Website designed by @coders.knowledge.

Website designed by @coders.knowledge.

Unfuck Yourself- Book Change Life Forever | ಅನ್‌ಫಕ್ ಯುವರ್ಸೆಲ್ಫ್ - ನಿಮ್ಮ ಬದುಕನ್ನು ಬದಲಾಯಿಸುವ ಪುಸ್ತಕ

 0

 Add

Please login to add to playlist

Watch Video

ಒಬ್ಬ ಹಳೆಯ ಸ್ನೇಹಿತ ಬಂದು "ನಾನು ಬದುಕಿನಲ್ಲಿ ಸಾಧಿಸಲು ಬಯಸುತ್ತೇನೆ. ಆದರೆ ಏನು ಮಾಡಬೇಕೆಂದು ತಿಳಿಸು, ಜಗತ್ತನ್ನು ನೋಡಿದರೆ ಎಲ್ಲರೂ ಮುಂದುವರಿಯುತ್ತಿದ್ದಾರೆ. ಆದರೆ ನಾನು ನಿಂತಲ್ಲೇ ನಿಂತಿದ್ದೇನೆ. ನಾನು ನನ್ನ ಜೀವನದಲ್ಲಿ ಇನ್ನೂ ದೊಡ್ಡದಾದದ್ದನ್ನು ಸಾಧಿಸಲು ಸಾಧ್ಯವಾಗಿಲ್ಲ. ನನಗೆ ಇವುಗಳನ್ನೆಲ್ಲ ನೆನೆಸಿಕೊಂಡು ದುಃಖವಾಗುತ್ತದೆ. ನನಗೆ ಈಗಂತೂ ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ. ಎಲ್ಲಿಯಾದರೂ ಹೋಗಲು ಕೂಡ ಇಷ್ಟವಾಗುತ್ತಿಲ್ಲ. ನಾನು ಮಾನಸಿಕವಾಗಿ ಕುಗ್ಗಿದ್ದೇನೆ ಎಂದೆನಿಸುತ್ತದೆ.

ಒಮ್ಮೊಮ್ಮೆ ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಿದರೂ ನನಗೆ ಬೇಕಾದ ಫಲಿತಾಂಶ ಸಿಗುತ್ತಿಲ್ಲ. ಆದರೂ ನಿಜ ಸಂಗತಿ ಏನೆಂದರೆ ನಾನು ತುಂಬಾ ಕೆಲಸ ಮಾಡುತ್ತಿಲ್ಲ, ವಿಳಂಬ ರೀತಿಯ ಮನೋಭಾವನೆಯನ್ನು ಹೊಂದಿದ್ದೇನೆ. ನನಗೆ ಒಮ್ಮೊಮ್ಮೆ ಕೆಲಸ ಮಾಡಲು ಮನಸ್ಸಿರುತ್ತದೆ, ಆದರೂ ಮಾಡಲು ಸಾಧ್ಯವಾಗುವುದಿಲ್ಲ. ಕೆಲಸವೂ ಕುತ್ತಿಗೆಗೆ ಬರುವವರೆಗೆ ನನಗೆ ಅದರ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ನನಗೆ ಕೆಲಸ ಮಾಡುವ ಮನಸ್ಸಿದ್ದರೂ ಅದನ್ನು ಮಾಡಲು ಸಾಧ್ಯವಾಗುತ್ತಿಲ್ಲದಿರುವ ಮಾದರಿಯನ್ನು(pattern) ನಾನು ಯಾವಾಗಲೂ ನೋಡುತ್ತೇನೆ.

ನಾನು ಇತ್ತೀಚೆಗಷ್ಟೇ ಪೂರ್ತಿ ಜೀವನವನ್ನು ಬದಲಿಸುವ ಬಗ್ಗೆ ಯೋಚಿಸಿದೆ, ಆದರೆ ನಾನು ಅಂದುಕೊಂಡ ಏನನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನಗೆ ಇದರಿಂದ ಹೊರಬರಲು ಕೆಲವು ಮಾರ್ಗಗಳನ್ನು ತಿಳಿಸು" ಎಂದು ಕೇಳುತ್ತಾನೆ. ಇದನ್ನು ಕೇಳಿದ ನಂತರ ತಲೆಯಿಂದ ಬರುವ ಒಂದೇ ಒಂದು ಪುಸ್ತಕವೆಂದರೆ ಅದುವೆ "unfuck yourself" ಇದನ್ನು ಗ್ಯಾರಿ ಜಾನ್ ಬಿಷಪ್ ಅವರು ಬರೆದಿದ್ದಾರೆ.

ತುಂಬಾ ಜನ ಇಂದು ಆತಂಕ, ಖಿನ್ನತೆ, ಕೆಟ್ಟದಾಗಿ ಯೋಚಿಸುವುದು, ಏನು ಇಷ್ಟವಿಲ್ಲದೆ ಇರುವುದು, ಅವರ ಜೀವನದಲ್ಲಿ ಪ್ರೇರಣೆಯೇ(motivation) ಇರುವುದಿಲ್ಲ. ನೀವು ಹತಾಶೆ ಎಂಬ ಭಾವನೆಯನ್ನು ಅನಿಸುವ ಮಟ್ಟವನ್ನು ತಲುಪುತ್ತೀರಾ. ಇವು ಎಷ್ಟೇ ಬಯಸಿದರು ನಿಮ್ಮಲ್ಲಿ ಆ ಪ್ರೇರಣೆ ಬರುವುದೇ ಇಲ್ಲ. ಈ ಪುಸ್ತಕದಿಂದ ಒಂದು ಯೋಚನೆ ತಲೆಗೆ ಬರುತ್ತದೆ. ಅದುವೇ "steve your donkey".

ನಾನು ಸ್ನೇಹಿತನಿಗೆ "ನೀನು ಇಂದು ನಿನ್ನ ಜೀವನದಲ್ಲಿ ಏನೇನು ಮಾಡುತ್ತಿದ್ದೀಯಾ, ನಿನ್ನ 24 ಗಂಟೆಗಳನ್ನು ಹೇಗೆ ಬಳಸಿಕೊಳ್ಳುತ್ತಿದ್ದೀಯ" ಎಂದು ಕೇಳಿದಾಗ. ಆತ "ನಾನು ಚಿಕ್ಕ ಪುಟ್ಟ ಕೆಲಸಗಳನ್ನು ಮುಗಿಸಿಕೊಳ್ಳುತ್ತೇನೆ ಮತ್ತು ನನ್ನ ಅಧಿಕ ಸಮಯ ಫೋನ್ ನೋಡುವುದರಲ್ಲಿ ಹೋಗುತ್ತದೆ" ಎಂದು ಹೇಳುತ್ತಾನೆ. ಅವೆಂದರೆ ಚಿಕ್ಕ ವೀಡಿಯೋ, ನೆಟ್ಫ್ಲಿಕ್ಸ್ನಲ್ಲಿ ಸಿನೆಮಾ ನೋಡಲು, ಊಟ ಮಾಡಲು, ಟೈಂಪಾಸ್ ಮಾಡುವುದರಲ್ಲೇ ಕಳೆಯುತ್ತೇನೆ. ಅವನು ಹೇಳಿದ ಎಲ್ಲ ವಿಷಯ ಅನೇಕ ಜನರ ಜೊತೆ ಆಗುತ್ತಿರುತ್ತದೆ. ಅವರು ಇದನ್ನು ತಿಳಿಯಲೇಬೇಕು.

ನಮ್ಮ ಮನಸ್ಸು ಮತ್ತು ದೇಹಕ್ಕೆ ಇರುವ ಸಂಬಂಧವು ಕತ್ತೆಯ ಮೇಲೆ ಕೂತಿರುವ ವ್ಯಕ್ತಿಯ ರೀತಿ ಆಗಿದೆ. ಇದರಲ್ಲಿ ನಿಮ್ಮ ಮನಸ್ಸು ವ್ಯಕ್ತಿಯಾಗಿದ್ದರೆ, ಆ ಕತ್ತೆ ನಿಮ್ಮ ದೇಹವಾಗಿದೆ. ಉದಾಹರಣೆಗೆ, ನೀವು ಆ ಕತ್ತೆಯನ್ನು ನಡೆಸಲು ಬಯಸಿದರೆ, ಅದರ ಮುಂದೆ ಒಂದು ಕ್ಯಾರೆಟನ್ನು ಇಡಬೇಕು. ಇದರಿಂದ ಅದನ್ನು ತಿನ್ನಲು ಅದು ಮುಂದೆ ಮುಂದೆ ಹೋಗುತ್ತದೆ. ಇದೇ ರೀತಿಯಲ್ಲಿ ನೀವು ನಿಮ್ಮ ದೇಹವು ಕಾರ್ಯನಿರ್ವಹಿಸಲು ಬಯಸಿದರೆ ನಿಮ್ಮ ದೇಹಕ್ಕೆ ಬಹುಮಾನವನ್ನು(reward) ನೀಡಲೇಬೇಕು ಅಥವಾ ನೀವು ಬಹುಮಾನದ ಬಗ್ಗೆ ಕೆಲಸ ಮಾಡುವಾಗ ಯೋಚಿಸುತ್ತಿರಬೇಕು. ಇದರಿಂದ ಆ ಕೆಲಸವನ್ನು ಮಾಡಲು ನಿಮ್ಮ ದೇಹದಲ್ಲಿ ಒಂದು ಪ್ರೇರಣೆ ಇರುತ್ತದೆ.

ಇದನ್ನು ಕೇಳಲು ಸುಲಭವೆನಿಸುತ್ತದೆ. ಆದರೆ ಡೋಪಮೈನ್(dopamine) ಎನ್ನುವ ರಾಸಾಯನಿಕವು ನಮಗೆ ಬಹುಮಾನ ಸಿಕ್ಕಾಗಲೆಲ್ಲ ಬಿಡುಗಡೆ ಆಗುತ್ತದೆ. ಈ ಡೋಪಮೈನ್ ನಮ್ಮ ಚಿಕ್ಕ ಪುಟ್ಟ ಕೆಲಸಗಳನ್ನು ಮುಗಿಸುವವುದರಿಂದಲೂ ಬಿಡುಗಡೆ ಆಗುತ್ತದೆ. ನೀರು ಕುಡಿಯುವುದು, ಊಟ ಮಾಡುವುದು, ನಮ್ಮ ಯಾವುದೇ ಒಂದು ಗುರಿಯನ್ನು ಪೂರ್ಣ ಮಾಡುವಂತಹ ಚಿಕ್ಕ ಚಿಕ್ಕ ವಿಷಯಗಳಿಂದಲೂ ಡೋಪಮೈನ್ ರಿಲೀಸ್ ಆಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಅತಿಯಾದ ಪ್ರಚೋದನೆಯಲ್ಲಿ(over stimulate) ಇರುತ್ತೇವೆ. ನಾವು ಸ್ಮಾರ್ಟ್‌ಫೋನ್ ಮತ್ತು ಅದರಲ್ಲಿರುವ ಚಟ(addictive) ಸಹಿತ ಆ್ಯಪ್ಸ್ಗಳನ್ನು ಎಷ್ಟು ಬಳಸುತ್ತೇವೆಂದರೆ, ಇದರಿಂದ ಅಧಿಕ ಡೋಪಮೈನ್ ಬಿಡುಗಡೆ ಆಗುತ್ತದೆ. ಇವುಗಳಿಂದಲೇ ಅಧಿಕ ಡೋಪಮೈನ್ ಬಿಡುಗಡೆ ಆಗುವ ಕಾರಣ ಸಾಮಾನ್ಯ ವಸ್ತುಗಳಲ್ಲಿ ನಮಗೆ ಅಷ್ಟು ಡೋಪಮೈನ್ ಬಿಡುಗಡೆ ಆಗುವುದಿಲ್ಲ.

ಸೋಷಿಯಲ್ ಮೀಡಿಯಾ, ಅಶ್ಲೀಲ(porn) ನೋಡುವುದು, ಡ್ರಗ್ಸ್, ಜಂಕಫುಡ್, ಗೇಮ್ಸ್, ಟಿವಿಶೋಗಳು ನಮ್ಮ ಮೆದುಳಿನಲ್ಲಿ ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತವೆ. ಇದು ಒಂದು ರೀತಿಯಲ್ಲಿ ನಿಮ್ಮ ಕತ್ತೆಗೆ ಅಧಿಕ ತಿನ್ನಿಸಿದಂತಾಗಿದೆ. ಇದರಿಂದ ಕತ್ತೆ ಸೋಮಾರಿಯಾಗುತ್ತದೆ ಮತ್ತು ಅದರ ಮುಂದೆ ಕ್ಯಾರೆಟ್ ಇಟ್ಟರೆ ಅದರ ತಿನ್ನಲು ನಡೆಯುವುದು ದೂರ, ಅದನ್ನು ನೋಡುವುದೂ ಇಲ್ಲ. ಇದೇ ರೀತಿಯೇ ನಾವು ನಮ್ಮ ಮೇದುಳಿಗೆ ಅತಿಯಾಗಿ ಡೋಪಮೈನ್ ಬಿಡುಗಡೆಯಾಗುವ ವಸ್ತುಗಳನ್ನು ನೀಡುತ್ತಿದ್ದರೆ, ಅದು ಚಿಕ್ಕ ಚಿಕ್ಕ ವಸ್ತುಗಳಿಗೆ ಬಿಡುಗಡೆಯಾಗುವ ಡೋಪಮೈನ್ ಅನ್ನು ಕಡಿಮೆಗೊಳಿಸುತ್ತದೆ. ಆಗಿದ್ದರೆ ಇದರಿಂದ ಹೊರಗೆ ಬರುವುದು ಹೇಗೆ?

ಇದನ್ನು ಓದಿ: ನಿಮ್ಮನ್ನು ಚುರುಕಾಗಿಸಲು 13 ದಿನನಿತ್ಯದ ಅಭ್ಯಾಸಗಳು

1. Starve your donkey.

starve your donkey unfuck yourself in kannada
starve your donkey

ಅತಿಯಾದ ಪ್ರಚೋದನೆಯಲ್ಲಿ ಇರುವ ಎಲ್ಲ ವಸ್ತುಗಳನ್ನು ನಿಮ್ಮ ಜೀವನದಿಂದ ಆದಷ್ಟು ತೆಗೆದುಹಾಕಿ. ಹಾಗಂತ ನೀವು ಎಲ್ಲವನ್ನು ಬಿಟ್ಟು ಹೋಗಿ ಸನ್ಯಾಸಿಯಾಗಿ ಎಂದು ಹೇಳುತ್ತಿಲ್ಲ. ನೀವು ಕನಿಷ್ಠ ಎರಡು ದಿನಗಳಿಗಾದರೂ, ಅತಿಯಾದ ಡೋಪಮೈನ್ ಬಿಡುಗಡೆಯಾಗುವ ವಸ್ತುಗಳನ್ನು ನೋಡಲೇಬಾರದು ಎಂಬ ನಿರ್ಧಾರ ತೆಗೆದುಕೊಳ್ಳಿ. ಆ ಡೋಪಮೈನ್ಗಾಗಿ ನಿಮ್ಮ ಮೆದುಳು ಹಸಿದಿರಲಿ. ಇದರಿಂದ ನೀವು ಚಿಕ್ಕ ಚಿಕ್ಕ ಕಾರ್ಯಗಳನ್ನು ಮುಗಿಸಿದರು, ಅದರಿಂದ ಅಧಿಕ ಡೋಪಮೈನ್ ಬಿಡುಗಡೆ ಆಗುತ್ತದೆ. ಇದರಿಂದ ನಿಮಗೆ ಖುಷಿಯಾಗಿ, ಆ ಕೆಲಸವನ್ನು ಮಾಡಲು ಇನ್ನಷ್ಟು ಆಸಕ್ತಿ ಬರುತ್ತದೆ.

ಇಂದಿನ ಜಗತ್ತಿನಲ್ಲಿ ತುಂಬಾ ಅಗ್ಗವಾಗಿ(cheap) ಡೋಪಮೈನ್ ಬಿಡುಗಡೆ ಆಗುತ್ತಿದೆ. ಇದು ಒಂದು ರೀತಿ ಚಟದ(addiction) ರೀತಿ ಆಗಿದೆ. ಈ ಚಟವೂ ಇತರ ವಸ್ತುಗಳ ಮೇಲೂ ಗಮನಹರಿಸಲು ಬಿಡುತ್ತಿಲ್ಲ. ಅದೇ ನೀವು ನಿಮ್ಮ ಮೆದುಳನ್ನು ಹಸಿದಿರುವಂತೆ ಮಾಡಿದರೆ, ಅಂದರೆ ಸ್ವಲ್ಪ ದಿನ ನಿಮ್ಮನ್ನು ಜೆಲಿನಲ್ಲಿ ಹಾಕಿದ್ದರೆಂದು ಯೋಚಿಸಿ, ಸ್ವಲ್ಪ ದಿನದ ನಂತರ ನಿಮಗೆ ಒಂದು ಪುಸ್ತಕ ಕೊಟ್ಟು ಓದಲು ಹೇಳಿದರೇ, ನೀವು ಖುಷಿಯಿಂದ ಅದನ್ನು ಓದುತ್ತೀರಾ. ಇದರಿಂದ ನಿಮ್ಮಲ್ಲಿ ಅಧಿಕ ಡೋಪಮೈನ್ ಬಿಡುಗಡೆ ಆಗುತ್ತದೆ. ಇದು ನಿಮ್ಮ ಜಿಮ್ ಮತ್ತು ಇತರ ವಿಷಯಗಳಿಗೂ ಅನ್ವಯವಾಗುತ್ತದೆ. ಹೀಗಾಗಿ ಅತಿಯಾದ ಪ್ರಚೋದನೆ ಇರುವ ವಸ್ತುಗಳನ್ನು ಎಷ್ಟು ಸಾಧ್ಯವೋ ಅಷ್ಟು ತಪ್ಪಿಸಲು ಪ್ರಯತ್ನಿಸಿ.

ಇದನ್ನು ಓದಿ: ಉನ್ನತ ವ್ಯಕ್ತಿಯಾಗಲು ಇರುವ ಮಾರ್ಗ

2. In the beginning.

in the beginning unfuck yourself in kannada
in the beginning

ನೀವು ಬೆಳಗ್ಗೆಯಿಂದ ರಾತ್ರಿಯವರೆಗೆ ಕೇವಲ ಎರಡು ಜನಗಳ ಹತ್ತಿರ ಮಾತನಾಡುತ್ತೀರಾ. ಆ ಜನಗಳು ಯಾರು? ಒಂದು ಈ ಜಗತ್ತಿನಲ್ಲಿರುವ ಜನಗಳು ಮತ್ತು ಇನ್ನೊಬ್ಬರು ನೀವೇ. ನೀವು ನಿಮ್ಮ ಜೊತೆಯಲ್ಲೇ ಮಾತನಾಡಿಕೊಳ್ಳಬೇಕು, ನಿಮಗೆ ಇದನ್ನು ಕೇಳಿ ವಿಚಿತ್ರವೆನಿಸಬಹುದು ಮತ್ತು "ನಾನು ನನ್ನ ಜೊತೆ ಎಂದಿಗೂ ಮಾತನಾಡುವುದಿಲ್ಲವೆನ್ನಬಹುದು". ಆದರೆ ಸತ್ಯ ಏನೆಂದರೆ ನೀವು ನಿಮ್ಮೊಂದಿಗೆ ಮಾತನಾಡಿಕೊಳ್ಳುತ್ತೀರಿ. ನಿಮ್ಮ ಮೆದುಳು ಅದರ ಜೊತೆಗೆ ಮಾತಾಡಿಕೊಳ್ಳುತ್ತದೆ. ಒಂದು ಅಧ್ಯಯನದ ಪ್ರಕಾರ ನಮ್ಮ ಮೆದುಳಿನಲ್ಲಿ ಒಂದು ದಿನಕ್ಕೆ 50 ಸಾವಿರಕ್ಕೂ ಅಧಿಕ ಯೋಚನೆಗಳು ಬರುತ್ತವೆ. ಈ ಯೋಚನೆಗಳು ನಮ್ಮ ಬದುಕಿನ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ.

ಒಬ್ಬ ವಿಜ್ಞಾನಿ ಇವುಗಳ ಮೇಲೆ 4 ಪ್ರಯೋಗಗಳನ್ನು ಮಾಡಿದ್ದಾರೆ. ಇದರಲ್ಲಿ ಅವರು ಎಲ್ಲ ಸ್ಪರ್ಧಿಗಳನ್ನು ಕರೆದು ನೆಗೆಟಿವ್ ಮತ್ತು ಪಾಸಿಟಿವ್ ಘಟನೆಗಳನ್ನು ನೆನೆಸಿಕೊಳ್ಳಲು ಹೇಳುತ್ತಾರೆ. ಇದರಲ್ಲಿ ಪಾಸಿಟಿವ್ ಘಟನೆಗಳ ಬಗ್ಗೆ ಯೋಚಿಸಿದವರು, ಅಧಿಕ ಖುಷಿಯಾಗಿದ್ದರು. ಅದೇ ಕೇವಲ ನೆಗೆಟಿವ್ ಅನುಭವಗಳನ್ನು ನೆನೆಸಿಕೊಳ್ಳುವವರು, ಸಮಯದ ಜೊತೆ ಇನ್ನಷ್ಟು ದುಃಖದಲ್ಲಿ ಇರುತ್ತಿದ್ದರು. ನೀವು ನ್ಯೂರೋಪ್ಲಾಸ್ಟಿಸಿಟಿ(neuroplasticity) ಎಂಬ ಪರಿಕಲ್ಪನೆಯನ್ನು ಕೇಳಿರುತ್ತೀರಾ. ಇದರ ಪ್ರಕಾರ ನಮ್ಮ ಯೋಚನೆಗಳು ನಮ್ಮ ಮೆದುಳಿನ ಒಳಗಿನ ಅಂಗಗಳನ್ನು ಬದಲಾಯಿಸುತ್ತವೆ. ಇದರ ಅರ್ಥ ನಮ್ಮ ಬದುಕಿನ ಗುಣಮಟ್ಟ, ಈ ಯೋಚನೆಗಳ ಮೇಲೆ ನಿಂತಿದೆ ಎಂದರೆ ನೀವು ಆ ಯೋಚನೆಗಳನ್ನು ನಿಯಂತ್ರಣ ಮಾಡಿ.

ನಾವು ನಮ್ಮ ಜೊತೆಯೇ ಮಾತಾಡುವಾಗ ಎರಡು ರೀತಿಯ ವಾಕ್ಯಗಳನ್ನು ಬಳಸುತ್ತವೆ. ಅವೆಂದರೆ assertive ಮತ್ತು narrative. ಉದಾಹರಣೆಗೆ ನೀವು assertive ವಾಕ್ಯಗಳನ್ನು ಬಳಸಿದಲ್ಲಿ, ನೀವು ಈ ರೀತಿ ಹೇಳುತ್ತೀರಾ, "i am rude", "i am great", "i am very lonely", "i am stupid", "i embrace", "i assert", ಇವುಗಳಲ್ಲಿ ನೀವು ಮಾತನಾಡುವಾಗ ನಿಮ್ಮ ಗುರುತನ್ನು(identity) ಬಳಸುತ್ತೀರಾ. ಅದೇ narrativeನಲ್ಲಿ ನೀವು ಈ ರೀತಿ ಹೇಳುತ್ತೀರಾ, "i should", "i will try". ಈ narrative ವಾಕ್ಯಗಳು ಅಷ್ಟು ಗಟ್ಟಿ ಇರುವುದಿಲ್ಲ ಮತ್ತು ನಿಮ್ಮ ಮೇಲೆ ಗಂಭೀರ ಪ್ರಭಾವವನ್ನು ಬೀರುವುದಿಲ್ಲ.

ಉದಾಹರಣೆಗೆ ನೀವು ಧೂಮಪಾನ ಮಾಡುವುದನ್ನು ನಿಲ್ಲಿಸಲು ಬಯಸುತ್ತೀರಾ ಎಂದು ಭಾವಿಸಿ. ನೀವು "i will quit smoking" ಎಂದು ಹೇಳಿಕೊಳ್ಳುವುದಕ್ಕಿಂತ "i am not a smoker", ಎಂದು ಹೇಳಿಕೊಳ್ಳುವುದು ಹೆಚ್ಚು ಶಕ್ತಿಯುತವಾಗಿದೆ. ಇದರಲ್ಲೂ ನೀವು ನಿಮ್ಮ ಗುರುತು ಇರುವ ವಾಕ್ಯಗಳನ್ನು ಬಳಸಿಕೊಳ್ಳುತ್ತಿದ್ದೀರಾ. ಇದರಿಂದ ನೀವು ಅವುಗಳ ಮೇಲೆ ಪೂರ್ತಿಯಾಗಿ ನಂಬಿಕೆ ಇಡುತ್ತೀರಾ ಮತ್ತು ಅದರ ಮೇಲಿನ ಕ್ರಮವನ್ನು ತೆಗೆದುಕೊಳ್ಳುತ್ತೀರಾ.

ಇದನ್ನು ಓದಿ: ನೀವು ಯೋಚಿಸುವುದಕ್ಕಿಂತ ಹೆಚ್ಚು ಆಕರ್ಷಕವಿರುವ 13 ರಹಸ್ಯ ಚಿಹ್ನೆಗಳು

3. Belief and habits.

belief and habits unfuck yourself in kannada
belief and habits

ಎಲ್ಲರ ನಂಬಿಕೆ ಅವರ ಹವ್ಯಾಸಗಳ ಮೇಲೆ ಸಂಪರ್ಕಿಸಿರುತ್ತದೆ(contact). ನಮ್ಮ ನಂಬಿಕೆಗಳು ನಮ್ಮ ಬದುಕನ್ನು ನಡೆಸಲು ಇರುವ ಮಾರ್ಗದರ್ಶಿ ತತ್ವಗಳಾಗಿವೆ(guiding principles). ಇವು ನಮ್ಮ ಬದುಕಿಗೆ ಒಂದು ದಿಕ್ಕನ್ನು ನೀಡುತ್ತದೆ ಮತ್ತು ಈ ನಂಬಿಕೆಗಳ ಮೇಲೆ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ ಒಬ್ಬ ವಿಜ್ಞಾನಿ ದೇವರನ್ನು ಚೂರು ನಂಬುವುದಿಲ್ಲವೆಂದರೆ, ಆತ ತನ್ನ ಜೀವನದಲ್ಲಿ ಯಾವುದೇ ರೀತಿಯ ಕ್ರಮ ತೆಗೆದುಕೊಂಡರು, ಆತ ವಿಜ್ಞಾನಿಯ ದೃಷ್ಟಿಕೋನದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾನೆ. ಆತನಿಗೆ ಎಲ್ಲವೂ ವಿಜ್ಞಾನದಿಂದ ಆಗುತ್ತಿದೆ ಮತ್ತು ದೇವರ ರೀತಿ ಏನು ಇಲ್ಲ ಎಂದು ಅನಿಸುತ್ತದೆ. ಇದರ ನಂತರ ಅವನು ತೆಗೆದುಕೊಳ್ಳುವ ಕ್ರಮಗಳು ಕೂಡ ಅವನ ನಂಬಿಕೆಯನ್ನು ಗಟ್ಟಿ ಮಾಡುವ ರೀತಿಯೇ ಇರುತ್ತದೆ.

ಅದೇ ಒಬ್ಬ ಧಾರ್ಮಿಕ ವ್ಯಕ್ತಿಯಾಗಿದ್ದರೆ, ಆತ ಎಲ್ಲ ದೇವರ ಕೃಪೆ ಎಂಬ ನಂಬಿಕೆಯಲ್ಲಿ ವಸ್ತುಗಳನ್ನು ನೋಡುತ್ತಾನೆ ಮತ್ತು ಅದರ ರೀತಿಯೇ ಕ್ರಮಗಳನ್ನು ತೆಗೆದುಕೊಳ್ಳುತ್ತಾನೆ. ಇದರ ಮೇಲೆ ಪುಸ್ತಕದಲ್ಲಿ ಒಂದು ಸುಂದರವಾದ ಉದಾಹರಣೆಯನ್ನು ನೀಡಿದ್ದಾರೆ.

ನಿಮ್ಮ ತಲೆಯಲ್ಲಿ ಬರುವ ಯೋಚನೆಗಳು ನದಿಯ ನೀರಾಗಿದ್ದರೆ, ನಿಮ್ಮ ನಂಬಿಕೆ ನದಿಯಲ್ಲಿ ಇರುವ ಬಂಡೆಯ ರೀತಿಯಾಗಿದೆ. ಅವು ಸುಲಭವಾಗಿ ಚಲಿಸುವುದಿಲ್ಲ. ಆದರೆ ನದಿಯ ನೀರಿನಿಂದ ಅವುಗಳು ತಮ್ಮ ದಿಕ್ಕನ್ನು ಬದಲಾಯಿಸಿಕೊಳ್ಳುತ್ತವೆ. ನಿರಂತರವಾಗಿ ನೀರು ಹರಿಯುತ್ತಿರುವ ಕಾರಣ ಅವುಗಳು ತಮ್ಮ ಆಕಾರವನ್ನು ಬದಲಿಸಿಕೊಳ್ಳುತ್ತವೆ. ಇದೇ ರೀತಿಯೇ ನಿಮ್ಮಲ್ಲಿ ಕೆಲವು ನಕಾರಾತ್ಮಕ ಯೋಚನೆಗಳು ಬಂದರೆ ಅದರಿಂದ ಏನೂ ಬದಲಾಗುವುದಿಲ್ಲ. ಆದರೆ ನೀವು ಯಾವಾಗಲೂ ನಕಾರಾತ್ಮಕ ಯೋಚಿಸುತ್ತಿದ್ದರೆ ಅದು ನಿಮ್ಮ ನಂಬಿಕೆಯನ್ನು ಗಟ್ಟಿ ಮಾಡುತ್ತದೆ ಮತ್ತು ನಿಮ್ಮ ಕ್ರಮವನ್ನು ಆ ನಂಬಿಕೆಯ ರೀತಿಯೇ ಮಾಡುತ್ತದೆ.

ಉದಾಹರಣೆಗೆ ನೀವು ನನಗೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಯೋಚಿಸಿದರೆ, ನಿಮಗೆ ಫಲಿತಾಂಶ ಕೂಡ ಸಿಗುವುದಿಲ್ಲ. ಇದರಿಂದ ಕೊನೆಯಲ್ಲಿ ನಿಮ್ಮ ಕ್ರಮ ಕೂಡ ಅಷ್ಟು ಗಟ್ಟಿ ಇರುವುದಿಲ್ಲ. ಇದರಿಂದ ನಿಮ್ಮ ಮೆದುಳೇ "ಇಷ್ಟು ಶಕ್ತಿಯನ್ನು ಹಾಳು ಮಾಡಿ ಏನೂ ಪ್ರಯೋಜನವಿಲ್ಲ, ಏಕೆಂದರೆ ಇದರಿಂದ ಯಾವುದೇ ರೀತಿಯ ಫಲಿತಾಂಶ ಸಿಗುವುದಿಲ್ಲ" ಎಂದು ಯೋಚಿಸುತ್ತದೆ. ಅದೇ ಇದರ ವಿರುದ್ಧವಾಗಿ, ಡೋಯೊ ರಾಬಿಸ್ ಈ ರೀತಿ ಹೇಳಿದ್ದರೆ, "If we have healthy, positive beliefs, we deeply believe that we are capable and deserving of success. we are able to tap into that potential that drives greater action, which in turn drives greater results".

ನೀವು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತರಲು ಪ್ರಾರಂಭಿಸಿದಾಗ ಅದು ನಿಮ್ಮ ಕ್ರಮಗಳನ್ನು ಕಾಣುತ್ತದೆ ಮತ್ತು ಅವುಗಳು ಫಲಿತಾಂಶಗಳನ್ನು ನೀಡುತ್ತವೆ. ಉದಾಹರಣೆಗೆ ಒಬ್ಬ ವ್ಯಕ್ತಿ ದಿನನಿತ್ಯ ವ್ಯಾಯಾಮ ಮಾಡಲು ಹೋಗುತ್ತಿದ್ದರೆ ಅವನು ಏಕೆ ಹೋಗುತ್ತಾನೆ. ಇದು ಏಕೆಂದರೆ ಅವನ ನಂಬಿಕೆ ತುಂಬಾ ಗಟ್ಟಿ ಇದೆ. ಅದೆಂದರೆ ಅವನು ವ್ಯಾಯಾಮ ಮಾಡಿದಷ್ಟು ಅವನ ಆರೋಗ್ಯ ಚೆನ್ನಾಗಿರುತ್ತದೆ, ಅವನ ತೂಕ ಕಡಿಮೆಗೊಳ್ಳುತ್ತದೆ. ಅದೇ ದಿನನಿತ್ಯ ವ್ಯಾಯಾಮವನ್ನು ಮಾಡಲು ಆಗದಿರುವ ವ್ಯಕ್ತಿಯ ನಂಬಿಕೆ ಗಟ್ಟಿ ಇರುವುದಿಲ್ಲ. ಆತನಿಗೆ ನಾನು ದಿನನಿತ್ಯ ಜಿಮ್‌ಗೆ ಹೋಗಲು ಸಾಧ್ಯವಿಲ್ಲವೆನಿಸುತ್ತದೆ. ಅದರ ಕೊನೆಯಲ್ಲಿ ಇವೆಲ್ಲ ಮೆದುಳಿನ ಮೇಲೆ ನಿಂತಿದೆ. ಆಗಿದ್ದರೆ ಇವುಗಳ ಮೇಲೆ ಕ್ರಮ ತೆಗೆದುಕೊಳ್ಳುವುದು ಹೇಗೆ?

ಇದನ್ನು ಓದಿ: "Good Vibes Good Life" ಪುಸ್ತಕದ ವಿವರಣೆ

4. 20 second rule.

20 second rule unfuck yourself in kannada
20 second rule

ಈ 20 second rule ನಿಮ್ಮ ನಂಬಿಕೆಯನ್ನು ಗಟ್ಟಿ ಮಾಡುತ್ತದೆ ಮತ್ತು ಸುಲಭವಾಗಿ ಕ್ರಮಗಳನ್ನು ತೆಗೆದುಕೊಳ್ಳಲು ಸಹಕರಿಸುತ್ತದೆ. ಈ 20 second rule ಅನ್ನು "the happiness advantage" ಪುಸ್ತಕದಲ್ಲಿ ತಿಳಿಸಲಾಗಿದೆ. ಅದರಲ್ಲಿ ಲೇಖಕರಿಗೆ ಗಿಟಾರ್ ಕಲಿಯಬೇಕಿತ್ತು, ಅವರು ಯಾವುದಾದರೂ ಅಭ್ಯಾಸವನ್ನು ಕಲಿಯಲು 21 ದಿನ ತೆಗೆದುಕೊಳ್ಳುತ್ತದೆ ಎಂದು ತಿಳಿದಿದ್ದರು. ಅವರು ಗಿಟಾರ್ ಅಭ್ಯಾಸಕ್ಕಾಗಿ ಒಂದು ಪೇಪರ್ ತೆಗೆದುಕೊಂಡು 21 ದಿನಗಳ ಚೆಕ್ಲಿಸ್ಟ್ ಅನ್ನು ಮಾಡಿ, ಅದನ್ನು ಗೋಡೆಗೆ ಅಂಟಿಸಿದರು. ಅವರು 21 ದಿನ ಗಿಟಾರ್ ಬಾರಿಸುವ ಬಗ್ಗೆ ನಿರ್ಧಾರ ಮಾಡಿದರು ಮತ್ತು ಅದನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿದ್ದರು.

ಒಂದು, ಎರಡು, ಮೂರನೇ ದಿನ ಅವರು ಗಿಟಾರ್ ಬಾರಿಸುತ್ತಿದ್ದರು. ಆ ಚೆಕ್ಲಿಸ್ಟ್ನಲ್ಲಿ ಗುರುತನ್ನು ಹಾಕುತ್ತಿದ್ದರು. ಆರನೇ ದಿನಕ್ಕೆ ಅವರ ಪ್ರೇರಣೆ ಹೋಯಿತು. ಅವರು ಗಿಟಾರ್ ಅಭ್ಯಾಸದ ಸಮಯದಲ್ಲಿ ಟಿವಿ ನೋಡಲು ಪ್ರಾರಂಭಿಸಿದರು. ಇದರಲ್ಲಿ ಎಲ್ಲ ಸಮಯ ಹೋಗಿ, ಅವರು ಮಲಗಲು ಹೋದರು. ಸ್ವಲ್ಪ ದಿನದ ನಂತರ ಅವರು ಗೋಡೆಗೆ ಅಂಟಿಸಿದ ಆ ಪೇಪರ್ ನೋಡಿದಾಗ ಅವರಿಗೆ ತುಂಬಾ ಸಿಟ್ಟು ಬಂತು. ಅವರು "ನಾನು ಏಕೆ ಈ ರೀತಿ ಮಾಡುತ್ತಿದ್ದೇನೆ" ಎಂದು ಯೋಚಿಸಲು ಪ್ರಾರಂಭಿಸಿದರು. ಅವರಿಗೆ ಅಧಿಕ ತಪ್ಪಿತಸ್ಥ ಭಾವನೆ ಬಂದಿತು. ಅವರು ವಿಳಂಬ ಭಾವನೆಯನ್ನು ತೋರುತ್ತಿರುವ ಬಗ್ಗೆ ತಿಳಿದಿತ್ತು. ಆದರೆ ಇದರಿಂದ ಹೊರಬರುವುದು ಹೇಗೆ? ಅವರು ಸ್ವಲ್ಪ ಹೊತ್ತು ಯೋಚಿಸಿದ ನಂತರ ಅವರಿಗೆ ಈ ವಿಷಯದ ಮೇಲೆ ಸ್ಪಷ್ಟನೇ ಸಿಕ್ಕಿತು.

ಅವರು ಯಾವಾಗಲೂ ಗಿಟಾರ್ ಪ್ರಾಕ್ಟೀಸ್ ಅಭ್ಯಾಸ(practice) ಮಾಡಲು, ಅವರ ಕೆಲಸದಿಂದ ಮನೆಗೆ ಬಂದು ಕಪಾಟನ್ನು ತೆಗೆದು, ಅದರಲ್ಲಿ ಪೂರ್ತಿಯಾಗಿ ಕವರ್ ಮಾಡಿರುವ ಗಿಟಾರನ್ನು ತೆಗೆದುಕೊಂಡು ಅಭ್ಯಾಸ ಮಾಡಿ, ನಂತರ ಮತ್ತೆ ಗಿಟಾರನ್ನು ಚೆನ್ನಾಗಿ ಕವರ್ ಮಾಡಿ ಕಪಾಟಿನಲ್ಲಿ ಇಡುತ್ತಿದ್ದರು. ಅವರು ಈ ವಿಷಯ ಎಷ್ಟು ವಿಪರೀತ ಎಂದು ಯೋಚಿಸಿದರು. ಅವರು ಗಿಟಾರನ್ನು ಕಪಾಟಿನ ಒಳಗೆ ಇಡುವ ಬದಲು ಗಿಟಾರ್ ಸ್ಟ್ಯಾಂಡ್ ತಂದು ಅದರ ಮೇಲೆ ಇಡುವ ಬಗ್ಗೆ ಯೋಚಿಸಿದರು. ಇದರಿಂದ ಅವರು ಆಫೀಸ್ನಿಂದ ಬಂದ ತಕ್ಷಣ ಅವರಿಗೆ ಮೊದಲಿಗೆ ಗಿಟಾರ್ ಕಾಣುತ್ತಿತ್ತು. ಇನ್ನು ಎರಡನೆಯದಾಗಿ ಅವರು ರಿಮೋಟ್ನಿಂದಾಗಿ ಟಿವಿ ನೋಡುವ ಬಗ್ಗೆ ತಿಳಿದರು. ಹೀಗಾಗಿ ಅವರು ರಿಮೋಟ್ನ ಬ್ಯಾಟರಿಯನ್ನು ತೆಗೆದು ಎಲ್ಲೋ ದೂರ ಇಟ್ಟರು. ಅದು ಎಷ್ಟು ದೂರವೆಂದರೆ ಅವರಿಗೆ ಅದನ್ನು ಎದ್ದು ತಂದು, ಅದನ್ನು ರಿಮೋಟ್ಗೆ ಹಾಕಲು ಕನಿಷ್ಠ 20 ಸೆಕೆಂಡ್ಗಳಾದರೂ ಬೇಕು. ಅದೇ ಗಿಟಾರನ್ನು ತುಂಬಾ ಸುಲಭಗೊಳಿಸಿದರು. ಅದೆಂದರೆ 20 ಸೆಕೆಂಡ್ಗಳೊಳಗೆ ಅವರಿಗೆ ಗಿಟಾರನ್ನು ತೆಗೆದುಕೊಳ್ಳುವಂತೆ ಮಾಡಿದರು. ಅವರಿಗೆ ಮನೆಗೆ ಬಂದ ತಕ್ಷಣ ಗಿಟಾರ್ ಕಂಡು ಅದನ್ನು ತಕ್ಷಣವೇ ಅಭ್ಯಾಸ ಮಾಡುವಂತೆ ಮಾಡಿದರು.

ಇದು ರಾಕೆಟ್ ವಿಜ್ಞಾನದ ವಿಷಯವಾಗಿಲ್ಲ, ಆದರೆ ಅವರು ಇದನ್ನು ಅನ್ವಯಿಸಿದಾಗ(apply), ಅವರಿಗೆ ಒಳ್ಳೆಯ ಫಲಿತಾಂಶಗಳು ಕಂಡವು ಮತ್ತು ಅವರು ಗಿಟಾರ್ ನುಡಿಸುವುದನ್ನು ಕಲಿತರು. ಈ ಟ್ರಿಕ್ ತುಂಬಾ ಚೆನ್ನಾಗಿ ಕೆಲಸ ಮಾಡಿತು. ನಮ್ಮ ಮೆದುಳು ಅದರ ಶಕ್ತಿಯನ್ನು ಉಳಿಸುವ ಬಗ್ಗೆ ಯಾವಾಗಲೂ ಯೋಚಿಸುತ್ತಿರುತ್ತದೆ. ಮೆದುಳು ಅಧಿಕ ಶಕ್ತಿ ಖರ್ಚಾಗುವ ಕೆಲಸವನ್ನು ತಪ್ಪಿಸಲು(avoid) ಹೇಳುತ್ತದೆ. ಯಾವುದರಲ್ಲಿ ಕಡಿಮೆ ಶಕ್ತಿ ಖರ್ಚಾಗುತ್ತದೆಯೇ, ಆ ಕೆಲಸ ಸುಲಭವಿದ್ದು ಅಧಿಕ ಡೊಪಾಮೈನ್ ಕೂಡ ಬಿಡುಗಡೆ ಆಗುತ್ತದೆ. ಮೆದುಳು ಈ ರೀತಿಯ ಕೆಲಸವನ್ನು ಮಾಡಲು ಹೆಚ್ಚು ಪ್ರೋತ್ಸಾಹಿಸುತ್ತದೆ. ಅದೇ ನೀವು ಟಿವಿ ನೋಡುವುದು ತಪ್ಪು ಎಂದು ತಿಳಿದು ಅದರ ಪ್ರತಿರೋಧವನ್ನು(resistance) 20 ಸೆಕೆಂಡ್ಗಳಿಗೆ ಹೆಚ್ಚು ಸಮಯ ಮಾಡಿದರೆ, ನೀವು ಆ ಕೆಲಸವನ್ನು ಮಾಡುವ ಬಗ್ಗೆ ಯೋಚಿಸುವುದು ಕಡಿಮೆಯಾಗುತ್ತದೆ.

ಇದನ್ನು ಓದಿ: ಎತ್ತರವನ್ನು ಹೆಚ್ಚಿಸುವ 8 ಅದ್ಭುತ ಆಹಾರಗಳು

5. Keeping the balance.

keeping the balance unfuck yourself in kannada
keeping the balance

ಅಧಿಕ ಜನರಿಗೆ ಪ್ರೇರೇಪಿಸದ ಭಾವನೆ(unmotivated feel), ಭಯ, ಖಿನ್ನತೆಯ ರೀತಿಯ ಸಮಸ್ಯೆಯಾದಾಗ, ಅವರಿಗೆ ಆ ಸಮಸ್ಯೆಯು ಅವರ ಮೆದುಳಿನಲ್ಲಿ ಇದೆ ಎಂದು ಅನಿಸುತ್ತದೆ. ಆದರೆ ಸಮಸ್ಯೆಯು ನಿಮ್ಮ ದೇಹದಲ್ಲಿ ಇರುತ್ತದೆ. uclas brain research instituteನಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ, ಜಂಕ್ ಫುಡ್ ಅಥವಾ ಅಧಿಕ ಸಕ್ಕರೆ ಅಂಶವಿರುವ ಆಹಾರಗಳನ್ನು ತಿನ್ನುವುದರಿಂದ ಅವು ದೈಹಿಕವಾಗಿ ಅಷ್ಟೇ ಅಲ್ಲದೆ ಮೆದುಳನ್ನು ರಾಸಾಯನಿಕವಾಗಿಯೂ ಬದಲಾಯಿಸುತ್ತವೆ ಎಂದು ತಿಳಿಸಿದೆ.

ನಮ್ಮ ಮನಸ್ಸು ಇಡೀ ದೇಹವನ್ನು ನಿಯಂತ್ರಣ ಮಾಡುತ್ತದೆ ಎಂದು ಅನಿಸುತ್ತದೆ. ಆದರೆ ನಮ್ಮ ದೇಹವು ನಮ್ಮ ಮನಸ್ಸನ್ನು ನಿಯಂತ್ರಣ ಮಾಡುತ್ತದೆ ಎಂದು ಸೈಕಾಲಜಿಸ್ಟ್ಗಳು ಹೇಳುತ್ತಾರೆ. ಜನರು ಅನಾರೋಗ್ಯಕರ ಆಹಾರಗಳನ್ನು ಫಾಲೋ ಮಾಡಿದಾಗ, ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿದ್ದಾಗ, ವ್ಯಾಯಾಮ ಮಾಡದೆ ಅವರ ಮನಸ್ಸಿಗೆ ಬೈದರೆ, ಅವರ ಮನಸ್ಸು ಇನ್ನಷ್ಟು ಕುಗ್ಗುತ್ತದೆ.

ಇದು ಒಂದು ರೀತಿ ಯಾರದೋ ತಪ್ಪಿಗೆ ಯಾರಿಗೋ ಬೈಯುವ ರೀತಿ ಆಗಿದೆ. ನಿಮ್ಮ ದೇಹಕ್ಕೆ ಕಾಯಿಲೆ ಬಂದಾಗ ನೀವು ಪ್ರೇರಣೆಯ ಭಾವನೆಯಲ್ಲಿ ಇರುವುದಿಲ್ಲ. ಸ್ಪಾರ್ಕ್ ಎಂಬ ಪುಸ್ತಕದಲ್ಲಿ ವ್ಯಾಯಾಮ ಮಾಡಿ ದೇಹದ ಕಾಳಜಿ ವಹಿಸುವುದು ತುಂಬಾ ಮುಖ್ಯ ಎಂದು ತಿಳಿಸಲಾಗಿದೆ. ಸರಿಯಾಗಿ ನಿದ್ದೆ ಮಾಡುವಂತಹ ವಿಷಯಗಳೆಲ್ಲ ನಿಮ್ಮನ್ನು ಪ್ರೇರಣೆ ಮಾಡುತ್ತವೆ. ಆದರೆ ನಾವು ಇಂದು ಇವುಗಳ ಉಲ್ಟಾ ಮಾಡುತ್ತಿದ್ದೇವೆ.

ನಾವು ಸರಿಯಾಗಿ ಊಟ ಮಾಡುವುದಿಲ್ಲ, ನೀರು ಕುಡಿಯುವುದಿಲ್ಲ, ಸೂರ್ಯನ ಕಿರಣವನ್ನು ತೆಗೆದುಕೊಳ್ಳುವುದಿಲ್ಲ, ರಾತ್ರಿಯಲ್ಲಿ ಸರಿಯಾಗಿ ನಿದ್ದೆ ಮಾಡುವುದಿಲ್ಲ. ಕೇವಲ ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ನೋಡುತ್ತ ಕೂರುತ್ತವೆ. ನಾವು ನಮ್ಮ ದೇಹದ ಕಾಳಜಿ ವಹಿಸದೆ, ಕೇವಲ ನಮ್ಮ ಮೆದುಳಿಗೆ ಬೈಯುತ್ತೇವೆ. ಆದರೆ ಇದು ತಪ್ಪು ವಿಷಯವಾಗಿದ್ದು, ನೀವು ನಿಮ್ಮ ದೇಹದ ಆದ ಕಾಳಜಿ ವಹಿಸಲೇಬೇಕು. ಅದಕ್ಕೆ ಬೇಕಾಗಿರುವ ಒಳ್ಳೆಯ ಆಹಾರವನ್ನು ನೀಡಿ, ಸರಿಯಾದ ಸೂರ್ಯನ ಕಿರಣವನ್ನು ನೀಡಿ, ವ್ಯಾಯಾಮ ಮಾಡಿ. ನೀವು ಎಲ್ಲವನ್ನು ಮಾಡಿದ ನಂತರವೇ ನಿಮ್ಮ ಎಲ್ಲ ಸಮಸ್ಯೆಗಳನ್ನು ದೂರ ಮಾಡಬಹುದು.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana
Info Mind Ad

Poor Charlie's Almanack Book Summary

ಹೂಡಿಕೆಯನ್ನು ತೆಗೆದುಕೊಳ್ಳುವ ಮೊದಲು ಯಾವ ರೀತಿಯ ಆಲೋಚನೆ ಪ್ರಕ್ರಿಯೆ ಇರಬೇಕು ಎಂಬುದನ್ನು ಈಗಲೇ ಓದಿ.

More by this author

Similar category

Explore all our Posts by categories.

Info Mind Ad

Poor Charlie's Almanack Book Summary

ಹೂಡಿಕೆಯನ್ನು ತೆಗೆದುಕೊಳ್ಳುವ ಮೊದಲು ಯಾವ ರೀತಿಯ ಆಲೋಚನೆ ಪ್ರಕ್ರಿಯೆ ಇರಬೇಕು ಎಂಬುದನ್ನು ಈಗಲೇ ಓದಿ.

commenters

sushma • December 4th,2022

ಅತ್ತ್ಯುತ್ತಮ ಪುಸ್ತಕ ಹಾಗೂ ವಿವರಣೆ. 🙏