Website designed by @coders.knowledge.

Website designed by @coders.knowledge.

Poor Charlie's Almanack Book Summary | ಪೂರ್ ಚಾರ್ಲಿಸ್ ಆಲಮನಕ್ ಪುಸ್ತಕದ ಸಾರಾಂಶ

 0

 Add

Please login to add to playlist

Watch Video

ಇಂದು ನಾವು ಪೌರಾಣಿಕ(legendary) ಹೂಡಿಕೆದಾರನಾದ ಚಾರ್ಲಿ ಮುಂಗರ್(charlie munger) ಅವರ ಪೂರ್ ಚಾರ್ಲಿಸ್ ಆಲಮನಕ್(poor charlie's almanack) ಪುಸ್ತಕದ ಸಾರಾಂಶ ತಿಳಿಸಲಿದ್ದೇವೆ. ಈ ಪುಸ್ತಕದಲ್ಲಿ ಚಾರ್ಲಿ ಮುಂಗರ್ ಅವರ ಭಾಷಣ(speeches), ಸಮ್ಮೇಳನ(conferences), ಮಾಧ್ಯಮ ಮಾತುಕತೆ(media talks), ಉಪನ್ಯಾಸ(lecturers) ಮತ್ತು ಬರಹಗಳ(writings) ಸಂಗ್ರಹಣೆಗಳು ಇವೆ. ಇದರಲ್ಲಿ ಅವರು ಹೂಡಿಕೆಯನ್ನು ತೆಗೆದುಕೊಳ್ಳುವ ಮೊದಲು ಯಾವ ರೀತಿಯ ಆಲೋಚನೆ ಪ್ರಕ್ರಿಯೆ(thought process) ಇರುತ್ತದೆ ಎಂದು ತಿಳಿಸಿದ್ದಾರೆ.

ಇತರೆ ಪುಸ್ತಕಗಳಲ್ಲಿ ಎಲ್ಲಿ ಹೂಡಿಕೆ ಮಾಡಬೇಕು, ಯಾವ ಅನುಪಾತಗಳನ್ನು ಹೋಲಿಕೆ ಮಾಡಬೇಕು ಎಂಬುದನ್ನು ಹೇಳುತ್ತಾರೆ. ಆದರೆ ಚಾರ್ಲಿ ಮುಂಗರ್ "ನಿಮ್ಮ ಮೇಲೆ ಹೂಡಿಕೆ ಮಾಡಿ"(invest on yourself) ಎಂದು ಹೇಳುತ್ತಾರೆ. ನಮ್ಮ ಚಿಂತನೆಯ ಮಾದರಿಯನ್ನು(thinking pattern) ಚಾಲೆಂಜ್ ಮಾಡಲು ಹೇಳುತ್ತಾರೆ. ನಿಮ್ಮ ವ್ಯಕ್ತಿತ್ವ(personality) ಎಷ್ಟು ಚೆನ್ನಾಗಿರುತ್ತದೆಯೋ ಅಷ್ಟು ನಿಮ್ಮ ಹೂಡಿಕೆಯಿಂದ ರಿಟರ್ನ್ ಪಡೆಯುತ್ತೀರಾ ಎಂದು ಅವರು ಹೇಳುತ್ತಾರೆ.

ಇದನ್ನು ಓದಿ: ಥಿಂಕ್ ಮತ್ತು ಗ್ರೋ ರಿಚ್ ಪುಸ್ತಕದ ಸಾರಾಂಶ

About Charlie Munger

ಮೊದಲಿಗೆ ಚಾರ್ಲಿ ಮುಂಗರ್ ಬಗ್ಗೆ ತಿಳಿಯೋಣ. ಇದರಿಂದ ನಮಗೆ ಇವರು ದಂತಕಥೆ(legend) ಏಕೆ? ಮತ್ತು ಜನ ಇವರನ್ನು ಏಕೆ ಇಷ್ಟು ಮೆಚ್ಚಿಕೊಂಡಿದ್ದಾರೆ ಎಂಬುದು ತಿಳಿಯುತ್ತದೆ. ಚಾರ್ಲಿ ಅಮೆರಿಕದ ಹೂಡಿಕೆದಾರ, ಉದ್ಯಮಿ, ವಾರೆನ್ ಬಫೆಟ್(warren buffett) ಅವರ ಬೆರ್ಕೆಶಿರ್ ಹತಾವೇ(berkshire hathaway) ಕಂಪನಿಯ ಉಪಾಧ್ಯಕ್ಷ ಆಗಿದ್ದರು. ಚಾರ್ಲಿ ದಶಗಳಿಂದ ವಾರೆನ್ ಬಫೆಟ್ ಅವರ ಹತ್ತಿರದ ಉದ್ಯಮ ಪಾಲುದಾರ ಆಗಿದ್ದರು ಮತ್ತು ಬೆರ್ಕೆಶಿರ್ ಹತಾವೇ ಕಂಪನಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇವರು 1 ಜನವರಿ 1924 ರಂದು ಒಮಾಹಾದ(omaha) ನೆಬ್ರಾಸಕದಲ್ಲಿ(nebraska) ಜನಿಸಿದರು. ಅಂದರೆ 1 ಜನವರಿ 2024 ರಂದು 100 ವರ್ಷ ಪೂರ್ಣಗೊಳಿಸುತ್ತಿದ್ದರು, ಆದರೆ ವಿಧಿಯ ಆಟದಿಂದ 28 ನವೆಂಬರ್ 2023 ರಂದು ವಿಧಿವಶರಾದರು.

ಇವರು 1948 ರಂದು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ(harvard university) ಕಾನೂನು ಡಿಗ್ರಿಯನ್ನು ಪೂರ್ಣಗೊಳಿಸಿದರು. ಆದರೆ ಇವರ ಮನಸ್ಸು ಯಾವಾಗಲೂ ಹೂಡಿಕೆ ಮತ್ತು ಹಣಕಾಸಿನಲ್ಲಿ ಇತ್ತು. ಇದರ ನಂತರ ಇವರು ಸ್ವಲ್ಪ ವರ್ಷ ಕಾನೂನನ್ನು ಅಭ್ಯಾಸ ಮಾಡಿ ಅದರಲ್ಲಿ ಯಶಸ್ಸನ್ನು ಕಂಡರು. ಆದರೆ ನಿಧಾನವಾಗಿ ಹೂಡಿಕೆಯ ರಂಗಕ್ಕೆ ಬಂದರು.

1978 ರಂದು ಬೆರ್ಕೆಶಿರ್ ಹತಾವೇ ಎಂಬ ಒಂದು ಹೆಣಗಾಡುತ್ತಿರುವ ಕಂಪನಿಯ ಉಪಾಧ್ಯಕ್ಷ ಅದರು. ವಾರೆನ್ ಬಫೆಟ್ ಜೊತೆಗೆ ಆ ಕಂಪನಿಯನ್ನು ಅಮೆರಿಕದ ಲಾಭದಾಯಕ ಕಂಪನಿಯನ್ನಾಗಿ ಮಾಡಿದರು.

"charlie is the best business partner and he is one of the most smartest person."

ವಾರೆನ್ ಬಫೆಟ್, "ಚಾರ್ಲಿ ಉತ್ತಮ ಉದ್ಯಮ ಪಾಲುದಾರ ಮತ್ತು ಬುದ್ಧಿವಂತ ವ್ಯಕ್ತಿ ಆಗಿದ್ದಾರೆ" ಎಂದು ಯಾವಾಗಲೂ ಹೇಳುತ್ತಾರೆ. ಇದಾಗಿತ್ತು ಚಾರ್ಲಿ ಮುಂಗರ್ ಮೇಲಿನ ಪರಿಚಯ ಈಗ ಕಲಿಕೆಯ ಕಡೆಗೆ ಬರೋಣ.

ಇದನ್ನು ಓದಿ: ಅನುಭವಿ ಹೂಡಿಕೆದಾರನ ಹೂಡಿಕೆಯ ಪಾಠಗಳು

Lesson 1: Charlie munger investment strategies.

Strategy 1: Look for high quality business.

high quality business poor charlie almanac in kannada
high quality businesses

ಚಾರ್ಲಿ ಮುಂಗರ್ ಯಾವಾಗಲೂ ಉತ್ತಮ ಗುಣಮಟ್ಟದ ವ್ಯಾಪಾರದಲ್ಲಿ ಹೂಡಿಕೆ ಮಾಡುತ್ತಾರೆ. ಅವರು ಹೂಡಿಕೆ ಮಾಡುವ ಕಂಪನಿಗಳಲ್ಲಿ ಸ್ಪರ್ಧೆ(competition) ಅಧಿಕವಿದ್ದು, ಬಾಳಿಕೆ ಬರುವಂತೆ(durable) ಇರುತ್ತವೆ. ಅಂದರೆ ಇತರೆ ಪ್ರತಿಸ್ಪರ್ಧಿಯ ಹತ್ತಿರ ಇರದ ವಸ್ತುವು ಆ ಉದ್ಯಮದಲ್ಲಿ ಇರುತ್ತದೆ, ಅದನ್ನು ಕಂದಕಗಳು(moats) ಎನ್ನಲಾಗುತ್ತದೆ. ಇದರಿಂದ ಆ ಉದ್ಯಮ ದೀರ್ಘವಾದಿವರೆಗೆ ಮಾರುಕಟ್ಟೆಯಲ್ಲಿ ಇರುತ್ತದೆ ಮತ್ತು ದೀರ್ಘವಾದಿಯಲ್ಲಿ ಲಾಭವೂ ಆಗುತ್ತದೆ.

ಚಾರ್ಲಿ ಮುಂಗರ್ ಕೋಕಾ ಕೋಲಾದಲ್ಲಿ(coca cola) ಹೂಡಿಕೆ ಮಾಡಿದ್ದಾರೆ. ಕೋಕಾ ಕೋಲಾ ಜಗತ್ತಿನ ದೊಡ್ಡ ಕಂಪನಿಗಳಲ್ಲಿ ಬರುತ್ತದೆ ಎಂದು ನಿಮಗೆ ತಿಳಿದಿದೆ. ಅವರ ವಸ್ತು ಪ್ರತಿಯೊಂದು ದೇಶದಲ್ಲಿ ಲಭ್ಯವಿದೆ. ಇದೇ ರೀತಿ ಬೆರ್ಕೆಶಿರ್ ಹತಾವೇ ಕಂಪನಿ, ಆಪಲ್(apple) ಬ್ಯಾಂಕ್ ಆಫ್ ಅಮೇರಿಕಾ(bank of america), ಅಮೇರಿಕನ್ ಎಕ್ಸ್ಪ್ರೆಸ್(american express) ರೀತಿಯ ಉತ್ತಮ ಗುಣಮಟ್ಟದ ಉದ್ಯಮಗಳಲ್ಲಿ ಹೂಡಿಕೆ ಮಾಡಿದೆ.

"It's far better to buy a wonderful company at a fair price, then a fair company at a wonderful price" ಎಂಬುದು ಚಾರ್ಲಿ ಮುಂಗರ್ ಅವರ ಪ್ರಸಿದ್ಧ ಉಲ್ಲೇಖವಾಗಿದೆ.

ಅಂದರೆ ನೀವು ಒಂದು ಕೆಟ್ಟ ಕಂಪನಿಯ ಷೇರನ್ನು ಕಡಿಮೆ ಬೆಲೆಗೆ ಖರೀದಿಸುವುದಕ್ಕಿಂತ ಒಳ್ಳೆಯ ಕಂಪನಿಯ ಷೇರನ್ನು ದುಬಾರಿ ಬೆಲೆಗೆ ಖರೀದಿಸುವುದು ಒಳ್ಳೆಯದು.

ಇದನ್ನು ಓದಿ: "The Education of a Value Investor" ಪುಸ್ತಕದ ಸಾರಾಂಶ

Strategy 2: Invest in business which is understandable.

invest in business poor charlie almanac in kannada
understandable business

ಚಾರ್ಲಿ ಮುಂಗರ್ ಸರಳ ಮತ್ತು ಪ್ರಾಮಾಣಿಕವಿರುವ(straight forward) ಉದ್ಯಮಗಳಿಗೆ ಆದ್ಯತೆ ನೀಡುತ್ತಾರೆ. ಚಾರ್ಲಿ, "invest in businesses that are within your circle of competence and can easily understandable" ಎಂದು ಹೇಳುತ್ತಾರೆ.

"circle of competence" ಎಂದರೆ ನಿಮಗೆ ಅಧಿಕ ಜ್ಞಾನವಿರುವ ಕ್ಷೇತ್ರವಾಗಿದೆ. ಚಾರ್ಲಿ ಚಾಕಲೇಟ್ ಉದ್ಯಮದ ಮೇಲೆ ಯಾವಾಗಲೂ ಆಸಕ್ತಿ ಹೊಂದಿದ್ದಾರೆ ಮತ್ತು ಆ ಮಾರುಕಟ್ಟೆಯನ್ನು ಅಧಿಕ ಸಂಶೋಧನೆ ಮಾಡಿ ಅರ್ಥ ಮಾಡಿಕೊಂಡಿದ್ದಾರೆ. ಇದರಿಂದ ಅಮೆರಿಕದ ಪ್ರಸಿದ್ಧ ಚಾಕಲೇಟ್ ತಯಾರಕರಾದ ಸೀಸ್ ಕ್ಯಾಂಡೀಸ್(see's candies) ಹಿಂದಿನ 95 ವರ್ಷಗಳಿಂದ ಚಾಕಲೇಟ್ ಮಾಡುತ್ತಿದೆ. ಅದರಲ್ಲಿ ಇವರು ಅತಿಯಾಗಿ ಹೂಡಿಕೆ ಮಾಡಿದ್ದಾರೆ.

Strategy 3: Look for the margin of safety.

what is a good margin of safety in investing in kannada
margin of safety

ಚಾರ್ಲಿ ಮುಂಗರ್ ಮತ್ತು ವಾರೆನ್ ಬಫೆಟ್ ಸುರಕ್ಷತೆಯ ಅಂಚನ್ನು(margin of safety) ನಂಬುತ್ತಾರೆ. ಸುರಕ್ಷತೆಯ ಅಂಚು ಅಧಿಕವಿದ್ದಷ್ಟು ಅಪಾಯ ಕಡಿಮೆ ಇರುತ್ತದೆ. 1960 ರಂದು ಅಮೇರಿಕನ್ ಎಕ್ಸ್ಪ್ರೆಸ್(american express) ಕಂಪನಿ ನಷ್ಟದಲ್ಲಿ ಇತ್ತು. ಇದರಿಂದ ನವೆಂಬರ್ 1963 ರಂದು 65$ ಇದ್ದ ಷೇರಿನ ಬೆಲೆ 2 ತಿಂಗಳಲ್ಲೇ 37$ ಗೆ ಬಂದಿತು. ಚಾರ್ಲಿ ಮತ್ತು ವಾರೆನ್ ಇದನ್ನು ಅವಕಾಶದ ರೀತಿ ನೋಡಿದರು ಮತ್ತು ಅಧಿಕ ಹೂಡಿಕೆ ಮಾಡಿದರು. ಇದು ಬೆರ್ಕೆಶಿರ್ ಹತಾವೇಯ ಉತ್ತಮ ಹೂಡಿಕೆಯಾಗಿದೆ. ದಿ ವಾಷಿಂಗ್ಟನ್ ಪೋಸ್ಟ್(the washington post) ಕಂಪನಿ 1970 ರಲ್ಲಿ ಹೋರಾಟ ಮಾಡುವಾಗ, ಕೋಕಾ ಕೋಲಾ 1980 ರಲ್ಲಿ ಹೋರಾಟ(struggle) ಮಾಡುವಾಗಲು ಇವರು ಇವುಗಳಲ್ಲಿ ಹೂಡಿಕೆ ಮಾಡಿದರು. ಇದು ಬೆರ್ಕೆಶಿರ್ ಹತಾವೇಯಲ್ಲಿ ನಂತರ ಅಧಿಕ ಲಾಭ ನೀಡಿತು.

Strategy 4: Invest for long term.

long term investing benefits in kannada
long term investing

"the big money is not in buying or selling but in the waiting" ಎಂದು ಚಾರ್ಲಿ ಹೇಳುತ್ತಾರೆ. ಅಂದರೆ ಅಧಿಕ ಹಣ ಷೇರನ್ನು ಖರೀದಿ ಅಥವಾ ಮಾರಾಟ ಮಾಡುವುದರಲ್ಲಿ ಇಲ್ಲ. ಬದಲಿಗೆ ಷೇರನ್ನು ದೀರ್ಘಾವಧಿವರೆಗೆ ಹಿಡಿದುಕೊಳ್ಳುವುದರಲ್ಲಿದೆ(hold).

ಇದಾಗಿತ್ತು ಚಾರ್ಲಿ ಮುಂಗರ್ ಅವರ ಹೂಡಿಕೆಯ ಪರಿಶೀಲನಾಪಟ್ಟಿ(checklist),

  • • Invest in high quality businesses,
  • • Invest in businesses which is understandable,
  • • Look for margin of safety,
  • • Invest for the long term.
ಇದನ್ನು ಓದಿ: "100 to 1 in the Stock Market" ಪುಸ್ತಕದ ಸಾರಾಂಶ

Lesson 2: Mental models and multi disciplinary approach in investing.

how make better decisions with charlie munger mental models in kannada
mental modals

ಮೊದಲಿಗೆ ಮಾನಸಿಕ ಮಾದರಿಗಳು(mental models) ಎಂದರೆ ಏನೆಂದು ತಿಳಿಯೋಣ. ಮಾನಸಿಕ ಮಾದರಿಗಳು ಎಂದರೆ ಒಂದು ಹೇಗೆ ಕೆಲಸ ಮಾಡುತ್ತದೆ(how something works) ಎಂಬುದಾಗಿದೆ. ನೀವು ಒಂದು ವಸ್ತು ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ಯೋಚಿಸುವುದು ಮಾನಸಿಕ ಮಾದರಿಯಾಗಿದೆ. ಉದಾಹರಣೆಗೆ ಪಾರ್ಕಿನ್ಸನ್ ನಿಯಮದ(parkinson's law) ಪ್ರಕಾರ ನೀವು ಇತರರೊಂದಿಗೆ ಮಾತನಾಡುತ್ತಾ ಯಾವುದೇ ಕೆಲಸವನ್ನು ಮಾಡುತ್ತಿದ್ದರೆ ಅದನ್ನು ಮುಗಿಸಲು ಅದು ಅಧಿಕ ಸಮಯವನ್ನು ತೆಗೆದುಕೊಳ್ಳುತ್ತದೆ.

ನಿಮಗೆ 2 ಗಂಟೆಯಲ್ಲಿ ಒಂದು ಪೋಸ್ಟರ್ ತಯಾರಿಸಿ ಕೊಡಲು ಹೇಳಿದರೆ ನೀವು ಮಾಡಿಕೊಡುತ್ತೀರಿ. ಅದೇ 2 ರಿಂದ 3 ದಿನದಲ್ಲಿ ಒಂದು ಪೋಸ್ಟರ್ ತಯಾರಿಸಿ ಕೊಡಿ ಎಂದರೆ, ನೀವು ಕೊನೆಯ ದಿನದ ಹಿಂದಿನ ಒಂದು ಗಂಟೆಯಲ್ಲಿ ಡಿಸೈನ್ ಮಾಡಿ ನೀಡುತ್ತೀರಾ. ಚಾರ್ಲಿ ಮುಂಗರ್ ನಮ್ಮ ಮಾನಸಿಕ ಮಾದರಿಯನ್ನು ಹೆಚ್ಚಿಸುವ ಬಗ್ಗೆ ಯೋಚಿಸಬೇಕು ಎಂದು ಹೇಳುತ್ತಾರೆ. ಜೀವಶಾಸ್ತ್ರ(biology), ಮನೋವಿಜ್ಞಾನ(psychology), ಇತಿಹಾಸ(history), ಅರ್ಥಶಾಸ್ತ್ರ(economics), ಗಣಿತ(mathematics) ಇತ್ಯಾದಿ ವಿಷಯಗಳ ಜ್ಞಾನವನ್ನು ಗಳಿಸಿಕೊಳ್ಳಬೇಕು.

1. Multi disciplinary approach

ಮಾನಸಿಕ ಮಾದರಿಗಳಿಂದ ಯಾವುದಾದರೂ ವಸ್ತು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯುತ್ತದೆ. ಬಹುಶಿಸ್ತೀಯ ವಿಧಾನದಿಂದ(multidisciplinary approach) ನಾವು ವಿವಿಧ ಮಾನಸಿಕ ಮಾದರಿಗಳಿಂದ ಜ್ಞಾನ ಮತ್ತು ಅನುಭವವನ್ನು ಪಡೆಯುತ್ತೇವೆ ಮತ್ತು ಅದರ ಮೇಲೆ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ.

ಇದನ್ನು ಓದಿ: One Up On Wall Street ಪುಸ್ತಕದ ಸಾರಾಂಶ Part- 1

Lesson 3: Human tendency that can impact decision making investing.

what is the psychology of human misjudgment by charlie munger about in kannada
human tendency

1. Confirmation bias

ಒಬ್ಬ ವ್ಯಕ್ತಿ ಆತನ ನಂಬಿಕೆಗೆ ಸಂಬಂಧಿಸಿದಂತೆ ವಿಷಯಗಳನ್ನು ಹೇಗೆ ಸಂಗ್ರಹಿಸುತ್ತಾನೆ ಎಂಬುದನ್ನು ಚಾರ್ಲಿ ತಿಳಿಸುತ್ತಾರೆ. ಆತ ಆತನ ನಂಬಿಕೆಗೆ ವಿರುದ್ಧವಿರುವ ವಿಷಯಗಳನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾನೆ. ಉದಾಹರಣೆಗೆ ಒಬ್ಬ ಹೂಡಿಕೆದಾರನಿಗೆ ಆತ ಹೂಡಿಕೆ ಮಾಡಬೇಕು ಅಂದುಕೊಂಡ ಕಂಪನಿ ಇಷ್ಟವಾದಲ್ಲಿ ಆತ ಆಯ್ಕೆ ಮಾಡಿರುವ ಕಂಪನಿಯ ಒಳ್ಳೆಯ ಮಾಹಿತಿಯನ್ನು ನೋಡುತ್ತಾನೆ ಮತ್ತು ನಕಾರಾತ್ಮಕ ಮಾಹಿತಿಗಳನ್ನು ನಿರ್ಲಕ್ಷಿಸುತ್ತಾನೆ.

2. Availability bias

ಎಲ್ಲಿ ಮಾಹಿತಿ ಬೇಗನೆ ಸಿಗುತ್ತದೆಯೋ ಅದನ್ನೇ ನಿಜವೆಂದು ಜನರು ನಂಬುತ್ತಾರೆ ಎಂದು ಚಾರ್ಲಿ ಹೇಳುತ್ತಾರೆ. ಅವರ ವಿಶಾಲವಾಗಿ ಮಾಹಿತಿಯನ್ನು ತಿಳಿಯುತ್ತಾರೆ. ಉದಾಹರಣೆಗೆ ನಿಮ್ಮ ನೆಚ್ಚಿನ ವಿಷಯ ರಚನೆಕಾರ ಅಥವಾ ಇತ್ತೀಚಿನ ಸುದ್ದಿ ಮುಖ್ಯಾಂಶಗಳನ್ನು ನೋಡಿ ಯಾವುದೇ ಕಂಪನಿಯಲ್ಲಿ ಹೂಡಿಕೆ ಮಾಡುವುದು ಲಭ್ಯತೆಯ ಪಕ್ಷಪಾತವಾಗಿದೆ.

3. Incentive caused bias

ಪ್ರತಿಯೊಬ್ಬ ವ್ಯಕ್ತಿಯೂ ಹುರಿದುಂಬಿಸುವ ಚಾಲನೆಯನ್ನು(incentive driven) ಹೊಂದಿದ್ದಾನೆ ಎಂದು ಚಾರ್ಲಿ ಹೇಳುತ್ತಾರೆ. ನಾವು ಮನುಷ್ಯರು ಎಲ್ಲಿ ಲಾಭ ಕಾಣುತ್ತದೆಯೋ ಅಲ್ಲಿ ಬೇಗನೆ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಈ ರೀತಿಯ ಪಕ್ಷಪಾತದಿಂದಲೇ ಅನೇಕರು ಷೇರು ಮಾರುಕಟ್ಟೆಯಲ್ಲಿ ಹಣವನ್ನು ಕಳೆದುಕೊಳ್ಳುತ್ತಾರೆ. ಏಕೆಂದರೆ ಅವರಿಗೆ ತ್ವರಿತ ಹಣ(quick money) ಕಾಣಿಸುತ್ತಿರುತ್ತದೆ.

4. Social proof

ಇದು ಕೂಡ ಮಾನವ ಪ್ರವೃತ್ತಿಯಾಗಿದೆ(human tendency), ಇದರಲ್ಲಿ ಒಬ್ಬ ವ್ಯಕ್ತಿ ಒಂದು ಸಮುದಾಯದ ಭಾಗವಾಗಲು ಎಲ್ಲವನ್ನು ಮಾಡುತ್ತಾನೆ. ಉದಾಹರಣೆಗೆ ಒಂದು ಫ್ಯಾಶನ್ ಟ್ರೆಂಡ್ನಲ್ಲಿ ಇದ್ದು, ಆ ವ್ಯಕ್ತಿಗೆ ಇಷ್ಟವಾಗದಿದ್ದರೂ, ತನ್ನ ಸಾಮಾಜಿಕ ವಲಯದಲ್ಲಿ(social circle) ಹಳತಾಗಿ(outdated) ಕಾಣದಿರಲು ಆ ಫ್ಯಾಷನ್ ಅನ್ನು ಅನುಸರಿಸುತ್ತಾನೆ. ಷೇರು ಮಾರುಕಟ್ಟೆಯಲ್ಲೂ ನಿಮ್ಮ ಸಾಮಾಜಿಕ ವಲಯದಲ್ಲಿ ಇರುವವರು ಟ್ರೇಡಿಗ್ ಇಲ್ಲ ಪದೇ ಪದೇ ಖರೀದಿ ಮತ್ತು ಮಾರಾಟ ಮಾಡುತ್ತಿದ್ದಾರೆ, ನೀವು ಆ ರೀತಿಯೇ ಮಾಡುತ್ತೀರಾ.

5. Overconfidence bias

ಇದರಲ್ಲಿ ಒಬ್ಬ ವ್ಯಕ್ತಿಗೆ ಆತನ ಸಾಮರ್ಥ್ಯ(ability) ಮತ್ತು ತೀರ್ಪಿನ(judgement) ಮೇಲೆ ಅಧಿಕ ನಂಬಿಕೆ ಇರುತ್ತದೆ. ನೀವು ಯಾವುದಾದರೂ ಷೇರಿನಲ್ಲಿ ಹೂಡಿಕೆ ಮಾಡಿದರೆ, ಇದು ಮೇಲೆಯೇ ಹೋಗುತ್ತದೆ ಎಂದು ನಂಬಿಕೆ ಇಟ್ಟಿರುತ್ತೀರಾ.

ಇದನ್ನು ಓದಿ: ಪ್ರಮುಖ 7 ಹಣದ ಮೇಲಿನ ಪಾಠಗಳು

Lesson 4: Charlie Munger's special investing advice.

what is charlie munger investment strategy in kannada
investing advice

1. Risk

ನೀವು ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅದರಲ್ಲಿನ ಅಪಾಯದ ಬಗ್ಗೆ ತಿಳಿದುಕೊಳ್ಳಬೇಕು. ಅದು ಷೇರು, ರಿಯಲ್ ಎಸ್ಟೇಟ್(real estate) ಅಥವಾ ಯಾವುದೇ ಉದ್ಯಮ ಆಗಿರಬಹುದು. ಹೆಚ್ಚಿನ ಅಪಾಯ, ಹೆಚ್ಚಿನ ಪ್ರತಿಫಲ(high risk, high reward) ಹೇಳಲು ಸುಲಭವಾಗಿದೆ, ಆದರೆ ಪ್ರಾಯೋಗಿಕವಾಗಿ ತುಂಬಾನೇ ಕಠಿಣವಿದೆ. ನಿಜವಾದ ನಡತೆಯನ್ನು ತೋರಿಸದ ವ್ಯಕ್ತಿಯಿಂದ ದೂರವಿರಲು ಚಾರ್ಲಿ ಹೇಳುತ್ತಾರೆ ಮತ್ತು ಅವರ ಜೊತೆ ಯಾವುದೇ ರೀತಿಯ ಉದ್ಯಮ ಮಾಡಬೇಡಿ. ಏಕೆಂದರೆ ಇದು ಕೂಡ ಅಪಾಯಕಾರಿ ಹೂಡಿಕೆಯಾಗಿದೆ.

2. Independence

"only in fairy tales are emperor told they are naked" ಎಂದು ಚಾರ್ಲಿ ಪುಸ್ತಕದಲ್ಲಿ ಒಂದು ಉಲ್ಲೇಖವನ್ನು ಹಂಚಿಕೊಂಡಿದ್ದಾರೆ.

ಇದರ ಅರ್ಥವೇನೆಂದರೆ ಬದುಕಿನಲ್ಲಿ ಪ್ರಬಲ ಸ್ಥಾನದಲ್ಲಿ ಇರುವವರಿಗೆ ಅವರ ಬಗ್ಗೆ ಸತ್ಯವನ್ನು ಹೇಳುವುದಿಲ್ಲ. ಅದು ಭಯ ಅಥವಾ ಇತರ ಕಾರಣಗಳಿಂದಿರಬಹುದು. ಇದೇ ರೀತಿ ಅನೇಕರು ಒಂದು ವಸ್ತುವಿನ ಮೇಲೆ ನಂಬಿಕೆ ಇಟ್ಟರೆ ಅದು ಅವರಿಗೆ ಉತ್ತಮ ಎಂಬುದಲ್ಲ. ಚಾರ್ಲಿ ವಸ್ತುನಿಷ್ಠತೆ(objectivity) ಮತ್ತು ತರ್ಕಬದ್ಧತೆಯಾ(rationality) ಬಗ್ಗೆ ತಿಳಿಸುತ್ತಾರೆ. ವಸ್ತುನಿಷ್ಠತೆ ಎಂದರೆ ನಿಮಗೆ ಬೇಕಾದ ವಸ್ತುವನ್ನು ಯಾವುದೇ ರೀತಿಯ ವೈಯಕ್ತಿಕ ಭಾವನೆ ಮತ್ತು ತೀರ್ಪು ಇಲ್ಲದೆ ನೋಡುವುದು. ಅದೇ ತರ್ಕಬದ್ಧತೆ ಎಂದರೆ ತರ್ಕವಾಗಿ(logic) ನಿರ್ಧಾರ ತೆಗೆದುಕೊಳ್ಳುವುದಾಗಿದೆ.

ನಿಮ್ಮಲ್ಲಿ ಸ್ವತಂತ್ರ(independent) ಯೋಚನೆ ಇದ್ದಾಗ ವಸ್ತುನಿಷ್ಠತೆ ಮತ್ತು ತರ್ಕಬದ್ಧತೆಯಲ್ಲಿ ನೋಡಲು ಸಾಧ್ಯವಾಗುತ್ತದೆ ಎಂದು ಚಾರ್ಲಿ ಹೇಳುತ್ತಾರೆ. ಇದರಿಂದ ಯಾರೂ ಕೂಡ ನಿಮ್ಮನ್ನು ಕುಶಲತೆಯಿಂದ(manipulate) ಬಳಸಿಕೊಳ್ಳಲು ಸಾಧ್ಯವಿಲ್ಲ. "mimicking the herd invites regression to the mean" ಎಂದು ಹೇಳುತ್ತಾರೆ. ಅಂದರೆ ಎಲ್ಲರೂ ಮಾಡುತ್ತಿರುವುದನ್ನೇ ನೀವು ಮಾಡುತ್ತಿದ್ದರೆ ಎಲ್ಲರಿಗೂ ಸಿಗುವುದೇ ನಿಮ್ಮಗೂ ಸಿಗುತ್ತದೆ. ಇದರಲ್ಲೂ ನೀವು ಸ್ವತಂತ್ರ ಇರುವುದಿಲ್ಲ.

3. Preparation

"the only way to win is to work, work, work and hope to have a few insights" ಎಂದು ಚಾರ್ಲಿ ಹೇಳುತ್ತಾರೆ.

ಅಂದರೆ ನೀವು ಯಶಸ್ಸನ್ನು ಸಾಧಿಸಲು ಬಯಸಿದರೆ ತುಂಬಾನೇ ಕಷ್ಟ ಪಡಬೇಕು. ಸ್ಥಿರವಾಗಿ(consistent) ಕೆಲಸ ಮಾಡಬೇಕು. ಅದು ಬಿಟ್ಟು ಒಂದು ದಿನ ನೀವು ಅದೃಷ್ಟದಿಂದ(luck) ಕೋಟ್ಯಾಧಿಪತಿಯಾಗುತ್ತೀರಾ ಎಂದು ನಂಬಬಾರದು. ಹೀಗಾಗಿ ನೀವು ದಿನವೂ ಕಷ್ಟ ಪಡುತ್ತಿದ್ದರೆ, ಯಶಸ್ಸಿಗಾಗಿ ಕಾಯುತ್ತಿದಿರೆಂದರ್ಥವಾಗಿದೆ.

ಇದನ್ನು ಓದಿ: ಆರಂಭಿಕ ಆರ್ಥಿಕ ಸ್ವತಂತ್ರಕ್ಕಾಗಿ 5 ನಿಯಮಗಳು

4. Intellectual humility

ನಿಮ್ಮಲ್ಲಿ ಬೌದ್ಧಿಕ ನಮ್ರತೆ(intellectual humility) ಇರುವುದು ತುಂಬಾನೇ ಮುಖ್ಯವಾಗಿದೆ ಎಂದು ಚಾರ್ಲಿ ಹೇಳುತ್ತಾರೆ. ಬೌದ್ಧಿಕ ನಮ್ರತೆ ಎಂದರೆ ನಿಮಗೆ ಕಡಿಮೆ ತಿಳಿದಿದೆ ಎಂದು ನಂಬುವುದಾಗಿದೆ. ಇದರಿಂದ ನೀವು ಇನ್ನಷ್ಟು ಕಲಿಯಲು ಗಮನ ಹರಿಸುತ್ತೀರಾ ಮತ್ತು ಬುದ್ಧಿವಂತರಾಗುತ್ತೀರಾ.

5. Analytical rigor

ವಿಶ್ಲೇಷಣಾತ್ಮಕ ಕಠಿಣತೆ(analytical rigor) ಎಂದರೆ ವ್ಯವಸ್ಥಿತ ವಿಧಾನ(systematic approach) ಇಲ್ಲ ವೈಜ್ಞಾನಿಕ ವಿಧಾನದಿಂದ(scientific method) ಕೇಳುವುದು, ಒಳಗಿನ ಕರುಳಿನ ಭಾವನೆಯಿಂದಲೇ(gut feeling) ನೀವು ಯಾವುದಾದರು ಮೌಲ್ಯ ನೀಡಿದರೆ ಬೆಲೆಯ ಆಧಾರದ ಮೇಲೆ ಮೌಲ್ಯ ನೀಡಬೇಡಿ. ಮೌಲ್ಯ ತಿಳಿಯಲು ಗುಣಮಟ್ಟ(quality), ಅನುಕೂಲ(advantages), ದೀರ್ಘಕಾಲೀನ ಪರಿಣಾಮ(long term impact) ರೀತಿಯ ನಿಯತಾಂಕಗಳು(parameters) ಕೂಡ ಇವೆ. ಚಾರ್ಲಿ ಪ್ರಗತಿ(progress) ಎನ್ನುವ ಪರಿಕಲ್ಪನೆಯನ್ನು ಹಂಚಿಕೊಳ್ಳುತ್ತಾರೆ. ನೀವು ಅಧಿಕ ನಿರತ(busy) ಮತ್ತು ಸಕ್ರಿಯ ಇರುವುದರಿಂದ ಪ್ರಗತಿ ಕಾಣಲು ಸಾಧ್ಯವಿಲ್ಲ. ಬದಲಿಗೆ ಬದುಕಿನಲ್ಲಿ ಕೆಲವು ಅರ್ಥಪೂರ್ಣ ಗುರಿಯನ್ನು ಸಾಧಿಸಬೇಕು. ಇಲ್ಲ ಒಂದು ಕಠಿಣ ಕಾರ್ಯವನ್ನು ಮುಗಿಸಬೇಕು, ಅದನ್ನೇ ಪ್ರಗತಿ ಎನ್ನುತ್ತಾರೆ.

"thinking forwards and backwards" ಎಂಬ ಪರಿಕಲ್ಪನೆಯನ್ನು ಚಾರ್ಲಿ ಹಂಚಿಕೊಳ್ಳುತ್ತಾರೆ. ಇದರಲ್ಲಿ ನೀವು ಒಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುವಾಗ ಪ್ರತಿಯೊಂದು ಸನ್ನಿವೇಶದ ಧನಾತ್ಮಕ(positive) ಮತ್ತು ಋಣಾತ್ಮಕ(negetive) ಬಗ್ಗೆ ತಿಳಿಯಬೇಕು.

6. Allocation

"proper allocation of capital is an investor's number one job", ಎಂದು ಚಾರ್ಲಿ ಹೇಳುತ್ತಾರೆ.

ಅಂದರೆ ನಮ್ಮ ಹಣವನ್ನು ಎಲ್ಲಿ, ಎಷ್ಟು ಹೂಡಿಕೆ ಮಾಡಬೇಕೆಂಬುದು ಒಬ್ಬ ಹೂಡಿಕೆದಾರನ ಮುಖ್ಯ ಕಾರ್ಯವಾಗಿದೆ.

ಇದನ್ನು ಓದಿ: ಆರ್ಥಿಕವಾಗಿ ಸ್ವತಂತ್ರಗೊಳಿಸುವ 14 ಸ್ವತ್ತುಗಳು

7. Patience

ತಾಳ್ಮೆಯ ಕೌಶಲ್ಯವನ್ನು ಅಭಿವೃದ್ಧಿ ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿದೆ ಎಂದು ಚಾರ್ಲಿ ಹೇಳುತ್ತಾರೆ. ಇದು ಏಕೆಂದರೆ ನಿಮಗೆ ದಿನನಿತ್ಯ ಪ್ರಗತಿ(progress) ಕಾಣುವುದಿಲ್ಲ. ನೀವು ಹೂಡಿಕೆ ಮಾಡಿದ ಅಧಿಕ ಸಮಯದ ನಂತರ ಫಲಿತಾಂಶ ಕಾಣಸಿಗುತ್ತದೆ. ಆದರೆ ಅನೇಕರು ಆ ಸಮಯದಲ್ಲಿ ತಾಳ್ಮೆಯಿಲ್ಲದೆ(impatient) ಕಾಂಪೌಂಡಿಂಗ್ನ ಶಕ್ತಿಯನ್ನು ಮುರಿಯುತ್ತಾರೆ.

"enjoy the process along with the proceeds, because the process is where you live" ಎಂದು ಚಾರ್ಲಿ ಹೇಳುತ್ತಾರೆ.

ಅಂದರೆ ಫಲಿತಾಂಶದ ಬಗ್ಗೆ ಅಧಿಕ ಯೋಚಿಸದೆ ಪ್ರಗತಿಯ ಮೇಲೆ ಗಮನ ಹರಿಸಿ ಎಂಬುದಾಗಿದೆ.

8. Decisiveness

"be careful when others are greedy and greedy when others are fearful" ಎಂದು ಚಾರ್ಲಿಯವರು ಹೇಳುತ್ತಾರೆ.

ಅಂದರೆ ಪ್ರತಿಯೊಬ್ಬ ವ್ಯಕ್ತಿಯೂ ಆತ್ಮವಿಶ್ವಾಸದಿಂದಿದ್ದು ಅಧಿಕ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ, ನೀವು ನಿಲ್ಲಬೇಕು. ಎಲ್ಲರೂ ಹೂಡಿಕೆ ಮಾಡಲು ಗಾಬರಿಗೊಂಡಾಗ ನೀವು ಹೂಡಿಕೆ ಮಾಡಿ. ಇದಕ್ಕಾಗಿ ನೀವು ನಿರ್ಣಾಯಕತೆಯನ್ನು ಬೆಳೆಸಿಕೊಳ್ಳಬೇಕು. ಅಂದರೆ ಆತ್ಮವಿಶ್ವಾಸದಿಂದ ಕ್ರಮವನ್ನು ತೆಗೆದುಕೊಳ್ಳುವುದಾಗಿದೆ ಮತ್ತು ತಮ್ಮ ಮೇಲೆ ಭರವಸೆ ಇಟ್ಟುಕೊಂಡಿರಬೇಕು.

9. Change

ಇದರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ಸಮಯದ ಜೊತೆ ತಮ್ಮಲ್ಲಿ ಸ್ವಲ್ಪ ಬದಲಾವಣೆಯನ್ನು ತರಬೇಕು ಎಂದು ಚಾರ್ಲಿ ಹೇಳುತ್ತಾರೆ. ನೀವು ಆ ಬದಲಾವಣೆ ತರದಿದ್ದರೆ ಹಿಂದುಳಿಯುತ್ತೀರಾ.

10. Focus

ಒಬ್ಬ ವ್ಯಕ್ತಿಯ ದೊಡ್ಡ ಹವ್ಯಾಸ ಗಮನ ಹರಿಸುವುದಾಗಿದೆ ಎಂದು ಚಾರ್ಲಿ ಹೇಳುತ್ತಾರೆ. ನೀವು ಓಮ್ಮೆ ಗುರಿಯ ಬಗ್ಗೆ ಸ್ಪಷ್ಟವಾಗಿದ್ದರೆ ಅದನ್ನು ಸಾಧಿಸಲು ಗಮನ ಹರಿಸಬೇಕಿರುತ್ತದೆ. ನೀವು ಸುಲಭವಾಗಿ ವ್ಯಾಕುಲಗೊಂಡರೆ(disturb) ದೊಡ್ಡದನ್ನು ಸಾಧಿಸಲು ಸಾಧ್ಯವಿಲ್ಲ.

ಇದನ್ನು ಓದಿ: How to Invest in 20s

Lesson 5: Successful people to simple things greatly.

why are successful people so simple in kannada
simple things greatly

"spend each day trying to be a little wiser then you are when you woke up. discharge your duty faithfully and well" ಎಂದು ಚಾರ್ಲಿ ಅವರು ಹೇಳುತ್ತಾರೆ.

ಅಂದರೆ ನಮ್ಮ ದಿನದ ಮುಖ್ಯ ಕಾರ್ಯಗಳನ್ನು ಶುದ್ಧ ಮನಸ್ಸಿನಿಂದ ಮಾಡಬೇಕು ಮತ್ತು ಉತ್ತಮವಾದದನ್ನು ನೀಡಬೇಕು. ಪ್ರತಿದಿನ ನಮ್ಮನ್ನು ಉತ್ತಮ ಮಾಡಿಕೊಳ್ಳುವ ಬಗ್ಗೆ ಗಮನ ಹರಿಸಬೇಕು.

ಚಾರ್ಲಿ, ಬದುಕು ಸಾಮಾನ್ಯವಾಗಿ ಕಠಿಣಕಾರವಾಗಿದೆ. ಹೀಗಾಗಿ ಸಕಾರತ್ಮಕವಾಗಿ ಇರಲು ನಾನು 3 ವಿಷಯಗಳನ್ನು ಮಾಡುತ್ತೇನೆ ಎಂದು ಹೇಳುತ್ತಾರೆ. ಅವೆಂದರೆ,

1. Have low expectations

ಕೆಲಸವನ್ನು 100% ಮಾಡಿ ಅದರ ನಿರೀಕ್ಷೆಗಳು ಕಡಿಮೆ ಇರಲಿ.

2. Have a sense of humour

ಕೆಲಸವನ್ನು ಗಂಭೀರವಾಗಿ(serious) ಮಾಡಿ. ಆದರೆ ನಿಮ್ಮನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ.

3. Surround yourself with the love of friends and family

ಸಾಧ್ಯವಾದರೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಜೊತೆ ಸಮಯವನ್ನು ಕಳೆಯಿರಿ. ಇದರಿಂದಲೂ ಬದುಕಿನಲ್ಲಿ ನೀವು ಸಕಾರತ್ಮಕವಾಗಿ ಇರುತ್ತೀರಾ.

ಇದಾಗಿತ್ತು ಪೂರ್ ಚಾರ್ಲಿಸ್ ಆಲಮನಕ್ ಪುಸ್ತಕದ ವಿವರಣೆ. ಇದರಲ್ಲಿ ಯಾವ ಅಂಶ ಇಷ್ಟವಾಯಿತು ಎಂದು ಕಮೆಂಟ್ ಮಾಡಿ. ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments