Website designed by @coders.knowledge.

Website designed by @coders.knowledge.

10 Wealthy Truths that nobody tells you | 20s ನಲ್ಲೇ ಶ್ರೀಮಂತರಾಗುವುದು ಹೇಗೆ?

 0

 Add

Please login to add to playlist

Watch Video

ನಿಮ್ಮ ಸಂಬಳ ನಿಮ್ಮನ್ನು ಶ್ರೀಮಂತನಾಗಿ ಮಾಡುವುದಿಲ್ಲ. ಹಾಗಿದ್ದರೆ ನೀವು 20s ನಲ್ಲಿ ಶ್ರೀಮಂತನಾಗುವುದು ಹೇಗೆ? ನಾವು ಶ್ರೀಮಂತರಾಗಲು(wealthy) ತಿಳಿಸುವ ಈ ಸತ್ಯಗಳಿಂದ(truth) ತಿಳಿದುಕೊಳ್ಳಿ.

1. Who do you seek advice from?

ನೀವು ಒಬ್ಬರನ್ನು ನಿಮ್ಮ ಜೀವನದಲ್ಲಿ ಇರಲು ಬಯಸಿಲ್ಲದಿದ್ದರೆ ಅವರಿಂದ ಸಲಹೆಯನ್ನು(advice) ಕೇಳಬೇಡಿ. ನಾವು ಅನೇಕ ಬಾರಿ ಅನೇಕ ಜನರಿಗೆ, "ಏನು ಮಾಡಬೇಕು", "ಏನು ಮಾಡಿದರೆ ಸರಿ" ಎಂದು ಕೇಳುತ್ತಿರುತ್ತೇವೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ಅವರ ಅಭಿಪ್ರಾಯ ನೀಡುತ್ತಾರೆ. ಆದರೆ ಆ ಅಭಿಪ್ರಾಯಗಳು ನಮ್ಮಗೆ ಗೊಂದಲ(confuse) ನೀಡುತ್ತವೆ. ಹೀಗಾಗಿ ನಿಮ್ಮ 20s ನಲ್ಲಿ ನೀವು ಯಾರ ಮಾತನ್ನು ಕೇಳುತ್ತೀರಾ ಎಂಬುದನ್ನು ಎಚ್ಚರಿಕೆಯಿಂದ ಆಗಿ ಆಯ್ಕೆ ಮಾಡಿ. ಇದರ ಅರ್ಥ ಅವರು ಹೇಳುತ್ತಿರುವುದು ಸರಿಯೇ ಎಂದಲ್ಲ. ನೀವು ಅವರ ಮಾತನ್ನು ಕೇಳಿದರೆ ನೀವು ಅವರ ಬದುಕನ್ನು ಜೀವಿಸಲು ಬಯಸಿದಿರೆಂದರ್ಥವಾಗಿದೆ. ಇದು ಅವರ ಸಲಹೆಯನ್ನು ಅರ್ಥ ಮಾಡಿಕೊಳ್ಳಲು ಆತ್ಮವಿಶ್ವಾಸವನ್ನು(confidence) ನೀಡುತ್ತದೆ.

ಇದನ್ನು ಓದಿ: ಬದುಕಿನಲ್ಲಿ ನಿಶ್ಚಲತೆಯನ್ನು ಸಾಧಿಸುವುದು ಹೇಗೆ?

2. Protect yourself

how can I protect my wealth in kannada
insurance

ನಿಮ್ಮ 20s ನಲ್ಲಿ ಚಿಕ್ಕ ತುರ್ತು ಆರ್ಥಿಕ ಪರಿಸ್ಥಿತಿಯು(financial emergency) ಕೂಡ ಬದುಕನ್ನು ಹಾಳು ಮಾಡಬಹುದು. ಹೀಗಾಗಿ ನಿಮ್ಮನ್ನು ರಕ್ಷಿಸಿಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ಇದು ಏಕೆಂದರೆ ಅನೇಕರು 20s ನಲ್ಲಿ, "ಯಾರು ವಿಮೆಯನ್ನು(insurance) ತೆಗೆದುಕೊಳ್ಳುತ್ತಾರೆ. ನಾನು ಆರೋಗ್ಯಕರ, ಯುವ ಇದ್ದೇನೆ, ಆರೋಗ್ಯ ವಿಮೆಯನ್ನು ನಂತರ ತೆಗೆದುಕೊಳ್ಳುವೇ" ಎನ್ನುವರು. ಆದರೆ ವಿಮೆ ಇದಕ್ಕಾಗಿಯೇ ಇರುವುದು.

ನೀವು ನಿಮಗೆ ಮತ್ತು ನಿಮ್ಮ ತಂದೆ ತಾಯಿಗೆ ಆರೋಗ್ಯ ವಿಮೆಯನ್ನು ಬೇಗನೆ ತೆಗೆದುಕೊಂಡರೆ, ಅದು ಕಡಿಮೆ ದರಕ್ಕೆ ಸಿಗುತ್ತದೆ ಮತ್ತು ನೀವು ಅದರ ಲಾಭ(avail) ತೆಗೆದುಕೊಳ್ಳುವ ಸಂಭವನೀಯತೆ ಕಡಿಮೆ ಇರುವುದರಿಂದ "no claim bonus" ಸಿಗುತ್ತದೆ. ಆದರೆ ಇದರಿಂದ ನೀವು ಭವಿಷ್ಯದ ಯಾವುದೇ ರೀತಿಯ ಅಪಾಯದಿಂದ ಉಳಿಯುವಿರಿ. ನಿಮ್ಮ 20s ನಲ್ಲೇ ಜೀವ ವಿಮೆಯನ್ನು(life insurance) ತೆಗೆದುಕೊಂಡರೆ, ನಿಮ್ಮ ಬದುಕನ್ನು 30 ರಿಂದ 40 ವರ್ಷಗಳಿಗೆ ಲಾಕ್ ಮಾಡಿಕೊಳ್ಳುತ್ತೀರಾ.

ಇದನ್ನು ಓದಿ: "The Education of a Value Investor" ಪುಸ್ತಕದ ಸಾರಾಂಶ

3. Get as much experience as possible

experience to get wealthy meaning in kannada
experience

20s ನಲ್ಲಿ ನಮಗೆ ಬೇಗನೇ ನೆಲೆಗೊಳ್ಳಲು ತಿಳಿಸಲಾಗುತ್ತದೆ. ಬೇಗನೆ ಓದನ್ನು ಮುಗಿಸು, ಬೇಗನೇ ಮದುವೆಯಾಗು, ಬೇಗನೆ ಕೆಲಸಕ್ಕೆ ಸೇರು, ಬೇಗನೆ ಮಕ್ಕಳನ್ನು ಮಾಡು, ಇದರಿಂದ ನಾವು ಪೂರ್ತಿಯಾಗಿ ನೆಲೆಗೊಳ್ಳುವ ಬಗ್ಗೆ ಯೋಚಿಸುತ್ತಿರುತ್ತೇವೆ. ಆದರೆ ನಿಮ್ಮ 20s ನಲ್ಲಿ ನೀವು ಸಾಕಷ್ಟು ಅನುಭವಗಳನ್ನು(experience) ಪಡೆದಷ್ಟು 3 ವಿಷಯದಲ್ಲಿ ಸ್ಪಷ್ಟತೆ(clarity) ಸಿಗುತ್ತದೆ.

  • • ನೀವು ಎಲ್ಲ ಅನುಭವಗಳ ಬಗ್ಗೆ ತಿಳಿದುಕೊಂಡು ಯಾವುದರ ಮೇಲೆ ಗಮನಹರಿಸಲು ಬಯಸುವಿರಾ ಎಂದು ತಿಳಿಯಬಹುದು.
  • • ಅದನ್ನು ಮಾಡುವುದರಿಂದ ನಿಮ್ಮ ಬಗ್ಗೆ ನಿಮಗೆ ತಿಳಿಯುತ್ತದೆ. ಅಂದರೆ ನೀವು ಯಾವುದರಲ್ಲಿ ಚೆನ್ನಾಗಿದ್ದೀರಾ, ಯಾವುದು ನಿಮಗೆ ಖುಷಿಯನ್ನು ನೀಡುತ್ತದೆ ಮತ್ತು ಯಾವುದರಿಂದ ನೀವು ಸಹಜವಾಗಿ(naturally) ಹಣವನ್ನು ಗಳಿಸಬಹುದೆಂಬುದು ತಿಳಿಯುತ್ತದೆ.
  • • ನಿಮ್ಮ ಮನಸ್ಸು ತೆರೆಯುತ್ತದೆ. ಅನೇಕ ವಿಷಯ ಮತ್ತು ಜನರಿಂದ ಒಂದು ಹೊಸ ದೃಷ್ಟಿಕೋನ ರಚಿಸುತ್ತದೆ. ಅದು ಜಗತ್ತನ್ನು ಮುಂಚಿಗಿಂತ ಅನ್ವೇಷಿಸಲು(explore) ಸಹಕರಿಸುತ್ತದೆ.

ಹೀಗಾಗಿ ಎಷ್ಟು ಅನುಭವಗಳನ್ನು ಸಂಗ್ರಹಿಸಲು ಸಾಧ್ಯವೊ ಮಾಡಿ. ಈ ಅನುಭವಗಳು ಕೇವಲ ಕೆಲಸಕ್ಕೆ(job) ಸೀಮಿತವಾಗಿಲ್ಲ. ನೀವು ಜನರ ಜೊತೆ ನೆಟ್ವರ್ಕ್(network) ಮಾಡಿ ಮಾತನಾಡಬಹುದು. ಅದು ಕೂಡ ಅನುಭವವಾಗಿದೆ. ಇದರಿಂದ ನಿಮ್ಮ ಮನಸ್ಥಿತಿ(mindset) ತೆರೆಯುತ್ತದೆ ಮತ್ತು ಅವಕಾಶಗಳನ್ನು ನೋಡಬಹುದು. ಇದು ನಿಮಗೆ ಹಣ ಗಳಿಸುವ ಮಾರ್ಗವನ್ನು ತಿಳಿಸುತ್ತದೆ.

4. Create multiple sources of income

income streams to get financially wealthy in kannada
mutiple income

ಇಂದಿನ ಜಗತ್ತಿನಲ್ಲಿ ನೀವು ಕೇವಲ ಉದ್ಯೋಗದ ಆದಾಯದ ಮೇಲೆ ಜೀವಿಸಲು ಸಾಧ್ಯವಿಲ್ಲ. ಆ ಪೀಳಿಗೆ(generation) ಈಗಾಗಲೇ ಹೋಗಿದೆ. ಇಂದು ಹಣದುಬ್ಬರ(inflation) ಮತ್ತು ದಿನನಿತ್ಯದ ಅಗತ್ಯತೆಗಳು ಎಷ್ಟು ಬೆಳೆಯುತ್ತಿದೆ ಎಂದರೆ ಅದಕ್ಕೆ ನಿಮ್ಮ ಉದ್ಯೋಗದ ಆದಾಯ ಸಾಕಾಗುವುದಿಲ್ಲ. ಹೀಗಾಗಿ ನೀವು ಬಹು ಆದಾಯದ ಮೂಲಗಳನ್ನು ಮಾಡಲೇಬೇಕು. ಅದು ಫ್ರೀಲ್ಯಾನ್ಸಿಂಗ್(freelancing), ಇಂಟರ್ನ್ಶಿಪ್(internship) ಆಗಿರಬಹುದು. ಇವೆಲ್ಲವೂ ನಿಮ್ಮ 20s ನಲ್ಲಿ ಸಾಧ್ಯವಾಗಿದೆ. ಇದರಿಂದ ನಿಮಗೆ ಅನುಭವ ಮತ್ತು ಪ್ರತಿದಿನ ಯಾವುದರಲ್ಲಿ ಚೆನ್ನಾಗಿದ್ದೇವೆ, ಯಾವುದರಲ್ಲಿ ಚೆನ್ನಾಗಿಲ್ಲ ಎಂಬುದರ ಮೇಲೆ ಸ್ಪಷ್ಟತೆ ಸಿಗುತ್ತದೆ.

ಇದನ್ನು ಓದಿ: 10 ಹೆಚ್ಚುವರಿ ಆದಾಯದ ಐಡಿಯಾಗಳು

5. Avoid lifestyle inflation

ಸರ್ಕಾರ ಪ್ರತಿ ಕ್ವಾಟರ್ ಹಣದುಬ್ಬರದ ದರ(inflation rate) ಇಷ್ಟಿದೆ ಎಂದು ಹೇಳುತ್ತದೆ. ಆದರೆ ನಿಮ್ಮ ಜೀವನದ ಹಣದುಬ್ಬರ ಎಷ್ಟಿದೆ. ನಿಮ್ಮ ಆದಾಯ ಹೆಚ್ಚಿದಂತೆ ಹಣದುಬ್ಬರ ಕೂಡ ಹೆಚ್ಚುತಿದೆಯೇ. ನಿಮ್ಮಗೆ ಏರಿಕೆಯಾಗದೆ ನೀವು ಗಾಡಿ ಖರೀದಿಸಿದಿರಿ, ದುಬಾರಿ ಫೋನ್ ಖರೀದಿಸುವಿರಿ, ಸಾಲವನ್ನು ತೆಗೆದುಕೊಳ್ಳುವಿರಿ, ಹೊಸ ಮನೆಯನ್ನು ಖರೀದಿಸುವಿರಿ, ಇವೆಲ್ಲವನ್ನು ನಿಮ್ಮ 20s ನಲ್ಲಿ ಮಾಡಿ, ಆದರೆ ಒಂದು ಬಜೆಟ್(budget) ಒಳಗಿರಿ.

ನಿಮ್ಮ 20s ನಲ್ಲಿ ಯಾರೂ ಕೂಡ ನೀವು ಶ್ರೀಮಂತರಾಗಿರುವಿರಿ ಎಂಬುದನ್ನು ಗಮನಿಸುವುದಿಲ್ಲ. ಯಾರೂ ಕೂಡ ನಿಮ್ಮ ದುಬಾರಿ ವಿಷಯಗಳಲ್ಲಿ ಆಸಕ್ತಿ ಇಟ್ಟಿರುವುದಿಲ್ಲ. ನಿಮ್ಮ ಅಹಂಕಾರ(ego), ಸಮಾಜದಲ್ಲಿ ಉತ್ತಮವಾಗಿರಲು ಇದನ್ನು ಮಾಡಬೇಕು ಎನ್ನುತ್ತದೆ. ನಿಮ್ಮ 20s ನಲ್ಲಿ ಜೀವನಶೈಲಿ ಹಣದುಬ್ಬರವನ್ನು ಎಷ್ಟು ಕಡಿಮೆ ಮಾಡಲು ಸಾಧ್ಯವೋ ಮಾಡಿ ಅಂದರೆ, "live below your means".

ಇದನ್ನು ಓದಿ: ನೀವು ಎಂದಿಗೂ ಶ್ರೀಮಂತರಾಗದಿರಲು 7 ಕಾರಣಗಳು

6. Invest aggressively and for long term

what is the most aggressive way to invest in kannada
invest aggressively

ನಾವು, "ಇಂಡೆಕ್ಸ್ ಮ್ಯೂಚಲ್ ಫಂಡ್ನಲ್ಲಿ(index mutual fund) ಹಣವನ್ನು ಹೂಡಿಕೆ ಮಾಡುವುದರಿಂದ ಕನಿಷ್ಠ 12 ರಷ್ಟು ರಿಟರ್ನ್ ದೊರೆಯುತ್ತದೆ, ಅದರಿಂದ 5 ವರ್ಷದಲ್ಲಿ ನಿಮ್ಮ ಹೂಡಿಕೆ ದ್ವಿಗುಣವಾಗುತ್ತದೆ, 20 ವರ್ಷದಲ್ಲಿ 16x ಆಗುತ್ತದೆ. ಇದುವೇ ಕಾಂಪೌಂಡಿಂಗ್ನ ಸೌಂದರ್ಯವಾಗಿದೆ(beauty)" ಎಂದು ಹೇಳುತ್ತಿದ್ದೆವು. ಆದರೆ ಅತಿಯಾಗಿ ಹೂಡಿಕೆ ಮಾಡಿ(aggressively) ಎಂದರೆ ಈ ರೀತಿ ಇದೆ. ಸಾಮಾನ್ಯವಾಗಿ ನಿಮ್ಮ ಸಂಬಳದ 20% ಅನ್ನು ಹೂಡಿಕೆ ಮಾಡಲು ಹೇಳಲಾಗುತ್ತದೆ. ಆದರೆ ನಿಮ್ಮ 20s ನಲ್ಲಿ ನಿಮ್ಮ ಸಂಬಳದ 40 ರಿಂದ 50 ರಷ್ಟು ಹೂಡಿಕೆ ಮಾಡಬೇಕು. ನೀವು ಖರ್ಚನ್ನು ಕಡಿಮೆ ಮಾಡಬೇಕು, ಆಗಂತ ಭಿಕ್ಷುಕನ ನೀತಿ ಬದುಕಿ ಎನ್ನುತ್ತಿಲ್ಲ. ಯಾವುದನ್ನಾದರೂ ಒಂದು ಮಿತಿಯಲ್ಲಿ ಮಾಡಿ. ನೀವು ಅತಿಯಾಗಿ ಹೂಡಿಕೆ ಮಾಡುತ್ತಿದ್ದಾರೆ ಅದು ಒಂದು ಸುರಕ್ಷಾ ಬಲೆಯನ್ನು(safety net) ನೀಡುತ್ತದೆ. ಇದರಿಂದ ನಿಮ್ಮ 30s ನಲ್ಲಿ ನೀವು ನಿಮಗೆ ಬೇಕಾದಂತೆ ಬದುಕಬಹುದು.

ಇದನ್ನು ಓದಿ: ಬದುಕನ್ನು ಬದಲಾಹಿಸುವ 12 ನಿಯಮಗಳು[BRAIN RULES]

7. Take risks

do you need to take risks to get rich in kannada
risks

ನಿಮ್ಮ 20s ನಲ್ಲಿ ಇರುವ ಉತ್ತಮವಾದ ಅಸೆಟ್ ಎಂದರೆ ಸಮಯವಾಗಿದೆ(time). ಆಗಿದ್ದರೆ ಈ ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳುವುದು ಹೇಗೆ? ಇದಕ್ಕೆ ನೀವು ಅಪಾಯಯನ್ನು(risk) ತೆಗೆದುಕೊಳ್ಳಬೇಕು. ಅಪಾಯ ಯಶಸ್ವಿ(success) ಅಥವಾ ವಿಫಲವಾಗಬಹುದು(fail). ಒಂದು ವೇಳೆ ವಿಫಲವಾದರು ಅದರಿಂದ ಗುಣಮುಖರಾಗಲು(recover) ನಿಮ್ಮ ಹತ್ತಿರ ಸಮಯವಿದೆ. ಆದರೆ ನೀವು ಅಪಾಯವನ್ನು ಸ್ಟಾಪ್ ಲಾಸ್(stoploss) ನೀಡಿ ತೆಗೆದುಕೊಳ್ಳಬೇಕು.

ಹೂಡಿಕೆಯಲ್ಲಿ ಸ್ಟಾಪ್ ಲಾಸ್ ಬಳಸಲಾಗುತ್ತದೆ. ಉದಾಹರಣೆಗೆ ನೀವು ಒಂದು ಸ್ಟಾಕ್ ಮೇಲೊಗುತ್ತದೆ ಎಂದು ತಿಳಿದು 100 ರೂಗೆ ಖರೀದಿಸಿದ್ದೀರಾ ಎಂದುಕೊಳ್ಳಿ. ಆದರೆ ಅದು ಮೆಲೋಗುವ ಬದಲು ಕೆಳಗೆ ಬರುತ್ತದೆ. ಅದು ಈಗ 90 ರೂಗೆ ಬಂದಿದೆ. ನೀವು ಅದನ್ನು ಮಾರಬೇಕಾ ಅಥವಾ ಬೇಡವೇ ಎಂದು ಯೋಚಿಸುತ್ತಿರುತ್ತೀರಾ. "ಅದು ಮುಂದೆ ಮೇಲೋದರೆ ನನಗೆ ನಷ್ಟ" ಎಂದು ಭಾವಿಸಿ ಅದನ್ನು ಮಾರುವುದಿಲ್ಲ. ನಂತರ ಅದು 80 ರೂಗೆ ಬರುತ್ತದೆ. ಈಗಲೂ ಕೂಡ ನೀವು 20 ರೂನ ನಷ್ಟವನ್ನು ತೆಗೆದುಕೊಳ್ಳಲು ತಯಾರಿರುವುದಿಲ್ಲ ಮತ್ತು ಇನ್ನಷ್ಟು ಕಾಯುತ್ತೀರಾ, ಇದಕ್ಕೆ ಅಂತ್ಯವೇ ಇಲ್ಲ.

ನೀವು ಅಧಿಕ ನಷ್ಟ ಅನುಭವಿಸಿದಷ್ಟು ಅದನ್ನು ಉಳಿಸಲು ಯೋಚಿಸುತ್ತಿರುತ್ತೀರ ಮತ್ತು ಇನ್ನಷ್ಟು ನಷ್ಟವನ್ನು ಅನುಭವಿಸುತ್ತೀರಾ. ಇದಕ್ಕಾಗಿಯೇ ಸ್ಟಾಪ್ ಲಾಸ್ ಪರಿಕಲ್ಪನೆ ಬಂದಿದೆ. ಇದರ ಪ್ರಕಾರ ಒಂದು ಮೌಲ್ಯದ ತನಕ ನೀವು ನಷ್ಟವನ್ನು ತೆಗೆದುಕೊಳ್ಳಲು ಸಿದ್ದರಿರುತ್ತೀರಾ. ಆ ಸ್ಟಾಪ್ ಲಾಸ್ ತ್ರಿಗರ್ ಆದಾಗ ಅದನ್ನು ಮಾರುತ್ತೀರಾ.

ನಿಮ್ಮ ಬದುಕಿನಲ್ಲೂ ನೀವು ಅಪಾಯವನ್ನು ಈ ರೀತಿಯಲ್ಲೇ ತೆಗೆದುಕೊಳ್ಳಬೇಕು. ಯಾವುದೇ ಅಪಾಯಗಳನ್ನು ತೆಗೆದುಕೊಳ್ಳುವಾಗ ಅದರಲ್ಲಿ ಆಗುವ ಕೆಟ್ಟದ್ದು ಏನು ಎಂಬುದನ್ನು ತಿಳಿದುಕೊಳ್ಳಿ. ಅದಕ್ಕೆ ಒಂದು ಸ್ಟಾಪ್ ಲಾಸ್ ಹಾಕಿರಿ.

8. Create a credit score

ಜನರಿಗೆ ಕ್ರೆಡಿಟ್ ಸ್ಕೋರ್(credit score) ಹಣವನ್ನು ಉಳಿಸಲು ಒಂದು ಯಾಂತ್ರಿಕ ವ್ಯವಸ್ಥೆ(mechanism) ಅನಿಸುವುದಿಲ್ಲ. ಆದರೆ ಇದು ಸತ್ಯವಲ್ಲ. ಕ್ರೆಡಿಟ್ ಸ್ಕೋರ್ನಿಂದ ನೀವು ಸಾಕಷ್ಟು ಹಣವನ್ನು ಉಳಿಸಬಹುದು. ನಿಮ್ಮ 20s ನಲ್ಲಿ ಒಂದು ಕ್ರೆಡಿಟ್ ಸ್ಕೋರ್ ಮಾಡಿ. ಅದಕ್ಕೆ ಉತ್ತಮ ಮಾರ್ಗವೆಂದರೆ ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ಪಾವತಿಸುವುದಾಗಿದೆ.

ನೀವು ಕ್ರೆಡಿಟ್ ಕಾರ್ಡ್ ತೆಗೆದುಕೊಂಡಿದ್ದರೆ ಅದರ ಖರ್ಚನ್ನು ನಿಯಮಿತವಾಗಿ(limited) ಇಟ್ಟಿರುತ್ತೀರಾ ಮತ್ತು ಅದರ ಪೂರ್ತಿ ಪೇಮೆಂಟ್ ಅನ್ನು ತಿಂಗಳ ಅಂತ್ಯದಲ್ಲಿ ಮಾಡಿ ಮತ್ತು ನಿಮ್ಮ ಹತ್ತಿರ ಇಲ್ಲದ ಹಣದಿಂದ ಏನನ್ನು ಖರೀದಿಸಬೇಡಿ. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚುತ್ತದೆ. ಇದರಿಂದ ನಿಮಗೆ ಕಡಿಮೆ ಬಡ್ಡಿಯಲ್ಲಿ(interest) ಸಾಲ ಸಿಗುತ್ತದೆ. ಇದರಿಂದ ನಿಮ್ಮ ಇಎಂಐ(emi) ಕಡಿಮೆಗೊಳ್ಳುತ್ತದೆ.

ಇದನ್ನು ಓದಿ: ನಿಮಗೆ ಗಮನ ಹರಿಸಲು ಏಕೆ ಸಾಧ್ಯವಾಗುತ್ತಿಲ್ಲ

9. Invest in yourself

how can I invest in myself to make more money in kannada
invest in yourself

ಹಣಕ್ಕೆ ಅಷ್ಟೇ ಅಲ್ಲದೆ ನಿಮಗಾಗಿಯೂ ಅತಿಯಾಗಿ ಹೂಡಿಕೆ ಮಾಡಿ. 20s ನಲ್ಲಿ ನಿಮಗಾಗಿ ಎಷ್ಟು ಹೂಡಿಕೆ ಮಾಡುತ್ತೀರೋ ಅಷ್ಟು ಶ್ರೀಮಂತರಾಗುತ್ತೀರಾ. ನಿಮ್ಮ ವಿದ್ಯಾಭ್ಯಾಸ, ಅನುಭವ, ವೈಫಲ್ಯಗಳಿಗೆ ಎಷ್ಟು ಹೂಡಿಕೆ ಮಾಡಲು ಸಾಧ್ಯವೋ ಮಾಡಿಬೇಡಿ. ಜನಗಳ ಜೊತೆ ನೆಟ್ವರ್ಕಿಂಗ್ ಮಾಡಿ, ಕಾರ್ಯಕ್ರಮಗಳಿಗೆ(events) ಹೋಗಿ, ಪ್ರಯಾಣ ಮಾಡಿ, ಇವೆಲ್ಲವೂ ದುಬಾರಿ ಇರಬೇಕೆಂದಿಲ್ಲ.

ನಿಮಗೆ ಪುಸ್ತಕವನ್ನು ಖರೀದಿಸಲು ಸಾಧ್ಯವಾಗಿಲ್ಲವೆಂದರೆ, ಗ್ರಂಥಾಲಯದಲ್ಲಿ(library) ಪುಸ್ತಕದ ಚಂದಾದಾರಿಕೆ(subscription) ತೆಗೆದುಕೊಳ್ಳಿ, ಇಲ್ಲ ಅನುಭವವಿರುವ ವ್ಯಕ್ತಿಗಳಿಗೆ ಪುಸ್ತಕ ಕೇಳಿ ಓದಿ. ಹಿಂದೆಯೇ ಮುದ್ರಿಸಿದ(print) ಪುಸ್ತಕಗಳು ಈಗ ಮುದ್ರಿಸುವ ಪುಸ್ತಕಗಳಿಗಿಂತ ಉತ್ತಮವಾಗಿರುತ್ತದೆ. ಪುಸ್ತಕವನ್ನು ಓದಿ, ಜನರನ್ನು ಭೇಟಿಯಾಗಿ, ಹೊಸದನ್ನು ಕಲಿಯಿರಿ, ಇವೆಲ್ಲವೂ ನಿಮ್ಮನ್ನು ಅಧಿಕ ನುರಿತ(skilled), ಅರಿವೂ(aware) ಮತ್ತು ಹೆಚ್ಚಿನ ಹಣವನ್ನು ಗಳಿಸಲು ಸಮರ್ಥ ಮಾಡುತ್ತದೆ.

10. Avoid debt

ನಿಮ್ಮ 20s ನಲ್ಲಿ ಎಂತಹ ರೀತಿಯ ಸಾಲದಿಂದಲೂ ದೂರವಿರಿ. ನೀವು ಕೇವಲ ಶಿಕ್ಷಣ ಸಾಲವನ್ನು(education loan) ತೆಗೆದುಕೊಳ್ಳಬಹುದು. ಇದನ್ನು ಬಿಟ್ಟು ನಿಮ್ಮ 20s ನಲ್ಲಿ ಬೇರೆ ರೀತಿಯ ಸಾಲಗಳನ್ನು ತೆಗೆದುಕೊಳ್ಳಬೇಡಿ.

ಇದಾಗಿತ್ತು 10 ಶ್ರೀಮಂತ ಸತ್ಯಗಳು, ಇವುಗಳಲ್ಲಿ ಯಾವುದು ಶಕ್ತಿಯುತವೆನಿಸಿತು(powerful) ಎಂಬುದನ್ನು ಕಮೆಂಟ್ನಲ್ಲಿ ತಿಳಿಸಿ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments