Hitler Life | ಹಿಟ್ಲರ್ ಜೀವನದ ಎಂಟು ಸಂಗತಿಗಳು
Info Mind 4150
Watch Video
ಯುದ್ಧ, ಪರಮಾಣು ವಿಸ್ಫೋಟ, ಜಾಗತಿಕ ತಾಪಮಾನ ಇನ್ನೂ ಏನೇನೋ ತಡೆದುಕೊಳ್ಳುತ್ತಿದೆ ನಮ್ಮ ಭೂಮಿ. ಅಷ್ಟಕ್ಕೂ ಇದಕ್ಕೆಲ್ಲ ಕಾರಣ ಯಾರು ನಾವು ಮನುಷ್ಯರೇ. ಆದರೆ ನಮ್ಮ ಸುಂದರವಾದ ಭೂಮಿಯ ಈ ರೀತಿ ಕಾಣಲು ಎಷ್ಟು ಸಮಯ ತೆಗೆದುಕೊಂಡಿತು ಎಂದು ನಿಮ್ಮಗೆ ತಿಳಿದಿದ್ದೇಯೆ.
ನಮ್ಮ ಅತ್ಯಂತ ಮೌಲ್ಯವಾದ ಎಷ್ಟು ವರ್ಷಗಳ ಪರಿಶ್ರಮದ ಫಲ ಎಂದು ನಿಮಗೆ ತಿಳಿದಿದೆಯೇ? ಬನ್ನಿ ನಾವು ಇಂದು ಸಮಯದ ಹಿಂದೆ ಹೋಗೋಣ ಮತ್ತು ನಮ್ಮ ಗ್ರಹ ಕಲ್ಲಿನಿಂದ ಜೀವಿಗಳು ಸಮೃದ್ಧಿಯಾಗುವ ತನಕ ಬಂದ ದಾರಿಯನ್ನು ನೋಡೋಣ. ಸಮಯದ ಹಿಂದೆ ಹೋಗೋಣ.
ನಮ್ಮ ಸೌರಮಂಡಲ ಮತ್ತು ಅದರಲ್ಲಿ ಈಗ ತಾನೇ ಹುಟ್ಟಿದ ಒಂದು ನಕ್ಷತ್ರದ ಸುತ್ತ ಬಂಡೆಗಳು ತೇಲಾಡುತ್ತಿವೆ. ಇಲ್ಲಿ ನಮ್ಮ ಭೂಮಿಯ ಒಂದು ಚಿಕ್ಕ ಗುರುತು ಸಹ ಇಲ್ಲ. ನಾವು ಸಮಯದಲ್ಲಿ ತುಂಬಾ ಹಿಂದೆ ಬಂದಿದ್ದೇವೆ. ಇನ್ನು ಭೂಮಿ ಆಗುವ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಆದರೂ ಅದಕ್ಕೆ ಬೇಕಾದದ್ದು ಇಲ್ಲಿ ಇದೆ.
ಇಲ್ಲಿರುವ ಬಂಡೆಗಳು ಗುರುತ್ವಾಕರ್ಷಣೆಯಿಂದ ಒಂದಕ್ಕೊಂದು ಡಿಕ್ಕಿ ಹೊಡೆದು ಒಂದಾಗುತ್ತಿವೆ. ಲಕ್ಷಗಳಷ್ಟು ವರ್ಷಗಳ ನಂತರ ಈ ಬಂಡೆಗಳು ಬೆಂಕಿಯ ಚೆಂಡಾಗಿದೆ. ಇದನ್ನು ನಾವು ಭೂಮಿ ಎನ್ನಲು ಸಾಧ್ಯವಿಲ್ಲ. ಏಕೆಂದರೆ ಇದು ತುಂಬಾ ಬಿಸಿಯಾಗಿದೆ. ಈ ಗ್ರಹ ಈಗಿನ ನಮ್ಮ ಶುಕ್ರಗ್ರಹಕ್ಕೆ(venus) ಸಮವಾಗಿದೆ.
ಇದನ್ನು ಓದಿ: ಜಪಾನ್ ಜಗತ್ತಿಗಿಂತ ವರ್ಷಗಳಷ್ಟು ಏಕೆ ಮುಂದಿದೆ?ಭೂಮಿಯ ನೆಲ ಪೂರ್ತಿಯಾಗಿ ಜ್ವಾಲಾಮುಖಿಯಿಂದ ತುಂಬಿದೆ. ಇದರ ಮೇಲೆ ನೀವು ಕಾಲಿಟ್ಟರೆ ನಿಮ್ಮ ಕಾಲೇ ಇರುವುದಿಲ್ಲ. ಈಗ ಭೂಮಿಯ ನೆಲದ ತಾಪಮಾನ 1,200° C ನಷ್ಟು ಇದೆ. ಇದು ಯಾವುದೇ ನರಕಕ್ಕಿಂತ ಕಡಿಮೆಯಲ್ಲ. ಇಲ್ಲಿ ಆಮ್ಲಜನಕದ ಗುರುತೇ ಇಲ್ಲ. ಭೂಮಿಯ ಮೇಲೆ ಕ್ಷುದ್ರಗ್ರಹದ(asteroid) ಮಳೆ ಆಗುತ್ತಲೇ ಇದೆ. ಇದರಿಂದ ನೆಲದ ಮೇಲೆ ಜ್ವಾಲಾಮುಖಿಯ ನದಿಗಳು ಹರಿಯುತ್ತಿವೆ.
ಇಲ್ಲಿ ಬೀಳುತ್ತಿರುವ ಕ್ಷುದ್ರಗ್ರಹಗಳು ಎಲ್ಲೋ ದೂರದಿಂದ ಬಂದಿರುವುದಲ್ಲ. ಇವುಗಳು ಭೂಮಿಯ ಪಕ್ಕದಲ್ಲೇ ಇದ್ದವು. ನಿಮಗೆ ಇಲ್ಲಿ ಮೇಲೆ ಒಂದು ಗ್ರಹ ಕಾಣುತ್ತಿರಬಹುದು. ಅದು ತುಂಬಾ ವೇಗದಲ್ಲಿ ಭೂಮಿಯ ಕಡೆ ಬರುತ್ತಿದೆ. ಸೆಕೆಂಡಿಗೆ 15 ಕಿ.ಮೀನಷ್ಟು ವೇಗದಲ್ಲಿ ಅದು ಬರುತ್ತಿದೆ. ಇದರ ಸ್ವಾಗತವನ್ನು ನಾವು ಮಾಡಲೇಬೇಕು. ಏಕೆಂದರೆ ಇದರ ಡಿಕ್ಕಿಯಿಂದಲೇ ಚಂದ್ರನು ಹುಟ್ಟಲಿದ್ದಾನೆ.
ಈಗ ನಮ್ಮ ಭೂಮಿಯ ನಾಲ್ಕು ಕಡೆ ಎಣಿಸಲಾಗದಷ್ಟು ಬಂಡೆಗಳಿಂದ ಆವರಿಸಿದೆ. ಇಲ್ಲಿ ಎಷ್ಟು ಬಂಡೆಗಳಿವೆ ಎಂದರೆ ಭೂಮಿಯ ಸುತ್ತ ಶನಿಗ್ರಹದ ರೀತಿ ಉಂಗುರಗಳು(rings) ಆಗಿದೆ. ಈ ಉಂಗುರಗಳು ಶನಿಗ್ರಹದ ರೀತಿಯೇ ಎರಡು ಭಾಗವಾಗಿದೆ. ಒಂದು ಈಗಿನ ಭೂಮಿ ಮತ್ತು ಚಂದ್ರನಿರುವ ಮಧ್ಯದ ಭಾಗದಲ್ಲಿದೆ. ಇನ್ನೊಂದು ಚಂದ್ರನ ಹಿಂದೆ ಇದೆ.
ಕ್ಷುದ್ರಗ್ರಹಗಳು ಮತ್ತೊಮ್ಮೆ ಭೂಮಿಯ ಮೇಲೆ ಬೀಳುತ್ತಿವೆ. ಆದರೆ ಕ್ಷುದ್ರಗ್ರಹದ ಮಳೆ ಇನ್ನೂ ಪ್ರಾರಂಭವಾಗಿಲ್ಲ. ಭೂಮಿಯ ಗುರುತ್ವಾಕರ್ಷಣೆಯಿಂದ 3,000 ಕಿ.ಮೀ ವಿಸ್ತೀರ್ಣವನ್ನು ಹೊಂದಿರುವ ಒಂದು ಬೆಂಕಿಯ ಚೆಂಡಾಗಿ ಈ ಕ್ಷುದ್ರಗ್ರಹಗಳು ಕೂಡಿವೆ. ಇದೇ ನಮ್ಮ ಚಂದ್ರನು ಹುಟ್ಟುವುದಕ್ಕೆ ಕಾರಣವಾಗಿದೆ.
ಈಗ ಸದ್ಯಕ್ಕೆ ಚಂದ್ರನ ಮೇಲೆ ಈಗಿನ ರೀತಿ ಯಾವುದೇ ಕಲೆಯಿಲ್ಲ ಮತ್ತು ಇದು ನಮ್ಮಗೆ ಭೂಮಿಗೆ ತುಂಬಾ ಹತ್ತಿರದಲ್ಲಿದೆ. ಇದರಿಂದ ಇದು ಇಷ್ಟು ದೊಡ್ಡದಾಗಿ ಕಾಣುತ್ತಿದೆ. ಇದರ ನೆಲವು ಪೂರ್ತಿ ಬಿಸಿಯಾದ ಲಾವಾದಿಂದ ಕೂಡಿದೆ. ಭೂಮಿಗೆ ಇಷ್ಟು ಹತ್ತಿರವಿರುವ ಕಾರಣ ಇದು ತನ್ನ ಗುರುತ್ವಾಕರ್ಷಣೆಯನ್ನು ಭೂಮಿಯ ಮೇಲೆ ಹಾಕುತ್ತಿದೆ.
ಇದನ್ನು ಓದಿ: ಕರ್ನಾಟಕದ ಇತಿಹಾಸ30 ಲಕ್ಷ ವರ್ಷಗಳ ನಂತರ ನಮ್ಮ ಸೌರಮಂಡಲದಲ್ಲಿ ನಿಮಗೆ ಗೊತ್ತಿರದ ಒಂದು ಘಟನೆ ನಡೆಯಲಿದೆ. ನಮ್ಮ ಸೌರಮಂಡಲದ ಅನಿಲ ದೈತ್ಯ(gas gient) ಗ್ರಹಗಳು ತಮ್ಮ ಕಕ್ಷೆಯಲ್ಲಿ(orbit) ಬದಲಾವಣೆಯನ್ನು ಮಾಡಿಕೊಳ್ಳುತ್ತಿವೆ. ಇದರಿಂದ ಸೌರಮಂಡಲದಲ್ಲಿರುವ ಕ್ಷುದ್ರಗ್ರಹ ಮತ್ತು ಧೂಮಕೇತುಗಳಲ್ಲಿ(comet) ಗುರುತ್ವಾಕರ್ಷಣೆ ಉಂಟಾಗುತ್ತಿದೆ.
ಈ ಕ್ಷುದ್ರಗ್ರಹಗಳನ್ನು ಸೌರಮಂಡಲದ ಒಳಭಾಗಕ್ಕೆ ಕಳುಹಿಸುತ್ತಿವೆ. ಇದರಿಂದಾಗಿಯೇ ನಮ್ಮ ಚಂದ್ರನಿಗೆ ಅದರ ಕಲೆ ಸಿಗಲಿದೆ. ಈ ಘಟನೆಯನ್ನು 'The Late Heavy Bombardment' ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ನಮ್ಮ ಚಂದ್ರ ತುಂಬಾ ಬಿಸಿಯಾಗಿದ್ದಾನೆ. ಇದು ಆಕಾಶದಲ್ಲಿ ಯಾವುದೋ ನಕ್ಷತ್ರದ ರೀತಿ ಹೊಳೆಯುತ್ತಿದೆ. ಇದು ಭೂಮಿಗೆ ತುಂಬಾ ಹತ್ತಿರವಿದ್ದ ಕಾರಣ ಇದರ ಗುರುತ್ವಾಕರ್ಷಣೆ ಭೂಮಿಯ ಮೇಲೆ ಈಗಿನಕ್ಕಿಂತ 50 ಪಟ್ಟು ಹೆಚ್ಚಿದೆ.
ನಮ್ಮ ಭೂಮಿಯ ಮೇಲಿನ ಒಂದು ದಿನ 24 ಗಂಟೆಯ ಬದಲು 6 ಗಂಟೆ ಇರುತ್ತಿತ್ತು. ಇದರಿಂದಾಗಿ ಇಲ್ಲಿರುವ ಲಾವಾಗಳು ಈಗಿನ ಸಮುದ್ರದ ನೀರಿಗಿಂತ 20 ಪಟ್ಟು ಹೆಚ್ಚು ಹಾರುತ್ತಿದ್ದವು. ಚಂದ್ರ ಸಮಯದೊಂದಿಗೆ ನಮ್ಮ ಭೂಮಿಯಿಂದ ದೂರ ಹೋಗುತ್ತಿದ್ದ, ಇದರಿಂದ ನಮ್ಮ ಭೂಮಿಯ ತಿರುಗುವ ವೇಗ ಕಡಿಮೆಯಾಗುತ್ತಾ ಬಂತು ಮತ್ತು ಲಾವಾದ ನದಿಗಳು ತಣ್ಣಗಾಗುತ್ತಿದೆ. ಇದರಿಂದ ಭೂಮಿಯ ನೆಲದ ನಿರ್ಮಾಣವಾಯಿತು.
ಈಗ ಆಕಾಶದಲ್ಲಿ ನಿಮಗೆ ಕೇವಲ ಚಂದ್ರನಷ್ಟೇ ಅಲ್ಲದೆ ಇನ್ನೂ ಎರಡು ಹೊಳೆಯುವ ನಕ್ಷತ್ರಗಳು ಕಾಣುತ್ತವೆ. ಆದರೆ ಅವುಗಳು ನಕ್ಷತ್ರಗಳಲ್ಲ, ಅವೆರಡು ಗುರು ಮತ್ತು ಶನಿ ಗ್ರಹಗಳಾಗಿವೆ. ಸೌರಮಂಡಲದ ಒಳಭಾಗದಲ್ಲಿರುವ ನಮ್ಮ ಗ್ರಹ ಭೂಮಿ, ಶುಕ್ರ, ಬುಧ ಮತ್ತು ಮಂಗಳ ಕಲ್ಲಿನ ಗ್ರಹಗಳಾಗಿವೆ. ಇದರಿಂದ ಇವುಗಳು ತುಂಬಾ ಸಮಯದವರೆಗೆ ಕರಗಿದ ಲಾವಾದ(lava) ರೂಪದಲ್ಲಿ ಇರಲು ಸಾಧ್ಯವಿಲ್ಲ.
ಆದರೆ ಗುರು ಮತ್ತು ಶನಿಗ್ರಹಗಳು ಅನಿಲ ದೈತ್ಯ ಗ್ರಹಗಳಾಗಿವೆ. ಇದರಿಂದ ಅವುಗಳು ಸುಲಭವಾಗಿ ಅನೇಕ ಸಮಯಗಳವರೆಗೆ ಬಿಸಿಯಾಗಿರಬಹುದು. ಭೂಮಿಯ ಜನ್ಮದ ಈ ಸಮಯದಲ್ಲಿ ಗುರುಗ್ರಹದ ತಾಪಮಾನ 5,000° C ಇತ್ತು ಮತ್ತು ಶನಿಗ್ರಹದ ತಾಪಮಾನ 3,000° C ಇತ್ತು. ಇದರರ್ಥ ಆ ಸಮಯದಲ್ಲಿ ಗುರು ಗ್ರಹ ನಮ್ಮ ಸೂರ್ಯನಿಗಿಂತ ಹೆಚ್ಚಾಗಿ ಹೊಳೆಯುತ್ತಿತ್ತು. ನಕ್ಷತ್ರಗಳು ಅವುಗಳ ಕಾಲ ಕಳೆದಂತೆ ಹೆಚ್ಚು ಹೊಳೆಯುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹೀಗಾಗಿ ನಮ್ಮ ಸೂರ್ಯ ಆ ಸಮಯದಲ್ಲಿ ಈಗಿನಕ್ಕಿಂತ 30 ಪಟ್ಟು ಕಡಿಮೆ ಹೊಳೆಯುತ್ತಿದ್ದನು.
ಇದನ್ನು ಓದಿ: ಪಿರಮಿಡ್‌ಗಳನ್ನು ಏಕೆ ಮತ್ತು ಹೇಗೆ ಮಾಡಲಾಯಿತು?400 ಕೋಟಿ ವರ್ಷಗಳಲ್ಲಿ ಸೌರಮಂಡಲದ ಎಲ್ಲ ಗ್ರಹಗಳ ತಣ್ಣಗಾಗುತ್ತವೆ. ಬನ್ನಿ ಈಗ ಭೂಮಿಯ ಕಡೆ ಹೋಗೋಣ. ಭೂಮಿಯ ವಾತಾವರಣದಲ್ಲಿ ಈಗ ಸದ್ಯಕ್ಕೆ ಒಂದೇ ಗ್ಯಾಸ್ ಇದೆ, ಅದುವೇ ಮೀಥೇನ್(methane). ಇದನ್ನು ನೀವು ಉಸಿರಾಡಿದರೆ ನೀವು ಸತ್ತೇ ಹೋಗುತ್ತೀರಾ. Late Heavy Bombardನಿಂದಾಗಿ ಭೂಮಿಯ ಮೇಲೆ ಹಲವಾರು ಧೂಮಕೇತುಗಳ ಮಳೆಯೂ ಆಗುತ್ತಿವೆ.
ಧೂಮಕೇತುಗಳು ತಮ್ಮ ಜೊತೆ ನೀರನ್ನು ತಂದಿದ್ದವು ಎಂದು ಹೇಳಲಾಗುತ್ತದೆ. ಇದರ ನೀರು ಭೂಮಿಯ ಮೇಲೆ ಸಮುದ್ರದ ನಿರ್ಮಾಣ ಮಾಡಿದ್ದವು. ಈಗ ಭೂಮಿಯ ನಾಲ್ಕು ದಿಕ್ಕಿನಿಂದಲೂ ಸಮುದ್ರಗಳಿಂದ ಆವರಿಸಿಕೊಂಡಿದೆ.
ಇಲ್ಲಿ ಕಾಲಿಡಲು ನೆಲವು ಇರಲಿಲ್ಲ, ಉಸಿರಾಡಲು ಆಮ್ಲಜನಕವೂ ಇರಲಿಲ್ಲ. ನಮ್ಮ ಗ್ರಹ ಈಗ ಭೂಮಿ ಎನ್ನುವಂತೆ ಇದೆ. ಆದರೂ ಇದರಲ್ಲಿ ಜೀವಾಂಶದ ಗುರುತೇ ಇಲ್ಲ. ಹಾಗಿದ್ದರೆ ಭೂಮಿಯ ಮೇಲೆ ಜೀವಾಂಶ ಹೇಗೆ ಹುಟ್ಟಿತು.
ಭೂಮಿಯ ಮೇಲೆ ಅಪ್ಪಳಿಸಿದ ಧೂಮಕೇತುಗಳು ನೀರಿನ ಜೊತೆ ಸಾರಜನಕ(nitrogen) ಅನಿಲವನ್ನು ತಂದಿದ್ದವು. ಭೂಮಿಯ ವಾತಾವರಣ ವಿಷಕಾರಿ ಅನಿಲಗಳಿಂದ ತುಂಬಿತ್ತು. ವಾತಾವರಣದಲ್ಲಿ ಆಮ್ಲಜನಕವೇ ಇರಲಿಲ್ಲ. ಈಗ ಇಲ್ಲಿನ ಪರಿಸ್ಥಿತಿ ಬದಲಾಗಲಿದೆ.
ಈ ಸಮಯದಲ್ಲಿ ನಮ್ಮ ಗ್ರಹದ ಮೇಲೆ ಮತ್ತೊಮ್ಮೆ ಕ್ಷುದ್ರಗ್ರಹಗಳ ಮಳೆಯಾಗಲು ಪ್ರಾರಂಭವಾಯಿತು. ಈ ಬಾರಿ ಕ್ಷುದ್ರಗ್ರಹಗಳು ನೀರನ್ನು ಅಷ್ಟೇ ಅಲ್ಲದೆ ಭೂಮಿಯ ಮೇಲೆ ಜೀವಿಗಳನ್ನು ರೂಪಿಸುವ ವಿಶಿಷ್ಟ ವಸ್ತುಗಳನ್ನು ತಂದಿತ್ತು, ಅದುವೇ ಖನಿಜ(mineral). ಇಷ್ಟೇ ಅಲ್ಲದೆ ಇವುಗಳು ಪ್ರೋಟೀನ್, ಕಾರ್ಬನ್ ಮತ್ತು ಅಮೈನೋ ಆಸಿಡ್‍ಗಳನ್ನು ಕೂಡ ಸಮುದ್ರದ ಆಳದವರೆಗೆ ತೆಗೆದುಕೊಂಡು ಹೋಯಿತು.
ಸಮುದ್ರದ ಆಳದಲ್ಲಿ ತಾಪಮಾನ ತುಂಬಾ ಕಡಿಮೆ ಇತ್ತು. ಸೂರ್ಯನ ಬೆಳಕು ಅಲ್ಲಿಯವರೆಗೂ ತಲುಪುತ್ತಲೇ ಇರಲಿಲ್ಲ. ಸಮುದ್ರದ ಆಳದಲ್ಲಿರುವ ಚಿಕ್ಕ ಚಿಮಿಣಿಗಳು(chimny) ಅಲ್ಲಿರುವ ನೀರನ್ನು ಬೆಚ್ಚಗೆ ಇಡುತ್ತಿದ್ದವು. ಇಲ್ಲೇ ಮೊದಲ ಜೀವಿಯ ಬೀಜದ ಶುರುವಾಯಿತು. ಅದು ಹೇಗೆ ಸಾಧ್ಯವಾಯಿತು ಗೊತ್ತಿಲ್ಲ, ಆದರೆ ಆ ರಾಸಾಯನಗಳು ಒಟ್ಟಿಗೆ ಪ್ರಕ್ರಿಯೆಗಳನ್ನು ಮಾಡಿ, ಜೀವಾಂಶವನ್ನು ರೂಪಿಸಿದ್ದವು.
ಹೀಗೆ ಜೀವಿಯ ಮೊದಲ ಕೋಶದ ನಿರ್ಮಾಣವಾಯಿತು. ಇವುಗಳು ಒಂದು ರೀತಿಯ ಬ್ಯಾಕ್ಟೀರಿಯಾಗಳಾಗಿದ್ದವು ಮತ್ತು ಸಮುದ್ರದಲ್ಲಿ ಅತ್ಯಂತ ವೇಗದಲ್ಲಿ ಬೆಳೆಯುತ್ತಿದ್ದಾವು. ಹೀಗೆ ಸಮುದ್ರದ ನೀರು ಈ ರೀತಿಯ ಕೋಶಗಳಿಂದ ತುಂಬಿತ್ತು.
ಸಮುದ್ರದಲ್ಲಿ ಈ ಕೋಶಗಳ ಸಂಖ್ಯೆ ಹೆಚ್ಚಾಯಿತು. ಇದರಿಂದ ಇವುಗಳ ಒಟ್ಟಿಗೆ ಕೂಡಿ ಒಂದು ರೀತಿಯ ಕಲ್ಲಿನ ಕಾಲ ತೆಗೆದುಕೊಂಡವು. ಇದನ್ನು ಸ್ಟ್ರೋಮಾಟೋಲೈಟ್ಸ್(stromatolites) ಎಂದು ಕರೆಯಲಾಗುತ್ತದೆ. ಇಲ್ಲಿ ಕಾಣುವ ಒಂದೊಂದು ಬ್ಯಾಕ್ಟೀರಿಯಗಳು ಒಂದು ಸಮೂಹವಾಗಿತ್ತು. ಇವುಗಳು ಸೂರ್ಯನ ಬೆಳಕಿನಿಂದ ಆಹಾರವನ್ನು ತಯಾರಿಸುತ್ತಿದ್ದವು.
ಇದನ್ನೇ ನಾವು ದ್ಯುತಿಸಂಶ್ಲೇಷಣೆ(photosynthesis) ಎಂದು ಕರೆಯುತ್ತೇವೆ. ಇವುಗಳು ಆಮ್ಲಜನಕವನ್ನು ಬಿಡಲು ಪ್ರಾರಂಭಿಸಿದವು. ಹೀಗೆ 200 ಕೋಟಿ ವರ್ಷಗಳಲ್ಲಿ ಭೂಮಿಯ ಮೇಲೆ ಆಮ್ಲಜನಕದ ಪ್ರಮಾಣ ಏರುತ್ತಲೇ ಬಂತು.
ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್ಭೂಮಿಯ ಮೇಲೆ ಯಾವುದೇ ಸಂಕೀರ್ಣ ಜೀವಿಯ ಜನ್ಮವಾಗಿರಲಿಲ್ಲ ಮತ್ತು ಯಾವುದೇ ದೊಡ್ಡ ದೊಡ್ಡ ದ್ವೀಪಗಳು ಇರಲಿಲ್ಲ. ಭೂಮಿಯ ಮೇಲೆ ಚಿಕ್ಕ ಚಿಕ್ಕ ದ್ವೀಪಗಳಿದ್ದವು, ಅವುಗಳ ನೀರಿನಿಂದ ಸುತ್ತುವರೆದಿದ್ದವು. ಆದರೆ ಈಗ ಭೂಮಿಯ ಹೊರಪದರ(crust) ತುಂಡಾಗಿ ಭೂಮಿಯ ನೆಲ ಹಲವಾರು ಟೆಕ್ಟೋನಿಕ್ ಪ್ಲೇಟ್ ಆಗಿ ಬೇರ್ಪಟ್ಟವು.
ನಂತರ ಈ ಪ್ಲೇಟ್ ಚಲನೆಯಿಂದಾಗಿ ಈ ಚಿಕ್ಕ ಚಿಕ್ಕ ದ್ವೀಪಗಳು ಒಟ್ಟಿಗೆ ಕೂಡಿ ಒಂದು ಸೂಪರ್ ಖಂಡದ(continent) ನಿರ್ಮಾಣ ಮಾಡಿದವು. ಅದರ ಹೆಸರೇ ರೊಡಿನಿಯ ಈ ಸಮಯದಲ್ಲಿ ಭೂಮಿಯ ತಾಪಮಾನ 30° C ಇತ್ತು ಮತ್ತು ಭೂಮಿಯ ಮೇಲಿನ ಒಂದು ದಿನ 18 ಗಂಟೆಗಳಾಗಿತ್ತು ಆದರೆ ಸಮಯದೊಂದಿಗೆ ಇಲ್ಲಿನ ಪರಿಸ್ಥಿತಿ ಬದಲಾಗುತ್ತದೆ.
ಈಗ ಭೂಮಿ ಬದಲಾಗುತ್ತಿದೆ. ಭೂಮಿಯ ಸೂಪರ್ ಖಂಡವು ಎರಡೂ ಭಾಗದಲ್ಲಿ ಬೇರ್ಪಟ್ಟವು. ಇದರಿಂದ ಆಳದಲ್ಲಿದ್ದ ಲಾವಾ ಭೂಮಿಯ ಮೇಲೆ ಹರಿಯಲು ಪ್ರಾರಂಭಿಸಿದವು. ಇದರಿಂದ ಭೂಮಿಯ ಮೇಲೆ ಕಾರ್ಬನ್ ಡೈ ಆಕ್ಸೈಡ್ ಮತ್ತೊಮ್ಮೆ ಹೆಚ್ಚಿತ್ತು. ಈಗ ಭೂಮಿಯ ವಾತಾವರಣ ಈ ಕಾರ್ಬನ್ ಡೈ ಆಕ್ಸೈಡ್‌ನ ಕಪ್ಪು ಮೋಡಗಳಿಂದ ಆವರಿಸಿಕೊಂಡಿತು. ಈ ಮೋಡಗಳಿಂದ ಆಮ್ಲ ಮಳೆ(acid rain) ಆಗಲು ಪ್ರಾರಂಭಿಸಿತು.
ಈ ಮಳೆಯಲ್ಲಿನ ಕಾರ್ಬನ್ ಭೂಮಿಯ ಮೇಲಿನ ಬಂಡೆಗಳ ಮೇಲೆ ದಪ್ಪವಾದ ಪದರವನ್ನು ಮಾಡಿತು. ಇದರಿಂದ ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್‌ನ ಪ್ರಮಾಣ ಕಡಿಮೆಯಾಗುತ್ತಾ ಬಂತು ಮತ್ತು ಭೂಮಿಯ ವಾತಾವರಣ ಸೂರ್ಯನ ಶಾಖವನ್ನು ಹಿಡಿದುಕೊಳ್ಳುವಷ್ಟು ಗಟ್ಟಿ ಇರಲಿಲ್ಲ. ಇದರಿಂದ ಭೂಮಿಯ ತಾಪಮಾನ ವೇಗವಾಗಿ ಕಡಿಮೆ ಆಯಿತು ಮತ್ತು ಭೂಮಿಯ ಮೇಲೆ ಹಿಮಯುಗ(ice age) ಪ್ರಾರಂಭವಾಯಿತು.
ಈ ಹಿಮಯುಗ ಅತ್ಯಂತ ದೊಡ್ಡ ಹಿಮಯುಗವಾಗಿದೆ. ಆದರೆ ಈ ಹಿಮಯುಗ ಕೂಡ ತುಂಬಾ ಸಮಯ ಇರುವುದಿಲ್ಲ. ಭೂಮಿಯ ಮೇಲೆ ಮತ್ತೊಮ್ಮೆ ಕಾರ್ಬನ್ ಡೈ ಆಕ್ಸೈಡ್‌ನ ಪ್ರಮಾಣ ಏರುತ್ತಾ ಬಂತು. ಇದರಿಂದ ಭೂಮಿಯ ತಾಪಮಾನವು ಹೆಚ್ಚಿತು. ಇದರಿಂದ ಭೂಮಿಯ ಮೇಲೆ ಹಿಮ ಕರಗಿ ಭೂಮಿ ತನ್ನ ಸಾಮಾನ್ಯ ರೂಪಕ್ಕೆ ಬಂದಿತು. ಆದರೆ ಹಿಮಯುಗಕ್ಕಿಂತ ಮುಂಚೆ ಇದ್ದ ಆ ಬ್ಯಾಕ್ಟೀರಿಯಾಗಳಿಗೆ ಏನಾಯಿತು.
ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 5 ಅತ್ಯುತ್ತಮ ವ್ಯಾಯಾಮಗಳುಈಗ ಭೂಮಿಯ ಮೇಲಿನ ಹಿಮ ಕರಗಿ ನೀರಾಗಿತ್ತು. ಈಗ ನಾವು ಸಮುದ್ರದ ಆಳಕ್ಕೆ ಹೋದರೆ ನಮಗೆ ಒಂದು ಹೊಸ ಜಗತ್ತು ಕಾಣಸಿಗುತ್ತದೆ. ಆಮ್ಲಜನಕದ ಕಾರಣದಿಂದ ಈ ಕೋಶಗಳು ವಿವಿಧ ರೀತಿಯ ಜೀವಿಗಳಾಗಿ ಬದಲಾಗಿದ್ದವು. ಇಲ್ಲಿ ಸಮುದ್ರದ ಗಿಡ ಮತ್ತು ದೈತ್ಯಾಕಾರದ ಜೀವಿ ಇದ್ದವು. ಅದನ್ನು ಅನೋಮಲೋಕರಿಸ್(anomalocaris) ಎಂದು ಕರೆಯುತ್ತಾರೆ. ಇವುಗಳು ಕಾಂಪ್ಲೆಕ್ಸ್ ಮಲ್ಟಿ ಸೆಲ್ಯುಲರ್ ಜೀವಿಗಳಾಗಿದ್ದವು.
ಇವುಗಳನ್ನು ಪಿಕಾಯ(pikaya)ಎಂದು ಕರೆಯಲಾಗುತ್ತದೆ. ಇವುಗಳು ಕೇವಲ 5 ಸೆ.ಮೀನಷ್ಟು ಉದ್ದವಿದ್ದವು. ಆದರೆ ಇವುಗಳ ತಮ್ಮ ದೇಹದಲ್ಲಿ ಒಂದು ವಿಶೇಷವಾದದ್ದನ್ನು ಬೆಳೆಸಿಕೊಂಡಿದ್ದವು. ಅದುವೇ ಮುಂದೆ ನಮ್ಮ ದೇಹದ ಅತ್ಯಮೂಲ್ಯ ಅಂಗವಾಗಿತ್ತು, ಅದುವೇ ಬೆನ್ನುಮೂಳೆ(spinal). ಇವುಗಳ ವಿಕಾಸನದಿಂದಲೇ ಅದು ನಮಗೂ ಬಂದಿದೆ.
ಈಗ ಭೂಮಿಯು ನಮಗೆ ಗೊತ್ತಿರುವ ರೀತಿಯೇ ಕಾಣುತ್ತದೆ. ಭೂಮಿಯ ಸೂಪರ್ ಖಂಡಗಳು ಇನ್ನೂ ಅನೇಕ ಭಾಗಗಳಾಗಿ ಬೇರ್ಪಟ್ಟಿತು. ಆದರೂ ಇಲ್ಲಿ ಇನ್ನೂ ನೆಲದ ಮೇಲೆ ವಾಸಿಸುವ ಜೀವಿಗಳು ಇರಲಿಲ್ಲ ಮತ್ತು ಭೂಮಿಯ ಮೇಲೆ ಯಾವುದೇ ಮರ-ಗಿಡವೂ ಇರಲಿಲ್ಲ. ಸೂರ್ಯನಿಂದ ಬರುತ್ತಿದ್ದ ಯುವಿ ಕಿರಣದಿಂದಾಗಿ(uv rays) ಭೂಮಿಯ ಮೇಲೆ ಈ ರೀತಿಯ ಪರಿಸ್ಥಿತಿ ಇತ್ತು. ಆದರೆ ಭೂಮಿಯ ವಾತಾವರಣದಲ್ಲಿ ಒಂದು ವಿಶಿಷ್ಟ ಪದರದ ನಿರ್ಮಾಣವಾಗುತ್ತಿತ್ತು. ಅದನ್ನು ನಾವು ಇಂದು ಓಜೋನ್(ozone) ಎಂದೂ ಕರೆಯುತ್ತೇವೆ.
ಭೂಮಿಯ ಮೇಲಿನ ಆಮ್ಲಜನಕ ಸೂರ್ಯನ ಯುವಿ ಕಿರಣವನ್ನು ತೆಗೆದುಕೊಂಡು ಓಜೋನ್ ಪದರವಾಗಿ ಪರಿವರ್ತಿಸುತ್ತಿತ್ತು. ಇದು ಭೂಮಿಯ ಎಲ್ಲ ಕಡೆ ಯುವಿ ಕಿರಣಗಳನ್ನು ತಡೆಯುವ ಒಂದು ಕಂಬಳಿಯ ರೀತಿ ನಿರ್ಮಾಣ ಮಾಡಿತು. ಇದರಿಂದ ಭೂಮಿಯ ಮೇಲೆ ಚಿಕ್ಕ ಗಿಡಗಳು ಹುಟ್ಟಲು ಪ್ರಾರಂಭಿಸಿದವು.
ಸಮುದ್ರದಲ್ಲಿರುವ ತಿಕ್ತಾಲಿಕ್(tiktaalik) ಎಂಬ ಮೀನು ಮೊದಲ ಬಾರಿಗೆ ಸಮುದ್ರದಿಂದ ಹೊರಗೆ ಬರುವ ನಿರ್ಣಯ ಮಾಡಿತು. ಇದು ತನ್ನ ರೆಕ್ಕೆಯನ್ನು(fins) ತನ್ನ ಕಾಲಿನ ರೀತಿ ಬಳಸಲು ಪ್ರಾರಂಭಿಸಿತು ಮತ್ತು ಸಮಯದೊಂದಿಗೆ ಇದು ಭೂಮಿಯ ನೆಲದ ಮೇಲೆ ತುಂಬಾ ಸಮಯದವರೆಗೆ ಇರಲು ಪ್ರಾರಂಭಿಸಿತು.
ಇದರಿಂದ ಇದರ ಅಂಗಗಳು ವಿಕಸನಗೊಂಡವು. ಹತ್ತಿರ 50 ಲಕ್ಷ ವರ್ಷಗಳ ನಂತರ ಈ ಜೀವಿಗಳು ಪೂರ್ತಿಯಾಗಿ ಭೂಮಿಯ ನೆಲದ ಮೇಲೆ ವಾಸಿಸುವಂತಾಗಿದ್ದಾವು. ಇವುಗಳನ್ನು ಟೆಟ್ರಾಪಾಡ್ಸ್(tetrapods) ಎಂದು ಕರೆಯಲಾಗುತ್ತದೆ.
ಇದನ್ನು ಓದಿ: ಜಗತ್ತಿನ 20 ತೂಕ ಸ್ನೇಹಿ ಆಹಾರಗಳುಈ ಟೆಟ್ರಾಪಾಡ್ಸ್ ಪೂರ್ತಿಯಾಗಿ ವಿಕಸನಗೊಂಡು ಭೂಮಿಯ ನೆಲದ ಮೇಲೆ ವಾಸಿಸಲು ಪ್ರಾರಂಭಿಸಿದವು. ಇದೇ ಮುಂದೆ ಡೈನೋಸೋರ್, ಪಕ್ಷಿ ಮತ್ತು ಮನುಷ್ಯನಾಗಿ ವಿಕಾಸನಗೊಳ್ಳಬೇಕಿತು. ಇಂದಿನಿಂದ ಒಂದು ಹೊಸ ಪ್ರಜಾತಿಯ ನಿರ್ಮಾಣವಾಗಲು ಪ್ರಾರಂಭವಾಯಿತು. ಆದರೆ ಭೂಮಿಯ ಮತ್ತೊಂದು ಕೆಟ್ಟ ಸಮಯ ಶುರುವಾಯಿತು. ಭೂಮಿಯ ಮೇಲೆ ಜೀವಿಗಳ ವಿಕಸನಗೊಳ್ಳುತ್ತಿತ್ತು. ಆದರೆ ಇದರ ಜೊತೆ ಭೂಮಿಯ ವಾತಾವರಣವೂ ಬದಲಾಗುತ್ತಿತ್ತು.
ಭೂಮಿಯ ಮೇಲೆ ಮತ್ತೊಮ್ಮೆ ಜ್ವಾಲಾಮುಖಿಯ ಸ್ಫೋಟವಾಯಿತು.ಈ ವಿಸ್ಫೋಟದಿಂದ ಭೂಮಿಯ ಮೇಲೆ ಬರಗಾಲವಾಗಿ, ಭೂಮಿಯ ಮೇಲಿದ್ದ ಮರಗಳು ಒಣಗಲು ಪ್ರಾರಂಭಿಸಿದ್ದವು. ಇದರಲ್ಲಿ ಅನೇಕ ಜೀವಿಗಳು ಸತ್ತು ಹೋಗಿ ಕೇವಲ 5 ರಷ್ಟು ಜೀವಿಗಳು ಮಾತ್ರ ಉಳಿದಿದ್ದವು.
ಆ 5 ರಷ್ಟು ಜೀವಿಗಳು ಉಳಿಯಲು ಎಲ್ಲವನ್ನು ತಿನ್ನಲು ಪ್ರಾರಂಭಿಸಿದವು ಮತ್ತು ಶಾಖದಿಂದ ಉಳಿದುಕೊಳ್ಳಲು ಭೂಮಿಯ ಒಳಗೆ ಇರಲು ಪ್ರಾರಂಭಿಸಿದವು. ಸಮಯದೊಂದಿಗೆ ಭೂಮಿಯ ವಾತಾವರಣ ಬದಲಾಗುತ್ತಾ ಬಂದಿತು ಮತ್ತು ಭೂಮಿಯ ತಾಪಮಾನವು ಸಾಮಾನ್ಯವಾಯಿತು.
ಈಗ ಭೂಮಿಯ ರೂಪದಲ್ಲಿ ತುಂಬಾ ಬದಲಾವಣೆಗಳಾಗಿದ್ದವು. ಜ್ವಾಲಾಮುಖಿಯ ಸ್ಫೋಟದಿಂದ ಹೊಸ ದೀಪಗಳು ನಿರ್ಮಾಣವಾಗಿತ್ತು. ಇವುಗಳು ಒಟ್ಟಿಗೆ ಕೂಡಿ ಕೂಡಿ ಒಂದು ಸೂಪರ್ ಖಂಡದ ನಿರ್ಮಾಣ ಮಾಡಿತು. ಅದನ್ನು ಪಾಂಜಿಯಾ(pangea) ಎಂದು ಕರೆಯಲಾಗುತ್ಯದೆ.
ಈಗ ಭೂಮಿ ಅಂತರಿಕ್ಷದಿಂದ ಈಗ ಕಾಣುವ ರೀತಿಯೇ ಕಾಣುತ್ತಿದೆ. ಇಷ್ಟೆಲ್ಲಾ ಆದ ನಂತರವೂ ಭೂಮಿಯು ಸಾಮಾನ್ಯವಾಯಿತು. ಭೂಮಿಯ ಮೇಲೆ ಮರ-ಗಿಡಗಳು ಹುಟ್ಟಲು ಪ್ರಾರಂಭಿಸಿದವು. ಭೂಮಿಯ ಮೇಲೆ ಬದುಕುಳಿದಿದ್ದ ಶೇಕಡಾ 5 ರಷ್ಟು ಜೀವಿಗಳು ವಿಕಸನಗೊಂಡು ಒಂದು ಹೊಸ ಪ್ರಜಾತಿಯ ನಿರ್ಮಾಣವಾಯಿತು. ಆ ಪ್ರಜಾತಿಯೇ ಮುಂದಿನ ದಿನಗಳಲ್ಲಿ ಭೂಮಿಯ ಮೇಲೆ ಅದರ ಸಾಮ್ರಾಜ್ಯ ನಡೆಸಲಿದೆ. ಅದುವೇ ಡೈನೊಸೋರ್.
ಇದನ್ನು ಓದಿ: ಡೈನಾಸೋರ್ಗಳ ನಾಶದಿಂದ ಮನುಷ್ಯನ ಅಸ್ತಿತ್ವದ ತನಕಡೈನೊಸೋರ್ ಆ ಮಹಾ ವಿಸ್ಫೋಟದಿಂದ ಉಳಿದ ಶೇಕಡ 5 ರಷ್ಟು ಜೀವಿಗಳಿಂದ ವಿಕಸನಗೊಂಡಿತ್ತು. ಇನ್ನೂ ಈ ಡೈನೊಸೋರ್ ಬಗ್ಗೆ ಹೇಳಬೇಕೆಂದರೆ ಕೆಲವು ಸಸ್ಯಾಹಾರಿಗಳಾಗಿದ್ದರೆ ಕೆಲವು ಮಾಂಸಾಹಾರಿಗಳಾಗಿದ್ದವು, ಕೆಲವು ಕ್ರೂರವಾಗಿದವು. ಡೈನೊಸೋರ್ ಬಗ್ಗೆ ತಿಳಿಯಲು ನೀವು ನಮ್ಮ ಡೈನೊಸೋರ್ ಲೇಖನವನ್ನು ಓದಲೇಬೇಕು.
ಆದರೆ ಅದಕ್ಕೂ ಮೊದಲು ಈ ಲೇಖನವನ್ನು ಶೇರ್ ಮಾಡಿ ಮತ್ತು ಕಮೆಂಟ್ ಮೂಲಕ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
Explore all our Posts by categories.
Info Mind 4150
Info Mind 11517
Info Mind 3824
Info Mind 17534
See all comments...
Munna.n • May 17th,2022
Useful article