5 Techniques for Studies | ಓದಲು ಐದು ತಂತ್ರಗಳು
Info Mind 4284
Watch Video
ಯಾವುದಾದರೂ ಪುಸ್ತಕ ಕೊಟ್ಟು ಓದಲು ಹೇಳಿದರೆ ಎಲ್ಲರೂ ಓದುತ್ತಾರೆ. ಆದರೆ ಇಲ್ಲಿ ಬರುವ ವಿಷಯವೆಂದರೆ ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ? ದೀರ್ಘಾವಧಿ ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ?
ಈ ಆರ್ಟಿಕಲ್ ನ್ನು ಓದುತ್ತೀರಿ....
ನಮ್ಮ ಮೆದುಳು ಒಂದು ಹಾರ್ಡವೇರ್ ಇದ್ದ ಹಾಗೇ. ಮೆದುಳಿಗೆ ಯಾವ ವಿಷಯ ಇಂಪಾರ್ಟೆಂಟ್ ಅನ್ನಿಸುತ್ತದೆಯೋ ಅದನ್ನು ನೆನಪಿನಲ್ಲಿ ಇಟ್ಟುಕೊಂಡಿರುತ್ತದೆ. ನೀವು ಓದುವಾಗ ಮೆದುಳು ಅದನ್ನು ತಾತ್ಕಾಲಿಕ ಮೆಮೊರಿಯಲ್ಲಿ ಹಾಕುತ್ತದೆ. ನೀವೇನಾದರೂ ಅದನ್ನು ಸ್ವಲ್ಪ ಹೊತ್ತು ಬಿಟ್ಟು ಓದಿಲ್ಲವೆಂದರೆ ನಿಮ್ಮ ಮೆದುಳು ಅದನ್ನು ತೆಗೆದುಹಾಕುತ್ತದೆ.
ಇದನ್ನು ಓದಿ: ಗಣಿತವನ್ನು ವೇಗವಾಗಿ ಕಲಿಯುವುದು ಹೇಗೆ?ಸೈಂಟಿಫಿಕ್ ಅನಾಲಿಸಿಸ್ ಪ್ರಕಾರ ನಾವು ಓದಿ ಅರ್ಧ ಗಂಟೆಗೆ ಅರ್ಧ ವಿಷಯವನ್ನು ಮರೆಯುತ್ತೇವೆ. ಹೀಗಾಗಿ ನಾವು ನಿಮಗೆ ಇಂದು ಓದುವ ರಿಪಿಟೇಶನ್ ಟೈಮಿಂಗ್ ಬಗ್ಗೆ ಹೇಳುತ್ತಿದ್ದೇವೆ.
ಓದಿದ್ದನ್ನು ಬೇಗನೆ ನೆನಪಿಟ್ಟುಕೊಳ್ಳಲು, ನಿಮ್ಮ ಮೊದಲನೇ ರಿಪಿಟೇಶನ್ ಓದಿದ ತಕ್ಷಣವೇ ಮಾಡಿ. ಎರಡನೇ ರಿಪಿಟೇಶನ್ 15- 20 ನಿಮಿಷವಾದ ಮೇಲೆ ಮಾಡಿ. ಮೂರನೇ ರಿಪಿಟೇಶನ್ 6-8 ಗಂಟೆಯಾದ ಮೇಲೆ ಮಾಡಿ. ನಾಲ್ಕನೇ ರಿಪಿಟೇಶನ್ 24 ಗಂಟೆಯಾದ ಮೇಲೆ ಮಾಡಿ.
ಈ ಮೆತೆಡ್ ಯೂಸ್ ಮಾಡಿ ನೀವು ಬೇಗನೆ ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳಬಹುದು. ನಿಮ್ಮ ರಿಪಿಟೇಶನ್ ಸಮಯದಲ್ಲಿ ಮೆದುಳಿಗೆ ಇದು ಇಂಪಾರ್ಟೆಂಟ್ ವಿಷಯ ಎನಿಸಿ, ಅದನ್ನು ಪರ್ಮನೆಂಟ್ ಮೆಮೊರಿಯಲ್ಲಿ ಹಾಕುತ್ತದೆ.
ಇನ್ನು ಓದಿದ್ದನ್ನು ದೀರ್ಘಾವಧಿ ನೆನಪಿಟ್ಟುಕೊಳ್ಳಲು ಈ ರೀತಿ ರಿಪಿಟೇಶನ್ ಮಾಡಿ. ನಿಮ್ಮ ಮೊದಲನೇ ರಿಪಿಟೇಶನ್ ಮೇಲೆ ಹೇಳಿದಂತೆ ಓದಿದ ತಕ್ಷಣವೇ ಮಾಡಿ. ಎರಡನೇ ರಿಪಿಟೇಶನ್ ಓದಿ 20- 30 ನಿಮಿಷವಾದ ಮೇಲೆ ಮಾಡಿ. ಮೂರನೇ ರಿಪಿಟೇಶನ್ ಓದಿ ಒಂದು ದಿನವಾದ ಮೇಲೆ ಮಾಡಿ.
ನಾಲ್ಕನೇ ರಿಪಿಟೇಶನ್ ಓದಿ 2- 3 ವಾರಗಳಾದ ಮೇಲೆ ಮಾಡಿ. ಇನ್ನು ಕೊನೆಯ ಐದನೇ ರಿಪಿಟೇಶನ್ ಓದಿ 2- 3 ತಿಂಗಳಾದ ಮೇಲೆ ಮಾಡಿ. ಈ ರಿಪಿಟೇಶನ್ ಟೆಕ್ನಿಕ್ ಬಳಸುವುದರಿಂದ ನೀವು ದೀರ್ಘಾವಧಿ ನಿಮ್ಮ ಮೆದುಳಿನಲ್ಲಿ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು.
ಕೇವಲ ರಿಪಿಟೇಶನ್ ಅಲ್ಲದೆ ನೀವು ಈ ವಿಷಯದ ಮೇಲೆ ಗಮನ ಕೊಡಬೇಕು.
ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
Info Mind 4284
Info Mind 1366
Info Mind 8187
See all comments...
sushma • November 29th,2022
ಉಪಯುಕ್ತ ಮಾಹಿತಿ.