Website designed by @coders.knowledge.

Website designed by @coders.knowledge.

6 Morning Habits for Wealth, Health and Success | ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳು

Watch Video

ಹೆಲ್ ಎಲ್ರೋಡ್(hell elrod) ಅವರು ತಮ್ಮ ಜೀವನದಲ್ಲಿ 2 ಬಾರಿ ರಾಕ್ ಬಾಟಮ್(rock bottom) ಮುಟ್ಟಿದ್ದೇನೆ ಎಂದು ಹೇಳುತ್ತಾರೆ. ಅಂದರೆ ಅವರ ಜೀವನದ ಎರಡು ಕೆಟ್ಟ ಗಳಿಗೆಯನ್ನು ನೋಡಿದ್ದಾರೆ. ಅವರು 20 ವರ್ಷದವರಾಗಿದ್ದಾಗ ಅವರ ಜೀವನದಲ್ಲಿ ಎಲ್ಲವೂ ಪರಿಪೂರ್ಣವಾಗಿತ್ತು(perfect). ಅವರು ಕೆಲಸಮಾಡುತ್ತಿದ್ದ ಕಂಪನಿಯಲ್ಲಿ ಒಳ್ಳೆಯ ಪ್ರದರ್ಶನ(performance) ನೀಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ಅವರಿಗೆ ಒಂದು ದೊಡ್ಡ ಪೋಸ್ಟ್ ಸಿಕ್ಕಿತು. ಅವರ ಒಂದು ಗೆಳತಿ ಇದ್ದರೂ ಮತ್ತು ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಆದರೆ ಒಮ್ಮೆ ಅವರು ಪ್ರಶಸ್ತಿ(award) ತೆಗೆದುಕೊಂಡು ಬರುವಾಗ, ಒಬ್ಬ ಕುಡಿದ ವ್ಯಕ್ತಿ ತುಂಬಾ ವೇಗದಲ್ಲಿ ಬಂದು ಅವನ ಗಾಡಿಯನ್ನು ಇವರ ಕಾರಿಗೆ ಡಿಕ್ಕಿ ಹೊಡೆಸಿದನು. ಇದರಿಂದ ಅವರ ಅನೇಕ ಮೂಳೆಗಳು ಮುರಿದವು, ಅವರ ಅನೇಕ ಒಳಾಂಗಗಳು(internal organs) ಹಾನಿಯಾದವು. ಅವರು ಸತ್ತೇ ಹೋಗಿದ್ದರು. ಅವರ ಉಸಿರಾಟವೇ ನಿಂತು ಹೋಗಿತ್ತು.

ಆದರೆ ಚಿಕಿತ್ಸೆಯ ನಂತರ ಅವರು ಬದುಕುಳಿದರು. ಇದು ಅವರ ಜೀವನದ ಮೊದಲ ರಾಕ್ ಬಾಟಮ್ ಆಗಿದೆ. ಅವರ ಮುಂದಿನ ರಾಕ್ ಬಾಟಮ್ 2008ರಂದು ಅಮೇರಿಕಾದಲ್ಲಿ ನಡೆಯುತ್ತಿದ್ದ ಕೆಟ್ಟ ಕುಸಿತದ(recession) ಸಮಯದಲ್ಲಿ ನಡೆಯಿತು ಎಂದು ಹೇಳಿದ್ದಾರೆ. ಅವರ ಯಶಸ್ಸು ರಾತ್ರೋರಾತ್ರಿಯೇ ಮುರಿದು ಹೋಯಿತು. ಅವರ ತಿಂಗಳಿನ ಆದಾಯ ಸೊನ್ನೆಗೆ ತಲುಪಿತು. ಅವರಿಗೆ ಅವರ ಬಿಲ್ಲನ್ನು(bill) ಕೂಡ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಅವರು ಖರೀದಿಸಿದ ಮನೆಯ ಸಾಲವನ್ನು ಕಟ್ಟಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಅವರು ಖಿನ್ನತೆಗೆ(depression) ಬಂದಿದ್ದರು. ಅವರು ಇದನ್ನು ಅವರ ಬದುಕಿನ ಕೆಳಮಟ್ಟ(lowest point) ಎಂದು ಹೇಳುತ್ತಾರೆ.

ಅವರಿಗೆ "ಆಕ್ಸಿಡೆಂಟ್ ಮತ್ತು ಆರ್ಥಿಕ ಸ್ಥಿತಿಯಲ್ಲಿ ತುಂಬಾ ಕೆಟ್ಟ ರಾಕ್ ಬಾಟಮ್ ಯಾವುದು?" ಎಂದು ಕೇಳಿದರೆ. ಅವರು ಆರ್ಥಿಕ ಸ್ಥಿತಿಯು ಕೆಟ್ಟ ರಾಕ್ ಬಾಟಮ್ ಎಂದು ಹೇಳುತ್ತಾರೆ. ಇದು ಏಕೆಂದರೆ ಒಬ್ಬ ಕುಡಿದ ವ್ಯಕ್ತಿ ಗಾಡಿಗೆ ಡಿಕ್ಕಿ ಹೊಡೆದು, 6 ನಿಮಿಷ ಸತ್ತು ಹೋಗಿ, ಈ ರೀತಿಯ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ನೋವಿನ ಜೊತೆ ಹೊಡೆದಾಡುವುದು ತುಂಬಾ ಕಷ್ಟ. ಆದರೆ ಆ ಸಮಯದಲ್ಲಿ ಅವರ ಉಪಚಾರಕ್ಕೆ ಗೆಳೆಯರು, ಕುಟುಂಬ ಮತ್ತು ಡಾಕ್ಟರ್ ಇದ್ದರು. ಆದರೆ ಆರ್ಥಿಕ ವಿಷಯದಲ್ಲಿ ಅವರು ಚೆನ್ನಾಗೆ ಇದ್ದರೂ ಅವರ ಬೆಂಬಲಕ್ಕೆ ಯಾರೂ ಇರಲಿಲ್ಲ. ಅವರು ಯಾವಾಗಲೂ ಒಬ್ಬರೇ ಇರುತ್ತಿದ್ದರು. ಯಾರಿಗೂ ಸಹಾಯ ಕೇಳಲು ಸಾಧ್ಯವಾಗುತ್ತಿರಲಿಲ್ಲ, ಏಕೆಂದರೆ ಎಲ್ಲರೂ ಅವರವರ ಬದುಕಿನಲ್ಲಿ ಕಷ್ಟದಲ್ಲಿದ್ದರು. ಹೀಗಾಗಿ ಇವೆರಡರಲ್ಲಿ ಹಣದ ಕೊರತೆಯದ ಆರ್ಥಿಕ ಸ್ಥಿತಿಯು ನನ್ನ ಬದುಕಿನ ಕೆಟ್ಟ ರಾಕ್ ಬಾಟಮ್ ಎಂದು ಹೆಲ್ ಎಲ್ರೋಡ್ ಹೇಳುತ್ತಾರೆ. ಈ ಸಮಯದಲ್ಲಿ ಅವರಿಗೆ ಆತ್ಮಹತ್ಯೆ ರೀತಿಯ ಯೋಚನೆಗಳು ಬರುತ್ತಿದ್ದವು.

ಇದನ್ನು ಓದಿ: ಕಡಿಮೆ ಮಾತನಾಡುವ ಜನರ 5 ಗುಣಗಳು

ಒಂದು ಬೆಳಗ್ಗೆ ಅವರ ಗೆಳೆಯ ಜಾನ್ ಬರ್ಗಾಫ್ ಅವರ ಜೊತೆ ಮಾತನಾಡಿದಾಗ, ಅವರ ಪರಿಸ್ಥಿತಿಯನ್ನು ತಿಳಿದುಕೊಂಡು ಅವರ ಅನುಭವಗಳನ್ನು ತಿಳಿಸಲು ಪ್ರಾರಂಭಿಸಿದರು. ಅವರು, "ಒಂದು ಸಮಯದಲ್ಲಿ ನಾನು ತುಂಬಾ ಒತ್ತಡದಲ್ಲಿ ಇರುತ್ತಿದೆ. ನನ್ನ ಬದುಕು ತುಂಬಾ ಕೆಟ್ಟದಾಗಿತ್ತು, ನಾನು ಆಗ ಒಂದು ಕೆಲಸ ಮಾಡಲು ಪ್ರಾರಂಭಿಸಿದೆ ಮತ್ತು ಅದು ನನ್ನ ಜೀವನದಲ್ಲಿ ತುಂಬಾ ಬದಲಾವಣೆಯನ್ನು ತಂದಿತು". ಆಗಿದ್ದರೆ ಆ ಬದಲಾವಣೆಗಳು ಯಾವವು? ಅವೆಂದರೆ "ಬೆಳಗ್ಗೆ ಎದ್ದು ಜಾಗಿಂಗ್" ಹೋಗುವುದಾಗಿದೆ.

ಹೆಲ್ ಎಲ್ರೋಡ್ ಇದನ್ನು ಕೇಳಿದ ತಕ್ಷಣವೇ "ಇದು ನನ್ನಿಂದ ಸಾಧ್ಯವಾಗುವುದಿಲ್ಲ" ಎಂದು ತಿಳಿಸಿದರು. "ಬೆಳಗ್ಗೆ ಬೇಗನೆ ಎದ್ದು ಜಾಗಿಂಗ್ ಹೋಗಲು ನನಗೆ ಚೂರು ಇಷ್ಟವಿಲ್ಲವೆಂದು" ಹೇಳಿದರು. ಈ ಸಮಯದಲ್ಲಿ ಅವರ ಗೆಳೆಯ ಒಂದು ಮಾತನ್ನು ತಿಳಿಸಿದರು. ಅದು ಹೆಲ್ ಅವರ ಬದುಕನ್ನೇ ಬದಲಾಯಿಸಿತು. ಅವರು "ಈ ಸಮಯದಲ್ಲಿ ಬೆಳಗ್ಗೆ ಎದ್ದು ಜಾಗಿಂಗ್ ಹೋಗಲೂ ಇಲ್ಲ, ನಿನ್ನ ಪ್ರಸ್ತುತ ಪರಿಸ್ಥಿತಿ, ಇವೆರಡರಲ್ಲಿ ಯಾವುದನ್ನು ಅಧಿಕ ದ್ವೇಷ ಮಾಡುತ್ತೀಯ" ಎಂದು ಕೇಳಿದರು.

ಈ ಪ್ರಶ್ನೆಯು ಅವರನ್ನು ಯೋಚಿಸುವಂತೆ ಮಾಡಿತು. ಇದಾಗಿ ಮುಂದಿನ ದಿನವೇ ಅವರು ರನ್ನಿಂಗ್ ಮಾಡಲು ಪ್ರಾರಂಭಿಸಿದರು. ಅವರು ರನ್ನಿಂಗ್ ಮಾಡುತ್ತಾ ವೈಯಕ್ತಿಕ ಅಭಿವೃದ್ಧಿ(personal development) ಮಾಡುವ ಆಡಿಯೋಗಳನ್ನು ಕೇಳುತ್ತಿದ್ದರು. ಇದರ ಪ್ರಕಾರ "ಒಬ್ಬ ವ್ಯಕ್ತಿ ಅವನ ವೈಯಕ್ತಿಕ ಅಭಿವೃದ್ಧಿಯಷ್ಟು ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ". ನೀವು ಎಷ್ಟು ವೈಯಕ್ತಿಕ ಅಭಿವೃದ್ಧಿ ಹೊಂದುತ್ತೀರೋ, ಅಷ್ಟೇ ಸಂಪತ್ತನ್ನು ಆಕರ್ಷಿಸಬಹುದು.

ಉದಾಹರಣೆಗೆ, ನಾವು ಬದುಕಿನಲ್ಲಿ ಆರೋಗ್ಯ, ಸಂತೋಷ, ಸಂಬಂಧ, ವೃತ್ತಿ, ಆಧ್ಯಾತ್ಮಿಕ, ಆರ್ಥಿಕ ಸ್ಥಿತಿಯಲ್ಲಿ 10 ರಲ್ಲಿ 10 ರಷ್ಟು ಗಳಿಸಲು ಬಯಸುತ್ತೇವೆ. ಆದರೆ ನಮ್ಮ ವೈಯಕ್ತಿಕ ಅಭಿವೃದ್ಧಿಯು 1 ರಿಂದ 5 ರಷ್ಟು ಮಾತ್ರ ಇರುತ್ತದೆ. ನಾವು ವೈಯಕ್ತಿಕ ಅಭಿವೃದ್ಧಿಯಲ್ಲಿ ಲೆವೆಲ್ 10 ಮುಟ್ಟುವವರೆಗೂ, ಲೆವೆಲ್ 10 ನಲ್ಲಿ ಇರುವ ವಸ್ತುಗಳನ್ನು ಆಕರ್ಷಿಸಲು ಸಾಧ್ಯವಿಲ್ಲ.

ಇದನ್ನು ತಿಳಿದ ನಂತರ ಹೆಲ್ ಅವರು ಇನ್ನಷ್ಟು ಸ್ವಯಂ ಅಭಿವೃದ್ಧಿ ಮಾಡುವ ಪುಸ್ತಕಗಳನ್ನು ಓದಲು ಪ್ರಾರಂಭಿಸಿದರು. ಯಶಸ್ವಿಯಾಗಲು ಬೇಕಾಗಿರುವ ಎಲ್ಲಾ ಒಳ್ಳೆಯ ಮಾಹಿತಿಗಳನ್ನು ಅವರು ತಿಳಿದುಕೊಂಡರು. ಇದನ್ನು ತಿಳಿದ ನಂತರ ಅವರಿಗೆ ಒಂದು ಮುಖ್ಯ ವಿಷಯಗಳು ತಿಳಿದವು. ಅವುಗಳನ್ನು ಎಲ್ಲ ಪುಸ್ತಕ ಮತ್ತು ಲೇಖಕರು ಸಾಮಾನ್ಯವಾಗಿ ಹೇಳುತ್ತಿದ್ದರು. ಇಷ್ಟು ಪಾಠಗಳನ್ನು ಓದಿದ ನಂತರ ಅವರಿಗೆ ಸಾಮಾನ್ಯವಾದ ಅತ್ಯಂತ ಶಕ್ತಿಶಾಲಿಯಾದ ಪಾಠದ ಬಗ್ಗೆ ತಿಳಿಯಿತು. ಅವರು ಎಲ್ಲಾ ಲೇಖಕರು ಹೇಳುತ್ತಿದ್ದ ಮಾತನ್ನು ಸೇರಿಸಿ ಒಮ್ಮೆಲೆ ಪಾಲಿಸಬೇಕೆಂದು ಯೋಚಿಸಿದರು. ಇದರಿಂದಲೇ ಅನೇಕ ಪುಸ್ತಕಗಳು ತಿಳಿಸಿದ ರೀತಿಯಲ್ಲೇ ಬೆಳಗ್ಗೆ ಬೇಗ ಏಳಲು ಪ್ರಾರಂಭಿಸಿದರು ಮತ್ತು 6 ವಿವಿಧ ರೀತಿಯ ವ್ಯಾಯಾಮಗಳನ್ನು ಮಾಡಲು ಪ್ರಾರಂಭಿಸಿದರು.

ಈ ಲೇಖನದಲ್ಲಿ ನಾವು ಬೆಳಗ್ಗೆ ಬೇಗನೆ ಏಳುವುದು ಹೇಗೆ ಎಂದು 4 ಹಂತದಲ್ಲಿ ತಿಳಿಸಲಿದೆ ಮತ್ತು ಆ ಆರು ವ್ಯಾಯಾಮಗಳ ಬಗ್ಗೆಯು ತಿಳಿಸಲಿದ್ದೇವೆ.

ಇದನ್ನು ಓದಿ: ಉನ್ನತ ವ್ಯಕ್ತಿಯಾಗಲು ಇರುವ ಮಾರ್ಗ

ಆಗಿದ್ದರೆ, how to wake up early?, ಬೆಳಗ್ಗೆ ಬೇಗನೆ ಏಳುವುದು ಹೇಗೆ?

Step 1: Set your intentions clearly.

how to wake up early in morning in kannada
how to wake up early

ರಾತ್ರಿ ತಡವಾಗಿ ಮಲಗುವ ಕಾರಣ ನಾವು ಬೆಳಗ್ಗೆ ಬೇಗನೇ ಏಳದೆ ಇರಲು ಕಾರಣವಿರಬಹುದು. ಇದರಿಂದಾಗಿ ಬೆಳಗ್ಗೆ ಬೇಗನೆ ಏಳಲು ಹೋದಾಗ, "ತುಂಬಾ ತಡವಾಗಿ ಮಲಗಿದ್ದೆ, ಇನಷ್ಟು ಮಲಗುತ್ತೇನೆ, ಇಲ್ಲ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ" ಎಂದು ಅನಿಸುತ್ತದೆ. ಇದರಿಂದ ಹೊರಗೆ ಬರಲು ನೀವು ಹಿಂದಿನ ರಾತ್ರಿಯೇ ಏಳುವ ಉದ್ದೇಶವನ್ನು(intension) ತೆಗೆದುಕೊಳ್ಳಬೇಕು. ಕನಿಷ್ಠ 2 ಗಂಟೆ ನಿದ್ದೆಯಾದರೂ ಬೆಳಗ್ಗೆ ಬೇಗನೇ ಏಳುವೇ ಮತ್ತು ಮುಂದಿನ ದಿನ ಬೇಗನೆ ಮಲಗಿ ಅದನ್ನು ಕವರ್ ಮಾಡುವೇ, ಆದರೆ ನಾಳೆ ಏಳಲೇಬೇಕು" ಎಂದು ಯೋಚಿಸಬೇಕು. ನಮಗೆ ಎಲ್ಲಿಯಾದರೂ ಪ್ರಯಾಣ ಮಾಡಬೇಕೆಂದಿದ್ದರೆ ಒಂದು ದಿನದ ಮುಂಚೆ ನಮ್ಮ ಉದ್ದೇಶ ಸ್ಪಷ್ಟವಿರುತ್ತದೆ. ಇದರಿಂದ ಅಂದು ಬೆಳಗ್ಗೆ ಬೇಗನೆ ಏಳುತ್ತೇವೆ. ತಮ್ಮ ಉದ್ದೇಶವನ್ನು ಸರಿಯಾಗಿ ಇಟ್ಟುಕೊಂಡು ಬೆಳಗ್ಗೆ ಬೇಗನೇ ಏಳಿ.

Step 2: Move your alarm clock across the room.

ತುಂಬಾ ಜನ ಅಲರಾಂ ಅನ್ನು ಅವರ ತಲೆಯ ಪಕ್ಕದಲ್ಲಿ ಇಟ್ಟುಕೊಳ್ಳುವ ತಪ್ಪನ್ನು ಮಾಡುತ್ತಾರೆ. ಇದರಿಂದ ತಕ್ಷಣ ಅವರು ಅದನ್ನು ಆಫ್ ಮಾಡಿ ಮಲಗುತ್ತಾರೆ. ಅದೇ ನೀವು ನಿಮ್ಮ ಅಲರಾಂ ಅನ್ನು ದೂರ ಇಟ್ಟರೆ, ನೀವು ಎದ್ದು ಹೋಗಿ ಅದನ್ನು ಆಫ್ ಮಾಡಬೇಕಾಗುತ್ತದೆ. ಇದು ನೀವು ಬೆಳಗ್ಗೆ ಏಳಲು ಒಂದು ಉದ್ದೇಶವನ್ನು ನೀಡುತ್ತದೆ. ಬೆಳಗ್ಗೆ ಹಾಸಿಗೆಯಿಂದ ಏಳುವುದು ಕಷ್ಟವೆನಿಸುತ್ತದೆ. ಅದನ್ನು ನೀವು ಹಾಸಿಗೆಯಿಂದ ಎದ್ದು ಅಲರಾಂ ಅಪ್ ಮಾಡುವ ಮೂಲಕ ಪರಿಹರಿಸಬಹುದು. ಇದರಿಂದ ನಿಮಗೆ ಶಕ್ತಿ ಸಿಗುತ್ತದೆ.

ಇದನ್ನು ಓದಿ: ನೀವು ಯೋಚಿಸುವುದಕ್ಕಿಂತ ಹೆಚ್ಚು ಆಕರ್ಷಕವಿರುವ 13 ರಹಸ್ಯ ಚಿಹ್ನೆಗಳು

Step 3: Brush your teeth.

ನೀವು ಎದ್ದು ಅಲರಾಂ ಆಫ್ ಮಾಡಿದ ನಂತರ, ತಕ್ಷಣವೇ ಬ್ರಶ್ ಮಾಡಲು ಬಾತ್ ರೂಂಗೆ ಹೋಗಬೇಕು. ತಣ್ಣೀರಲ್ಲಿ ನಿಮ್ಮ ಮುಖವನ್ನು ತೊಳೆದುಕೊಳ್ಳಬೇಕು. ನಾವು ಮಲಗುವಾಗ ನಮಗೆ ಒಮ್ಮೆಲೆ ನಿದ್ದೆ ಬರುವುದಿಲ್ಲ. ನಿಧಾನವಾಗಿ ನಿದ್ದೆ ಬರುತ್ತದೆ. ನಾವು ಎಚ್ಚರಗೊಂಡಾಗ ನಮ್ಮಗೆ ಒಮ್ಮೆಲೆ ನಿದ್ದೆ ಹೋಗುವುದಿಲ್ಲ, ಬದಲಾಗಿ ನಿಧಾನವಾಗಿ ಹೋಗುತ್ತದೆ. ಕೆಲವೊಮ್ಮೆ ನಮ್ಮ ಕಣ್ಣು ಎಚ್ಚರವಿದ್ದರೂ ನಿದ್ದೆಯಲ್ಲೇ ಇರುತ್ತೇವೆ. ಹೀಗಾಗಿ ಅದರಿಂದ ಹೊರಗೆ ಬರಲು ಸಕ್ರಿಯವಾಗಿರಲು ಸಮಯ ನೀಡಿ.

Step 4: Drink a full glass of water.

ನಾವು 6 ರಿಂದ 8 ಗಂಟೆ ಮಲಗಿದಾಗ ನಮ್ಮ ದೇಹವು dehydrate ಆಗುತ್ತದೆ. ಇದು ಏಕೆಂದರೆ ಎಷ್ಟೋ ಗಂಟೆಗಳ ಕಾಲ ನಮಗೆ ನೀರು ದೊರೆತಿರುವುದಿಲ್ಲ. ನೀವು ಬೆಳ್ಳಗೆ ನೀರು ಕುಡಿಯುವುದರಿಂದ ಕಡಿಮೆ ಸುಸ್ತು ಹೊಂದಿರುತ್ತೀರಾ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ಇದು ನಿಮಗೆ ಎಚ್ಚರವಿರಲು ಸಹಕರಿಸುತ್ತದೆ. ಹೀಗಾಗಿ ನಾಲ್ಕನೇ ಸ್ಟೆಪ್ ಅನ್ನು ಅನುಸರಿಸಿ.

ಈ 4 ಸ್ಟೆಪ್ಗಳನ್ನು ಪಾಲಿಸಿದ ನಂತರ ನೀವು 6 ಬೆಳ್ಳಗಿನ ಹವ್ಯಾಸಗಳನ್ನು ಪಾಲಿಸಬೇಕು. ಇದನ್ನು ಹೆಲ್ ಎಲ್ರೋಡ್ ಅವರು ಅನೇಕ ಪುಸ್ತಕಗಳಿಂದ ಕಲಿತರು.

Number 1: Silence.

why quite mornings are important in kannada
silence

ಬೆಳಗ್ಗೆ ಎದ್ದ ತಕ್ಷಣ ಜನರು ಮಾಡುವ ಸಾಮಾನ್ಯ ತಪ್ಪೆಂದರೆ ಅವರು ತಮ್ಮ ಮೊಬೈಲನ್ನು ಬಳಸಲು ಪ್ರಾರಂಭಿಸುತ್ತಾರೆ. ಅದರಲ್ಲಿ ಅವರಿಗೆ ಆಕರ್ಷಿಸುವ ವಿಷಯಗಳು ಕಾಣುತ್ತವೆ. ಕೆಲವೊಮ್ಮೆ ಅವರು ಲೇಟಾಗಿ ಎದ್ದು ಫೋನ್ ನೋಡಿದಾಗ ಅವರ ಫೋನ್‍ನಲ್ಲಿ ತುಂಬಾ ನೋಟಿಫಿಕೇಶನ್ ಬರುತ್ತಿರುತ್ತದೆ. ಅವರು ತುಂಬಾ ಕೆಲಸ ಮಾಡಬೇಕಾಗಿರುತ್ತದೆ, ಇದರಿಂದ ಅವರ ಬೆಳಗಿನ ಪ್ರಾರಂಭವೇ ಗೊಂದಲದಿಂದ ಕೂಡಿರುತ್ತದೆ. ಇದರಿಂದ ಅದು ಅವರ ದಿನವನ್ನು ನಕಾರಾತ್ಮಕತೆಯಿಂದ ತುಂಬುತ್ತದೆ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ನೀವು ನಿಶಬ್ಧದಿಂದ ಇರುವುದನ್ನು ಅಭ್ಯಾಸ ಮಾಡಬೇಕು. ಇದರಿಂದ ನೀವು ಶಾಂತಿಯಿಂದ ನಿಮ್ಮ ದಿನಚರಿಯನ್ನು ಮಾಡಬಹುದು. ನಿಶಬ್ಧಕ್ಕಾಗಿ ನೀವು ಧ್ಯಾನ, ಪ್ರಾರ್ಥನೆ, ಆಳವಾದ ಉಸಿರಾಟ ವ್ಯಾಯಾಮಗಳನ್ನು ಮಾಡಬಹುದು. ಇದು ನಿಮ್ಮ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ(relax) ನೀಡುತ್ತದೆ ಮತ್ತು ನಿಮಗೆ ಒಂದು ಸ್ಪಿರಿಟ್ ನೀಡುತ್ತದೆ. ಇದು ನಿಮ್ಮ ಪೂರ್ತಿ ದಿನವನ್ನು ಪರಿಣಾಮಕಾರಿಯಾಗಿ ಮಾಡುತ್ತದೆ. ಇದನ್ನು ನೀವು ಬೆಳಗ್ಗೆ ಹತ್ತು ನಿಮಿಷ ಮಾಡಿದರು ಅಧಿಕ ಸಕಾರಾತ್ಮಕತೆಯು ಸಿಗುತ್ತದೆ.

ಇದನ್ನು ಓದಿ: ರಾಬರ್ಟ್‌ ಕಿಯೋಸಾಕಿ ಅವರ ಎಲ್ಲಾ ಪುಸ್ತಕದ Summary

Number 2: Affirmations.

do morning affirmations works in kannada
affirmations

ಲೇಖಕರ ಅಪಘಾತದ(accident) ನಂತರ ಅವರ ಮೆದುಳಿನಲ್ಲಿ ಗಾಯಗಳಾಗಿದ್ದವು. ಅವರಿಗೆ ಎಲ್ಲವನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲವೆನಿಸುತ್ತಿತ್ತು. ಇದರಿಂದ ಅವರು "ಈ ಕಾರಿನ ಅಪಘಾತದಿಂದ ಮೆಮೋರಿ ಅಲ್ಪಾವಧಿ ಆಗಿದೆ" ಎಂದು ಯೋಚಿಸುತ್ತಿದ್ದರು. ಅಪಘಾತವಾಗಿ 7 ವರ್ಷವಾದರೂ ಅವರು ಆ ರೀತಿ ಯೋಚಿಸುತ್ತಿದ್ದರು. ಅವರು ಇದು ಗುಣಮುಖವಾಗಬಹುದು(recover) ಎಂದು ಯೋಚಿಸುತ್ತಿರಲಿಲ್ಲ. ಹೆನ್ರಿ ಫೋರ್ಡ್ ಅವರ ಪ್ರಸಿದ್ಧ ಉಲ್ಲೇಖವಿದೆ ಅದೆಂದರೆ, "if you think you can or you think you cannot both are true, it depends which one you choose". ಇದನ್ನು ಕೇಳಿದ ನಂತರ ಅವರು ದೃಢೀಕರಣ(affirmations) ಹೇಳಲು ಪ್ರಾರಂಭಿಸಿದರು. ಅವರು ಅಪಘಾತದಿಂದ ಮೆಮೊರಿ ಅಲ್ಪಾವಧಿಯಾಗಿದೆ ಎಂದು ಯೋಚಿಸುವುದನ್ನು ಬಿಟ್ಟು, "ನನ್ನ ಮೆದುಳು ತುಂಬಾ ಶಕ್ತಿಯುತವಾಗಿದೆ, ಅದು ತನ್ನನ್ನು ತಾನೇ ಸರಿಪಡಿಸಿಕೊಳ್ಳಬಹುದು. ನನ್ನ ಮೆಮೋರಿ ಸುಧಾರಿಸಿಕೊಳ್ಳುತ್ತಿದೆ" ಎಂದು ಯೋಚಿಸಲು ಪ್ರಾರಂಭಿಸಿದರು. ಈ ರೀತಿ ಅವರು ದಿನ ಬೆಳಗ್ಗೆ ಹೇಳಲು ಪ್ರಾರಂಭಿಸಿದರು.

ಇದಾಗಿ 2 ತಿಂಗಳ ನಂತರವೇ ಅವರಿಗೆ ಪಾಸಿಟಿವ್ ಫಲಿತಾಂಶಗಳು ಸಿಗಲು ಪ್ರಾರಂಭವಾಯಿತು. ಇದರಿಂದ ಅವರ ಮೆಮೋರಿಯಲ್ಲಿ ಅವರಿಗೆ ಅಧಿಕ ಸುಧಾರಣೆ ಕಂಡಿತು. ಹೀಗಾಗಿ ನೀವು ಒಳ್ಳೆಯ ದೃಢೀಕರಣವನ್ನು ಬಳಸಲು ಪ್ರಾರಂಭಿಸಿದರೆ, ಇದು ನಿಮ್ಮ ಆರೋಗ್ಯ, ಸಂತೋಷ, ಆತ್ಮವಿಶ್ವಾಸ, ಮನಸ್ಥಿತಿ ರೀತಿಯ ಅನೇಕ ವಿಷಯಗಳನ್ನು ಉತ್ತಮ ಮಾಡಲು ಸಾಧ್ಯವಾಗಿಸುತ್ತದೆ.

Number 3: Visualize.

how do you visualize your day in kannada
visualize

ಅನೇಕ ಜನರು ತಮ್ಮ ಮೆದುಳಿನಲ್ಲಿ ಕೆಟ್ಟ ವಿಷಯಗಳನ್ನು ದೃಶ್ಯೀಕರಿಸುತ್ತಾರೆ. ಅವೆಂದರೆ "ಅವನು ಏಕೆ ಆ ರೀತಿ ಮಾಡಿದನು?". ಅವರ ಭೂತಕಾಲದಲ್ಲಿ ನಡೆದ ಕೆಲವು ಕೆಟ್ಟ ವಿಷಯಗಳ ಬಗ್ಗೆ ಯೋಚಿಸುತ್ತಿರುತ್ತಾರೆ. ಈ ರೀತಿಯ ನಕಾರಾತ್ಮಕ ಯೋಚನೆಗಳಿಂದ ಅವರ ಕ್ರಮ ಕೂಡ ನಕಾರಾತ್ಮಕವಾಗಿರುತ್ತದೆ. ಹೀಗಾಗಿ ನೀವು ಇದರ ವಿರುದ್ಧದವಾಗಿ ದೃಶ್ಯೀಕರಿಸಬೇಕು. ನಿಮ್ಮ ಗುರಿಯನ್ನು ಮುಟ್ಟಲು ನಿಮ್ಮ ದೃಷ್ಟಿ(vision) ತುಂಬಾ ಸ್ಪಷ್ಟವಾಗಿರಬೇಕು ಮತ್ತು ಅದನ್ನು ಒಳ್ಳೆಯ ರೀತಿಯಲ್ಲಿ ದೃಶ್ಯೀಕರಿಸಬೇಕು. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿರಬೇಕು? ನೀವು ಯಾವ ಕಾರನ್ನು ಓಡಿಸುತ್ತೀರಾ? ನೀವು ಯಾವ ರೀತಿಯ ಜನರ ಜೊತೆ ಕೆಲಸ ಮಾಡುತ್ತಿದ್ದೀರಾ? ನೀವು ಎಲ್ಲೆಲ್ಲಿ ಪ್ರಯಾಣಿಸುತ್ತಿದ್ದೀರಾ? ಎಂಬುದರ ಬಗ್ಗೆ ಕಲ್ಪಿಸಿಕೊಳ್ಳಬೇಕು.

ಇವುಗಳ ಬಗ್ಗೆ ನೀವು ಸಕಾರಾತ್ಮಕವಾಗಿ ಯೋಚನೆ ಮಾಡುವುದರಿಂದ ಇದು ನಿಮಗೆ ಒಂದು ಒಳ್ಳೆಯ ದಾರಿಯಲ್ಲಿ ಕರೆದುಕೊಂಡು ಹೋಗುತ್ತದೆ. ಲೇಖಕರು ಬೆಳಗ್ಗೆ ಎದ್ದ ತಕ್ಷಣ 5 ನಿಮಿಷ ಕಣ್ಣು ಮುಚ್ಚಿ ಅವರ ದಿನ ಹೇಗಿರಬೇಕೆಂದು ದೃಶ್ಯೀಕರಿಸುತ್ತಿದ್ದರು. ಇದರಿಂದ ಎಷ್ಟೋ ಸಲ ಅವರು ಕಲ್ಪಿಸಿಕೊಂಡ ರೀತಿಯಲ್ಲೇ ಕೆಲಸಗಳು ಆಗುತ್ತಿದ್ದವು. ಹೀಗಾಗಿ ಅವರು ಬೇಗನೆ ಅವರ ಸಾಲವನ್ನು ಮರುಪಾವತಿಸಿದರು, ಆರೋಗ್ಯವನ್ನು ಸುಧಾರಿಸಿಕೊಂಡರು ಮತ್ತು ಬದುಕಿನಲ್ಲಿ ಅಧಿಕ ವಿಷಯಗಳನ್ನು ಸಾಧಿಸಿದರು.

ಇದನ್ನು ಓದಿ: ಎಂಟು ಪರಿಣಾಮಕಾರಿ ಅಧ್ಯಯನ ತಂತ್ರಗಳು

Number 4: Exercise.

is it good to exercise in morning in kannada
exercise

ರಾಬಿನ್ ಶರ್ಮಾ ಅವರ ಒಂದು ಪ್ರಸಿದ್ಧ ಉಲ್ಲೇಖವಿದೆ ಅದೆಂದರೆ "if you do not make time for exercise, you will probably have to make time for illness". ಸಿಬ್ಬಂದಿ ಅಭಿವೃದ್ಧಿ ತರಬೇತುದಾರ ಮತ್ತು ಸ್ವಯಂ ನಿರ್ಮಿತ ಬಹು ಮಿಲಿಯನೇರ್ ಉದ್ಯಮಿಯಾದ ಎಗನ್ ಪೆಗನ್ ಅವರಿಗೆ, "ಅವರ ಯಶಸ್ಸಿನ ಒಂದೇ ಒಂದು ಕಾರಣ ಏನು" ಎಂದು ಕೇಳಿದಾಗ ಅವರು, "ನನ್ನ ಬೆಳಗ್ಗೆಯನ್ನು ವೈಯಕ್ತಿಕ ಆಧ್ಯಾತ್ಮಿಕತೆಯ ಜೊತೆ ಪ್ರಾರಂಭಿಸುವುದಾಗಿದೆ" ಎಂದು ಹೇಳುತ್ತಾರೆ. ಇದು ಅವರ ಯಶಸ್ಸಿಗೆ ಒಂದು ಕಾರಣವಾಗಿದೆ. ಅವರು ಬೆಳಗಿನ ವ್ಯಾಯಾಮವನ್ನು ತುಂಬಾ ಮುಖ್ಯ ಎಂದು ಭಾವಿಸುತ್ತಾರೆ.

ಅವರು ಪ್ರತಿ ಬೆಳಗ್ಗೆ ನಮ್ಮ ಹೃದಯ ಬಡಿತವನ್ನು(heart rate) ಹೆಚ್ಚಿಸಬೇಕು ಎಂದು ಹೇಳುತ್ತಾರೆ. ಬೆಳಗ್ಗೆ ನಮ್ಮ ರಕ್ತ ಹರಿಯುವಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ಶ್ವಾಸಕೋಶದಲ್ಲಿ ಶುದ್ಧವಾದ ಗಾಳಿ ತುಂಬಿಸಿಕೊಳ್ಳಬೇಕು. ಇದನ್ನು ದಿನದ ಮಧ್ಯ ಅಥವಾ ಕೊನೆಯಲ್ಲಿ ಅಲ್ಲದೆ ದಿನದ ಪ್ರಾರಂಭದಲ್ಲೇ ಮಾಡಬೇಕು. ಇದರಿಂದ ನೀವು ದಿನವನ್ನು ಸಕಾರಾತ್ಮಕವಾಗಿ ನೋಡಬಹುದು. ಹೀಗಾಗಿ ಪ್ರತಿದಿನ ಬೆಳಗ್ಗೆ ಕನಿಷ್ಠ 20 ನಿಮಿಷಗಳಿಗಾದರೂ ಏರೋಬಿಕ್ ವ್ಯಾಯಾಮಗಳನ್ನು ಮಾಡಿ. ಏಕೆಂದರೆ ಕೊನೆಯಲ್ಲಿ ನಿಮ್ಮ ಆರೋಗ್ಯ ಎಷ್ಟು ಚೆನ್ನಾಗಿರುತ್ತದೆಯೊ ಅಷ್ಟು ನೀವು ಸಕ್ರಿಯವಾಗಿರುತ್ತೀರಾ.

Number 5: Reading.

is it better to read in morning or night in kannada
reading

ಓದುವುದು ಒಂದು ಅತ್ಯುತ್ತಮ ಶಾರ್ಟ್ಕಟ್ ಎನ್ನಬಹುದು. ಬದುಕಿನಲ್ಲಿ ಯಾವುದೇ ಶಾರ್ಟ್ಕಟ್ ಇರುವುದಿಲ್ಲ. ಆದರೆ ಯಶಸ್ಸನ್ನು ಸಾಧಿಸಲು ಯಾವುದಾದರೂ ಒಂದು ಶಾರ್ಟ್ಕಟ್ ಇದೆ ಎಂದರೆ ಅದು ಓದುವುದಾಗಿದೆ. ಏಕೆಂದರೆ ನೀವು ಓದುವ ಮೂಲಕ ಇತರ ಜನರ ಜೀವನದ ಕಷ್ಟ ಮತ್ತು ಯಶಸ್ಸಿನ ಬಗ್ಗೆ ತಿಳಿದುಕೊಳ್ಳುತ್ತೀರಾ. ಪುಸ್ತಕ ನಿಮಗೆ ಯಶಸ್ಸು ಸಾಧಿಸಲು ಹಲವಾರು ಐಡಿಯಾ, ತಂತ್ರಗಳನ್ನು ನೀಡುತ್ತದೆ ಮತ್ತು ಇದು ನಿಮ್ಮ ಜೀವನದಲ್ಲಿ ಈಗಾಗಲೇ ಬಂದ ಇಲ್ಲ, ಮುಂದೆ ಬರುವ ಸಮಸ್ಯೆಗಳನ್ನು ಪರಿಹರಿಸಲು ಸಹಕರಿಸುತ್ತದೆ.

ಹೀಗಾಗಿ ಪುಸ್ತಕ ಒಂದು ಪವರ್ ಫುಲ್ ವಸ್ತುವಾಗಿದೆ. ನೀವು ದಿನದಲ್ಲಿ ಹತ್ತು ಪೇಜಸ್ ಓದಿದರೂ 1 ವರ್ಷದಲ್ಲಿ 3650 ಪೇಜಸ್ಗಳನ್ನು ಓದಿರುತ್ತೀರಾ. ಅದು 200 ಪೇಜಸಿನ 18 ಬುಕ್ ಆಗಿರುತ್ತದೆ. ಒಂದು ವರ್ಷದಲ್ಲಿ 18 ಬುಕ್‌ಗಳನ್ನು ನೀವು ಕಂಪ್ಲೀಟ್ ಮಾಡಬಹುದೆಂದರೆ, ನಿಮ್ಮ ಜ್ಞಾನ ಎಷ್ಟಿರಬಹುದು ಎಂದು ಯೋಚಿಸಿ. ಇದನ್ನು ಕೇeಳಲು ಸುಲಭವೆನಿಸುತ್ತಿರಬಹುದು. ಆದರೆ ಹತ್ತು ನಿಮಿಷ ಪುಸ್ತಕವನ್ನು ಓದಲು ಕೂಡ ಕೆಲವರಿಗೆ ಸಾಧ್ಯವಾಗುವುದಿಲ್ಲ. ಇದನ್ನು ನೀವು ಹತ್ತು ನಿಮಿಷದಲ್ಲೇ ಪುಸ್ತಕದ ಸಾರಾಂಶ ತಿಳಿಸುವ ಲೇಖನಗಳನ್ನು ಓದುವ ಮೂಲಕವೂ ತಿಳಿಯಬಹುದು.

ಇದನ್ನು ಓದಿ: 10 ಹೆಚ್ಚುವರಿ ಆದಾಯದ ಐಡಿಯಾಗಳು

Number 6: Scribing.

is it better to write in the morning in kannada
writing

ಲೇಖಕರು ಇಲ್ಲಿ "writing" ಎಂದು ಬರೆಯಲು ಯೋಚಿಸುತ್ತಿದ್ದರು. ಆದರೆ "w" ಯಿಂದ ಯಾವುದೇ ಪದ ಆಗದ ಕಾರಣ ಅವರು "scribing" ಎಂದು ಮಾಡಿದರು. scribing ಎಂದರೆ writing ಆಗಿದೆ. ನಮ್ಮನ್ನು ಸುಧಾರಿಸಿಕೊಳ್ಳಲು ಬರೆಯುವುದು ಒಂದು ಅತ್ಯುತ್ತಮ ಮಾರ್ಗವಾಗಿದೆ. ಇದನ್ನು ನೀವು ಪ್ರತಿ ಬೆಳಗ್ಗೆ 5 ರಿಂದ 10 ನಿಮಿಷ ಮಾಡಿದರೆ, ನೀವು ವೈಯಕ್ತಿಕವಾಗಿ ಅಧಿಕ ಬೆಳವಣಿಗೆ ಕಾಣುತ್ತೀರಾ. ಇದರಿಂದ ನಿಮಗೆ 3 ಲಾಭಗಳು ನಿಜವಾಗಿಯೂ ಸಿಗುತ್ತದೆ ಅದೆಂದರೆ,

• Gain clarity.

ನೀವು ಬರೆಯಲು ಪ್ರಾರಂಭಿಸಿದಾಗ ನಿಮಗೆ ಹಲವಾರು ವಿಷಯದ ಮೇಲೆ ಸ್ಪಷ್ಟತೆ ಸಿಗುತ್ತದೆ. ನೀವು ತಲೆಯಲ್ಲಿ ಕೆಲವು ವಿಷಯದ ಬಗ್ಗೆ ಯೋಚಿಸುತ್ತಲೇ ಇದ್ದರೆ, ಅದು ಗೊಂದಲ ಮಾಡುತ್ತದೆ. ಅತಿಯಾಗಿ ಯೋಚಿಸುವಂತೆ ಮಾಡುತ್ತದೆ. ಅದೇ ಪುಸ್ತಕ ತೆರೆದು ಬರೆಯಲು ಪ್ರಾರಂಭಿಸಿದಾಗ, ನಿಮಗೆ ಆ ವಿಷಯದ ಮೇಲಿನ ವಿಚಾರ ಇನ್ನಷ್ಟು ಸ್ಪಷ್ಟವಾಗುತ್ತದೆ.

• Review lessons.

ನೀವು ನಿಮ್ಮ ಐಡಿಯಾಗಳನ್ನು ಬರೆಯುವುದರಿಂದ ನಂತರ ಅವುಗಳನ್ನು ಸಮೀಕ್ಷೆ ಮಾಡಲು ಸುಲಭವಾಗುತ್ತದೆ. ನಾವು ಅಧಿಕ ಯೋಚಿಸುತ್ತೇವೆ. ಇದರಿಂದ ಅದು ನಮ್ಮ ತಲೆಯಿಂದ ಹೋಗುತ್ತದೆ. ಅದೇ ನೀವು ಬರೆದರೆ ನಿಮಗೆ ಸಮೀಕ್ಷೆ ಮಾಡಲು ಸುಲಭವಾಗುತ್ತದೆ.

• Acknowledge your progress.

ನೀವು ಬರೆಯುವುದರಿಂದ ಒಂದು ವರ್ಷದಲ್ಲಿ ಎಷ್ಟು ಮುನ್ನಡೆಯನ್ನು ಮಾಡಿದ್ದೇನೆ ಎಂದು ಪುಸ್ತಕ ನೋಡಿ ತಿಳಿಯಬಹುದು. ನೀವು ಯಾವ ವಿಷಯದ ಮೇಲೆ ಕೆಲಸ ಮಾಡಲು ಯೋಚಿಸುತ್ತಿದ್ದೀರಾ? ನಿಮ್ಮ ಗುರಿ ಏನು? ನಿಮ್ಮ ಪ್ಲಾನ್ ಏನ್ನಿತ್ತು, ಇಂದು ನಿಮ್ಮ ಪ್ಲಾನ್ ಏನಾಗಿದೆ ಎಂಬ ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೀರಾ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments