Website designed by @coders.knowledge.

Website designed by @coders.knowledge.

Lessons that you learn from Failure | ವೈಫಲ್ಯದಿಂದ ನೀವು ಕಲಿಯಬಹುದಾದ 6 ಪ್ರಮುಖ ಪಾಠಗಳು

Watch Video

ದೊಡ್ಡ ವೈಫಲ್ಯಗಳನ್ನು ಅನುಭವಿಸುವುದು ಜೀವನದ ಕೆಟ್ಟ ವಿಷಯಗಳಲ್ಲಿ ಒಂದಾಗಿದೆ. ಇದು ನಿಮ್ಮನ್ನು ನಕಾರಾತ್ಮಕ ಭಾವನೆಯಿಂದ ತುಂಬುತ್ತದೆ ಮತ್ತು ನಿರುಪಯುಕ್ತ ಭಾವನೆಯನ್ನು ನೀಡುತ್ತದೆ.

ಅದಕ್ಕಾಗಿಯೇ ಹೆಚ್ಚಿನ ಜನರು ವೈಫಲ್ಯವನ್ನು ತಪ್ಪಿಸಲು ಹೊಸತನ್ನು ಎಂದಿಗೂ ಪ್ರಯತ್ನಿಸುವುದಿಲ್ಲ. ಆದರೆ ಸತ್ಯವೆಂದರೆ ವೈಫಲ್ಯ ಸಕಾರಾತ್ಮಕ ಭಾಗವನ್ನು ಹೊಂದಿದೆ.

ವೈಫಲ್ಯವನ್ನು ಅನುಭವಿಸುವುದು ನೀವು ಕಲಿಯದ ಪಾಠಗಳನ್ನು ಕಲಿಸುವಂತೆ ಮಾಡುತ್ತದೆ. ವಾಸ್ತವವಾಗಿ, ಜಗತ್ತಿನ ಯಶಸ್ವಿ ಜನರು ತಮ್ಮ ಹಿಂದಿನ ವೈಫಲ್ಯಗಳಿಂದ ಕಲಿತ ಪಾಠದಿಂದಲೇ ಯಶಸ್ಸನ್ನು ಸಾಧಿಸಲು ಸಾಧ್ಯವಾಯಿತು.

ನೀವು ಇತ್ತೀಚೆಗೆ ದೊಡ್ಡ ವೈಫಲ್ಯವನ್ನು ಅನುಭವಿಸಿದ್ದೀರಾ. ವೈಫಲ್ಯದಿಂದ ನೀವು ಕಲಿಯಬಹುದಾದ ಆರು ಪ್ರಮುಖ ಪಾಠಗಳು ಇಲ್ಲಿವೆ.

ಇದನ್ನು ಓದಿ: ನಿಮ್ಮ ಮನಸ್ಸಿನ ಶಾಂತಿಯನ್ನು ಹೆಚ್ಚಿಸಲು ಐದು ಸರಳ ಮಾರ್ಗಗಳು

1. ವೈಫಲ್ಯವು ಯಶಸ್ಸು ಎಂದಿಗೂ ಖಾತರಿಯಲ್ಲ ಎಂದು ನಿಮಗೆ ತಿಳಿಸುತ್ತದೆ.

success is not permanent failure lessons in kannada
success is temporary

ಕನಸಿನ ಕೆಲಸ, ಆನ್‌ಲೈನ್‌ ವ್ಯವಹಾರ ಅಥವಾ ಯಾವುದೇ ಹೊಸದನ್ನು ಪ್ರಯತ್ನಿಸುತ್ತಿರುವಾಗ ಪ್ರತಿಯೊಬ್ಬರು ಯಶಸ್ಸನ್ನು ಸಾಧಿಸಲು ಬಯಸುತ್ತಾರೆ. ದುರದೃಷ್ಟವಶಾತ್, ಯಶಸ್ಸಿನ ಈ ಬಯಕೆ ಕೆಲವೊಮ್ಮೆ ಸೀಮಿತವಾಗಬಹುದು.

ಉದಾಹರಣೆಗೆ, ಕೆಲವು ಜನರು ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುತ್ತಾರೆ, ಆದರೆ ಅವರು ಅದನ್ನು ಎಂದಿಗೂ ಮಾಡುವುದಿಲ್ಲ. ಏಕೆಂದರೆ ಅವರು ಯಶಸ್ಸನ್ನು ಸಾಧಿಸುತ್ತಾರೆಯೇ ಎಂದು ಖಚಿತವಾಗಿ ತಿಳಿದಿರುವುದಿಲ್ಲ. ಇನ್ನು ಕೆಲವರು ಅವರ ಯಶಸ್ಸಿಗೆ ಸರಿಯಾದ ಸಮಯ ಬರಲು ಕಾಯುತ್ತಿರುತ್ತಾರೆ.

ಆದರೆ ಆ ಸಮಯ ಬರುವುದೇ ಇಲ್ಲ. ವೈಫಲ್ಯವನ್ನು ಅನುಭವಿಸಿದವರು ಯಶಸ್ವು ಎಂದಿಗೂ ಖಾತರಿಯಿಲ್ಲ ಎಂದು ಅರ್ಥ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ನಿಮ್ಮ ನಿಯಂತ್ರಣದ ಹೊರಗಿನ ಅಂಶಗಳಿಂದ ವೈಫಲ್ಯ ಸಂಭವಿಸುತ್ತದೆ. ವೈಫಲ್ಯದಿಂದ ಹೊರಬರಲು ಪ್ರಯತ್ನಿಸುವುದು ನಿಮ್ಮ ಯಶಸ್ಸನ್ನು ಖಾತರಿಪಡಿಸುತ್ತದೆ. ಇದೇ ಯಶಸ್ಸಿಗೆ ಕಾರಣವಾಗುತ್ತದೆ.

ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರ

2. ವೈಫಲ್ಯವು ಬದಲಾವಣೆಯನ್ನು ಸ್ವೀಕರಿಸಲು ನಿಮಗೆ ಕಲಿಸುತ್ತದೆ.

accept life changes failure lessons in kannada
accept changes

ಒಂದೇ ಕೆಲಸವನ್ನು ಮತ್ತೆ ಮತ್ತೆ ಮಾಡುತ್ತಾ, ವಿಭಿನ್ನ ಫಲಿತಾಂಶಗಳನ್ನು ನಿರೀಕ್ಷಿಸುವುದು ಹುಚ್ಚುತನವಾಗಿದೆ ಎಂದು ಆಲ್ಬರ್ಟ್ ಐನ್‍ಸ್ಟೈನ್ ಹೇಳಿದ್ದಾರೆ. ನೀವು ಮೊದಲಿನಂತೆ ಕೆಲಸ ಮಾಡುತ್ತಿದ್ದರೆ, ಇನ್ನು ಹೆಚ್ಚಿನ ವೈಫಲ್ಯವನ್ನು ಎದುರಿಸುತ್ತಲೇ ಇರುತ್ತೀರಿ.

ನಿಮ್ಮ ವೈಫಲ್ಯವನ್ನು ನಿವಾರಿಸಲು ನಿಮ್ಮ ವಿಧಾನದಲ್ಲಿ ಏನನ್ನಾದರೂ ಬದಲಾಯಿಸಬೇಕು. ನಿಮ್ಮ ಕೆಲಸದಲ್ಲಿ ನೀವು ಮಾಡುವ ತಪ್ಪನ್ನು ತಿಳಿದು ತದನಂತರ ಅದನ್ನು ಬದಲಾಯಿಸಲು ಪ್ರಯತ್ನಿಸಿ.

ಇದನ್ನು ಓದಿ: ಸಮಯ ನಿರ್ವಹಣೆಗೆ ಹತ್ತು ಸಲಹೆಗಳು

3. ವೈಪಲ್ಯ ಪ್ರೇರಣೆಯ ಉತ್ತಮ ಮೂಲವಾಗಿದೆ.

motivation from failure in life in kannada
motivation of failure

ಕೆಲವರಿಗೆ ವೈಫಲ್ಯ ಪ್ರೇರಣೆ ಕಸಿದುಕೊಂಡು, ಅವರ ಯಶಸ್ಸನ್ನು ತೊರೆಯುವಂತೆ ಮಾಡುತ್ತದೆ. ಸರಿಯಾದ ಮನಸ್ಥಿತಿ ಹೊಂದಿರುವ ಜನರಿಗೆ ವೈಫಲ್ಯವು ಪ್ರೇರಣೆಯ ಉತ್ತಮ ಮೂಲವಾಗಿದೆ. ಬ್ಯಾಸ್ಕೆಟ್ ಬಾಲ್ ಲೆಜೆಂಡ್ ಮೈಕಲ್ ಜೋರ್ಡಾನ್ ತಮ್ಮ 15ನೇ ವಯಸ್ಸಿನಲ್ಲಿ ತಮ್ಮ ಪ್ರೌಢ ಶಾಲಾ ಬ್ಯಾಸ್ಕೆಟ್ ಬಾಲ್ ತಂಡದ ಭಾಗವಾಗಲು ಬಯಸಿದ್ದರು.

ಆದರೆ ಅವರ ಶಾಲಾ ತರಬೇತುದಾರರು ಅವರು ತಂಡಕ್ಕೆ ಯೋಗ್ಯ ಎಂದು ಭಾವಿಸಿರಲಿಲ್ಲ. ಅಂದು ಮನೆಗೆ ಹೋಗಿ ಅವರು ಅತ್ತರು. ನಂತರ ಅವರು ತಮ್ಮ ತಂಡವೊಂದನ್ನು ರಚಿಸಿ, ಎಷ್ಟು ಸಾಧ್ಯವೋ ಅಷ್ಟು ಕಠಿಣ ತರಬೇತಿ ನೀಡಿದರು. ಅಂತಿಮವಾಗಿ ಅವರು ಪ್ರೌಢಶಾಲಾ ತಂಡದಲ್ಲಿ ಸ್ಥಾನ ಗಳಿಸಿದರು. ಮೈಕಲ್ ಜೋರ್ಡಾನ್ ಅವರಂತೆಯೇ ನಿಮ್ಮ ವೈಫಲ್ಯವನ್ನು ಪ್ರೇರಣೆಯ ಮೂಲವಾಗಿ ಪರಿವರ್ತಿಸಿ.

ಇದನ್ನು ಓದಿ: ಬೆಳಗಿನ ಅಧ್ಯಯನವು ಪರಿಣಾಮಕಾರಿಯಾಗಲು ಐದು ಕಾರಣಗಳು.

4 . ವೈಫಲ್ಯ ಅಂತಿಮವಲ್ಲ.

failure is not end in kannada
failure is not the end

ಕೆಲವರಿಗೆ ದೊಡ್ಡ ವೈಫಲ್ಯಗಳನ್ನು ಅನುಭವಿಸಿದ ನಂತರ ಜಗತ್ತೇ ಅಂತ್ಯಗೊಂಡಂತೆ ಭಾಸವಾಗುತ್ತದೆ. ಆದರೆ ಜಗತ್ತಿನ ಕೆಲವು ಯಶಸ್ವಿ ಜನರ ವೈಫಲ್ಯಗಳಿಂದ ನೀವು ಕಲಿಯಬಹುದಾದ ಒಂದು ವಿಷಯವೆಂದರೆ, ವೈಫಲ್ಯ ಅಂತಿಮವಲ್ಲ.

ಸ್ಟೀವ್ ಜಾಬ್ಸ್ ಅವರನ್ನು ಕಂಪನಿಯಿಂದ ಹೊರ ಹಾಕಲಾಯಿತು. ಆದರೆ ಅವರು ತಮ್ಮ ಕಂಪನಿಯಾದ ಆ್ಯಪಲನ್ನು ಮಾಡಿದರು. ವಾಲ್ಟ್ ಡಿಸ್ನಿಗೆ ಯಾವುದೇ ಕ್ರಿಯೇಟಿವ್ ಐಡಿಯಾ ಇಲ್ಲವೆಂದು ನ್ಯೂಸ್ ಪೇಪರ್ ಎಡಿಟಿಂಗ್ ಕೆಲಸಕ್ಕೆ ತೆಗೆದುಕೊಳ್ಳಲಿಲ್ಲ. ಅವರು ಕೂಡ ಅವರ ಒಂದು ಕಂಪನಿ ಮಾಡಿ ಯಶಸ್ಸು ಸಾಧಿಸಿದರು.

ಇದನ್ನು ಓದಿ: ಎತ್ತರವನ್ನು ಹೆಚ್ಚಿಸಿಕೊಳ್ಳಲು ಎಂಟು ಪರಿಣಾಮಕಾರಿ ಸಲಹೆ ಮತ್ತು ತಂತ್ರಗಳು

5. ವೈಫಲ್ಯವು ನಿಮ್ಮ ದೃಷ್ಟಿಕೋನವನ್ನು ವಿಸ್ತರಿಸುತ್ತದೆ.

perspective of failure in kannada
failure perspective

ನೀವು ನಿಮ್ಮ ಯಶಸ್ಸಿನ ಕೆಲಸದಲ್ಲಿ ಎಷ್ಟು ಮುಳುಗಿರುತ್ತೀರಾ ಎಂದರೆ ನಿಮ್ಮ ಇತರ ಕೆಲಸಗಳಿಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಅಂದರೆ, ನಿಮ್ಮ ಕುಟುಂಬ ಅಥವಾ ನಿಮ್ಮ ಆರೋಗ್ಯದಂತಹ ಪ್ರಮುಖ ವಿಷಯಗಳನ್ನು ಮರೆತುಬಿಡುತ್ತೀರಿ.

ನಿಮ್ಮ ಎಲ್ಲ ಶ್ರಮದ ನಂತರವೂ ನಿಮ್ಮ ಯಶಸ್ಸಿನ ವ್ಯವಹಾರವನ್ನು ಅಂದುಕೊಂಡಷ್ಟು ಸಾಧಿಸಲು ಕಷ್ಟವೆಂದು ತಿಳಿದು, ನೀವು ಅದನ್ನು ಸ್ಥಗಿತಗೊಳಿಸುತ್ತೀರಿ. ಇದು ನಿಮ್ಮ ವೈಫಲ್ಯವನ್ನು ನೀವೇ ಸ್ವೀಕರಿಸಿದಂತೆ ಆಗುತ್ತದೆ. ಇಂತಹ ವೈಫಲ್ಯಗಳು ನಿಮ್ಮನ್ನು ಹಿಂತಿರುಗಿ ನೋಡಲು ಮತ್ತು ಮುಖ್ಯವಾದುದನ್ನು ಮಾಡಲು ಅವಕಾಶವನ್ನು ನೀಡುತ್ತದೆ. ಇದರಿಂದ ನಿಮ್ಮ ದೃಷ್ಟಿಕೋನ ವಿಸ್ತರಿಸುತ್ತದೆ.

ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್

6. ವೈಫಲ್ಯವೂ ವಿನಮ್ರವಾಗಿರಲು ಕಲಿಸುತ್ತದೆ.

failure last lesson in life in kannada
failure lessons

ನೀವು ಯಶಸ್ಸನ್ನು ಸಾಧಿಸುತ್ತಲೇ ಇದ್ದರೆ ಅದು ನಿಮಗೆ ರೂಡಿಯಾಗುತ್ತದೆ. ನೀವು ಅಜೇಯರೆಂದು ಭಾವಿಸುವಂತೆ ಮಾಡುತ್ತದೆ. ಇದು ಹೆಚ್ಚಾಗಿ ದುರಹಂಕಾರಕ್ಕೆ ಕಾರಣವಾಗುತ್ತದೆ. ಯಾರು ನಿಮ್ಮನ್ನು ತಡೆಯಲು ಇಲ್ಲವೆಂದು ನಂಬಿ ನೀವು ಅಪಾಯಕಾರಿ ಜೂಜುಗಳನ್ನು ಮಾಡಲು ಪ್ರಾರಂಭಿಸುತ್ತೀರಿ. ಅಂತಿಮವಾಗಿ ಅದು ವೈಫಲ್ಯಕ್ಕೆ ಕಾರಣವಾಗಬಹುದು.

ನೀವು ವೈಫಲ್ಯಗಳನ್ನು ಅನುಭವಿಸಿದರೆ ಯಶಸ್ಸನ್ನು ರೂಡಿ ಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ. ಕೆಲಸಗಳು ಸರಿಯಾಗಿ ನಡೆಯುತ್ತಿರುವಾಗಲೂ ಅವು ಯಾವುದೇ ಸಮಯದಲ್ಲಿ ತಪ್ಪಾಗಬಹುದು ಎಂದು ನಿಮಗೆ ತಿಳಿಯುತ್ತದೆ, ಇದರಿಂದ ನೀವು ವಿನಮ್ರವಾಗಿ ಇರುತ್ತೀರಿ. ಇದು ಭವಿಷ್ಯದಲ್ಲಿ ಬರುವ ವೈಫಲ್ಯಗಳನ್ನು ನಿಭಾಯಿಸಲು ಸಹ ಸುಲಭಗೊಳಿಸುತ್ತದೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

commenters

hrithin • January 28th,2022

Nice