Website designed by @coders.knowledge.

5 Steps to Improve your Focus in 7 days | ಗಮನವನ್ನು ಸುಧಾರಿಸಲು 5 ಹಂತಗಳು

Watch Video

ಇಂದಿನ ಸಮಯದಲ್ಲಿ ಗಮನ ಹರಿಸುವ ಸಮಯ(focus time) ಕಡಿಮೆ ಆಗಿರುವುದು ದೊಡ್ಡ ಸಮಸ್ಯೆಯಾಗಿದೆ. ಆದರೆ ಈ ಲೇಖನ ನಿಮ್ಮ ಗಮನವನ್ನು 98% ತನಕ ಹೆಚ್ಚಿಸುತ್ತದೆ. ಆಗಿದ್ದರೆ ನಿಮ್ಮ ಗಮನವೂ ಎಷ್ಟು ತೀಕ್ಷ್ಣವಿದೆ ಎಂಬುದನ್ನು ಪರೀಕ್ಷೆ ಮಾಡೋಣ.

ನಿಮ್ಮ ಪರದೆಯ ಮೇಲೆ 4 ಚುಕ್ಕೆಗಳು ಕಾಣುತ್ತಿದೆ. ಮುಂದಿನ 15 ಸೆಕೆಂಡ್ ನೀವು ಮಧ್ಯದ ಚುಕ್ಕೆಯ ಮೇಲೆ ಮಾತ್ರ ಗಮನ ಹರಿಸಿ. ನಿಮ್ಮ ಗಮನದ ಶಕ್ತಿ ತುಂಬಾ ಚೆನ್ನಾಗಿದ್ದರೆ ಉಳಿದ 3 ಚುಕ್ಕೆಗಳು ಕಣ್ಮರೆಯಾಗುತ್ತದೆ.

ಎಷ್ಟು ಚುಕ್ಕೆಗಳು ಕಣ್ಮರೆಯಾಗಿತ್ತು. ಒಂದು ವೇಳೆ ಎಲ್ಲಾ ಚುಕ್ಕೆಗಳು ಕಣ್ಮರೆಯಾಗಿದ್ದರೆ ಅಭಿನಂದನೆಗಳು, ನೀವು ನಿಮ್ಮ ಗಮನದ ಮಟ್ಟ ಈಗಾಗಲೇ ತುಂಬಾ ಚೆನ್ನಾಗಿದೆ. ಒಂದು ವೇಳೆ 2 ಅಥವಾ 3 ಚುಕ್ಕೆಗಳು ಕಣ್ಮರೆಯಾಗಿಲ್ಲದಿದ್ದರೆ ನಿಮ್ಮ ಗಮನ ತುಂಬಾ ಕೆಟ್ಟದಾಗಿದೆ. ಈ ವಿಷಯದಲ್ಲಿ ನೀವು ಒಬ್ಬರೇ ಸಿಲುಕಿಲ್ಲ. ಈಗಿನ ಸಮಯದಲ್ಲಿ ಈ ಸಮಸ್ಯೆ ಎಲ್ಲರಿಗೂ ಇದೆ. ವಿದ್ಯಾರ್ಥಿಗಳು(students), ವೃತ್ತಿಪರರು(professionals) ಮತ್ತು ಉದ್ಯಮಿಗಳು(entrepreneur) ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿಮ್ಮ ಪೂರ್ತಿ ಪರಿಸರ ಗೊಂದಲಗಳಿಂದ(distractions) ಕೂಡಿದೆ.

ಇನ್ಸ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ಶಾಟ್ಸ್(shorts), ನೋಟಿಫಿಕೇಶನ್ ಎಲ್ಲವೂ ಸೇರಿ ನಿಮ್ಮ ಮೆದುಳನ್ನು ಅತಿಕ್ರಮಣ(hack) ಮಾಡುತ್ತಿದೆ. ಆದರೆ ಖುಷಿ ವಿಷಯವೆನೆಂದರೆ, ನರವಿಜ್ಞಾನದಿಂದ(neuroscience) ಇದನ್ನು ಸರಿಪಡಿಸಬಹುದು. ನೀವು ನಿಮ್ಮ ಗಮನ ಮತ್ತು ಏಕಾಗ್ರತಾ ಶಕ್ತಿಯನ್ನು(concentration power) ಮತ್ತೊಮ್ಮೆ ತರಬೇತಿ ಕೊಡುಬಹುದು(train).

ಏಕೆಂದರೆ ಗಮನವೆನ್ನುವುದು(attention) ಒಂದು ಸ್ನಾಯುವಿನ(muscle) ರೀತಿ ಆಗಿದೆ. ನೀವು ಅದನ್ನು ಎಷ್ಟು ಸಮಯ ತರಬೇತಿ ನೀಡುವಿರೋ ಅದು ಅಷ್ಟು ಗಟ್ಟಿಯಾಗುತ್ತದೆ. ನೀವು ಇದನ್ನು ನಿರ್ಲಕ್ಷ(ignore) ಮಾಡುತ್ತಿದ್ದರೆ ಅದು ನಿಧಾನವಾಗಿ ದುರ್ಬಲವಾಗುತ್ತದೆ.

ಗಮನ ಮತ್ತು ಏಕಾಗ್ರತಾ ಶಕ್ತಿಯನ್ನು ಹೆಚ್ಚಿಸಲು ಒಂದು ಮೆಟಾಕಾಗ್ನಿಟಿವ್ ಥೆರಪಿ(metacognitive therapy) ಬಳಸಲಾಗುತ್ತದೆ. ಇದನ್ನು att ಎಂದು ಕರೆಯಲಾಗುತ್ತದೆ, ಅಂದರೆ ಗಮನ ತರಬೇತಿ ತಂತ್ರವಾಗಿದೆ(attention training technique). ಇದರಿಂದ ಕೆಲವೇ ದಿನಗಳಲ್ಲಿ ನೀವು ನಿಮ್ಮ ಗಮನದ ಮಟ್ಟವನ್ನು 10 ರಷ್ಟು ಹೆಚ್ಚಿಸಬಹುದು. ಈ ತಂತ್ರವನ್ನು ಬಳಸಿಕೊಂಡು ನಾವು 5 ಹಂತದ ವ್ಯವಸ್ಥೆಯನ್ನು ಹಂಚಿಕೊಳ್ಳಲಿದ್ದೇವೆ. ಈ ಸಿಸ್ಟಮ್ ಹೆಸರು FOCUS ಆಗಿದೆ. ಇದರಲ್ಲಿನ ಕೊನೆಯ ಹಂತ ನೋಡಲು ಮರೆಯಬೇಡಿ. ಏಕೆಂದರೆ ಅದುವೇ ನೀವು ಗಮನ ಹರಿಸದಿರಲು ಮುಖ್ಯ ಕಾರಣವಾಗಿದೆ. ನೀವು ಇದನ್ನು ಮುಂದಿನ 7 ದಿನ ಫಾಲೋ ಮಾಡಿ ಮತ್ತು ನಂತರ ಆ ಚುಕ್ಕೆಯ ಪರೀಕ್ಷೆಯನ್ನು ಮತ್ತೆ ಮಾಡಿ, ಫಲಿತಾಂಶವನ್ನು ಪರಿಶೀಲಿಸಿ. ಆಗ ನಿಮಗೆ ನಿಮ್ಮ ಗಮನ ಎಷ್ಟು ಬೆಳೆದಿದೆ ಎಂಬುದು ತಿಳಿಯುತ್ತದೆ.

ಇದನ್ನು ಓದಿ: ನಿಮ್ಮ ಮೆದುಳು ಮೌನವಾಗಿ ಸಾಯುತ್ತಿದೆಯೇ?

1. Fix your eyes

how to improve eye concentration in kannada
eyes and concentration

ಗಮನದ ಸಂಪರ್ಕ ಮೊದಲಿಗೆ ನಿಮ್ಮ ಕಣ್ಣಿನಿಂದಲೇ ಪ್ರಾರಂಭಗೊಳ್ಳುತ್ತದೆ. ನಮ್ಮ ಕಣ್ಣು ಬೇಕಿರುವ ಕಡೆ ಗಮನ ಹರಿಸಿದಾಗ ಮೆದುಳಿಗೆ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ಅಧ್ಯಯನ ತಿಳಿದಿದೆ. ಅಂದರೆ ಮೊದಲಿಗೆ ಯಾವುದರ ಮೇಲೆ ಗಮನ ಹರಿಸಬೇಕು ಎಂಬುದನ್ನು ಕಣ್ಣುಗಳು ನಿರ್ಧಾರ ಮಾಡುತ್ತದೆ, ಇದರ ನಂತರ ಮೆದುಳು ಸಕ್ರಿಯವಾಗುತ್ತದೆ.

ಇಂದಿನ ಸಮಯದಲ್ಲಿ ನಮ್ಮ ಕಣ್ಣು ಪ್ರತಿ ಸೆಕೆಂಡ್ ಆಚೆ ಈಚೆ ನೋಡುತ್ತಿರುತ್ತದೆ. ಫೋನ್ ಪರದೆ, ನೋಟಿಫಿಕೇಶನ್ ಇವುಗಳಿಂದ ನಮ್ಮ ಗಮನ ಹಾಳಾಗುತ್ತದೆ. ಹೀಗಾಗಿ ಮೊದಲ ಪರಿಹಾರವೆನೆಂದರೆ, ನೀವು ನಿಮ್ಮ ಕಣ್ಣುಗಳನ್ನು ತರಬೇತಿ ಮಾಡಬೇಕು. ಇದನ್ನು ನೋಟದ ಸ್ಥಿರೀಕರಣ ಡ್ರಿಲ್(gaze fixation drill) ಎಂದು ಕರೆಯುತ್ತಾರೆ. ಅಮೇರಿಕದ ಸೈನ್ಯ(us military) ಕೂಡ ಇದನ್ನು ಅವರ ಸೈನಿಕರಿಗೆ ಅಭ್ಯಾಸ ಮಾಡಿಸುತ್ತಾರೆ. ಇದರಿಂದ ಸೈನಿಕರು ಯುದ್ಧಭೂಮಿಯಲ್ಲಿ(battlefield) ಲೇಸರ್ ತೀಕ್ಷ್ಣವಾದ ಗಮನವನ್ನು(laser sharp focus) ನಿರ್ವಹಿಸುತ್ತಾರೆ. ಇದರ ಮೇಲೆ ನಮ್ಮ ಭಾರತದ ವೇದಗಳನ್ನು ತಿಳಿಸಲಾಗಿದೆ. ಅದೆಂದರೆ ತ್ರತಕ್ಕರಿಯಾ(tratakkriya). ಇದರಲ್ಲಿ ಒಬ್ಬ ವ್ಯಕ್ತಿಯು ಆಚೆ ಈಚೆ ನೋಡದೆ ಉರಿಯುತ್ತಿರುವ ಮೊಂಬತ್ತಿಯನ್ನು ನೋಡುತ್ತಾರೆ. ಇದರಿಂದ ಅವರ ಗಮನ ತೀಕ್ಷ್ಣವಾಗುತ್ತದೆ.

ನೀವು ಇದರಿಂದ ಏನಾಗುತ್ತದೆ ಎಂದು ಯೋಚಿಸುತ್ತಿರಬಹುದು. ಸಂಶೋಧನೆಯ ಪ್ರಕಾರ ಹೆಚ್ಚಿನ ಸಾಂದ್ರತೆ(highly concentrated) ಇರುವವರು ಒಂದು ನಿಮಿಷದಲ್ಲಿ 7 ಬಾರಿ ಕಣ್ಣು ಮಿಟುಕಿಸುತ್ತಾರೆ. ಯಾರು ಸುಲಭವಾಗಿ ಗೊಂದಲಕೊಳ್ಳಗಾಗುತ್ತಾರೋ ಅವರು ಒಂದು ನಿಮಿಷದಲ್ಲಿ 20 ಬಾರಿ ಕಣ್ಣು ಮಿಟುಕಿಸುತ್ತಾರೆ. ಹೀಗಾಗಿ ಕಣ್ಣುಗಳನ್ನು ನಿಯಂತ್ರಣ ಮಾಡುವುದೇ ಗಮನದ ಮೊದಲ ಕೀಲಿಯಾಗಿದೆ(key). ಪ್ರಾಯೋಗಿಕವಾಗಿ ಇದನ್ನು ಮಾಡುವುದು ತುಂಬಾ ಸುಲಭವಾಗಿದೆ. ಪ್ರತಿದಿನ ಗಮನ ಹರಿಸಲು ಒಂದು ವಸ್ತುವನ್ನು ಆಯ್ಕೆ ಮಾಡಿ. ಅದು ಮೇಣದಬತ್ತಿಯ ಜ್ವಾಲೆ(candle flame), ಗೋಡೆಯ ಮೇಲಿನ ಚುಕ್ಕೆ ಯಾವುದೇ ಆದರೂ ನಿರಂತರವಾಗಿ ನೋಡುತ್ತೀರಿ. ಕಣ್ಣು ಮೀಟುಕಿಸಬಹುದು ಆದರೆ ಆಚೆ ಈಚೆ ನೋಡಬೇಡಿ. ಇದರಿಂದ 7 ದಿನದಲ್ಲಿ ನಿಮ್ಮ ಗಮನ 30 ರಿಂದ 40% ಸುಧಾರಿಸುವುದನ್ನು ನೀವು ಅನುಭವಿಸುತ್ತೀರಾ.

ಇದನ್ನು ಓದಿ: ಕೇಂದ್ರೀಕೃತ ಯಶಸ್ಸನ್ನು ಸಾಧಿಸಲು Deep Work ನ ಅಗತ್ಯ ನಿಯಮಗಳು

2. Oxygenate

does oxygen help concentration in kannada
oxygenate

ನೀವು ಯಾವುದೇ ಕೆಲಸ ಇಲ್ಲ ಓದಲು ಕುಳಿತಾಗ, "ಇದನ್ನು ಮಾಡಲು ಮನಸಾಗುತ್ತಿಲ್ಲ. ಗಮನ ಹರಿಸಲು ಸಾಧ್ಯವಾಗುತ್ತಿಲ್ಲ, ಮೆದುಳು ಕೆಲಸ ಮಾಡುತ್ತಿಲ್ಲ, ಶಕ್ತಿ ಕಡಿಮೆ ಇದೆ ಎನಿಸುತ್ತದೆ, ನಿದ್ದೆ ಬರುತ್ತದೆ" ಅನಿಸುವುದು. ಈ ರೀತಿಯ ಸಮಯದಲ್ಲಿ ಜನರು ಕಾಫಿ, ಟೀ ಕುಡಿಯುತ್ತಾರೆ. ಇಲ್ಲ ಅವರ ಗಮನವನ್ನು ಮರುಪೂರಣ(recharge) ಮಾಡುವುದನ್ನು ಒಳಗೆಳೆದುಕೊಳ್ಳುತ್ತಾರೆ(inhale). ಅದುವೇ ಆಮ್ಲಜನಕ(oxygen).

ನರವಿಜ್ಞಾನಿಗಳ(neurologist) ಪ್ರಕಾರ ನೀವು ಆಳವಾದ ಉಸಿರಾಟ(deep breathing) ತೆಗೆದುಕೊಂಡಾಗ ಮೆದುಳಿನಲ್ಲಿ ಆಮ್ಲಜನಕದ ಮಟ್ಟ ತಕ್ಷಣವೇ ಹೆಚ್ಚಾಗುತ್ತದೆ. ಆಳವಾದ ಉಸಿರಾಟದಿಂದಾಗಿ ಪ್ಯಾರಸೈಪಥೆಟಿಕ್ ನರಮಂಡಲ(parasympathetic nervous system) ಸಕ್ರಿಯವಾಗುತ್ತದೆ. ನಮ್ಮ ನರಮಂಡಳದಲ್ಲಿ 2 ರೀತಿ ಇದೆ. ಅವೆಂದರೆ ಸಹಾನುಭೂತಿಯ ನರಮಂಡಲ(sympathetic nervous system), ಇದನ್ನು ಹೋರಾಟ ಅಥವಾ ಹಾರಾಟದ ಮೋಡ್(fight or flight mode) ಎನ್ನುತ್ತಾರೆ. ನೀವು ಅಪಾಯದಲ್ಲಿರುವಾಗ ಎಂದು ಭಾವಿಸಿದಾಗ ಸಹಾನುಭೂತಿಯ ನರಮಂಡಲ ಸಕ್ರಿಯವಾಗುತ್ತದೆ. ಇದರಿಂದ ಹೃದಯ ಬಡಿತ ಹೆಚ್ಚುತ್ತದೆ ಮತ್ತು ಮೆದುಳು ಬದುಕುಳಿಯುವ ಬಗ್ಗೆ ಮಾತ್ರ ಯೋಚಿಸುತ್ತದೆ. ಇನ್ನು ಪ್ಯಾರಸೈಪಥೆಟಿಕ್ ನರಮಂಡಲ ಇದು ವಿಶ್ರಾಂತಿ ಮತ್ತು ಜೀರ್ಣ ಮೋಡ್(rest & digest mode) ಆಗಿದೆ. ಇದು ಸಕ್ರಿಯವಾದಾಗ ನಿಮ್ಮ ಹೃದಯ ಬಡಿತ(heart rate) ಸಾಮಾನ್ಯವಿರುತ್ತದೆ, ದೇಹ ಶಾಂತವಾಗುತ್ತದೆ(relax) ಮತ್ತು ಬಹಳ ಮುಖ್ಯವಾಗಿ ಗಮನ ಮತ್ತು ನಿರ್ಧಾರಕ್ಕೆ ಮುಖ್ಯವಾದ ಪ್ರಿಫ್ರಂಟಲ್ ಕಾರ್ಟೆಕ್ಸ್(prefrontal cortex) ಪೂರ್ಣ ಶಕ್ತಿಯಲ್ಲಿ ಕೆಲಸ ಮಾಡುತ್ತದೆ. ಹೀಗಾಗಿ ನೌಕಾ ಮುದ್ರೆ(navy seal) ಎಲ್ಲಿಯಾದರು ದಾಳಿ ಮಾಡುವ ಮೊದಲು ಒಂದು ತಂತ್ರವನ್ನು ಬಳಸುತ್ತಾರೆ. ಇದರಿಂದ ಅವರ ಗಮನ ವಿಪರೀತವಾಗಿ ತೀಕ್ಷ್ಣವಾಗುತ್ತದೆ. ಇದನ್ನು ಅವರು ಬಾಕ್ಸ್ ಉಸಿರಾಟವೆನ್ನುತ್ತಾರೆ(box breathing). 4 ಸೆಕೆಂಡ್ ಒಳಗೆಳೆದುಕೊಳ್ಳಿ(inhale), 4 ಸೆಕೆಂಡ್ ಹಿಡಿದುಕೊಳ್ಳಿ(hold), 4 ಸೆಕೆಂಡ್ ಹೊರಹಾಕಿ(exhale) 4 ಸೆಕೆಂಡ್ ಹಿಡಿದುಕೊಳ್ಳಿ. ನೀವು ಯಾವುದೇ ಕೆಲಸ ಇಲ್ಲ ಓದಲು ಕುಳಿತಾಗ 2 ನಿಮಿಷ ಈ ವ್ಯಾಯಾಮವನ್ನು ಮಾಡಿ. ತಕ್ಷಣವೇ(instant) ವ್ಯತ್ಯಾಸವನ್ನು ಅನುಭವಿಸುವಿರಾ. ಆದರೆ ಪ್ರೆಶ್ನೆ ಏನೆಂದರೆ, ನೀವು ಈ ಗಮನವನ್ನು ಎಲ್ಲಿಯವರೆಗೆ ಉಳಿಸಿಕೊಳ್ಳುವಿರಿ(sustain).

ಇದನ್ನು ಓದಿ: ರಾಬರ್ಟ್ ಗ್ರೀನ್ ಅವರ "The 48 Laws of Power" ಪುಸ್ತಕದ ಸಾರಾಂಶ

3. Control the pace

what is the main purpose of the control pace in kannada
control pace

ಜಿಮ್ನಲ್ಲಿ ಆರಂಭಿಗರು(beginner) ಒಮ್ಮೆಲೇ 100 ಕೆಜಿ ಎತ್ತಿದ್ದರೆ 2 ದಿನದಲ್ಲೇ ಆತನ ಸೊಂಟ ಮುರಿಯುತ್ತದೆ. ಅದೇ ವ್ಯಕ್ತಿ ಹಗುರವಾದದಿಂದ(light weight) ಪ್ರಾರಂಭಿಸಿ, ನಿಧಾನವಾಗಿ ಭಾರ ಹೆಚ್ಚಿಸುತ್ತಿದ್ದರೆ, ದೇಹ ಅದಕ್ಕೆ ಅಳವಡಿಸಿಕೊಳ್ಳುತ್ತದೆ. ಗಮನ ಕೂಡ ಇದೇ ರೀತಿಯಲ್ಲಿ ಕೆಲಸ ಮಾಡುತ್ತದೆ. ಆದರೆ ನಾವು ಓದಲೂ ಇಲ್ಲ ಕೆಲಸ ಮಾಡಲು ಯೋಚಿಸಿದಾಗ ಒಮ್ಮೆಲೇ 2 ಗಂಟೆ ಗಮನ ಹರಿಸುವೆ ಎಂದು ಯೋಚಿಸುವೆವು. ಇದುವೇ ನಾವೆಲ್ಲರೂ ಮಾಡುವ ದೊಡ್ಡ ತಪ್ಪಾಗಿದೆ.

ನಾವು ಮೆದುಳನ್ನು ನಿರಂತರವಾಗಿ ಗಮನ ಹರಿಸಬಹುದಾದ ಯಂತ್ರವೆಂದುಕೊಳ್ಳುತ್ತೇವೆ(machine). ಆದರೆ ನಮ್ಮ ಮೆದುಳು ಕೂಡ ಒಂದು ಲಯವನ್ನು(rhythm) ಅನುಸರಿಸುತ್ತದೆ. ನಿದ್ರೆ ಸಂಶೋಧಕರಾದ ನಥಾನಿಯಲ್ ಕ್ಲೈಟ್ಮನ್(nathaniel kleitman) ಅವರು, ಒಂದು ಆವೃತ್ತಿಯನ್ನು(cycle) ಅನ್ವೇಷಿಸಿದ್ದರು. ಅದನ್ನು "ಮೂಲ ವಿಶ್ರಾಂತಿ ಚಟುವಟಿಕೆ ಚಕ್ರ" (basic rest activity cycle) ಎನ್ನುತ್ತಾರೆ. ಅಂದರೆ ದಿನದ ಸಮಯದಲ್ಲಿ ನಮ್ಮ ಮೆದುಳಿನ ಗಮನ ಮತ್ತು ಶಕ್ತಿಯ ಮಟ್ಟ 90 ನಿಮಿಷದ ಅಲೆಯಲ್ಲಿ ಬರುತ್ತದೆ. ಇದನ್ನು ಅಲ್ಟ್ರಾಡಿಯನ್ ಆವೃತ್ತಿ(ultradian cycle) ಎನ್ನುತ್ತಾರೆ. ನಮ್ಮ ನಿದ್ರೆಯ ಆವೃತ್ತಿಯ ರೀತಿಯೇ ಇದು ನಮ್ಮ ಗಮನ ಆವೃತ್ತಿಯಾಗಿರುತ್ತದೆ(attention cycle).

ಇದನ್ನು ಸಮುದ್ರದ ಅಲೆಯ ರೀತಿ ತಿಳಿಯಿರಿ. ಮೊದಲಿಗೆ ಅಲೆ ಮೇಲೆ ಬರುತ್ತದೆ, ನಿಮ್ಮ ಗಮನ ತೀಕ್ಷ್ಣ ಇರುತ್ತದೆ. ನಂತರ ನಿಧಾನವಾಗಿ ಕೆಳಗೆ ಬೀಳುತ್ತದೆ. ನೀವು ಈ ನೈಸರ್ಗಿಕ ಅಲೆಯನ್ನು(natural wave) ಅರ್ಥ ಮಾಡಿಕೊಂಡು ಕೆಲಸ ಮಾಡಿದರೆ, ಉತ್ಪಾದಕತೆ(productivity) ಸುಲಭವಾಗುತ್ತದೆ(effortless).

ಒಬ್ಬ ನರವಿಜ್ಞಾನಿಯ ಅಧ್ಯಯನದಲ್ಲಿ ಇದು ಸಾಬೀತಾಗಿದೆ. ಅದೆಂದರೆ ಪ್ರಾರಂಭದಲ್ಲಿ ನೀವು 10 ರಿಂದ 15 ನಿಮಿಷ ಆಳವಾಗಿ ಗಮನ(deep focus) ಹರಿಸಿದರೆ, ನಿಮ್ಮ ಮೆದುಳಿನ ಒಳಗೆ ಅಸೆಟೈಲ್ಕೋಲಿನ್(acetylcholine) ಮತ್ತು ನೋರ್‌ಪಿನೆಫ್ರಿನ್(norepinephrine) ಬಿಡುಗಡೆಯಾಗುತ್ತದೆ. ಇವು ಗಮನಕ್ಕೆ ಇಂಧನದ(fuel) ರೀತಿಯಾಗಿದೆ. ನೀವು ಹೆಚ್ಚು ಸಮಯ ನೀಡಿದಷ್ಟು ಈ ರಾಸಾಯನಗಳು ಪರಿಣಾಮಕಾರಿಯಾಗಿ(effective) ಕೆಲಸ ಮಾಡುತ್ತದೆ. ಹೀಗಾಗಿ 90 ನಿಮಿಷಗಳ ಆಳವಾದ ಕೆಲಸ ಅಥವಾ ಓದಿ, ನಂತರ 15 ರಿಂದ 20 ನಿಮಿಷಗಳ ವಿರಾಮ(break) ತೆಗೆದುಕೊಳ್ಳಿ. ಇಲ್ಲಿ ವಿರಾಮವೆಂದರೆ ಸ್ಕ್ರೋಲ್ ಮಾಡುವುದಲ್ಲ, ಬದಲಿಗೆ ಸ್ವಲ್ಪ ನಡೆಯಿರಿ, ನೀರು ಕುಡಿಯಿರಿ, ಸ್ಟ್ರೆಚ್ ಮಾಡಿ, ಇಲ್ಲ ಕಣ್ಣು ಮುಚ್ಚಿ 5 ನಿಮಿಷ ಉಸಿರಾಟದ ಮೇಲೆ ಗಮನ ಆರಿಸಿ. ನೀವು ವಾಪಸ್ ಬಂದಾಗ ನಿಮ್ಮ ಮೆದುಳು ರಿಚಾರ್ಜ್ ಆಗಿರುತ್ತದೆ.

ಇದನ್ನು ಓದಿ: ಜೀವನ ಸುಲಭಗೊಳಿಸುವ 12 ಮಾನಸಿಕ ಸಂಗತಿಗಳು

4. Unclutter noise

what noise helps with concentration in kannada
binaural beats

ನೀವು ಮೇಜಿನ ಮೇಲೆ ಕುಳಿತಿರುವಿರಾ ಲ್ಯಾಪ್ಟಾಪ್ ತೆರೆದಿದೆ, ಫೋನ್ ಬದಿಯಲ್ಲಿ ಮಿಟುಕಿಸುತ್ತಿದೆ, ಪುಸ್ತಕವು ಎಲ್ಲಾ ಕಡೆ ಹರಡಿದೆ. ನೀವು ಗಮನ ಹರಿಸುವ ಬಗ್ಗೆ ಯೋಚಿಸುವಿರಾ, ಆದರೆ ನಿಮ್ಮ ಮೆದುಳು ಪ್ರತಿ ಸೆಕೆಂಡ್ ಯಾವ ವಿಷಯಕ್ಕೆ ಪ್ರಾಮುಖ್ಯತೆ ನೀಡಲಿ ಎಂಬುದಕ್ಕೆ ಹೊಡೆದಡುತ್ತಿರುತ್ತದೆ. ಇದರಿಂದ ನಿಮ್ಮ ಗಮನ ಮುರಿದು ಹೋಗುತ್ತದೆ. ಈ ಕಾರಣದಿಂದಲೇ ಬಿಲ್ ಗೇಟ್ಸ್(bill gates) ಅವರು ವಿಂಡೋಸ್ನ ಕೋಡ್ ಬರೆಯುವಾಗ ಅವರ ಕೋಣೆಯಲ್ಲಿ ಕೇವಲ ಒಂದು ಮೇಜು ಮತ್ತು ಗಣಕಯಂತ್ರ(computer) ಮಾತ್ರ ಇರುತ್ತಿತ್ತು. ಅವರು ಆ ಕೆಲಸ ಮಾಡುತ್ತಾ ನಿದ್ರೆ ಮಾಡುತ್ತಿದ್ದರು. ಥಾಮಸ್ ಎಡಿಸನ್(thomas edison) 48 ಗಂಟೆ ಕಾರ್ಯಾಗಾರದಲ್ಲಿ(workshop) ಇರುತ್ತಿದ್ದರು. ಆದರೆ ಅವರ ಪರಿಕರಗಳು(tools) ಯಾವಾಗಲು ಸಂಘಟಿತವಾಗಿ(organize) ಇರುತ್ತಿದ್ದವು. ಇದರಿಂದ ಅವರ ಮೆದುಳು ಕೇವಲ ಒಂದೇ ವಿಷಯದ ಮೇಲೆ ಶಕ್ತಿ ಹಾಕುತ್ತಿತ್ತು.

ಸ್ಟ್ಯಾನ್‌ಫೋರ್ಡ್ನ(stanford) ಒಂದು ಅಧ್ಯಯನದ ಪ್ರಕಾರ ಗೊಂದಲಮಯ ಮೇಜು(clutter desk) ಉತ್ಪಾದಕತೆಯನ್ನು 30% ನಷ್ಟು ಕಡಿಮೆ ಮಾಡುತ್ತದೆ. ಅಂದರೆ ನೀವು ಅನಗತ್ಯ ವಸ್ತುಗಳನ್ನು ತೆಗೆದು ಹಾಕಿದರೆ, ಅಧಿಕ ಕಷ್ಟಪಡದೆ 30% ಅಧಿಕ ಉತ್ಪಾದಕ ಆಗುವಿರಿ.

ನಿಕೋಲಾ ಟೆಸ್ಲಾ(nikola tesla) ಅವರ ಕಾರ್ಯಾಗಾರವೂ ಶಸ್ತ್ರಚಿಕಿತ್ಸಾ ಕೋಣೆಯ ನಿಖರತೆಯಷ್ಟು(surgical room precision) ಸಂಘಟಿತ(organized) ಇರುತ್ತಿತ್ತು ಎನ್ನಲಾಗುತ್ತದೆ. ಒಂದೊಂದು ತಂತಿ(wire), ಪುಸ್ತಕ(notebook) ಮತ್ತು ಪರಿಕರಗಳ ಒಂದು ಜಾಗ ಇರುತ್ತಿತ್ತು. ಏಕೆಂದರೆ ಅವರಿಗೆ ಈ ವಿಷಯಗಳಲ್ಲಿ ocd ಇತ್ತು. ಅವರ ಪ್ರಕಾರ ಪರಿಸರ ಗೊಂದಲಮಯವಿದ್ದರೆ ಮನಸ್ಸು ಕೂಡ ಗೊಂದಲಮಯವಿರುತ್ತದೆ.

ಶಬ್ದ ಕಡಿತ ಮಾಡಿ ಪರಿಸರವನ್ನು ಗಮನಕ್ಕೆ ತಯಾರು ಮಾಡಲು ಈ ಸಲಹೆಗಳನ್ನು ಅನುಸರಿಸಿ ಅವೆಂದರೆ, ಫೋನನ್ನು ದೂರವಿಡಿ ಇಲ್ಲ ಅದರಲ್ಲಿ ಏಕಾಗ್ರತೆಯ ಸ್ಥಿತಿಯನ್ನು(focus mode) ಆನ್ ಮಾಡಿ, ಮೇಜನ್ನು ಕನಿಷ್ಠೀಯತಾವಾದಿ(minimalist) ಮಾಡಿ. ಅದರ ಮೇಲೆ ಪ್ರಸ್ತುತ ಕಾರ್ಯಕ್ಕೆ(current task) ಬೇಕಿರುವುದನ್ನು ಮಾತ್ರ ಇಡಿ. ನಿಶಬ್ದ ಇಷ್ಟವಿದ್ದರೆ ಶಬ್ದ ರದ್ದತಿ ಹೆಡ್‌ಫೋನ್‌ಗಳು ಮತ್ತು ಹಿನ್ನೆಲೆ ಬೀಟ್‌ಗಳು(background beats) ಬೇಕಿದ್ದರೆ ಯೂಟ್ಯೂಬ್ಗೆ ಹೋಗಿ ಬೈನೌರಲ್ ಬೀಟ್ಸ್(binaural beats) ಅನ್ನು ಹುಡುಕಿ. ಒಂದು ಆಚರಣಾ ವಸ್ತುವನ್ನು(ritual object) ಮಾಡಿ. ಉದಾಹರಣೆಗೆ ಮೇಣದಬತ್ತಿ(candle), ಸಸ್ಯ(plant) ಇಲ್ಲ ನಿಮ್ಮ ಮೆದುಳಿಗೆ ಆಳವಾದ ಕೆಲಸ ಶುರು ಮಾಡುವ ಸಂಕೇತ ನೀಡುವ ಪುಸ್ತಕವನ್ನು ಇಡಿ.

ಇದನ್ನು ಓದಿ: ಪೂರ್ ಚಾರ್ಲಿಸ್ ಆಲಮನಕ್ ಪುಸ್ತಕದ ಸಾರಾಂಶ

5. Stay in flow

how to stay in the flow state in kannada
flow staying

ನಿಮಗೆ ಯಾವುದರ ಮೇಲಾದರೂ ಗಮನಹರಿಸಲು ಬಲವಂತ ಮಾಡಬೇಕಿದ್ದರೆ, ಅಂದರೆ ಓದಲು ಕಷ್ಟ ಪಡುತ್ತಿದ್ದರೆ, ಕೆಲಸ ಮಾಡಲು ಇಲ್ಲ, ಒಂದು ಕೌಶಲ್ಯ ಕಲಿಯಲು ಕಷ್ಟಪಡುತ್ತಿದ್ದರೆ, ನೀವು ಆ ಕೆಲಸವನ್ನು ಮಾಡಲು ಇಷ್ಟಪಡುತ್ತಿಲ್ಲವೆಂದರ್ಥ. ಇದರಿಂದ ನೀವು ಅದರಲ್ಲಿ ನೈಸರ್ಗಿಕವಾಗಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಈಗ ಬರುವ ಪ್ರೆಶ್ನೆ ಏನೆಂದರೆ, ನೀವು ಆ ಕೆಲಸವನ್ನು ಏಕೆ ಮಾಡಲು ಬಯಸುತ್ತಿಲ್ಲ? ಇದರ ಉತ್ತರ ಸರಳವಾಗಿದೆ, ಅದೆಂದರೆ ಆ ಕೆಲಸ ನೀರಸವಾಗಿದೆ. ಆದರೆ ಆ ಕೆಲಸ ನೀರಸವಾಗಿಲ್ಲ ಅದರಿಂದಲೂ ಡೊಪಮೈನ್ ಸಿಗುತ್ತದೆ. ನಿಮ್ಮ ಮೆದುಳು ಅಧಿಕ ಕಳಪೆ ಡೊಪಮೈನ್(cheap dopamine) ಸೇವಿಸುವುದರಿಂದ ಗಳಿಸಿದ ಡೊಪಮೈನ್(earned dopamine) ಮೌಲ್ಯ ಕಡಿಮೆಯಾಗಿದೆ. ಕಳಪೆ ಡೋಪಮೈನ್ ಎಂದರೆ ಇನ್ಸ್ಟಾಗ್ರಾಮ್ ಸ್ಕೋರ್ಲ್ ಮಾಡುವುದು, ಯೂಟ್ಯೂಬ್ ಶಾಟ್ಸ್, ಗೇಮಿಂಗ್, ಅಶ್ಲೀಲ ವೀಡಿಯೋ(porn videos), ಇವೆಲ್ಲ ನಿಮ್ಮ ಮೆದುಳಿಗೆ ಡೋಪಮೈನ ಮಿತಿಮೀರಿದ ಪ್ರಮಾಣ(overdose) ನೀಡುತ್ತವೆ. ಇದರಿಂದ ಸಾಮಾನ್ಯ ಉತ್ಪಾದಕ(productive) ಕೆಲಸವಾಗಿರುವ ಓದುವುದು, ಜಿಮ್ಗೆ ಹೋಗುವುದು, ಇಲ್ಲ ಯಾವುದಾದರೂ ಯೋಜನೆ(project) ಮುಗಿಸುವ ಖುಷಿಯು ನಿಮಗೆ ಅನುಭವವಾಗುವುದಿಲ್ಲ. ಇದರ ನಂತರ ನೀವು ಗಮನ ಹರಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಯೋಚಿಸುತ್ತೀರಾ. ಮೆದುಳಿಗೆ ಮಜಾ ದೊರೆತಾಗ ಗಮನ ಹರಿಸಲು ಸಾಧ್ಯವಾಗುತ್ತದೆ ಮತ್ತು ಅದಕ್ಕೆ ಮಜಾ ಪ್ರತಿಫಲ ವ್ಯವಸ್ಥೆಯಿಂದ(reward system) ಸಿಗುತ್ತದೆ. ಇದಕ್ಕೆ ಪರಿಹಾರ ತುಂಬಾ ಸರಳವಾಗಿದೆ, ನಿಮ್ಮ ಮೆದುಳಿಗೆ ಡೋಪಮೈನ್ ಮರುಹೊಂದಿಕೆ(dopamine reset) ನೀಡಿ. ಇದಕ್ಕೆ ಬೇಸರ ಸವಾಲು(boredom challenge) ಉಪಯುಕ್ತವಾಗಿದೆ.

ಪ್ರತಿದಿನ 10 ನಿಮಿಷ ಬೇಸರದ ಚಟುವಟಿಕೆ ಮಾಡಿ ಅಂದರೆ ಫೋನ್ ಇಲ್ಲದೆ ನಡೆಯುವುದು, ಖಾಲಿ ಇರುವ ಗೋಡೆಯನ್ನು ನೋಡುತ್ತೀರಿ, ಅಮ್ಮನ ಜೊತೆ ಮನೆಯ ಕೆಲಸದಲ್ಲಿ ಕೈಜೋಡಿಸಿ, ಇಲ್ಲ ಸರಳವಾದ ಪುನರವರ್ತಿತ(repetative) ಕೆಲಸ ಮಾಡಿ. ಯಾವಾಗ ನಿಮಗೆ ಗಳಿಸಿದ ಡೊಪಮೈನ್ನ ಮೌಲ್ಯ ತಿಳಿಯುವುದೋ, ಅದೇ ಕೆಲಸ, ಅದೇ ಕೌಶಲ್ಯದ ಅಭ್ಯಾಸ ತಕ್ಷಣವಾಗಿ ಪ್ರತಿಫಲದಾಯಕವೆನಿಸುತ್ತದೆ. ಆಗ ನೀವು ಬಲವಂತ ಮಾಡುವ ಅವಶ್ಯಕತೆ ಇಲ್ಲ ನೀವು ನೈಸರ್ಗಿಕವಾಗಿ ಹರಿವಿನಲ್ಲಿ(flow) ಹೋಗುವಿರಾ.

ಹರಿವಿನ ಪಿತಾಮಹರಾದ ಮಿಹಾಲಿ ಸಿಕ್ಸಿಜೆಂಟ್ಮಿಹಾಲಿ(mihaly csikszentmihalyi) ಅವರು, "the best moments in life are when we are fully engaged, completely immersed in what we are doing," ಎನ್ನುತ್ತಾರೆ. ಬೇಸರ ನಿಮ್ಮಮೆದುಳಿಗೆ ಜಿಮ್ ರೀತಿ ಆಗಿದೆ. ಉತ್ಸಾಹ(passion) ಪ್ರತಿಫಲವಾಗಿದೆ. ಮೊದಲಿಗೆ ಬೇಸರದಿಂದ ಪ್ರಯತ್ನಿಸಿ, ನಂತರ ಹರಿವಿನಲ್ಲಿ ಪಾಂಡಿತ್ಯ ಸಾಧಿಸಿ. ನಿಮ್ಮ ಗಮನವನ್ನು ಲೇಸರ್ನಷ್ಟು ತೀಕ್ಷ್ಣವಾಗುತ್ತದೆ(laser sharp).

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

;