110 Ideas of Srimad Bhagavad Gita
Info Mind 1219
Watch Video
ಆಣ್ವಿಕ ಜೀವಶಾಸ್ತ್ರಜ್ಞ(molecular biologist) ಮತ್ತು ಸಂಶೋಧನಾ ಸಲಹೆಗಾರರಾದ(research consultent) ಜಾನ್ ಮೀಡಿಯನ್(john median) ಅವರು, ನಮ್ಮ ಎಲ್ಲಾ ಸಮಸ್ಯೆಯ ಮೂಲ ನಮ್ಮ ಮೆದುಳು ಯೋಚಿಸುವ ರೀತಿಯಿಂದಾಗಿದೆ ಎಂದು ಹೇಳುತ್ತಾರೆ. ಹೀಗಾಗಿಯೇ ಅವರು ನಮಗಾಗಿ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕ "ಬ್ರೈನ್ ರೂಲ್ಸ್'(brain rules) ಅನ್ನು ಬರೆದಿದ್ದಾರೆ. ಇದರಲ್ಲಿ ಅವರು 12 ವೈಜ್ಞಾನಿಕ ಮೆದುಳಿನ ನಿಯಮಗಳ ಬಗ್ಗೆ ತಿಳಿಸಿದ್ದು, ಅದನ್ನು ಫಾಲೋ ಮಾಡಿ ನಾವು ನಮ್ಮ ಓದುವ, ಕಲಿಯುವ, ಕೆಲಸಗಳನ್ನು ಮಾಡುವ ಶಕ್ತಿಯನ್ನು 10 ಪಟ್ಟು ಹೆಚ್ಚಿಸಿಕೊಳ್ಳಬಹುದು.
ನೀವು ಒಬ್ಬ ವ್ಯಾಪಾರಿ, ಉದ್ಯೋಗಿ, ವಿದ್ಯಾರ್ಥಿ ಇಲ್ಲ ಶಿಕ್ಷಕರಾಗಿದ್ದರು, ಈ 12 ನಿಯಮಗಳು ನಿಮ್ಮ ಸಾಮರ್ಥ್ಯವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಮತ್ತು ದಿನನಿತ್ಯದ ನಿಮ್ಮ ಬದುಕನ್ನು ಸುಲಭಗೊಳಿಸಿ, ನಿಮ್ಮ ಮೆದುಳನ್ನು ಮುಂಚಿಗಿಂತ ಉತ್ತಮ ಮತ್ತು ಚೂಟಿ(smart) ಮಾಡುತ್ತದೆ.
ಇದನ್ನು ಓದಿ: 21 ದಿನಗಳಲ್ಲಿ ಎಲ್ಲರನ್ನು ಹಿಂದೆ ತನ್ನಿ(monk mode)ನಾವು ಮಾನವರು ವಿಕಸನಗೊಂಡಂತೆ ನಮ್ಮ ಯೋಚಿಸುವ ಶಕ್ತಿ, ಬದುಕುಳಿಯುವ(survival) ತಂತ್ರ ಕೂಡ ಮುಂಚಿಗಿಂತ ಬದಲಾಗಿದೆ. ನೀವು ಈ ಜಗತ್ತಿನಲ್ಲಿ ತುಂಬಾ ಶಕ್ತಿಶಾಲಿ ಆಗದಿರಬಹುದು, ಆದರೆ ನಾವು ಸಮಯದ ಜೊತೆಗೆ ತುಂಬಾ ಗಟ್ಟಿಯಾದ ಮೆದುಳನ್ನು ಅಭಿವೃದ್ಧಿ ಮಾಡಿಕೊಂಡಿದ್ದೇವೆ. ಇದುವೇ ನಮ್ಮ ಬದುಕುಳಿವಿಗೆ ಕಾರಣವಾಗಿದೆ. ನಮ್ಮ ಕ್ರಮಗಳನ್ನು ವಿಶ್ಲೇಷಿಸಲು ಮತ್ತು ಜೀವಿಸಲು ಇತರ ಮನುಷ್ಯನ ಜೊತೆ ಸಹಕರಿಸುವುದೇ ನಮ್ಮ ಸಾವಿರಾರು ವರ್ಷದ ಬದುಕುಳಿಯುವ ತಂತ್ರವಾಗಿದೆ. ಇದರಿಂದ ನಮಗೆ ಬದುಕಿರಲು ಸಹಾಯ ಸಿಗುತ್ತದೆ ಮತ್ತು ಜೀವಂತವಿದ್ದು ನಮ್ಮ ವಂಶವಾಹಿಗಳನ್ನು(genes) ಮುಂದಿನ ಪೀಳಿಗೆಗೆ(generation) ಕಳುಹಿಸಲು ಸಹಕರಿಸುತ್ತದೆ.
ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ಜನರು ನಮ್ಮ ಗುರಿಗೆ ಸಹಕರಿಸಿದರೆ, ನಮ್ಮ ಸಾಮರ್ಥ್ಯ ಮತ್ತು ಸೃಜನಶೀಲತೆ ಹೆಚ್ಚುತ್ತದೆ(boost). ಅದೇ ಇತರರ ಜೊತೆ ಒಳ್ಳೆಯ ಸಂಬಂಧ ಇಲ್ಲವಾದಲ್ಲಿ, ಆ ಗುಂಪು ಮತ್ತು ಪರಿಸರ ನಮ್ಮ ಮೆದುಳು ಮತ್ತು ಬದುಕನ್ನು ಹಾಳು ಮಾಡುತ್ತದೆ. ಇದು ನಮಗೆ ಸಮಯದ ಮೊದಲು ಸಾಯಲು ಕಾರಣವಾಗಿದೆ.
ಸಂಶೋಧಕರು ಎರಡು ಬೇರೆ ಬೇರೆ ರೀತಿಯ ಜೀವನ ಶೈಲಿ ಜೀವಿಸುತ್ತಿದ್ದ ಜನರ ಗುಂಪಿನ ಮೇಲೆ ಒಂದು ಅಧ್ಯಯನ ಮಾಡಿದರು. ಗುಂಪು "ಎ"ಯಲ್ಲಿ ಇರುವವರು ಪ್ರತಿದಿನ ದೈಹಿಕ ವ್ಯಾಯಾಮ ಮಾಡುತ್ತಿದ್ದು, ಹೆಚ್ಚು ಸಕ್ರಿಯವಾಗಿ ಇರುತ್ತಿದ್ದರು. ಅದೇ ಗುಂಪು "ಬಿ"ಯಲ್ಲಿ ಇರುವವರು ಯಾವುದೇ ರೀತಿಯ ದೈಹಿಕ ವ್ಯಾಯಾಮ ಮಾಡುತ್ತಿರಲಿಲ್ಲ. ಗುಂಪು "ಎ"ನ ಅರಿವಿನ ಸ್ಕೋರ್(cognetive score) ಗುಂಪು "ಬಿ"ಗೆ ಹೋಲಿಸಿದರೆ ಅಧಿಕ ಇರುವುದನ್ನು ಸಂಶೋಧಕರು(researcher) ಗಮನಿಸಿದರು.
ನಮ್ಮ ಮೆದುಳು ಪ್ರತಿದಿನ 19 ಕಿಮೀ ನಡೆಯಲು ಸಿದ್ಧವಾಗಿದೆ. ಆದರೆ ನಾವು ವಾರದಲ್ಲಿ 3 ದಿನ 30 ನಿಮಿಷವಾದರೂ ವ್ಯಾಯಾಮ ಮಾಡಿದರೆ, ನಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಿಕೊಂಡು, ಯೋಚಿಸುವ ಮತ್ತು ಕಲಿಯುವ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಏಕೆಂದರೆ ವ್ಯಾಯಾಮ ಮೆದುಳಿನ ಒಳಗೆ ರಕ್ತವನ್ನು ತಲುಪಿಸುತ್ತದೆ. ನಂತರ ಆ ರಕ್ತವೇ ಮೆದುಳಿನಲ್ಲಿ ಗ್ಲುಕೋಸ್ನೊಂದಿಗೆ ವಿಷಕಾರಿ(toxic) ಜೀವಕೋಶಗಳನ್ನು(cells) ನಾಶ ಮಾಡುತ್ತದೆ. ಇದರಿಂದ ಆಮ್ಲಜನಕದ ಹರಿವು ನಮ್ಮ ಮೆದುಳಿನ ಯೋಚಿಸುವ ಭಾಗವನ್ನು(thinking block) ಸ್ಪಷ್ಟ(clear) ಮಾಡುತ್ತದೆ. ಇದರಿಂದ ಮೆದುಳಿನಲ್ಲಿ ಅಧಿಕ ನ್ಯೂರಾನ್ಸ್ ರಚಿಸಿ, ತಮ್ಮ ಸೃಜನಶೀಲತೆ ಮತ್ತು ಮಾನಸಿಕ ತೀಕ್ಷ್ಣತೆಯನ್ನು ಹೆಚ್ಚಿಸುತ್ತದೆ.
ಇದನ್ನು ಓದಿ: ನೀರಸವಾದ ಕೆಲಸಗಳನ್ನು ಮಾಡಲು ಮೆದುಳನ್ನು ಮೋಸಗೊಳಿಸುವುದು ಹೇಗೆ?ಸರಿಯಾಗಿ ನಿದ್ದೆಯಾಗದಿದ್ದರೆ ನಮ್ಮ ಮೆದುಳಿನ ಕಾರ್ಯ, ಸ್ಮರಣೆ, ಮನಸ್ಥಿತಿ ಮತ್ತು ತಾರ್ಕಿಕವಾಗಿ(logical) ಯೋಚಿಸುವುದು ಸಮಯದ ಜೊತೆ ಹಾನಿಯಾಗುತ್ತದೆ. ಕೇವಲ 24 ನಿಮಿಷಗಳ ನಿದ್ದೆ(sleep nap) ನಾಸಾದ ಪೈಲೆಟಿನ ಸಾಮರ್ಥ್ಯವನ್ನು 34% ನಷ್ಟು ಹೆಚ್ಚಿಸಿತು ಎಂದು ಒಂದು ಅಧ್ಯಯನ ತಿಳಿಸಿದೆ. ಹೀಗಾಗಿ ನೀವು ಕೂಡ ದಿನವಿಡಿ ಸುಸ್ತನ್ನು ಅನುಭವಿಸುತ್ತಿದರೆ, ಇಲ್ಲ ಮಧ್ಯಾಹ್ನದ ಸಮಯದಲ್ಲಿ ನಿದ್ದೆ ಬರುತ್ತಿದ್ದರೆ, ಇದು ಸಾಮಾನ್ಯವಾಗಿದೆ. ಏಕೆಂದರೆ ಮಧ್ಯಾಹ್ನದ ಸಮಯದಲ್ಲಿ ಮೆದುಳಿನ ಒಳಗೆ ಜೀವರಾಸಾಯನಿಕಗಳ(biochemicals) ಯುದ್ಧ ನಡೆಯುತ್ತಿರುತ್ತದೆ. ಇದರಲ್ಲಿ ಒಂದು ಕಡೆ ಎಚ್ಚರವಿರಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದು ಕಡೆ ನಿದ್ದೆ ಮಾಡಬೇಕು ಎನಿಸುತ್ತದೆ. ಅಂತಹ ಸಮಯದಲ್ಲಿ ನಮಗೆ ಸಾಧ್ಯವಾದರೆ ಕೆಲವು ಸಮಯಗಳ ಕಾಲ ನಿದ್ದೆಯನ್ನು ಮಾಡಬೇಕು.
ನಾವು ಮಲಗಿದಾಗಲೂ ನಮ್ಮ ಮೆದುಳು ವಿಶ್ರಾಂತಿಯಲ್ಲಿ ಇರುವುದಿಲ್ಲ. ಅದು ದಿನನಿತ್ಯದ ಮಾಹಿತಿಯನ್ನು ಪರಿಷ್ಕರಿಸುತ್ತಿರುತ್ತದೆ(process). ಆದರೆ ಉತ್ಪಾದಕತೆ ಮನಸ್ಸಿಗೆ(productivity mind) ನಾವು ಒಂದು ಸರಿಯಾದ ನಿದ್ರೆ ಪಡೆಯುವುದು ಮುಖ್ಯವಾಗಿದೆ.
ನಮ್ಮ ಮೆದುಳು ಕೇವಲ 30 ಸೆಕೆಂಡುಗಳಿಗೆ ಇರುವ ಒತ್ತಡವನ್ನು(stress) ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕಿಂತ ಅಧಿಕ ಒತ್ತಡವನ್ನು ತೆಗೆದುಕೊಳ್ಳಲು ಅದು ತಯಾರಿಲ್ಲ. ಏಕೆಂದರೆ ಅಧಿಕ ಒತ್ತಡ ನಮ್ಮ ಮೆದುಳಿನ ರಕ್ತನಾಳಗಳನ್ನು(blood vessels) ಹಾನಿ ಮಾಡುತ್ತದೆ. ಇದರಿಂದ ನಮಗೆ ಹೃದಯಾಘಾತ(heart attack) ಬರಬಹುದು. ನೀವು ನಿಮ್ಮ ಮನೆ ಕೆಲಸದಲ್ಲಿ ಪ್ರತಿದಿನ ಅಧಿಕ ಒತ್ತಡವನ್ನು ಅನುಭವಿಸುತ್ತಿದರೆ, ಈ ಒತ್ತಡವು ನಿಮ್ಮ ಬದುಕಿನಲ್ಲಿ ಯಶಸ್ವಿಯಾಗುವ ಅವಕಾಶವನ್ನು ಪರಿಣಾಮ ಬೀರುತ್ತದೆ. ಅಂದರೆ ನಿಮ್ಮ ಮನೆಯ ಪರಿಸರ ಸರಿಯಿಲ್ಲದಿದ್ದರೆ, ಅದರ ಒತ್ತಡ ನಿಮ್ಮ ಕೆಲಸ, ಓದುವಿಗೆ ತೊಂದರೆ ನೀಡುತ್ತದೆ ಮತ್ತು ನಿಮ್ಮ ಸಾಮರ್ಥ್ಯ(performance) ಮತ್ತು ಉತ್ಪಾದಕತೆಯನ್ನು(productivity) ಹಾಳು ಮಾಡುತ್ತದೆ.
ಏಕೆಂದರೆ ಅಧಿಕ ಒತ್ತಡದಿಂದ ಕಾರ್ಟಿಸೋಲ್(cortisol) ಬೆಳೆದು, ಜೀವಕೋಶ ಹಾನಿಯಾಗುವಂತೆ ಮಾಡುತ್ತದೆ. ಇದರಿಂದ ನಾವು ಸರಿಯಾಗಿ ಯೋಚಿಸುವ ಮತ್ತು ನೆನಪಿಸಿಕೊಳ್ಳುವ ಸಾಮರ್ಥ್ಯ ಕುಗ್ಗುತ್ತದೆ. ಒಂದು ವೇಳೆ ನಿಮ್ಮ ಸಂಬಂಧವು ಸರಿಯಿಲ್ಲದೆ, ನಿಮಗೆ ಒತ್ತಡದ ಭಾವನೆ ಬಂದರೆ ಅದನ್ನು ಸರಿಪಡಿಸಿ ಮತ್ತು ನಿಮ್ಮ ಮನೆಯ ಒತ್ತಡವನ್ನು ನಿಮ್ಮ ಕೆಲಸ ಮತ್ತು ತರಗತಿಗೆ ತೆಗೆದುಕೊಂಡು ಹೋಗಬೇಡಿ. ಯಾವ ಜನರನ್ನು ನಿಯಂತ್ರಣ ಮಾಡಲು ಸಾಧ್ಯವಾಗುವುದಿಲ್ಲವೋ, ಆ ರೀತಿಯ ಜನರ ಒತ್ತಡವನ್ನು ತೆಗೆದುಕೊಳ್ಳಬೇಡಿ.
ಇದನ್ನು ಓದಿ: How to Change Your Life in 30 Daysಮನುಷ್ಯನ ಮೆದುಳು ಒಂದೇ ರೀತಿ ಇರುತ್ತದೆ ಎಂದು ಶಾಲೆಯಲ್ಲಿ ತಿಳಿಸಿದ್ದರೂ, ಆದರೆ ಈ ಮಾಹಿತಿಯು ತಪ್ಪಾಗಿದೆ. ಅಧಿಕ ಸಂಶೋಧನೆಯ ನಂತರ ಪ್ರತಿಯೊಂದು ವ್ಯಕ್ತಿಯ ಮೆದುಳಿನ ತಾರು(wireing) ವಿಭಿನ್ನವಾಗಿರುತ್ತದೆ ಎಂದು ತಿಳಿದಿದೆ. ನಾವು ನಮ್ಮ ಮೆದುಳನ್ನು ಅಭಿವೃದ್ಧಿ(develop) ಮಾಡಿಕೊಳ್ಳಬಹುದು. ಆದರೆ ಅದು ಇತರರ ರೀತಿ ಸಮವಿರಲು ಸಾಧ್ಯವಿಲ್ಲ. ಇಬ್ಬರು ಅವಳಿ ಮಕ್ಕಳ ಮೆದುಳು ಕೂಡ ಸಮವಿರುವುದಿಲ್ಲ.
ವಿಭಿನ್ನ ಮೆದುಳಿನ ವೈರಿಂಗ್ ಅನ್ನು ನಮ್ಮ ಶಿಕ್ಷಣ ಪದ್ಧತಿ ದರ್ಜೆಯ ವ್ಯವಸ್ಥೆಯ(grade system) ಮೂಲಕ ಬದಲಿಸಿದೆ. ಅಲ್ಲಿ ನಮ್ಮ ಬುದ್ಧಿವಂತಿಕೆಯನ್ನು ಪರೀಕ್ಷೆಯಲ್ಲಿ ಬರುವ ಅಂಕ ಮತ್ತು ಶೇಕಡಾವಾರುವಿನಿಂದ(percentage) ಪರಿಗಣಿಸಲಾಗುತ್ತದೆ. ಆದರೆ ಪ್ರತಿಯೊಂದು ವಿದ್ಯಾರ್ಥಿ, ಉದ್ಯೋಗಿ, ಗ್ರಾಹಕರ ಮೆದುಳು ವಿಭಿನ್ನವಾಗಿರುತ್ತದೆ. ಇದರಿಂದಲೇ ಅಮೆಜಾನ್(amazon) ಜಗತ್ತಿನಾದ್ಯಂತ ಕೋಟಿಗಟ್ಟಲೆ ಜನರ ಮಾಹಿತಿಯನ್ನು ತಿಳಿದುಕೊಂಡು ಯಶಸ್ವಿ ಕಂಪನಿಯಾಗಿದೆ. ಇದರಿಂದಲೇ ನಾವು ಒಮ್ಮೆ ಒಂದು ವಸ್ತುವನ್ನು ಅಮೆಜಾನ್ ಇಲ್ಲ ಇತರ ವೆಬ್ಸೈಟ್ನಲ್ಲಿ ನೋಡಿದರೆ, ಆ ವಸ್ತುವು ನಮಗೆ ಎಲ್ಲಾ ಸಾಮಾಜಿಕ ಮಧ್ಯಮದಲ್ಲಿ ಕಾಣಸಿಗುತ್ತದೆ.
ನಾವು ಕೇವಲ ನಮ್ಮ ಆಸಕ್ತಿ, ಲಾಭ, ಭಾವನೆ ಇಲ್ಲ ಸಂಸ್ಕೃತಿಯಿಂದ ಹೊಂದಿಸಲ್ಪಟ್ಟ ವಸ್ತುಗಳ ಮೇಲೆ ಗಮನಹರಿಸುತ್ತೇವೆ. ಇದರಲ್ಲಿ ನೀವು ಯಾರು ಎಂಬ ವಿಷಯ ಬರುವುದಿಲ್ಲ. ನಿಮ್ಮ ಮೆದುಳು ಜಾಗೃತ(consious) ಇಲ್ಲ ಅಜಾಗೃತವಾಗಿ(subconsious) ಈ ಪ್ರಶ್ನೆಗಳ ಮೇಲೆ ಗಮನ ಹರಿಸುತ್ತದೆ. ಉದಾಹರಣೆಗೆ, "ನಾನು ಇದನ್ನು ತಿನ್ನಬಹುದೇ?", "ಇದು ನನ್ನನ್ನು ತಿನ್ನುತ್ತದೆಯೇ?", "ನಾನು ಸಂಬಂಧವನ್ನು ಬೆಳೆಸಬಹುದೇ?", "ನಾನು ಇವನನ್ನು ನೋಡಿದ್ದೇನೆ?", ಹೀಗೆ ಆಸಕ್ತಿ ಇಲ್ಲ ಕಾರಣಗಳನ್ನು ಹುಡುಕುತ್ತದೆ. ನಮ್ಮ ಮೆದುಳು ಬಹುಕಾರ್ಯಕಾಗಿ ಆಗಿಲ್ಲ. ಆದರೂ ಶಾಲೆ ಮತ್ತು ಕಚೇರಿಯಲ್ಲಿ ಬಹುಕಾರ್ಯಗಳನ್ನು ಮಾಡಲು ಪ್ರೋತ್ಸಾಹಿಸುತ್ತಾರೆ. ಬಹುಕಾರ್ಯ ನಮ್ಮ ತಪ್ಪನ್ನು 50ರಷ್ಟು ಹೆಚ್ಚಿಸುತ್ತದೆ.
ಇದನ್ನು ಓದಿ: "Secrets of the Millionaire Mind" ಪುಸ್ತಕದ ಸಾರಾಂಶನಮ್ಮ ಮೆದುಳು ಕೆಲವು ಪ್ರಮುಖ ವಿಷಯಗಳನ್ನು ಮಾತ್ರ ಸಂಗ್ರಹ ಮಾಡಿಕೊಂಡಿರುತ್ತದೆ. ಉಳಿದ ಪ್ರಮುಖ ವಿಷಯಗಳನ್ನು ನಮ್ಮ ಅಲ್ಪಾವಧಿಯ ಸ್ಮರಣೆ(short term memory) ಅಳಿಸಿ ಹಾಕುತ್ತದೆ. ಹೀಗಾಗಿಯೇ ದೃಷ್ಟಿ ಫಲಕ(vision board), ಗುರಿಗಳನ್ನು ಬರೆಯುವುದು ನಮ್ಮ ಮೆದುಳಿಗೆ ಆ ವಿಷಯಗಳು ಪ್ರಮುಖ ಎಂದು ತಿಳಿಸಲು ಮುಖ್ಯವಾಗಿದೆ. ನಿಮಗೆ ಯಾವುದನ್ನಾದರೂ ನೆನಪಿಸಿಕೊಳ್ಳಬೇಕಿದರೆ ಇಲ್ಲ ಕಲಿತು ನೆನಪಿಸಿಕೊಳ್ಳಬೇಕಿದರೆ, ಅದನ್ನು ಸ್ವಲ್ಪ ಸಮಯದ ನಂತರ ಪುನರಾವರ್ತಿಸುತ್ತೀರಿ. ಇದರಿಂದ ಅಭ್ಯಾಸವಾಗಿ ಪದೇ ಪದೇ ಒಂದೇ ವಿಷಯದ ಮೇಲೆ ಗಮನ ಹರಿಸಬಹುದು.
ನಮ್ಮ ವಾಸನೆಯ(smell) ಸಂವೇದನೆ ಪಾಪ್ ಕಾನ್ ವಾಸನೆಯನ್ನು ಗುರುತಿಸಿದ ತಕ್ಷಣ ಚಿತ್ರಮಂದಿರವನ್ನು ನೆನಪಿಸುತ್ತದೆ. ಮಳೆ ಮತ್ತು ಹೂವಿನ ಸುವಾಸನೆ ನಮಗೆ ಒಬ್ಬ ವ್ಯಕ್ತಿ, ಸನ್ನಿವೇಶ ಇಲ್ಲ ಸ್ಥಳವನ್ನು ನೆನಪಿಸುತ್ತದೆ. ನಿಮಗೆ ಓದುವಾಗ, ಇಲ್ಲ ಕೆಲಸ ಮಾಡುವಾಗ ಏನಾದರೂ ನೆನಪಿಟ್ಟುಕೊಳ್ಳಬೇಕಿದರೆ ಅದರೊಂದಿಗೆ ಸುವಾಸನೆ ಇಲ್ಲ ಸುಗಂಧವನ್ನು(fragnence) ಜೋಡಿಸಿ. ಅದು ಪರ್ಫ್ಯೂಮ್ ಅಥವಾ ರೂಮ್ ಕ್ಯಾಂಡಲ್ಸ್ ಆಗಿರಬಹುದು. ನೀವು ಆ ಸುಗಂಧವನ್ನು ತೆಗೆದುಕೊಂಡಾಗ ಹಿಂದೆ ನಡೆದ ಘಟನೆಗಳು ನೆನಪಿಗೆ ಬರುತ್ತದೆ. ಇದರ ಅವಕಾಶ 10 ರಿಂದ 15 ರಷ್ಟು ಇದೆ.
ಇದನ್ನು ಓದಿ: ಯಶಸ್ವಿಯಾಗಲು ಸ್ವಯಂ ಶಿಸ್ತಿನ 4 ಅಭ್ಯಾಸಗಳುನಾವು ಕೇಳಿದ ಇಲ್ಲ ಓದಿದ ವಿಷಯಗಳಿಗಿಂತ ಕಣ್ಣಾರೆ ನೋಡಿದ ವಿಷಯಗಳನ್ನು ಹೆಚ್ಚು ನೆನಪಿನಲಿಟ್ಟುಕೊಂಡಿರುತ್ತೇವೆ. ಒಂದು ಬಯೋಗ್ರಾಫಿ ಪುಸ್ತಕವನ್ನು ಓದಿದ ನಂತರ ಯಾವ ಪೇಜಿನಲ್ಲಿ ಏನಿದೆ ಎಂದು ನೆನಪಿರುವುದಿಲ್ಲ. ಅದೇ ಬಯೋಗ್ರಫಿ ಮೇಲೆ ಯಾವುದಾದರೂ ಸಿನಿಮಾವಿದ್ದರೆ, ಆ ಸಿನಿಮಾದ ದೃಶ್ಯ ನಿಮಗೆ ಚೆನ್ನಾಗಿ ನೆನಪಿರುತ್ತದೆ. ಏಕೆಂದರೆ ನಾವು ಇತಿಹಾಸದಿಂದಲೂ ಪ್ರಾಣಿ, ಭಯ ಇತರ ಮನುಷ್ಯರನ್ನು ನೋಡಿಯೇ ನಮಗೆ ಯಾವುದು ಸರಿ, ಯಾವುದು ಸರಿ ಇಲ್ಲ ಎಂಬುದನ್ನು ತಿಳಿದಿದ್ದೇವೆ. ನಂತರ ಅದೇ ದೃಷ್ಟಿ ಶಕ್ತಿಯನ್ನು ನಾವು ಕಲೆಗೆ(art) ಬದಲಾಯಿಸಿದೆವು. ಇದರಿಂದ ನಾವು ಎಲ್ಲವನ್ನು ದೃಷ್ಟಿಯಲ್ಲಿ ನೆನಪಿಟ್ಟುಕೊಳ್ಳಬಹುದು.
ಅನೇಕ ಸಂಗೀತ ಸಂಯೋಜಕರನ್ನು(music composer) ನೋಡಿ ಲೇಖಕರು ಸಂಗೀತವನ್ನು ಕೇಳುವುದು ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂಬುದನ್ನು ತಿಳಿದುಕೊಂಡರು. ಸಂಗೀತ ನಮ್ಮ ಸ್ಮರಣೆ ಮತ್ತು ಕೌಶಲ್ಯಗಳನ್ನು ಚೂಪು ಮಾಡುತ್ತದೆ. ಸಂಗೀತವನ್ನು ಸಂಯೋಜಿಸುವುದು ನಮ್ಮ ಗಣಿತ, ಓದುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸಂಗೀತವನ್ನು ಕೇಳುವುದು ನಮ್ಮ ಮನಸ್ಥಿತಿ ಮತ್ತು ಶಬ್ದಕೋಶವನ್ನು(vocabulary) ಸುಧಾರಿಸುತ್ತದೆ. ಇದು ವಯಸ್ಸಿನಿಂದ ವಯಸ್ಸಿಗೆ ಮತ್ತು ಆಸಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ.
ಇದನ್ನು ಓದಿ: ಅನ್‌ಫಕ್ ಯುವರ್ಸೆಲ್ಫ್ - ನಿಮ್ಮ ಬದುಕನ್ನು ಬದಲಾಯಿಸುವ ಪುಸ್ತಕಒಮ್ಮೆ ಸಂಶೋಧಕ ಲ್ಯಾರಿ ಕ್ಯಾಹೆಲ್(larry cahel) ಪುರುಷ ಮತ್ತು ಮಹಿಳೆಯರಿಗೆ, ಭಯಾನಕ ಚಲನಚಿತ್ರವನ್ನು(horrer movie) ತೋರಿಸುತ್ತಾರೆ. ಆಗ ಪುರುಷರ ಮೆದುಳಿನಲ್ಲಿ ಬಲ ಗೋಳಾರ್ಧ(right hemispher) ಕೆಲಸ ಮಾಡುತ್ತಿತ್ತು ಮತ್ತು ಎಡ ಭಾಗ ಶಾಂತವಾಗಿತು. ಅದೇ ಮಹಿಳೆಯರಲ್ಲಿ ಎಡ ಗೋಳಾರ್ಧ(left hemispher) ಕೆಲಸ ಮಾಡುತ್ತಿತ್ತು ಮತ್ತು ಬಲ ಭಾಗ ಶಾಂತವಾಗಿತು. ಇದರಿಂದ ಅವರಿಗೆ ಪುರುಷ ಮತ್ತು ಮಹಿಳೆಯರು ಯೋಚಿಸುವುದು, ಕೆಲಸ ಮಾಡುವುದು ತುಂಬಾ ವಿಭಿನ್ನವಾಗಿರುತ್ತದೆ ಎಂದು ತಿಳಿದುಕೊಂಡರು.
ಈ ರೀತಿಯಾಗಿ ಅಧಿಕ ಸಂಶೋಧನೆ ಮಾಡಿದ ನಂತರ ಮಾನಸಿಕ ಆರೋಗ್ಯ ವೃತ್ತಿಯವರಿಗೆ(mental health profession) ಮಹಿಳೆಯರು ಪುರುಷರಿಗಿಂತ ಅಧಿಕ ಖಿನ್ನತೆ ಮತ್ತು ಮಾನಸಿಕ ಒತ್ತಡವನ್ನು(nervous) ಅನುಭವಿಸುವ ಬಗ್ಗೆ ತಿಳಿಯುತ್ತದೆ ಮತ್ತು ಅವರು ಬೇಸರವಾದಾಗ ಅಧಿಕ ಗಾಬರಿಯನ್ನು ಅನುಭವಿಸುತ್ತಾರೆ. ಅದೇ ಪುರುಷರು ಬೇಸರವಾದಾಗ ಸಾಮಾಜಿಕ ವಿರೋಧಿ(anti social) ಆಗುತ್ತಾರೆ. ಪುರುಷರು ಮತ್ತು ಮಹಿಳೆಯರ ಭಾವನೆಗಳನ್ನು ನಿರ್ವಹಿಸುವ ರೀತಿ ವಿಭಿನ್ನವಾಗಿರುತ್ತದೆ.
ಏನನ್ನಾದರೂ ಹೊಸದನ್ನು ಅನ್ವೇಷಣೆ ಮಾಡುವ ಆಸೆಯು ನಮ್ಮನ್ನು ಒಬ್ಬಂಟಿನಾಗಿ ಮಾಡುವುದಿಲ್ಲ. ನಾವು ಅಧಿಕ ಸಮಯ ನಮ್ಮ ಕಚೇರಿಯಲ್ಲಿ ಕಳೆಯುತ್ತೇವೆ. ಆದರೆ ನಾವು ಮನುಷ್ಯರು ಹೊಸದನ್ನು ಹುಡುಕಿ ಅನ್ವೇಷಣೆ ಮಾಡಲು ಹುಟ್ಟಿದ್ದೇವೆ. ನಾವು ಬಾಲ್ಯದ ಸಮಯದಲ್ಲಿ ಅಧಿಕ ಕುತೂಹಲಕಾರಿ ಆಗಿರುತ್ತೇವೆ. ಪ್ರತಿಯೊಂದು ವಸ್ತುವನ್ನು ತೆಗೆದು ಅದರ ಬಗ್ಗೆ ತಿಳಿದುಕೊಳ್ಳುತ್ತಿದ್ದೇವು. ಇದು ವಯಸ್ಸಾದಂತೆ ಕಡಿಮೆಯಾಗುತ್ತದೆ. ಗೂಗಲ್ ತನ್ನ ಉದ್ಯೋಗಿಗಳಿಗೆ ಅನ್ವೇಷಣೆ ಮಾಡಲು 20% ನಷ್ಟು ಸಮಯವನ್ನು ನೀಡುತ್ತದೆ. ಇದುವೇ ಜಿಮೈಲ್(gmail) ಮತ್ತು ಗೂಗಲ್ ನ್ಯೂಸ್(google news) ಅನ್ನು ಆವಿಷ್ಕಾರಿಸಿತು. ನಾವು ಮಕ್ಕಳ ರೀತಿಯೇ ವಿಭಿನ್ನವಾದದ್ದನ್ನು ಅನ್ವೇಷಣೆ ಇಲ್ಲ ಪ್ರಯತ್ನಿಸುತ್ತಿರಬೇಕು.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
Info Mind 1219
Info Mind 230
Info Mind 7286
See all comments...