Website designed by @coders.knowledge.

Website designed by @coders.knowledge.

6 Space Mysteries | ವಿಜ್ಞಾನಿಗಳ ತಲೆ ಕೆಡಿಸಿರುವ ಅಂತರಿಕ್ಷದ 6 ರಹಸ್ಯಗಳು

Watch Video

ನಮ್ಮ ಸೌರಮಂಡಲ ಯಾವ ರಹಸ್ಯಗಳನ್ನು ಹೊಂದಿದೆ ಎಂದು ನಾವೆಲ್ಲರೂ ಒಂದು ಹಂತದಲ್ಲಿ ಆಶ್ಚರ್ಯಪಡುತ್ತೇವೆ. ನಮ್ಮ ಸೌರಮಂಡಲದಲ್ಲಿರುವ ಎಂಟು ಗ್ರಹಗಳ ಆಚೆ ಏನಿದೆ. ನಾವು ಹೆಚ್ಚು ರೋಬೋಟ್ಗಳನ್ನು ಬಾಹ್ಯಾಕಾಶಕ್ಕೆ ತಳ್ಳುವಾಗ, ನಮ್ಮ ವೀಕ್ಷಣಾ ಸಾಮರ್ಥ್ಯವನ್ನು ಸುಧಾರಿಸಿದಾಗ, ನಾವು ಎಲ್ಲಿಂದ ಬಂದಿದ್ದೇವೆ ಮತ್ತು ಈ ಗ್ರಹಗಳು ಹೇಗೆ ವಿಕಸನಗೊಂಡಿವೆ ಎಂಬುದರ ಬಗ್ಗೆ ಹೆಚ್ಚು ಹೆಚ್ಚು ಕಲಿಯುತ್ತೇವೆ. ಆದರೂ ನಾವು ಎಷ್ಟೇ ಕಲಿತರು ಕಡಿಮೆಯೇ, ಏಕೆಂದರೆ ನಮ್ಮ ಸೌರಮಂಡಲ ರಹಸ್ಯಮಯವಾಗಿದೆ. ಆ ರಹಸ್ಯಗಳಲ್ಲಿ ಆರನ್ನು ಇಲ್ಲಿ ತಿಳಿಸುತ್ತಿದ್ದೇವೆ.

ಇದನ್ನು ಓದಿ: ಭೂಮಿಯ ಜನ್ಮದಿಂದ ಜೀವಿಗಳ ಅಸ್ತಿತ್ವದ ತನಕ

1. ಸೂರ್ಯನ ನಾರ್ತ್ ಪೋಲ್ಗಿಂತ ಸೌತ್ ಪೋಲ್ ಏಕೆ ತಣ್ಣಗಿದೆ.

what is the mystery of sun corona in kannada
sun poles

1990ರಲ್ಲಿ ಲಾಂಚ್ ಮಾಡಿದ ಸೋಲಾರ್ ಪ್ರೋಬ್ ಯುಲಿಸೆಸ್, ನಮಗೆ ಸೂರ್ಯನ ಅಭೂತಪೂರ್ವ ನೋಟವನ್ನು ನೀಡಿದೆ. ಈ ಪ್ರೋಬ್ ಇಪ್ಪತ್ತು ವರ್ಷಗಳ ಕಾಲ ತನಿಖೆ ನಡೆಸಿದ್ದು, ನಮ್ಮ ನಕ್ಷತ್ರದ ನೈಜ ಸ್ವರೂಪವನ್ನು ಬಹಿರಂಗಪಡಿಸಿದೆ. ಸೂರ್ಯನ ದಕ್ಷಿಣ ಧ್ರುವ ಉತ್ತರ ದ್ರುವಕ್ಕಿಂತ 80,000K ನಷ್ಟು ತಂಗಿರುವುದನ್ನು ಸೋಲಾರ್ ಪ್ರೋಬ್ ಅಳೆದಿದೆ.

ಈ ವ್ಯತ್ಯಾಸದಿಂದ ವಿಜ್ಞಾನಿಗಳು ಗೊಂದಲಕ್ಕೊಳಗಾದರು. ಇದನ್ನು ಸೋಲಾರ್ ಪ್ರೋಬ್ ಸೂರ್ಯನ ದಕ್ಷಿಣ ಮತ್ತು ಉತ್ತರ ಧ್ರುವದಿಂದ 300ಕಿ.ಮೀ ಮೇಲೆ ಇರುವ ಸೋಲಾರ್ ವಿಂಡ್ಗಳ ತಾಪಮಾನ ನೋಡಿ ಅಳೆಯಿತು. ಸದ್ಯಕ್ಕೆ ಇದು ಒಂದು ಮುಕ್ತ ಪ್ರಶ್ನೆಯಾಗಿ ಉಳಿದಿದೆ.

ಇದನ್ನು ಓದಿ: ಭೂಮಿಯ ಏಳು ಅತಿದೊಡ್ಡ ಬಗೆಹರಿಯದ ರಹಸ್ಯಗಳು

2. ಮಂಗಳನ ಹೆಮಿಸ್ಪಿಯರ್ ಏಕೆ ಭಿನ್ನವಾಗಿದೆ.

mars hemisphere mystery in kannada
mars hemisphere

ಈ ರಹಸ್ಯವೂ ವರ್ಷಗಳಿಂದ ವಿಜ್ಞಾನಿಗಳನ್ನು ನಿರಾಶೆಗೊಳಿಸಿದೆ. ಮಂಗಳನ ಉತ್ತರ ಗೋಳಾರ್ಧವು ವೈಶಿಷ್ಟ್ಯವಿಲ್ಲದ ತಗ್ಗು ಪ್ರದೇಶವಾಗಿದೆ. ಆದರೆ ದಕ್ಷಿಣ ಗೋಳಾರ್ಧವು ಪರ್ವತಶ್ರೇಣಿಗಳಿಂದ ತುಂಬಿದ್ದು, ವಿಶಾಲವಾದ ಎತ್ತರ ಪ್ರದೇಶಗಳನ್ನು ಹೊಂದಿದೆ. ಮಂಗಳನ ಅಧ್ಯಯನದ ಪ್ರಕಾರ ಯಾವುದೋ ದೊಡ್ಡ ಬಂಡೆ ಮಂಗಳ ಗ್ರಹಕ್ಕೆ ಹೊಡೆದಿದೆ ಎಂದು ನಂಬಲಾಗಿತ್ತು.

ಕ್ಯಾಲ್ಟೆಕ್ ಸಂಶೋಧಕರ ಪ್ರಕಾರ 1,600 ರಿಂದ 2,700ಕಿ.ಮೀ. ಡಯಾಮೀಟರ್ ನಡುವಿನ ಬೃಹತ್ ಬಂಡೆಯೂ ಉತ್ತರ ಗೋಲಾರ್ಧದ ತಗ್ಗು ಪ್ರದೇಶ ಸೃಷ್ಟಿಸಿದೆ ಎಂದು ಲೆಕ್ಕ ಹಾಕಿದ್ದಾರೆ. ಆದರೂ ಇದು ರಹಸ್ಯಮಯವಾಗಿಯೇ ಉಳಿದಿದೆ.

ಇದನ್ನು ಓದಿ: Rich Dad Poor Dadನ ಮುಖ್ಯ ಐದು ಕಲಿಕೆಗಳು

3. ತುಂಗುಸ್ಕಾ ಪ್ರಭಾವಕ್ಕೆ ಕಾರಣವೇನು.

what has caused tunguska event in kannada
tunguska event

1908ರಲ್ಲಿ ಸೌರಮಂಡಲ ನಮ್ಮ ಮೇಲೆ ಏನೋ ಎಸೆಯಿತು. ಆದರೆ ಅದು ಏನು ಎಂದು ನಮಗೆ ತಿಳಿದಿಲ್ಲ. ರಷ್ಯಾದ ಪೊಡ್ಕಾಮೆನಾಯ ನದಿಯ ಮೇಲೆ ಪ್ರಕಾಶಮಾನವಾದ ಬೆಳಕನ್ನು ನೂರಾರು ಮೈಲುಗಳಷ್ಟು ದೂರದಲ್ಲಿ ನೋಡಿದವರು, ವಿವರಿಸಿದಾಗಿನಿಂದ ಇದು ರಹಸ್ಯವಾಗಿದೆ. ಅಲ್ಲಿ ತನಿಖೆ ನಡೆಸಿದಾಗ, ಅಲ್ಲಿನ ದೊಡ್ಡ ಪ್ರದೇಶ ನಾಶವಾಗಿತ್ತು, ಎಂಟು ಕೋಟಿ ಮರಗಳು ಮ್ಯಾಚ್ ಸ್ಟಿಕ್ನಂತೆ ಕತ್ತರಿಸಲಾಗಿತ್ತು, ಎರಡು ಸಾವಿರ ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ಜಾಗ ಚಪ್ಪಟೆ ಆಗಿತ್ತು. ಆದರೆ ಅಲ್ಲಿ ಏನು ಬಿದ್ದಿದೆ ಎಂದು ತಿಳಿಯಲಿಲ್ಲ.

ಧೂಮಕೇತು ಅಥವಾ ಉಲ್ಕಾಶಿಲೆ ವಾತಾವರಣಕ್ಕೆ ಪ್ರವೇಶಿಸಿ ನೆಲದ ಮೇಲೆ ಸ್ಫೋಟಗೊಳ್ಳುವಾಗ, ಸಂಶೋಧಕರು ಪುರಾವೆಗಳನ್ನು ಹುಡುಕುತ್ತಾರೆ. ಆದರೆ ತುಂಗುಸ್ಕಾ ಪ್ರಭಾವದ ಸ್ಥಳದ ಸುತ್ತಲೂ ಯಾವುದೇ ಉಲ್ಕಾಶಿಲೆ ಪುರಾವೆಗಳಿಲ್ಲ. ಇಲ್ಲಿಯವರೆಗೆ ಅದಕ್ಕಾಗಿ ಹೆಚ್ಚಿನ ವಿವರಣೆಗಳು ಕಂಡುಬಂದಿಲ್ಲ.

4. ಯುರೇನಸ್ ಗ್ರಹವು ಅದರ ಬದಿಯಲ್ಲಿ ಏಕೆ ತಿರುಗುತ್ತದೆ.

why uranus rotation is unusual in kannada
uranus rotation

ಸೌರಮಂಡಲದ ಎಲ್ಲಾ ಗ್ರಹಗಳು ಅವುಗಳ ತಿರುಗುವಿಕೆ ಎಕ್ಲಿಪ್ಟಿಕ್ ಸಮತಲದಿಂದ ಮೇಲಕ್ಕೆ ತೋರಿಸಿದರೆ, ವಿಚಿತ್ರ ಗ್ರಹ ಯುರೇನಸ್ 90° ಆಕ್ಸಿಯಲ್ ಟಿಲ್ಟ್ ನೊಂದಿಗೆ ಅದರ ಬದಿಯಿಂದ ತೋರಿಸುತ್ತದೆ. ಇದರ ಅರ್ಥ ದೀರ್ಘಕಾಲದವರೆಗೆ ಅದರ ಉತ್ತರ ಮತ್ತು ದಕ್ಷಿಣ ಧ್ರುವ ಸೂರ್ಯನ ಮೇಲೆ ನೇರವಾಗಿ ಇರುತ್ತವೆ. ಎಲ್ಲ ಗ್ರಹಗಳನ್ನು ಮೇಲಿಂದ ನೋಡಿದರೆ ಅವುಗಳು ಕೌಂಟರ್ ಕ್ಲಾಕ್ವೈಸ್ನಲ್ಲಿ ತಿರುಗುತ್ತವೆ, ಶುಕ್ರಗ್ರಹ ಇದರ ವಿರುದ್ಧವಾಗಿ ತಿರುಗುತ್ತದೆ.

ಕೆಲವು ವಿಜ್ಞಾನಿಗಳು ಯುರೇನಸ್ ಕಾಸ್ಮಿಕ್ ಹಿಟ್ಗೆ ಬಲಿಯಾಗಿದೆ ಎಂದು ನಂಬುತ್ತಾರೆ. ಸೌರಮಂಡಲದ ಪ್ರಾರಂಭದಲ್ಲಿ ಗುರು ಮತ್ತು ಶನಿಗ್ರಹದ ಪ್ರಭಾವದಿಂದ ಯುರೇನಸ್ ಗ್ರಹ ಈ ರೀತಿ ಬದಿಯಲ್ಲಿ ತಿರುಗುತ್ತದೆ ಎಂದು ವಿಜ್ಞಾನಿಗಳೇ ಹೇಳುತ್ತಾರೆ. ಆದರೂ ಇದರ ಮೇಲೆ ಹೆಚ್ಚಿನ ಅಧ್ಯಯನ ನಡೆಯುವುದು ಬಾಕಿ ಇದೆ.

ಇದನ್ನು ಓದಿ: ಭಾರತೀಯ ಇತಿಹಾಸ ಕಾಲಗಣನೆ

5. ಟೈಟಾನ್‌ಗೆ ಏಕೆ ವಾತಾವರಣವಿದೆ.

does titan have toxic atmosphere in kannada
titan moon

ಶನಿಗ್ರಹದ ಚಂದ್ರನಲ್ಲಿ ಒಂದಾದ ಟೈಟಾನ್ ಸೌರಮಂಡಲದಲ್ಲಿ ಗಮನಾರ್ಹ ವಾತಾವರಣವನ್ನು ಹೊಂದಿರುವ ಏಕೈಕ ಚಂದ್ರನಾಗಿದೆ. ಇದು ಸೌರಮಂಡಲದ ಎರಡನೇ ಅತಿದೊಡ್ಡ ಚಂದ್ರ ಮತ್ತು ಭೂಮಿಯ ಚಂದ್ರನಿಗಿಂತ ಶೇಕಡ 80ರಷ್ಟು ಹೆಚ್ಚು ಗಾತ್ರದಲ್ಲಿ ದೊಡ್ಡದಿದೆ. ಭೂಮಿಗೆ ಹೋಲಿಸಿದರೆ ಅದು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಭೂಮಿಯಂತೆಯೇ ಇದೆ.

ಮಂಗಳ ಮತ್ತು ಶುಕ್ರ ಗ್ರಹವನ್ನು ಭೂಮಿಯ ಒಡಹುಟ್ಟಿದವರು ಎಂದು ಉಲ್ಲೇಖಿಸಲಾಗುತ್ತದೆ. ಆದರೆ ಅವುಗಳ ವಾತಾವರಣವು ಕ್ರಮವಾಗಿ 100 ಪಟ್ಟು ತೆಳು ಮತ್ತು 100 ಪಟ್ಟು ದಪ್ಪವಾಗಿರುತ್ತದೆ. ಮತ್ತೊಂದೆಡೆ ಟೈಟಾನ್‌ನ ವಾತಾವರಣವೂ ಭೂಮಿಯ ವಾತಾವರಣಕ್ಕಿಂತ ಒಂದೂವರೆ ಪಟ್ಟು ದಪ್ಪವಾಗಿದೆ. ಭೂಮಿಯ ಮೇಲೆ ನೈಟ್ರೋಜನ್ ಶೇಕಡ 80ರಷ್ಟು ಇದೇ ಟೈಟಾನ್‌ನಲ್ಲಿ ನೈಟ್ರೋಜನ್ ಶೇಕಡ 95ರಷ್ಟು ಇದೆ. ಆದರೆ ಅಷ್ಟು ನೈಟ್ರೋಜನ್ ಎಲ್ಲಿಂದ ಬಂತು ಎಂಬುದು ನಿಗೂಢವಾಗಿದೆ.

ಟೈಟಾನ್ ಆಸಕ್ತಿದಾಯಕ ಚಂದ್ರನಾಗಿದ್ದು, ಇದು ದಪ್ಪ ವಾತಾವರಣವನ್ನು ಹೊಂದಿರುವುದು ಮಾತ್ರವಲ್ಲದೆ, ಹೈಡ್ರೋಕಾರ್ಬನಿಂದ ತುಂಬಿದೆ. ಟೈಟಾನ್‌ನಲ್ಲಿ ವಾತಾವರಣ ಹೇಗೆ ಸೃಷ್ಟಿಯಾಯಿತು ಎಂಬುವುದು ರಹಸ್ಯವಾಗಿದೆ.

6. ಸೌರ ಮೇಲ್ಮೈಗಿಂತ ಸೌರ ವಾತಾವರಣ ಏಕೆ ಬಿಸಿಯಾಗಿರುತ್ತದೆ.

sun surface temperature mysteries in kannada
sun temperature

ಇದು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸೌರ ಭೌತವಿಜ್ಞಾನಿಗಳನ್ನು ಕಾಡಿದ ಪ್ರಶ್ನೆಯಾಗಿದೆ. ಸೂರ್ಯನ ಕೊರೊನ ಭಾಗವು ಗೊಂದಲದ ಸಂಗತಿಗಳನ್ನು ಬಹಿರಂಗಪಡಿಸಿದ್ದವು. ಸೂರ್ಯನ ವಾತಾವರಣ ಸೂರ್ಯನ ಮೇಲ್ಮೈಗಿಂತ ಬಿಸಿಯಾಗಿರುತ್ತದೆ. ಇದು ಹೇಗೆ ಸಂಭವಿಸಬಹುದು ಎಂಬುದೇ ವಿಸ್ಮಯವಾಗಿದೆ. ನೀವು ಬೆಳಕಿನ ಬಲ್ಬ್ ಆನ್ ಮಾಡಿದರೆ ಅದರ ಸುತ್ತಲಿನ ಗಾಳಿಯು ಗಾಜಿನಷ್ಟು ಬಿಸಿ ಇರುವುದಿಲ್ಲ. ನೀವು ಬಲ್ಬ್ ಹತ್ತಿರ ಹೋಗುತ್ತಿದ್ದಂತೆ ಅದು ಬೆಚ್ಚಗಿರುತ್ತದೆ ಹೊರತು, ತಂಪಾಗುವುದಿಲ್ಲ.

ಆದರೆ ಸೂರ್ಯನಲ್ಲಿ ಇದರ ವಿರುದ್ಧವಾಗಿ ನಡೆಯುತ್ತಿದೆ. ಸೂರ್ಯನ ಮೇಲ್ಮೈ 6000K ತಾಪಮಾನ ಹೊಂದಿದ್ದರೆ, ಮೇಲ್ಮೈಯ 1000 ಕಿ.ಮೀ. ಮೇಲಿರುವ ಪ್ಲಾಸ್ಮಾವೂ 1 ದಶಲಕ್ಷ K ತಾಪಮಾನವನ್ನು ಹೊಂದಿದೆ. ಸೂರ್ಯನ ವಾತಾವರಣ ಅಷ್ಟು ಬಿಸಿಯಾಗಲು ಸೂರ್ಯನ ಮ್ಯಾಗ್ನೆಟಿಕ್ ಫೀಲ್ಡ್ ಕೂಡ ಕಾರಣ ಎಂದು ಭೌತ ವಿಜ್ಞಾನಿಗಳು ಹೇಳಿದ್ದಾರೆ. ಆದರೂ ಇದು ವಿಸ್ಮಯವಾದ ವಿಷಯವಾಗಿದೆ.

ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments