Watch Video
ನಿಮ್ಮ ಫೋನ್ನಲ್ಲಿ "your salary has being credited" ಎಂಬ ಅಧಿಸೂಚನೆ(notification) ನೋಡಿದ ತಕ್ಷಣ ತುಂಬಾನೇ ಖುಷಿಯಾಗುತ್ತದೆ. ನಂತರ ಯುಪಿಐನಿಂದ(upi) ಸಾವಿರಾರು ರೂಪಾಯಿ ವ್ಯವಹಾರ(transaction) ಮಾಡಿದ ನಂತರ ನಿಮ್ಮ ಉಳಿದ ಬಾಕಿ ಇರುವ ಅಧಿಸೂಚನೆ ಬರುತ್ತದೆ. ಆಗ, "ಈ ಹಣವು ಎಲ್ಲಿ ಹೋಯಿತು? ನಾನು ಇಷ್ಟು ಬೇಗನೆ ಎಲ್ಲವನ್ನು ಖರ್ಚು ಮಾಡಿದ್ದೇನೆ" ಅನಿಸುತ್ತದೆ.
ಇದು ಕೇವಲ ನಿಮ್ಮ ಸಮಸ್ಯೆಯಾಗಿಲ್ಲ. ನಾವು ಅನೇಕ ಜನಗಳಿಂದ ಈ ಕಥೆಯನ್ನೇ ಕೇಳಿದ್ದೇವೆ. ಜನರು ಬೇರೆ ಬೇರೆ ಇರುತ್ತಾರೆ. ಆದರೆ ಕಥೆ ಮಾತ್ರ ಅದೇ ಇರುತ್ತದೆ. ಸಂಬಳ ಚೆನ್ನಾಗಿದೆ, ಆದರೆ ಜೇಬಿನಲ್ಲಿ ಹಣವೇ ಉಳಿಯುವುದಿಲ್ಲ.
ನಮ್ಮ ಒಂದು ತಿಂಗಳು ಈ ರೀತಿ ಇರುತ್ತದೆ. ಪ್ರತಿ ತಿಂಗಳು ಸಂಬಳ ಬರುತ್ತದೆ. 5 ದಿನ ರಾಜನ ರೀತಿ ಇರುತ್ತೇವೆ, ಆದರೆ ತಿಂಗಳ ಕೊನೆಯಲ್ಲಿ ಬದುಕುಳಿಯುವ ವಿಧಾನಕ್ಕೆ(survival mode) ವರ್ಗಾಯಿಸುತ್ತದೆ. ನಿಮಗೂ ಈ ರೀತಿ ಆಗುತ್ತಿದ್ದರೆ ಈ ಲೇಖನವನ್ನು ಶೇರ್ ಮಾಡಿ ಮತ್ತು ವೆಬ್ಸೈಟ್ಗೆ ರಿಜಿಸ್ಟರ್ ಆಗಿ.
ಈ ಸುತ್ತು ಪ್ರತಿ ತಿಂಗಳು ಪುನರಾವರ್ತಿಸುತ್ತಿರುತ್ತದೆ(repeat). ಆದರೆ ನಾವು ಹಣದುಬ್ಬರ(inflation), ಸರ್ಕಾರ(government), ಕಂಪನಿಗೆ(company) ಬೈಯುತ್ತೇವೆ. ಆದರೆ ನಿಜವಾದ ಸಮಸ್ಯೆ ವ್ಯವಸ್ಥೆಯಲ್ಲಿ ಅಲ್ಲದೆ ನಮ್ಮ ಆದಾಯದಲ್ಲಿ ಇದೆ.
"do not save what is left after spending, but spend what is left after saving" ಎಂದು ವಾರೆನ್ ಬಫೆಟ್(warren buffet) ಹೇಳಿದ್ದಾರೆ.
ನೀವು ನಿಮ್ಮ ಬದುಕಿನ ಗುರಿಗಳಾದ ಕಾರು, ಮನೆ, ಕನಸಿನ ವೃತ್ತಿ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು(financial independence) ನಿಮ್ಮ ಈಗಿನ ಸಂಬಳದಿಂದ ಸಾಧಿಸಲು ಸಾಧ್ಯವಿಲ್ಲವೆಂದುಕೊಂಡಿರುವಿರಾ? ಒಂದು ವೇಳೆ ಇದರ ಉತ್ತರ "ಹೌದು" ಆಗಿದ್ದರೆ, ಈ ಲೇಖನ ನಿಮಗೆ ಕಣ್ಣು ತೆರೆಯಲಿದೆ. ಈ ಲೇಖನದಲ್ಲಿ ನಾವು
ಸಂಬಳ ಉಳಿಸುವ ಮೊದಲು ಹಣವು ನಮ್ಮ ಜೇಬಿನಿಂದ ಎಲ್ಲಿ ಸೋರಿಕೆಯಾಗುತ್ತಿದೆ(leak) ಎಂಬುದನ್ನು ತಿಳಿಯಬೇಕು.
ಇದನ್ನು ಓದಿ: ಶಿಸ್ತುಬದ್ಧವಾಗಿರಲು ಇರುವ ಹಂತಗಳು
ಶ್ರೇಯ ಹೈದರಾಬಾದ್ನ ಒಂದು ವ್ಯವಹಾರ ವಿಶ್ಲೇಷಕಳಾಗಿದ್ದಾಳೆ(business analyst). ಅವಳ ವಾರ್ಷಿಕ ಆದಾಯ 8 ಲಕ್ಷವಿದೆ. ಅವಳು ಬೆಳಗ್ಗೆ ಕಚೇರಿಗೆ ಹೋಗುವ ಮೊದಲು 250 ರೂ ಕೊಟ್ಟು ಸ್ಟಾರ್‌ಬಕ್ಸ್(starbucks) ಕಾಫಿ ಕುಡಿಯುತ್ತಾಳೆ. ಏಕೆಂದರೆ ಆಫೀಸಿನ ಕಾಫಿ ಅವಳಿಗೆ ಇಷ್ಟವಿರುವುದಿಲ್ಲ. ಊಟದಲ್ಲಿ ಝೋಮ್ಯಾಟೋದಿಂದ(zomato) 320 ರೂ ಆರ್ಡರ್ ಮಾಡುತ್ತಾಳೆ. ಏಕೆಂದರೆ ಅನ್ನ ಸಾಂಬಾರ್ ತಿನ್ನಲು ಬೇಸರವಾಗಿದೆ. ಸಂಜೆ 150 ರೂನ ತಿಂಡಿ(snacks) ಮತ್ತು ವಾರದ ಕೊನೆಯಲ್ಲಿ ಗೆಳೆಯರ ಜೊತೆ 3000 ರೂ ಹೋಗೆ ಬಿಡುತ್ತದೆ.
ಒಮ್ಮೆ ಅವಳ ಗೆಳತಿ ಅವಳು ಸ್ಟಾರ್‌ಬಕ್ಸ್ಗೆ 66,000 ರೂ ಖರ್ಚು ಮಾಡಿರುವದನ್ನು ತಿಳಿಸುತ್ತಾಳೆ. ಊಟ, ತಿಂಡಿ ಮತ್ತು ವಾರದ ಕೊನೆಯ ಖರ್ಚು ಸೇರಿಸಿ, ಪ್ರತಿ ವರ್ಷ 1,80,000 ರಕ್ಕಿಂತ ಅಧಿಕ ಖರ್ಚು ಆಗುತ್ತಿದೆ. ಇದನ್ನು ತಿಳಿದ ಶ್ರೇಯ ಆಶ್ಚರ್ಯಗೊಂಡು, "ನಾನು ಹಣವನ್ನು ಉಳಿಸುವ ಬದಲು ಅಧಿಕ ತಿನ್ನಲು ಬಳಸುತ್ತಿರುವೆನೇ!" ಅಂದುಕೊಂಡಳು. ಇದುವೇ ಪ್ರತಿಯೊಬ್ಬ ಭಾರತೀಯನ ಸಮಸ್ಯೆಯಾಗಿದೆ. ನಮ್ಮ ಮೆದುಳು ಅಪಾಯವನ್ನು ಪತ್ತೆ ಹಚ್ಚಲು ನುರಿತವಾಗಿದೆ(expert). ಅಂದರೆ ಅಪಘಾತವಾಗುತ್ತಿದ್ದರೆ(accident) ಬ್ರೇಕ್ ಹಾಕುವುದು ಇತ್ಯಾದಿ. ಆದರೆ ಚಿಕ್ಕ ಚಿಕ್ಕ ಖರ್ಚುಗಳನ್ನು ಅದು ಗುರುತಿಸಲು ಸಾಧ್ಯವಿಲ್ಲ. ಭಾರತೀಯರ ಸನ್ನಿವೇಶದಲ್ಲಿ(context) ಹಣವು 3 ಜಾಗದಲ್ಲಿ ಸೋರಿಕೆಯಾಗುತ್ತಿದೆ ಅವೆಂದರೆ,
ಆಟೋ ಬದಲು ಉಬರ್(uber) ತೆಗೆದುಕೊಳ್ಳುವೆವು. ಮನೆ ಊಟದ ಬದಲು ಹೊರಗಡೆಯಿಂದ ಖರೀದಿಸುತ್ತೇವೆ. ಸ್ಥಳೀಯ ಮಾರುಕಟ್ಟೆಯ(local market) ಬದಲು ಬ್ಲೈಂಕೀಟ್ನಿಂದ(blinkit) ಆರ್ಡರ್ ಮಾಡುವೆವು. ಇವೆಲ್ಲ ಸೇರಿಸಿ ಪ್ರತಿ ತಿಂಗಳು 15 ರಿಂದ 25 ಸಾವಿರ ರೂ ಹೋಗುತ್ತದೆ.
ಇದನ್ನು ಓದಿ: ಕೇಂದ್ರೀಕೃತ ಯಶಸ್ಸನ್ನು ಸಾಧಿಸಲು Deep Work ನ ಅಗತ್ಯ ನಿಯಮಗಳುಸಹೋದ್ಯೋಗಿಯ(colleague) ಜೊತೆ ಫ್ಯಾನ್ಸಿ ರೆಸ್ಟೋರೆಂಟ್ಗೆ ಹೋಗುವುದು. ಹುಟ್ಟುಹಬ್ಬಕ್ಕೆ ಬ್ರಾಂಡ್ ಉಡುಗೊರೆ(branded gift) ಕೊಡುವುದು ಮತ್ತು ಹಬ್ಬಕ್ಕೆ(festival) ಹೊಸ ಬಟ್ಟೆ ಕೊಡಿಸುವುದು. ಇವೆಲ್ಲ ಜನರು ಏನು ಯೋಚಿಸುತ್ತಾರೋ ಎಂದುಕೊಂಡು ಮಾಡುತ್ತೇವೆ. ಇದಕ್ಕೆ 8 ರಿಂದ 15 ಸಾವಿರ ಹೋಗುತ್ತದೆ.
ಅಂದರೆ ಮನಸ್ಥಿತಿ ಸರಿ ಇಲ್ಲದಿದ್ದಾಗ ಇಲ್ಲ, ಆಚರಿಸಬೇಕಿದ್ದರೆ, ಇಲ್ಲ ಬೇಸರವಾಗುತ್ತಿದ್ದರೆ ಅಮೆಜಾನ್(amazon) ತೆರೆದು ಏನಾದರೂ ಖರೀದಿಸುವುದು. ಇದು 8 ರಿಂದ 17 ಸಾವಿರ ತೆಗೆದುಕೊಂಡು ಹೋಗುತ್ತದೆ. ಇದರ ಮೇಲೆ ಡಿಜಿಟಲ್ ಚಂದಾದಾರಿಕೆ(digital subscription) ಉದಾಹರಣೆಗೆ ನೆಟ್ಫ್ಲಿಕ್ಸ್(netflix), ಪ್ರೈಮ್(prime), ಜಿಮ್ ಸದಸ್ಯತ್ವ(gym membership). ಇವುಗಳನ್ನು ಬಳಸುತ್ತಿಲ್ಲ, ಆದರೆ ತಿಂಗಳು 3 ರಿಂದ 5 ಸಾವಿರ ಹೆಚ್ಚುವರಿ ಹೋಗುತ್ತದೆ.
ಶ್ರೇಯ ರೀತಿ ಇರುವವರು ಪ್ರತಿ ತಿಂಗಳು 31 ರಿಂದ 57 ಸಾವಿರದಷ್ಟು ಹಣವನ್ನು ಅನಗತ್ಯ(unneccessary) ವಸ್ತುಗಳಿಗೆ ಖರ್ಚು ಮಾಡುತ್ತಾರೆ. ಇದು ಎಷ್ಟೋ ಜನಗಳ ಪೂರ್ತಿ ಸಂಬಳವಾಗಿದೆ. ಈ ಖರ್ಚುಗಳನ್ನು ಬಿಟ್ಟು ವ್ಯವಸ್ಥಿತವಾಗಿ(systamatic) ಹೂಡಿಕೆ ಮಾಡಿದರೆ 20 ವರ್ಷದಲ್ಲಿ ಒಂದು ಕೋಟಿಯ ಸಂಗ್ರಹ ಆಗುತ್ತದೆ. ಸಾಂಪ್ರದಾಯಿಕ ಬಜೆಟ್(traditional budgeting) ಇಚ್ಛೆಯ ಶಕ್ತಿಯ(will power) ಮೇಲೆ ಅವಲಂಬಿಸಿರುವುದು ಸಮಸ್ಯೆಯಾಗಿದೆ. ಇದಕ್ಕೆ ಇರುವ ಪರಿಹಾರವೆಂದರೆ ಸ್ಮಾರ್ಟ್ ಆಟೋಮೇಷನ್(smart automations). ಅಂದರೆ ಸ್ವಯಂ ಆಗಿ ಉಳಿತಾಯ(savings) ಮತ್ತು ಹೂಡಿಕೆ(invest) ಮಾಡುವ ವ್ಯವಸ್ಥೆ ಸೃಷ್ಟಿ ಮಾಡಿ. ಇದರಿಂದ ಹಣ ಉಳಿಸುವುದು ಶಿಸ್ತಿನ ಬದಲು ವಿನ್ಯಾಸದಿಂದಾಗಲಿ(design). ಇದಕ್ಕಾಗಿ ನಾವು 4 ಲೆಕ್ಕಪತ್ರ ನಿರ್ವಹಣೆ ಸರಳೀಕೃತ ವಾಸ್ತುಶಿಲ್ಪದ ಬಗ್ಗೆ ತಿಳಿಯೋಣ.
ಇದನ್ನು ಓದಿ: ಹೂಡಿಕೆ ಮಾಡುವ ಮುನ್ನ ತೆಗೆದುಕೊಳ್ಳಬೇಕಾದ ಸ್ಟೆಪ್ಗಳು
"pay yourself first" ಅಂದರೆ ಉಳಿತಾಯವನ್ನು ಆದ್ಯತೆಯನ್ನಾಗಿ(prioritize) ಮಾಡಿ. ಅನೇಕರು ಅಗಾಧವಿರುವ(overwelming) 7 ಖಾತೆ ವ್ಯವಸ್ಥೆಯನ್ನು ಬಳಸುತ್ತಾರೆ. ಆದರೆ ನೀವು ನಾವು ತಿಳಿಸುವ 4 ಖಾತೆ ವ್ಯವಸ್ಥೆಯನ್ನು ಬಳಸಬಹುದು.
account 1, ಇದು ಕೇಂದ್ರ ಕಮಾಂಡ್ ಖಾತೆಯಾಗಿದೆ(central command account) ಅಂದರೆ ಪ್ರಾಥಮಿಕ ವೇತನ ಖಾತೆಯಾಗಿದೆ(primary salary account). ಈ ವೇತನ ಖಾತೆಯನ್ನು ಒಳ್ಳೆಯ ಬ್ಯಾಂಕಿನಲ್ಲಿ ತೆರೆಯಲಾಗುತ್ತದೆ ಮತ್ತು ನಿಮಗೆ ಶೂನ್ಯ ಬ್ಯಾಲೆನ್ಸ್ ಖಾತೆ(zero balance account) ಸಿಗುತ್ತದೆ. ಈ ಖಾತೆ ನಿಮ್ಮ ವಿತರಣಾ ಕೇಂದ್ರವಾಗಿದೆ(distribution center), ಇದನ್ನು ಗೋದಾಮು(warehouse) ರೀತಿ ಎಂದುಕೊಳ್ಳಿ. ಗೋದಾಮಿನಿಂದ ಅನೇಕ ಚಿಲ್ಲರೆ ವ್ಯಾಪಾರಿ(retail) ಅಂಗಡಿಗಳಿಗೆ ವಸ್ತುಗಳು ಹೋಗುವ ರೀತಿಯಲ್ಲಿ, ಇದರಲ್ಲಿ ಬರುವ ನಿಮ್ಮ ಸಂಬಳ ಬೇರೆ ಬೇರೆ ಖಾತೆಗೆ ಹೋಗುತ್ತದೆ.
account 2, ಇದು ನಿಮ್ಮ ಭದ್ರತಾ ಕೈಚೀಲವಾಗಿದೆ(security wallet). ಇದನ್ನು ನಿಮ್ಮ ತುರ್ತು ನಿಧಿ(emergency fund) ಮತ್ತು ಗುರಿಗಾಗಿ ಬಳಸಿ. 6 - 7% ಬಡ್ಡಿ(interest) ನೀಡುವ ಬ್ಯಾಂಕ್ ಅನ್ನು ಇದಕ್ಕಾಗಿ ಆಯ್ಕೆ ಮಾಡಿ. ಇದನ್ನು 2 ಭಾಗವಾಗಿ ಮಾಡಿ, 60% ತುರ್ತು ನಿಧಿ, ಇದು ನಿಮ್ಮ 6 ತಿಂಗಳ ಖರ್ಚುಗಳನ್ನು ನಿರ್ಮಾಣ ಮಾಡುತ್ತದೆ ಮತ್ತು 40% ಗುರಿ ಆಧಾರಿತ ಉಳಿತಾಯಕ್ಕಾಗಿ(goal based savings) ಇರಲಿ. ಇದು ನಿಮ್ಮ ಪ್ರವಾಸ, ಯಂತ್ರೋಪಕರಣ(gadget) ಖರೀದಿಸಲು ಇಲ್ಲ ಮದುವೆಯಾಗಲು ಇರಲಿ. ಮನೋವಿಜ್ಞಾನದ(psychology) ಪ್ರಕಾರ ತುರ್ತು ನಿಧಿ ಮತ್ತು ಗುರಿಯು ಒಂದೇ ಖಾತೆಯಲ್ಲಿ ಇದ್ದರೆ ಪ್ರೇರಣೆ ನಿಯಂತ್ರಣದಲ್ಲಿರುತ್ತದೆ. ಗುರಿ ಆಧಾರಿತ ಉಳಿತಾಯಕ್ಕೆ ಸಾಂಪ್ರದಾಯಿಕ ವಿಧಾನದಲ್ಲಿ(traditional way) ಅಪಾಯ ಕಡಿಮೆ ಇರುತ್ತದೆ. ಇಲ್ಲ ರಿಟರ್ನ್ಸ್ ಕಡಿಮೆ ಇರುತ್ತದೆ.
account 3, ಇದು ಹೂಡಿಕೆಗಾಗಿ ಇರುವ ಖಾತೆಯಾಗಿದೆ. ಇದು ಎಸ್ಐಪಿ(sip) ಮತ್ತು ಲಮ್ಪಸಮ್(lumpsum) ಮಾಡಲು ಇದ್ದು, ಸಂಪತ್ತು ನಿರ್ಮಾಣಕ್ಕಾಗಿ(wealth building) ಇದೆ. ಇದನ್ನು ನೀವು ನಿಮ್ಮ ಎಎಂಸಿ(amc) ಅಥವಾ ದಲ್ಲಾಳಿ(broker) ಜೊತೆಗೆ ಲಗತ್ತಿಸಿ(attach) ಮಾಡಿ. ತಿಂಗಳ ಎಸ್ಐಪಿಯನ್ನು ಸ್ವಯಂ ಡೆಬಿಟ್(auto debit) ಮಾಡಿ. ಬೋನಸ್ ಸಿಗುವುದನ್ನು ಹೂಡಿಕೆ ಮಾಡಿ. ಈ ಖಾತೆಯನ್ನು ಪ್ರತಿದಿನದ ಖರ್ಚುಗಳಿಗಾಗಿ ಬಳಸಬೇಡಿ.
account 4, ಇದು ಖರ್ಚುಗಳನ್ನು ನಿರ್ವಹಣೆ ಮಾಡಲು ಇರುವ ಖಾತೆಯಾಗಿದೆ. ಯುಪಿಐ(upi) ನಾಶ ಮಾಡಬಹುದು, ಅನೇಕರು ಯುಪಿಐ ಅನ್ನು ಮುಖ್ಯ ಖಾತೆಯ(main account) ಜೊತೆ ಲಿಂಕ್ ಮಾಡಿರುತ್ತಾರೆ ಮತ್ತು ಕೊನೆಯಲ್ಲಿ ನನ್ನ ಸಂಬಳ ಖಾಲಿಯಾಯಿತು ಎನ್ನುತ್ತಾರೆ. ಇದಕ್ಕಾಗಿ ನೀವು ಒಂದು ಪ್ರತ್ಯೇಕ ಖಾತೆಯನ್ನು ಮಾಡಬೇಕು. ಯಾವುದೇ ಬಿಲ್ಗಳನ್ನು ಇದರಿಂದ ಪಾವತಿಸಿ. ದಿನದ ಖರ್ಚುಗಳಿಗೆ ಕ್ರೆಡಿಟ್ ಕಾರ್ಡ್ ಬಳಸಿ ಮತ್ತು ತಿಂಗಳ ಕೊನೆಯಲ್ಲಿ ಈ ಖಾತೆಯಿಂದ ಪೂರ್ತಿ ಪಾವತಿ ಮಾಡಿ. ಇದರಿಂದ ಅನಗತ್ಯ ಖರ್ಚು ಆಗುವುದಿಲ್ಲ.
ಈಗ ಖಾತೆಯ ರಚನೆಯಾಗಿದೆ(setup), ಹೂಡಿಕೆಯ ಆಯ್ಕೆ ಕೂಡ ತಿಳಿದಿದೆ. ಆದರೆ ಇವೆಲ್ಲ ಸಮಯ ಪರಿಪೂರ್ಣವಿದ್ದಾಗ ಬರುತ್ತದೆ. ತಪ್ಪಾದ ಸಮಯದಿಂದ ಉತ್ತಮ ವ್ಯವಸ್ಥೆ ಕೂಡ ವಿಪಲಗೊಳ್ಳುತ್ತದೆ. ಹೀಗಾಗಿ ಮುಂದೆ ನಾವು ನಿಮಗೆ ಸರಿಯಾದ ಸಮಯದ ಬಗ್ಗೆ ತಿಳಿಸುವುವೆವು.
ಇದನ್ನು ಓದಿ: ಜೀವನ ಸುಲಭಗೊಳಿಸುವ 12 ಮಾನಸಿಕ ಸಂಗತಿಗಳು
ಭಾರತದಲ್ಲಿ ಗರಿಷ್ಠ ಜನರಿಗೆ ತಿಂಗಳ ಮೊದಲು ಇಲ್ಲ ಕೊನೆಯಲ್ಲಿ ಸಂಬಳ ಸಿಗುತ್ತದೆ. ಈ ಸೈಕಲ್ ಮೇಲೆ ಈಗ ತಿಳಿಸುವ ವ್ಯವಸ್ಥೆಯು ಚುರುಕಾಗಿ ಸಂಬಳವನ್ನು ನಿರ್ವಹಣೆ ಮಾಡುತ್ತದೆ. 1 ರಿಂದ 5 ನೇ ತಾರೀಕು ಸ್ಥಾಪನಾ ವಾರವಾಗಿದೆ(foundation week). ಸಂಬಳ ಬಂದ ತಕ್ಷಣವೇ ಅದನ್ನು ಉಳಿಸಿಬಿಡಿ. ಏಕೆಂದರೆ ನಂತರ ಮನಸ್ಥಿತಿ ಬದಲಾಗಬಹುದು. ಇನ್ನು ಎರಡನೆಯದಾಗಿ ಸ್ವಯಂಚಾಲಿತ ವರ್ಗಾವಣೆ(automatic transfer) ಇರುವುದನ್ನು ಕಾರ್ಯಗತಗೊಳಿಸಿ(execute) ಮತ್ತು 1 ರಿಂದ 5 ನೇ ತಾರೀಕು ಎಲ್ಲಾ ವರ್ಗಾವಣೆ ಸರಿಯಾಗಿ ಆಗಿದೆಯೇ ಎಂಬುದನ್ನು ಪರಿಶೀಲಿಸಿ. ಯಾವುದಾದರೂ ಸಮಸ್ಯೆಯಾಗಿದ್ದರೆ ತಕ್ಷಣವಾಗಿ ಪರಿಹರಿಸಿ.
ಇನ್ನು 5 ರಿಂದ 15 ನೇ ತಾರೀಕಿನಲ್ಲಿ ಪಾವತಿಗಳನ್ನು(payments) ನೀಡಲು ಪ್ರಾರಂಭಿಸಿ. ಬಿಲ್ ಮಾದರಿಗಳನ್ನು(bill pattern) ವಿಶ್ಲೇಷಣೆ ಮಾಡಿ. ಅಂದರೆ ವಿದ್ಯುತ್, ಗ್ಯಾಸ್ ಕನೆಕ್ಷನ್, ಇಂಟರ್ನೆಟ್, ಕ್ರೆಡಿಟ್ ಕಾರ್ಡ್(credit card) ಇವೆಲ್ಲವನ್ನು ಒಮ್ಮೆಲೇ ನೋಡಿಕೊಳ್ಳಿ. ತಡವಾದ ಶುಲ್ಕಗಳಿಂದ(fees) ಉಳಿಯಲು ವ್ಯವಸ್ಥಿತ ವೇಳಾಪಟ್ಟಿಯನ್ನು(systematic schedule) ಮಾಡಿ. 5 ರಿಂದ 15ನೇ ತಾರೀಖಿನ ಒಳಗೆ ಎಲ್ಲಾ ರೀತಿಯ ಪಾವತಿಗಳನ್ನು ಮಾಡಿಬಿಡಿ. ಇನ್ನು 15 ನೇ ತಾರೀಕು ನಿಮ್ಮ ಖಾತೆಯ ಆರೋಗ್ಯ ತಪಾಸಣೆ(health check) ಮಾಡಿ. ಅಂದರೆ ಎಲ್ಲಿಯಾದರೂ ಅಧಿಕ ಖರ್ಚು ಆಗಿದೆಯೇ?, ಕುಟುಂಬದಲ್ಲಿ ಅನಿರೀಕ್ಷಿತ ವೆಚ್ಚಗಳು(unexpected expenses) ಆಗಿದೆಯೇ?, ವೈದ್ಯಕೀಯ ತುರ್ತು ಪರಿಸ್ಥಿತಿ(medical emergency), ಸಂಬಧಿಕರಿಗೆ ಸಹಾಯ ಮಾಡಿರುವುದು, ಯಾವುದಾದರು ಪಾರ್ಟಿ 15 ದಿನದಲ್ಲಿ ಬರಲಿದೆಯೇ? ಒಂದು ವೇಳೆ ಆ ಘಟನೆ ಇದ್ದರೆ, ಪ್ರತ್ಯೇಕವಾಗಿ ಬಜೆಟ್(budget) ಮಾಡಿ.
ಇನ್ನು 25 ರಿಂದ 30 ನೇ ತಾರೀಕಿನಲ್ಲಿ ಮುಂದಿನ ತಿಂಗಳ ಹಣಕಾಸು ಯೋಜನೆಯನ್ನು(financial planning) ಮಾಡಿ. ಹಬ್ಬದ ಋತು(festival season) ಬರುತ್ತಿದರೆ ಅದರ ಬಜೆಟಿಂಗ್ ಮಾಡಿ. ಮದುವೆಯ ಋತುವಿದ್ದರೆ(marriage season) ಉಡುಗೊರೆ ಯೋಜನೆ(gift planning) ಮಾಡಿ. ಏನೇ ಮಾಡಿದರು ಮುಂಚೆಯೇ ಪ್ಲಾನ್ ಮಾಡಿ. ಯಾವುದೇ ರೀತಿಯ ಹಬ್ಬಕ್ಕಾಗಿ ಪ್ರತಿ ತಿಂಗಳು 2000 ರೂ ಕೊಡುಗೆ(contribute) ನೀಡುವ ಒಂದು ಪ್ಲಾನ್ ಮಾಡಿ.
ಈಗ ನಿಮ್ಮ ದಿನಾಂಕ ಪಟ್ಟಿ(calender) ರಚನೆಯಾಯಿತು. ಆದರೆ ಇದು ಆದಾಯ ನಿಯಮಿತವಾಗಿ ಬರುವವರಿಗೆ ಸರಿಯಾಗಿದೆ. ಒಂದು ವೇಳೆ ನೀವು ಸ್ವತಂತ್ರೋದ್ಯೋಗಿ(freelancer) ಆಗಿದ್ದರೆ, ಮುಂದಿನ ವಿಭಾಗ ನಿಮಗೆ ತುಂಬಾ ಮುಖ್ಯವಾಗಿದೆ.
ಇದನ್ನು ಓದಿ: ಅನುಭವಿ ಹೂಡಿಕೆದಾರನ ಹೂಡಿಕೆಯ ಪಾಠಗಳು
ಅನಿಯಮಿತ ಆದಾಯ ಒಮ್ಮೆಲೇ ಆದಾಯ ಹೆಚ್ಚಾಗುತ್ತದೆ ಒಮ್ಮೊಮ್ಮೆ ಭಯ ಕೊಡುವಷ್ಟು ಕಡಿಮೆಯಾಗುತ್ತದೆ. ಇದಕ್ಕಾಗಿ ನಾವು ತಿಳಿಸುವ ಪ್ರಾಯೋಗಿಕ ಬಫರ್ ವ್ಯವಸ್ಥೆಯನ್ನು(practical buffer system) ಪಾಲಿಸಿ. ಇದು ದೀರ್ಘಾವಧಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು(consistency) ತರುತ್ತದೆ.
ವಿಕ್ರಂ ಎಂಬುವನ ಒಂದು ಡಿಜಿಟಲ್ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಮುಂಬೈನಲ್ಲಿ ಇದೆ. ಅವರ ಆದಾಯ ಏಳು ಬೀಳು ರೈಲುದಾರಿಯ(roller coster) ರೀತಿ ಇದೆ. ಏಪ್ರಿಲ್ ತಿಂಗಳಲ್ಲಿ 35,000 ರೂ ಇದ್ದರೆ, ಮೇ ತಿಂಗಳಲ್ಲಿ 1,20,000 ರೂ, ಜೂನ್ ತಿಂಗಳಲ್ಲಿ 65,000 ರೂ, ಜುಲೈನಲ್ಲಿ 25,000 ರೂ, ಆಗಸ್ಟ್ ತಿಂಗಳಲ್ಲಿ 1,80,000 ರೂ, ಸೆಪ್ಟೆಂಬರ್ ತಿಂಗಳಲ್ಲಿ 55,000 ರೂ ಆಗಿದೆ. ಆದರೆ ಸಮಸ್ಯೆ ಏನೆಂದರೆ ಖರ್ಚುಗಳು ತಿಂಗಳು 75,000 ರೂ ದಷ್ಟು ಇತ್ತು. ಹೀಗಾಗಿ ಒಳ್ಳೆಯ ಆದಾಯ ಬಂದಾಗ ಅಲಂಕಾರಿಕ ವಸ್ತುಗಳನ್ನು(fancy items) ತೆಗೆದುಕೊಳ್ಳುವುದು, ಪ್ರೀಮಿಯಂ ಚಂದಾದಾರಿಕೆ(premium subscription) ತೆಗೆದುಕೊಳ್ಳುವುದು ಇತ್ಯಾದಿ ಮಾಡುತ್ತಿದ್ದರು ಮತ್ತು ಆದಾಯ ಕಡಿಮೆ ಇರುವ ತಿಂಗಳಲ್ಲಿ ಕ್ರೆಡಿಟ್ ಕಾರ್ಡಿನ ಸಹಾಯ ತೆಗೆದುಕೊಂಡರು, ಹಬ್ಬದ ಋತುವಿಗಾಗಿ ದುಬಾರಿ ಸಾಲಗಳನ್ನು ತೆಗೆದುಕೊಂಡರು ಮತ್ತು ಎಂದಿಗೂ ಮುಗಿಯದ ಚಕ್ರದಲ್ಲಿ ಸಿಕ್ಕಿಕೊಂಡರು.
ಹೀಗಾಗಿ ನಂತರ ವಿಕ್ರಂ ಸ್ಮಾರ್ಟ್ ಪ್ರಾಯೋಗಿಕ ಬಫರ್ ವ್ಯವಸ್ಥೆಯನ್ನು ಬಳಸಿದರು. ಇದಕ್ಕಾಗಿ ಮೊದಲು 12 ತಿಂಗಳ ಆದಾಯವನ್ನು ವಿಶ್ಲೇಷಣೆ ಮಾಡಿದರು ಮತ್ತು ವಾಸ್ತವಿಕ ತಿಂಗಳ ಸರಾಸರಿ ತೆಗೆದುಕೊಂಡರು. ಇದರ ಪ್ರಕಾರ ತಿಂಗಳಲ್ಲಿ ಆದಾಯ 1.2 ಲಕ್ಷ ಮೇಲೆ ಇದ್ದರೆ, 75,000 ರೂ ಸ್ಥಿರ ವೆಚ್ಚಕ್ಕೆ(fixed expense) ಮತ್ತು 30,000 ರೂ ಬಫರ್ ನಿಧಿಗೆ(buffer fund) ಹೋಗುತ್ತದೆ. 10,000 ರೂ ವ್ಯಾಪಾರ ಮರುಹೂಡಿಕೆಗೆ ಬಳಸಿದರೆ, 55,000 ರೂ ಆತನ ವೈಯಕ್ತಿಕ ಖರ್ಚುಗಳಿಗೆ ಬಳಸಿದರು. ತಿಂಗಳ ಆದಾಯ 70,000 ದಿಂದ 1.2 ಲಕ್ಷ ವಿದ್ದಾಗ ಖರ್ಚುಗಳು ನಿರ್ವಹಣೆಯಾಗುತ್ತದೆ. ಆದರೆ ಬಫರ್ ನಿಧಿಯಲ್ಲಿ ಕೊಡುಗೆ ಕಡಿಮೆಯಾಗುತ್ತದೆ.
ತಿಂಗಳ ಆದಾಯ 70,000 ರೂ ಕ್ಕಿಂತ ಕಡಿಮೆ ಇದ್ದರೆ, ಬಫರ್ ನಿಧಿಯಿಂದ ಹಣ ತೆಗೆದುಕೊಂಡು ಖರ್ಚುಗಳಿಗೆ ನೀಡುತ್ತಾರೆ. ಕೇವಲ 12 ತಿಂಗಳಲ್ಲಿ ಫಲಿತಾಂಶ ಅತ್ಯುತ್ತಮವಿತ್ತು(outstanding). ಬಫರ್ ಖಾತೆಯಲ್ಲಿ 6.8 ಲಕ್ಷ ರೂ ಇತ್ತು, ಆತನ ಹೂಡಿಕೆಯ ಬಂಡವಾಳ ಪಟ್ಟಿ 8.5 ಲಕ್ಷದಾಗಿದೆ. ತಿಂಗಳು 2,800 ರೂ ನ ನಿಷ್ಕ್ರಿಯ ಆದಾಯವಾಗಿದೆ(passive income) ಮತ್ತು ವ್ಯಾಪಾರದ ಬೆಳವಣಿಗೆ ಕೂಡ ತುಂಬಾ ಚೆನ್ನಾಗಿ ಆಗಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಆತನು ಒತ್ತಡ ರಹಿತ(stress free) ಇದ್ದರು. ಈ ತಂತ್ರವನ್ನು ಬಳಸಿದರೆ, ಅನಿಯಮಿತ ಆದಾಯ ಸಮಸ್ಯೆಯನ್ನು ಪರಿಹರಿಸಬಹುದು.
ಈ ವ್ಯವಸ್ಥೆಗೂ ಮೊದಲು ನಿಮ್ಮ ಮನಸ್ಸಿನಲ್ಲಿ ಒತ್ತಡ ಇರಬಹುದು. ಚೆನ್ನಾಗಿ ಸಂಬಳ ಸಿಗುತ್ತಿದ್ದರು ನೀವು ಅಳುತ್ತಿರಬಹುದು. ಯಾದೃಚ್ಛಿಕ ನಿರ್ಧಾರ ತೆಗೆದುಕೊಳ್ಳುತ್ತಿರಬಹುದು, ಕ್ರೆಡಿಟ್ ಕಾರ್ಡಿನ ಸಾಲ ಇರಬಹುದು, ಕುಟುಂಬದ ಒತ್ತಡ ಇರಬಹುದು, ಹಬ್ಬ ಬಂದರೆ ಒತ್ತಡದ ಅನುಭವ ಆಗುತ್ತಿರಬಹುದು, ಯಾವುದೇ ತುರ್ತು ನಿದಿಯಿಲ್ಲ, ಕೊನೆಗೆ ತೆರಿಗೆಯ(tax) ಸಮಸ್ಯೆ ಇತ್ತು.
ಆದರೆ ನೀವು ಈ ವ್ಯವಸ್ಥೆಯನ್ನು ಅನ್ವಯಿಸಿದರೆ ಎಲ್ಲವನ್ನು ಒತ್ತಡ ರಹಿತವಾಗಿ ನಿರ್ವಹಿಸುವಿರಿ. ಇದರಿಂದ ಬರುವ ಪ್ರತಿಯೊಂದು ಹಣವು ಉದ್ದೇಶಪೂರ್ವಕವಾಗಿ ಹೂಡಿಕೆ ಆಗುತ್ತಾ ಇದೆ. ವ್ಯವಸ್ಥಿತವಾಗಿ(systematic) ಗುರಿಯನ್ನು ಸಾಧಿಸುವಿರಿ, ಕ್ರೆಡಿಟ್ ಕಾರ್ಡ್ನಿಂದ ಪಾಯಿಂಟ್ಸ್ ದೊರೆತು ನೀವು ಅದನ್ನು ಮುಂದೆಯೂ ಬಳಸಬಹುದು. ಕುಟುಂಬ ಖುಷಿಯಾಗಿರುತ್ತದೆ, ಒತ್ತಡ ರಹಿತವಾಗಿ ಹಬ್ಬವನ್ನು ಮಾಡುವಿರಿ. ಒಂದು ತುರ್ತು ನಿಧಿ ಇರುತ್ತದೆ ಮತ್ತು ನೀವು ತೆರಿಗೆಗೆ ಪರಿಣಾಮಕಾರಿ(optimise) ಆಗುವಿರಿ.
ಇದರಲ್ಲಿ ತುರ್ತು ನಿಧಿ ನಿರ್ಮಿಸಲು 1 - 2 ವರ್ಷ ಹೂಡಿಕೆ ಇಲ್ಲ ಇತರ ಅನಗತ್ಯ ಖರ್ಚು ಕಡಿಮೆ ಮಾಡಿ ಅದಕ್ಕೆ ಹಾಕಿ. ಯಾವ ಕುಟುಂಬ ತಮ್ಮ ಆದಾಯವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುತ್ತಾರೋ, ಅವರೇ ಅದೃಷ್ಟವನ್ನು(destiny) ಸಾದಿಸುತ್ತಾರೆ. ಹಣ ಗಳಿಸುವುದು ಕೌಶಲ್ಯವಾಗಿದೆ(skill), ವ್ಯವಸ್ಥಿತವಾಗಿ ಉಳಿಸುವುದು ಕಲೆಯಾಗಿದೆ(art), ಮತ್ತು ಸಂಯುಕ್ತ(compound) ಮಾಡುವುದು ವಿಜ್ಞಾನವಾಗಿದೆ(science). ಈ 3 ನ್ನು ನೀವು ಮಾಸ್ಟರ್ ಮಾಡಿದರೆ ನಿಮ್ಮ ಆರ್ಥಿಕ ಸ್ವತಂತ್ರ ಖಾತಿರಿಯಾಗಿದೆ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.