Watch Video
ನಾವು ನಿಮಗೆ ಶಿಸ್ತನ್ನು(discipline) ಸಾಧಿಸಲು ಇರುವ 3 ಪ್ರಾಯೋಗಿಕ(practical), ಸರಳ ಮತ್ತು ಪರಿಣಾಮಕಾರಿ ಹಂತವನ್ನು ತಿಳಿಸಲಿದ್ದೇವೆ. ಇದನ್ನು ಬಳಸಿಕೊಂಡು ನಾವು ಕೂಡ ಶಿಸ್ತನ್ನು ಪಾಲಿಸುತ್ತಿದ್ದೇವೆ. ನಾವು ಮುಂಚೆ ಶಿಸ್ತಿನಿಂದ ಇರಲು ಕಷ್ಟ ಪಡುತ್ತಿದ್ದೇವು. ಒಂದು ತಿಂಗಳು ಯಾವುದೇ ಕೆಲಸ ಮಾಡದೆ ಆರಾಮಾಗಿದ್ದೇವು. ಹೀಗಾಗಿ ಒಂದು ತಿಂಗಳು ಲ್ಯಾಪ್ಟಾಪ್ ತೆರೆದು ಯಾವುದೇ ಕೆಲಸವನ್ನು ಮಾಡಲಿಲ್ಲ.
ನಮ್ಮ ಒಂದು ತಿಂಗಳ ನಂತರ ಸಮಸ್ಯೆ ಪ್ರಾರಂಭವಾಯಿತು. ಏಕೆಂದರೆ ನಮ್ಮ ಹತ್ತಿರ ಶಿಸ್ತು ಇರಲಿಲ್ಲ, ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ, ಸೋಮಾರಿತನವಿತ್ತು(lazyness), ದೇಹ ಮತ್ತು ಮನಸ್ಸು ಎರಡು ವಿಶ್ರಾಂತಿ ಮೋಡ್ಗೆ(relax mode) ಹೋಗಿತ್ತು. ಶಿಸ್ತಿನಿಂದ ಇಷ್ಟು ದಿನ ವೀಡಿಯೋ ಅಪ್ಲೋಡ್ ಮಾಡುತ್ತಿದ್ದ ನಮ್ಮಲ್ಲಿ ಶಿಸ್ತು ಒಂಚೂರು ಇರಲಿಲ್ಲ. ನಮಗೆ ನೂಕುವ ಮೋಡ್ಗೆ(hustle mode) ಬರುವುದು ಸುಲಭವೆನಿಸುತ್ತಿರಲಿಲ್ಲ. ಆದರೆ ಇದನ್ನು 2-3 ದಿನದಲ್ಲಿ ಸರಿಪಡಿಸುವೆವು ಎಂಬುದು ತಿಳಿದಿತ್ತು. ಇದಕ್ಕಾಗಿ ಸ್ಟೆಪ್ 2 ಫಾಲೋ ಮಾಡಿದೆವು. ಆದರೆ ಅದಕ್ಕೂ ಮೊದಲು ಸ್ಟೆಪ್ 1 ಬಗ್ಗೆ ತಿಳಿಯೋಣ.
ಇದನ್ನು ಓದಿ: ನಿಮ್ಮ ಮೆದುಳು ಮೌನವಾಗಿ ಸಾಯುತ್ತಿದೆಯೇ?ನಿಮ್ಮ ಪ್ರತಿಯೊಂದು ಗುರಿಯ ಅಡಿಪಾಯ(foundation) ಶಿಸ್ತು ಆಗಿದೆ. ಇದನ್ನು ಅರ್ಥ ಮಾಡಿಸಲು ಈ ಉದಾಹರಣೆ ಕೇಳಿ. ಬುರ್ಜ್ ಖಲೀಫಾ(burj khalifa) ಜಗತ್ತಿನಲ್ಲಿರುವ ದೊಡ್ಡ ಕಟ್ಟಡವಾಗಿದೆ. ಅದು ಮರಳಿನ ಮೇಲೆ ಹೇಗೆ ನಿಂತಿದೆ ಎಂದು ತಿಳಿದಿದೆಯೇ? ಅದರ ಅಡಿಪಾಯ ತುಂಬಾ ಗಟ್ಟಿಯಾಗಿದೆ. ಇದು ನೆಲದಿಂದ ಮೇಲೆ 2,717 ಅಡಿ ಇದೆ, ಅದೇ ನೆಲದಿಂದ ಕೆಳಗೆ 164 ಅಡಿಯಷ್ಟು ಆಳವಿದೆ. ಈ 164 ಅಡಿ ಆಳವಾದ ಅಡಿಪಾಯವನ್ನು ಮಾಡಲು ಒಂದು ವರ್ಷಕ್ಕೂ ಅಧಿಕ ಸಮಯ ತೆಗೆದುಕೊಂಡಿತು. ಒಂದು ವೇಳೆ ಬುರ್ಜ್ ಖಲೀಫಾದ ಅಡಿಪಾಯ ಗಟ್ಟಿ ಇರದೇ ಇದ್ದರೆ, ಅದು ದೊಡ್ಡ ಕಟ್ಟಡವಾಗುತ್ತಿರಲಿಲ್ಲ. ಬದಲಿಗೆ ವಿಪತ್ತು(disaster) ಆಗಿರುತ್ತಿತ್ತು.
ನಿಮ್ಮ ದಿನನಿತ್ಯದ ಅಡಿಪಾಯ ಮತ್ತು ಶಿಸ್ತು ಗಟ್ಟಿ ಇರದಿದ್ದರೆ ನೀವು ಎಷ್ಟೇ ಬಾರಿ ಮೇಲೆ ಹೋಗಲು ಪ್ರಯತ್ನಿಸಿದರು, ಬಾರಿ ಬಾರಿ ಕೆಳಗೆ ಬೀಳುವಿರಿ. ನಾವೀಗ ತಿಳಿಸುವ ಉಲ್ಲೇಖದ ಸ್ಕ್ರೀನ್ಶಾಟ್ ತೆಗೆದುಕೊಂಡಿರಿ.
"success does not come from just talent, ideas or motivation. success comes from invisible foundations, and discipline is the deepest one."
ಅಂದರೆ ಯಶಸ್ಸು ಕೇವಲ ಪ್ರತಿಭೆ, ಕಲ್ಪನೆ ಅಥವಾ ಪ್ರೇರಣೆಯಿಂದ ಬರುವುದಿಲ್ಲ. ಬದಲಿಗೆ ಅದೃಶ್ಯ ಅಡಿಪಾಯಗಳಿಂದ(invisible foundations) ಬರುತ್ತದೆ. ಶಿಸ್ತು ಅದರಲ್ಲಿ ಆಳವಾದದಾಗಿದೆ. ಹೀಗಾಗಿ ಮೊದಲಿಗೆ ಒಂದು ಗಟ್ಟಿಯಾದ ಅಡಿಪಾಯವನ್ನು ಮಾಡಿ. ಅದನ್ನು ಕೇವಲ ಒಂದೇ ರೀತಿಯಲ್ಲಿ ಮಾಡಬಹುದು ಅದುವೇ ವಿರಾಮ ಮತ್ತು ದಾಳಿ.
ಏಕೆಂದರೆ ಯಾವುದರಲ್ಲಾದರೂ ಶಿಸ್ತನ್ನು ಸಾಧಿಸಲು ಗಾಬರಿಯಾದ ಹಂತವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಸಿಂಹವು ದೊಡ್ಡದಾಗಿ ಜಿಗಿಯುವ ಮೊದಲು 2 ಹೆಜ್ಜೆ ಹಿಂದಿಡುವ ರೀತಿ, ಬಾಣವನ್ನು ಗುರಿಗೆ ಕಳುಹಿಸುವ ಮೊದಲು ಹಿಂದಕ್ಕೆ ಎಳೆಯುವ ರೀತಿಯೇ ಮೊದಲ ಹಂತ ವಿರಾಮವಾಗಿದೆ(pause). ಏಕೆಂದರೆ ಜನರು ವಿರಾಮವಾಗಿ ಇರದೇ ಶಿಸ್ತಿನಿಂದ ಇರುವ ತಪ್ಪನ್ನು ಮಾಡುತ್ತಾರೆ.
ನಾನು ನಾಳೆಯಿಂದ 6 ಗಂಟೆಗೆ ಏಳುವೇ, ನಾಳೆಯಿಂದ ಜಿಮ್ಗೆ ಹೋಗುವೆ, ಈ ರೀತಿಯಲ್ಲಿ 99% ಜನರು ಮಾಡುವ ತಪ್ಪುಗಳನ್ನು ನೀವು ಮಾಡಬಾರದು. ನೀವು ಸಮಸ್ಯೆಯ ಮೂಲದಿಂದ(root) ಪರಿಹಾರ ಹುಡುಕಬೇಕು. ಇದಕ್ಕಾಗಿ ನಿಮ್ಮ ಮನಸ್ಸಿಗೆ ಹಿಡಿಸದಿದ್ದರೂ 15 ರಿಂದ 20 ನಿಮಿಷ ನಿಮ್ಮಷ್ಟಕ್ಕೆ ನೀವು ಕುಳಿತುಬಿಡಿ ಮತ್ತು ಈ 3 ಪ್ರೆಶ್ನೆಗಳನ್ನು ಕೇಳಿಕೊಳ್ಳಿ.
ನಾನು ನಿಜವಾಗಿಯೂ ಯಾವ ಒಂದು ವಿಷಯದ ಮೇಲೆ ಶಿಸ್ತನ್ನು ಸಾಧಿಸಲು ಬಯಸಿರುವೆನು? ಯಾವುದು ಶಿಸ್ತನ್ನು ಫಾಲೋ ಮಾಡುವುದರಿಂದ ತಡೆಯುತ್ತಿದೆ? ನಾನು ಕನಿಷ್ಠ ಪ್ರಯತ್ನದಿಂದ ಶಿಸ್ತಿನಿಂದ ಇರುವುದು ಹೇಗೆ?
ಇದರ ಸ್ಕ್ರೀನ್ಶಾಟ್ ತೆಗೆದುಕೊಳ್ಳಿ ಮತ್ತು ನೀವು ನಿಜವಾಗಿಯೂ ಶಿಸ್ತನ್ನು ಸಾಧಿಸಲು ಬಯಸಿರುವ ಆ ಒಂದು ವಿಷಯವನ್ನು ಕಮೆಂಟ್ ಮಾಡಿ. ಇದು ಏಕೆಂದರೆ ಆತ್ಮಾವಲೋಕನ(self reflection) ಮಾಡುವುದರಿಂದ ಗುರಿಯನ್ನು ಸಾಧಿಸುವ ಅವಕಾಶ 25% ನಷ್ಟು ಹೆಚ್ಚುತ್ತದೆ. ನಿಮಗೆ ಇದರ ಬಗ್ಗೆ ಸ್ಪಷ್ಟತೆ(clarity) ದೊರೆತಾಗ, ದಾಳಿ ಮಾಡಿ. ಇದಕ್ಕಾಗಿ ಸ್ಟೆಪ್ 2.
ಇದನ್ನು ಓದಿ: ಕೇಂದ್ರೀಕೃತ ಯಶಸ್ಸನ್ನು ಸಾಧಿಸಲು Deep Work ನ ಅಗತ್ಯ ನಿಯಮಗಳುನೀವು ಎಷ್ಟೇ ಒಳ್ಳೆಯ ಯೋಜಕ(planner) ಬಳಸಿ ಇಲ್ಲ ರಾತ್ರಿ ಒಂದು ಒಳ್ಳೆಯ ಮಾಡಬೇಕಾದ ಪಟ್ಟಿಯನ್ನು(todo list) ಮಾಡಿ. ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಮನಸ್ಸು ನಿಮ್ಮ ನಿಯಂತ್ರಣದಲ್ಲಿ ಇರದಿದ್ದರೆ ಪೂರ್ತಿ ದಿನವೂ ನಿಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಇಲ್ಲಿಯೇ ಮನಸ್ಸು ಮತ್ತು ನೀವು ಬರುತ್ತದೆ. ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಮನಸ್ಸು ನಿಮ್ಮನ್ನು ನಿಯಂತ್ರಣ ಮಾಡುವ ಮೊದಲೇ, ನೀವೇ ಅದನ್ನು ನಿಯಂತ್ರಣ ಮಾಡಲು ಕಲಿಯಿರಿ. ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಮನಸ್ಸು ಅಪೇಕ್ಷಿತ ಕ್ರಮಕ್ಕೆ(default mode) ಹೋಗುತ್ತಿದ್ದರೆ, ಅಂದರೆ ಇವತ್ತು ಸ್ವಲ್ಪ ತಡವಾಗಿ ಏಳುವೆ, ಒಮ್ಮೆ ಫೋನ್ ನೋಡುವೆ, ಇಂದು ಕೆಲಸ ಮಾಡಲು ಮನಸಿಲ್ಲ, ಸ್ವಲ್ಪ ತಡವಾಗಿ ಕೆಲಸ ಮಾಡುವೇ, ಒಂದು ದಿನದಲ್ಲಿ ಏನು ಬದಲಾಗುವುದಿಲ್ಲ. ಈ ರೀತಿಯಲ್ಲಿ ಯೋಚಿಸುತ್ತಿದ್ದರೆ, ನಿಮ್ಮ ಆಟ ಅಲ್ಲಿಯೇ ಮುಗಿಯಿತು ಎಂದುಕೊಳ್ಳಿ.
ನೀವು ನಿಮ್ಮ ಮನಸ್ಸು, ಬೆಳಗ್ಗೆ ಮತ್ತು ದಿನವನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲದಿದ್ದರೆ, ನಿಮ್ಮ ಬದುಕನ್ನು ಹೇಗೆ ನಿಯಂತ್ರಣ ಮಾಡುವಿರಿ. ನೀವು ನಿಮ್ಮ ಮೆದುಳಿಗೆ ಆಜ್ಞೆ(command) ನೀಡುವುದನ್ನು ಕಲಿಯಬೇಕು. ಇಲ್ಲದಿದ್ದರೆ ಅದು ನಿಮ್ಮ ಮೇಲೆ ರಾಜ್ಯ ಮಾಡುತ್ತದೆ. ಅದು ಪ್ರತಿದಿನ ನಿಮ್ಮ ಗುರಿಯ ಬಗ್ಗೆ ನೆನಪಿಸಿ ಅಪರಾಧಿ ಭಾವನೆ(guilt feel) ತರುತ್ತದೆ ಮತ್ತು ನೀವು ಬಯಸಿದರು ಆ ಗುರಿಯ ಮೇಲೆ ಕೆಲಸ ಮಾಡಲು ಬಿಡುವುದಿಲ್ಲ.
ಏಕೆಂದರೆ ಬೆಳಗ್ಗೆ ಎದ್ದ ತಕ್ಷಣ 3 ತಪ್ಪನ್ನು ಎಲ್ಲರೂ ಮಾಡುತ್ತಾರೆ, ಅವೆಂದರೆ ಫೋನ್ ನೋಡುವುದು, ಮನಸ್ಥಿತಿ ಮೇಲೆ ಅಂದು ಏನು ಮಾಡುವುದು ಎಂಬುವುದನ್ನು ನಿರ್ಧಾರ ಮಾಡುವುದು ಮತ್ತು ತಮ್ಮ ಸುತ್ತಮುತ್ತಲಿನದನ್ನು ನಿರ್ಲಕ್ಷಿಸುವುದು(surroundings ignore). ಆಗಿದ್ದರೆ ಇದಕ್ಕೆ ಇರುವ ಪರಿಹಾರವೇನು? ಇದಕ್ಕಾಗಿ ದೃಶ್ಯ ಹೊಣೆಗಾರಿಕೆಯನ್ನು(visual accountability) ಸೃಷ್ಟಿ ಮಾಡಿ. ಬಿಳಿ ಹಲಗೆ(white board) ಮತ್ತು ಬಣ್ಣದ ಜಿಗುಟಾದ ಟಿಪ್ಪಣಿಗಳನ್ನು(color sticky notes) ತೆಗೆದುಕೊಳ್ಳಿ.
ಇಲ್ಲ ನಿಮ್ಮ ಗುರಿ ಬಗ್ಗೆ ನೆನಪಿಸುವ ಪತ್ತೆಹಚ್ಚುವ ವಿಧಾನವನ್ನು(tracker) ಮಾಡಿ. ಉದಾಹರಣೆಗೆ ಕೋಣೆಯ ಗೋಡೆಯ ಮೇಲೆ, "do the hard work especially when you don't feel like it." ಎಂಬುದನ್ನು ಬರೆಯಿರಿ. ಇಲ್ಲ ಮಾರುಕಟ್ಟೆಯಿಂದ ಜಿಗುಟಾದ ಟಿಪ್ಪಣಿಗಳನ್ನು ಖರೀದಿಸಿ ಇಲ್ಲ ಬಿಳಿ ಕಾಗದದ 7 ತುಂಡು ಮಾಡಿ ನೀವು ಯಾವಾಗಲೂ ಗಮನಿಸುವ ಗೋಡೆಯ ಮೇಲೆ ಅಂಟಿಸಿ.
ಈ 7 ಬಿಳಿ ಕಾಗದ ವಾರದ 7 ದಿನ ತೋರಿಸುತ್ತದೆ. ನೀವು ಆ ದಿನದ ಕೆಲಸ ಮುಗಿದ ನಂತರ ಅದರ ಮೇಲೆ ಸರಿಗುರುತನ್ನು(checkmark) ಹಾಕಿರಿ. ಇದು ನಿಮ್ಮ ಪ್ರಗತಿಯನ್ನು(progress) ತೋರಿಸುತ್ತದೆ ಮತ್ತು ಈ ಸರಣಿ ಮುಂದುವರಿಕೆ(chain continue) ಇರಲು ಪ್ರೇರಣೆ ನೀಡುತ್ತದೆ. 10 ಇಲ್ಲ 1 ತಿಂಗಳು ಶಿಸ್ತಿನಿಂದ ಇರುವೇ ಎಂದು ಯೋಚಿಸಬೇಡಿ. ಬದಲಿಗೆ ಮುಂದಿನ 7 ದಿನ 7 ಬಾಕ್ಸ್ನಲ್ಲಿ ಸರಿಗುರುತು ಹಾಕುವುದನ್ನು ಬಿಡುವುದಿಲ್ಲವೆಂದು ಯೋಚಿಸಿ. ಇಲ್ಲದಿದ್ದರೆ ನೀವು ಅಭ್ಯಾಸ ಟ್ರ್ಯಾಕರ್ ಅಪ್ಲಿಕೇಶನ್(habit tracker app) ಅನ್ನು ಬಳಸಿ. ಇಲ್ಲ ನಿಮ್ಮ ಪುಸ್ತಕದಲ್ಲಿ(notebook) ಪ್ರತಿ ಕಾರ್ಯ(task) ಆದ ನಂತರ ಕೆಂಪು ಪೆನ್ನುಗಳಿಂದ ಗುರುತು ಮಾಡಿ. ಈ ಅನುಭವ ತುಂಬಾನೇ ತೃಪ್ತಿಕರವಿರುತ್ತದೆ(satisfying). ನಮಗೆ ಇದರಲ್ಲಿ ಜಿಗುಟಾದ ಟಿಪ್ಪಣಿಗಳ ವಿಧಾನ ಉಪಯುಕ್ತವೆನಿಸುತ್ತದೆ.
ಏಕೆಂದರೆ, "what gets measured gets improved." ದಿನವನ್ನು ಕಷ್ಟಕರ ಕಾರ್ಯದಿಂದ ಪ್ರಾರಂಭಿಸಿ, ಕಷ್ಟಕರ ಕಾರ್ಯವನ್ನು ಮೊದಲೇ ಮುಗಿಸಿ. ವ್ಯಾಯಾಮ(exercise), ಓದುವುದು, ಆಳವಾದ ಕೆಲಸದ(deep work) ರೀತಿ ಯಾವುದೇ ನಿಮ್ಮನ್ನು ಪ್ರತಿರೋಧಿಸುವಂತೆ ಮಾಡುವ ಕೆಲಸವನ್ನು ಮೊದಲು ಮಾಡಿ. ಏಕೆಂದರೆ ನೀವು ದಿನವನ್ನು ಗೆಲುವಿನಿಂದ ಪ್ರಾರಂಭಿಸಿದರೆ, ಪೂರ್ತಿ ದಿನ ನಿಮ್ಮ ನಿಯಂತ್ರಣದಲ್ಲಿ ಇರುತ್ತದೆ. ಇದನ್ನು "eat that frog" ತಂತ್ರವೇನುತ್ತಾರೆ. ಯಾವ ಕೆಲಸವನ್ನು ಮಾಡಲು ಅಧಿಕ ಭಯವಾಗುತ್ತದೆಯೋ ಅದನ್ನು ಮೊದಲು ಮುಗಿಸಿಬಿಡಿ. ಇದರ ನಂತರ ಮುಂದಿನ ಕಾರ್ಯ ಸುಲಭವೆನ್ನಿಸುತ್ತದೆ. ನೀವು ನಮ್ಮನ್ನು ಅಣ್ಣ ಎಂದುಕೊಂಡಿದ್ದರೆ, ನಿಮ್ಮ ಸಮಯ ಮತ್ತು ಹಣವನ್ನು ವ್ಯರ್ಥ ಮಾಡುವುದನ್ನು ನಿಲ್ಲಿಸಿ ಮತ್ತು ನಿಮ್ಮ ಬೆಳವಣಿಗೆಗಾಗಿ ಹೂಡಿಕೆ ಮಾಡಿ.
ನಿಮ್ಮ ಪರಿಸರವನ್ನು ಶಿಸ್ತು ಮತ್ತು ಸ್ನೇಹಪರ ಮಾಡಿ. ನಮ್ಮ ಸುತ್ತಮುತ್ತಲಿನ ಪರಿಸರ ನಮ್ಮ ಮನಸ್ಥಿತಿ ಮತ್ತು ಪ್ರತಿಕ್ಷಣವನ್ನು ಯಾವ ರೀತಿ ಪ್ರಭಾವ(influence) ಬೀರುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ನಿಮ್ಮ ಪರಿಸರ ನಿಮ್ಮ ಪ್ರತಿಯೊಂದು ನಿರ್ಧಾರ, ನಡವಳಿಕೆ ಮತ್ತು ಮನಸ್ಥಿತಿಗೆ ಪ್ರಭಾವ ಬೀರುತ್ತದೆ. ನೀವು ತಪ್ಪಾದ ಮಣ್ಣಿನಲ್ಲಿ ಕೊಳಕು ನೀರು ಹಾಕಿ ಮಾವಿನಹಣ್ಣು ಬೆಳೆಸಲು ಸಾಧ್ಯವಿಲ್ಲದ ರೀತಿಯೇ, ತಪ್ಪಾದ ಪರಿಸರದಲ್ಲಿ ನೀವು ಶಿಸ್ತುವಿನಿಂದ ಇರುವಿರಾ ಎಂದು ನಂಬಬೇಡಿ.
ನಿಮ್ಮ ಸುತ್ತಮುತ್ತ ತೊಂದರೆಯಿದ್ದು(disturbance) ಶಿಸ್ತಿನಿಂದ ಇರಲು ಸ್ಫೂರ್ತಿ ನೀಡದಿದ್ದರೆ. ನೀವು ಯಾವ ರೀತಿ ಶಿಸ್ತು, ಕೇಂದ್ರೀಕೃತ(focussed) ಮತ್ತು ಗೊಂದಲ ಮುಕ್ತ ಪರಿಸರವನ್ನು(distraction free environment) ಮಾಡಲಿ ಎಂಬುದರ ಬಗ್ಗೆ ಯೋಚಿಸಿ. ಏಕೆಂದರೆ ನಿಮ್ಮ ಸುತ್ತಮುತ್ತ ಗೊಂದಲ ಮಾಡುವ ಜನರಿದ್ದರೆ ಇಲ್ಲ ನಿಮ್ಮ ಫೋನ್ ನಿಮ್ಮ ಬಳಿ ಇದ್ದರೆ, ಕೆಲಸದ ಸಮಯದಲ್ಲಿ ಶಿಸ್ತಿನಿಂದ ಇರಲು ನಿಮಗೆ ಕಷ್ಟವಾಗುತ್ತದೆ.
ಮನೆಯಲ್ಲಿ ಶಿಸ್ತಿನಿಂದ ಇರಲು ಕಷ್ಟವಾದರೆ ವಿದ್ಯಾರ್ಥಿಯಾಗಿ ಗ್ರಂಥಾಲಯಕ್ಕೆ(library) ಹೋಗಿ. ಗ್ರಂಥಾಲಯವಿಲ್ಲದಿದ್ದರೆ ಬೆಳಗ್ಗೆ ಎಲ್ಲರೂ ಮಲಗಿರುವ ಸಮಯದಲ್ಲಿ ಏಳಿ. ಇದು ವಿದ್ಯಾರ್ಥಿ ಮತ್ತು ಎಲ್ಲರಿಗೂ ಅನ್ವಯಿಸುತ್ತದೆ. ಕೆಲಸದಲ್ಲಿ ಇದ್ದರೆ ಸಹ-ಕೆಲಸದ ಸ್ಥಳ(coworking space) ತೆಗೆದುಕೊಳ್ಳಿ, ಇಲ್ಲ ಕೆಫೆಯಿಂದಲೂ ನೀವು ಕೆಲಸ ಮಾಡಬಹುದು. ಇವುಗಳನ್ನು ಮಾಡಲು ಸಾಧ್ಯವಿಲ್ಲದಿದ್ದರೆ ನಿಮ್ಮ ಮನೆಯ ಪರಿಸರ, ಸಮಯ ನಿಗದಿ(timing) ಮತ್ತು ದಿನಚರಿಯನ್ನು(routine) ಶಿಸ್ತಿನಿಂದ ಇರಲು ಸಹಕರಿಸುವಂತೆ ಮಾಡಿ.
ಇದನ್ನು ಓದಿ: ಡೇವಿಡ್ ಗಾಗಿನ್ಸ್ ಅವರ "Can't Hurt Me" ಪುಸ್ತಕದ ಸಾರಾಂಶನಾವೆಲ್ಲರೂ ಶಿಸ್ತನ್ನು ನೋವು(pain) ಮತ್ತು ಕಷ್ಟಕ್ಕೆ ಸಹಚರ(associate) ಮಾಡುತ್ತೇವೆ. ಶಿಸ್ತಿನಿಂದ ಇರುವುದೆಂದರೆ ದಿನವು ನಮಗೆ ಕಷ್ಟವನ್ನು ಕೊಡುವುದಾಗಿದೆ. "ಬೆಳಗ್ಗೆ ಬೇಗನೆ ಏಳಬೇಕು, ಜಿಮ್ಗೆ ಹೋಗಬೇಕು, ಆ ಕೆಲಸವನ್ನು ಮಾಡಬೇಕು, ಅದನ್ನು ಕಲಿಯಬೇಕು, ಯಪ್ಪಾ ಶಿಸ್ತಿನಿಂದ ಇರುವುದು ತುಂಬಾ ಕಷ್ಟ." ನೀವು ಈ ಮನಸ್ಥಿತಿಯನ್ನು ಬದಲಾಯಿಸುವ ಅವಶ್ಯಕತೆ ಇದೆ. ನೀವು ಶಿಸ್ತನ್ನು ನೋವಿಗೆ ಅಲ್ಲದೆ ಸಂತೋಷದ(pleasure) ಜೊತೆ ಸಹಚರ ಮಾಡಿ. ಶಿಸ್ತು ನಿಮ್ಮನ್ನು ಕಟ್ಟಿ ಹಾಕುವುದಿಲ್ಲ, ಬದಲಿಗೆ ನಿಮ್ಮ ಎಲ್ಲಾ ಗುರಿಗಳನ್ನು ಸಾಧಿಸಲು ಸ್ವಾತಂತ್ರ್ಯ ನೀಡುತ್ತದೆ. ಹೀಗಾಗಿಯೇ ಶಿಸ್ತು ಸ್ವಾತಂತ್ರ್ಯಕ್ಕೆ ಸಮ ಎಂದು ಹೇಳುತ್ತಾರೆ
ನೀವು ಕೆಲಸ ಮಾಡಲು ತಯಾರಿದ್ದರೆ, ನಿಮ್ಮ ಎಲ್ಲ ಕನಸುಗಳನ್ನು ನನಸು ಮಾಡಿಕೊಳ್ಳಬಹುದು. ಏಕೆಂದರೆ ಶಿಸ್ತಗಿ ಇರುವುದು ಹೋರಾಟವಲ್ಲ(struggle) ಪುಣ್ಯವಾಗಿದೆ(previlized). ಶಿಸ್ತು ಒಂದು ಶಿಕ್ಷೆಯಾಗಿಲ್ಲ, ಇದು ಒಂದು ಸರಳ ಹವ್ಯಾಸವಾಗಿದ್ದು ನಿಮ್ಮನ್ನು ವಿಷಾದದಿಂದ(regret) ಉಳಿಸಿ ನಿಮ್ಮ ನಿರ್ಧಾರಕ್ಕೆ ಹೆಮ್ಮೆಯ ಅನುಭಾವ ನೀಡುತ್ತದೆ. ನೀವು ಎಷ್ಟು ಶಿಸ್ತಿನಿಂದ ಗೆಳೆತನ ಬೆಳೆಸುತ್ತೀರೋ ಅಷ್ಟು ಕಡಿಮೆ ಒತ್ತಡ(stress), ಅಪರಾಧಿ ಭಾವನೆ(guilt) ಮತ್ತು ಅಧಿಕ ತೃಪ್ತಿ(satisfaction) ಸಿಗುತ್ತದೆ. ಈ ಶಿಸ್ತನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ನೀವು ಅಂದುಕೊಳ್ಳುತ್ತಿರುವಷ್ಟು ಕಷ್ಟವಲ್ಲ.
ಮೊದಲಿಗೆ ನಿಮ್ಮ ಮನಸ್ಸಿನ ಹೊರೆಯನ್ನು(overload) ಕಡಿಮೆ ಮಾಡಿಕೊಳ್ಳಿ. ಪ್ರತಿ ರಾತ್ರಿ ನಿಮಗೆ ಮಾಡಬೇಕೆನಿಸುವ 10 ಕೆಲಸಗಳನ್ನು ಬರೆಯಿರಿ. ಅದರಲ್ಲಿ 3 ಪ್ರಮುಖ ಕೆಲಸವನ್ನು ಆರಿಸಿ ಗುರುತು ಹಾಕಿ, ಉಳಿದ ಕೆಲಸಗಳಿಗೆ ಕೆಂಪು ಗುರುತು ಹಾಕಿ. ಮುಂದಿನ ದಿನ ಆ 3 ಕೆಲಸದ ಮೇಲೆ ಕೆಲಸ ಮಾಡಿ. ಈ 3 ಕೆಲಸದ ತಂತ್ರವು ನಿಮ್ಮ ಗಮನ ಮತ್ತು ಶಿಸ್ತು 2 ನ್ನು ಜೊತೆಗೂಡಿಸುತ್ತದೆ ಮತ್ತು ಮನಸ್ಸಿನಲ್ಲಿ ಒಂದು ಸ್ಪಷ್ಟತೆ ತರುತ್ತದೆ.
"less is more", ಎಂಬುದನ್ನು ನೆನಪಿಡಿ. ಜನರು ಒಂದರ ಬದಲು 3 ಅರ್ಥಪೂರ್ಣ ಕೆಲಸಗಳ ಮೇಲೆ ಗಮನ ಹರಿಸಿದಾಗ, ಅವರ ಉತ್ಪಾದಕತೆಯ ಮಟ್ಟವು(productivity level) 60% ತನಕ ಹೆಚ್ಚುತ್ತದೆ. ಇದರ ನಂತರ ಸರಳ ದಿನಚರಿ(daily routine) ಮಾಡಿ. ಇದಕ್ಕೆ ಯಾವುದೇ ಅದ್ಭುತ ಯೋಜನೆಯ(fancy plan) ಅವಶ್ಯಕತೆ ಇಲ್ಲ. ನೀವು ದಿನವೂ ಪುನರಾವರ್ತಿಸಬಹುದಾದ(repeat) ಒಂದು ಸಣ್ಣ ಹವ್ಯಾಸವನ್ನು ಗುಂಪು ಮಾಡಿ. ಅದರಲ್ಲಿ ಮುಖ್ಯವಾಗಿರುವುದು ಪ್ರತಿದಿನ ಬೆಳಗ್ಗೆ ಒಂದೇ ಸಮಯದಲ್ಲಿ ಏಳುವುದಾಗಿದೆ.
ಬೆಳಗ್ಗೆ 5 ಇಲ್ಲ 8 ಗಂಟೆಗೆ ಎದ್ದರೂ ಪರವಾಗಿಲ್ಲ. ನೀವು ಇದನ್ನು ಮಾಡಿದರೆ ಶಿಸ್ತಿನಿಂದ ಇರುವುದು ಡೊಮಿನೊ ಪರಿಣಾಮದ(domino effect) ರೀತಿಯಾಗುತ್ತದೆ. ನೀವು ಆ ದಿನ ಏನು ಮಾಡುತ್ತಿರೋ ಬಿಡುತ್ತೀರೋ ಗೊತ್ತಿಲ್ಲ, ಆದರೆ ಅದೇ ಸಮಯದಲ್ಲಿ ಎದ್ದೇಳಿ ಮತ್ತು ತುಂಬಾ ಮುಖ್ಯವಿರುವ ಆ 3 ಕೆಲಸಗಳನ್ನು ಮಾಡಿ. ಈ ರೀತಿ ಚಿಕ್ಕ ಚಿಕ್ಕ ಕ್ರಮಗಳಿಂದ ನಿಮ್ಮ ಶಿಸ್ತಿನ ವ್ಯಕ್ತಿತ್ವ(identity) ಸೃಷ್ಟಿಯಾಗುತ್ತದೆ. ನಿಮ್ಮ ಉಪಪ್ರಜ್ಞೆ(sub consious) ಮನಸ್ಸು ಇದನ್ನು ಸ್ವೀಕರಿಸಿದಾಗ ಶಿಸ್ತಾಗಿ ಇರುವುದು ನಿಮಗೆ ಶ್ರಮರಹಿತವಾಗುತ್ತದೆ(effortless).
"don't focus on goals, focus on becoming the type of person who can achieve those goals," ಎಂದು ಜೇಮ್ಸ್ ಕ್ಲಿಯರ್(james clear) ಅವರು ಆಟೋಮಿಕ್ ಹ್ಯಾಬಿಟ್ಸ್(atomic habits) ಪುಸ್ತಕದಲ್ಲಿ ತಿಳಿಸಿದ್ದಾರೆ. ಅಂದರೆ ನೀವು ಪ್ರತಿದಿನ ಶಿಸ್ತುವಿನ ಚಿಕ್ಕ ಚಿಕ್ಕ ಹೆಜ್ಜೆ ತೆಗೆದುಕೊಂಡರೆ, ಸ್ವಾಭಾವಿಕವಾಗಿ ಶಿಸ್ತು ಇರುವ ವ್ಯಕ್ತಿಯಾಗುತ್ತೀರಾ. ಶಿಸ್ತುವೆಂದರೆ ಎಲ್ಲವನ್ನು ಒಮ್ಮೆಲೇ ಮಾಡುವುದಲ್ಲ. ಬದಲಿಗೆ ಮುಖ್ಯವಿರುವ ವಿಷಯದ ಮೇಲೆ ಮಾತ್ರ ಗಮನ ಹರಿಸುವುದಾಗಿದೆ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.