Watch Video
ನೀವು ಷೇರು ಮಾರುಕಟ್ಟೆಗೆ ಆರಂಭಿಗನಾಗಿರುವಿರಾ(beginner)? ಷೇರು ಮಾರುಕಟ್ಟೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು, ಯಾವುದನ್ನು ತೆಗೆದುಕೊಳ್ಳಬಾರದು ಎಂಬುದು ತಿಳಿಯುತ್ತಿಲ್ಲವೇ? ಆಗಿದ್ದರೆ ಈ ಲೇಖನ ಆ ಪ್ರೆಶ್ನೆಗಳಿಗೆ ಮಾರ್ಗದರ್ಶಿ(guide) ರೀತಿ ಸಹಾಯ ಮಾಡುತ್ತದೆ. ಏಕೆಂದರೆ ಹೂಡಿಕೆಯನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಲಾಭದಾಯಕವಿರುತ್ತದೆ. ತಪ್ಪಾದ ರೀತಿಯಲ್ಲಿ ಮಾಡಿದರೆ ಸಂಪತ್ತು ನಾಶಕ(wealth destroyer) ಕೂಡ ಆಗಿದೆ.
ಈ ಲೇಖನ ತಮ್ಮ ಹಣಕಾಸನ್ನು(finance) ಖುದ್ದಾಗಿ ನಿರ್ವಹಣೆ ಮಾಡಲು ಬಯಸುವವರಿಗೆ ವಿಶ್ವಾಸಾರ್ಹ ಮಾರ್ಗದರ್ಶಿ ರೀತಿ ಕೆಲಸ ಮಾಡುತ್ತದೆ. ಈ ಲೇಖನದಲ್ಲಿ ಹಣಕಾಸಿನ ಮೇಲೆ ಬರುವ ನಿಮ್ಮ ಎಲ್ಲಾ ಪ್ರೆಶ್ನೆಗಳಿಗೆ ಅಧ್ಯಾಯವಾರು(chapter wise) ಉತ್ತರ ನೀಡಿದ್ದೇವೆ. ನಿಮಗೆ ಬೇಕಿರುವ ಅಧ್ಯಾಯನವನ್ನು ನೀವು ಸ್ಕ್ರೋಲ್ ಮಾಡಿ ನೋಡಬಹುದು.
ಇದನ್ನು ಓದಿ: ಬಹು ಹಂತಗಳಲ್ಲಿ ಹೂಡಿಕೆದಾರರಿಗೆ ಲಾಭದಾಯಕತೆಯನ್ನು ಹೆಚ್ಚಿಸುವುದೇಗೆ?ನೀವು ಹೂಡಿಕೆಯಿಂದ ಅಧಿಕ ರಿಟರ್ನ್ಸ್ ಬಯಸುತ್ತಿರುವಿರಾ? ಏಕೆಂದರೆ ಎಫ್ಡಿಯಿಂದ(fd) ಹಣದುಬ್ಬರ(inflation) ಸೋಲಿಸುವಷ್ಟು ರಿಟರ್ನ್ಸ್ ಸಿಗುತ್ತಿಲ್ಲವೇ? ಹಾಗಿದ್ದರೆ ನಿಮಗೆ ಮ್ಯೂಚುಯಲ್ ಫಂಡ್ಸ್ (mutual funds) ಸರಿಯಾಗಿದೆ. ಏಕೆಂದರೆ ಮ್ಯೂಚುಯಲ್ ಫಂಡ್ ಅನ್ನು 5 ರಿಂದ 10 ವರ್ಷಕ್ಕಿಂತ ಅಧಿಕ ಅನುಭವವಿರುವವವರು ನಿರ್ವಹಣೆ ಮಾಡುತ್ತಿರುತ್ತಾರೆ. ಹೀಗಾಗಿ ನೀವು ಆರಂಭಿಗರಾಗಿ ಇವರ ಮುಂದೆ ಸ್ಪರ್ಧಿಸುವುದು(compete) ಸರಿಯಲ್ಲ. ಉದಾಹರಣೆಗೆ ನೀವು ಬ್ಯಾಟ್ ಹಿಡಿದ ತಕ್ಷಣ ವಿರಾಟ್ ಕೊಹ್ಲಿ(virat kohli) ರೀತಿ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ರಿಟರ್ನ್ ರೀತಿ ನೋಡಿದರೆ ವೃತ್ತಿಪರರಿಂದ(professionals) ನಿರ್ವಹಣೆ ಮಾಡಲಾದ ಮ್ಯೂಚುಯಲ್ ಫಂಡ್ ಅನೇಕ ಸಂದರ್ಭದಲ್ಲಿ ಆರಂಭಿಗರಿಗೆ ಒಳ್ಳೆಯ ರಿಟರ್ನ್ಸ್ ನೀಡಿದೆ.
ನೀವು ರಿಟರ್ನ್ ರೀತಿ ನೋಡಿದರೆ ಮೊದಲ 5 ವರ್ಷ ಮ್ಯೂಚುಯಲ್ ಫಂಡ್ಸ್ ಉತ್ತಮ ರಿಟರ್ನ್ಸ್ ನೀಡುತ್ತದೆ. ಆದರೆ ನೀವು ರಿಟರ್ನ್ಸ್ ಹಿಂದೆ ಅಷ್ಟೇ ಅಲ್ಲದೆ ಬುದ್ಧಿವಂತ ವ್ಯಕ್ತಿಯಾಗಲು(smart person) ಬಯಸಿದರೆ ನೇರವಾಗಿ ಸ್ಟಾಕ್ನಲ್ಲಿ(direct stock) ಹೂಡಿಕೆ ಮಾಡುವುದು ಸೂಕ್ತವಾಗಿದೆ. ಏಕೆಂದರೆ ನೀವು ನಿಮ್ಮ ಹಣವನ್ನು ನೇರವಾಗಿ ಹೂಡಿಕೆ ಮಾಡಿದರೆ ಒಮ್ಮೆ ವೈದ್ಯಕೀಯ ಕ್ಷೇತ್ರವನ್ನು(medical field) ವಿಶ್ಲೇಷಣೆ ಮಾಡುವಿರಿ. ಒಮ್ಮೊಮ್ಮೆ ಐಟಿ ಕ್ಷೇತ್ರ(it field), ಎಫ್ಎಂಸಿಜಿ(fmcg), ಜವಳಿ(textile) ವಿಶ್ಲೇಷಣೆ ಮಾಡುವಿರಿ. 5 ವರ್ಷ ನೀವು ಇವುಗಳನ್ನು ಮಾಡಿದರೆ, ನಿಮ್ಮ ಜ್ಞಾನವು ಸಂಯುಕ್ತವಾಗುತ್ತದೆ(compound). ಈ 5 ವರ್ಷ ನಿಮಗೆ ಮ್ಯೂಚುಯಲ್ ಫಂಡ್ಗಿಂತ ಕಡಿಮೆ ರಿಟರ್ನ್ಸ್ ಬಂದಿರಬಹುದು. ಆದರೆ ನೀವು ಒಬ್ಬ ಬುದ್ಧಿವಂತ ವ್ಯಕ್ತಿಯಾಗುತ್ತೀರಾ. ಏಕೆಂದರೆ ನಿಮಗೆ ಜಗತ್ತಿನ ವಿವಿಧ ವ್ಯವಹಾರದ(business) ಬಗ್ಗೆ ತಿಳಿದಿರುತ್ತದೆ. ನಿಮ್ಮ ಈ ಜ್ಞಾನವು ಬೆಳೆಯುವ ರೀತಿಯೇ ಷೇರು ಮಾರುಕಟ್ಟೆಯಿಂದ ಸಿಗುವ ರಿಟರ್ನ್ಸ್ ಕೂಡ ಬೆಳೆಯುತ್ತದೆ.
ಇದನ್ನು ಓದಿ: ಹೂಡಿಕೆ ಮಾಡುವ ಮುನ್ನ ತೆಗೆದುಕೊಳ್ಳಬೇಕಾದ ಸ್ಟೆಪ್ಗಳುನೀವು ಆಹಾರವನ್ನು ಝೊಮ್ಯಾಟೊ(zomato), ವಸ್ತುಗಳನ್ನು ಅಮೆಜಾನ್(amazon) ರೀತಿಯ ವೇದಿಕೆಯಿಂದ(platform) ಖರೀದಿಸುವವರಾಗಿದ್ದಾರೆ. ಅಂದರೆ ಈ ರೀತಿ ತಂತ್ರಜ್ಞಾನ ಸ್ಫೋಟ(tech burst) ವ್ಯಕ್ತಿಯಾಗಿದ್ದಾರೆ, ನಿಮಗೆ ರಿಯಾಯಿತಿ ದಲ್ಲಾಳಿ(discount broker) ಸರಿಯಾಗಿದೆ. ನೀವು ಶಾಪ್ಗೆ ಹೋದಾಗ ರಶೀದಿ(receipt) ಕೇಳುವವರಾಗಿದ್ದು, ಐಡಿಗಳಿಗೆ ಡಿಜಿಲಾಕರ್(digi locker) ಬದಲು ನಿಜವಾದ ಕಾಯಂಪ್ರತಿಗೆ(hardcopy) ಆದ್ಯತೆ ನೀಡುವವರಾಗಿದ್ದರೆ, ನಿಮಗೆ ಪೂರ್ಣ ಸೇವಾ ದಲ್ಲಾಳಿ(full service broker) ಸರಿಯಾಗಿದೆ.
ಈ ಪ್ರೆಶ್ನೆಯು ವರ್ಗದ ಮೇಲೆ ಅವಲಂಬಿಸಿದೆ. ದೊಡ್ಡ ಕ್ಯಾಪ್(large cap) ರೀತಿಯ ಕಿರಿದಾದ(narrow) ವರ್ಗದಲ್ಲಿ ಕೇವಲ 100 ಸ್ಟಾಕ್ಗಳಲ್ಲಿ ಆಯ್ಕೆ ಮಾಡಬೇಕು. ಮಿಡ್ ಕ್ಯಾಪ್ನಲ್ಲಿ(mid cap) 150 ಸ್ಟಾಕ್ಗಳಲ್ಲಿ ಆಯ್ಕೆ ಮಾಡಬೇಕು. ಹೀಗಾಗಿ ಕಿರಿದಾದ ಫಂಡ್ಸ್ನಲ್ಲಿ ಇಂಡೆಕ್ಸ್ ಫಂಡ್ಸ್ ಆಯ್ಕೆ ಮಾಡುವುದು ಒಳ್ಳೆಯದು. ಏಕೆಂದರೆ ಇವುಗಳಲ್ಲಿ ನಿಧಿ ವ್ಯವಸ್ಥಾಪಕನ(fund manager) ಹತ್ತಿರ ಸ್ಟಾಕ್ಗಳನ್ನು ಆಯ್ಕೆ ಮಾಡಲು ಸೀಮಿತ ಬುಟ್ಟಿ ಇದೆ. ಹೀಗಾಗಿ ಅವನಿಗೆ ಇಂಡೆಕ್ಸ್ ಫಂಡ್ ಸೋಲಿಸಲು ಕಷ್ಟವಾಗುತ್ತದೆ. ಇಲ್ಲಿ ನಿಮ್ಮ ಶುಲ್ಕವನ್ನು(fees) ಕಡಿಮೆ ಮಾಡಲು ಇಂಡೆಕ್ಸ್ ಫಂಡ್ಸ್ಗೆ ಹೋಗಿ.
ಒಂದು ವೇಳೆ ಒಂದು ವರ್ಗದಲ್ಲಿ ಅಧಿಕ ಹೂಡಿಕೆಯ ಅವಕಾಶವಿದ್ದರೆ, ಅಂದರೆ ಬಹು ಕ್ಯಾಪ್(multi cap), ಕೇಂದ್ರೀಕರಿಸಿದ ಫಂಡ್(focused fund), ಫ್ಲೆಕ್ಸಿ ಕ್ಯಾಪ್(flexi cap) ಅಥವಾ ಮೌಲ್ಯ ಫಂಡ್(value fund). ಇದರಲ್ಲಿ ನಿಧಿ ವ್ಯವಸ್ಥಾಪಕನಿಗೆ ತಮ್ಮ ಕೌಶಲ್ಯಗಳನ್ನು skills) ತೋರಿಸಲು ಅಧಿಕ ಸ್ಟಾಕ್ಸ್ ಇರುತ್ತವೆ. ಈ ರೀತಿಯ ಸಂದರ್ಭಗಳಿಗೆ ಸಕ್ರಿಯ ನಿಧಿಗಳು ಸೂಕ್ತವಾಗಿದೆ.
ಇದನ್ನು ಓದಿ: ಬ್ಯಾಬಿಲೋನ್ನ ಶ್ರೀಮಂತ ವ್ಯಕ್ತಿ ಪುಸ್ತಕದ ಸಾರಾಂಶನೀವು ಎಷ್ಟು ಹೂಡಿಕೆ ಮಾಡಬೇಕೆಂದರೆ ನಿಮಗೆ ನಷ್ಟವಾದರೂ, ನಿಮ್ಮ ಹಣಕಾಸು ಯೋಜನೆ(financial plan), ಗುರಿ(goals), ಪ್ರಮುಖ ಖರ್ಚುಗಳಿಗೆ ಪರಿಣಾಮ ಬೀರಬಾರದು. ಅಂದರೆ ನೀವು ನಷ್ಟವನ್ನು ಸ್ವೀಕರಿಸಬಹುದಾದನ್ನು ಮಾತ್ರ ಮೊದಲ 1 ರಿಂದ 3 ವರ್ಷ ಹೂಡಿಕೆ ಮಾಡಿ. ಉದಾಹರಣೆಗೆ ನೀವು ಈ ವಾರ 5,000 ರೂ ಪಾರ್ಟಿ ನೀಡಲು ತಯಾರಿರುತ್ತೀರ. ಅದನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಷ್ಟವಾದರು ನಿಮ್ಮ ಈ ವಾರದ ಪಾರ್ಟಿ ತಪ್ಪುತ್ತದೆ ಅಷ್ಟೇ. ಆದರೆ ನಿಮ್ಮ ಬದುಕಿಗೆ ಇದು ದೊಡ್ಡದಾಗಿ ಪರಿಣಾಮ ಬೀರುವುದಿಲ್ಲ. 5 ವರ್ಷದ ನಂತರ ನಿಮಗೆ ಹಣದ ಅವಶ್ಯಕತೆ ಇದ್ದರೆ, ಉದಾಹರಣೆಗೆ ಮದುವೆ, ಮಕ್ಕಳ ವಿದ್ಯಾಭ್ಯಾಸ, ಇತ್ಯಾದಿಗೆ, ನೀವು ಮ್ಯೂಚುಯಲ್ ಫಂಡ್ಸ್ ಆರಿಸಿಕೊಳ್ಳುವುದು ಸೂಕ್ತವಾಗಿದೆ.
ಒಂದು ವೇಳೆ ಪರದೆ ನೋಡಿ ಟ್ರೇಡಿಂಗ್ ಮಾಡಿ ಪ್ರತಿ ಬಾರಿ ಹಣ ಗಳಿಸಲು ಸಾಧ್ಯವಾಗುತ್ತಿದ್ದರೆ, ಇಂದು ದೊಡ್ಡ ದೊಡ್ಡ ಉದ್ಯಮಿಗಳು(businessman) ಉದ್ಯಮ ಮಾಡುತ್ತಿರಲಿಲ್ಲ. ಅವರು 10 ವರ್ಷ ಉದ್ಯಮದ ನಷ್ಟವನ್ನು ಸಹಿಸುತ್ತಿರಲಿಲ್ಲ. ಹೀಗಾಗಿ ಸಾಮಾಜಿಕ ಮಾಧ್ಯಮದಲ್ಲಿ ನಿಮಗೆ ವಾರ, ತಿಂಗಳಲ್ಲಿ 2 ರಿಂದ 4% ರಿಟರ್ನ್ ಖಾತರಿ ನೀಡುವೆವು ಎಂಬುವನು, ಒಂದು ದಿನ ನಿಮ್ಮ ಹಣವನ್ನು ತೆಗೆದುಕೊಂಡು ಓಡಿ ಹೋಗುತ್ತಾನೆ. ಹೀಗಾಗಿ ಇಂತವರಿಂದ ಹುಷಾರಾಗಿರಿ. ನೀವು ಸ್ಟಾಕ್ನಲ್ಲಿ ಹೂಡಿಕೆ ಮಾಡುವಾಗ ಉದ್ಯಮದಲ್ಲಿ ಹೂಡಿಕೆ ಮಾಡುತ್ತಿರುವಿರಿ ಎಂಬುದನ್ನು ನೆನಪಿಡಿ. ಇದರಲ್ಲಿ ನಿಮಗೆ ಷೇರು ಸಿಗುತ್ತದೆ. ಉದ್ಯಮದಲ್ಲಿ ಹೂಡಿಕೆ ಮಾಡುವುದರಿಂದ ನೀವು ಒಂದೇ ದಿನದಲ್ಲಿ ಶ್ರೀಮಂತನಾಗಲು ಸಾಧ್ಯವಿಲ್ಲ. ನಾವು ಈ ಟ್ರೇಡರ್ಸ್ನ ಅಧಿಕ ಸ್ಕ್ರೀನ್ಶಾಟ್ ನೋಡುತ್ತೇವೆ. ಇದಕ್ಕಾಗಿ ಒಂದು ಉದಾಹರಣೆ ಮೂಲಕ ತಿಳಿಯೋಣ.
6 ಜನ ಗೆರೆಯಲ್ಲಿ ನಿಂತಿದ್ದಾರೆ ಎಂದುಕೊಳ್ಳಿ. ಒಂದು ಬಂದೂಕು(pistol) ಇದೆ. ಅದರಲ್ಲಿ 1 ಸ್ಲಾಟ್ ಖಾಲಿ ಇದೆ. ಉಳಿದ 5 ಸ್ಲಾಟ್ ಬಂದೂಕಿನಿಂದ ತುಂಬಿದೆ. ಒಂದೊಂದಾಗಿ ಶೂಟ್ ಮಾಡಲಾಗುತ್ತದೆ. ಆ 6 ಜನರಲ್ಲಿ ಒಬ್ಬ ಮಾತ್ರ ಉಳಿಯುತ್ತಾನೆ. ಅದೃಷ್ಟದಿಂದಾಗಿ(luck) ಆತನು ಉಳಿದನು. ಮಾರುಕಟ್ಟೆಯಲ್ಲಿ ಈ ರೀತಿಯಾಗಿ ಉಳಿದ ವ್ಯಕ್ತಿಯು ನಾಳೆ ಬಂದೂಕಿನಿಂದ ಉಳಿಯುವುದೇಗೆ? ಎಂಬ ಪಠ್ಯವನ್ನು(course) ಬಿಡುತ್ತಾನೆ. ಲಕ್ಷಗಟ್ಟಲೇ ಜನರು ಒಂದೇ ವಿಷಯವನ್ನು ಮಾಡುವಾಗ ಅದರಲ್ಲಿ ಕೆಲವರು ಅದೃಷ್ಟಶಾಲಿ ಇರುತ್ತಾರೆ ಮತ್ತು ಅವರು ಪಠ್ಯಗಳನ್ನು ಬಿಡುಗಡೆ ಮಾಡಿ ನಿಮಗೆ ನಷ್ಟವನ್ನು ತರುತ್ತಾರೆ. ಹೀಗಾಗಿ ಹೆಚ್ಚುವರಿ ರಿಟರ್ನ್ ಖಾತರಿ ಮಾಡುವವರಿಂದ ದೂರವಿರಿ.
ಇದನ್ನು ಓದಿ: ಅತ್ಯುತ್ತಮ ಮ್ಯೂಚುವಲ್ ಫಂಡ್ ಅನ್ನು ಆಯ್ಕೆ ಮಾಡುವುದು ಹೇಗೆ?ನಾವು ಇದರಲ್ಲಿ ಹೂಡಿಕೆ ಮಾಡಲು ಶಿಫಾರಸು ಮಾಡುವುದಿಲ್ಲ. ನೀವು 1 ಕೋಟಿಯ ಮನೆಯನ್ನು ಮಾರಲು ಮಾಡಲು ಬಯಸಿದ್ದೀರಾ ಎಂದುಕೊಳ್ಳಿ. ಆಗ ನೀವು ಮುಂದಿರುವ ಖರೀದಿದಾರನ ಬಗ್ಗೆ ಯೋಚಿಸುವಿರಾ? ಅಂದರೆ, "ಈತ ನನ್ನಿಂದ ಮನೆ ಖರೀದಿಸುತ್ತಿದ್ದಾನೆ, ಈತನಿಗೆ ಒಳ್ಳೆಯ ಚೌಕಾಶಿ(bargain) ನೀಡುವೆ" ಎಂದು ಯೋಚಿಸಿ, 1 ಕೋಟಿಯ ಮನೆಯನ್ನು 80 ಲಕ್ಷಕ್ಕೆ ಮಾರುವಿರಾ? ಇಲ್ಲ. ನೀವು ಗರಿಷ್ಠ ಲಾಭ ಗಳಿಸಲು ಬಯಸಿರುವಿರಾ ಮತ್ತು ಖರೀದಿದಾರನಿಗೆ ಸರಿಯಾದ ಮೌಲ್ಯ ಸಿಗಲಿ ಎಂಬುದು ನಿಮ್ಮ ಉದ್ದೇಶವಾಗಿರುವುದಿಲ್ಲ. ಅದೇ ರೀತಿ ipo ದಲ್ಲಿ ಈ ದೊಡ್ಡ ಪ್ರವರ್ತಕ(promoter), ಕಂಪನಿ ಮಾಲೀಕ(owner) ನಿಮಗೆ ಕಡಿಮೆ ಬೆಲೆಯಲ್ಲಿ ಷೇರುಗಳನ್ನು ಮಾರುವರು ಎಂದು ನಂಬುವಿರೆ? ಅವರು ಬೆವರು ಸುರಿಸಿದ ಕಂಪನಿಯ ಷೇರನ್ನು ನಿಮಗೆ ಕಡಿಮೆ ಬೆಲೆಗೆ ನೀಡುವರು ಎಂದು ನಂಬುವಿರೆ, ಇಲ್ಲ. ಅವರು ಮೀಡಿಯಾ, ದೊಡ್ಡ ಟ್ರೇಡರ್ಸ್ ಎಲ್ಲರನ್ನೂ ಬಳಸಿಕೊಂಡು ಸ್ಟಾಕ್ ಪ್ರಚಾರ ಮಾಡಿ 100 ರೂನ ಸ್ಟಾಕ್ ಅನ್ನು ನಿಮಗೆ 400 ರೂಗೆ ಮಾರುತ್ತಾರೆ ಮತ್ತು ನೀವು ಎಲ್ಲರೂ ಅದರ ಬಗ್ಗೆ ಮಾತನಾಡುತ್ತಿರುವುದರಿಂದ ಖುಷಿಯಿಂದ ಖರೀದಿಸುತ್ತೀರಾ. ಹೀಗಾಗಿ ipo ದಿಂದ ದೂರವಿರಿ.
ಇದನ್ನು ಓದಿ: ETF ಹೂಡಿಕೆ ತಂತ್ರಕ್ರಿಪ್ಟೋ ಪ್ರತಿ 3 ವರ್ಷಗಳಿಗೊಮ್ಮೆ ಪ್ರಚೋದನೆ(hype) ಬಂದು ಮೇಲೆ ಹೋಗುತ್ತದೆ. ಚಿಲ್ಲರೆ ಹೂಡಿಕೆದಾರರು(retail investor) ಹೂಡಿಕೆ ಮಾಡುತ್ತಾರೆ ಮತ್ತು ಅದು ಕೆಳಗೆ ಹೋಗುತ್ತದೆ. ನೀವು ಯಾವುದರ ಮೇಲಾದರೂ ಹೂಡಿಕೆ ಮಾಡುವ ಮೊದಲು ಅದರ ನ್ಯಾಯಯುತ ಮೌಲ್ಯದ(fair value) ಬಗ್ಗೆ ತಿಳಿದಿರಬೇಕು. ಅದರ ಆಂತರಿಕ ಮೌಲ್ಯದ(intrinsic value) ಬಗ್ಗೆ ತಿಳಿದಿರಬೇಕು. ನೀವು ರಿಯಲ್ ಎಸ್ಟೇಟ್ನ(real estate) ಆಂತರಿಕ ಮೌಲ್ಯವನ್ನು ಅದರ ಬಾಡಿಗೆ ಇಳುವರಿ(rental yield) ಮೇಲೆ ನೋಡುತ್ತೀರಾ. ಷೇರನ್ನು ಖರೀದಿಸುವಾಗ ಇಪಿಎಸ್(eps) ನೋಡುತ್ತೀರಾ. ಆದರೆ ಬಿಟ್‌ಕಾಯಿನ್(bitcoin) ಆಂತರಿಕ ಮೌಲ್ಯವನ್ನು ಯಾವ ರೀತಿ ನಿರ್ಧರಿಸಬೇಕು. ಅದು ಲಾಭಾಂಶ(dividend), ಇಪಿಎಸ್, ಬಾಡಿಗೆ ಇಳುವರಿ ನೀಡುವುದಿಲ್ಲ. ಹಾಗಿದ್ದರೆ ಅದರ ನ್ಯಾಯಯುತ ಮೌಲ್ಯವನ್ನು ಯಾವ ರೀತಿ ತಿಳಿಯುತ್ತದೆ. ಯಾರೋ ಅದು 1 ಲಕ್ಷ ನ್ಯಾಯಯುತ ಮೌಲ್ಯ ಇದೆ ಎಂದರು, ನಾವು ಅದನ್ನು ಏಕೆ ಖರೀದಿಸಬೇಕು. ನಾನು ಅದರ ಮೌಲ್ಯ ತಿಳಿಯಲು ಯಾವುದಾದರು ವೈಜ್ಞಾನಿಕ ಆಧಾರ(scientific basis) ಇರಬೇಕಲ್ಲವೇ!
ಇದಕ್ಕೆ ಅನೇಕರು ಬಂಗಾರಕ್ಕೆ(gold) ಹೋಲಿಸಿ, ಅದು ಕೂಡ ಲಾಭಾಂಶ, ಇಪಿಎಸ್, ಬಾಡಿಗೆ ಇಳುವರಿ ನೀಡುವುದಿಲ್ಲ ಎನ್ನಬಹುದು. ಆದರೆ ಬಂಗಾರ 5,000 ವರ್ಷದಿಂದಲೂ ಅವಶ್ಯವಾದ(indispensable) ಮತ್ತು ಸ್ಥಿರ ಮೌಲ್ಯ ಸಂಗ್ರಹವೆಂದು(stable store of value) ಸಾಬೀತುಪಡಿಸಿದೆ. ಆದರೆ ಬಿಟ್‌ಕಾಯಿನ್ ರೀತಿಯ ಯಾವುದೇ ನಾಣ್ಯವು ಇದನ್ನು ಸಾಬೀತುಪಡಿಸಿಲ್ಲ. ಹೀಗಾಗಿ ಆಂತರಿಕ ಮೌಲ್ಯ ತಿಳಿಯದಿದ್ದರೆ ಅದು ಊಹಾಪೋಹವಾಗಿದೆ(speculation). ಊಹಾಪೋಹದಿಂದ ಹಣ ಗಳಿಸಬಹುದು. ಆದರೆ ದೀರ್ಘವಧಿಯಲ್ಲಿ ನಿಮಗೆ ಇದರಿಂದ ನಷ್ಟವಾಗುತ್ತದೆ.
ನೀವು ಅಧಿಕ ಸಾಲ ಮಾಡಿ ಒತ್ತಡದಲ್ಲಿ(stress) ಮನೆ ಖರೀದಿಸಲು ಬಯಸಿದ್ದರೆ ಯಾವುದಾದರೂ ಚಿಕ್ಕ ಮನೆಯನ್ನು ಖರೀದಿಸಿ ಇಲ್ಲ ಬಾಡಿಗೆ ಮನೆಯಲ್ಲಿ ಇರಿ. ಒಂದು ವೇಳೆ ನಿಮ್ಮ ಮನೆಯ ಸಾಲದ ಇಎಂಐ(emi) ನಿಮ್ಮ ಸಂಬಳದ 30% ಒಳಗೆ ಇದ್ದರೆ ಮನೆಯನ್ನು ಖರೀದಿಸಿ.
ಇದನ್ನು ಓದಿ: ದೊಡ್ಡ ಲಾಭಕ್ಕಾಗಿ ಪೆನ್ನಿ ಸ್ಟಾಕ್‌ಗಳು(Penny stocks)ಒಂದು ವೇಳೆ ಒಂದು ಸ್ಟಾಕ್ ಪೆನ್ನಿ ಆಗಿದ್ದರೆ ಅದಕ್ಕೆ ಒಂದು ಕಾರಣ ಇರಬೇಕಲ್ಲವೇ? ಕಂಪನಿ ಅಷ್ಟು ಚೆನ್ನಾಗಿದ್ದರೆ ಅದು ಏಕೆ ಪೆನ್ನಿಯಾಗೆ ಇರುತ್ತಿತ್ತು. ನೀವು ಈಗ ತಾನೇ ಷೇರು ಮಾರುಕಟ್ಟೆಗೆ ಬಂದಿರುವಿರಾ, ನಿಮಗೆ ಈ ಪೆನ್ನಿ ಸ್ಟಾಕ್ ಬಗ್ಗೆ ತಿಳಿದಿದೆ. ಆದರೆ ಪ್ರತಿದಿನ ಟ್ರೇಡ್ ಮಾಡುವ ವೃತ್ತಿಪರ ಟ್ರೇಡರ್ ಮತ್ತು ಹೂಡಿಕೆದಾರರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲವೇ! ನಿಮಗೆ ಷೇರು ಮಾರುಕಟ್ಟೆಯಲ್ಲಿ ಯಾವುದಾದರೂ ಸಲಹೆ(tips) ದೊರೆತರೆ, ಅದರ ಅರ್ಥ ನಿಮಗೆ ಮೋಸ ಮಾಡಲಾಗುತ್ತಿದೆ, ನಿಮ್ಮನ್ನು ಬಲೆಗೆ(trap) ಸಿಲುಕಿಸಲಾಗುತ್ತಿದೆ. ಹೀಗಾಗಿ ಇದರಲ್ಲಿ ಸಿಕ್ಕಿಕೊಳ್ಳಬೇಡಿ. ನೀವು ಇದಕ್ಕೆ ಟೈಟನ್ ಕಂಪನಿಯ(titan company) ಉದಾಹರಣೆ ನೀಡಬಹುದು. ಆದರೆ ನೀವು ಒಂದು ಉದಾಹರಣೆ ನೀಡಬಹುದು, ನಾವು ಇದರ ವಿರುದ್ಧ ಅಧಿಕ ಉದಾಹರಣೆ ನೀಡಬಹುದು. ನೀವು ಯಾವಾಗಲು ನಿಮ್ಮ ಯಶಸ್ಸಿನ ಪ್ರಮಾಣ(success rate) ಅಧಿಕವಿರುವ ವಿಧಾನವನ್ನು ಆರಿಸಿಕೊಳ್ಳಿ.
ಅನೇಕರು 30s, 40s ನಲ್ಲಿ ಅಧಿಕ ಗಳಿಸಿ ನಿವೃತ್ತಿ ಹೊಂದಿ(retire) ಎನ್ನುತ್ತಾರೆ. 30s ನಲ್ಲಿ ಕೋಟಿಗೊಬ್ಬ ನಿವೃತ್ತಿ ಹೊಂದಬಹುದು, ಇಲ್ಲ ವಂಶದ ಆಸ್ತಿ ಇರುವವನು ಆಗಬಹುದು. ಈ ರೀತಿ ಯೋಚನೆ ಬರಲು ಇರುವ ಮೂಲದ(root) ಬಗ್ಗೆ ತಿಳಿಯಿರಿ. ಈ ಯೋಚನೆ ಬರಲು ಮುಖ್ಯ ಕಾರಣ ನಾವು ನಮ್ಮ ಉದ್ಯೋಗವನ್ನು ಆನಂದಿಸುತ್ತಿಲ್ಲ ಮತ್ತು ಇದರಿಂದ ಬೇಗನೆ ಮುಕ್ತರಾಗಲು ಬಯಸಿರುತ್ತೇವೆ. ಹೀಗಾಗಿ ಈ ರೀತಿಯ ಅವಾಸ್ತವಿಕ(unrealistic) ಕನಸು ತೋರಿಸಿ ಇನ್ನೊಬ್ಬ ನಿಮ್ಮಿಂದ ಹಣವನ್ನು ಪಡೆಯುತ್ತಾನೆ ಮತ್ತು ಆತನ ನಿವೃತ್ತಿ ಯೋಜನೆ(retirement planning) ಮಾಡಿಕೊಳ್ಳುತ್ತಾನೆ. ಇದರಿಂದ ನೀವು ಪ್ರಸ್ತುತದಲ್ಲಿ ಅಧಿಕ ತ್ಯಾಗ ಮಾಡಲು ಪ್ರಾರಂಭಿಸುತ್ತೀರಾ ಮತ್ತು ತಮ್ಮ ಯವ್ವನವನ್ನು ಸಂಪೂರ್ಣವಾಗಿ ಆನಂದಿಸುವುದಿಲ್ಲ. ಇದರಿಂದ ಹೊರಬರಲು ಕಾರಣ ಹುಡುಕಿ. ಒಂದು ವೇಳೆ ಉದ್ಯೋಗ ಆಗಿದ್ದರೆ ಬೇರೆ ಉದ್ಯೋಗ ಹುಡುಕಿ. ನಿಮ್ಮ ಕೌಶಲ್ಯವನ್ನು(skills) ವರ್ಧಿಸಿ(enhance) ಉದ್ಯೋಗ ಬದಲಾಯಿಸಿ. ವೃತ್ತಿಜೀವನದಿಂದ(career) ಓಡಿ ಹೋಗುವುದು ಪರಿಹಾರವಾಗಿಲ್ಲ, ಬದಲಿಗೆ ವೃತ್ತಿಜೀವನವನ್ನು ಉತ್ತಮ ಮಾಡುವುದಾಗಿದೆ.
ಇದನ್ನು ಓದಿ: ಷೇರುಗಳನ್ನು ಖರೀದಿಸದೆ ಶ್ರೀಮಂತರಾಗಿ(Index Fund)ಇಂದು ಅನೇಕರು 2 ರಿಂದ 10 ಕ್ರೆಡಿಟ್ ಕಾರ್ಡ್ ಇಟ್ಟುಕೊಂಡಿರುತ್ತಾರೆ. ನಿಮಗೆ 50 ದಿನದ ಬಡ್ಡಿ ರಹಿತ ಸಾಲವನ್ನು(interest free loan) ಬ್ಯಾಂಕ್ ಸುಮ್ಮನೆ ನೀಡುತ್ತಿದೆ ಎಂದುಕೊಂಡಿರುವಿರಾ. ಬ್ಯಾಂಕ್ ಅದಕ್ಕೆ ಲಾಭದಾಯಕ ಆಗುವುದನ್ನು ಮಾಡುತ್ತದೆ. ಹೀಗಾಗಿ ಕ್ರೆಡಿಟ್ ಕಾರ್ಡ್ನಿಂದ ನೀವು ಸಾಲ ತೆಗೆದುಕೊಳ್ಳುವುದನ್ನು ಆರಾಮದಾಯಕ ಮಾಡಲಾಗಿದೆ. ನಂತರ ಅವರು ನಿಮಗೆ ಮನೆ ಸಾಲ(home loan), ಶಿಕ್ಷಣ ಸಾಲ(education loan), ಕಾರಿನ ಸಾಲವನ್ನು(car loan) ತೆಗೆದುಕೊಳ್ಳಲು ಹೇಳಿ ಸಾಲವನ್ನು ತೆಗೆದುಕೊಳ್ಳುವ ಭಯವನ್ನು ತೆಗೆದು ಹಾಕುತ್ತಾರೆ. ನೀವು 50 ದಿನದಲ್ಲಿ ಹಣ ಪಾವತಿಸದಿದ್ದರೆ ವರ್ಷಕ್ಕೆ 20 ರಷ್ಟು ಬಡ್ಡಿ ಹಾಕುತ್ತಾರೆ. ಹಾಗಂತ ನೀವು ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಬೇಡಿ ಎನ್ನುತ್ತಿಲ್ಲ. ನಿಮ್ಮ ಖರ್ಚು ಪ್ರತಿಫಲವನ್ನು(spending reward) ಗರಿಷ್ಠ ಮಾಡಲು ಒಂದು ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಿ. ಆದರೆ 10 ರಿಂದ 20 ಕ್ರೆಡಿಟ್ ಕಾರ್ಡ್ ಬೇಕಿಲ್ಲ.
ಸ್ಟಾಕ್ ಅನ್ನು ಮಾರಲು ನೀವು ಕಾರಣಗಳನ್ನು ಪರಿಗಣಿಸಿ. ಮೊದಲಿಗೆ ನೀವು ಒಂದು ಕಾರಣದ ಮೇಲೆ ಆ ಸ್ಟಾಕ್ ಖರೀದಿಸಿ, ಆ ಕಾರಣ ತಪ್ಪಾದರೆ ಮಾರಿ ಬಿಡಿ. ಉದಾಹರಣೆಗೆ ನೀವು ರಿಲಿಯನ್ಸ್(reliance) ಅನ್ನು ಮುಕೇಶ್ ಅಂಬಾನಿ(mukesh ambani) ಇರುವುದನ್ನು ನೋಡಿ ಖರೀದಿಸಿದ್ದರೆ, ಅವರು ನಿವೃತ್ತಿ ಹೊಂದಿದ ನಂತರ ಮಾರಿ ಬಿಡಿ. ನೀವು ಬೆಲೆ ಏರಿಕೆ(price momentum) ಮೇಲೆ ಸ್ಟಾಕ್ ಅನ್ನು ಮಾರಬೇಡಿ, ಬದಲಿಗೆ ಕಾರಣದ ಮೇಲೆ ನೋಡಿ.
ಎರಡನೆಯದಾಗಿ ನಿಮಗೆ ಹಣದ ಅವಶ್ಯಕತೆ ಇದ್ದಾಗ ಮಾರಿ ಬಿಡಿ. ನಮಗೆ ಗುರಿಗಾಗಿ ಮತ್ತು ಸಂಪತ್ತು ಬೇಕಿರುವುದರಿಂದ ಸ್ಟಾಕ್ನಲ್ಲಿ ಹೂಡಿಕೆ ಮಾಡುತ್ತೇವೆ. ನಿಮಗೆ ತುರ್ತುಪರಿಸ್ಥಿತಿ ಇದ್ದರೆ, ಸ್ಟಾಕ್ ಅನ್ನು ಮಾರುವುದು ಸೂಕ್ತವಾಗಿದೆ. ನೀವು ಯಾರೋ ನೀಡಿದ ಸಲಹೆಯ(tips) ಮೇಲೆ ಸ್ಟಾಕ್ ಖರೀದಿಸಿದ್ದರೆ ಅದನ್ನು ಮಾರಿ ಬಿಡಿ. ಅದೇ ಯಾವುದೇ ನಿಯಂತ್ರಕನ(regulator) ವಿಶ್ಲೇಷಣೆಯ ಮೇಲೆ ಖರೀದಿಸಿದ್ದರೆ ಸರಿ, ಆದರೆ ಕೇವಲ ಸಾಮಾಜಿಕ ಮಾಧ್ಯಮದಲ್ಲಿ ಸಿಗುವ ಸಲಹೆಯ ಮೇಲೆ ಖರೀದಿಸಿದ್ದರೆ ಮಾರಿ ಬಿಡಿ.
ಇದನ್ನು ಓದಿ: ಯಾರೂ ನಿಮಗೆ ಹೇಳದ 10 ಶ್ರೀಮಂತ ಸತ್ಯಗಳುಇಂದು ಮಧ್ಯಮ ವರ್ಗದ ಜನರು ಸಾಲದ ಮೇಲೆ ಶಿಕ್ಷಣ ಪಡೆಯುತ್ತಿರುತ್ತಾರೆ. ಹೀಗಾಗಿ ಬೇಗನೆ ಸಾಲವನ್ನು ತೀರಿಸಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಯ(student) ಮನಸ್ಸಿನಲ್ಲಿ ಬರುತ್ತದೆ. ಆದರೆ ಇದರಿಂದ ನಮ್ಮ ಪ್ರಾಥಮಿಕ ಗುರಿಯಿಂದ ಹೊರ ಬರಬಾರದು. ನಮ್ಮ ಪ್ರಾಥಮಿಕ ಗುರಿ ವಿದ್ಯಾರ್ಥಿಯಾಗಿ ಎಷ್ಟು ಸಮರ್ಥರಾಗಬೇಕೆಂದರೆ, ಮುಂದೆ ಅಧಿಕ ಹಣ ಗಳಿಸುವಂತಿರಬೇಕು. ಅಂದರೆ ವಿದ್ಯಾರ್ಥಿಯಾಗಿ ನಿಮ್ಮ ಮೊದಲ ಗುರಿಯು, ಕೌಶಲ್ಯವನ್ನು ವರ್ಧಿಸಿಕೊಳ್ಳುವುದಾಗಿದೆ. ಯಾವುದೇ ವಿಷಯ ಇದರಿಂದ ನಿಮ್ಮನ್ನು ಹೊರತಂದರೆ ಅದನ್ನು ಏಕೆ ಮಾಡುವಿರಿ. ನೀವು ಕ್ರೀಡೆಗಳ(sports) ಮೇಲೆ ಗಮನ ಆರಿಸಿದರೆ, ದೈಹಿಕವಾಗಿ ಗಟ್ಟಿ ಇರುತ್ತೀರಾ. ಆದರೆ ಚಾರ್ಟ್ ನೋಡಿ ಟ್ರೇಡಿಂಗ್ ಮಾಡುವುದು ಸರಿಯಲ್ಲ. ನೀವು ಅದನ್ನು ಕಲಿಯಲು ಪೇಪರ್ ಟ್ರೇಡಿಂಗ್(paper trading) ಮಾಡಿ.
ಈ ಲೇಖನದಿಂದ ನಿಮಗೆ ಒಂದು ಐಡಿಯಾ ದೊರೆತಿದೆ ಎಂದು ಭಾವಿಸುವೆನು. ಅನೇಕ ಪ್ರೆಶ್ನೆಗಳು ಆರಂಭಿಗನ ಮನಸ್ಸಿನಲ್ಲಿ ಇರುತ್ತವೆ. ಅವುಗಳಲ್ಲಿ ಆದಷ್ಟು ಉತ್ತರಿಸಲು ನಾವು ಪ್ರಯತ್ನಿಸಿದ್ದೇವೆ. ನಿಮ್ಮ ಸುತ್ತಮುತ್ತಲಿನ ಯುವಕರು ಅಧಿಕ ಷೇರು ಮಾರುಕಟ್ಟೆಯನ್ನು ನೋಡುತ್ತಿದ್ದಾರೆ, ಈ ಲೇಖನವನ್ನು ಅವರಿಗೆ ಶೇರ್ ಮಾಡಿ. ಇದರಿಂದ ಅನೇಕ ತಪ್ಪುಗಳನ್ನು ಮಾಡುವುದರಿಂದ ಅವರು ಉಳಿಯುತ್ತಾರೆ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.