Website designed by @coders.knowledge.

Website designed by @coders.knowledge.

Strange Rules Imposed by Many Countries | ಅನೇಕ ದೇಶಗಳಲ್ಲಿ ಹೇರಿದ ವಿಚಿತ್ರ ನಿಯಮಗಳು

Watch Video

ಇಂದಿನ ಲೇಖನದಲ್ಲಿ ಅನೇಕ ದೇಶಗಳಲ್ಲಿ ವಿಧಿಸಿರುವ ವಿಚಿತ್ರ ನಿಯಮಗಳ ಬಗ್ಗೆ ತಿಳಿಸಲಿದ್ದೇವೆ. ಅನೇಕ ದೇಶಗಳಲ್ಲಿ ಅಲ್ಲಿನ ಸಂಸ್ಕೃತಿಯ ಪ್ರಕಾರ ವಿಚಿತ್ರ ರೀತಿಯ ನಿರ್ಬಂಧಗಳನ್ನು ವಿಧಿಸಿವೆ. ಕೆಲವು ದೇಶಗಳಲ್ಲಿ ಚೂಯಿಂಗ್ ಗಮ್ ಅಗಿಯುವುದು ಕಾನೂನು ಬಾಹಿರವಾಗಿದ್ದರೆ ಮತ್ತೆ ಕೆಲವು ದೇಶಗಳಲ್ಲಿ ರೇಡಿಯೋ ಕೇಳುವುದು ಕಾನೂನುಬಾಹಿರವಾಗಿದೆ. ಕೆಲವು ದೇಶಗಳಲ್ಲಿ ನೀಲಿ ಜೀನ್ಸ್ ಧರಿಸುವಂತಿಲ್ಲ, ಮತ್ತೆ ಇನ್ನೂ ಕೆಲವು ದೇಶಗಳಲ್ಲಿ ಫೇಸ್‌ಬುಕ್‌ ಮತ್ತು ಯೂಟ್ಯೂಬ್ ನಿಷೇಧವಾಗಿದೆ. ಇದೇ ರೀತಿ ಎಷ್ಟೋ ದೇಶಗಳು ವಿಚಿತ್ರ ನಿಯಮಗಳನ್ನು ಹೊಂದಿದೆ. ಅದು ಎಷ್ಟು ಆಘಾತಕಾರಿ ಎಂಬುದನ್ನು ಇಲ್ಲಿ ನೋಡೋಣ.

1. ಸಿಂಗಾಪುರದಲ್ಲಿ ಚೂಯಿಂಗ್ ಗಮ್ ನಿಷೇಧ.

chewing gum ban in singapore in kannada
chewing gum ban

ಸಿಂಗಾಪುರ ಏಷ್ಯಾದ ಆಗ್ನೇಯ ಭಾಗ(south- east)ದಲ್ಲಿರುವ ಅತ್ಯಂತ ಅಭಿವೃದ್ಧಿ ಹೊಂದಿರುವ ದೇಶವಾಗಿದೆ. ಆದರೆ ಇಲ್ಲಿ ಚೂಯಿಂಗ್ ಗಮ್ ನಿಷೇಧವಿದ್ದು, ಅದನ್ನು ಅಗಿಯುವವರನ್ನು ಬಂಧಿಸಬಹುದು ಅಥವಾ ದಂಡ ವಿಧಿಸಬಹುದು. ಸಿಂಗಾಪುರದಲ್ಲಿ ವೈದ್ಯಕೀಯ ಉದ್ದೇಶಗಳಿಗೆ ಮಾತ್ರ ಚೂಯಿಂಗ್ ಗಮ್ ಬಳಸಲು ಅನುಮತಿ ಇದೆ. 2004 ರಂದು ಸಿಂಗಾಪುರದಲ್ಲಿ ಚೂಯಿಂಗ್ ಗಮ್ ಬಳಕೆಯನ್ನು ನಿಷೇಧಿಸಲಾಗಿದೆ. ಸಿಂಗಾಪುರ ಸರ್ಕಾರದ ಪ್ರಕಾರ ಈ ನಿಯಮವನ್ನು ದೇಶದಲ್ಲಿ ಸ್ವಚ್ಚತೆಯನ್ನು ಉತ್ತೇಜಿಸಲು ತರಲಾಗಿದೆ.

ಇದನ್ನು ಓದಿ: ಜಪಾನ್ ಜಗತ್ತಿಗಿಂತ ವರ್ಷಗಳಷ್ಟು ಏಕೆ ಮುಂದಿದೆ?

2. ಯೂರೋಪಿಯನ್ ದೇಶಗಳಲ್ಲಿ ಬುರ್ಖಾ ನಿಷೇಧ.

ಯುರೋಪಿನಾದ್ಯಂತ ಅನೇಕ ಭಯೋತ್ಪಾದಕ ದಾಳಿಗಳ ನಂತರ, ಅನೇಕ ಯುರೋಪಿಯನ್ ದೇಶಗಳು ಮುಸ್ಲಿಂ ಮಹಿಳೆಯ ಸಾಂಸ್ಕೃತಿಕ ಉಡುಗೆ ಬುರ್ಖಾವನ್ನು ನಿಷೇಧಿಸಿವೆ. ಅವರ ಪ್ರಕಾರ ಅನೇಕ ದಾಳಿಕೋರರು ಬುರ್ಖಾ ಧರಿಸಿದ್ದರು. ಇದರಿಂದ ಪೊಲೀಸರಿಗೆ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಆ ದಾಳಿಕೋರರು ಪಾರಾಗುತ್ತಿದ್ದರು. 2004 ರಂದು ಬುರ್ಖಾ ಧರಿಸಲು ನಿಷೇಧ ಹೇರಿದ ಮೊದಲ ದೇಶ ಫ್ರಾನ್ಸ್ ಆಗಿದೆ. ಅದರ ನಂತರ ಬೆಲ್ಜಿಯಂ, ಸ್ವಿಜರ್ಲ್ಯಾಂಡ್, ಟರ್ಕಿ, ಇಟಲಿ' ಸ್ಪೇನ್ ಮತ್ತು ನೆದರ್ಲೆಂಡ್ಸ್‌ ಕೂಡ ತಮ್ಮ ದೇಶಗಳಲ್ಲಿ ಬುರ್ಖಾವನ್ನು ನಿಷೇಧಿಸಿದವು.

ಇದನ್ನು ಓದಿ: ಪುರಾತನ ಕಾಲದ ಕಠಿಣ ಶಿಕ್ಷೆಗಳು

3. ಚೀನಾದಲ್ಲಿ ಗೂಗಲ್ ನಿಷೇಧ.

google ban in china in kannada
google ban in china

ಹನ್ನೆರಡು ವರ್ಷಗಳ ಹಿಂದೆ ನೀವು ಗೂಗಲ್ ಅನ್ನು ಚೀನಾದಲ್ಲಿ ಬಳಸಬಹುದಾಗಿತು. ಆದರೆ 2009ರಲ್ಲಿ ಇದನ್ನು ಚೀನಾದಲ್ಲಿ ನಿಷೇಧಿಸಲಾಯಿತು. ಚೀನಾ ಕಾನೂನುಬಾಹಿರವಾಗಿ ಟಿಬೆಟ್‌ನ್ನು ವಶಪಡಿಸಿಕೊಂಡಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಟಿಬೆಟ್‌ನ ಈ ಪ್ರದೇಶದ ವೀಡಿಯೋ ಯೂಟ್ಯೂಬ್‌ನಲ್ಲಿ ಕಾಣಿಸಿತು. ಇದರಲ್ಲಿ ಚೀನಾದ ಸೈನಿಕರು ಟಿಬೆಟಿಯನ್ ಪ್ರಜೆಯನ್ನು ಒಡೆಯುತ್ತಿದ್ದನು. ಈ ವೀಡಿಯೋ ಯೂಟ್ಯೂಬ್‌ನಲ್ಲಿ ವೈರಲ್ ಆದಾಗ, ಚೀನಾ ಸರ್ಕಾರವು ಗೂಗಲ್ ಅನ್ನು ದೇಶದಲ್ಲಿ ನಿಷೇಧಿಸಲು ಆದೇಶಿಸಿತು. ಏಕೆಂದರೆ ಯೂಟ್ಯೂಬ್ ಗೂಗಲ್‌ನ ಒಡೆತನದಲ್ಲಿದೆ. ಚೀನಾದ ಪ್ರಕಾರ ಗೂಗಲ್ ಅನ್ನು ನಿಷೇಧಿಸಲು ಇನ್ನೊಂದು ಕಾರಣವೆಂದರೆ, ಅದು ಒಂದು ಅಮೆರಿಕನ್ ಕಂಪನಿಯಾಗಿದ್ದು, ಚೀನಾಕ್ಕೆ ಕೆಲವು ಗಂಭೀರ ಭದ್ರತಾ ಅಪಾಯಗಳನ್ನು ಹೊಂದಿದೆ. ಚೀನಿಯರು ಗೂಗಲ್ ಬದಲು ತಮ್ಮದೇ ಆದ ಸರ್ಚ್ ಇಂಜಿನ್ ಬೈದು ಬಳಸುತ್ತಾರೆ.

ಇದನ್ನು ಓದಿ: ಫೇಸ್‌ಬುಕ್‌ ಬಳಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ

4. ಭೂತಾನ್ ನಲ್ಲಿ ಧೂಮಪಾನ ನಿಷೇಧ.

smoking ban in bhutan in kannada
bhutan smoking ban

ಫೆಬ್ರವರಿ 2005ರಲ್ಲಿ ಭೂತಾನ್ ತಮ್ಮ ದೇಶದಲ್ಲಿ ಧೂಮಪಾನವನ್ನು ನಿಷೇಧಿಸಿತು ಮತ್ತು ಸಾರ್ವಜನಿಕವಾಗಿ ಧೂಮಪಾನವನ್ನು ನಿಷೇಧಿಸಿದ ಜಗತ್ತಿನ ಮೊದಲ ದೇಶವಾಯಿತು. ಭೂತಾನ್ 16 ಜೂನ್ 2010ರಂದು ತಂಬಾಕು ನಿಯಂತ್ರಣ ಕಾಯ್ದೆಯನ್ನು ಅಂಗೀಕರಿಸಿತು. ಈ ಕುರಿತು ಭೂತಾನ್ ಪ್ರಯತ್ನಗಳನ್ನು ನಾವು ನಿಜವಾಗಿಯೂ ಪ್ರಶಂಸಿಸಬೇಕು.

5. ಭಾರತದಲ್ಲಿ ಬುಡಕಟ್ಟು ಜನರನ್ನು ಭೇಟಿಯಾಗುವುದು ನಿಷೇಧವಾಗಿದೆ.

tribes of andaman and nicobar in kannada
andaman and nicobar tribes

ಕೇಂದ್ರಾಡಳಿತ ಪ್ರದೇಶವಾದ ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಜಾರವ ಬುಡಕಟ್ಟು ಎಂಬ ಅಸ್ಪೃಶ್ಯ ಬುಡಕಟ್ಟಿನ ಜನರು ವಾಸಿಸುತ್ತಿದ್ದಾರೆ. ಅವರು ಕಾನೂನುಬದ್ಧವಾಗಿ ಭಾರತೀಯ ಪ್ರಜೆಗಳಾಗಿದ್ದರೂ, ಅವರ ವಿಧಾನವನ್ನು ಸಂರಕ್ಷಿಸಲು ಭಾರತ ಸರ್ಕಾರವು ಅವರ ಪ್ರದೇಶವನ್ನು ಸಾಮಾನ್ಯ ಜನರಿಗೆ ನಿರ್ಬಂಧಿಸಿತು. ಜಾರವ ಬುಡಕಟ್ಟು ಭೂಮಿಯ ಮೇಲಿನ ಆರಂಭಿಕ ಬುಡಕಟ್ಟುಗಳಲ್ಲಿ ಒಂದಾಗಿದೆ. ಅವರು ಸಾವಿರಾರು ವರ್ಷಗಳಿಂದ ಹಿಂದೂ ಮಹಾಸಾಗರದ ಅನೇಕ ದ್ವೀಪಗಳಲ್ಲಿ ವಾಸಿಸುತ್ತಿದ್ದಾರೆ.

ಇದನ್ನು ಓದಿ: ಭಾರತದ ಮೇಲೆ ಎಂಟು ಅದ್ಭುತ ಸಂಗತಿಗಳು

6. ಇರಾನ್‌ನಲ್ಲಿ ಪಾಶ್ಚಿಮಾತ್ಯ ಕೇಶವಿನ್ಯಾಸವನ್ನು ನಿಷೇಧಿಸಲಾಗಿದೆ.

western hairstyle ban in iran in kannada
western hairstyle ban

ಇರಾನ್ ಸರಕಾರವು 2010ರಂದು ತಮ್ಮ ದೇಶದಲ್ಲಿ ಪಾಶ್ಚಿಮಾತ್ಯ ಕೇಶವಿನ್ಯಾಸವನ್ನು(western hairstyle) ಅನ್ನು ನಿಷೇಧಿಸಿತು. ಇರಾನ್ ಸರಕಾರ ಕೇಶವಿನ್ಯಾಸದ ಕೆಟಲಾಗ್ ಅನ್ನು ಬಿಡುಗಡೆ ಮಾಡಿತು. ಈ ನಿಯಮವನ್ನು ಉಲ್ಲಂಘಿಸಿದ ಯಾವುದೇ ವ್ಯಕ್ತಿ ಅಥವಾ ಸಲೂನ್ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ.

7. ಮಲೇಷಿಯಾದಲ್ಲಿ ಹಳದಿ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.

yellow t-shirt ban in malaysia in kannada
yellow t-shirt ban

ಫೆಬ್ರವರಿ 2016ರಂದು ಮಲೇಷ್ಯಾದ ಜನರು ಅಂದಿನ ಪ್ರಧಾನಿ ನಜೀಬ್ ರಜಾಕ್ ರಾಜಿನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಎಲ್ಲ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯ ಸಂಕೇತವಾಗಿ ಹಳದಿ ಟೀ-ಶರ್ಟ್ ಧರಿಸಿದ್ದರು. ಅದರ ನಂತರ ಮಲೇಷ್ಯಾ ಸರ್ಕಾರ ಹಳದಿ ಬಟ್ಟೆಗಳನ್ನು ನಿಷೇಧಿಸಿತು. ಅಂದಿನಿಂದ ಹಳದಿ ಉಡುಪು ಮಲೇಷಿಯಾದಲ್ಲಿ ಪ್ರತಿಭಟನೆಯ ಸಂಕೇತವಾಗಿದೆ.

ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 18 ಅತ್ಯುತ್ತಮ ಆಹಾರಗಳು

8. ಉತ್ತರ ಕೊರಿಯಾದಲ್ಲಿ ನೀಲಿ ಜೀನ್ಸ್ ನಿಷೇಧಿಸಲಾಗಿದೆ.

blue jeans ban in north korea in kannada
blue jeans ban

ನೀವು ಈಗಾಗಲೇ ಉತ್ತರ ಕೊರಿಯದ ಬಗ್ಗೆ ಕೇಳಿರುತ್ತೀರಿ ಮತ್ತು ಅದರ ಬಗ್ಗೆ ಕೇಳಿದರೆ ಅದರ ನಾಯಕ ಕಿಮ್ ಜಾಂಗ್ ಉನ್ ಮತ್ತು ಅವನ ಕುಖ್ಯಾತ ಸರ್ವಾಧಿಕಾರಿ ನಿಯಮ ಮತ್ತು ನಿರ್ಧಾರಗಳ ಬಗ್ಗೆ ಕೇಳಿರುತ್ತೀರಿ. ಕಿಮ್ ಜಾಂಗ್ ಉನ್ ತನ್ನ ದೇಶದಲ್ಲಿ ನೀಲಿ ಜೀನ್ಸ್ ನಿಷೇಧಿಸಿದ್ದಾನೆ. ಏಕೆಂದರೆ ಅವನು ತಮ್ಮ ದೇಶದಲ್ಲಿ ಯಾವುದೇ ರೀತಿಯ ಪಾಶ್ಚಿಮಾತ್ಯ ಪ್ರಭಾವವನ್ನು ತೆಗೆದುಹಾಕಲು ಬಯಸಿದ್ದನು. ಈ ಎಲ್ಲ ಮಾಹಿತಿ ಅಲ್ಲಿಗೆ ಭೇಟಿ ನೀಡಿದ ಪ್ರವಾಸಿಗರನ್ನು ಆಧರಿಸಿದೆ. ಉತ್ತರ ಕೊರಿಯಾದಲ್ಲಿ ನೀವು ಸ್ವತಂತ್ರ್ಯ ಸುದ್ದಿಗಳನ್ನು ಪಡೆಯಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಪತ್ರಿಕಾ ಸ್ವಾತಂತ್ರವಿಲ್ಲ.

ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್

9. ಅನೇಕ ದೇಶಗಳಲ್ಲಿ ಪ್ಲಾಸ್ಟಿಕ್ ಅನ್ನು ನಿಷೇಧಿಸಲಾಗಿದೆ.

plastic ban in many countries in kannada
plastic ban

ಭಾರತದಲ್ಲಿ ಸರ್ಕಾರವು ನಮ್ಮ ಪರಿಸರವನ್ನು ರಕ್ಷಿಸಲು ಮತ್ತು ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯಲು ಅನೇಕ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅನೇಕ ದೇಶಗಳು ಪ್ಲಾಸ್ಟಿಕ್ ವಸ್ತುಗಳ ಮೇಲೆ ಭಾರಿ ತೆರಿಗೆ ವಿಧಿಸಿದೆ. ಉದಾಹರಣೆಗೆ ಆಫ್ರಿಕಾದ 15 ದೇಶಗಳು ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ನಿಷೇಧಿಸಿವೆ. 1994 ರಂದು ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ ಭಾರೀ ತೆರಿಗೆ ವಿಧಿಸಿದ ಜಗತ್ತಿನ ಮೊದಲ ದೇಶ ಡೆನ್ಮಾರ್ಕ್ ಆಗಿದೆ. 2008ರಂದು ಚೀನಾ ಪ್ಲಾಸ್ಟಿಕ್ ಅನ್ನು ನಿಷೇಧಿಸಿತು. ಭಾರತವು ಪ್ರಾರಂಭಿಕ ಹಂತದ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿದೆ.

ಇದನ್ನು ಓದಿ: ಕರ್ನಾಟಕದ ಮೇಲೆ ಎಂಟು ಆಸಕ್ತಿದಾಯಕ ಸಂಗತಿಗಳು

10. ಉಬರ್ ಟ್ಯಾಕ್ಸಿ ಮೇಲೆ ನಿಷೇಧ.

uber ban in bulgeria in kannada
uber tax ban

2015ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ ಉಬರ್ ಮೇಲೆ ನಿಷೇಧ ಹೇರಿದ ಮೊದಲ ದೇಶ ಬಲ್ಗೇರಿಯಾ. ಬಲ್ಗೇರಿಯಾದಲ್ಲಿ ಟ್ಯಾಕ್ಸಿ ಪರವಾನಗಿ ಇಲ್ಲದೆ ಟ್ಯಾಕ್ಸಿ ಓಡಿಸಲು ಅನುಮತಿ ನೀಡಿತು. ಅದಕ್ಕಾಗಿಯೇ ಬಲ್ಗೇರಿಯ ಉಬರ್ ಅನ್ನು ನಿಷೇಧಿಸಿತು. ಅದರ ನಂತರ ಹಂಗೇರಿ, ಆಸ್ಟ್ರಿಯಾ ಮತ್ತು ಡೆನ್ಮಾರ್ಕ್‌ನಂತಹ ದೇಶಗಳು ಉಬರ್ ಅನ್ನು ನಿಷೇಧಿಸಿದವು.

ಸ್ನೇಹಿತರೇ ನಮ್ಮ ಇಂದಿನ ಈ ಲೇಖನ ನಿಮಗೆ ಇಷ್ಟವಾಯಿತೆಂದು ಭಾವಿಸುತ್ತೇವೆ. ಇದನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ ಮತ್ತು ಈ ರೀತಿ ಹೆಚ್ಚಿನ ವಿಷಯಗಳಿಗೆ ನಮ್ಮ ವೆಬ್‌ಸೈಟ್‌ಗೆ ರಿಜಿಸ್ಟರ್ ಆಗಿ.

Mahithi Thana

More by this author

Similar category

Explore all our Posts by categories.

commenters

dayan gowda • December 11th,2021

Nice