Website designed by @coders.knowledge.

Website designed by @coders.knowledge.

Sip vs Lumpsum Which is Better for Investing | Sip vs Lumpsum ಹೂಡಿಕೆಗೆ ಯಾವುದು ಉತ್ತಮ?

Watch Video

ಹೂಡಿಕೆ ಮಾಡಲು ಸರಿಯಾದ ಮಾರ್ಗ ಯಾವುದು ಎಂಬ ಪ್ರಶ್ನೆ ಪ್ರತಿಯೊಬ್ಬ ಹೂಡಿಕೆದಾರನಿಗೆ ಇರುತ್ತದೆ. ಒಂದು ನಾವು ಸಣ್ಣ ಮೊತ್ತದಿಂದ ನಿರಂತರವಾಗಿ ಹೂಡಿಕೆ ಮಾಡಬೇಕಾ, ಅಂದರೆ 500 ಇಲ್ಲ 5,000ರೂನ ಪ್ರತಿ ತಿಂಗಳ sip ಮಾಡಬೇಕಾ? ಇಲ್ಲ ಹಣವನ್ನು ಉಳಿಸಿ, ಒಮ್ಮೆಲೆ 5,000 ಇಲ್ಲ 5 ಲಕ್ಷವನ್ನು lumpsum ಹೂಡಿಕೆ ಮಾಡಬೇಕಾ? ಹಾಗಿದ್ದರೆ ಹೂಡಿಕೆ ಮಾಡಲು sip ಇಲ್ಲ lumpsumನಲ್ಲಿ ಯಾವುದು ಉತ್ತಮ ತಂತ್ರವಾಗಿದೆ. ಈ ಪ್ರಶ್ನೆಗೆ ಉತ್ತರ ನಿಮಗೆ ಲೇಖನದಲ್ಲಿ ಸಿಗಲಿದೆ. ಈ ಲೇಖನದಲ್ಲಿ ನಾವು ಹೂಡಿಕೆ ಮಾಡಲು ಇರುವ ಸರಿಯಾದ ಸಮಯದ ಬಗ್ಗೆಯು ತಿಳಿಸಲಿದ್ದೇವೆ ಮತ್ತು ಯಾವ ತಂತ್ರ ಯಾವ ವ್ಯಕ್ತಿಗೆ ಹೊಂದುತ್ತದೆ(suit) ಎಂಬುದನ್ನು ತಿಳಿಸಲಿದೆ. ಇವುಗಳ ಜೊತೆಗೆ "ಪವರ್ ಆಫ್ ಕಂಪೌಂಡಿಂಗ್" ಇವುಗಳಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯಲಿದ್ದೇವೆ. ಇವುಗಳಲ್ಲಿ ನಾವು cagr ಮತ್ತು irr ನಂತಹ ಪರಿಕಲ್ಪನೆಗಳನ್ನು(concept) ಅರ್ಥ ಮಾಡಿಕೊಳ್ಳಲಿದ್ದೇವೆ.

which is best one time or sip in kannada
lifetime wealth

ಇವುಗಳನ್ನು ಉದಾರಣೆಯ ಮೂಲಕ ನಿಮಗೆ ಸರಳವಾಗಿ ತಿಳಿಸುತ್ತೇವೆ. ಈ ಲೇಖನದಲ್ಲಿ ನಾವು ಮೂರು ಕಥೆಗಳ ಮೂಲಕ ಎರಡು ವಿಧಾನಗಳನ್ನು ವಿಶ್ಲೇಷಣೆ ಮಾಡಲಿದ್ದೇವೆ. ಈ ಒಂದು ಲೇಖನದಿಂದ ನಿಮ್ಮ ಹೂಡಿಕೆಯ ಜ್ಞಾನವೂ ತುಂಬಾ ಸುಧಾರಿಸಿಕೊಳ್ಳಲಿದೆ ಮತ್ತು ನಿಮ್ಮ ಬದುಕಿನಲ್ಲಿ ಇದರಿಂದ ಲಕ್ಷಗಟ್ಟಲೆಲ್ಲ ಲಾಭ ಗಳಿಸಬಹುದು.

Story 1

1992ರಂದು ಲಕ್ಕಿ(lucky) ಮತ್ತು ಮಾಂಟಿ(monty) ಎಂಬ ಇಬ್ಬರು ಗೆಳೆಯರು ಇದ್ದರು. ಇಬ್ಬರಿಗೂ ಮದುವೆಯಾಗಿತ್ತು, ಖಾಸಗಿ(private) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ದಿನ ಇವರ ಕಂಪನಿಯಿಂದ ಇವರಿಗೆ ಬೋನಸ್(bonus) ಸಿಗುತ್ತದೆ. ಮಾಂಟಿ ಈ ಸಮಯ ಟಿವಿಯಲ್ಲಿ ಷೇರು ಮಾರುಕಟ್ಟೆ ಮೇಲೊಗುತ್ತಿರುವುದನ್ನು ನೋಡಿದ, ಅವನಿಗೆ ಇಲ್ಲಿ ಅನೇಕರು ಹಣ ಗಳಿಸಿ, ಶ್ರೀಮಂತರಾಗುತ್ತಿರುವ ಬಗ್ಗೆಯೂ ತಿಳಿದಿತ್ತು. ಹೀಗಾಗಿ ಅವನು ಅವನ ಬ್ರೋಕರ್ ಗೆಳೆಯನಿಗೆ ಕರೆ ಮಾಡುತ್ತಾನೆ. ಆತನ ಬ್ರೋಕರ್ ಗೆಳೆಯ, "ವಿಡಿಯೋಕಾನ್ನಲ್ಲಿ(videocon) ಹೂಡಿಕೆ ಮಾಡು, ಏಕೆಂದರೆ ಇದರ ಶೇರಿನ ಬೆಲೆ 8 ರೂಪಾಯಿ ಇತ್ತು, ಆದರೆ ಇಂದು 50 ರೂಪಾಯಿ ಆಗಿದೆ. ಹೀಗಾಗಿ ನಿನ್ನ ಒಂದು ಲಕ್ಷ ಕೆಲವೇ ತಿಂಗಳಲ್ಲಿ ಬೆಳೆಯುತ್ತದೆ" ಎಂದು ತಿಳಿಸುತ್ತಾನೆ. ಮಾಂಟಿ ತನ್ನ ಒಂದು ಲಕ್ಷವನ್ನು ಈ ವಿಡಿಯೋಕಾನ್ ಕಂಪನಿಯಲ್ಲಿ ಹೂಡಿಕೆ ಮಾಡುತ್ತಾನೆ. ಅಂದರೆ ಮಾಂಟಿ ಒಂದು ಲಕ್ಷದ lumpsum ಹೂಡಿಕೆ ಮಾಡಿದನು.

ಇದನ್ನು ಓದಿ: ಆರ್ಥಿಕವಾಗಿ ಸ್ವತಂತ್ರಗೊಳಿಸುವ 14 ಸ್ವತ್ತುಗಳು

"ನಾನು 50 ರೂಗೆ ಸ್ಟಾಕ್ ಖರೀದಿಸಿದೆ. ಅದು ಇಂದು 55 ರೂಗೆ ತಲುಪಿದೆ" ಎಂದು ಲಕ್ಕಿಗೆ ಮಾಂಟಿ ಹೇಳುತ್ತಾನೆ. ಆದರೆ ಲಕ್ಕಿಗೆ ಇದರಲ್ಲಿ ಏನೋ ಗೊಂದಲವಿದೆ ಎಂದು ಅನಿಸುತ್ತದೆ. ಅವನು ಕೆಲವು ಹೂಡಿಕೆಯ ಪುಸ್ತಕಗಳನ್ನು ಓದಿ, ಮ್ಯೂಚುಯಲ್ ಫಂಡ್ನಲ್ಲಿ sip ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಾನೆ. ಲಕ್ಕಿ ಲಾರ್ಜ್ ಕ್ಯಾಪ್ ಮ್ಯೂಚುಯಲ್ ಫಂಡ್ನಲ್ಲಿ(large cap mutual fund) ಪ್ರತಿ ತಿಂಗಳ 1000 ರೂಪಾಯಿಯ sip ಯನ್ನು ಮಾಡುತ್ತಾನೆ. ಇದರ ರಿಟರ್ನ್ ಸೆನ್ಸೆಕ್ಸ್ ಇಂಡೆಕ್ಸ್(sensex index) ರೀತಿಯೇ ಇತ್ತು.

ಒಂದು ಕಡೆ ಮಾಂಟಿ ಆತನ ಸ್ಟಾಕ್ ಬೇಗನೆ ಮೇಲೋಗುತ್ತಿರುವುದನ್ನು ನೋಡುತ್ತಾನೆ. ಇದರಿಂದ ಅವನು ಇನ್ನಷ್ಟು ಹೂಡಿಕೆ ಮಾಡಲು ಯೋಚಿಸುತ್ತಾನೆ. ಆತ 2 ಲಕ್ಷವನ್ನು ಒಂದು ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡುತ್ತಾನೆ. ಇಲ್ಲೂ ಕೂಡ ಆತ lumpsum ಹೂಡಿಕೆ ಮಾಡುತ್ತಾನೆ. ಮಾಂಟಿ ಈಗ ಒಟ್ಟಾರೆ 3 ಲಕ್ಷದ ಹೂಡಿಕೆ ಮಾಡಿದ್ದಾನೆ. ಅದರಲ್ಲಿ 1 ಲಕ್ಷ ಸ್ಟಾಕ್ನಲ್ಲಿ ಹೂಡಿಕೆ ಮಾಡಿದ್ದಾರೆ, ಇನ್ನು 2 ಲಕ್ಷವನ್ನು ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡಿದ. ಅದೇ ಲಕ್ಕಿ ಒಂದು ಲಾರ್ಜ್ ಕ್ಯಾಪ್ ಮ್ಯೂಚುಯಲ್ ಫಂಡ್ನಲ್ಲಿ 1000 ರೂಪಾಯಿಯ ತಿಂಗಳ sip ಮಾಡುತ್ತಾನೆ.

ಒಮ್ಮೆ sip ಮಾಡಿದರೆ ಅದನ್ನು ಇಎಂಐ(emi) ರೀತಿ ಪಾವತಿಸುತ್ತಿರಬೇಕೆಂದು ಯೋಚಿಸಿ, ಮಾಂಟಿ sip ಮೇಲೆ ಆಸಕ್ತಿ ತೋರಿಸಲಿಲ್ಲ. ಆದರೆ ಲಕ್ಕಿ, sip ಯನ್ನು ಯಾವಾಗ ಬೇಕೋ ಆಗ ನಿಲ್ಲಿಸಬಹುದು ಮತ್ತು ಅದರಲ್ಲಿರುವ ಮೊತ್ತವು(amountl) ಬೆಳೆಯುತಲ್ಲೇ ಇರುತ್ತದೆ ಎಂದು ತಿಳಿದಿತ್ತು. ಈಗ ನಾವು ಫಾಸ್ಟ್ ಫಾರ್ವರ್ಡ್ ಮಾಡಿ 2017ಕ್ಕೆ ಬರೋಣ. ಈ ಸಮಯದಲ್ಲಿ ಇವರಿಬ್ಬರು ನಿವೃತ್ತಿ(retire) ಹೊಂದಿರುತ್ತಾರೆ.

ಮಾಂಟಿ ಮೊದಲು ಹೂಡಿಕೆ ಮಾಡಿದ ಸ್ಟಾಕ್ ಈಗ ಪೆನ್ನಿ ಸ್ಟಾಕ್(penny stock) ಆಗಿದೆ. ಏಕೆಂದರೆ 1992 ರಂದು ಹರ್ಷದ್ ಮೆಹ್ತಾ ಹಗರಣದಿಂದ(harshad mehta scam) ವಿಡಿಯೋಕಾನ್ ಒಂದು ಹಾಟ್ ಸ್ಟಾಕ್(hot stock) ಆಗಿತ್ತು. ಇದರಿಂದ ಅಲ್ಪಾವಧಿಗೆ ಜನರಿಗೆ ಅದರಿಂದ ಸ್ವಲ್ಪ ಲಾಭ ಸಿಗುತ್ತಿತ್ತು, ಆದರೆ ಇಂದು ಅದರ ಸ್ಟಾಕ್ ಪೋರ್ಟ್ಪೋಲಿಯಾದ ಮೌಲ್ಯ ಸೊನ್ನೆ ಆಗಿದೆ ಮತ್ತು ಈತ 1992ರಲ್ಲಿ ಮಾಡಿದ 2 ಲಕ್ಷದ ಹೂಡಿಕೆಯ ಸಮಯದಲ್ಲಿ ಷೇರು ಮಾರುಕಟ್ಟೆ ಶಿಖರದಲ್ಲಿ(peak) ಇತ್ತು. ಆಗ ಎಲ್ಲರೂ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರು.

ಆಗ ಸೆನ್ಸೆಕ್ಸ್ 4,200 ಪಾಯಿಂಟ್ನಲ್ಲಿ ಇತ್ತು, 2017ರ ಹೊತ್ತಿಗೆ 29,000 ಪಾಯಿಂಟ್ಸ್ಗೆ ಬಂದಿತ್ತು. ಇದರಿಂದ ಅವನಿಗೆ ತನ್ನ ಹೂಡಿಕೆಯಿಂದ 7 ಪಟ್ಟು ರಿಟರ್ನ್ ದೊರೆಯಿತು. ಅಂದರೆ ಅವನ 2 ಲಕ್ಷದ ಹೂಡಿಕೆ ಇಂದು 14 ಲಕ್ಷದಷ್ಟು ಬೆಳೆದಿದೆ. ಇದನ್ನು ಕೇಳಲು ನಿಮಗೆ ಖುಷಿಯಾಗುತ್ತಿರಬಹುದು, ಆದರೆ ಈ ರಿಟರ್ನ್ ಗಳಿಸಲು ಅವನಿಗೆ 25 ವರ್ಷವಾದ ಕಾರಣ, ಅವನ ಕಾಂಪೌಂಡೆಡ್ ರಿಟರ್ನ್ ಕೇವಲ 8% ಆಗಿದೆ. ಈ cagr ಕ್ಯಾಲ್ಕುಲೇಷನ್ ಅನ್ನು ನೀವು ಗೂಗಲ್ನಲ್ಲಿ cagr ಕ್ಯಾಲ್ಕುಲೇಟರ್ ಎಂದು ಹುಡುಕಿ ಮಾಡಬಹುದು.

is cagr calculator free to use in kannada
cagr calculator

ಇನ್ನೊಂದು ಕಡೆ 1000 ರೂಪಾಯಿಯ ಹೂಡಿಕೆ ಮಾಡುತ್ತಿದ್ದ ಲಕ್ಕಿ, 25 ವರ್ಷದಲ್ಲಿ 3 ಲಕ್ಷದಷ್ಟು ಹೂಡಿಕೆ ಮಾಡಿದನು. ಆ 3 ಲಕ್ಷದ ಹೂಡಿಕೆ 32 ಲಕ್ಷದಷ್ಟು ಬೆಳೆಯುತ್ತದೆ, ಅಂದರೆ 15% ರಿಟರ್ನ್ ಆಗಿದೆ. ಇಬ್ಬರೂ ಒಂದೇ ಸಮಯದಲ್ಲಿ ಹೂಡಿಕೆ ಮಾಡಿದ್ದರು, ಮತ್ತೆ 25 ವರ್ಷಗಳಿಗೆ ಹೂಡಿಕೆ ಮಾಡಿದ್ದರು. ಆದರೆ ಒಬ್ಬನಿಗೆ 8% ದೊರೆತರೆ, ಇನ್ನೊಬ್ಬನಿಗೆ 15% ದೊರೆತಿದೆ. ಈ ರೀತಿ ಆಗಲು ಹೇಗೆ ಸಾಧ್ಯ? ಈ sip ಮತ್ತು lumpsumನಲ್ಲಿ ಯಾವುದು ಉತ್ತಮ ಎಂದರೆ ನೀವೆಲ್ಲ sip ಯನ್ನು ಉತ್ತಮ ಆಯ್ಕೆ ಎನ್ನಬಹುದು. ಆದರೆ ನಾವು ಮುಂದೆ ತಿಳಿಸುವ ಕಥೆಯಲ್ಲಿ ಬೇರೆ ರೀತಿಯೇ ಆಗಿದೆ, ನಂತರ 2 ಕಥೆಗಳನ್ನು ನಾವು ವಿಶ್ಲೇಷಿಸಲಿದ್ದೇವೆ.

ಇದನ್ನು ಓದಿ: How to Invest in 20s

Story 2

ಈಗ ನಾವು 1992 ರಿಂದ 2008ಕ್ಕೆ ಬರೋಣ. ಈ ಕಥೆಯಲ್ಲಿ ಸನ್ನಿ(sunny) ಮತ್ತು ರಾಕಿ(rocky) ಇದ್ದಾರೆ. ರಾಕಿಗೆ ಅವರ ತಂದೆ 2 ಲಕ್ಷ ನೀಡಿ ರಾಯಲ್ ಎನ್ಫೀಲ್ಡ್ ಬೈಕ್ ಖರೀದಿಸಲು ಹೇಳುತ್ತಾರೆ. ಇದೇ ರೀತಿ ಸನ್ನಿಗೂ ಅವರ ತಂದೆಯಿಂದ 2 ಲಕ್ಷ ಸಿಗುತ್ತದೆ. ಸನ್ನಿ 1,90,000ರೂ ಕೊಟ್ಟು ಬೈಕ್ ಖರೀದಿಸುತ್ತಾನೆ. ಆಗ ಅವರ ತಂದೆ, "ನಿನ್ನ ಉಳಿದ 10,000ವನ್ನು ಎಲ್ಲಿಯಾದರೂ ಹೂಡಿಕೆ ಮಾಡು. ನೀನು ಕೆಲಸದಲ್ಲಿ ಇರುವುದರಿಂದ ಎಫ್ಡಿ(fd) ಅಥವಾ sip ಅನ್ನು ಮಾಡು" ಎನ್ನುತ್ತಾರೆ. ಸನ್ನಿ ಲಾರ್ಜ್ ಕ್ಯಾಪ್ ಮ್ಯೂಚುಯಲ್ ಫಂಡ್ನಲ್ಲಿ, 5,000 ರೂಪಾಯಿಯ ಒಂದು sip ಮಾಡುತ್ತಾನೆ.

ಇನ್ನೊಂದು ಕಡೆ ರಾಕಿ ಬೈಕ್ ಖರೀದಿಸಲು ಹೋಗುವಾಗ ನ್ಯೂಸ್ನಲ್ಲಿ ಷೇರು ಮಾರುಕಟ್ಟೆ ಕೆಳಗೆ ಹೋಗುತ್ತಿರುವುದನ್ನು ಮತ್ತು ಅನೇಕರನ್ನು ಕೆಲಸದಿಂದ ತೆಗೆಯುತ್ತಿದ್ದರು ಮತ್ತು ಜನರು ದೇಶದ ಪರಿಸ್ಥಿತಿ ನೋಡಿ ಗಾಬರಿಯಲ್ಲಿದ್ದರು. ಸೆನ್ಸೆಕ್ಸ್ 50% ನಷ್ಟು ಕೆಳಗೆ ಬಿದ್ದಿದೆ ಮತ್ತು ಜನರಿಗೆ ಇದು ಇನ್ನಷ್ಟು ಬೀಳಲಿದೆ ಎಂದು ಅನಿಸುತ್ತಿದೆ. ರಾಕಿಯ ಮನೆಯಲ್ಲಿ ಸ್ಟಾಕ್ಗೆ ಸಂಬಂದಿಸಿದ ಪುಸ್ತಕಗಳು ಮುಂಚೆಯೇ ಇರುವುದರಿಂದ, ಅವನು ವಾರೆನ್ ಬಫೆಟ್(warren buffet) ಅವರ ಒಂದು ಗಾದೆಯನ್ನು ಓದಿದ್ದನು. ಅದೆಂದರೆ,

"the secret to get rich is to get a greedy when everyone is fearful".

ಆಗ ರಾಕಿ ಅವನ ಬೈಕ್ ಖರೀದಿಸುವ ಯೋಜನೆಯನ್ನು(plan) ಮುಂದೂಡುವ ಬಗ್ಗೆ ಯೋಚಿಸುತ್ತಾನೆ. ನಂತರ ಆತನ ಮೊಬೈಲ್ನಲ್ಲಿ ಸ್ವಲ್ಪ ರಿಸರ್ಚ್ ಮಾಡಿ, ಒಳ್ಳೆಯ ಸ್ಟಾಕ್ ಹುಡುಕಲು ಪ್ರಯತ್ನಿಸುತ್ತಾನೆ. ಆದರೆ ಅವನಿಗೆ ಯಾವ ಸ್ಟಾಕ್ನಲ್ಲಿ ಹೂಡಿಕೆ ಮಾಡಬೇಕೆಂದು ತಿಳಿಯುವುದಿಲ್ಲ. ಆಗ ಅವನು ರಾಯಲ್ ಎನ್ಫೀಲ್ಡ್ ಉತ್ಪಾದಿಸುವ ಕಂಪನಿಯಲ್ಲಿ ಹೂಡಿಕೆ ಮಾಡುವ ಮಾಡಲು ಯೋಚಿಸಿದ, ಏಕೆಂದರೆ ಯುವಕರಿಗೆ(youngsters) ಈ ಬೈಕ್ ಮೇಲೆ ಬೇರೆ ರೀತಿಯ ವ್ಯಾಮೋಹವಿದೆ(craze).

ರಾಕಿ ರಾಯಲ್ ಎನ್ಫೀಲ್ಡ್ನ ಪೋಷಕ(parent) ಕಂಪನಿಯಾದ ಐಶರ್ ಮೋಟಾರ್(eicher motor) ಮೇಲೆ ರಿಸರ್ಚ್ ಮಾಡುತ್ತಾನೆ ಮತ್ತು ಅದರಲ್ಲಿ 1 ಲಕ್ಷದ ಹೂಡಿಕೆ ಮಾಡುತ್ತಾನೆ. ಇದರಿಂದ ಅವನಿಗೆ ಆ ಕಂಪನಿಯ 4000 ಶೇರ್ ಸಿಗುತ್ತದೆ. ಇದು ಏಕೆಂದರೆ 2008 ರಂದು ಈ ಕಂಪನಿಯ ಶೇರ್ ಪ್ರೈಸ್ 23 ರೂಪಾಯಿ ಆಗಿತ್ತು. ಇನ್ನು ಉಳಿದ 1 ಲಕ್ಷವನ್ನು ಆತ ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡಿದ. ಒಂದು ವೇಳೆ ಅವನ ಸ್ಟಾಕ್ ಹೂಡಿಕೆ ವಿಪಲವಾದರೂ ಅವನ ಪೂರ್ತಿ ಉಳಿತಾಯ ಖಾಲಿಯಾಗುವುದಿಲ್ಲ.

ಇದನ್ನು ಓದಿ: "Secrets of the Millionaire Mind" ಪುಸ್ತಕದ ಸಾರಾಂಶ

ರಾಕಿ ಅವನ ಪೋರ್ಟ್ಫೋಲಿಯೋವನ್ನು ವೈವಿಧ್ಯಗೊಳಿಸಲು(diversify) ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡುತ್ತಾನೆ. ಅವನು ಇದರಲ್ಲಿ ಯಾವುದೇ ರೀತಿಯ sip ಯನ್ನು ಮಾಡಿಲ್ಲ. ಅಂದರೆ ಅವನು ಸಂಬಳ ಬಂದಾಗ ಅದನ್ನು ಪೂರ್ತಿಯಾಗಿ ಆನಂದಿಸುತ್ತಿದ. ಇದನ್ನು ನೋಡಿ ಸನ್ನಿ, "ಈತ ಇಂದು ಖುಷಿಯಲ್ಲೇ ಇದ್ದಾನೆ, ಆದರೆ ಭವಿಷ್ಯದಲ್ಲಿ ಎಷ್ಟು ದೊಡ್ಡ ತಪ್ಪು ಮಾಡಿದ್ದಾನೆ ಎಂದು ತಿಳಿಯುತ್ತದೆ" ಎಂದು ಯೋಚಿಸುತ್ತಾನೆ. ಈಗ ನಾವು 10 ವರ್ಷ ಫಾರ್ವರ್ಡ್ ಮಾಡಿ 2018ಕ್ಕೆ ಬರೋಣ.

which is better stock market or mutual fund in kannada
stock or mutual fund

ಸನ್ನಿ 2008 ರಿಂದ 2018ರ ಈ 10 ವರ್ಷದಲ್ಲಿ 5,000 ರೂನ ತಿಂಗಳ sip ಮೇಲೆ 6 ಲಕ್ಷವನ್ನು ಹೂಡಿಕೆ ಮಾಡಿದ. ಅವನಿಗೆ ಮಧ್ಯದಲ್ಲಿ ಅವನ sip ಯನ್ನು ನಿಲ್ಲಿಸುವ ಮನಸಾಯಿತು. ಏಕೆಂದರೆ ಮಾರುಕಟ್ಟೆಯ ಸ್ಥಿತಿಯು ಕೆಲವೊಮ್ಮೆ ಕೆಟ್ಟದಾಗಿ ಇರುತ್ತಿತ್ತು. ಆದರೂ ಅವನು sip ಯನ್ನು ಮುಂದುವರೆಸಿದ. ಇಂದು ಅವನ ಪೋರ್ಟ್ಫೋಲಿಯಾದ ಮೌಲ್ಯ 10.3 ಲಕ್ಷದಷ್ಟು ಆಗಿದೆ. ಅಂದರೆ ಅವನಿಗೆ 4 ಲಕ್ಷದಷ್ಟು ಲಾಭ ದೊರೆತಿದೆ, ಅದು 10% ರಿಟರ್ನ್ ಆಗಿದೆ. ಈಗ ನಾವು ರಾಕಿ ಬಗ್ಗೆ ನೋಡೋಣ.

ರಾಕಿ ವೈವಿಧ್ಯಗೊಳಿಸಲು ಮ್ಯೂಚುಯಲ್ ಫಂಡ್ನಲ್ಲಿ ಹಾಕಿದ ಒಂದು ಲಕ್ಷದ ಮೌಲ್ಯ ಇಂದು 4 ಲಕ್ಷವಾಗಿದೆ. ಏಕೆಂದರೆ 2018 ರಂದು ಸೆನ್ಸಕ್ಸ್ 9,000 ಪಾಯಿಂಟ್ನಲ್ಲಿ ಇತ್ತು, 2018ರ ಹೊತ್ತಿಗೆ 37,000 ಪಾಯಿಂಟ್ಸ್ಗೆ ಬಂದಿತು, ಅಂದರೆ 4 ಪಟ್ಟು ಮೇಲೆ ಹೋಗಿದೆ, ಅದು 15% ರಿಟರ್ನ್ ಆಗುತ್ತದೆ. ಇದರಲ್ಲಿ ಇಬ್ಬರು ಸಮನಾದ ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡುತ್ತಾರೆ ಮತ್ತು ಇಬ್ಬರು 10 ವರ್ಷಗಳಿಗೆ ಹೂಡಿಕೆ ಮಾಡುತ್ತಾರೆ. ಆದರೆ ಸನ್ನಿಗೆ sip ಯಿಂದ ಕೇವಲ 10% ರಿಟರ್ನ್ ದೊರೆಯಿತು. ರಾಕಿಗೆ lumpsum ನಿಂದ 15%ನಷ್ಟು ರಿಟರ್ನ್ ದೊರೆಯಿತು. ಆಗಿದ್ದರೆ ಇಲ್ಲಿ ಉಲ್ಟಾ ಆಗಲು ಕಾರಣವೇನು?

eicher motor stock chart in kannada
eicher motor

ಮೊದಲ ಕಥೆಯಲ್ಲಿ sip ಯಿಂದ ಒಳ್ಳೆಯ ರಿಟರ್ನ್ ದೊರೆಯಿತು. ಆದರೆ ಈಗ sip ಯ ಪ್ರದರ್ಶನ ಇಷ್ಟು ಕೆಟ್ಟದಾಗಿ ಇರಲು ಕಾರಣವೇನು? ಇದರ ಕಾರಣವೇನೆಂದರೆ, ರಾಕಿ ತನ್ನ ಪೂರ್ತಿ ಹಣವನ್ನು ಒಮ್ಮೆಲೇ ಬೀರ್ ಮಾರುಕಟ್ಟೆಯಲ್ಲಿ(bear market) ಹೂಡಿಕೆ ಮಾಡಿದ್ದಾನೆ. ಅಂದರೆ ಈ ಪಾಯಿಂಟ್ನಲ್ಲಿ ಹೂಡಿಕೆ ಮಾಡಿದ್ದ ಮತ್ತು ಕೊನೆಯ ಪಾಯಿಂಟ್ ಇದಾಗಿದೆ. ಪ್ರಾರಂಭದಿಂದ ಕೊನೆಗೆ ಇದು 15% cagr ರಿಟರ್ನ್ ನೀಡಿದೆ. ಆದರೆ ಸನ್ನಿ ಮಾರುಕಟ್ಟೆ ಕ್ರ್ಯಾಷ್ ಆಗಿ ಹೂಡಿಕೆ ಮಾಡಲು ಸರಿಯಾದ ಸಮಯವಾದಾಗ, ಕೇವಲ 5,000 ವನ್ನು ಹೂಡಿಕೆ ಮಾಡಿದ. ನಂತರ ಒಂದು ತಿಂಗಳ ನಂತರ ಮಾರ್ಕೆಟ್ ಗುಣಮುಖವಾದಾಗ(recover) ಆತ sip ಯಿಂದ ಮತ್ತೆ 5000ರೂ ಹೂಡಿಕೆ ಮಾಡುತ್ತಾನೆ. ಹೀಗೆ ಮಾರುಕಟ್ಟೆ ಮೇಲೆ ಹೋಗುತ್ತಿರುವಾಗ 5,000ರೂ ಹೂಡಿಕೆ ಮಾಡುತ್ತಾ ಬರುತ್ತಿದ. ಹೀಗಾಗಿ ರಾಕಿ ಬದಲು ಈತ ಮ್ಯೂಚುಯಲ್ ಫಂಡ್ ಖರೀದಿಸಲು ಅಧಿಕ ಹಣವನ್ನು ನೀಡಿದ.

ಸನ್ನಿಯ ಈ 10% ರಿಟರ್ನ್ ಅನ್ನು ನಾವು irr ಎಂದು ಕರೆಯುತ್ತೇವೆ, ಅಂದರೆ internal rate of return ಆಗಿದೆ. ಅಂದರೆ ಇದು ಬಹು ಹೂಡಿಕೆಯ ಸರಾಸರಿ ಆಗಿದೆ. ಏಕೆಂದರೆ sip ಯಾವಾಗಲು ಬಹು ಹೂಡಿಕೆಯಾಗುತ್ತದೆ. ಏಕೆಂದರೆ ನೀವು ಪ್ರತಿ ತಿಂಗಳು ಖರೀದಿಸುತ್ತೀರಾ, ಈಗಾಗಿ ಇದರಲ್ಲಿ irr ಕ್ಯಾಲ್ಕುಲೇಟ್ ಆಗುತ್ತದೆ ಮತ್ತು ಒಂದು ಬಾರಿ ಹೂಡಿಕೆ(one time investment) ಮಾಡುವುದರಲ್ಲಿ cagr ಕ್ಯಾಲ್ಕುಲೇಟ್ ಆಗುತ್ತದೆ. ಇದರ ಬಗ್ಗೆ ವಿವರವಾಗಿ, ಮುಂದಿನ ಕಥೆಯಲ್ಲಿ ನೋಡೋಣ. ಇದರಿಂದ ನಿಮ್ಮ ಎಲ್ಲಾ ಗೊಂದಲಗಳಿಗೆ ಉತ್ತರ ಸಿಗುತ್ತದೆ.

ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳು

ಈ ಕಥೆಯಲ್ಲಿ ಇನ್ನೊಂದು ವಿಷಯವಿದೆ, ಸನ್ನಿ ಭಯದಿಂದ ಬೀರ್ ಮಾರುಕಟ್ಟೆ ಇದ್ದಾಗ ಹೂಡಿಕೆ ಮಾಡಿಲ್ಲದಿದ್ದರೆ ಮತ್ತು ಕೇವಲ ಮಾರ್ಕೆಟ್ ಮೇಲೆ ಹೋಗುತ್ತಿದ್ದಾಗ sip ಮುಂದುವರೆಸಿದರೆ, ಆಗ ಅವನಿಗೆ 10% ಗಿಂತಲೂ ಕಡಿಮೆ ರಿಟರ್ನ್ಸ್ ಸಿಗುತ್ತಿತ್ತು. ಅದು 6 ಇಲ್ಲ 5% ಆಗಿರುತ್ತಿತ್ತು. ಇದನ್ನು ಕೇಳಿ ನೀವು sip ಯನ್ನು ನಿಲ್ಲಿಸುವ ಅವಶ್ಯಕತೆ ಇಲ್ಲ. ಏಕೆಂದರೆ sip ಯಲ್ಲಿ ಒಂದು ಶಕ್ತಿ ಇದೆ, ಅದನ್ನು ನಾವು ನಂತರ ತಿಳಿಸಲಿದ್ದೇವೆ. ಆದರೆ ಈಗ ನಾವು ರಾಕಿಯ ಸ್ಟಾಕ್ ಹೂಡಿಕೆಯ ಬಗ್ಗೆ ತಿಳಿಸಲಿದ್ದೇವೆ.

ಐಶರ್ ಮೋಟಾರ್(eicher motor) ಶೇರ್ ತೆಗೆದುಕೊಂಡ ರಾಕಿ ಬದುಕೆ ಬದಲಾಯಿತು. ಏಕೆಂದರೆ ಆ ಕಂಪನಿಯ ಶೇರ್ 25 ರೂಪಾಯಿಯಿಂದ ಬೆಳೆದು 2018ರಂದು 3,000ರೂ ಗೆ ತಲುಪಿತ್ತು. ಅಂದರೆ 10 ವರ್ಷದಲ್ಲಿ 110 ರಷ್ಟು ಬೆಳೆದಿದೆ. ಇದರಿಂದ ಅವನ 1 ಲಕ್ಷದ ಹೂಡಿಕೆ 1.1 ಕೋಟಿಯಷ್ಟು ಆಗಿದೆ. ಅವನಿಗೆ ಈಗ ಸಿಗುವ ಆ 1% ಡಿವಿಡೆಂಟಿನಿಂದ(dividend) ಆತ ಪ್ರತಿವರ್ಷ 1 ಹೊಸ ಬೈಕ್ ಖರೀದಿಸಬಹುದು. ಅದೇ ರಾಕಿ ಇದರಲ್ಲಿ sip ಮಾಡಿದ್ದಾರೆ, ಅವನಿಗೆ ಸಿಗುವ ರಿಟರ್ನ್ ಕಡಿಮೆ ಇರುತ್ತಿತ್ತು. ಏಕೆಂದರೆ ಈ ಸ್ಟಾಕ್ ನಿಧಾನವಾಗಿ ಮೇಲೋಗುತ್ತಿತ್ತು.

benefits of stock investing in kannada
stock upward

ಹೀಗಾಗಿ ಇದರ ಪಾಠವೇನೆಂದರೆ, ನೀವು lumpsum ಆಗಿ ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಬಯಸಿದರೆ, ಇದರಲ್ಲಿ ರಾಕಿಯಾ ರೀತಿ ದೊಡ್ಡ ಬಹುಮಾನ(reward) ಸಿಗಬಹುದು. ಆದರೆ ಇದರಲ್ಲಿ ಅಧಿಕ ಅಪಾಯವಿರುತ್ತದೆ(risk). ಏಕೆಂದರೆ ಮಾಂಟಿಗೆ ಒಂದು ಹಾಟ್ ಸ್ಟಾಕ್ನಲ್ಲಿ ಹೂಡಿಕೆ ಮಾಡಿ, ಅವನ ಪೋರ್ಟ್ಪೋಲಿಯೊ ಜೀರೋಗೆ ಬಂದಿತು. ಇದುವೇ ನಮ್ಮ ಲೇಖನದ ಮೊದಲೇ ಮೊದಲನೇ ಪಾಠವಾಗಿದೆ. ಅದೆಂದರೆ,

ಸ್ಟಾಕ್ನಲ್ಲಿ lumpsum ಹೂಡಿಕೆ ಮಾಡುವುದರಿಂದ, ನೀವು ಒಂದು ಜೀರೋ ಆಗುತ್ತೀರಾ, ಇಲ್ಲ ಹೀರೋ ಆಗುತ್ತೀರಾ. ಅಂದರೆ ನಿಮ್ಮ ಬದುಕಿನ ಸಂಪತ್ತನ್ನು ಸೃಷ್ಟಿಸಬಹುದು.

ಈಗ ನಾವು ಎರಡನೇ ಪಾಠದ ಬಗ್ಗೆ ತಿಳಿಸಲಿದ್ದೇವೆ. ನೀವು ಒಂದು ವೇಳೆ sip ಮೂಲಕ ಲಾರ್ಜ್ ಕ್ಯಾಪ್ ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ದೀರ್ಘವಾಧಿಯಲ್ಲಿ ಅದರಿಂದ ನಿಮ್ಮ ಪೂರ್ತಿ ಹಣವನ್ನು ಕಳೆದುಕೊಳ್ಳುವ ಅವಕಾಶ ತುಂಬಾ ಕಡಿಮೆ ಇರುತ್ತದೆ. ಏಕೆಂದರೆ ಇದರಲ್ಲಿ ನೀವು ಒಮ್ಮೆಲೇ 40 ಕ್ಕಿಂತ ಹೆಚ್ಚು ಸ್ಟಾಕ್ನಲ್ಲಿ ಹೂಡಿಕೆ ಮಾಡುವ ಮೂಲಕ ವೈವಿಧ್ಯಗೊಳಿಸುತ್ತೀರಾ(diversify). ಇದರ ಜೊತೆಗೆ ನೀವು ಹೂಡಿಕೆಯ ಸಮಯವನ್ನು ಕೂಡ ವೈವಿಧ್ಯಗೊಳಿಸುತ್ತೀರಾ. ಅಂದರೆ ಪೋರ್ಟ್ಫೋಲಿಯೋ ಮತ್ತು ಸಮಯವನ್ನು ವೈವಿಧ್ಯಗೊಳಿಸುತ್ತೀರಾ. ಈ 2 ವೈವಿಧ್ಯದಿಂದ ನಿಮಗೆ ಅಪಾಯ ತುಂಬಾ ಕಡಿಮೆಯಾಗುತ್ತದೆ. ಹೀಗಾಗಿ ನಿಮಗೆ ಸಿಗುವ ರಿಟರ್ನ್ ಕೂಡ ಕೇವಲ 10 ರಿಂದ 15% ಇರುತ್ತದೆ. ಇದು ಖಾತರಿ ಅಲ್ಲ, ಆದರೆ ಹಿಂದಿನ ಚಾರ್ಟ್ ನೋಡಿ ಇದನ್ನು ಹೇಳುತ್ತಿದ್ದೇವೆ. ಆದರೂ ನಿಮಗೆ ಎಫ್ಡಿ ಮತ್ತು ಇತರ ಪಾಲಿಸಿಗಿಂತ ಒಳ್ಳೆಯ ರಿಟರ್ನ್ ಇದರಿಂದ ಸಿಗುತ್ತದೆ.

ಏಕೆಂದರೆ ಎರಡು ಕಥೆಯಲ್ಲೂ sip ಮಾಡಿದವನಿಗೆ ನಷ್ಟವಾಗಲಿಲ್ಲ. ಮೊದಲ ಸ್ಟಾಕ್ನಲ್ಲಿ ಮಾಂಟಿಗೆ ಹಾಟ್ ಸ್ಟಾಕ್ನಲ್ಲಿ ಹೂಡಿಕೆ ಮಾಡಿದ್ದರಿಂದ ಅಧಿಕ ನಷ್ಟವಾಯಿತು. ಆಗ sip ಮಾಡುತ್ತಿದವನು ಹೀರೋ ಆದ. ಆದರೆ ಇನ್ನೊಂದು ಕಥೆಯಲ್ಲಿ ಒಮ್ಮೆ ಹೂಡಿಕೆ ಮಾಡಿದ ರಾಕಿಯ ರೀತಿ ಎಲ್ಲರಿಗೂ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ನಿಮಗೆ ಅದರ ಜ್ಞಾನ ಮತ್ತು ಸರಿಯಾದ ಸಮಯದಲ್ಲಿ ಹೂಡಿಕೆ ಮಾಡಲು ಅಷ್ಟು ಹಣ ಇರಬೇಕಾಗುತ್ತದೆ. ಹೀಗಾಗಿ ರಾಕಿಯ ಹೂಡಿಕೆಯ ಮುಂದೆ sip ಚಿಕ್ಕದೇನಿಸಿತು. ಹೀಗಾಗಿ sipಯ ಅನುಕೂಲವೆನೆಂದರೆ(advantage), ನೀವು ಸರಿಯಾದ ಸಮಯವಿಲ್ಲದಾಗಲೂ sip ಪ್ರಾರಂಭಿಸಿದರು, ಅಂದರೆ ಮಾರುಕಟ್ಟೆ ತುದಿಯಲ್ಲಿ ಇದ್ದಾಗ, sip ಮಾಡಿ ನಂತರ ಮಾರುಕಟ್ಟೆ ಬಿದ್ದಾಗಲೂ, ನಿಮಗೆ ಅಧಿಕ ನಷ್ಟವಾಗುವುದಿಲ್ಲ. ಏಕೆಂದರೆ ನೀವು sip ಯನ್ನು ಈಗಷ್ಟೇ ಪ್ರಾರಂಭಿಸಿದ್ದೀರಾ. ಒಂದು ಚಿಕ್ಕ ಮೊತ್ತದಿಂದ ಹೂಡಿಕೆ ಮಾಡಲು ಪ್ರಾರಂಭಿಸಿದ್ದೀರಾ. ಇದರಿಂದ ಭವಿಷ್ಯದಲ್ಲಿ ಮಾರುಕಟ್ಟೆ ಬಿದ್ದಾಗಲೂ ನೀವು ಅದರ ಲಾಭವನ್ನು ಪಡೆಯುತ್ತೀರಾ.

ಹೀಗಾಗಿ ಭವಿಷ್ಯದಲ್ಲಿ ಮಾರುಕಟ್ಟೆ ಬೀಳುತ್ತದೆ(market crash) ಎಂಬ ಭಯ ನಿಮಗೆ ಇದ್ದಾರೆ, ಆ ಸಮಯದಲ್ಲೂ ನೀವು ನಿಮ್ಮ sip ಯನ್ನು ಪ್ರಾರಂಭಿಸಬಹುದು. ಏಕೆಂದರೆ ಮಾರುಕಟ್ಟೆ ಬೀಳದೆ ಮೇಲೆ ಹೋದರೆ, ನೀವು ಒಂದು ಒಳ್ಳೆಯ ಅವಕಾಶವನ್ನು ಕಳೆದುಕೊಳ್ಳುತ್ತೀರಾ. ಇದುವೇ ನಮ್ಮ ಲೇಖನದ ಮೂರನೇ ಪಾಠವಾಗಿದೆ. ಅದೆಂದರೆ sip ಯಲ್ಲಿ ನೀವು ಸ್ವಯಂ ಆಗಿ ಹೂಡಿಕೆ ಮಾಡುವುದರಿಂದ, ಯಾವುದೇ ರೀತಿಯ ಭಾವನೆ ಇರುವುದಿಲ್ಲ. ಕೆಟ್ಟ ಮತ್ತು ಒಳ್ಳೆಯ ಮಾರುಕಟ್ಟೆಯಲ್ಲಿ ನೀವು ಹೂಡಿಕೆ ಮಾಡುತ್ತಲೇ ಇರುತ್ತೀರಾ. ಹೀಗಾಗಿ sip ಪ್ರಾರಂಭಿಸಲು ಸರಿಯಾದ ಇಲ್ಲ, ಕೆಟ್ಟ ಸಮಯವೆಂಬುದು ಇರುವುದಿಲ್ಲ. ನೀವು ಇದನ್ನು ಯಾವಾಗ ಬೇಕಾದರೂ ಪ್ರಾರಂಭಿಸಬಹುದು.

what is sip vs lumpsum example in kannada
sip vs lumpsum

ಈಗ ನಾವು ಮೂರನೇ ಪ್ರಕರಣದ(case) ಬಗ್ಗೆ ಮಾತಾಡೋಣ. ಅದುವೇ ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡುವುದರಿಂದ ನಮಗೆ ಎಷ್ಟು ರಿಟರ್ನ್ಸ್ ಸಿಗುತ್ತದೆ. ಇದರ ಬಗ್ಗೆ ಚಿಕ್ಕದಾಗಿ ಉತ್ತರ ನೀಡುತ್ತೇವೆ. ನಿಮಗೆ ಒಂದು ಮ್ಯೂಚುಯಲ್ ಫಂಡ್ನಲ್ಲಿ sip ಅಥವಾ lumpsum ಮಾಡಬೇಕಾ, ಎನ್ನುವ ಅನುಮಾನ ಬಂದರೆ, ನೀವು sipಯನ್ನು ಆಯ್ಕೆ ಮಾಡಿ. ಏಕೆಂದರೆ ಮ್ಯೂಚುಯಲ್ ಫಂಡ್ನಲ್ಲಿ ಒಂದು ಒಳ್ಳೆಯ ಸಮಯದಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಮಲ್ಟಿಬ್ಯಾಗರ್ ಸ್ಟಾಕ್(multibagger return) ಸಿಗುವುದಿಲ್ಲ. ಇದರಲ್ಲಿ ಕೇವಲ 2 ರಿಂದ 3% ನಷ್ಟು ಮಾತ್ರ ವ್ಯತ್ಯಾಸವಿರುತ್ತದೆ. ಅಂದರೆ 10 ರಿಂದ 15% ಒಳಗೆ ಇರುತ್ತದೆ. ಹೀಗಾಗಿ ಹೂಡಿಕೆ ಮಾಡಲು ಒಂದು ಸರಿಯಾದ ಸಮಯ ಬಂದಾಗ ನಿಮ್ಮ ಮನಸ್ಸಿನಲ್ಲಿ ಅನುಮಾನ ಇರುವುದಿಲ್ಲ. ಮಾರುಕಟ್ಟೆ ಬಿದ್ದಾಗ, ನಿಮಗೆ ಹೂಡಿಕೆ ಮಾಡಲು ಸರಿಯಾದ ಸಮಯವೆಂದೆನಿಸುತ್ತದೆ. ಆ ಸಮಯದಲ್ಲಿ ನೀವು ಒಂದು lumpsum ಹೂಡಿಕೆ ಮಾಡಬಹುದು.

ಇದನ್ನು ಓದಿ: ಬೇಗನೆ ಶ್ರೀಮಂತರಾಗಲು 15 ಹಣದ ನಿಯಮಗಳು

Story 3

ಈಗ ಸ್ಟಾಕ್ನಲ್ಲಿ sip ಮಾಡಿದ್ದಾರೆ ಏನು? ಇದನ್ನು ಕೂಡ ಒಂದು ಆಸಕ್ತಿಕರ ಕಥೆಯ ಮೂಲಕ ತಿಳಿದುಕೊಳ್ಳೋಣ. ಈಗ ನಾವು 2017ಕ್ಕೆ ರಾಕಿ ಮತ್ತು ಸನ್ನಿಯ ಕಥೆಯನ್ನು ಮುಂದುವರಿಸಲಿದ್ದೇವೆ. ಸನ್ನಿ ರಾಕಿಗೆ, "ನೀನು ಷೇರು ಮಾರುಕಟ್ಟೆಯಿಂದ ಒಳ್ಳೆಯ ರಿಟರ್ನ್ ಪಡೆದೆ. ನನಗೂ ಒಂದು ಸ್ಟಾಕ್ ಸಲಹೆ(stock tip) ನೀಡು, ಇದರಿಂದ ನಾನು ನಿನ್ನ ಜೊತೆ ಹೂಡಿಕೆ ಮಾಡುವೆ" ಎಂದು ಹೇಳುತ್ತಾನೆ. ಆಗ ರಾಕಿ, "ನಾನು 2 ಹೊಸ ಸ್ಟಾಕ್ಗಳನ್ನು ಪೋರ್ಟ್ಫೋಲಿಯೋದಲ್ಲಿ ಹಾಕಿಕೊಳ್ಳಲಿದ್ದೇನೆ. ಈ ಎರಡು ಸ್ಟಾಕ್ನಲ್ಲಿ ನಾನು ಕನಿಷ್ಠ 5 ವರ್ಷಗಳಿಗಾದರೂ ಹೂಡಿಕೆ ಮಾಡುವೆ ಮತ್ತು ನನಗೆ ಇವುಗಳಲ್ಲಿ ಒಳ್ಳೆಯ ಸಂಭಾವ್ಯ(potential) ಕಾಣಿಸುತ್ತಿದೆ. ಅವೆಂದರೆ ಟಾಟಾ ಮೋಟಾರ್ಸ್(tata motors) ಮತ್ತು ನೆಸ್ಲೆ(nestle) ಎಂದು ಹೇಳುತ್ತಾನೆ.

ಈ ಸಲಹೆ ಕೇಳಿ ಸನ್ನಿ ಅವನ ಮನೆಗೆ ಹೋಗಿ ಇವುಗಳಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಾನೆ. ಅವನು ನೆಸ್ಲೆಯ ಸ್ಟಾಕ್ 7,000ರೂ ಇರುವುದನ್ನು ನೋಡಿ, ಇದು ತುಂಬಾ ದುಬಾರಿಯಾದ ಕಾರಣ ತಿಂಗಳಲ್ಲಿ 2 ರಿಂದ 3 ಸ್ಟಾಕ್ ಖರೀದಿಸುವ ಬಗ್ಗೆ ಯೋಚಿಸಿದ. ಯಾವಾಗ ಇದರ ಬೆಲೆ ಕಡಿಮೆಯಾಗುತ್ತದೆಯೋ, ಆಗ ಇದರಲ್ಲಿ ಹೂಡಿಕೆ ಮಾಡುವೆನು ಎಂದುಕೊಂಡ. ಇನ್ನೊಂದು ಕಡೆ ಆತ ಟಾಟಾ ಮೋಟರ್ಸ್ನ ಸ್ಟಾಕ್ ಬೆಲೆ ಕಡಿಮೆ ಇರುವುದನ್ನು ನೋಡುತ್ತಾನೆ. ಅದು 500ರೂ ಗಿಂತ ಕಡಿಮೆ ಇತ್ತು. ಹೀಗಾಗಿ ಅವನು ಇದರಲ್ಲಿ ತನ್ನ ಎಲ್ಲಾ ಉಳಿತಾಯವನ್ನು ಹೂಡಿಕೆ ಮಾಡುತ್ತಾನೆ.

5 ವರ್ಷದ ನಂತರ ಸನ್ನಿ ರಾಕಿಯನ್ನು ಭೇಟಿಯಾದಾಗ, "ನನಗೆ ನಿನ್ನ ಸ್ಟಾಕ್ ಸಲಹೆಯಿಂದ ತುಂಬಾ ಲಾಭ ಆಗಲಿಲ್ಲ. ನನಗೆ 5 ವರ್ಷದಲ್ಲಿ ಕೇವಲ 20% ರಿಟರ್ನ್ ದೊರೆತಿದೆ". ಇದನ್ನು ಕೇಳಿ ರಾಕಿ ಆಶ್ಚರ್ಯಗೊಳ್ಳುತ್ತಾನೆ. ಏಕೆಂದರೆ ಅವನಿಗೆ ಆ 2 ಸ್ಟಾಕ್ನಿಂದ 150% ನಷ್ಟು ಲಾಭ ದೊರೆತಿದೆ. ಅಂದರೆ ಅವನ ಹಣವು ದ್ವಿಗುಣಕ್ಕಿಂತ ಅಧಿಕ ಬೆಳೆದಿದೆ.

ರಾಕಿ, ಸನ್ನಿಯ ಕೊಳ್ಳು ಮತ್ತು ಮಾರಾಟವನ್ನು(buy and sell) ವಿವರವಾಗಿ ನೋಡಿದಾಗ, ಅವನಿಗೆ ಇದರಲ್ಲಿ ಏನಾಗಿದೆ ಎಂದು ತಿಳಿಯುತ್ತದೆ. ಟಾಟಾ ಮೋಟರ್ಸ್ನಿಂದ 5 ವರ್ಷದಲ್ಲಿ ಕೇವಲ 3% ನಷ್ಟು ರಿಟರ್ನ್ ದೊರೆತಿದೆ. ಅದು ಒಂದು ಕೆಟ್ಟ ಪ್ರದರ್ಶನವಾಗಿದೆ(performance). ಏಕೆಂದರೆ ಉಳಿತಾಯ ಖಾತೆಯಿಂದಲೇ ನಿಮಗೆ 4% ನಷ್ಟು ರಿಟರ್ನ್ ದೊರೆಯುತ್ತದೆ. ಆದರೆ ಇದು ಇದರ lumpsum ರಿಟರ್ನ್ ಆಗಿದೆ. ಅಂದರೆ ಈ ಪಾಯಿಂಟ್ನಿಂದ ಈ ಪಾಯಿಂಟ್ಗೆ ಸಿಕ್ಕಿರುವ ರಿಟರ್ನ್ ಆಗಿದೆ. ಇದೇ ಸ್ಟಾಕ್ನಲ್ಲಿ ನೀವು sip ರೀತಿ ಹೂಡಿಕೆ ಮಾಡಿದ್ದರೆ, ನಿಮಗೆ 100% ರಿಟರ್ನ್ ಸಿಗುತ್ತಿತ್ತು. ಇದು ಹೇಗೆ ಸಾಧ್ಯ ಎಂಬ ಅನುಮಾನ ನಿಮಗಿದ್ದರೆ ಇದರ ವಿವರವನ್ನು ನೀಡುತ್ತೇವೆ. 2 - 3 ವರ್ಷದ ಹಿಂದಿನ ಕುಸಿತದಲ್ಲಿ, ಈ ಸ್ಟಾಕ್ ತುಂಬಾ ಕೆಳಗೆ ಬಿದ್ದಿತ್ತು. ನೀವು ಇದರಲ್ಲಿ sip ರೀತಿಯಲ್ಲಿ ಹೂಡಿಕೆ ಮಾಡಿದ್ದಾರೆ, ಆ ಸಮಯದಲ್ಲಿ ಈ ಕಡಿಮೆ ಬೆಲೆಯ ಲಾಭವನ್ನು ಪಡೆಯುತ್ತಿದ್ದೀರಿ ಮತ್ತು ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿದ್ದೀರಿ.

ಇದು ಒಂದು ಒಳ್ಳೆಯ ಕಂಪನಿ ಆಗಿರಬಹುದು. ಆದರೆ 2017ರಂದು ಇದು ಹೆಚ್ಚು ಮೌಲ್ಯಯುತವಾಗಿತ್ತು(overvalued). ರಾಕಿ ಇದರಲ್ಲಿ ಒಂದು ಚಿಕ್ಕ ಪ್ರಮಾಣದಲ್ಲಿ(quantity) ಖರೀದಿಸಿ, ಟ್ರ್ಯಾಕ್ ಮಾಡುವ ಬಗ್ಗೆ ಯೋಚಿಸಿದ ಮತ್ತು ಮಧ್ಯದಲ್ಲಿ ಮಾರುಕಟ್ಟೆ ಕುಸಿದಾಗ, ಇದರ ಅಧಿಕ ಸ್ಟಾಕ್ ಖರೀದಿಸಿದ. ಹೀಗಾಗಿ ಅವನಿಗೆ ಈ ಒಂದೇ ಸ್ಟಾಕ್ನಿಂದ 200% ನಷ್ಟು ರಿಟರ್ನ್ ದೊರೆಯಿತು. ಅದೇ ರಾಕಿ ನೆಸ್ಲೆಯಲ್ಲಿ ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದ. ಏಕೆಂದರೆ ಆತ 10 ವರ್ಷದಿಂದ ಈ ಕಂಪನಿ ಒಳ್ಳೆಯ ಮೌಲ್ಯಮಾಪನದಲ್ಲಿ(valuation) ಸಿಕ್ಕಿ ಖರೀದಿ ಮಾಡಲು ಸೂಕ್ತವಾಗಿರುತ್ತದೆ ಎಂದು ಕಾಯುತ್ತಿದ. 2015ರಂದು ಮ್ಯಾಗಿ ಬಿಕ್ಕಟ್ಟಿನಿಂದ(maggi crises) ಈ ಕಂಪನಿ ಸಮಸ್ಯೆಯಲ್ಲಿ ಬಿದ್ದಾಗ ಇದರ ಶೇರ್ ಬೆಲೆ ಕೆಳಗೆ ಬಿದ್ದು, 2017ರವರೆಗೆ ಫ್ಲಾಟ್ ಆಗಿ ಇತ್ತು. ಈ ಸಮಯವೇ ಇದನ್ನು ಖರೀದಿಸಲು ಒಂದು ಒಳ್ಳೆಯ ಅವಕಾಶವಾಗಿತು. ಈ ಸಮಯದಲ್ಲಿ ಒಮ್ಮೆ ಹೂಡಿಕೆ ಮಾಡುವುದು ಅಥವಾ lumpsum ಹೂಡಿಕೆ ಮಾಡುವುದು ಪರಿಪೂರ್ಣವಾಗಿರುತ್ತದೆ(perfect). ಏಕೆಂದರೆ ಇದು ಒಂದು ಒಳ್ಳೆಯ ಕ್ವಾಲಿಟಿ ಇರುವ fmcg ಸ್ಟಾಕ್ ಆಗಿದೆ. ಇದು 20 - 30 ವರ್ಷದಿಂದಲೂ ಹೆಚ್ಚು ಮೌಲ್ಯಯುತವಾಗಿದೆ. ಸ್ಮಾರ್ಟ್ ಹೂಡಿಕೆದಾರಿಗೆ(smart investor) ಈ ಕಂಪನಿ ತನ್ನ ಸಮಸ್ಯೆಗಳನ್ನು ಬೇಗನೆ ಪರಿಹರಿಸಿಕೊಂಡು ಗಟ್ಟಿಯಾಗುತ್ತದೆ ಎಂದು ತಿಳಿದಿದೆ. ಆ ಸಮಯದಲ್ಲಿ ಇದರಲ್ಲಿ sip ಮಾಡುವುದು ಸ್ಮಾರ್ಟ್ ನಿರ್ಧಾರ ಆಗಿರುವುದಿಲ್ಲ.

ಇದನ್ನು ಓದಿ: ರಾಬರ್ಟ್‌ ಕಿಯೋಸಾಕಿ ಅವರ ಎಲ್ಲಾ ಪುಸ್ತಕದ Summary

ಹೀಗಾಗಿ ಕಂಪನಿಯ 5 ವರ್ಷದ lumpsum ರಿಟರ್ನ್ 158% ನಷ್ಟು ಇದೆ. ಅದೇ 5 ವರ್ಷದ sip ರಿಟರ್ನ್ ಕೇವಲ 37% ಇದೆ. ರಾಕಿ ನೆಸ್ಲೆಯಲ್ಲಿ lumpsum ಹೂಡಿಕೆ ಮಾಡಿದ ಮತ್ತು ಟಾಟಾ ಮೋಟಾರ್ಸ್ನಲ್ಲಿ sip ರೀತಿಯಲ್ಲಿ ಹೂಡಿಕೆ ಮಾಡಿದ. ಈ ಕಾರಣದಿಂದಾಗಿ ಅವನ ಪೋರ್ಟ್ಫೋಲಿಯೋ 5 ವರ್ಷದಲ್ಲಿ 2 ರಿಂದ 3 ಪಟ್ಟು ಮೇಲೆ ಹೋಯಿತು. ಅಂದರೆ 200 ರಿಂದ 300% ನಷ್ಟು ಮೇಲೆ ಹೋಯಿತು. ಆದರೆ ಸನ್ನಿ ಆತನ ಆರಂಭಿಕ ಜ್ಞಾನವನ್ನು(typical beginner mind) ಬಳಸಿಕೊಂಡು ಇದರ ಉಲ್ಟಾ ಮಾಡುತ್ತಾನೆ ಮತ್ತು ಒಳ್ಳೆಯ ಸ್ಟಾಕ್ ಸಲಹೆ ದೊರೆತರು ಕೇವಲ 20 ರಿಂದ 30 ರಷ್ಟು ರಿಟರ್ನ್ ಪಡೆಯುತ್ತಾನೆ.

ಇವೆಲ್ಲ ಹೊಸ ಹೂಡಿಕೆದಾರರು ಮಾಡುವ ಅನೇಕ ತಪ್ಪುಗಳಲ್ಲಿ ಒಂದಾಗಿದೆ. ಏಕೆಂದರೆ ನಮ್ಮ ಆರಂಭಿಕ ಜ್ಞಾನವೂ ಯಾವಾಗಲೂ ವಿರುದ್ಧವಾಗಿ ಕೆಲಸ ಮಾಡುತ್ತದೆ. ಹೀಗಾಗಿಯೇ ನಿಮ್ಮ ಆರ್ಥಿಕ ಜ್ಞಾನವನ್ನು ಬೆಳೆಸಲು ಈ ರೀತಿಯ ಲೇಖನಗಳನ್ನು ನಾವು ಬರೆಯುತ್ತೇವೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments