9 Types of Stocks that can be Liked | ಈ 9 ರೀತಿಯ ಸ್ಟಾಕ್‌ಗಳನ್ನು ಇಷ್ಟಪಡಬಹುದು

ಯಾವ ಸ್ಟಾಕ್ ಖರೀದಿಸಬೇಕು? ಯಾವ ಸ್ಟಾಕ್ ಖರೀದಿಸಬಾರದು? ಇಂದು ನಾವು ನೀವು ಖರೀದಿಸಬಹುದಾದ ಕೆಲವು ಸ್ಟಾಕ್ಸ್ ಬಗ್ಗೆ ತಿಳಿಸಲಿದ್ದೇವೆ. ಇವುಗಳನ್ನು ನಾವು ಕುರುಡಾಗಿ(blind) ಆರಿಸುತ್ತಿಲ್ಲ, ಬದಲಿಗೆ ಕೆಲವು ಸಕಾರತ್ಮಕ ಚಿಹ್ನೆಗಳ ಮೇಲೆ ಆರಿಸಲಾಗುತ್ತಿವೆ. ಈ ಲೇಖನ ಕೇವಲ ನಮ್ಮ ವಿಶ್ಲೇಷಣೆಯ ಒಂದು ರೀತಿಯಾಗಿದ್ದು ಶಿಕ್ಷಣದ ಉದ್ದೇಶದಿಂದ(education purpose) ಮಾತ್ರ ಮಾಡುತ್ತಿದ್ದೇವೆ.

ಇದನ್ನು ಓದಿ: ಟ್ರೇಡಿಂಗ್ ನಷ್ಟವನ್ನು(Trading Loss) ಹೇಗೆ ಮರುಪಡೆಯುವುದು?

1. Companies with heavy promoter buying

is promoter buying good or bad in kannada
promoter buying

ಕಂಪನಿಯ ಸ್ಟಾಕ್ ಪೂರ್ತಿ ಕೆಳಗೆ ಹೋಗಿದೆ. ಸ್ಟಾಕ್ ಕಡಿಮೆ ಬೆಲೆಯದಾಗಿದೆ(undervalued). ಆ ಸಮಯದಲ್ಲಿ ಉತ್ತೇಜಕ(promoter) ಸ್ಟಾಕ್ ಖರೀದಿಸುತ್ತಿಲ್ಲವೆಂದರೆ ಅದು ಒಂದು ಕೆಂಪು ನಿಶಾನೆಯಾಗಿದೆ(red flag). ಅದೇ ಉತ್ತೇಜಕ ಸ್ಟಾಕ್ ಖರೀದಿಸುತ್ತಿದ್ದರೆ ಆತನಿಗೆ ಆತನ ಉದ್ಯಮದ ಮೇಲೆ ನಂಬಿಕೆ ಇರುವುದರಿಂದ ಖರೀದಿಸುತ್ತಿರುತ್ತಾನೆ. ಕೇವಲ 1% ಹೆಚ್ಚಿಸಿದ್ದನೆಯೇ ಇಲ್ಲವೇ ಎಂದು ನೋಡಬೇಡಿ. ಬದಲಿಗೆ ಹಿಂದಿನ 2 ತ್ರೈಮಾಸಿಕ(quarter) ಹೆಚ್ಚಿಸಿದ್ದರೆ ಅದು ಸಕಾರತ್ಮಕ ಚಿಹ್ನೆಯಾಗಿದೆ(positive sign). ಕೇವಲ ಇದೊಂದೇ ಅಂಶದ ಮೇಲೆ ಸ್ಟಾಕ್ ಅನ್ನು ನಿರ್ಧರಿಸಬೇಡಿ. ಮುಂದೆ ತಿಳಿಸುವ ಅಂಶಗಳ ಮೇಲೂ ಗಮನ ಹರಿಸಿ.

2. Companies with highly focused business

ಒಂದು ಕಂಪನಿ ಒಂದೇ ಕೆಲಸವನ್ನು ಮಾಡುತ್ತಾರೆ. ಆ ಒಂದೇ ಕೆಲಸವನ್ನು ತುಂಬಾ ಚೆನ್ನಾಗಿ ಮಾಡುತ್ತಾರೆ. ಅವರುಗಳು ಬೇರೆ ಬೇರೆ ಉದ್ಯಮಗಳಲ್ಲಿ(industry) ಅಧಿಕ ವೈವಿಧ್ಯಗೊಳಿಸುತ್ತಿಲ್ಲ(diversify) ಮತ್ತು ತ್ರೈಮಾಸಿಕ ಕರೆ ಅಥವಾ ಸಂದರ್ಶನದಲ್ಲಿ(interview) ಹೂಡಿಕೆದಾರರಿಗೆ ಸಾಂತ್ವಾನ ನೀಡಲು ಬೇಡದ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲವೆಂದರೆ ಒಳ್ಳೆಯದಾಗಿದೆ.

ಒಂದು ಉದ್ಯಮ ಸಂದರ್ಶನದಲ್ಲಿ, "ನಮ್ಮ 'A' ಭಾಗ ಲಾಭದಲ್ಲಿ ಇಲ್ಲ, 'B' ಕೂಡ ಇಲ್ಲ, ಆದರೆ 'C' ಭಾಗ ಅಧಿಕ ಲಾಭದಲ್ಲಿ ಇದೆ" ಎಂದು ಹೇಳುವ ಉದ್ಯಮದಿಂದಲೂ ದೂರವಿರಿ. ಆಡಳಿತ(management) ನಗದು ಉಳಿತಾಯ(cash conserve) ಮಾಡುವ ಮೇಲೆ ಗಮನ ಹರಿಸಬೇಕು. ಅವರು ಜಾಹೀರಾತು ವೆಚ್ಚ(ads cost), ಮಾರ್ಕೆಟಿಂಗ್ ವೆಚ್ಚವನ್ನು(marketing cost) ಸಂರಕ್ಷಿಸಬೇಕು. ಕೆಟ್ಟ ಸಮಯಕ್ಕೆ ತಯಾರಿರಬೇಕು ಮತ್ತು ಉದ್ಯಮದಲ್ಲಿ ತಾತ್ಕಾಲಿಕ ಸಮಸ್ಯೆ ಇದೆ ಮತ್ತು ಅದನ್ನು ಪರಿಹರಿಸಲು ನಾವು ಈ ಕಾರ್ಯಸಾಧ್ಯ ಹಂತಗಳನ್ನು(actionable steps) ತೆಗೆದುಕೊಳ್ಳುತ್ತಿದ್ದೇವೆ ಎನ್ನಬೇಕು. ಶಬ್ದ(noice) ಕಡಿಮೆ ಇದ್ದು ಗಮನ(focus) ಹರಿಸುತ್ತಿರುವ ಆಡಳಿತ ಇರುವ ಕಂಪನಿಯನ್ನು ಹುಡುಕಿ.

ಇದನ್ನು ಓದಿ: ನಿಮ್ಮ ಸಂಬಳವನ್ನು ಟಾಪ್ 1% ನಂತೆ ನಿರ್ವಹಿಸಿ

3. Companies with commodity-to-brand transformation

what are the advantages of brand company in kannada
commodity to brand

ಯಾವುದೇ ಉದ್ಯಮ ಸರಕುಗಳನ್ನು(commodity) ಗುರುತಾಗಿ(brand) ಪರಿವರ್ತಿಸಿ ಉದ್ಯಮ ಮಾಡುತ್ತಿದ್ದರೆ ಅದು ಸಕಾರತ್ಮಕ ಚಿಹ್ನೆಯಾಗಿದೆ. ಉದಾಹರಣೆಗೆ, ಎಂಆರ್ಎಫ್(mrf).., ಟೈಯರ್, ರಬ್ಬರ್ ಇವುಗಳು ಕೇವಲ ಸರಕುಗಳಾಗಿವೆ. ನೀವು ಟೈಯರ್ ಬದಲಿಸಲು ಹೋದಾಗ ಇಲ್ಲ ಅಧಿಕ ಜನರು, "ಎಂಆರ್ಎಫ್ ಟೈಯರ್ ನೀಡಿ" ಎನ್ನುತ್ತಾರೆ. ಇದು ತುಂಬಾ ಅಸಾಮಾನ್ಯವಾಗಿದೆ. ಜಗತ್ತಿನಲ್ಲಿ ಈ ರೀತಿ ಅನೇಕ ಬಾರಿ ಆಗುವುದಿಲ್ಲ. ಇನ್ನೂ ಬೇರೆ ಉದಾಹರಣೆ ನೀಡಬೇಕೆಂದರೆ ಫೆವಿಕಾಲ್(fevivol), ಬಿಸ್ಲೇರಿ(bisleri) ಇತ್ಯಾದಿ.

ಸರಕುಗಳನ್ನು ಗುರುತಾಗಿ ಮಾಡಿರುವ ಕಾರಣ ಈ ಕಂಪನಿಗಳು ಅಧಿಕ ಲಾಭ ಮಾಡುತ್ತವೆ. ಅನೇಕ ಕಂಪನಿ ಸರಕುಗಳ ಬೆಲೆ ಹೆಚ್ಚಿದಂತೆ ಅಂಚಿನ(margin) ಬೆಲೆಯನ್ನು ಹೆಚ್ಚಿಸುತ್ತಾರೆ. ಆ ರೀತಿಯ ಕಂಪನಿ ಬೇಡ. ಆ ಕಂಪನಿ ಹೆಚ್ಚಿರುವ ಸರಕುಗಳ ಬೆಲೆಯನ್ನು ಹೀರಿಕೊಳ್ಳುಬೇಕು(absorp), ಇಲ್ಲ ಗ್ರಾಹಕರ ಮೇಲೆ ಹಾಕಿ, ತಮ್ಮ ಉದ್ಯಮವನ್ನು ಆರೋಗ್ಯಕರ ಮಾರ್ಗದಲ್ಲಿ(healthy way) ನಡೆಸುತ್ತಿದ್ದರೆ ಸರಿಯಾಗಿದೆ.

4. Companies with visionary promoters

what does it mean to be a visionary promoter in kannada
visionary promoters

ನೀವು ಹಣ ತೆಗೆದುಕೊಂಡು ಕಂಪನಿಯಿಂದ ಹೊರ ಹೋಗುವ ಉತ್ತೇಜಕನನ್ನು ನೋಡಬೇಡಿ. ಅವರು ಕೇವಲ ಅವರಿಗಾಗಿ ಸಂಪತ್ತು ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ. ಬದಲಿಗೆ ಪರಂಪರೆಯ ನಿರ್ಮಾಣ(legacy build) ಮಾಡಬೇಕೆಂದಿರುವ ಉತ್ತೇಜಕನನ್ನು ಹುಡುಕಿ. ಅಂದರೆ ಉದ್ಯಮದ ಕಾರ್ಯಗತಗೊಲಿಸಲು(execute) ಇರುವ ಉತ್ತೇಜಕ ಆಗಿರಬೇಕೇ ಹೊರತು ಹೊರ ಹೋಗುವವರಲ್ಲ. ಅವರು ಮಾಡುತ್ತಿರುವ ಕೆಲಸಕ್ಕೆ ಉತ್ಸಾಹಭರಿತ(passionate) ಇರಬೇಕು. ಹೀಗಾಗಿ ಬಹು ಪೀಳಿಗೆಯ ವ್ಯವಹಾರ(multi generational business) ಮಾಡಿದ ಉತ್ತೇಜಕ ಇರುವ ಉದ್ಯಮವನ್ನು ಹುಡುಕಿ.

ದಿನನಿತ್ಯದ ಬದುಕಿನಲ್ಲಿ ನಾವು ಯಾರಿಗಾದರೂ 10,000 ರೂ ಕೊಡಬೇಕೆಂದಿದ್ದರೂ ಯೋಚಿಸಿ ನೀಡುತ್ತೇವೆ. ನಾವು ಷೇರು ಮಾರುಕಟ್ಟೆಯಲ್ಲಿ ಸಾವಿರದಿಂದ ಲಕ್ಷದಷ್ಟು ಹಣವನ್ನು ಹಾಕುತ್ತೇವೆ. ಆದರೆ ನಾವು ಆ ಕಂಪನಿಯನ್ನು ನಿರ್ವಹಿಸುತ್ತಿರುವ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳುವುದಿಲ್ಲ. ಹೀಗಾಗಿ ನೀವು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಆ ಹೂಡಿಕೆಯ ಕಂಪನಿಯ ವ್ಯಕ್ತಿಯ ಇತಿಹಾಸ, ಕುಟುಂಬದ ಇತಿಹಾಸ, ಉದ್ಯಮ ಹೇಗೆ ನಡೆಸಿದರು. ಆವೇಗದ(momentum) ಬೆನ್ನಟ್ಟುತ್ತಾರೆಯೇ ಇಲ್ಲ ಒಂದೇ ಉದ್ಯಮಕ್ಕೆ 20 ರಿಂದ 30 ವರ್ಷ ನೀಡಿದರೆಯೇ ಎಂದು ನೋಡಿ. ಈ ಎಲ್ಲಾ ವಿಷಯಗಳ ಮೇಲೆ ಒಂದು ಗಮನವಿಡಿ.

ಇದನ್ನು ಓದಿ: ಆರಂಭಿಕರಿಗಾಗಿ ಸಂಪೂರ್ಣ ಹೂಡಿಕೆ ಮತ್ತು ಷೇರು ಮಾರುಕಟ್ಟೆ ಮಾರ್ಗದರ್ಶಿ

5. Companies obsessed with business safety

ಕಂಪನಿಯು ಉದ್ಯಮದಲ್ಲಿ ಯಾವುದಾದರೂ ಅಪಾಯ ನೋಡಿದಾಗ ಅದನ್ನು ತಗ್ಗಿಸಲು(mitigate) ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು. ಅದು ಬಿಟ್ಟು ಮಿತಿಮೀರಿದ ಬಳಕೆ(over leverage) ತೆಗೆದುಕೊಂಡು ಅಪಾಯದಲ್ಲಿ ತ್ವರಿತ ಬೆಳವಣಿಗೆಯಾಗಲು(rapid growth) ನೋಡಬಾರದು. ಕೆಟ್ಟ ಸಮಯವೆಂದರೆ ಮೀಸಲಾತಿಯಾಗಿದೆ(reservation). ಹೀಗಾಗಿ ಈ ರೀತಿ ಸುರಕ್ಷತಾ ಆಯ್ಕೆ(safety option) ಇರುವ ಉದ್ಯಮವನ್ನು ಹುಡುಕಿ. ಇದರ ಸುಳಿವು(clue) ಈ ರೀತಿ ಇರುತ್ತದೆ.

ನಾನು ಸ್ವಲ್ಪ ಸಮಯ ಒಂದು ಕಾರ್ಖಾನೆಯನ್ನು(factory) ಸಾಮರ್ಥ್ಯಕ್ಕಿಂತ ಹೆಚ್ಚಿನ(over capasity) ಮಟ್ಟದಲ್ಲಿ ನಡೆಸುವೆ, 100% ಬದಲು 105% ಸಾಮರ್ಥ್ಯದ ಬಳಕೆಯಾಗುತ್ತಿದೆ. ಹಾಗಂತ ಒಂದು ತ್ರೈಮಾಸಿಕದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಬಳಕೆಯಾಗಿದೆ ಎಂದು, ಇನ್ನೊಂದು ಕಾರ್ಖಾನೆ ತೆಗೆಯುವುದಿಲ್ಲ. ಬದಲಿಗೆ ಈ ಬೇಡಿಕೆ(demand) ತಾತ್ಕಾಲಿಕವೇ ಇಲ್ಲ ಸುಸ್ಥಿರ(sustain) ಇರುವುದೇ ಎಂಬುದನ್ನು ತಿಳಿದು ಬಂಡವಾಳ ಹಂಚಿಕೆ(capital allocation) ಮಾಡುವೆ. ಇದು ಒಂದು ಕಂಪನಿ ಸಂಪ್ರದಾಯವಾದಿ(conservative) ಇದೆ ಎಂಬುದನ್ನು ತಿಳಿಸುತ್ತದೆ.

6. Consumer staples & defensive stocks

what is defensive stock in kannada
defensive stock

ರಕ್ಷಣಾತ್ಮಕ ಸ್ಟಾಕ್(defensive stock) ಎಂದರೆ ಮಾರುಕಟ್ಟೆಯ ಕೆಟ್ಟ ಸಮಯದಲ್ಲಿ ಅಷ್ಟು ಕೆಟ್ಟದಾಗಿ ನಿರ್ವಹಿಸುವುದಿಲ್ಲ(perform). ಉದಾಹರಣೆಗೆ ಔಷಧ(pharma), ಎಫ್ಎಂಸಿಜಿ(fmcg), ದೈನಂದಿನ ಅಗತ್ಯಗಳು(daily needs) ಇಲ್ಲ, ಉನ್ನತ ಗುಣಮಟ್ಟದ ಐಷಾರಾಮಿ(premium luxury) ವರ್ಗದಲ್ಲಿ ಇರದ ಮೌಲ್ಯ(value) ಇರುವ ಸ್ಟಾಕ್ಸ್, ಇಲ್ಲ ಮಾರುಕಟ್ಟೆಯಲ್ಲಿ ತುಂಬಾ ದೊಡ್ಡದಾಗಿ ವಿಸ್ತರಿಸಿರುವ(expand) ಸ್ಟಾಕ್ಗಳು ಬರುತ್ತವೆ. ಪ್ರತಿಯೊಬ್ಬರು ಈ ಕಂಪನಿಗಳ ವಸ್ತುವನ್ನು ಬಳಸುತ್ತಾರೆ.

ಇದನ್ನು ಓದಿ: ಬಹು ಹಂತಗಳಲ್ಲಿ ಹೂಡಿಕೆದಾರರಿಗೆ ಲಾಭದಾಯಕತೆಯನ್ನು ಹೆಚ್ಚಿಸುವುದೇಗೆ?

7. Companies with justified valuations

ಒಂದು ಕಂಪನಿಯ ಲಾಭ ಮತ್ತು ಇಪಿಎಸ್(eps) ಎಷ್ಟು ಇದೆಯೋ ಅದಕ್ಕೆ ಸಮರ್ಥಿಸುವ ಮೌಲ್ಯಮಾಪನ(valuation) ಇರಬೇಕು. ಯಾವುದಾದರೂ ಅಂಗಡಿ ನನಗೆ 1 ಕೋಟಿಗೆ ಸಿಗುತ್ತಿದ್ದರೆ ಅದರಿಂದ ನಾನು 1 ತಿಂಗಳು ಕನಿಷ್ಠ ಬಾಡಿಗೆ ಬರುವುದಾದರೆ ತೆಗೆದುಕೊಳ್ಳುವೆ. ಅದು ಬಿಟ್ಟು 1 ಕೋಟಿಗೆ ತೆಗೆದುಕೊಂಡು ವರ್ಷದ ಬಾಡಿಗೆ 50,000 ರೂ ಇದ್ದರೆ ಸರಿಯಾಗುವುದಿಲ್ಲ. ಅಂದರೆ ನನ್ನ ಹೂಡಿಕೆ ಚೇತರಿಸಿಕೊಳ್ಳಲು(recover) ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡುವೆ.

ಕಂಪನಿಯ ಮೌಲ್ಯಮಾಪನ ಕೇವಲ ಸಿದ್ಧಾಂತ(theory) ಆಧಾರಿತವಿದ್ದರೆ ಅದು ಬೇಡ, ಅದು ಪ್ರಚಾರದಲ್ಲಿ(hype) ಇದ್ದರೆ ಬೇಡ. ಬದಲಿಗೆ ಸಂಖ್ಯೆಯಲ್ಲಿ ಸಮರ್ಥಿಸುವ ಮೌಲ್ಯಮಾಪನ ಇರುವ ಕಂಪನಿ ಬೇಕಿದೆ. ಏಕೆಂದರೆ ಆ ಕಂಪನಿಗಳು ಸುಸ್ಥಿರವಿರುತ್ತವೆ, ಅವುಗಳು ಬೀಳುವ ಅವಕಾಶ ಕಡಿಮೆ, ಏಕೆಂದರೆ ಅವುಗಳಿಗೆ ಒಂದು ಗಳಿಕೆಯ ಬೆಂಬಲವಿರುತ್ತದೆ(earning support).

8. Companies with self funded growth

what does it mean by self-funded in kannada
self-funded

ಬಂಡವಾಳ ಏರಿಕೆ(capital rise) ಮಾಡಬೇಕಿರುವ ಕಂಪನಿ ಬೇಡ, ಬದಲಿಗೆ ತನ್ನ ಆಂತರಿಕ(internal) ನಿರ್ಧಾರದಿಂದ ತನ್ನ ಭವಿಷ್ಯಕ್ಕೆ ಹಣಕಾಸು(funding) ಮಾಡುವಂತಿರಬೇಕು. ಹೀಗಾಗಿ ಹಿಂಜರಿತದ(recession) ಸಮಯದಲ್ಲೂ ಉದ್ಯಮ ಎಷ್ಟು ಸುಸ್ಥಿರ ಇರಬೇಕೆಂದರೆ, ಆ ಸಮಯದಲ್ಲಿ ಉಚಿತ ನಗದು(free cash) ಉತ್ಪಾದಿಸುತ್ತಿರಬೇಕು. ಅದು ಯಾವುದೇ ಬಾಹ್ಯ ಹಣಕಾಸು(external funding) ಇಲ್ಲ ಸಾಲದ(loan) ಮೇಲೆ ನಿಂತಿರಬಾರದು.

ಇದನ್ನು ಓದಿ: ದೊಡ್ಡ ಲಾಭಕ್ಕಾಗಿ ಪೆನ್ನಿ ಸ್ಟಾಕ್‌ಗಳು(Penny stocks)

9. Companies with quality earning growth

ಒಂದು ಕಂಪನಿ 10 ರೂಗೆ ಜಾಹೀರಾತು(ads) ಓಡಿಸಿ 11 ರೂ ಗಳಿಸುತ್ತಿದ್ದರೆ ಆ ಕಂಪನಿ ಬೇಡ. ಯಾವುದೇ ಕಂಪನಿಯ ಲಾಭ ಅದರ ವಸ್ತುವಿನಿಂದ ನೀಡಿದ ಮೌಲ್ಯದಿಂದ ಇರಬೇಕು. ಹೀಗಾಗಿ ಉದ್ಯಮ ಲಾಭದ ಮೇಲೆ ಕಂಪನಿಗೆ ಆದ್ಯತೆ ನೀಡಿ ಹೊರತು ಆದಾಯ ಬೆಳವಣಿಗೆಯ(revenue growth) ಮೇಲೆ ಅಲ್ಲ. ಏಕೆಂದರೆ ಗ್ರಾಹಕರ ಸ್ವಾಧೀನ(customer acquisition) ಹೆಚ್ಚಿಸಿ, ಆದಾಯ ಬೆಳವಣಿಗೆಯನ್ನು ತರಬಹುದು.

ಉದಾಹರಣೆಗೆ ನಾನು ಯಾವುದಾದರೂ ವಸ್ತುವನ್ನು 500 ರೂಗೆ ಮಾರುತಿರುವೆನು ಎಂದುಕೊಳ್ಳಿ. ಅದನ್ನು ತಯಾರಿಸಲು ನನಗೆ 200 ರೂ ಆಗುತ್ತದೆ. ಹೀಗಾಗಿ ಉಳಿದ 300 ರೂ ಬಾಕಿ ಖರ್ಚುಗಳನ್ನು ಮಾಡಲು ನನ್ನ ಬಳಿ ಇದೆ. ಸಾಮಾನ್ಯವಾಗಿ ಪ್ರಚಾರ ಮತ್ತು ಮಾರಾಟಕ್ಕೆ(marketing) 100 ರೂ ಖರ್ಚು ಮಾಡಿದಾಗ ಆ ವಸ್ತುವು ಮಾರಾಟವಾಗುತ್ತದೆ.

ಈಗ ನಿಧಾನಗತಿ(slowdown) ಇದೆ ಎಂದುಕೊಳ್ಳಿ. ಈಗ ಪ್ರಚಾರ ಮತ್ತು ಮಾರಾಟಕ್ಕೆ 100 ರೂ ಬದಲು 300 ರೂ ಖರ್ಚು ಮಾಡುತ್ತಿರುವೆ ಎಂದುಕೊಳ್ಳಿ. ಆದಾಯ ಕಡಿಮೆಯಾಗಬಾರದು. ಈಗ 500 ರೂ ಮಾರಾಟವಾಗುತ್ತಿದೆ(sales). ಆದರೆ ಅದರ ಹಿಂದೆ ನನ್ನ ವೆಚ್ಚ(cost), ಉತ್ಪಾದನೆ(manufacturing) ಮಾರಾಟಕ್ಕೂ(sales) 500 ರೂ ಆಗುತ್ತಿವೆ. ಹೀಗಾಗಿ ಆದಾಯ ಹೆಚ್ಚುತ್ತಿರುವಂತೆ ಕಾಣುತ್ತದೆ. ಆದ್ದರಿಂದ ಆದಾಯದ ಬದಲು ಗಳಿಕೆಯ ಗುಣಮಟ್ಟ(quality of earnings) ಮತ್ತು ಗಳಿಕೆಯ ಬೆಳವಣಿಗೆಯ(earnings growth) ಮೇಲೆ ಗಮನ ಕೊಡಿ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.