Website designed by @coders.knowledge.

Website designed by @coders.knowledge.

Amazing Facts about Space Travel | ಬಾಹ್ಯಾಕಾಶ ಪ್ರಯಾಣದ ಎಂಟು ಅದ್ಭುತ ಸಂಗತಿಗಳು

 0

 Add

Please login to add to playlist

Watch Video

ಬಾಹ್ಯಾಕಾಶ ಪ್ರಯಾಣವು ಭೂಮಿಯ ವಾತಾವರಣವನ್ನು ಮೀರಿ ತಲುಪುವ ಪ್ರಯಾಣವಾಗಿದೆ. ಈ ಪ್ರಯಾಣದಿಂದ ನಮಗೆ ಈ ಬ್ರಹ್ಮಾಂಡದ ಜ್ಞಾನ ಹೆಚ್ಚು ತಿಳಿಯುತ್ತದೆ. ದೂರದರ್ಶಕಗಳನ್ನು ಹೊಂದಿರುವ ಖಗೋಳಶಾಸ್ತ್ರಜ್ಞರು ಮುಖ್ಯವಾಗಿ ಬಾಹ್ಯಾಕಾಶದ ಮೂಲಕ ಪ್ರಯಾಣವನ್ನು ನಡೆಸುತ್ತಾರೆ. ಬಾಹ್ಯಾಕಾಶ ಪ್ರಯಾಣದ ಬಗ್ಗೆ 8 ಪ್ರಮುಖ ಸಂಗತಿಗಳು ಇಲ್ಲಿವೆ.

ಇದನ್ನು ಓದಿ: ವಿಜ್ಞಾನಿಗಳ ತಲೆ ಕೆಡಿಸಿರುವ ಅಂತರಿಕ್ಷದ 6 ರಹಸ್ಯಗಳು

1. ಮಾನವರ ಐವತ್ತು ವರ್ಷಗಳಿಂದ ಬಾಹ್ಯಾಕಾಶಕ್ಕೆ ಪ್ರಯಾಣಿಸುತ್ತಿದ್ದಾರೆ.

how do human have explored space in kannada
human space travel

27 ವರ್ಷದ ರಷ್ಯಾದ ಗಗನಯಾತ್ರಿ ಯೂರಿ ಗಗಾರಿನ್ ಅವರು 12 ಏಪ್ರಿಲ್ 1961ರಂದು ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ ಮೊದಲ ಮಾನವರಾಗಿದ್ದಾರೆ. ಅವರು ಈ ಪ್ರಯಾಣವನ್ನು ವೋಸ್ಟಾಕ್ 1 ಎಂದು ಕರೆಯಲ್ಪಡುವ ಸ್ಪೇಸ್‌ಕ್ರಾಫ್ಟ್ನಿಂದ ಮಾಡಿದರು.

ಅವರು ಭೂಮಿಯನ್ನು ಪರಿಭ್ರಮಿಸಿದ ಬಳಿಕ ತಮ್ಮ ಪ್ಯಾರಶೂಟ್ನಿಂದ ಕೆಳಗೆ ಇಳಿದರು. ಉಡಾವಣೆಯಿಂದ ಲ್ಯಾಂಡಿಂಗ್ ಗೆ ಸಂಪೂರ್ಣ ಹಾರಾಟವು 1 ಗಂಟೆ 48 ನಿಮಿಷಗಳು ತೆಗೆದುಕೊಂಡಿತ್ತು.

ಇದನ್ನು ಓದಿ: ಭೂಮಿಯ ಜನ್ಮದಿಂದ ಜೀವಿಗಳ ಅಸ್ತಿತ್ವದ ತನಕ

2. ಮೊದಲ ಬಾಹ್ಯಾಕಾಶ ಪ್ರವಾಸಿ 2001ರಲ್ಲಿ ಐಎಸ್ಎಸ್ ಗೆ ಪ್ರಯಾಣ ಬೆಳೆಸಿದರು.

when was iss first manned in kannada
first human on space

ಬಾಹ್ಯಾಕಾಶ ಪ್ರವಾಸೋದ್ಯಮವು ಮನರಂಜನ ಉದ್ದೇಶಗಳಿಗಾಗಿ ಮಾನವರು ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಚಟುವಟಿಕೆಯಾಗಿದೆ. ಕಕ್ಷೆ, ಸಬ್ ಆರ್ಬಿಟರ್ ಮತ್ತು ಚಂದ್ರನ ಬಾಹ್ಯಾಕಾಶದಂತೆ ವಿವಿಧ ರೀತಿಯ ಬಾಹ್ಯಾಕಾಶ ಪ್ರವಾಸವನ್ನು ನೋಡಬಹುದು. ಕ್ಯಾಲಿಫೋರ್ನಿಯಾದ ಮಿಲಿನಿಯರ್ ಮತ್ತು ನಾಸಾದ ಮಾಜಿ ಇಂಜಿನಿಯರ್ ಆಗಿದ್ದ ಡೆನ್ನಿಸ್ ಟಿಟೋ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲು ಹಣ ಪಾವತಿಸಿದರು.

ಇದರಿಂದ ಅವರು ಜಗತ್ತಿನಲ್ಲೇ "ಮೊದಲ ಪಾವತಿಸುವ ಬಾಹ್ಯಾಕಾಶ ಪ್ರವಾಸಿ" ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸೋಯುಜ್ ಟಿಎಮ್- 32 ಎಂಬ ಬಾಹ್ಯಾಕಾಶ ನೌಕೆ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು ಸೋಯುಜ್ ಟಿಎಮ್- 31 ಅದನ್ನು ಇಳಿಸಿತು. ಡೆನ್ನಿಸ್ ಟಿಟೋ 128 ಭಾರಿ ಭೂಮಿಯನ್ನು ಪ್ರದಕ್ಷಿಣೆ ಹಾಕಿದರು.

ಇದನ್ನು ಓದಿ: ಕಳೆದುಹೋದ ಪ್ರಾಚೀನ ಭಾರತದ ಐದು ತಂತ್ರಜ್ಞಾನಗಳು

3. ಮೊದಲ ವ್ಯಕ್ತಿ 20 ಜುಲೈ 1969ರಂದು ಚಂದ್ರನನ್ನು ತಲುಪಿದರು.

first human on space in kannada
human on moon

ಅಮೇರಿಕದ ಸಿಬ್ಬಂದಿ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಚಂದ್ರನ ಮಾಡೆಲ್ ಪೈಲೆಟ್ ಬುಜ್ ಆಲ್ಡ್ರಿನ್ ಚಂದ್ರನನ್ನು ತಲುಪಿದ ಮೊದಲ ಮಾನವರಾದರು. ಅವರು ಚಂದ್ರನಿಂದ ಸುರಕ್ಷಿತವಾಗಿ ಭೂಮಿಗೂ ಮರಳಿದರು. ಅಪೋಲೋ 11 ಎಂಬ ಬಾಹ್ಯಾಕಾಶ ಹಾರಾಟದಲ್ಲಿ ಮೊದಲ ಮನುಷ್ಯರನ್ನು ಚಂದ್ರನ ಮೇಲೆ ಇಳಿಸಲಾಯಿತು.

ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲ್ಮೈಯಲ್ಲಿ 6 ಗಂಟೆ 39 ನಿಮಿಷ ಇದ್ದರು. ಅವರು ಭೂಮಿಗೆ 47.5 ಪೌಂಡ್‌ಗಳಷ್ಟು ಚಂದ್ರನ ಮೇಲಿನ ವಸ್ತುಗಳನ್ನು ಸಂಗ್ರಹಿಸಿದರು. ಈ ಪ್ರವಾಸವು 4,02,336 ಕಿ.ಮೀ. ದೂರವಿತು.

4. ಅನೇಕ ಕೋತಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ.

did nasa lose a monkey in space in kannada
first monkey

ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮುಂಚೆ ಅನೇಕ ಪ್ರಾಣಿಗಳನ್ನು ಕಳುಹಿಸಲಾಯಿತು. 11 ಜೂನ್ 1948ರಲ್ಲಿ ಆಲ್ಬರ್ಟ್ ಎಂಬ ಕೋತಿಯನ್ನು ನ್ಯೂ ಮೆಕ್ಸಿಕೋದಿಂದ ಉಡಾಯಿಸಿ ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು. ಅದು 39 ಮೈಲಿ ಎತ್ತರ ತಲುಪಿದ ನಂತರ ತಾಂತ್ರಿಕ ತೊಂದರೆಯಿಂದಾಗಿ ಉಸಿರುಗಟ್ಟಿ ಸತ್ತು ಹೋಯಿತು.

ನಂತರ 14 ಜೂನ್ 1949ರಲ್ಲಿ ಆಲ್ಬರ್ಟ್ 2 ಎಂಬ ಕೋತಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು. ಅದು ಬಾಹ್ಯಾಕಾಶದಿಂದ ಭೂಮಿಗೆ ಬರುವ ಸಮಯದಲ್ಲಿ ಪ್ಯಾರಾಶೂಟ್ ಸಮಸ್ಯೆಯಿಂದಾಗಿ ಸತ್ತು ಹೋಯಿತು. ಇದಾದ ನಂತರ ಆಲ್ಬರ್ಟ್ 3, ಆಲ್ಬರ್ಟ್ 4, ಆಲ್ಬರ್ಟ್ 5ನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು. ಆದರೆ ಅವುಗಳಲ್ಲಿ ಎಲ್ಲವೂ ರಾಕೆಟ್‍ನಲ್ಲೇ ಸತ್ತುಹೋಯಿತು.

ಇದನ್ನು ಓದಿ: ಪಿರಮಿಡ್‌ಗಳನ್ನು ಏಕೆ ಮತ್ತು ಹೇಗೆ ಮಾಡಲಾಯಿತು?

5. ಭೂಮಿಯನ್ನು ಪರಿಭ್ರಮಿಸಿದ ಮೊದಲ ಜೀವ ದಾರಿತಪ್ಪಿದ ನಾಯಿ.

is laika dog still in space in kannada
laika dog

ಸೋವಿಯತ್‌ಗಳು ಮಾಸ್ಕೋದಲ್ಲಿದ್ದ ಲೈಕಾ ಎಂಬ ನಾಯಿಯನ್ನು ನಾಯಿಯನ್ನು 3 ನವೆಂಬರ್ 1957ರಂದು ಭೂಮಿಯನ್ನು ಪರಿಭ್ರಮಿಸಲು ಬಾಹ್ಯಾಕಾಶಕ್ಕೆ ಕಳುಹಿಸಿದರು. ಈ ಮಿಷನ್ ಪ್ರಾರಂಭವಾಗಿ ಕೆಲವೇ ಗಂಟೆಗಳ ನಂತರ ಸ್ಪೇಸ್ ಕ್ರಾಫ್ಟ್ ಬಿಸಿಯಾದ ಕಾರಣ ಲೈಕಾ ಬಾಹ್ಯಾಕಾಶದಲ್ಲಿ ಸತ್ತುಹೋಯಿತು.

ಈ ಲೈಕಾ ಮಿಷನ್ ಸಮಯದಲ್ಲಿ ಜೀವಂತ ಜೀವಿಗಳ ಮೇಲೆ ಬಾಹ್ಯಾಕಾಶ ಹಾರಾಟದ ಪ್ರಭಾವದ ಬಗ್ಗೆ ಜನರಿಗೆ ಸ್ವಲ್ಪ ಮಾತ್ರ ತಿಳಿದಿತು. ಆ ಸಮಯದಲ್ಲಿ ಡಿಆರ್ಬಿಟ್ ಮಾಡಲು ತಂತ್ರಜ್ಞಾನ ಅಭಿವೃದ್ಧಿಯಾಗಿರಲಿಲ್ಲ, ಹೀಗಾಗಿ ಲೈಕಾದ ಉಳಿವನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ಕೆಲವು ವಿಜ್ಞಾನಿಗಳು ತಿಳಿಸಿದ್ದಾರೆ.

6. ಅಸಾಮಾನ್ಯ ವಿಮೆ(ಇನ್ಶೂರೆನ್ಸ್).

is there insurance for space travel in kannada
space insurance

ಆರಂಭದ ಗಗನಯಾತ್ರಿಗಳಿಗೆ ಅಂತಹ ಅಪಾಯಕಾರಿ ಉದ್ಯಮಕ್ಕಾಗಿ ಜೀವವಿಮೆ ಪಡೆಯಲು ಸಾಧ್ಯವಾಗಲಿಲ್ಲ. ಅವರ ಹಿಂತಿರುಗಲು ವಿಫಲವಾದರೆ ಅಧಿಕಾರಿಗಳು ತಮ್ಮ ಕುಟುಂಬಗಳನ್ನು ನೋಡಿಕೊಳ್ಳುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಅವರು ತಮ್ಮ ಚಿತ್ರಗಳಲ್ಲಿ ಆಟೋಗ್ರಾಫ್ ಮಾಡುತ್ತಿದ್ದರು. ನಂತರ ಅಧಿಕಾರಿಗಳು ಅಗತ್ಯವಿದ್ದರೆ ಆಟೋಗ್ರಾಫನ್ನು ಹರಾಜು ಮಾಡುತ್ತಿದ್ದರು. ನೀಲ್ ಆರ್ಮ್‌ಸ್ಟ್ರಾಂಗ್ನಂತಹ ಗಗನಯಾತ್ರಿಗಳಿಗೆ ಇದು ಎಂದಿಗೂ ಇರಲಿಲ್ಲ. ಇಂದು ಜಾಗತಿಕ ಏರೋಸ್ಪೇಸ್ ಕಂಪನಿಗಳು ವಿಮೆಯನ್ನು ನೀಡುತ್ತಿದೆ.

ಇದನ್ನು ಓದಿ: ಭೂಮಿಯ ಏಳು ಅತಿದೊಡ್ಡ ಬಗೆಹರಿಯದ ರಹಸ್ಯಗಳು

7. ಗಗನಯಾತ್ರಿಗಳ ಆಹಾರ.

what kind of food astronotes eat in kannada
astronotes food

ಗಗನಯಾತ್ರಿಗಳು ಭೂಮಿಯ ಮೇಲೆ ತಿನ್ನುವ ಆಹಾರವನ್ನು ಬಾಹ್ಯಾಕಾಶದಲ್ಲಿ ಸೇವಿಸಬಹುದು. ಆದರೆ ಅವರು ತಮ್ಮ ಆಹಾರದಲ್ಲಿ ಶೇಕಡಾ 40ರಷ್ಟು ಸೋಡಿಯಮ್ ಅಂಶವನ್ನು ಕಡಿಮೆ ಮಾಡುತ್ತಾರೆ ಎಂದು ನಾಸಾ ಹೇಳಿದೆ. ಅಲ್ಲಿ ಎಲ್ಲ ಆಹಾರವನ್ನು ಗಾಳಿಹೋಗದಂತೆ ಬಿಗಿಯಾದ ಪ್ಯಾಕಿಂಗ್ನಲ್ಲಿ ಸಂಗ್ರಹಿಸಲಾಗುತ್ತದೆ. ಇದನ್ನು ರಿಟಾರ್ಟ್ ಪ್ಯಾಕಿಂಗ್ ಎಂದೂ ಕರೆಯಲಾಗುತ್ತದೆ.

ಬಾಹ್ಯಾಕಾಶದಲ್ಲಿ ಕುಕ್ಕಿ ಅಥವಾ ಬ್ರೆಡ್‌ ತಿನ್ನುವಂತಿಲ್ಲ. ಇದರ ಒಂದು ತುಂಡಿನಿಂದ ಸ್ಪೇಸ್ ಕ್ರಾಫ್ಟ್ ಝೀರೋ ಗ್ರಾವಿಟಿಗೆ ಹೋಗುತ್ತದೆ. ಗಗನಯಾತ್ರಿಗಳ ಮೂಳೆ ಬಾಹ್ಯಾಕಾಶದಲ್ಲಿ ದುರ್ಬಲವಾಗುವ ಕಾರಣ ಅವರು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೆಚ್ಚಿರುವ ಆಹಾರವನ್ನು ಸೇವಿಸಬೇಕಾಗುತ್ತದೆ.

8. ಬಾಹ್ಯಾಕಾಶ ಪ್ರವಾಸದ ಒಟ್ಟು ಖರ್ಚು.

space travel cost in indian rupees in kannada
space travel cost

ಬಾಹ್ಯಾಕಾಶ ಪ್ರವಾಸವು ಸರ್ಕಾರದ ಒಡೆತನದಲ್ಲಿರುವ ಕಾರಣ ಅಗ್ಗ ದರದಲ್ಲಿ ಆಗುತ್ತದೆ ಎನ್ನುವುದು ಕಷ್ಟ. ಆದರೂ ಸ್ಪೇಸ್ ಎಕ್ಸ್ ನಂಥ ಅನೇಕ ಪ್ರೈವೆಟ್ ಸ್ಪೇಸ್ ಸ್ಟೇಷನ್‌ಗಳು ಬಾಹ್ಯಾಕಾಶ ಪ್ರವಾಸವನ್ನು ನೀಡುವ ಸಾಧ್ಯತೆಯಿದೆ. ಬಾಹ್ಯಾಕಾಶ ಪ್ರವಾಸದ ಖರ್ಚು ಅಧಿಕವಿರುವ ಕಾರಣ ಅಲ್ಲಿನ ಮರುಬಳಕೆ ಮಾಡಲಾಗದ ಬಾಹ್ಯ ಟ್ಯಾಂಕ್ಗಳು. ಪ್ರತಿ ಉಡಾವಣೆಯ ನಂತರ ಅವುಗಳನ್ನು ಬದಲಿಸಬೇಕಾಗುತ್ತದೆ.

2,50,000$ ನಿಂದ 10 ಲಕ್ಷ$ವರೆಗೆ ಬಾಹ್ಯಾಕಾಶ ಪ್ರವಾಸದ ಖರ್ಚು ಬರಬಹುದು. ನಮ್ಮ ವಾತಾವರಣ ಮತ್ತು ಬಾಹ್ಯಾಕಾಶದ ಮಧ್ಯೆಯಿರುವ ಕರ್ಮನ್ ರೇಖೆಯನ್ನು ದಾಟಲು 2,50,000$ ಆಗಬಹುದು. ಆದರೆ ಅಲ್ಲಿಗೆ ಪ್ರಯಾಣಿಸುವ ಪ್ರಯಾಣಿಕರು ಭಾವನಾತ್ಮಕ ಆರೋಗ್ಯ ಮತ್ತು ತರಬೇತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.

ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments