Website designed by @coders.knowledge.

Website designed by @coders.knowledge.

4 Secrets of Self Discipline for Success | ಯಶಸ್ವಿಯಾಗಲು ಸ್ವಯಂ ಶಿಸ್ತಿನ 4 ಅಭ್ಯಾಸಗಳು

 0

 Add

Please login to add to playlist

Watch Video

ಯಶಸ್ವಿಯಾದ ಜನರ ಅತ್ಯಂತ ದೊಡ್ಡ ಗುಣಮಟ್ಟ(quality) ಏನೆಂದು ನಿಮಗೆ ತಿಳಿದಿದೆಯೇ, ಅದುವೇ ಸ್ವಯಂಶಿಸ್ತು(self discipline) ಆಗಿದೆ. ಅಂದರೆ ಅವರು ಪೂರ್ತಿಯಾಗಿ ಅವರಿಗೆ ಇಷ್ಟವಾದ ಕೆಲಸವನ್ನು ಮಾಡಬಹುದು. ಆದರೆ ನೀವು ಸ್ವಯಂಶಿಸ್ತನ್ನು ಕಾರ್ಯಗತಗೊಳಿಸಲು ಅಧಿಕ ಸಮಸ್ಯೆ ಬರುತ್ತದೆ ಎಂದು ಯೋಚಿಸಬಹುದು, ಇದು ಸತ್ಯ ಕೂಡ. ಏಕೆಂದರೆ ನಮ್ಮಲ್ಲಿ ಅನೇಕರು ಸ್ವಯಂಶಿಸ್ತು ಏನೆಂದು ಅರ್ಥ ಮಾಡಿಕೊಂಡಿಲ್ಲ. ಇಂದು ನಾವು ಈ ವೀಡಿಯೋದಲ್ಲಿ ಸ್ವಯಂ ಶಿಸ್ತು ಮತ್ತು ಸ್ವಯಂ ನಿಯಂತ್ರಣದ(self control) ಬಗ್ಗೆ ತಿಳಿಸಲಿದ್ದೇವೆ. ಇದನ್ನು ನಾವು ವಿಜ್ಞಾನಿ ಮತ್ತು ಸಾಮಾಜಿಕ ಸೈಕಾಲಜಿಸ್ಟ್ ಆದ ರಾಯ್ ಬೌಮಿಸ್ಟರ್ ಮತ್ತು ಜಾನ್ ಟೈರ್ನಿ ಅವರ ಪುಸ್ತಕವಾದ willpower- rediscovering the greatest human strengthನಿಂದ ತಿಳಿಸಲಿದ್ದೇವೆ.

ಇದನ್ನು ಓದಿ: ನಿಮಗೆ ಗಮನ ಹರಿಸಲು ಏಕೆ ಸಾಧ್ಯವಾಗುತ್ತಿಲ್ಲ

1. ಆಹಾರ ಮತ್ತು ಸ್ವಯಂ ನಿಯಂತ್ರಣವು ಪರಸ್ಪರ ಸಂಬಂಧ ಹೊಂದಿದೆ.

why self control important in dieting in kannada
self control and diet

ನಮ್ಮ ಸ್ವಯಂ ಶಿಸ್ತು ಅನಂತವಾಗಿರುವುದಿಲ್ಲ(infinite). ಅದನ್ನು ನಾವು ಆಹಾರ ಪದ್ಧತಿಯಿಂದ(diet) ನಿಯಂತ್ರಣ ಮಾಡಬಹುದು. ಇದನ್ನು ಅರ್ಥ ಮಾಡಿಕೊಳ್ಳಲು ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರು ಒಂದು ಅದ್ಬುತವಾದ ಪ್ರಯೋಗವನ್ನು ಮಾಡಿದ್ದಾರೆ. ಅವರು ಕೊನೆಯ 10 ವರ್ಷದ ಎಲ್ಲಾ ಕೇಸ್ ಫೈಲ್‌ಗಳನ್ನು ತೆರೆದರು. ಇದರಲ್ಲಿ ಎಲ್ಲಾ ಕ್ರಿಮಿನಲ್ಗೆ ನೀಡಿದ ಘೋಷಣೆಗಳ(parole) ಮೇಲಿನ ವಿವರಗಳು ಇದ್ದವು. ಈಗ ಪ್ರೆಶ್ನೆ ಏನೆಂದರೆ ನೀವು ನ್ಯಾಯಾಧೀಶರ(judge) ಹತ್ತಿರ ಘೋಷಣೆಗಾಗಿ ಹೋಗುತ್ತೀರಾ ಎಂದುಕೊಳ್ಳಿ. ನಿಮಗೆ ಜಾಮೀನು ಸಿಗುವ ಸಾಧ್ಯತೆ ಎಷ್ಟಿದೆ? ಸೈಕಾಲಜಿಸ್ಟ್ಗಳು ಈ ರೀತಿಯ ಕೇಸ್ ಅನ್ನು ನೋಡಿ, ಈ ಎಲ್ಲ ಕೇಸ್‌ಗಳ ಸಮಯವನ್ನು ಬರೆದುಕೊಂಡರು ಮತ್ತು ಲಂಚ್ಗಿಂತ ಮುಂಚೆ ಯಾವುದಾದರೂ ಖೈದಿಯ ಕೇಸ್ ಕೇಳುವಾಗ ನ್ಯಾಯಾಧೀಶರು ಘೋಷಣೆ ನೀಡುವ ಚಾನ್ಸ್ 10% ಗಿಂತ ಕಡಿಮೆ ಇರುತ್ತದೆ. ಅದೇ ಲಂಚ್ನ ನಂತರ ಘೋಷಣೆ ನೀಡಿದ್ದಾರೆ, ಆಗ ಘೋಷಣೆ ನೀಡುವ ಚಾನ್ಸ್ 65% ನಷ್ಟು ಇರುತ್ತದೆ. ನೀವು ಇದು ಏಕೆ ಎಂದು ಯೋಚಿಸಬಹುದು.

ನಮ್ಮ ಸ್ವಯಂ ನಿಯಂತ್ರಣವೂ ಸೀಮಿತವಾಗಿರುತ್ತದೆ. ನ್ಯಾಯಾಧೀಶರು ಘೋಷಣೆ ನೀಡುವಾಗ "ಘೋಷಣೆ ನೀಡಿದ ನಂತರ ಈ ವ್ಯಕ್ತಿ ಮತ್ತೊಮ್ಮೆ ಅಪರಾಧ ಮಾಡಿದರೆ" ಎಂಬ ವಿಚಾರ ಇರುತ್ತದೆ. ಇದಕ್ಕೆ ಅವರು ಅಧಿಕ ಮಾನಸಿಕ ಶಕ್ತಿಯು ಖರ್ಚಾಗುತ್ತದೆ. ಲಂಚ್ಗಿಂತ ಮೊದಲು ಅವರ ರಕ್ತದಲ್ಲಿ ಗ್ಲುಕೋಸ್‌ ಅಂಶ ಕಡಿಮೆ ಇರುವ ಕಾರಣ ನ್ಯಾಯಾಧೀಶರು ಅವರ ಶಕ್ತಿಯನ್ನು ಮಾನಸಿಕ ಯೋಚನೆಗೆ ಖರ್ಚು ಮಾಡಲು ಬಯಸುವುದಿಲ್ಲ. ಹೀಗಾಗಿ ಅವರು ಖೈದಿಯ ಘೋಷಣೆಯನ್ನು ನಿರಾಕರಿಸುತ್ತಾರೆ. ಇದರಿಂದ ಅವನು ಜೈಲಿಗೆ ಹೋಗುತ್ತಾನೆ.

ಅದೇ ಲಂಚ್ನ ನಂತರ ನ್ಯಾಯಾಧೀಶರ ರಕ್ತದಲ್ಲಿ ಗ್ಲುಕೋಸ್ ಮಟ್ಟ ಅಧಿಕವಿರುತ್ತದೆ. ಹೀಗಾಗಿ ಘೋಷಣೆ ಇಡುವ ಸಾಧ್ಯತೆ ಹೆಚ್ಚಿರುತ್ತದೆ. ಇಷ್ಟೇ ಅಲ್ಲದೆ ಈ ಪರಿಕಲ್ಪನೆಯನ್ನು ಸಾಬೀತುಪಡಿಸಲು ಸಂಶೋಧಕರು ಇನ್ನೊಂದು ಪ್ರಯೋಗವನ್ನು ಮಾಡಿದ್ದರು. ಇದರಲ್ಲಿ ಚಿಕ್ಕ ಚಿಕ್ಕ ನಿರ್ಧಾರಗಳು ನಮ್ಮ ಸ್ವಯಂ ಶಿಸ್ತನ್ನು ಹೇಗೆ ಪರಿಣಾಮ ಮಾಡುತ್ತವೆ ಎಂದು ತಿಳಿಸಲಾಗಿತ್ತು.

ಅವರ ವಿದ್ಯಾರ್ಥಿಗಳನ್ನು ಎರಡು ಭಾಗ ಮಾಡಿದರು. ಗ್ರೂಪ್‌ A ನವರಿಗೆ ಎರಡು ಆರ್ಟಿಕಲ್ ನೀಡಿ, ಒಂದನ್ನು ಆಯ್ಕೆ ಮಾಡಲು ಹೇಳಿ, ಅವರು ಆಯ್ಕೆ ಮಾಡುವುದನ್ನು ಅವರಿಗೆ ನೀಡುವುದಾಗಿ ಹೇಳಿದರು. ಆರ್ಟಿಕಲ್ ಎಂದರೆ ಈ ರೀತಿ ಇದ್ದವು ಅವರಿಗೆ ಕ್ಯಾಂಡಲ್ ಬೇಕಾ ಅಥವಾ ಟೀ ಶರ್ಟ್, ಬ್ಲಾಕ್ ಟೀಶರ್ಟ್ ಅಥವಾ ರೆಡ್ ಟೀಶರ್ಟ್, ಪೆನ್ ಅಥವಾ ಕ್ಯಾಂಡಲ್ ಇತ್ಯಾದಿ. ಇದರ ಗುರಿ ಏನೆಂದರೆ ಗ್ರೂಪ್‌ A ವಿದ್ಯಾರ್ಥಿಗಳ ಮೆದುಳಿನ ಶಕ್ತಿ ಬಳಸುವಂತೆ ಮಾಡುವುದಾಗಿತು. ಅವರಿಗೆ ಪ್ರತಿ ಬಾರಿ ನಿರ್ಧಾರಗಳನ್ನು ಕೇಳಲಾಗುತ್ತಿತ್ತು.

ಗ್ರೂಪ್‌ B ನವರಿಗೆ ಈ ಆರ್ಟಿಕಲ್ಗಳನ್ನು ನೀಡಿ ಓದಲು ಹೇಳಲಾಯಿತು. ಅಂದರೆ ಗ್ರೂಪ್‌ B ವಿದ್ಯಾರ್ಥಿಗಳಿಂದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ. ಇದರ ನಂತರ ಎರಡು ಗುಂಪುಗಳನ್ನು ಕರೆದು ಅವರ ಕೈಯನ್ನು ತಣ್ಣೀರಲ್ಲಿ ಇಡಲು ಹೇಳಿದರು. ಕೈಯನ್ನು ನಿರಂತರವಾಗಿ ತಣ್ಣೀರಲ್ಲಿ ಇಡಲು ನಮಗೆ ಸ್ವಯಂ ಶಿಸ್ತು ಬೇಕು. ಏಕೆಂದರೆ ಇದು ದೇಹದ ನೈಸರ್ಗಿಕ ಪ್ರತಿಕ್ರಿಯೆ ಆಗಿಲ್ಲ. ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದ, ಸ್ವಯಂ ಶಿಸ್ತನ್ನು ಬೇಕಂತ ಕಡಿಮೆಗೊಳಿಸಿದ ಗ್ರೂಪ್ A ಅವರು, ಅವರ ಕೈಯನ್ನು ಬೇಗನೆ ಆ ತಣ್ಣಿರಿಂದ ತೆರೆದರು.ಆದರೆ ಗ್ರೂಪ್‌ B ಅವರು ಗ್ರೂಪ್‌ A ಗಿಂತ ಅಧಿಕ ಸಮಯ ಅವರ ಕೈಯನ್ನು ತಣ್ಣೀರಲ್ಲಿ ಇಟ್ಟಿದ್ದರು.

ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳು

2. ಸ್ವಯಂ ನಿಯಂತ್ರಣ ಸೀಮಿತವಾಗಿದೆ.

is self control is limited resource in kannada
self control is limited

ಸಂಶೋಧಕರು ಒಂದು ಕಾಲೇಜಿನಿಂದ ಬುದ್ಧಿವಂತ ಇರುವ ವಿದ್ಯಾರ್ಥಿಗಳನ್ನು ಕರೆದು, ಅವರಿಗೆ ಹೊಟ್ಟೆ ಹಸಿಯುವಂತೆ, ಮಾಡಲು ಒಂದು ಊಟವನ್ನು ನಿರಾಕರಿಸಿದರು. ಈ ವಿದ್ಯಾರ್ಥಿಗಳನ್ನು ಎರಡು ಗುಂಪಾಗಿ ಭಾಗ ಮಾಡಿದರು. ಅದರ ನಂತರ ಸಂಶೋಧಕರು ಟೇಬಲ್ ಮೇಲೆ ಚಾಕಲೇಟ್ ಬಿಸ್ಕೆಟಿನಿಂದ ತುಂಬಿರುವ ಒಂದು ಪ್ಲೇಟ್ ಇರಿಸಿದರು ಮತ್ತು ಒಂದು ಪ್ಲೇಟ್ನಲ್ಲಿ ಕ್ಯಾರೆಟ್ ಅನ್ನು ಇಟ್ಟಿದ್ದರು. ಗ್ರೂಪ್ A ಅನ್ನು ರೂಮಿಗೆ ಕರೆದು ಚಾಕಲೇಟ್ ತಿನ್ನದಂತೆ ತಿಳಿಸಲಾಯಿತು. ಆ ವಿದ್ಯಾರ್ಥಿಗಳು ಅಲ್ಲಿರುವ ಚಾಕಲೇಟ್ ನೋಡಿ ಸುವಾಸನೆ ತೆಗೆದುಕೊಂಡು, ಅಲ್ಲೇ ಇಟ್ಟು, ಕ್ಯಾರೆಟ್ ಅನ್ನು ತಿನ್ನಲು ಪ್ರಾರಂಭಿಸಿದರು. ಇದರ ನಂತರ ಗ್ರೂಪ್‌ B ವಿದ್ಯಾರ್ಥಿಗಳನ್ನು ರೂಮಿಗೆ ಕರೆಯಲಾಯಿತು. ಅವರಿಗೆ ಚಾಕಲೇಟ್ ಬಿಸ್ಕೆಟ್ ಅನ್ನು ಸರ್ವ್(serve) ಮಾಡಲಾಯಿತು.

ಈ ಗ್ರೂಪ್ A ಮತ್ತು ಗ್ರೂಪ್ B ಅನ್ನು ಇನ್ನೊಂದು ಕೋಣೆಗೆ ಕರೆದೊಯ್ದರು. ಅಲ್ಲಿ ಅವರಿಗೆ ಜ್ಯಾಮಿತಿಗೆ(geometry) ಸಂಬಂಧಿಸಿದ ಒಗಟುಗಳನ್ನು(puzzle) ಪರಿಹರಿಸಲು ತಿಳಿಸಿದರು. ಎರಡು ಗುಂಪಿನವರು ಅವರ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಇದನ್ನು ಮಾಡಲಾಗುತ್ತಿದೆ ಎಂದು ಯೋಚಿಸಿದರು. ಆದರೆ ಆ ಪ್ರಶ್ನೆ ಯಾರಿಂದಲೂ ಪರಿಹರಿಸದಿರುವಷ್ಟು ಕಷ್ಟವಿತ್ತು. ಸಂಶೋಧಕರು ಯಾರು ಮೊದಲು ಬಿಟ್ಟುಕೊಡುತ್ತಾರೆಂದು ನೋಡಲು ಬಯಸಿದರು. ಸ್ವಯಂ ಶಿಸ್ತಿನಿಂದ ಕೂಡಿದ ಗ್ರೂಪ್ A ವಿದ್ಯಾರ್ಥಿಗಳಲ್ಲಿ ಪ್ರತಿಯೊಬ್ಬರು 8 ನಿಮಿಷದಲ್ಲಿ ಬಿಟ್ಟುಕೊಟ್ಟು, ಈ ಪ್ರೆಶ್ನೆಗಳನ್ನು ನಮ್ಮಿಂದ ಪರಿಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಸ್ವಯಂ ಶಿಸ್ತಿನ ಚಟುವಟಿಕೆಯನ್ನು ನಡೆಸಿದ ಗ್ರೂಪು B ವಿದ್ಯಾರ್ಥಿಗಳು 20 ನಿಮಿಷದ ನಂತರ ಬಿಟ್ಟುಕೊಟ್ಟರು. ಅಂದರೆ ಗ್ರೂಪ್ A ಗೆ ಹೋಲಿಸಿದರೆ 2.5% ರಷ್ಟು ಹೆಚ್ಚು ಗ್ರೂಪ್ B ಯವರು ತೆಗೆದುಕೊಂಡರು. ಇದರ ತೀರ್ಮಾನ ಏನೆಂದರೆ ನಾವು ಪ್ರತಿ ಸಮಯ ಸ್ವಯಂ ಶಿಸ್ತು, ಸ್ವಯಂ ನಿಯಂತ್ರಣವನ್ನು ಅಭ್ಯಾಸ ಮಾಡಲು ಸಾಧ್ಯವಿಲ್ಲ. ನಾವು ಒಂದರ ಮೇಲೆ ಸ್ವಯಂ ನಿಯಂತ್ರಣ ತೋರಿಸಿದರೆ, ಇನ್ನೊಂದರ ಮೇಲೆ ಸ್ವಯಂ ನಿಯಂತ್ರಣ ಕಡಿಮೆಗೊಳ್ಳುತ್ತದೆ. ಅಂದರೆ ನಮ್ಮ ಶಕ್ತಿ (will power) ಸೀಮಿತವಾಗಿದೆ.

ಇದನ್ನು ಓದಿ: ಉನ್ನತ ವ್ಯಕ್ತಿಯಾಗಲು ಇರುವ ಮಾರ್ಗ

3. ಸ್ವಯಂ ನಿಯಂತ್ರಣವನ್ನು ಸುಧಾರಿಸಬಹುದು.

can you master self control in kannada
self control can be improved

ನಾವು ಸ್ವಯಂ ನಿಯಂತ್ರಣವಿರುವ ಕೆಲಸವನ್ನು ಮಾಡಿದಾಗ ನಮ್ಮ ಶಕ್ತಿ ಕುಗ್ಗುತ್ತದೆ. ಇದರಿಂದ ನಮಗೆ ಸ್ವಯಂ ನಿಯಂತ್ರಣ ಮಾಡಲು ಕಷ್ಟವಾಗುತ್ತದೆ. ಆದರೆ ಇದರ ಉಲ್ಟಾ ಸಾಧ್ಯವಿದೆಯೇ? ಅಂದರೆ ಸರಿಯಾದ ಆಹಾರ ಪದ್ಧತಿ(diet), ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ನಿಯಂತ್ರಣ ಮಾಡುವುದರಿಂದ, ನಾವು ಅಧಿಕ ಸ್ವಯಂ ಶಿಸ್ತಿನಿಂದ ಇರಬಹುದೆ. ಇದಕ್ಕಾಗಿ ಸಂಶೋಧಕರು ಮಕ್ಕಳ ಮೇಲೆ ಪ್ರಯೋಗಗಳನ್ನು ಮಾಡಿದರು.

ಅವರು ಮಕ್ಕಳಿಗೆ, ಇಂದು ಯಾರು ಉಪಹಾರ(breakfast) ತಿನ್ನಬಾರದು ಎಂದು ತಿಳಿಸಿದರು. ಆದರೆ ಇವುಗಳಲ್ಲಿ ಕೆಲವು ಮಕ್ಕಳನ್ನು ಬೇರೆ ತರಗತಿಗೆ ಕರೆದುಕೊಂಡು ಹೋಗಿ ಉಪಾಹಾರವನ್ನು ಮಾಡಿಸಲಾಯಿತು ಮತ್ತು ಲಂಚ್ಗಿಂತ ಮೊದಲು ಈ ಮಕ್ಕಳ ನಡವಳಿಕೆಯನ್ನು(behavior) ಗಮನಿಸಲಾಯಿತು. ಉಪಾಹಾರ ಮಾಡದೇ ಇರುವ ಮಕ್ಕಳು ತಪ್ಪಾಗಿ ವರ್ತಿಸುತ್ತಿದ್ದರು(missbehave). ಅವರ ನಡವಳಿಕೆಯನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇವರೆಲ್ಲರಿಗೂ ಉಪಾಹಾರ ನೀಡಿದ ನಂತರ ಅವರ ನಡವಳಿಕೆ ಸರಿಯಾಯಿತು.

ಒಮ್ಮೆ ಒಂದು ಆಸಕ್ತಿಕರ ಪ್ರಯೋಗವನ್ನು ಮಾಡಲಾಗಿತ್ತು. ಎರಡು ನಿಂಬೆಯ ಜ್ಯೂಸ್ ಮಾಡಲಾಗಿತು. ಒಂದರಲ್ಲೇ ಸಕ್ಕರೆ ಹಾಕಿದ್ದಾರೆ, ಇನ್ನೊಂದರಲ್ಲಿ ಡಯಟ್ ಸ್ವೀಟ್ನರ್ ಹಾಕಲಾಗಿತು. ನಿಂಬೆ ಜ್ಯೂಸ್ ನೀಡುವವನು ಮತ್ತು ಕುಡಿಯುವವನಿಗೆ ಯಾವ ಗ್ಲಾಸ್‌ನಲ್ಲಿ ಏನಿದೆ ಎಂದು ತಿಳಿದಿರಲಿಲ್ಲ ಮತ್ತು ಎರಡು ನಿಂಬೆ ಜ್ಯೂಸಿನ ರುಚಿ ಸಮನವಿತ್ತು. ಅನೇಕ ಜನರಿಗೆ ಈ ನಿಂಬೆ ಜ್ಯೂಸ್ ನೀಡಿದ ನಂತರ ಕಂಪ್ಯೂಟರ್ ಗೇಮ್ ಆಡಲು ತಿಳಿಸಲಾಯಿತು. ಪ್ರಾರಂಭದಲ್ಲಿ ಗೇಮ್ಸ್ ಸುಲಭವಾಗಿತ್ತು, ಆದರೆ ಅದರ ನಂತರ ಗೇಮ್ ತುಂಬಾ ಕಠಿಣವಾಯಿತು.

ಯಾರೆಲ್ಲ ಸಕ್ಕರೆ ಇರುವ ನಿಂಬೆ ಜ್ಯೂಸ್ ಕುಡಿದಿದ್ದಾರೋ, ಅವರ ದೇಹದಲ್ಲಿ ಗ್ಲುಕೋಸ್ ಅಧಿಕವಿತ್ತು. ಇದರಿಂದ ಅವರು ಅಧಿಕ ಸಮಯದವರೆಗೆ ಅವರ ಸಾಮಾನ್ಯ ನಡವಳಿಕೆಯನ್ನು ತೋರಿಸುತಿದ್ದರು. ಯಾರೆಲ್ಲ ಡಯಟ್ ಸ್ವೀಟ್ನರ್ ಇರುವ ನಿಂಬೆ ಜ್ಯೂಸ್ ಕುಡಿದಿದ್ದಾರೋ, ಅವರ ದೇಹದಲ್ಲಿ ಗ್ಲುಕೋಸ್ ಮಟ್ಟ ಕಡಿಮೆಯಿತ್ತು. ಹೀಗಾಗಿ ಅವರು ತಮ್ಮ ಸ್ವಯಂ ನಿಯಂತ್ರಣವನ್ನು ಕಳೆದುಕೊಂಡು ಕಂಪ್ಯೂಟರ್ ಪರದೆಗೆ ಒಡೆಯಲು ಪ್ರಾರಂಭಿಸಿದರು. ಇದರ ಅರ್ಥ ನಾವು ಸಕ್ಕರೆಯನ್ನು ಅಧಿಕ ತಿನ್ನಬೇಕೆಂದು ಹೇಳುತ್ತಿಲ್ಲ. ಏಕೆಂದರೆ ಗ್ಲುಕೋಸ್ ನಮಗೆ ಇತರ ಆಹಾರಗಳಿಂದಲೂ ಸಿಗುತ್ತದೆ. ಸ್ವಯಂ ಶಿಸ್ತು ಮತ್ತು ಸ್ವಯಂ ನಿಯಂತ್ರಣವೂ ಒಂದು ಸಮಯದವರೆಗೆ ಪರಸ್ಪರ ಸಂಬಂಧ ಹೊಂದಿದೆ ಎಂದು ಈ ಪ್ರಯೋಗಗಳು ಸಾಬೀತುಪಡಿಸುತ್ತವೆ.

ಜನರು ಅವರ ಕೆಟಗರಿಯ ಜನರನ್ನು ಮಾತನಾಡಿಸಿದ್ದಾರೆ ಅವರ ಗ್ಲೂಕೋಸ್ ಮಟ್ಟ ಮೆಂಟೇನ್ ಇರುತ್ತದೆ. ಅದೇ ಬೇರೆ ಕೆಟಗರಿ ಜನರ ಜೊತೆ ಮಾತನಾಡಿದ್ದಾರೆ. ಅವರ ಗ್ಲುಕೋಸ್ ಮಟ್ಟ ಕಡಿಮೆಗೊಳ್ಳುತ್ತದೆ. ಇದು ಏಕೆಂದರೆ ನಮ್ಮ ದೇಹವು ಸ್ವಯಂ ನಿಯಂತ್ರಣ ಮಾಡಲು ಇಂಧನ ಬಳಕೆಯನ್ನು ಮಾಡುತ್ತದೆ. ಹೀಗಾಗಿ ನಾವು ಇತರ ಕೆಟಗರಿಯ ಜನರ ಜೊತೆ ಚೆನ್ನಾಗಿ ಮಾತನಾಡಬೇಕು. ಇದಕ್ಕೆ ಸ್ಪಷ್ಟವಾಗಿ ಸ್ವಯಂ ನಿಯಂತ್ರಣ ಬೇಕು.

ಇದನ್ನು ಓದಿ: ನೀವು ಯೋಚಿಸುವುದಕ್ಕಿಂತ ಹೆಚ್ಚು ಆಕರ್ಷಕವಿರುವ 13 ರಹಸ್ಯ ಚಿಹ್ನೆಗಳು

4. ಸ್ವಯಂ ನಿಯಂತ್ರಣವನ್ನು ಬಳಸಲು ಸಮರ್ಥ ಮಾರ್ಗವು ಹವ್ಯಾಸದಲ್ಲಿದೆ.

is self control is an habit in kannada
self control habits

ನಮ್ಮ ಸ್ವಯಂ ನಿಯಂತ್ರಣವೂ ಸೀಮಿತವಾಗಿದ್ದರೆ ನಾವು ಯಾವುದೇ ವಸ್ತುವಿನಲ್ಲಿ ಇಷ್ಟೊಂದು ಉತ್ಕೃಷ್ಟವಿರಲು(excel) ಹೇಗೆ ಸಾಧ್ಯವಾಗುತ್ತದೆ. ನಮ್ಮ ವಿಲ್ ಪವರ್ ಅನ್ನು ಚೆನ್ನಾಗಿ ಬಳಸಿಕೊಳ್ಳಲಿರುವ ಅತ್ಯುತ್ತಮ ಮಾರ್ಗವೆಂದರೆ ನಾವು ಅದನ್ನು ಹವ್ಯಾಸಗಳನ್ನಾಗಿ ಮಾಡಿಕೊಳ್ಳುವುದಾಗಿದೆ. ಏಕೆಂದರೆ ಹವ್ಯಾಸಗಳು 21 ರಿಂದ 61 ದಿನಗಳಲ್ಲಿ ಆಗುತ್ತವೆ ಮತ್ತು ಒಂದು ಹವ್ಯಾಸವಾದಾಗ ಅವುಗಳಿಗೆ ಕಡಿಮೆ ಸ್ವಯಂ ನಿಯಂತ್ರಣದ ಅವಶ್ಯಕತೆ ಇರುತ್ತದೆ.

ಈಗ ನಾವು ಸ್ವಯಂ ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲಾ ಪರಿಕಲ್ಪನೆಗಳನ್ನು(concept) ಪರಿಶೀಲಿಸೋಣ.

1. ಆಹಾರ ಮತ್ತು ಸ್ವಯಂ ನಿಯಂತ್ರಣವು ಪರಸ್ಪರ ಸಂಬಂಧ ಹೊಂದಿದೆ.

ಇದರ ಪ್ರಕಾರ ನಾವು ಒಳ್ಳೆಯ ಆಹಾರ ಪದ್ಧತಿ(diet) ಪಾಲಿಸದಿದ್ದರೆ, ನಮ್ಮ ಸ್ವಯಂ ನಿಯಂತ್ರಣ ಕೂಡ ಕುಗ್ಗುತ್ತದೆ. ಇದರಲ್ಲಿ ನಾವು ನ್ಯಾಯಾಧೀಶರು ಮತ್ತು ಖೈದಿಗೆ ಸಂಬಂಧಿಸಿದ, ಒಂದು ಸಂಶೋಧನೆ ನೋಡಿದೆವು. ಇದರಲ್ಲಿ ನ್ಯಾಯಾಧೀಶರಿಗೆ ಊಟಕ್ಕೂ ಮುಂಚೆ ಸ್ವಯಂ ನಿಯಂತ್ರಣವು ಕಡಿಮೆ ಇರುತ್ತದೆ. ಇದರಿಂದ ಖೈದಿಗೆ ಜಾಮೀನು ನೀಡುವ ಚಾನ್ಸ್ 10% ಇರುತ್ತದೆ. ಅದೇ ಊಟದ ನಂತರ ಇದರ ಚಾನ್ಸ್ 65% ನಷ್ಟು ಇರುತ್ತದೆ. ಈ ರೀತಿಯೇ ಸ್ವಯಂ ನಿಯಂತ್ರಣ ಕಡಿಮೆ ಇರುವುದರಿಂದ ಆಹಾರ ಪದ್ಧತಿಯಿಂದ ತೂಕ ಕಡಿಮೆ ಮಾಡಿಕೊಳ್ಳುವುದು ಕಷ್ಟವೆನಿಸುತ್ತದೆ. ಏಕೆಂದರೆ ತೂಕ ಇಳಿಸಲು ನಾವು ಕಡಿಮೆ ತಿನ್ನಬೇಕು. ಅದಕ್ಕೆ ವಿಲ್ ಪವರ್‌ನ ಅವಶ್ಯಕತೆ ಇರುತ್ತದೆ. ಆದರೆ ವಿಲ್ ಪವರ್ ನಮ್ಮ ಆಹಾರ ಪದ್ಧತಿ ಸರಿಯಾಗಿದ್ದಾಗ ಮಾತ್ರ ಚೆನ್ನಾಗಿರುತ್ತದೆ.

2. ಸ್ವಯಂ ನಿಯಂತ್ರಣ ಸೀಮಿತವಾಗಿದೆ.

ಅಂದರೆ ಚಿಕ್ಕ ಚಿಕ್ಕ ನಿರ್ಧಾರಗಳು ನಮ್ಮ ಸ್ವಯಂ ನಿಯಂತ್ರಣವನ್ನು ಕಡಿಮೆಗೊಳಿಸುತ್ತದೆ. ಇದರಲ್ಲಿ ನಾವು ಚಾಕ್ಲೇಟ್ ಬಿಸ್ಕತ್ತು ಮತ್ತು ಕ್ಯಾರೆಟ್‌ನ ಪ್ರಯೋಗವನ್ನು ನೋಡಿದೆವು. ಚಾಕ್ಲೇಟ್‌ ಪ್ರಲೋಭೆಯಿಂದಾಗಿ(temtation) ಗ್ರೂಪ್ A ವಿದ್ಯಾರ್ಥಿಗಳ ಸ್ವಯಂ ನಿಯಂತ್ರಣವು ಕಡಿಮೆಯಾಗಿತ್ತು ಮತ್ತು ಅವರು ಒಗಟನ್ನು(puzzle) ಪರಿಹರಿಸಲು ಬೇಗ ಬಿಟ್ಟುಕೊಟ್ಟರು.

3. ಸ್ವಯಂ ನಿಯಂತ್ರಣವನ್ನು ಸುಧಾರಿಸಬಹುದು.

ಇದರಲ್ಲಿ ನಾವು ವಿದ್ಯಾರ್ಥಿಗಳ ಪ್ರಯೋಗವನ್ನು ನೋಡಿದ್ದೇವು. ಊಟಕ್ಕೂ ಮೊದಲು ಆ ಎಲ್ಲಾ ವಿದ್ಯಾರ್ಥಿಗಳು ತಪ್ಪಾದ ವರ್ತನೆ ತೋರಿಸುತ್ತಿದ್ದರು. ಆದರೆ ಊಟದ ನಂತರ ಅವರೆಲ್ಲರೂ ಸಾಮಾನ್ಯರಾದರು.

4. ಸ್ವಯಂ ನಿಯಂತ್ರಣವನ್ನು ಬಳಸಲು ಸಮರ್ಥ ಮಾರ್ಗವು ಹವ್ಯಾಸದಲ್ಲಿದೆ.

ಅಂದರೆ ನಾವು ಪುನರಾವರ್ತನೆಯಾಗಿ ಮಾಡಬೇಕೆಂದಿರುವ ಕಾರ್ಯವನ್ನು(task) ಹವ್ಯಾಸವನ್ನಾಗಿ ಮಾಡಿಕೊಳ್ಳಬೇಕು. ಏಕೆಂದರೆ ಹವ್ಯಾಸಗಳಿಗೆ ಕಡಿಮೆ ಸ್ವಯಂ ಶಿಸ್ತಿನ ಅವಶ್ಯಕತೆ ಇರುತ್ತದೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments