Website designed by @coders.knowledge.

Website designed by @coders.knowledge.

"Good Vibes Good Life" Book Summary | "Good Vibes Good Life" ಪುಸ್ತಕದ ವಿವರಣೆ

Watch Video

ಇಂದು ನಾವು ನಿಮ್ಮನ್ನು ಸಕಾರಾತ್ಮಕ(positive) ಆಗಿ ಇರುವಂತೆ ಮಾಡುವ ಮತ್ತು ಅದರ ದೃಷ್ಟಿಕೋನದ ಬಗ್ಗೆ ತಿಳಿಸುವ ಪುಸ್ತಕದ ಬಗ್ಗೆ ತಿಳಿಸಲಿದ್ದೇವೆ. ಇಂದು ನಾವು "good vibes good life" ಪುಸ್ತಕದ ಬಗ್ಗೆ ವಿವರಣೆ ನೀಡಲಿದ್ದೇವೆ. ಈ ಪುಸ್ತಕವನ್ನು ವೆಕ್ಸ್ ಕಿಂಗ್ ಅವರು ಬರೆದಿದ್ದಾರೆ. ಪಾಸಿಟಿವಿಟಿ ನಮ್ಮ ಬದುಕನ್ನು ಸುಧಾರಿಸುವಂತೆ, ನೆಗೆಟಿವಿಟಿ ನಮ್ಮ ಬದುಕನ್ನು ಹಾಳು ಮಾಡುತ್ತದೆ. ಹೀಗಾಗಿ ಪಾಸಿಟಿವಿಟಿಯನ್ನು ಅಳವಡಿಸಿಕೊಳ್ಳುವುದು ಮತ್ತು ನೆಗೆಟಿವಿಟಿಯನ್ನು ತಪ್ಪಿಸುವುದು ತುಂಬಾ ಮುಖ್ಯವಾಗಿದೆ.

good vibes good life ಒಂದು ಸ್ವಸಹಾಯ(self help) ಪುಸ್ತಕವಾಗಿದ್ದು, ಇದರ ಲೇಖಕರು ಅನೇಕ ಮುಖ್ಯ ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಅವೆಂದರೆ ಸೆಲ್ಫ್ ಲವ್, ಲಾ ಆಫ್ ಅಟ್ರ್ಯಾಕ್ಷನ್, ಸಬ್ ಕಾನ್ಷಿಯಸ್ ಮೈಂಡ್, ನಮ್ರತೆ, ವೈಫಲ್ಯ(failure), ಧ್ಯಾನ, ಎಂಪವರಿಂಗ್ ಮತ್ತು ಉತ್ತಮ ಜೀವನ ನಡೆಸುವ ಮಾರ್ಗದ ಬಗ್ಗೆ ಇದೆ. ಈ ಪುಸ್ತಕದ 8 ಲಕ್ಷಕ್ಕೂ ಅಧಿಕ ಕಾಫಿ ಮಾರಾಟವಾಗಿದ್ದು, ಇಂಗ್ಲಿಷ್ ಭಾಷೆಯಲ್ಲಿ ಅಷ್ಟೇ ಅಲ್ಲದೆ ಇನ್ನೂ 29 ಬೇರೆ ಭಾಷೆಗಳಲ್ಲಿ ಅನುವಾದಿಸಲಾಗಿದೆ(translate). ವೆಕ್ಸ್ ಕಿಂಗ್ ಒಬ್ಬ ಮೈಂಡ್ ಕೋಚ್‌ ಆಗಿದ್ದಾರೆ. ಅವರ ಕೆಲಸದಿಂದಾಗಿ ಅವರು ಬದುಕಿನಲ್ಲಿ ಯಶಸ್ವಿಯಾದ ಜನರ ಸಂಪರ್ಕಕ್ಕೆ(contact) ಸಿಕ್ಕರು. ಆ ಜನಗಳ ಸಲಹೆಗಳನ್ನು ಕೇಳಿ ಇಂದು ವೆಕ್ಸ್ ಕಿಂಗ್ಸ್ ಒಂದು ಮೈಂಡ್ ಕೋಚಿಂಗ್ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಅವರು ತಮ್ಮ ಐಡಿಯಾವನ್ನು ಜಗತ್ತಿನ ಜೊತೆ ಹಂಚಿಕೊಂಡರು ಮತ್ತು ಅದಕ್ಕೆ ಒಂದು ಒಳ್ಳೆಯ ರೆಸ್ಪಾನ್ಸ್ ಅವರಿಗೆ ದೊರೆಯಿತು.

ಇದನ್ನು ಓದಿ: ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಣ ಮಾಡುವುದು ಹೇಗೆ?

1. Law of Attraction.

law of attraction in good vibes good life book in kannada
law of attraction

ಲೇಖಕರು ವಿದ್ಯಾರ್ಥಿಯಾಗಿದ್ದಾಗ ಅವರ ಕುಟುಂಬದಲ್ಲಿ ಆರ್ಥಿಕ ಸಂಕಷ್ಟವಿತ್ತು. ಹೀಗಾಗಿ ಅವರ ಗೆಳೆಯರು ಅವರನ್ನು ವೆಕೇಶನ್ಗೆ ಕರೆದಾಗ ಅವರು ಹೋಗಲು ಸಾಧ್ಯವಿಲ್ಲವೆಂಬುದು ಗೊತ್ತಿತ್ತು. ಆದರೆ ಕೆಲವು ವಾರಗಳ ನಂತರ ಲೇಖಕರಿಗೆ ಆ 650$ನ ಒಂದು ಮೇಲ್ ದೊರೆಯಿತು. ಲೇಖಕರಿಗೆ ಆ ಸಮಯದಲ್ಲಿ ಅಷ್ಟೇ ಹಣವೇ ಬೇಕಿತ್ತು. ಈ ರೀತಿ ಹಣ ಸಿಗಲು ಕಾರಣವೇನು? ಲೇಖಕರು ಇದು law of attraction ನಿಂದ ಆಗಿದ್ದು ಎಂದು ಹೇಳುತ್ತಾರೆ.

ನೀವು ಏನಾದರೂ ಒಳ್ಳೆಯದಾಗುತ್ತದೆ ಎಂದು ಯೋಚಿಸುತ್ತಲೇ ಇದ್ದರೆ ಅದರ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ.

law of attraction ಪ್ರಕಾರ ನಿಮ್ಮ ಯೋಚನೆ ನಿಮ್ಮ ರಿಯಾಲಿಟಿಯನ್ನು ನಿರ್ಧರಿಸುತ್ತದೆ. ಹೀಗಾಗಿ ನೀವು ನೆಗೆಟಿವ್ ಯೋಚನೆ ಹೊಂದಿದರೆ ಅದರ ಸಾಧ್ಯತೆಯೇ ಹೆಚ್ಚುತ್ತದೆ. ಲೇಖಕರು ವಾರಪೂರ್ತಿ ವೆಕೇಶನ್ನ ಖರ್ಚನ್ನು ನಿಭಾಯಿಸಬಹುದೆಂದು ಯೋಚಿಸುತ್ತಿದ್ದರು. ಇದರಿಂದಾಗಿ ಅವರ ಬದುಕಿನಲ್ಲಿ law of attraction ಪಾಸಿಟಿವ್ ರೆಸ್ಪಾನ್ಸ್ ನೀಡಿತು.

ಇದನ್ನು ಓದಿ: ವೀರ್ಯವನ್ನು ಉಳಿಸಿಕೊಳ್ಳುವುದರಿಂದ ಆಗುವ ಲಾಭಗಳವುವು?

2. Law of Vibration.

law of vibration in good vibes good life book in kannada
law of vibration

ಆದರೆ ಲೇಖಕರು ಇದರಿಂದ ಎಲ್ಲ ಸಮಯ ಸಹಾಯ ಸಿಗುತ್ತಿಲ್ಲವೆಂಬುದನ್ನು ಕಂಡುಕೊಂಡರು. ಇದು ಏಕೆಂದರೆ ಅವರು ಪಾಸಿಟಿವ್ ಯೋಚನೆ ಹೊಂದಿದ್ದರೂ ಅದರ ಮಧ್ಯೆ ನೆಗೆಟಿವ್ ಯೋಚನೆ ಇರುತ್ತಿದ್ದವು. ಇದರ ಸಂಯೋಜನೆ ಅವರನ್ನು ಗೊಂದಲ(confuse) ಮಾಡಿತ್ತು. ಇದರಿಂದ ಹೊರಗೆ ಬರಲು ಅವರು ಇನ್ನೊಂದು law ಮಾಡಿದರು ಅದುವೇ law of vibration.

ಇದರ ಪ್ರಕಾರ ನೀವು ರೋಮಾಂಚನಗೊಂಡು ಪಾಸಿಟಿವ್ ಎನರ್ಜಿ ಪಡೆಯುತ್ತಿರುವಾಗ ನಿಮ್ಮ ರಿಯಾಲಿಟಿ ಕೂಡ ಪಾಸಿಟಿವ್ ಎನರ್ಜಿಯಿಂದ ಬದಲಾಗುತ್ತದೆ ಮತ್ತು ನೀವು ಕೂಡ ಪಾಸಿಟಿವ್ ವಸ್ತುಗಳನ್ನು ಟ್ರ್ಯಾಕ್ ಮಾಡುತ್ತೀರಾ.

ಇದು ಅಸಂಭವ ಎನಿಸುತ್ತದೆ. ಆದರೆ ಇದು ವಿಜ್ಞಾನದ ಮೇಲೆ ನಿಂತಿದೆ. ಬ್ರಹ್ಮಾಂಡದಲ್ಲಿರುವ ಎಲ್ಲಾ ವಸ್ತುಗಳಲ್ಲಿ ನಮ್ಮ ಮೆದುಳು ಕೂಡ ಒಂದು. ಇದು ವೈಬ್ರೆಟ್ ಆಗುವ ಪರಮಾಣುವಿನಿಂದ(atom) ಆಗಿದೆ. ಲೇಖಕರ ಪ್ರಕಾರ ಉತ್ಸಾಹದಿಂದ ತುಂಬಿದ ಭಾವನೆಗಳಿಂದ(feeling) ಹೆಚ್ಚಿನ ಆವರ್ತನ ಕಂಪನಗಳು(higher frequency vibration) ಉತ್ಪತ್ತಿಯಾಗುತ್ತದೆ. ಅದೇ ದುಃಖ ಅಥವಾ ಕೋಪವು ಕಡಿಮೆ ಆವರ್ತನ ಕಂಪನ(lower frequency vibration) ಉತ್ಪಾದಿಸುತ್ತದೆ. ಈ ವೈಬ್ರೇಷನ್ಗಳಿಂದ ನೀವು ನಿಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಪ್ರಭಾವವನ್ನು ಬೀರಬಹುದು.

ಒಂದು ಪರಮಾಣು ವೈಬ್ರೆಟ್ ಆದಾಗ ಅದರ ಸುತ್ತಮುತ್ತಲಿನ ಪರಮಾಣು ಕೂಡ ಅದೇ ಫ್ರೀಕ್ವೆನ್ಸಿಯಲ್ಲಿ ವೈಬ್ರೇಟ್ ಆಗುತ್ತದೆ. ಹೀಗಾಗಿ ನಿಮ್ಮ ಫೀಲಿಂಗ್ ಹೈಯರ್ ಫ್ರೀಕ್ವೆನ್ಸಿ ವೈಬ್ರೇಷನ್ ಉತ್ಪತ್ತಿ ಮಾಡಿದರೆ ನಿಮ್ಮ ಸುತ್ತಮುತ್ತಲು ಹೈಯರ್ ಫ್ರೀಕ್ವೆನ್ಸಿ ಇರುತ್ತದೆ. ಇದರಿಂದ ನಿಮ್ಮ ಸುತ್ತಮುತ್ತಲು ಖುಷಿಯಿಂದ ತುಂಬಿರುತ್ತದೆ. ಪಾಚಿಯು ಬೇರೆ ಸಸ್ಯಗಳಿಂದ ಶಕ್ತಿಯನ್ನು ತೆಗೆದುಕೊಳ್ಳುವ ರೀತಿಯೇ, ನೀವು ಕೂಡ ಶಕ್ತಿಯನ್ನು ಪ್ರಕೃತಿ ಮತ್ತು ನಿಮ್ಮ ಸುತ್ತಮುತ್ತಲಿನ ಜನರಿಂದ ಪಡೆಯುತ್ತೀರಾ.

ಹೀಗಾಗಿ ಹೈಯರ್ ಫ್ರೀಕ್ವೆನ್ಸಿಯಲ್ಲಿ ಇರಲು ನಿಮ್ಮ ಮೊದಲ ಆದ್ಯತೆ(priority) ಪಾಸಿಟಿವ್ ಜನಗಳ ಜೊತೆ ಇರುವುದಾಗಿದೆ. ಇದರಿಂದ ನೀವು ನಿಮ್ಮ ವೈಬ್ರೇಟಿಂಗ್ ಫ್ರೀಕ್ವೆನ್ಸಿಯನ್ನು ನಿಯಂತ್ರಿಸಬಹುದು. ಈ ವೈಬ್ರೇಷನ್ ಕಂಟಿನ್ಯೂ ಇರುತ್ತದೆ. ಇದರ ಅರ್ಥ ನಿಮಗೆ ಖುಷಿ ನೀಡುವ ಜನರೊಂದಿಗೆ ನೀವು ಕಾಲ ಕಳೆಯುತ್ತಿದ್ದರೆ ನೀವು ಖುಷಿಯಾಗೆ ಇರುತ್ತೀರಾ. ಆ ಸಮಯದಲ್ಲಿ ನೀವು ನಿಮ್ಮ ಜೀವನದಲ್ಲಿ ಇನ್ನೂ ಅನೇಕ ಪಾಸಿಟಿವ್ ಜನರನ್ನು ಆಕರ್ಷಿಸಿಕೊಳ್ಳುತ್ತೀರಾ.

ನಿಮ್ಮ ಹೈಯರ್ ಫ್ರೀಕ್ವೆನ್ಸಿಯನ್ನು ಹೆಚ್ಚಿಸಲು ನೀವು positive body language ಅನ್ನು ಅನುಸರಿಸಿ. ಅಧ್ಯಯನದ ಪ್ರಕಾರ ನಮಗೆ ಖುಷಿಯಾಗಲು ಯಾವುದೇ ವಿಷಯ ಇಲ್ಲದಿದ್ದರೂ ಖುಷಿಯಾಗಿದ್ದರೆ, ಇದು ನಿಮಗೆ ಒಂದು ಎಂಡಾರ್ಫಿನ್ ಸ್ಪೈಕ್(endorphin spike) ನೀಡುತ್ತದೆ. ಇದು ನಿಮ್ಮ ದೇಹದ ಫೀಲ್ ಗುಡ್ ರಾಸಾಯನವಾಗಿದೆ. ಹೀಗಾಗಿ ನೀವು ಮುಂದೆ ದುಃಖದಲ್ಲಿದ್ದಾಗ ನಿಮ್ಮ ಮುಖದಲ್ಲಿ ನಗುವನ್ನು ತನ್ನಿ ಮತ್ತು ನೀವು ಇದರ ಪ್ರತಿಫಲವನ್ನು ತಿಳಿದುಕೊಳ್ಳುತ್ತೀರಾ.

ದಿನದಲ್ಲಿ ಕೇವಲ 2 ನಿಮಿಷ ಗಟ್ಟಿಯಾಗಿ ಕೂತು ಇಲ್ಲ ನಿಂತಿದ್ದರೆ, ಟೆಸ್ಟೋಸ್ಟೆರೋನ್ ಶೇಕಡಾ 20 ರಷ್ಟು ಹೆಚ್ಚುತ್ತದೆ ಎಂದು ಅಧ್ಯಯನ ತಿಳಿಸಿದೆ. ಇದು ಆತ್ಮವಿಶ್ವಾಸ(confidence) ನೀಡುವ ಹಾರ್ಮೋನ್ ಆಗಿದೆ.

ನೀವು ಹೈಯರ್ ಫ್ರಿಕ್ವೆನ್ಸಿ ವೈಬ್ರೇಷನ್ಗಾಗಿ ಸಮಾಜದಿಂದ ಸ್ವಲ್ಪ ಸಮಯ ದೂರವಾಗಬಹುದು. ಆಧುನಿಕ ಬದುಕಿನಿಂದ ಬ್ರೇಕ್ ತೆಗೆದುಕೊಳ್ಳುವುದರಿಂದ ನೀವು ರೀಚಾರ್ಜ್ ಆಗುತ್ತೀರಾ. ಇದು ನಿಮ್ಮನ್ನು ಸಾಮಾಜಿಕ ವಿರೋಧಿ(anti social) ಮಾಡಬಹುದು. ಆದರೆ ಇದು ಆರೋಗ್ಯಕರವಾಗಿದೆ. ನಿಮ್ಮ ವೈಬ್ರೆಶನ್ ಅನ್ನು ಇನ್ನಷ್ಟು ಹೆಚ್ಚಿಸಲು ನೀವು ಪ್ರಕೃತಿಯಲ್ಲಿ ಹೆಚ್ಚಿನ ಸಮಯ ಕಳೆಯಿರಿ. ಅಧ್ಯಯನದ ಪ್ರಕಾರ ನೀವು ಕೇವಲ ಪ್ರಕೃತಿಯಲ್ಲಿ ಇರುವುದರಿಂದ ನಿಮ್ಮ ದೇಹ ಮತ್ತು ಮನಸ್ಸು ಸುಧಾರಿಸಿತ್ತದೆ. ಹೀಗಾಗಿ ನಿಮ್ಮ ಕೆಲವು ಕೆಲಸಗಳನ್ನು ಯಾವುದಾದರೂ ಪಾರ್ಕ್ನಲ್ಲಿ ಮಾಡಿ. ಸೂರ್ಯನ ಬಿಸಿಲಿನಿಂದ ನಿಮಗೆ ವಿಟಮಿನ್ ಡಿ ಮತ್ತು ಸೆರೊಟಿನ್ ಸಿಗುತ್ತವೆ. ಇವುಗಳು ನಿಮ್ಮ ಮನಸ್ಥಿತಿಯನ್ನು ಅಚಲವಾಗಿ(stable) ಇಡಲು ಸಹಕಾರಿಯಾಗಿದೆ.

ಇದನ್ನು ಓದಿ: ರೋಗಗಳನ್ನು ತಪ್ಪಿಸಲು ಹತ್ತು ಆರೋಗ್ಯಕರ ಅಭ್ಯಾಸಗಳು

3. Learn to accept.

how do you accept things the way it is in kannada
learn to accept

ಪಾಸಿಟಿವ್ ಜನಗಳ ಹತ್ತಿರ ಇದ್ದಷ್ಟು ನಿಮ್ಮಲ್ಲಿ ಹೈಯರ್ ಫ್ರೀಕ್ವೆನ್ಸಿ ವೈಬ್ರೇಷನ್ ಇರುತ್ತದೆ. ಇದೇ ರೀತಿಯೇ ನೀವು ನೆಗೆಟಿವ್ ಜನರ ಜೊತೆ ಹೆಚ್ಚಿದ್ದರೆ ಕಡಿಮೆ ಫ್ರಿಕ್ವೆನ್ಸಿ ವೈಬ್ರೇಶನ್ ಇರುತ್ತದೆ. ಇದರಿಂದ ನಿಮ್ಮಲ್ಲಿ ದುಃಖ, ಕೋಪ ಹೆಚ್ಚುತ್ತದೆ. ಇದರಿಂದ ನೀವು ನಿಶಕ್ತರು ಎಂದು ಭಾವಿಸುತ್ತೀರಾ. ನೀವು ಈ ರೀತಿಯ ಪರಿಸ್ಥಿತಿಯಲ್ಲಿ ಇದ್ದರೆ ಅದು ನಿಮ್ಮ ತಪ್ಪಲ್ಲ. ನೀವು ಈ ನೆಗೆಟಿವ್ ಜನಗಳಿಂದ ದೂರವಿದ್ದರೂ ನೀವು ಇತರರನ್ನು ಮೀಟ್ ಮಾಡಿದಾಗ ನೀವೇ ನೆಗೆಟಿವ್ ಎನರ್ಜಿಯನ್ನು ಪಾಸ್ ಮಾಡುತ್ತೀರಾ. ಹೀಗಾಗಿ ಇದನ್ನು ನೀವು ನಿಯಂತ್ರಿಸಲೇಬೇಕು.

ನೀವು ನೆಗೆಟಿವ್ ಜನರನ್ನು ವಿರೋಧಿಸುವಂತೆ ನಿಮ್ಮ ನೆಗೆಟಿವ್ ಯೋಚನೆಗಳನ್ನು ವಿರೋಧಿಸಬೇಕು. ನೀವು ಈ ರೀತಿಯ ಸ್ಥಿತಿಯಲ್ಲಿ(condition) ತಪ್ಪು ಮಾಡಿದಾಗ "ನನ್ನ ಮೂಡ್ ಸರಿಯಿಲ್ಲ, ನನ್ನ ಅಕ್ಕ ಪಕ್ಕ ಇರುವವರೆಲ್ಲ ಸರಿಯಿದ್ದರೆ, ನಾನೇ ಸರಿಯಿಲ್ಲ" ಎಂದು ಭಾವಿಸುತ್ತೀರಾ ಮತ್ತು ನೀವು ಈ ಭಾವನೆಗಳನ್ನು ನಿಮ್ಮ ಸಂಬಂಧಿಕರು ಅಥವಾ ಗೆಳೆಯರಿಗೆ ತಿಳಿಸಿದರೆ ನೀವು ಅವರಿಗೆ ನೋಯಿಸುತ್ತಿದ್ದೀರಿ ಎಂದರ್ಥ.

ಕೆಲವರು ಅವರ ಭಾವನೆಯನ್ನು(feeling) ನಾವು ಹಾಳು ಮಾಡಿದ್ದೇವೆ ಎಂದರೆ ನಾವು ಅವರಿಗೆ "ನಾನು ಹೇಳಿದ್ದರಲ್ಲಿ ತಪ್ಪಿಲ್ಲ" ಎಂದು ತಿಳಿಸುತ್ತೇವೆ. ನಾವು ಇದರ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಮತ್ತು ತಮ್ಮ ನಡವಳಿಕೆ(behaviour) ತಪ್ಪು ತಿಳಿದುಕೊಂಡಿದ್ದಕ್ಕೆ ಅವರನ್ನು ತಪ್ಪಿತಸ್ಥನೆಂದು ಮಾಡುತ್ತೇವೆ. ಆದರೆ ಸತ್ಯವೆಂದರೆ ಇತರರ ಭಾವನೆ ಮಾನ್ಯ(valid) ಹೌದೇ ಅಥವಾ ಇಲ್ಲವೇ ಎಂದು ಹೇಳುವ ಹಕ್ಕು ನಮಗಿಲ್ಲ. ನೀವು ಯಾರಿಗಾದರೂ ದುಃಖ ನೀಡಿದರೆ ಅದನ್ನು ಒಪ್ಪಿಕೊಂಡು ಸೆಲ್ಪ್ ಲವ್ ನೀಡಿ.

ಇದನ್ನು ಓದಿ: ಸಮಯ ಸಾಲುತ್ತಿಲ್ಲವೆಂದರೆ 8*3 ಮಾರ್ಗ ಬಳಸಿ

4. Self Love.

what does self love mean in good vibes good life book in kannada
self love

ಯಾರಾದರೂ ನಿಮಗೆ ನಿಮ್ಮ ಖುಷಿಯ 5 ಉದಾಹರಣೆ ನೀಡಿ ಎಂದರೆ ಅದರಲ್ಲಿ ನಿಮ್ಮನ್ನು ಆರಿಸಿಕೊಳ್ಳುತ್ತೀರಾ? ದುರಾದೃಷ್ಟವಶಾತ್ ನೀವು ಆರಿಸಿಕೊಳ್ಳುವುದಿಲ್ಲ. ಇದು ಏಕೆಂದರೆ ನೀವು ಸೆಲ್ಫ್ ಲವ್‌ ಅನ್ನು ಅತಿ ಕಡಿಮೆಯಾಗಿ ಅನುಭವಿಸಿದ್ದೀರಾ. ಇಂದಿನ ಜಗತ್ತಿನಲ್ಲಿ ನಾವು ಇತರರು ಹೆಚ್ಚಾಗಿ ಇರಲು ಬಯಸುವ ಜನಗಳ ಜೊತೆ ಇರುತ್ತೇವೆ. ಅವರಿಗೆ ನಾವು ಇಷ್ಟವಿದೆಯೋ ಇಲ್ಲವೋ ತಿಳಿದಿಲ್ಲ. ಅವರು ಗೌರವ ನೀಡಲಿ ಅಥವಾ ನೀಡದಿರಲಿ. ಆದರೆ ನಾವು ಯಾವತ್ತೂ ನಮ್ಮನ್ನು ನಾವು ಪ್ರೀತಿಸುತ್ತೇವೆಯೇ ಎಂಬ ಪ್ರಶ್ನೆ ಕೇಳಿಕೊಳ್ಳುವುದಿಲ್ಲ. ನಮ್ಮನ್ನು ನಾವು ಗೌರವಯುತವಾಗಿ ನೋಡುತ್ತೇವೆಯೇ? ನಿಜವಾದ ಖುಷಿ ನಿಮ್ಮನ್ನು ಪ್ರೀತಿಸುವುದರಿಂದಲೇ ಶುರುವಾಗುತ್ತದೆ. ನೀವು ಸುರಕ್ಷಿತ ಎಂದು ಭಾವಿಸಲು ನಿಮ್ಮನ್ನು ನೀವು ಪ್ರೀತಿಸಲು ಶುರು ಮಾಡಿ.

ನೀವು ನಿಮ್ಮನ್ನು ಪ್ರೀತಿಸುವವರೆಗೆ ಇತರರು ನಿಮ್ಮ ನೆಗೆಟಿವ್ ಯೋಚನೆಗಳ ಅನುಕೂಲ(advantage) ತೆಗೆದುಕೊಳ್ಳುತ್ತಿರುತ್ತಾರೆ. ಇದರಿಂದ ನಿಮಗೆ ಪ್ರೀತಿಸಲು ಕಷ್ಟವಾಗುತ್ತದೆ.

ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ನಾವು ನೋಡುವ ಅನೇಕ ಪ್ರಸಿದ್ಧ ಜನರು ಮತ್ತು ಮಾಡೆಲ್‌ಗಳಿಂದ ನಮ್ಮನ್ನು ನಾವು ಪ್ರೀತಿಸುವುದು ಕಷ್ಟಕರವಾಗಿದೆ. ಇದು ಏಕೆಂದರೆ ನಾವು ಅವರೊಂದಿಗೆ ಹೋಲಿಕೆ(comparison) ಮಾಡಿಕೊಳ್ಳುತ್ತೇವೆ. ಸಾಮಾನ್ಯವಾಗಿ ಈ ಮಾಡೆಲ್‌ಗಳು ಇತರರಿಗೆ ಹೋಲಿಸಿದಾಗ ಖುಷಿಯಾಗಿರುತ್ತಾರೆ ಎಂದು ಅನಿಸುತ್ತದೆ. ಆದರೆ ನಿಜವಾಗಿ ಅವರು ಸೆಲ್ಫ್ ಡೌಟ್ ಮತ್ತು ತಮ್ಮದೇ ಆದ ಹೋರಾಟಗಳಲ್ಲಿ ಜೀವಿಸುತ್ತಿರುತ್ತಾರೆ.

ಲೇಖಕರು ಒಮ್ಮೆ ಈ ರೀತಿಯ ಸಾಮಾಜಿಕ ಪ್ರಭಾವಿಯ(social influencer) ಹತ್ತಿರ ಮಾತನಾಡಿದರು. ಅವರು ಅದಕ್ಕೆ "ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದರಲ್ಲಿ ಸುಸ್ತಾಗುತ್ತೇನೆ" ಎಂದು ಹೇಳಿದರು. ಲೇಖಕರು ನಂತರ ಅವರ ಹೆಣ್ಣು ಅನುಯಾಯಿಗಳ ಜೊತೆಗೆ ಮಾತನಾಡಿದರು. ಅವರೆಲ್ಲ ತಮ್ಮ ನೋಟದ ಮೇಲೆ ಅಭದ್ರ(insecure) ಎಂದುಕೊಳ್ಳುತ್ತಿದ್ದರು. ಈ ರೀತಿಯ ವಿಷಯಗಳು ಸೆಂಚುರಿಯಿಂದ ನಡೆದುಕೊಂಡು ಬರುತ್ತಿದೆ. ವಿಷಯ ಏನೆಂದರೆ ಹೊರಗಿನ ಪ್ರಪಂಚ ಅಷ್ಟು ಮುಖ್ಯವಲ್ಲ, ಮುಖ್ಯವಾಗಿರುವದು ಸೆಲ್ಫ್ ಲವ್‌ನ ಫೌಂಡೇಶನ್. ಇದರಲ್ಲಿ ನೀವು ಹೇಗೆ ಇದ್ದೀರೋ ಹಾಗೆ ನಿಮ್ಮನ್ನು ಸ್ವೀಕರಿಸಿಕೊಳ್ಳಬೇಕು. ಈ ರೀತಿ ಯೋಚಿಸಲು ನಿಮ್ಮ ಹತ್ತಿರ 2 ಮೆದುಳು ಇದೆ ಎಂದು ಭಾವಿಸಬೇಕು.

ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್

5. Consious and Subconsious mind.

consious and subconsious mind in good vibes good life book in kannada
consious and subconsious mind

ನಿಮ್ಮ ಒಂದು ಮೆದುಳು ಜಾಗೃತ ಮನಸ್ಸು(consious mind) ಆಗಿದೆ. ಇದರಲ್ಲಿ ನಿಮ್ಮ ಯೋಚನೆ, ಭಾವನೆ ಮತ್ತು ಮಾಹಿತಿಗಳು ಇರುತ್ತವೆ. ಇನ್ನೊಂದು ಉಪಪ್ರಜ್ಞೆ ಮನಸ್ಸು(subconsious mind) ಇದರಲ್ಲಿ ನಿಮ್ಮ ಜೀವನದ ಇತರ ಎಲ್ಲಾ ವಿಷಯಗಳು ಇರುತ್ತವೆ. ಇದನ್ನು ಮಣ್ಣಿಗೆ ಹೋಲಿಸಿದರೆ ಉಪಪ್ರಜ್ಞೆ ಮನಸ್ಸು ನೆಲದ ಒಳಗಿನ ಮಣ್ಣಾಗಿದೆ. ಒಂದು ವೇಳೆ ಒಳಮಣ್ಣು ಸರಿ ಇಲ್ಲದಿದ್ದರೆ ಅದರಿಂದ ಬೆಳೆಯುವ ಸಸ್ಯಗಳು ಸರಿಯಾಗಿ ಬೆಳೆಯುವುದಿಲ್ಲ. ಇದರ ಸಂದೇಶ ಏನೆಂದರೆ ಬದುಕಿನಲ್ಲಿ ನೀವು ಖುಷಿಯ ಬೀಜ ಬಿತ್ತಬಹುದು, ಇಲ್ಲ ದುಃಖದ ಬೇರನ್ನು ಬೆಳೆಸಿಕೊಳ್ಳುತ್ತೀರಾ.

ನಿಮ್ಮ ನಂಬಿಕೆ ನಿಮ್ಮ ಉಪಪ್ರಜ್ಞೆ ಮನಸ್ಸಿನಲ್ಲಿ ಇದೆ ಎಂದುಕೊಳ್ಳಿ. ನಿಮ್ಮ ಹತ್ತಿರ ಒಳ್ಳೆಯ ಅಥವಾ ಕೆಟ್ಟ ಮೌಲ್ಯ ಇರುತ್ತದೆ. ನೀವು ಇದರಿಂದ ನಿಮ್ಮ ಮನಸ್ಸಿನಲ್ಲಿ ಒಂದು ಸುಂದರವಾದ ಉದ್ಯಾನ ಮಾಡಬಹುದು, ಇಲ್ಲ ವಿಷಕಾರಿ ಉದ್ಯಾನ ಮಾಡಬಹುದು. ನಿಮ್ಮ ವಾಸ್ತವವನ್ನು ಮಾಡಲು ನೀವು ಕೆಲ ಬೀಜಗಳನ್ನು ಹೊರ ತೆಗೆಯಬೇಕು. ನಿಮಗೆ ಬರುವ ಪ್ರತಿಯೊಂದು ನಂಬಿಕೆ ಎಲ್ಲಿಂದ ಬಂತು ಎಂಬ ಪ್ರಶ್ನೆ ಕೇಳಿಕೊಳ್ಳಿ. ಲೇಖಕರು ತಮ್ಮ ನಂಬಿಕೆ ಬಗ್ಗೆ ಈ ರೀತಿ ಪ್ರಶ್ನೆ ಕೇಳಿಕೊಂಡಾಗ ಅವರು ಜನರೆಲ್ಲ ಒಂದು ಪ್ರೋಗ್ರಾಮಡ್ ಬದುಕು ಜೀವಿಸುತ್ತಿದ್ದಾರೆ ಎಂದು ತಿಳಿದುಕೊಂಡರು. ಕೆಲವೇ ಕೆಲವರು ಮಾತ್ರ ಯಶಸ್ವಿ ಜೀವನವನ್ನು ನಡೆಸಲು ಸಾಧ್ಯವಾಗುತ್ತಿದೆ. ಇತರರ ಜೀವನ ತುಂಬಾ ಕಷ್ಟಕರವಾಗಿದ್ದು, ಸಮಸ್ಯೆಗಳು ಯಾವಾಗ ಬೇಕಾದರೂ ಉದ್ಭವಿಸಬಹುದು.

ಲೇಖಕರ ಪ್ರಕಾರ ಬದುಕಿನಲ್ಲಿ ನಿಮ್ಮ ಮಾರ್ಗವನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ಲೇಖಕರು ಈ ನಂಬಿಕೆಯ ಬೇರನ್ನು ಹುಡುಕಿದಾಗ ಅವರು ನಂಬಿಕೆಗಳನ್ನು ಒಂದು ಮಗುವಿನ ರೀತಿ ತಲೆಯಲ್ಲಿ ಇಟ್ಟುಕೊಂಡಿರುವ ಬಗ್ಗೆ ತಿಳಿದುಕೊಂಡರು. ಲೇಖಕರ ಬಾಲ್ಯದ ನೆಗೆಟಿವ್ ಯೋಚನೆಗಳಿಂದ ಅವರ ಜೀವನ ಕಷ್ಟಕರವಾಗಿರುತ್ತದೆ ಎಂದು ಭಾವಿಸಿದ್ದರು. ಆದರೆ ಇದು ಅವರ ಪಕ್ಷಪಾತ ಆಗಿತ್ತು ಅಷ್ಟೇ.

ನಿಮ್ಮ ನಂಬಿಕೆ ತೆಗೆದುಕೊಂಡು ಅದು ಪಾಸಿಟಿವ್ ಅಥವಾ ನೆಗೆಟಿವ್ ಎಂಬುದನ್ನು ನೀವೇ ಕೇಳಿಕೊಳ್ಳಿ. ಅದು ನಿಮ್ಮ ಬದುಕಿನಲ್ಲಿ ವ್ಯತ್ಯಾಸವನ್ನು ತರುತ್ತದೆಯೇ ಅಥವಾ ಅದು ನಿಮ್ಮನ್ನು ಹಿಂದೆಳಿಯುತ್ತದೆಯೇ ಎಂಬುದನ್ನು ಯೋಚಿಸಿ. ನೆಗೆಟಿವ್ ಭಾವನೆಗಳನ್ನು ಹೊರತರಲು ಜೀವನದ ಪ್ರಾರಂಭದಲ್ಲಿ ಕಷ್ಟ ಅನುಭವಿಸಿದ ಯಶಸ್ವಿ ಜನರ ಜೀವನದ ಬಗ್ಗೆ ತಿಳಿದುಕೊಳ್ಳಿ. ಪಾಸಿಟಿವ್ ಯೋಚನೆ ತುಂಬಾ ಮುಖ್ಯವಾಗಿದೆ, ಆದರೆ ನೀವು ಅದರ ಮೇಲೆ ಕೆಲಸ ಮಾಡುವವರೆಗೂ ನಿಮ್ಮ ವಾಸ್ತವ ಬದಲಾಗುವುದಿಲ್ಲ.

ಇದನ್ನು ಓದಿ: ಗಣಿತವನ್ನು ವೇಗವಾಗಿ ಕಲಿಯುವುದು ಹೇಗೆ?

6. Success Formula.

success formula in good vibes good life in kannada
success formula

ತುಂಬಾ ಜನ ತುಂಬಾನೇ ಯಶಸ್ವಿಯಾಗಲು ಬಯಸುತ್ತಾರೆ. ಆದರೆ ಅದಕ್ಕೆ ಏನಾದರೂ ಮಾಡಲು ಅವರಿಗೆ ಕಷ್ಟಕರವಾಗಿದೆ. ಪಾಸಿಟಿವ್ ರಿಯಾಕ್ಷನ್ ಅರ್ಥವೆಂದರೆ ಕಠಿಣ ಪರಿಶ್ರಮ ಮತ್ತು ಸಮರ್ಪಣೆ(dedecation) ಆಗಿದೆ. ಇದರ ಅರ್ಥ ನೀವು ಆರಾಮದಾಯಕ(rest) ದಿನಗಳಲ್ಲೂ ನೀವು ನಿಮ್ಮ ಯಶಸ್ಸಿನ ಕೆಲಸ ಮಾಡುವುದಾಗಿದೆ. ಅನೇಕರು ತಮ್ಮ ಗುರಿಯನ್ನು ತಲುಪಲು ಪಡಬೇಕಾದ ಕಷ್ಟದಿಂದ ಫೇಲ್ ಆಗುತ್ತಾರೆ ಮತ್ತು ಅವರ ಪಾಸಿಟಿವಿಟಿ ಅವರಿಗೆ ಏಕೆ ಬಹುಮಾನ ನೀಡುತ್ತಿಲ್ಲವೆಂದು ಯೋಚಿಸುತ್ತಾರೆ. ಅವರು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಅನೇಕ ಕಷ್ಟಗಳು ಇದೆ ಎಂದು ಭಾವಿಸುತ್ತಾರೆ. ಅವರ ಹತ್ತಿರ ಸಮಯ, ಹಣ ಅಥವಾ ಪರಿಣಿತರು(expertise) ಸಿಕ್ಕಾಗ ಅವರು ಅವುಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸುತ್ತಾರೆ.

ನೀವು ನಿಮ್ಮ ಗುರಿಯನ್ನು ಪ್ರಾಮುಖ್ಯತೆಯಲ್ಲಿ ಇಡಬೇಕು ಮತ್ತು ಅಲ್ಲಿಗೆ ತಲುಪಲು ನಿಮ್ಮ ಕಂಫರ್ಟ್ ಜೋನ್ ಅನ್ನು ತ್ಯಜಿಸಬೇಕು. ನೀವು ಕೇವಲ ಅದಕ್ಕೆ ತಯಾರಾಗಲು ನಿರ್ಧರಿಸುತ್ತಲೇ ಇದ್ದರೆ, ಅದರಲ್ಲೇ ಅಧಿಕ ಸಮಯ ಹೋಗುತ್ತದೆ. ಸಮಯ ಯಾವತ್ತಿಗೂ ಪರ್ಫೆಕ್ಟ್ ಇಲ್ಲ ಎಂಬುದನ್ನು ಯಾವಾಗಲೂ ನೆನಪಿಡಿ. ಸಾಮಾನ್ಯವಾಗಿ ಪರ್ಫೆಕ್ಟ್ ಸಮಯ ಎಂದಿಗೂ ಬರುವುದಿಲ್ಲ. ನೀವು ಇದಕ್ಕೆ ಕಾಯುತ್ತಿದ್ದರೆ ನೀವು ನಿಮ್ಮ ಅಮೂಲ್ಯ ಸಮಯವನ್ನು ಕಳೆದುಕೊಳ್ಳುತ್ತೀರಾ ಮತ್ತು ಕೊನೆಗೆ ಪಶ್ಚಾತಾಪ ಬಿಟ್ಟು ಬೇರೇನಕ್ಕೂ ಸಾಧ್ಯವಾಗುವುದಿಲ್ಲ.

ಬ್ರಿಟಿಷ್ ಬ್ಯುಸಿನೆಸ್ ಟೈಕೂನ್ ರಿಚರ್ಡ್ ಬ್ರಾನ್ಸನ್ ಬಗ್ಗೆ ಯೋಚಿಸಿ. ಅವರು ತಮ್ಮ 16 ನೇ ವಯಸ್ಸಿನಲ್ಲಿ ವಾಣಿಜ್ಯೋದ್ಯಮಿ(enterprener) ಜಗತ್ತಿಗೆ ಕಾಲಿಟ್ಟರು. ಅವರು ಇದನ್ನು ಮ್ಯಾಗಜಿನ್ ಮಾರಾಟ ಮಾಡುವ ಮೂಲಕ ಪ್ರಾರಂಭಿಸಿದರು. ಅವರಿಗೆ ತುಂಬಾ ಜನ ಮ್ಯಾಗಜಿನ್ ಬ್ಯುಸಿನೆಸ್ ಮಾಡಲು ಅವರ ಹತ್ತಿರ ಬೇಕಾದಷ್ಟು ಪರಿಣಿತರು ಇಲ್ಲವೆಂದು ತಿಳಿಸಿದರು. ಆದರೆ ಬ್ರೆನ್ಸನ್ ಈ ಬ್ಯುಸಿನೆಸ್ ಅನ್ನು ಬಿಟ್ಟುಕೊಡಲಿಲ್ಲ. ಅವತ್ತಿನಿಂದ ಇವತ್ತಿನವರೆಗೂ ಅವರ 400 ವಿವಿಧ ರೀತಿಯ ಬ್ಯುಸಿನೆಸ್ ತೆರೆದರು.

ಇದನ್ನು ಓದಿ: ಮನೆಯಲ್ಲಿ ವಿದ್ಯುತ್ ಉಳಿಸುವುದು ಹೇಗೆ?

7. Divide Goal in Small Parts.

how to achieve success by dividing it in parts in kannada
divide goal in small parts

ಯಶಸ್ವಿಯಾದ ಮತ್ತು ಯಶಸ್ವಿಯಾಗದ ಜನರಲ್ಲಿ ಕೇವಲ ಒಂದು ವ್ಯತ್ಯಾಸವಿದೆ. ಅದೆಂದರೆ ಯಶಸ್ವಿ ಜನರು ತಮ್ಮ ಗುರಿಗೆ ಕೆಲಸ ಮಾಡುತ್ತಿರುತ್ತಾರೆ. ಅವರಿಗೆ ಅದನ್ನು ಮಾಡಲು ಯಾವುದೇ ಕಷ್ಟ ಬಂದರೂ ಕೂಡ ಬಿಟ್ಟುಕೊಡುವುದಿಲ್ಲ. ಇವು ಮೋಟಿವೇಟ್ ಫೀಲ್ ನಲ್ಲಿ ಇದ್ದಿರೋ ಇಲ್ಲವೋ ಗೊತ್ತಿಲ್ಲ. ನಿಮ್ಮ ತೋಳುಗಳನ್ನು(sleeve) ಮಾಡಿಚಿ, ನಿಮ್ಮ ಕೆಲಸ ಮಾಡುತ್ತಿರುತ್ತೀರಿ. ಸಮಯದ ಜೊತೆ ನಿಮ್ಮ ಈ ಕಾರ್ಯ ಪಾಸಿಟಿವ್ ಫಲಿತಾಂಶ ನೀಡುತ್ತದೆ. ನೀವು ನಿಮ್ಮ ಗುರಿಗಾಗಿ ಒಂದು ಮಾರ್ಗವನ್ನು ಹುಡುಕುತ್ತಿರುತ್ತೀರಿ. ಅದಕ್ಕಾಗಿ ಒಂದು ಮೋಟಿವೇಷನ್ಗಾಗಿ ಕಾಯುತ್ತಿರುತ್ತೀರಿ. ಆದರೆ ಅದನ್ನು ಯಾವಾಗಲೂ ಹುಡುಕಲು ಸಾಧ್ಯವಿಲ್ಲ.

ಇದರಿಂದ ಹೊರಬರಲು ಇರುವ ಒಂದು ಮಾರ್ಗವೆಂದರೆ ನೀವು ನಿಮ್ಮ ಗುರಿಯನ್ನು ಚಿಕ್ಕ ಚಿಕ್ಕ ಗುರಿಯನ್ನಾಗಿ ಮಾಡಿ, ಅದರ ಮೇಲೆ ಕೆಲಸ ಮಾಡಬೇಕು. ನಿಮಗೆ ಮೋಟಿವೇಶನ್ ನೀಡುವ ಕೆಮಿಕಲ್ ಡೋಪಮೈನ್ ಆಗಿದೆ. ನೀವು ನಿಮ್ಮ ಜೀವನದಲ್ಲಿ ಏನನ್ನಾದರು ಪಡೆದಾಗ ನಿಮಗೆ ಒಂದು ಡೋಪಮೈನ್ ಹಿಟ್(hit) ಸಿಗುತ್ತದೆ. ಇದು ನಿಮ್ಮನ್ನು ಮುಂದುವರೆಯಲು ಪ್ರೇರೇಪಿಸುತ್ತದೆ. ನಿಮ್ಮ ದೊಡ್ಡ ಗುರಿಯನ್ನು ಚಿಕ್ಕ ಚಿಕ್ಕ ಗುರಿಯನ್ನಾಗಿಸಿ, ಅದನ್ನು ನೀವು ಮುಟ್ಟುತ್ತಾ ಬಂದರೆ ನಿಮಗೆ ಡೋಪಮೈನ್ ಹಿಟ್ ಸಿಗುತ್ತದೆ ಮತ್ತು ನೀವು ನಿರಂತರವಾಗಿ ಕೆಲಸ ಮಾಡಲು ಸ್ಫೂರ್ತಿ(inspire) ಪಡರೆಯುತ್ತೀರಾ.

ನಿಮ್ಮ ಬದುಕಿನಲ್ಲಿ ಏನಾಗುತ್ತದೆ ಎಂಬುದನ್ನು ತಿಳಿಯಲು ನಿಮಗೆ ಸಾಧ್ಯವಿಲ್ಲ. ಆದರೆ ನೀವು ನಿಮ್ಮ ಪ್ರತಿಕ್ರಿಯೆ(reaction) ಅನ್ನು ಕಂಟ್ರೋಲ್ ಮಾಡಬಹುದು. ರಿಚರ್ಡ್ ಬ್ರಾನ್ಸನ್ ರೀತಿ ನೀವು ನಿಮ್ಮ ಗುರಿಯ ಹತ್ತಿರ ಪಾಸಿಟಿವ್ ಹೆಜ್ಜೆಗಳನ್ನು ಹಾಕುತ್ತಾ ಹೋಗಬಹುದು. ಆದರೆ ನಿಮ್ಮ ಸುತ್ತಮುತ್ತಲಿನ ಜಗತ್ತನ್ನು ಪೂರ್ತಿಯಾಗಿ ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ.

ಇದರರ್ಥ ಬದುಕಿನಲ್ಲಿ ನಮಗೆ ಯಾವಾಗಲಾದರೂ ಕಹಿ ಅನುಭವಗಳು ಆಗುತ್ತವೆ. ಆದರೆ ಬದುಕಿನಲ್ಲಿ ಒಳ್ಳೆಯ ವಿಷಯ ನಡೆದಾಗ ಅದನ್ನು ಪೂರ್ತಿಯಾಗಿ ಆನಂದಿಸಿ.

ನಿಮ್ಮನ್ನು ಅಸಡ್ಡೆ ಭಾವದಿಂದ ನೋಡುವ ಬದಲು ನಿಮ್ಮನ್ನು ನೀವು ಇಷ್ಟಪಡಿ. ಒಳ್ಳೆಯದೋ ಕೆಟ್ಟದ್ದೋ ಎಲ್ಲರಿಗೂ ಆಗುತ್ತದೆ. ಆದರೆ ನೀವೇ ದೋಷಿ ಎಂದುಕೊಂಡರೆ ನಿಮ್ಮ ಉಪಪ್ರಜ್ಞೆ ಮನಸ್ಸು ಅಲ್ಲಿಗೆ ಕರೆದುಕೊಂಡು ಹೋಗುತ್ತದೆ ಮತ್ತು ನಿಮ್ಮಗೆ ಅಲ್ಲಿಂದ ಹೊರ ಬರಲು ಸಾಧ್ಯವಾಗುವುದಿಲ್ಲ.

ಇದರರ್ಥ ನೀವು ದುಃಖಪಡಬಾರದು ಎಂಬುದಲ್ಲ. ಇದು ನೀವು ಒಂದು ಸನ್ನಿವೇಶವನ್ನು ಯಾವ ರೀತಿಯ ಆಯ್ಕೆಯಲ್ಲಿ ನೋಡುತ್ತೀರ ಎಂಬುದರ ಮೇಲೆ ನಿಂತಿದೆ. ನೀವು ಏನನ್ನು ಮಾಡುತ್ತೀರೋ ಅದು ನಿಮ್ಮಲ್ಲಿನ ವೈಬ್ರೇಷನ್ಗೆ ಕಾರಣವಾಗಿದೆ ಮತ್ತು ಇದರ ಫಲಿತಾಂಶ ನಿಮ್ಮ ರಿಯಲಿಟಿಗೆ ಪ್ರಭಾವ(impact) ಬೀರುತ್ತದೆ.

ನೀವು ಯಾವಾಗಲೂ ನಿಮ್ಮನ್ನೇ ದೋಷಿಯೆಂದುಕೊಂಡರೆ ನಿಮ್ಮಲ್ಲಿ ಯಾವಾಗಲೂ ಕಡಿಮೆ ಫ್ರಿಕ್ವೆನ್ಸಿ ವೈಬ್ರೇಷನ್ ಇರುತ್ತದೆ. ಇದರಿಂದ ಬದುಕು ನಿಮ್ಮನ್ನು ದೋಷಿಯ ರೀತಿಯಲ್ಲೇ ನೋಡುತ್ತದೆ. ಇನ್ನೊಂದು ರೀತಿಯಲ್ಲಿ ನೀವು ನಿಮ್ಮ ಕೆಟ್ಟ ಅನುಭವಗಳನ್ನು ಅವಕಾಶಗಳಂತೆ ನೋಡಿ ತಿದ್ದುಕೊಂಡರೆ, ನಿಮಗೆ ಹೈಯರ್ ಫ್ರಿಕ್ವೆನ್ಸಿ ವೈಬ್ರೇಟ್ ಆಗುತ್ತದೆ. ಇದರಿಂದ ನಿಮ್ಮಲ್ಲಿ ಪಾಸಿಟಿವ್ ಯೋಚನೆ ಹೆಚ್ಚುತ್ತಾ ಹೋಗುತ್ತದೆ. ನೀವು ನಿಮ್ಮ ಭವಿಷ್ಯವನ್ನು ನೆನೆಸಿಕೊಂಡು ಪ್ರಚೋದನೆಯಲ್ಲಿರುತ್ತೀರಾ(excite).

ಕೆಟ್ಟ ವಸ್ತುಗಳು ನಿಮಗೆ ದುಃಖ ನೀಡುತ್ತದೆ. ಆದರೆ ನಿಮ್ಮನ್ನು ಶಕ್ತಿಯುತವಾಗಿಸುತ್ತದೆ.

ಯಾವ ವಸ್ತು ನಿಮ್ಮ ಜೀವವನ್ನು ತೆಗೆದುಕೊಳ್ಳುವುದಿಲ್ಲವೋ ಅದು ನಿಮ್ಮನ್ನು ಶಕ್ತಿಯುತವಾಗಿಸುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ನಿಮಗೆ ಕೆಟ್ಟದಾದರೂ ಅದರಲ್ಲಿ ನನಗೆ ಏನೇನು ಆಗುತ್ತದೆ ಎಂಬುದನ್ನು ನೀವು ನೋಡಿ. ಯಾವುದಾದರೂ ಸಮಸ್ಯೆ ನಿಮ್ಮ ಜೀವನದಲ್ಲಿ ಬಂದರೆ ಅದು ಏಕೆ ಬಂತು ಎಂದು ಹೇಳಬೇಡಿ. ಬದಲಿಗೆ ಅದನ್ನು ಸ್ವಾಗತಿಸಿ ಅದರಿಂದ ಕಲಿಯಿರಿ. ಅದರಿಂದ ಕಲಿತದ್ದನ್ನು ಒಂದು ಡೈರಿಯಲ್ಲಿ ಬರೆಯಿರಿ ಮತ್ತು ಸಮಯ ಸಿಕ್ಕಾಗಲೆಲ್ಲ ಓದುತ್ತೀರಿ. ನೀವೊಂದು ತಪ್ಪನ್ನು ಪುನಃ ಮಾಡುವುದನ್ನು ನಿಲ್ಲಿಸಿದರೆ, ನಿಮ್ಮ ಎಫಿಷಿಯನ್ಸಿ ಹೆಚ್ಚುತ್ತಾ ಹೋಗುತ್ತದೆ. ವಸ್ತುಗಳು ಕೆಟ್ಟದ್ದೋ ಅಥವಾ ಒಳ್ಳೆಯದು ಅದು ನಿಮ್ಮನ್ನು ಉತ್ತಮ ಮಾಡುತ್ತದೆ. ಆದರೆ ನೀವು ಅದನ್ನು ನೆಗೆಟಿವ್ ಆಗಿ ತೆಗೆದುಕೊಳ್ಳುವ ಬದಲು ಪಾಸಿಟಿವ್ ಆಗಿ ತೆಗೆದುಕೊಳ್ಳಿ ಮತ್ತು ಅದರಿಂದ ಏನನ್ನಾದರೂ ಕಲಿಯಲು ಪ್ರಯತ್ನಿಸಿ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments