Website designed by @coders.knowledge.

Website designed by @coders.knowledge.

10 Extra Income Ideas | 10 ಹೆಚ್ಚುವರಿ ಆದಾಯದ ಐಡಿಯಾಗಳು

Watch Video

ಈ ಲೇಖನದಲ್ಲಿ ನಾವು ಆನ್‌ಲೈನ್‌ ಮೂಲಕ ಹಣ ಗಳಿಸಬಹುದಾದ 10 ಐಡಿಯಾಗಳ ಬಗ್ಗೆ ತಿಳಿಸುತ್ತಿದ್ದೇವೆ. ಆನ್‌ಲೈನಲ್ಲಿ ಹಣ ಗಳಿಸುವುದು ಕೇವಲ ಒಬ್ಬ ವಿದ್ಯಾರ್ಥಿ, ಕೇವಲ ಒಬ್ಬ ಉದ್ಯೋಗಿ ಮಾಡಬಹುದು ಎನ್ನುವಂತಿಲ್ಲ. ಇದು ಕೇವಲ ನಿಮ್ಮ ಹತ್ತಿರ ಎಷ್ಟು ಸಮಯ ಉಳಿದಿದೆ, ನೀವು ಯಾವುದರಲ್ಲಿ ತಜ್ಞರಾಗಿದ್ದೀರಾ(expert) ಮತ್ತು ಇವು ಎಷ್ಟು ಹಣ ಗಳಿಸಬೇಕೆಂದು ಬಯಸುತ್ತೀರಾ, ಎಂಬುದರ ಮೇಲೆ ನಿಂತಿದೆ.

ನಾವು ಇಲ್ಲಿ ತಿಳಿಸುವ 10 ಐಡಿಯಾಗಳು ನಿಮಗೆ ತಕ್ಷಣವೇ ಯಶಸ್ಸು ನೀಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದು ಅತ್ಯುತ್ತಮ ಅಡ್ಡ ಆದಾಯಗಳಾಗಿದ್ದು(side income). ನೀವು ಇದರ ಮೇಲೆ ಕೆಲಸ ಮಾಡಿದರೆ 1 ರಿಂದ 3 ವರ್ಷಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ಬನ್ನಿ ಇವುಗಳ ಬಗ್ಗೆ ಈಗ ನೋಡೋಣ.

ಇದನ್ನು ಓದಿ: ಯಶಸ್ವಿ ಜನರನ್ನು ಯಶಸ್ವಿಗೊಳಿಸುವ ಐದು ಸಾಮಾನ್ಯ ಲಕ್ಷಣಗಳು

1. ವಿಷಯ ಬರವಣಿಗೆ.

what does a content writer do in kannada
content writing

ನೀವು ಲೇಖನಗಳನ್ನು ಬರೆಯುವುದರಲ್ಲಿ ತುಂಬಾ ಚೆನ್ನಾಗಿದ್ದರೆ ವಿಷಯ ಬರವಣಿಗೆ(content writing) ನಿಮಗೆ ಸೂಕ್ತವಾಗಿದೆ. ವಿಷಯ ಬರವಣಿಗೆ ಅಂದರೆ ಅದು ಯಾವುದೇ ಕವಿತೆ, ಪ್ರೊಫೆಶನಲ್ ಲೇಖನ, ವರದಿಗಳ(report) ಬರವಣಿಗೆ ರೀತಿ ಆಗಿರಬಹುದು. ಇದರಲ್ಲಿ ನೀವು ಮನೆಯಲ್ಲೇ ಕೂತು ನಿಮ್ಮ ಯಾವುದೇ ಗ್ರಾಹಕರಿಗೆ(client) ಲೇಖನಗಳನ್ನು ಬರೆದು ಕೊಡುವ ಮೂಲಕ ಹಣ ಗಳಿಸಬಹುದು. ಇದರಲ್ಲಿ ನೀವು ಬರೆಯುವ ಪ್ರತಿ ಪದಗಳು, ಪ್ರತಿ ಪ್ಯಾರಾಗ್ರಾಫ್, ಒಟ್ಟು ಪುಟಗಳಿಗೆ ಹಣ ಗಳಿಸುತ್ತೀರಿ. ವಿಷಯ ಬರವಣಿಗೆ ಆನ್‌ಲೈನ್‌ನಲ್ಲಿ ಹಣ ಗಳಿಸಲು ಇರುವ ಒಂದು ಸೊಗಸಾದ(terrific) ಮಾರ್ಗವಾಗಿದೆ.

2. ಗ್ರಾಫಿಕ್ ಡಿಸೈನರ್.

is graphic designing a good career in kannada
graphic designer

ನೀವು ಯಾವುದೇ ಇನ್ಸ್ಟಾಗ್ರಾಂ ಪೇಜ್‍ಗಳಿಗೆ ಗ್ರಾಫಿಕ್ ಮಾಡುತ್ತಿದ್ದರೆ, ಇಲ್ಲ ಯಾವುದೇ ಕಾರ್ಪೊರೇಟ್‌ಗಾಗಿ ಗ್ರಾಫಿಕ್ ಮಾಡುತ್ತಿದ್ದರೆ, ಇಲ್ಲ ಯಾವುದೇ ರೀತಿಯ ಲೋಗೋ ಮಾಡುವುದು ಗೊತ್ತಿದ್ದರೆ, ಗ್ರಾಫಿಕ್ ಡಿಸೈನಿಂಗ್ ನಿಮಗೆ ಸೂಕ್ತವಾಗಿದೆ. ಗ್ರಾಫಿಕ್ ಡಿಸೈನರ್(graphic designer) ಹೆಚ್ಚು ಬೇಡಿಕೆಯಲ್ಲಿದ್ದು, ಕೋವಿಡ್ ನಂತರ ಬೇಡಿಕೆ ಇನ್ನೂ ಹೆಚ್ಚೇ ಆಗಿದೆ.

ಇದನ್ನು ಓದಿ: ಸ್ಟಾಕ್‌ನಲ್ಲಿ ಹೂಡಿಕೆ ಮಾಡುವ ಮೊದಲು ಇವುಗಳು ತಿಳಿದಿರಲಿ

3. ವಿಷಯ ನಿರ್ವಹಣೆ.

ನೀವು ಯಾವುದೇ ಕ್ರಿಯೇಟರ್ನ ಕಂಟೆಂಟ್ ಅನ್ನು ಮ್ಯಾನೇಜ್ ಮಾಡಬಹುದು. ಇದರ ಅರ್ಥ 1ಕಾಟನ್ ಕ್ರಿಯೇಟ್ ಮಾಡಿದಾಗ ನಮ್ಮ ಕಂಟೆಂಟ್ ಮ್ಯಾನೇಜರ್ ಅದನ್ನು ಎಲ್ಲಾ ಸೋಷಿಯಲ್ ಮೀಡಿಯಾ ಮತ್ತು ಯೂಟ್ಯೂಬ್ ನಲ್ಲಿ ಒಂದೇ ಸಮಯದಲ್ಲಿ ಅಪ್ಲೋಡ್ ಮಾಡುತ್ತಾನೆ ಅವನಿಗೆ ಎಲ್ಲ ಸೋಷಿಯಲ್ ಮೀಡಿಯಾಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ ಕಂಟೆಂಟ್ ಮ್ಯಾನೇಜ್ಮೆಂಟ್(content management) ಸೋಷಿಯಲ್ ಮೀಡಿಯಾದಲ್ಲಿ ನೀಡುತ್ತದೆ ಮತ್ತು ಮನೆಯಲ್ಲೇ ಕೂತು ಅಂತಾರಾಷ್ಟ್ರೀಯ ಜನಗಳ ಜೊತೆಗೆ ಕಾಂಟಾಕ್ಟ್ ನಲ್ಲಿ ಇರುವಂತೆ ಮಾಡುತ್ತದೆ.

4. ಆಡಿಯೋ ಎಡಿಟಿಂಗ್.

how can i edit my audio in kannada
audio editing

ಇಂದು ಕಂಟೆಂಟ್ ಕ್ರಿಯೇಟರ್ ತುಂಬಾ ಜನ ಆಗಿದ್ದಾರೆ. ಇದರಿಂದ ಎರಡು ಎಡಿಟಿಂಗ್ ಪಿಲ್ಡ್ ಹೊರಹೊಮ್ಮುತ್ತಿವೆ. ಅದರಲ್ಲೇ ಬರುತ್ತದೆ ಆಡಿಯೋ ಎಡಿಟಿಂಗ್(audio editing). ಮುಂಚೆ ಆಡಿಯೋ ಎಡಿಟಿಂಗ್ ಮೇಲೆ ಅಷ್ಟು ಗಮನ ಹರಿಸುತ್ತಿರಲಿಲ್ಲ. ಆದರೆ ಈಗ ಆಡಿಯೋ ಕ್ವಾಲಿಟಿ ಮೇಲೆ ತುಂಬಾ ಗಮನ ಹರಿಸಲಾಗುತ್ತಿದೆ.

ಈ ಆಡಿಯೋ ಕ್ವಾಲಿಟಿಯನ್ನು ಟಾಪ್‌ನಲ್ಲಿ ಇಡಲು ಸಾಧ್ಯವಾಗುವುದು ಆಡಿಯೋ ಎಡಿಟರ್‌ಗೆ ಮಾತ್ರ. ಭಾರತದಲ್ಲಿ ಅನೇಕರು ಆಡಿಯೋ ಎಡಿಟಿಂಗ್ ಮೇಲೆ ಅಷ್ಟು ಫೋಕಸ್ ಮಾಡುತ್ತಿಲ್ಲ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದರ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲಾಗಿದೆ. ಹೀಗಾಗಿ ನೀವು ಒಬ್ಬ ಆಡಿಯೋ ಎಡಿಟರ್ ಆಗಬಹುದು.

ಇದನ್ನು ಓದಿ: ಷೇರು ಮಾರುಕಟ್ಟೆಯಿಂದ ಉತ್ತಮ ರಿಟರ್ನ್ಸ್ ಪಡೆಯುವುದು ಹೇಗೆ?

5. ವೀಡಿಯೊ ಎಡಿಟಿಂಗ್.

what do you do in video editing in kannada
video editing

ವೀಡಿಯೋ ಎಡಿಟಿಂಗ್ ಇದು ಯಾವಾಗಲೂ ಇರುತ್ತದೆ. ಇಂದು ನಿಮ್ಮ ವೀಡಿಯೋಗಳನ್ನು ಶೇರ್ ಮಾಡಲು ಅನೇಕ ಪ್ಲಾಟ್ಪಾರ್ಮ್ಗಳು ಬಂದಿವೆ. ಅದು ಇನ್ಸ್ಟಾಗ್ರಾಂ ವೀಡಿಯೊ ಅಥವಾ ಯೂಟ್ಯೂಬ್ ವೀಡಿಯೋ ಆಗಿರಬಹುದು. ಎಲ್ಲವೂ ಇಂದು ದೃಶ್ಯವಾಗುತ್ತಿದೆ(visual) ಮತ್ತು ನಿಮಗೆ ಬೇಸಿಕ್ ವಿಡಿಯೋ ಎಡಿಟಿಂಗ್ ಗಿಂತ ಮತ್ತಷ್ಟು ತಿಳಿದಿರಬೇಕಾಗಿರುತ್ತದೆ.

ನಿಮಗೆ ವೀಡಿಯೋ ಎಡಿಟ್ ಮಾಡುವ ಆ್ಯಪಿನಲ್ಲಿ ವೀಡಿಯೋ ಎಡಿಟ್(video editing) ಮಾಡಲು ಬಂದರೆ ನೀವು ಒಬ್ಬ ಪ್ರೊಫೆಶನಲ್ ಎಡಿಟರ್‌ನ ಹತ್ತಿರ ಹೋಗಿ, ನಿಮ್ಮ ಈ ಶಾರ್ಟ್ ವೀಡಿಯೋವನ್ನು ತೋರಿಸಿ. ನಾನು ಯಾವುದೇ ಆ್ಯಪಿನಿಂದ ಎಡಿಟಿಂಗ್ ಮಾಡಿ, ಈ ರೀತಿಯ ಔಟ್ಪುಟ್(output) ತರಬಹುದು ಎಂದು ಹೇಳಬಹುದು.

ಇದನ್ನು ಓದಿ: ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ?

6. ಪ್ರತಿಲೇಖನಗಳು.

what do you mean by transcripts in kannada
transcripts

ಇಂದು ಅನೇಕ ರೀತಿಯ ಕಂಟೆಂಟ್ಗಳು ಪ್ರಾದೇಶಿಕ(region) ಭಾಷೆಗಳಲ್ಲಿ ಮಾಡಲಾಗುತ್ತಿದೆ. ನಾವು ಈ ಲೇಖನವನ್ನು ಕನ್ನಡದಲ್ಲಿ ಮಾಡಿದ್ದೇವೆ, ಕೆಲವರು ಹಿಂದಿ, ತೆಲುಗು, ತಮಿಳಿನಲ್ಲಿ ಲೇಖನಗಳನ್ನು ಬರೆಯಬಹುದು. ಹೀಗಾಗಿ ಈ ಲೇಖನದ ಇಂಗ್ಲಿಷ್ ಪ್ರತಿಲೇಖನಗಳು(transcriptions) ಇರುವುದು ಈ ಸಮಯದಲ್ಲಿ ತುಂಬಾ ಮುಖ್ಯವಾಗಿದೆ. ನಿಮಗೆ ಒಂದು ಭಾಷೆ ಚೆನ್ನಾಗಿ ಅರ್ಥವಾದರೆ, ನೀವು ಅದಕ್ಕೆ ಪ್ರತಿಲೇಖನ ಮಾಡಬಹುದು. ಅಂದರೆ ನೀವು ಒಂದು ಆಡಿಯೋ ಕೇಳಿ ಅದನ್ನು ಆ ಭಾಷೆ ಅಥವಾ ಬೇರೆ ಭಾಷೆಯಲ್ಲಿ ಪ್ರತಿಲೇಖನ ಮಾಡಬಹುದು.

ಟ್ರಾನ್ಸ್‌‌ಸ್ಕ್ರಿಪ್ಟ್ ಎಂದರೆ ಟೆಕ್ಸ್ಟ್ ಸ್ವರೂಪ(format) ಮಾಡುವುದಾಗಿದೆ. ಇದು ಈ ಸಮಯದಲ್ಲಿ ಆನ್‌ಲೈನ್‌ ಮೂಲಕ ಹಣ ಮಾಡಲು ಇರುವ ಒಂದು ಅತ್ಯಾಕರ್ಷಕ(exciting) ದಾರಿಯಾಗಿದೆ. ನಿಮಗೆ ವಿದೇಶಿ ಭಾಷೆಗಳಾದ ಫ್ರೆಂಚ್, ಜರ್ಮನಿ, ಇತ್ಯಾದಿ ತಿಳಿದಿದ್ದು, ಇಂಗ್ಲಿಷ್ ಕೂಡ ಗೊತ್ತಿದ್ದರೆ, ನೀವು ಟ್ರಾನ್ಸ್‌‌ಸ್ಕ್ರಿಪ್ಟ್ ಮಾಡುವ ಮೂಲಕ ಜಗತ್ತಿನಾದ್ಯಂತ ಇರುವ ಜನಗಳನ್ನು ಸಂಪರ್ಕಿಸಬಹುದು.

ಇದನ್ನು ಓದಿ: ಸಮಯ ಸಾಲುತ್ತಿಲ್ಲವೆಂದರೆ 8*3 ಮಾರ್ಗ ಬಳಸಿ

7. ಉಲ್ಲೇಖಿಸಿ ಮತ್ತು ಗಳಿಸಿ.

how refer and earn works in kannada
refer and earn

ನೀವು ಒಂದು ಬ್ರ್ಯಾಂಡ್ ಜೊತೆ ಕೆಲಸ ಮಾಡುತ್ತೀರಾ ಮತ್ತು ಅವರು ನಿಮಗೆ ಒಂದು ಕ್ಯಾಂಪೇನ್ ನೀಡುತ್ತಾರೆ. ಅಂದರೆ, "ನೀವು ನಮ್ಮ ಆ್ಯಪ್ ಡೌನ್ ಲೋಡ್ ಮಾಡಿಸಿ, ನಮ್ಮ ಆ್ಯಪಿಗೆ ರಿವ್ಯೂ ಕೊಡಿಸಿ, ನಮ್ಮ ಆ್ಯಪ್ ಮೂಲಕ ಟ್ರಾನ್ಸಾಕ್ಷನ್ ಮಾಡಿಸಿ ಮತ್ತು ಪ್ರತಿ ಯಶಸ್ವಿ ಟ್ರಾನ್ಸಾಕ್ಷನ್ ನಂತರ ನಾವು ನಿಮಗೆ ಹಣ ನೀಡುತ್ತೇವೆ" ಎಂದು ಹೇಳುತ್ತಾರೆ. ನೀವು refer and earn ಅನ್ನು ಟ್ರೇಡಿಂಗ್ ಪ್ಲಾಟ್ಪಾರ್ಮ್ಗಳಾದ ಗ್ರೋ, ಅಪ್ಸ್ಟಾಕ್ ರೀತಿ, ಮಿಷೋ ರೀತಿಯ ಶಾಪಿಂಗ್ ಆಪ್ ಮೂಲಕ ಮಾಡಬಹುದು. ಇವುಗಳಲ್ಲಿ ನಿಮಗೆ ಅನೇಕ ರೆಫರೆನ್ಸ್ ಪ್ರೋಗ್ರಾಂ ಕಾಣಸಿಗುತ್ತವೆ. ನಿಮ್ಮ ಹತ್ತಿರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರೇಕ್ಷಕರು(audience) ಇದ್ದರೆ, ಈ ರೀತಿಯ refer and earn ನಿಮಗೆ ಸೂಕ್ತವಾಗಿದೆ.

8. ಪಾವತಿಸಿದ ಸುದ್ದಿಪತ್ರಗಳು.

how do you get paid for newsletters in kannada
paid newsletters

ನಿಮ್ಮ ಹತ್ತಿರ ಆಡಿಯನ್ಸ್ ಇದ್ದು ಅಥವಾ ನಿಮ್ಮ ಕಾಂಟೆಂಟ್ ವೀಡಿಯೋಗಳ ಮೂಲಕ ಆಡಿಯನ್ಸ್ ಗ್ರೂಪ್ ಅನ್ನು ಮಾಡುತ್ತಿದ್ದರೆ, ನೀವು ಆಡಿಯನ್ಸ್ ಗ್ರೂಪ್ ನಿಂದ ಹಣಗಳಿಸಬಹಿದು(monetize). ಅದರಲ್ಲೇ ಒಂದು ರೀತಿಯೇ ಪಾವತಿಸಿದ ಸುದ್ದಿಪತ್ರಗಳು(paid newsletters). ನೀವು ಸ್ಪೋರ್ಟ್ಸ್ ರೀತಿ ಯಾವುದೇ ವಿಷಯದ ಮೇಲೆ ಸುದ್ದಿಪತ್ರಗಳನ್ನು ಮಾಡುತ್ತಿದ್ದು, ನಿಮ್ಮ ಕ್ರಿಕೆಟ್ ಕವರೇಜ್ ಇಷ್ಟಪಡುವ ಆಡಿಯನ್ಸ್ ಇದ್ದರೆ, ನೀವು ಕೆಲವು ಸಮಯದ ನಂತರ ಒಂದು ಪ್ರೊಫೆಶನಲ್ ಕಂಟೆಂಟ್ ಆಗಿ ಸುದ್ದಿಪತ್ರಗಳನ್ನು ನೀಡಲು ನಿಮ್ಮ ಆಡಿಯನ್ಸ್ ನಿಂದ ಹಣ ಪಡೆಯಬಹುದು. ಪಾವತಿಸುವ ಸುದ್ದಿಪತ್ರಗಳಿಂದ ನಿಮಗೆ ಆಡಿಯನ್ಸ್ ಜೊತೆ ಹಣ ಕೂಡ ಸಿಗುತ್ತದೆ.

ಇದನ್ನು ಓದಿ: ಮೊಡವೆಗಳಿಂದ ಶಾಶ್ವತ ಪರಿಹಾರಕ್ಕೆ 14 ಸಲಹೆಗಳು

9. ಅಫಿಲಿಯೇಟ್ ಮಾರ್ಕೆಟಿಂಗ್.

what is the example of affiliate marketing in kannada
affiliate marketing

ನಿಮ್ಮ ಹತ್ತಿರ ಈಗಾಗಲೇ ಆಡಿಯನ್ಸ್ ಇದ್ದರೆ ಅಫಿಲಿಯೇಟ್ ಮಾರ್ಕೆಟಿಂಗ್(affiliate marketing) ನಿಮಗೆ ಸೂಕ್ತವಾಗಿದೆ. ಇದನ್ನು ನಾವು ನಮ್ಮ ವೆಬ್‌ಸೈಟ್‌ನಲ್ಲಿ ಬಳಸಿದ್ದೇವೆ. ನಿಮಗೆ ನಮ್ಮ ವೆಬ್‌ಸೈಟ್‌ನಲ್ಲಿ ಅಮೆಜಾನ್‌ನ ಕೆಲವು ಲಿಂಕ್ ಸಿಗಬಹುದು. ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ವಸ್ತುಗಳನ್ನು ಖರೀದಿಸಿದರೆ, ನಮಗೆ ಕೆಲವು ಲಾಭ ಸಿಗುತ್ತದೆ. ಆ ಲಾಭ ಕಡಿಮೆಯೇ, ಆದರೂ ಜನರು ಹೆಚ್ಚು ಖರೀದಿಸಿದಂತೆ ಹೆಚ್ಚುತ್ತದೆ. ಅಫಿಲಿಯೇಟ್ ಮಾರ್ಕೆಟಿಂಗ್ ಅನ್ನು ನೀವು ಒಮ್ಮೆ ಟ್ರೈ ಮಾಡಲೇಬೇಕು.

10. ಆನ್‌ಲೈನ್ ಬೋಧನೆ.

how much does it cost for an online tutoring in kannada
online tutoring

ನಿಮಗೆ ಪಾಠ ಮಾಡುವುದರಲ್ಲಿ ಆಸಕ್ತಿ ಇದ್ದರೆ ನೀವೂ ಒಬ್ಬ ಆನ್‌ಲೈನ್‌ ಬೋಧಕ ಆಗಬಹುದು. ಇದು ಕೇವಲ ವಿದ್ಯಾರ್ಥಿಗಳಿಗಲ್ಲದೆ ಉದ್ಯೋಗಿಗಳಿಗೆ ಅನ್ವಯವಾಗುತ್ತದೆ. ಭಾರತದಲ್ಲಿ ಎಷ್ಟೋ ಜನ ರಾತ್ರಿ ಸಮಯದಲ್ಲಿ ಅಮೆರಿಕದ ವಿದ್ಯಾರ್ಥಿಗಳಿಗೆ ಆನ್‌ಲೈನ್ನಲ್ಲಿ ಪಾಠ ಹೇಳಿಕೊಟ್ಟು, ಗಂಟೆಗೆ 20 ರಿಂದ 50 ಡಾಲರ್‌ ಗಳಿಸುತ್ತಿದ್ದಾರೆ. ನೀವು ಪಾಠ ಮಾಡುವುದರಲ್ಲಿ ಆಸಕ್ತಿ ಹೊಂದಿದ್ದರೆ ಆನ್‌ಲೈನ್ ಬೋಧನೆ(online tutoring) ನಿಮಗೆ ಸೂಕ್ತವಾಗಿದೆ.

ಇಂದಿನ ಆನ್‌ಲೈನ್ ಜಗತ್ತಿನಲ್ಲಿ ನಾವು ಹೇಳಿದ ಐಡಿಯಾಗಳನ್ನು ಸುಲಭವಾಗಿ ಕಾರ್ಯರೂಪಕ್ಕೆ ತರಬಹುದು. ಪ್ರತಿಯೊಂದು ಐಡಿಯಾಗಳಿಗೆ ಇರುವ ಪ್ಲಾಟ್ಫಾರ್ಮ್ಗಳ ಬಗ್ಗೆ ಈ ಲೇಖನದಲ್ಲಿ ನಾವು ಹೆಚ್ಚಾಗಿ ತಿಳಿಸಿಲ್ಲ. ಅದನ್ನು ನೀವು ಗೂಗಲ್‌ನಲ್ಲಿ ಸರ್ಚ್ ಮಾಡುವ ಮುಖಾಂತರ ಸುಲಭವಾಗಿ ಹುಡುಕಬಹುದು. ಎಲ್ಲದಕ್ಕೂ ಸಮಯ ಬೇಕು, ಎಲ್ಲವೂ ರಾತ್ರೋರಾತ್ರಿ ಆಗುವುದಿಲ್ಲ. ಆದರೆ ನೀವು ಪ್ರಾರಂಭಿಸಿದಲ್ಲಿ ಹಣ ಗಳಿಸುವುದು ಮಾತ್ರವಲ್ಲದೆ ಒಂದು ಬೆಲೆಬಾಳುವ(valuable) ಅನುಭವವನ್ನು ಕೂಡ ಪಡೆಯುತ್ತೀರಾ.

ಇದರಿಂದ ಇನ್ನೂ 1 ರಿಂದ 3 ವರ್ಷಗಳಲ್ಲೇ ನಿಮಗೆ ಯಾವ ದಾರಿ ಸೂಕ್ತ ಎಂಬ ಸ್ಪಷ್ಟತೆಗೆ(clarity) ಬರುತ್ತೀರಾ. ಯಾವಾಗ ನಿಮ್ಮಲ್ಲಿ ಸ್ಪಷ್ಟತೆ ಬರುತ್ತದೆಯೋ ಆಗ ನಿಮ್ಮ ಜೀವನದಲ್ಲಿ ಘಟಿಸುವ ಎಲ್ಲ ಘಟನೆ ಚೆನ್ನಾಗೇ ಇರುತ್ತದೆ. ಏಕೆಂದರೆ ಆ ಸಮಯದಲ್ಲಿ ನಿಮಗೆ ಯಶಸ್ವಿಯಾಗಲು ಒಂದು ದಾರಿ ಇರುತ್ತದೆ, ನೀವು ಆ ದಾರಿಯಲ್ಲೇ ಗಮನ ಹರಿಸುತ್ತೀರಾ ಮತ್ತು ನಿಮ್ಮ ಜೀವನ ಸಾಗುತ್ತಿರುತ್ತದೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments