮಗಳಿಂದ ನಾವು ತೆಳ್ಳಗಾಗುತಿಲ್ಲ ಎಂದು ಯೋಚಿಸುತ್ತೇವೆ. ಈ ರೀತಿಯ ಯೋಚನೆಯಿಂದಲೇ ನಾವು ಚಿಕ್ಕ ಹವ್ಯಾಸಗಳನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ. ಹೊರಗಿನಿಂದ ನಮಗೆ ಏನು ವ್ಯತ್ಯಾಸ ಕಾಣದಿದ್ದರೂ ಈ ಚಿಕ್ಕ ಚಿಕ್ಕ ಕ್ರಮಗಳು ತಮ್ಮ ಕೆಲಸಗಳನ್ನು ಮಾಡುತ್ತಿರುತ್ತವೆ.

ಇದಕ್ಕೆ ಉದಾರಣೆಯಾಗಿ ಒಂದು ಟೇಬಲ್ ಮೇಲೆ ಮಂಜುಗಡ್ಡೆ ಇದೆ ಎಂದುಕೊಳ್ಳಿ. ಅದು ಇರುವ ಕೋಣೆ ಎಷ್ಟು ತಣ್ಣಗಿದೆ ಎಂದರೆ ನಾವು ನಮ್ಮ ಉಸಿರಾಟವನ್ನು ಗಮನಿಸಬಹುದು. ಕೋಣೆಯಲ್ಲಿ -4 ಡಿಗ್ರಿಯಷ್ಟು ತಾಪಮಾನ ಇದೆ. ಈಗ ಮಂಜುಗಡ್ಡೆ ಗಟ್ಟಿಯಾಗೇ ಇದೆ. ಕೋಣೆಯ ತಾಪಮಾನ -3 ಡಿಗ್ರಿ ಆದಾಗ ಅದರಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ. ಇದೇ ರೀತಿ -2 ಡಿಗ್ರಿ, -1 ಡಿಗ್ರಿ ಆದಾಗಲೂ ಅದರಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ. ನಂತರ ತಾಪಮಾನ 0 ಡಿಗ್ರಿಗೆ ಬರುತ್ತದೆ, ಆಗ ಆ ಮಂಜುಗಡ್ಡೆ ಕರಗಲು ಪ್ರಾರಂಭಿಸುತ್ತದೆ. ಕೇವಲ -1 ಡಿಗ್ರಿಯಿಂದ 0 ಡಿಗ್ರಿಗೆ ಬದಲಾದ ಆ 1 ಡಿಗ್ರಿ ಸೆಲ್ಸಿಯಸ್ನಿಂದ ಮಂಜುಗಡ್ಡೆ ಕರಗಲು ಪ್ರಾರಂಭಿಸಿತು. ನಮ್ಮ ಚಿಕ್ಕ ಹವ್ಯಾಸಗಳು ಇದೇ ರೀತಿಯೇ ಇರುತ್ತದೆ. ಒಂದು ಚಿಕ್ಕ ಬದಲಾವಣೆ ನಮ್ಮ ಬದುಕನ್ನೇ ಬದಲಾಯಿಸುತ್ತದೆ.

ಹೀಗಾಗಿ ಲೇಖಕರು ನಮಗೆ ಸಿಸ್ಟಮ್ ಮತ್ತು ಸಣ್ಣ ಹವ್ಯಾಸಗಳ ಮೇಲೆ ಗಮನಹರಿಸಲು ಹೇಳುತ್ತಾರೆ ಹೊರತು ಗುರಿ ಮೇಲೆ ಅಲ್ಲ. ಇದನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆ ತಿಳಿಸಲಿದ್ದೇವೆ. ನಿಮ್ಮ ಕೋಣೆ ಗಲೀಜಾಗಿದೆ ಎಂದುಕೊಳ್ಳಿ ಮತ್ತು ನೀವು ನಿಮ್ಮ ಕೋಣೆಯನ್ನು ಸ್ವಚ್ಛ ಮಾಡುವ ಒಂದು ಗುರಿ ಇಟ್ಟುಕೊಳ್ಳುತ್ತೀರಾ ಮತ್ತು ನಿಮ್ಮ ಶಕ್ತಿಯೆಲ್ಲ ಹಾಕಿ ಕೋಣೆಯನ್ನು ಸ್ವಚ್ಛಗೊಳಿಸುತ್ತೀರಾ. ಆದರೆ ಈ ಕೋಣೆ ಎಷ್ಟು ದಿನ ಸ್ವಚ್ಛವಾಗಿಯೇ ಇರುತ್ತದೆ, ಇದಕ್ಕೆ ಉತ್ತರ ಸ್ವಲ್ಪ ದಿನ ಎನ್ನಬಹುದು. ಇದು ಏಕೆಂದರೆ ನಿಮ್ಮ ಹವ್ಯಾಸಗಳಿಂದ ಗಲೀಜಾದ ಕೋಣೆ ಸ್ವಲ್ಪ ದಿನದ ನಂತರ ಮತ್ತೊಮ್ಮೆ ಗಲೀಜಾಗುತ್ತದೆ. ಹೀಗಾಗಿ ನಮಗೆ ಶಾಶ್ವತವಾದ ಫಲಿತಾಂಶ ಬೇಕೆಂದರೆ ನಾವು ನಮ್ಮ ಸಣ್ಣ ಹವ್ಯಾಸಗಳನ್ನು ಬದಲಿಸಿಕೊಳ್ಳಬೇಕು.

ಇದನ್ನು ಓದಿ: ಕಡಿಮೆ ಹಣದೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ?

2. ನಿಮ್ಮ ಮೋಟಿವೇಶನ್ ಗಿಂತ ನಿಮ್ಮ ಸುತ್ತಮುತ್ತಲಿನ ಪರಿಸರ ಹೆಚ್ಚು ಪವರ್ ಫುಲ್ ಆಗಿದೆ.

does environment affect your motivation in atomic habits in kannada
environment is more powerful

ನಮ್ಮಲ್ಲಿ ಅನೇಕರಿಗೆ ಪ್ರೇರಣೆ(motivation) ಯಶಸ್ಸಿಗೆ ಕಾರಣವೇನಿಸುತ್ತದೆ, ನಮ್ಮ ಸುತ್ತಮುತ್ತಲೂ ನಡೆಯುವ ಘಟನೆಗಳಿಂದ ನಮ್ಮಲ್ಲಿ ಏನೂ ಬದಲಾಗುವುದಿಲ್ಲ ಎಂದೆನಿಸುತ್ತದೆ. ಆದರೆ ಲೇಖಕರು ನಮ್ಮ ಸುತ್ತಮುತ್ತಲಿನ ಪರಿಸರ ಪ್ರೇರಣೆಗಿಂತ ಅಧಿಕ ಶಕ್ತಿಶಾಲಿಯಾಗಿದೆ ಎಂದು ಹೇಳುತ್ತಾರೆ.

ಇದನ್ನು ಅನ್ನಿ ಥಾರ್ಂಡೈಕ್(anne thorndike) ಎಂಬುವರು ಸಾಬೀತು(prove) ಪಡಿಸಿದ್ದಾರೆ. ಅವರು ಯಾರಿಗೂ ಏನೂ ಹೇಳದೆ ಕೇವಲ ಅವರ ಆಸ್ಪತ್ರೆಯ ಸಿಬ್ಬಂದಿ(staff) ಮತ್ತು ವಿಸಿಟರ್ಸ್ನ ತಿನ್ನುವ ಹವ್ಯಾಸವನ್ನು ಬದಲಿಸಲು ಬಯಸಿದ್ದರು. ಹೀಗಾಗಿ ಅವರ ಆಸ್ಪತ್ರೆಯ ಕೆಫೆಯಲ್ಲಿ 6 ತಿಂಗಳಿಗೆ ಸ್ವಲ್ಪ ಬದಲಾವಣೆ ಮಾಡಿದರು. ಅವರು ಕೆಫೆಯ ಪಕ್ಕದಲ್ಲೇ ಕೊಕಾ ಕೋಲಾ ಫ್ರಿಡ್ಜ್ ಇರುವುದನ್ನು ನೋಡಿದರು, ಅದರಲ್ಲಿ ಅವರು ನೀರಿನ ಬಾಟಲ್ ಕೂಡ ಇರಿಸಿದರು. ಇಷ್ಟೇ ಅಲ್ಲದೆ ಕೆಫೆಟೇರಿಯದ ಎಲ್ಲಾ ಭಾಗಗಳಲ್ಲೂ ಅದೇ ನೀರಿನ ಬಾಟಲ್ ಅನ್ನು ಇರಿಸಿದರು. ಇದಾಗಿ 3 ತಿಂಗಳ ಮಾರಾಟವನ್ನು(sales) ವಿಶ್ಲೇಷಿಸಿದಾಗ(analyse) ಎಲ್ಲರೂ ಆಶ್ಚರ್ಯಗೊಂಡರು. ಕೋಕ್ ಮತ್ತು ಲಿಮ್ಕಾ 11.4 ರಷ್ಟು ಕಡಿಮೆ ಮಾರಾಟವಾಗಿತು. ಅದೇ ನೀರಿನ ಬಾಟಲ್ನ ಮಾರಾಟ 25.8 ರಷ್ಟು ಹೆಚ್ಚಾಗಿತು. ಅವರು ತಿನ್ನುವ ಆಹಾರದಲ್ಲೂ ಇದೇ ರೀತಿಯ ಬದಲಾವಣೆ ತಂದರು, ಮತ್ತೆ ಈ ರೀತಿಯ ಫಲಿತಾಂಶವನ್ನು ಗಮನಿಸಿದರು.

ಇದರಲ್ಲಿ ಪ್ರಮುಖ ವಿಷಯ ಏನೆಂದರೆ ಯಾರೂ ಕೂಡ ಯಾರಿಗೂ ಏನೂ ಹೇಳಲಿಲ್ಲ. ಕೇವಲ ಪರಿಸರ ಬದಲಾಯಿಸಲಾಗಿತು ಅಷ್ಟೇ. ಇದರಿಂದ ತಿಳಿಯುವುದೇನೆಂದರೆ ನಮ್ಮ ನಡವಳಿಕೆ(behaviour) ಒಳಗಿರುವ ವಿಚಾರದಿಂದ(thought) ಮಾತ್ರ ಬದಲಾಗುವುದಷ್ಟೇ ಅಲ್ಲದೆ, ನಮ್ಮ ಸುತ್ತಮುತ್ತಲಿನ ಪರಿಸರದಿಂದಲೂ ಆಗುತ್ತದೆ. ಹೀಗಾಗಿ ಅಂಗಡಿ ಮಾಲೀಕರು ದುಬಾರಿ ವಸ್ತುಗಳನ್ನು ಜನರು ಸುಲಭವಾಗಿ ಗಮನಿಸಬಹುದಾದ ಸ್ಥಳದಲ್ಲಿ ಇರಿಸುತ್ತಾರೆ.

1970 ರಲ್ಲಿ ಈ ಪರಿಕಲ್ಪನೆಯನ್ನು(concept) ಸಾಬೀತು ಪಡಿಸಲು ಡಚ್ ಸಂಶೋಧಕರು(researcher) ಕೂಡ ಒಂದು ಅಧ್ಯಯನ ನಡೆಸಿದ್ದರು. ಈ ಅಧ್ಯಯನವನ್ನು ಸಂಶೋಧಕರು ಆಮ್ಸ್ಟರ್ಡ್ಯಾಮ್ ನಲ್ಲಿರುವ ಮನೆ ಮಾಲೀಕರು, ಅವರ ನೆರೆಯವರಿಗಿಂತ(neighbour) ಕಡಿಮೆ ಕರೆಂಟ್ ಬಳಸುತ್ತಿರುವುದನ್ನು ಗಮನಿಸಿದರು. ಈ ಮನೆಗಳ ಮೇಲೆ ಅಧ್ಯಯನ ನಡೆಸಿದಾಗ ಎಷ್ಟೋ ಮನೆಗಳಲ್ಲಿ ಕರೆಂಟ್ ಮೀಟರ್ ಮನೆಯ ಬೇಸ್ಮೆಂಟ್ನಲ್ಲಿತ್ತು ಮತ್ತು ಇನ್ನೂ ಕೆಲವರ ಮನೆಯಲ್ಲಿ ಕರೆಂಟ್ ಮೀಟರ್ ಮನೆಯ ಹಾಲ್‌ನಲ್ಲಿ ಇತ್ತು. ಯಾರ ಮನೆಯಲ್ಲಿ ಮೀಟರ್ ಹಾಲ್‌ನಲ್ಲಿ ಇತ್ತೋ, ಆ ಮನೆಯಲ್ಲಿ 30% ಕಡಿಮೆ ವಿದ್ಯುತ್ ಬಳಸಲಾಗುತ್ತಿತ್ತು. ಇದು ಏಕೆಂದರೆ ಅವರು ತಮ್ಮ ಮನೆಯಲ್ಲಿ ಬದಲಾಗುವ ಕರೆಂಟ್ ಬಳಕೆಯನ್ನು(consumption) ನೋಡಬಹುದಿತ್ತು. ಹೀಗಾಗಿ ನಾವು ಒಂದು ಹವ್ಯಾಸ ಕಲಿಯಲು, ನಮ್ಮ ಪರಿಸರವನ್ನು ಬದಲಿಸಬಹುದು.

ಉದಾಹರಣೆಗೆ ನಾವು ರಾತ್ರಿ ಸಮಯದಲ್ಲಿ ನುಂಗಬೇಕಾದ ಮಾತ್ರೆಗಳನ್ನು ಮರೆಯಬಾರದೆಂದರೆ, ಅದನ್ನು ಹಾಸಿಗೆಯ ಪಕ್ಕದ ಟೇಬಲ್‌ನಲ್ಲಿ ಇರಿಸಬೇಕು. ಗಿಟಾರನ್ನು ಅಧಿಕ ಅಭ್ಯಾಸ(practice) ಮಾಡಲು ಬಯಸಿದರೆ, ಆ ಗಿಟಾರನ್ನು ಲಿವಿಂಗ್ ರೂಂನ ಮಧ್ಯದಲ್ಲಿ ಇರಿಸಬಹುದು. ಇದರಿಂದ ನಮಗೆ ಅದು ಯಾವಾಗಲೂ ಕಾಣುತ್ತಿರುತ್ತದೆ. ನಾವು ಪ್ರತಿದಿನ ಅಧಿಕ ನೀರು ಕುಡಿಯಲು ಬಯಸಿದರೆ, ಬೆಳಗ್ಗೆ ಎದ್ದ ತಕ್ಷಣ ನಾವು ದಿನನಿತ್ಯ ಮನೆಯಲ್ಲಿ ಅಲೆದಾಡುವ ಜಾಗಗಳಲ್ಲಿ ನೀರಿನ ಬಾಟಲ್ ಇಡಬೇಕು.

ಇದನ್ನು ಓದಿ: ವೀರ್ಯಗಳ ಸಂಖ್ಯೆಯನ್ನು ಸ್ವಾಭಾವಿಕವಾಗಿ ಹೆಚ್ಚಿಸಿಕೊಳ್ಳುವುದು ಹೇಗೆ?

3. ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳುವುದು ಹೇಗೆ ಮತ್ತು ಕೆಟ್ಟ ಹವ್ಯಾಸಗಳನ್ನು ಬಿಡುವುದು ಹೇಗೆ?

how do you break bad habits and develop good habits according to atomic habits in kannada
how to develop good habits

ನಾವು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ಕೆಟ್ಟ ಹವ್ಯಾಸಗಳನ್ನು ಬಿಡುವುದನ್ನು ತಿಳಿಯುವ ಮೊದಲು, ಹವ್ಯಾಸಗಳು ಹೇಗೆ ಆಗುತ್ತವೆ ಎಂಬುದನ್ನು ತಿಳಿಯಬೇಕು. ಲೇಖಕರ ಪ್ರಕಾರ ಯಾವುದೇ ಹವ್ಯಾಸವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ಅವೆಂದರೆ,

  • • cue,
  • • craving,
  • • response,
  • • reward.

ನಾವು ಈ ನಾಲ್ಕನ್ನು ಅರ್ಥಮಾಡಿಕೊಂಡರೆ ಯಾವುದೇ ಹವ್ಯಾಸವನ್ನು ರೂಢಿಸಿಕೊಳ್ಳಬಹುದು, ಇಲ್ಲವೇ ಬಿಡಬಹುದು.

ಇದರಲ್ಲಿ cue ಎಂದರೆ ನಮಗೆ ನೆನಪಿಗೆ ಬರುವ ಯಾವುದಾದರೂ ವಿಷಯ ಅಥವಾ ಒಂದು ವಿಷಯದ ಮೇಲೆ ನಮ್ಮ ಮೆದುಳು ಕಾರ್ಯನಿರ್ವಹಿಸಲು ತಯಾರಾಗಿರುವುದಾಗಿದೆ. ಇದನ್ನು ಒಂದು ಉದಾಹರಣೆಯ ಮೂಲಕ ತಿಳಿಯೋಣ.

ನಿಮಗೆ ಫೇಸ್‌ಬುಕ್‌ನಿಂದ ಒಂದು ನೋಟಿಫಿಕೇಶನ್ ಬರುತ್ತದೆ ಎಂದುಕೊಳ್ಳಿ. ಅದರಲ್ಲಿ ನಿಮ್ಮ ಸ್ನೇಹಿತ ನಿಮ್ಮನ್ನು ಕಮೆಂಟ್ನಲ್ಲಿ ಉಲ್ಲೇಖಿಸಿದ್ದಾನೆ(mention) ಎಂದು ಇರುತ್ತದೆ. ಈ ನೋಟಿಫಿಕೇಶನ್ ನಿಮ್ಮ ಮೆದುಳಿಗೆ cue ಆಗಿದೆ. ಈ cue ಯಿಂದ ನಿಮ್ಮ ಮೆದುಳಿನಲ್ಲಿ craving ಆಗುತ್ತದೆ. ಅದೆಂದರೆ "ನನ್ನ ಗೆಳೆಯ ನನ್ನ ಬಗ್ಗೆ ಏನು ಬರೆದಿರಬಹುದು" ಮತ್ತು ನೀವು ಇದಕ್ಕೆ ಪ್ರತಿಕ್ರಿಯೆ(response) ನೀಡುತ್ತೀರಾ ಮತ್ತು ಆ ನೋಟಿಫಿಕೇಶನ್ ಅನ್ನು ತೆರೆದು ನೋಡುತ್ತೀರಾ.

ಅವನು ನೋಟಿಫಿಕೇಶನ್ ನಲ್ಲಿ "ನಾನು ನಟನ(actor) ರೀತಿ ಕಾಣುತ್ತೇನೆ" ಎಂದು ಬರೆದಿದ್ದಾರೆ. ಅದು ನಿಮಗೆ ಸಿಗುವ reward ಆಗಿದೆ. ಅಂದರೆ ನಿಮಗೆ ಪ್ರತಿ ಬಾರಿ ಸಿಗುವ ಈ ರೀತಿಯ ನೋಟಿಫಿಕೇಶನ್ ನಿಂದಾಗುವ ಖುಷಿ ಮತ್ತು ಇದು ಪ್ರತಿ ಬಾರಿ ರಿಪೀಟ್ ಆಗುತ್ತದೆ.

ಈಗ ನಾವು ಪರಿಕಲ್ಪನೆಯನ್ನು(concept) ಬಳಸಿಕೊಂಡು ಒಂದು ಹವ್ಯಾಸ ಬೆಳೆಸಿಕೊಳ್ಳಬೇಕೆಂದರೆ,

  • • ನಾವು cue ಅನ್ನು obvious ಅಂದುಕೊಂಡು,
  • • craving ಅನ್ನು attractive ಮಾಡಬೇಕು,
  • • response ಅನ್ನು easy ಮಾಡಬೇಕು ಮತ್ತು
  • • reward ಅನ್ನು satisfy ಮಾಡಬೇಕು.

ಇದೇ ರೀತಿ ನಾವು ಕೆಟ್ಟ ಹವ್ಯಾಸಗಳನ್ನು ಬಿಟ್ಟುಕೊಡಲು ಬಯಸಿದರೆ,

  • • ನಾವು cue ಅನ್ನು invisible ಮಾಡಬೇಕು,
  • • craving ಅನ್ನು unattractive ಮಾಡಬೇಕು,
  • • response ಅನ್ನು difficult ಮಾಡಬೇಕು ಮತ್ತು
  • • reward ಅನ್ನು unsatisfy ಮಾಡಬೇಕು.

ಇದನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆ ತಿಳಿಸುತ್ತಿದ್ದೇವೆ.

ನಾವು ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌ ಇನ್ಸ್ಟಾಗ್ರಾಮ್ ಅನ್ನು ಪ್ರತಿ ಬಾರಿ ತೆರೆಯುವುದನು ನಿಲ್ಲಿಸಲು ಬಯಸುತ್ತೇವೆ ಎಂದುಕೊಳ್ಳಿ. ಆಗಿದ್ದರೆ ಇದರ ಮೊದಲ ಹಂತ ಏನ್ನೇಳುತ್ತದೆಯೆಂದರೆ, ನಾವು ನಮ್ಮ ಪರಿಸರದಿಂದ cue ಅನ್ನು ತೆಗೆದುಹಾಕಬೇಕು. ಈ ಉದಾಹರಣೆಯಲ್ಲಿ ನಾವು ನೋಟಿಫಿಕೇಶನ್ ಡಿಸೇಬಲ್ ಮಾಡಬಹುದು. ಮೊಬೈಲ್ ಅನ್ನು ಸೈಲೆಂಟ್ ಮಾಡಬಹುದು. ಇಲ್ಲ ಇಂಟರ್ನೆಟ್‌ ಅನ್ನು ಕೆಲಸದ ಸಮಯದಲ್ಲಿ ಬಳಸುವುದನ್ನು ನಿಲ್ಲಿಸಬಹುದು.

ಎರಡನೇ ಹಂತ ಅದನ್ನು unattractive ಮಾಡಲು ಹೇಳುತ್ತದೆ. ಅಂದರೆ ನಮ್ಮ ಉದಾಹರಣೆಯಲ್ಲಿ ನಾವು ಸಾಮಾಜಿಕ ಮಾಧ್ಯಮಗಳನ್ನು ತೆರೆಯುವುದರಿಂದ ಆಗುವ ಎಲ್ಲಾ ಅನನುಕೂಲತೆಗಳ(disadvantage) ಬಗ್ಗೆ ಯೋಚಿಸಬೇಕು. ಅಂದರೆ ಇದರಿಂದ ನಮಗೆ ಕೊನೆ ವರ್ಷ ಹೇಗೆ ಕಡಿಮೆ ಮ್ಯಾಕ್ಸ್ ಬಂದಿತು. ನಾವು ಪ್ರತಿದಿನ ಇದರಲ್ಲಿ ಎಷ್ಟು ಸಮಯ ಹಾಳು ಮಾಡುತ್ತೇವೆ ಮತ್ತು ನಮ್ಮ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲವೆಂದು ಯೋಚಿಸಬೇಕು.

ಮೂರನೇ ಹಂತ ಅದನ್ನು difficult ಮಾಡಲು ಹೇಳುತ್ತದೆ. ಅಂದರೆ ಆ್ಯಪ್ ತೆರೆಯುವ ಮೊದಲು ನಾವು ಕೆಲವು ನಿರ್ಬಂಧಗಳನ್ನು(restriction) ಹಾಕಬೇಕು. ಅವೆಂದರೆ ನಾವು ದೊಡ್ಡ ಪಾಸ್ವರ್ಡ್ ಇಡಬಹುದು. ಫೋನನ್ನು ನಮ್ಮಿಂದ ದೂರ ಇಡಬಹುದು.

ನಾಲ್ಕನೇ ಹಂತ ಅದನ್ನು unsatisfy ಮಾಡಲು ಹೇಳುತ್ತದೆ. ಇದರಲ್ಲಿ ನಮ್ಮ ಯಾವುದಾದರೂ ಸ್ನೇಹಿತ ಈ ಸಾಮಾಜಿಕ ಮಾಧ್ಯಮಗಳನ್ನು ಅತಿಯಾಗಿ ಬಳಸುವುದರಿಂದಾಗುವ ಅನನುಕೂಲತೆಗಳ ಬಗ್ಗೆ ತಿಳಿಸಬೇಕು.

ನಾವು ಓದುವ ಹವ್ಯಾಸವನ್ನು ನಮ್ಮಲ್ಲಿ ಬೆಳೆಸಿಕೊಳ್ಳಲು ಬಯಸುತ್ತೇವೆ ಎಂದುಕೊಳ್ಳಿ. ಹಾಗಿದ್ದರೆ ಇದರ ಮೊದಲನೇ ಹಂತ ಅದನ್ನು obvious ಮಾಡುವುದಾಗಿದೆ. ನಾವು ಪ್ರಯಾಣ ಇಲ್ಲ ಕುಕ್ಕಿಂಗ್ ಮಾಡುತ್ತಿದ್ದರೆ, ಓದಲು ನೆನಪಿಸುವಂತೆ ಅಲರಾಂ ಇಡಬಹುದು. ಎರಡನೇ ಹಂತ ಅದನ್ನು satisfy ಮಾಡಿ ಎನ್ನುತ್ತದೆ. ಅಂದರೆ ನಾವು ಪ್ರತಿ ದಿನ ಓದುವುದರಿಂದ ನಮ್ಮಲ್ಲಿ ಹೊಸ ಹೊಸ ಐಡಿಯಾಗಳು ಬರುತ್ತವೆ ಎಂದು ಯೋಚಿಸಬಹುದು. ನಾವು ಯಾವಾಗಲೂ ಪಾಸಿಟಿವ್ ಯೋಚನೆ ಹೊಂದಿದ್ದು, ಇತರರ ಅನುಭವಗಳಿಂದ ಕಲಿಯಬೇಕು.

ಮೂರನೇ ಹಂತ ಕೆಲಸವನ್ನು ಸುಲಭ ಮಾಡಲು ಹೇಳುತ್ತದೆ. ನಮಗೆ ದಿನವೂ ಓದಲು ಸಾಧ್ಯವಾಗುತ್ತಿಲ್ಲವೆಂದರೆ ಆಡಿಯೋ ಬುಕ್ ಕೇಳಬಹುದು. ಗಂಟೆಗಟ್ಟಲೆ ಆಡಿಯೋ ಬುಕ್ ಕೇಳಲು ಇಷ್ಟವಿಲ್ಲವೆಂದರೆ ನಾವು ಬುಕ್‌ನ ಸಾರಾಂಶ(summary) ಕೇಳಬಹುದು. ಇದರ ಅರ್ಥ ನಾವು ಈ ಹಂತವನ್ನು ಎಷ್ಟು ಸುಲಭವಾಗಿಸುತ್ತೇವೆಯೋ ಅಷ್ಟೇ ಬೇಗ ರೂಢಿಸಿಕೊಳ್ಳುತ್ತೇವೆ. ನಾಲ್ಕನೇ ಹಂತ make it satisfy ಎನ್ನುತ್ತದೆ. ಇದರಲ್ಲಿ ನಾವು ಪುಸ್ತಕವನ್ನು ಓದಿ ಅದರಲ್ಲಿನ ಐಡಿಯಾಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳಬಹುದು. ಇದರಿಂದ ಅವರು ನಮ್ಮನ್ನು ಬುದ್ಧಿವಂತರೆಂದುಕೊಳ್ಳುತ್ತಾರೆ ಅದು ನಮಗೆ ಪಾಸಿಟಿವ್ ರಿವಾರ್ಡ್ ಆಗುತ್ತದೆ.

ಈ ಲೇಖನದಲ್ಲಿ ನಾವು, ನಮ್ಮನ್ನು ಕೇವಲ 1% ಸುಧಾರಿಸಿಕೊಂಡರೆ ಒಂದು ವರ್ಷದಲ್ಲಿ 38 ಬಾರಿಯಷ್ಟು ಸುಧಾರಿಸಿಕೊಳ್ಳುತ್ತೇವೆ ಎಂದು ತಿಳಿಸಿದೆವು. ಎರಡನೇ ಪಾಯಿಂಟ್‌ನಲ್ಲಿ, ನಾವು ನಮ್ಮ ಗುರಿಯ ಬದಲು ಸಿಸ್ಟಮ್ ಮೇಲೆ ಗಮನ ಹರಿಸಬೇಕು ಎಂದು ನೋಡಿದೆವು. ನಾವು ಈಗಲೇ ಇಂಪ್ಲಿಮೆಂಟ್ ಮಾಡಬಹುದಾದ ಚಿಕ್ಕ ಚಿಕ್ಕ ಹವ್ಯಾಸಗಳ ಮೇಲೆ ಫೋಕಸ್ ಮಾಡಬೇಕು. ಇದರಿಂದಲೇ ನಮ್ಮಲ್ಲಿ ಶಾಶ್ವತವಾದ ಬದಲಾವಣೆ ಬರುತ್ತದೆ ಎಂದು ತಿಳಿದೆವು. ಇನ್ನು ಕೊನೆಯದಾಗಿ ನಾವು ಹವ್ಯಾಸಗಳು ನಾಲ್ಕು ಭಾಗಗಳಲ್ಲಿ ಆಗುತ್ತವೆ ಎಂದು ನೋಡಿದೆವು. ಅವೆಂದರೆ cue, craving, response ಮತ್ತು reward. ಇವುಗಳನ್ನು ಒಂದು ಸಿಸ್ಟಮ್ಯಾಟಿಕ್ ಮಾರ್ಗದಲ್ಲಿ ಬಳಸಿಕೊಂಡು ನಾವು ನಮ್ಮ ಕೆಟ್ಟ ಹವ್ಯಾಸಗಳನ್ನು ಬಿಡಬಹುದು.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments