Website designed by @coders.knowledge.

Website designed by @coders.knowledge.

Must Know Financial Ratios Before Investing | ಸ್ಟಾಕ್‌ನಲ್ಲಿ ಹೂಡಿಕೆ ಮಾಡುವ ಮೊದಲು ಇವುಗಳು ತಿಳಿದಿರಲಿ

Watch Video

ನೀವು ಷೇರು ಮಾರುಕಟ್ಟೆಯ ಒಂದು ಕಂಪನಿಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ಆ ಕಂಪನಿಯಲ್ಲಿ ಏನೇನು ನೋಡಬೇಕು. ಈ ಲೇಖನದಲ್ಲಿ ನಾವು ಕಂಪನಿಯಲ್ಲಿ ಹೂಡಿಕೆ ಮಾಡುವ ಮೊದಲು ನೋಡಬೇಕಾದ 6 ಅನುಪಾತಗಳ ಬಗ್ಗೆ ತಿಳಿಸುತ್ತಿದ್ದೇವೆ ಮತ್ತು ಪ್ರತಿಯೊಂದು ಅನುಪಾತದ ಪ್ರಾಮುಖ್ಯತೆ ಮತ್ತು ಅದು ಕಂಪನಿಯ ಬಗ್ಗೆ ಏನು ಹೇಳುತ್ತದೆ ಎಂಬ ಮಾಹಿತಿಯನ್ನು ತಿಳಿಸಲಿದ್ದೇವೆ. ಈ ಅನುಪಾತದಲ್ಲಿ ಕೆಲವು ಲಾಭದ ಬಗ್ಗೆ ತಿಳಿಸಿದರೆ, ಕೆಲವು ಲೆವರೆಜ್ ಬಗ್ಗೆ ತಿಳಿಸುತ್ತವೆ, ಮತ್ತೆ ಕೆಲವು ವಹಿವಾಟಿನ(turnover) ಬಗ್ಗೆ ತಿಳಿಸುತ್ತವೆ.

ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರ

1. Earnings per Share(EPS).

what is good eps for shares in kannada
earnings per share

ಒಂದು ಕಂಪನಿ ಅದರ ಒಂದು ಷೇರಿಗೆ ಎಷ್ಟು ಗಳಿಸಿಕೊಡುತ್ತಿದೆ ಎಂಬುದನ್ನು ಪ್ರತಿ ಷೇರಿನ ಗಳಿಕೆ(EPS) ತಿಳಿಸುತ್ತದೆ. EPS ಒಂದು ಕಂಪನಿಯ ಎಲ್ಲಾ ಅಸಾಧಾರಣ(extraordinary) ವಸ್ತುಗಳನ್ನು ತೆಗೆದ ನಂತರ ಸಿಗುವ ಗಳಿಕೆ ಆಗಿದೆ. ಇಲ್ಲಿ ಅಸಾಧಾರಣ ವಸ್ತುಗಳೆಂದರೆ ಒಂದು ಕಟ್ಟಡ ಮಾರಾಟವಾಗುವುದು, ಇದು ಕಂಪನಿಯ ವ್ಯಾಪಾರದ ಭಾಗವಾಗಿರುವುದಿಲ್ಲ. ಈ ರೀತಿಯ ಹಣವನ್ನು ತೆಗೆದು ನಿವ್ವಳ ಆದಾಯದಲ್ಲಿ(net income) ಕ್ಯಾಲ್ಕುಲೇಟ್ ಮಾಡಲಾಗುತ್ತದೆ. EPS ಕಂಪನಿಯ ಲಾಭದ(profitability) ಬಗ್ಗೆ ತಿಳಿಸುತ್ತದೆ.

EPS ಯಾವಾಗಲೂ ಸ್ಥಿರವಾಗಿರಬೇಕು(steady). ಅದರಲ್ಲಿ ತುಂಬಾ ವ್ಯತ್ಯಾಸ ಆಗುತ್ತಿದ್ದರೆ, ನೀವು ಅದರಲ್ಲಿ ಹೂಡಿಕೆ ಮಾಡಲು ಬಯಸುವುದಿಲ್ಲ. ಒಂದು ಕಂಪನಿಯ EPS ಇಷ್ಟೇ ಇರಬೇಕು ಎಂದು ಹೇಳಲು ಸಾಧ್ಯವಿಲ್ಲ. ಇದನ್ನು ನೀವು ಕಂಪನಿಯ EPS ಅನ್ನು ಅದರ ಕಾಂಪಿಟೇಟರ್ ಕಂಪನಿ ಜೊತೆ ಹೋಲಿಸಿದಾಗ ತಿಳಿಯುತ್ತದೆ. EPSನ ಇನ್ನೊಂದು ಪ್ರಾಮುಖ್ಯತೆಯೆಂದರೆ ಅದರಿಂದ ನಿಮಗೆ P/E ಅನುಪಾತದ(ratio) ಬಗ್ಗೆ ತಿಳಿಯುತ್ತದೆ. EPS ಕ್ಯಾಲ್ಕುಲೇಟ್ ಮಾಡಲು ಇರುವ ಫಾರ್ಮುಲಾ ಕೆಳಗಿನಂತಿದೆ.

ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್

2. Price Earning Ratio(P/E Ratio).

what is good pe ratio for stocks in kannada
pe ratio

P/E Ratio ಕಂಪನಿಯ ಶೇರು ದುಬಾರಿಯೇ ಅಥವಾ ಅಗ್ಗವಿದೆಯೇ ಎಂದು ತಿಳಿಸುತ್ತದೆ. ನೀವು ಕಂಪನಿಯ ಒಂದು ಶೇರ್ ಪ್ರೈಸ್ ಅನ್ನು ಅದರ EPS ಜೊತೆ ಭಾಗಿಸಿದಾಗ ನಿಮಗೆ P/E Ratio ಸಿಗುತ್ತದೆ.

ಒಂದು ಕಂಪನಿಯ P/E ಅನುಪಾತ 3/2 ಇದೆ ಎಂದುಕೊಳ್ಳಿ. ಇದರ ಅರ್ಥ ಅದರ ಒಂದು ಶೇರ್ ಪ್ರೈಸ್ 3 ರೂ ಇದೆ ಮತ್ತು ಅದರ EPS 2 ರೂ ಇದೆ. ಅಂದರೆ ಕಂಪನಿ 1 ಶೇರ್‌ಗೆ 2 ರೂ ಗಳಿಸುತ್ತಿದೆ. ಆದರೆ ಅದಕ್ಕೆ 3 ರೂ ನಿಮ್ಮಿಂದ ತೆಗೆದುಕೊಳ್ಳುತ್ತಿದೆ. ನಿಮಗೆ ಈ ಕಂಪನಿ ದುಬಾರಿ ಇದೆ ಎಂದು ಅನಿಸುತ್ತಿರಬಹುದು. ಹೀಗಾಗಿ P/E Ratio ಅಧಿಕವಿದ್ದರೆ ಕಂಪನಿ ದುಬಾರಿಯಾಗಿದ್ದು ಹೆಚ್ಚು ಮೌಲ್ಯಯುತವಾಗಿರುತ್ತದೆ(overvalued). ಹೀಗೆ P/E Ratio ಕಡಿಮೆ ಇದ್ದರೆ ಕಂಪನಿ ಅಗ್ಗವಾಗಿದ್ದು, ಕಡಿಮೆ ಮೌಲ್ಯಯುತವಾಗಿದೆ(undervalued).

ಕಡಿಮೆ ಮೌಲ್ಯಯುತವಾಗಿದೆ ಎಂದರೆ ಕಂಪನಿ ತನ್ನ ಹೂಡಿಕೆದಾರರಿಂದ ಪಡೆಯುವ ಹಣಕ್ಕಿಂತ ಅಧಿಕ ಗಳಿಸುತ್ತಿದೆ ಎಂದರ್ಥ. ಒಂದು ವೇಳೆ P/E Ratio 1/2 ಇದ್ದರೆ, 1 ರೂ ಶೇರ್ ಪ್ರೈಸ್ ಇದ್ದು, 2 ರೂ ಗಳಿಸಿಕೊಳ್ಳುತ್ತಿದೆ ಎಂದರ್ಥ. ಹೀಗಾಗಿ ಇದು ಒಳ್ಳೆಯ ಸ್ಟಾಕ್ ಎಂದು ನೀವು ಭಾವಿಸಬಹುದು. ಆದರೆ ಅದು ಸತ್ಯವಲ್ಲ, ಇದರ ವಿರುದ್ಧವಾಗಿಯೂ ನಡೆಯಬಹುದು.

ಕಂಪನಿಯ P/E Ratio ಅಧಿಕವಿದ್ದರೆ ಅದು ಹೂಡಿಕೆದಾರರ ಭಾವನೆ(sentiment) ಮತ್ತು ಕಂಪನಿಯ ಹಿಂದಿನ ಪರ್ಫಾಮೆನ್ಸ್ ಬಗ್ಗೆಯೂ ತಿಳಿಸುತ್ತದೆ. ಹೀಗಾಗಿ ಜನರು ಆ ಕಂಪನಿಯ P/E Ratio ಅಧಿಕವಿದ್ದರೂ ಖರೀದಿಸುತ್ತಿದ್ದಾರೆ. ಅವರೆಲ್ಲರಿಗೂ ಆ ಕಂಪನಿ ಮುಂದೆ ಬೆಳೆಯುತ್ತದೆ ಎಂಬ ನಂಬಿಕೆ ಇರುತ್ತದೆ. ಹೀಗಾಗಿ P/E Ratio ಹೂಡಿಕೆದಾರ ಒಂದು ಕಂಪನಿಯ ಮೇಲೆ ಇಟ್ಟಿರುವ ನಂಬಿಕೆಯ ಬಗ್ಗೆ ತಿಳಿಸುತ್ತದೆ. P/E Ratio ಅಧಿಕವಿದ್ದರೆ ಕಂಪನಿಯ ದೃಷ್ಟಿಕೋನದಿಂದ ತುಂಬಾ ಒಳ್ಳೆಯದಾಗಿದೆ. EPSನಂತೆ ಕಂಪನಿಯ P/E Ratioವನ್ನು ಅದರ ಕಾಂಪಿಟೇಟರ್ ಕಂಪನಿ ಜೊತೆ ಹೋಲಿಸಿ ನೋಡಬೇಕು. ಬೇಕಿದ್ದರೆ ಇಂಡಸ್ಟ್ರಿಯಲ್ ಅವರೇಜ್ ಜೊತೆಗೋ ಹೋಲಿಸಿ ನೋಡಬಹುದು.

ಇದನ್ನು ಓದಿ: ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ?

3. Debt to Equity Ratio.

what does a debt to equity ratio of 1.5 mean in kannada
debt equity ratio

ನೀವು ಒಂದು ಕಂಪನಿಯ ಎಲ್ಲಾ ಸಾಲದಿಂದ(debt) ಈಕ್ವಿಟಿಯನ್ನು(equity) ಬಾಗಿಸಿದಾಗ, Debt to Equity Ratio ಸಿಗುತ್ತದೆ. ಇದು ಒಂದು ಕಂಪನಿಯಲ್ಲಿ ಹೊರಗಿನವರ ಎಷ್ಟು ಹಣ ಇದೆ ಮತ್ತು ಒಳಗಿನವರ ಎಷ್ಟು ಹಣ ಇದೆ ಎಂಬುದನ್ನು ತಿಳಿಸುತ್ತದೆ. ಕಂಪನಿಗೆ ಸಾಲ ನೀಡಿರುವ ಸ್ಟಾಕ್ ಹೋಲ್ಡರನ್ನು ಹೊರಗಿನವರು ಎನ್ನಲಾಗುತ್ತದೆ. ಅದನ್ನು ನಾವು ಸಾಲ(debt) ಎನ್ನುತ್ತೇವೆ. ಇದು ಕಂಪನಿಯ ದೀರ್ಘಾವಧಿ ಸಾಲ ಇದ್ದಾಗಿದೆ.

ಈಕ್ವಿಟಿ ಎಂದರೆ ಆ ಕಂಪನಿಯಲ್ಲಿ ಹೂಡಿಕೆ ಮಾಡಿದ ಶೇರ್ ಹೋಲ್ಡರ್ ಹಣವಾಗಿದೆ. ಸಾಲದಲ್ಲಿ ಇಂಟ್ರೆಸ್ಟ್ ಪಾವತಿ ಮಾಡಲಾಗುತ್ತದೆ. ಈಕ್ವಿಟಿಯಲ್ಲಿ ಡಿವಿಡೆಂಟ್(dividend) ಪಾವತಿ ಮಾಡಲಾಗುತ್ತದೆ. ಡಿವಿಡೆಂಟ್ ಒಂದು ಕಡ್ಡಾಯ(mandatory) ಪೇಮೆಂಟ್ ಆಗಿರುವುದಿಲ್ಲ. ಆದರೆ ಸಾಲಕೆ ನೀಡುವ ಇಂಟ್ರೆಸ್ಟ್ ಖಂಡಿತವಾಗಿಯೂ ಕಡ್ಡಾಯವಾಗಿದೆ.

ಒಂದು ಕಂಪನಿಯ Debt to Equity Ratio 2:1 ಇದೆ ಎಂದುಕೊಳ್ಳಿ. ಇದರ ಅರ್ಥ 2 ರೂ ಸಾಲದಿಂದ(debt), 1 ರೂ ಈಕ್ವಿಟಿಯಿಂದ ಬಂದಿದೆ.

ಐಡಿಯಾಲ್ Debt to Equity Ratio 1:1 ಇರುತ್ತದೆ. ಇದು 1 ರೂ ಸಾಲದಿಂದ, 1 ರೂ ಈಕ್ವಿಟಿಯಿಂದ ಬಂದಿದೆ. ಒಂದು ಕಂಪನಿಯ Debt to Equity Ratio ಸಮಯದ ಜೊತೆ ಏರುತ್ತಿದ್ದರೆ, ಆ ಕಂಪನಿ ತುಂಬಾ ಅಪಾಯಕಾರಿಯಾಗಿದೆ. ಏಕೆಂದರೆ ಅದು ಸಾಲ ಪಡೆಯುತ್ತಲೇ ಇರುತ್ತದೆ. ಇದರಿಂದ ಕಂಪನಿ ಭವಿಷ್ಯದಲ್ಲಿ ದಿವಾಳಿಯಾಗುವ(bankrupt) ಸಾಧ್ಯತೆಯೂ ಇರುತ್ತದೆ. ಹೀಗಾಗಿ Debt to Equity Ratio ಬೇಗ ಬೇಗನೇ ಏರುತ್ತಲೇ ಇರಬಾರದು.

Debt to Equity Ratio ಅಧಿಕವಿದ್ದರೂ ನಮಗೆ ತೊಂದರೆ ಮತ್ತು ಅದು ಕಡಿಮೆ ಇದ್ದರೂ ನಮಗೆ ತೊಂದರೆಯೇ. ಅಧಿಕವಿದ್ದರೆ ಕಂಪನಿಗೆ ತೀರಿಸಲು ಅಧಿಕ ಸಾಲವಿರುತ್ತದೆ. ಇದರಿಂದ ಭವಿಷ್ಯದಲ್ಲಿ ಇನ್ನಷ್ಟು ಸಾಲ ಪಡೆಯಲು ಕಷ್ಟವಾಗುತ್ತದೆ. ಅದೇ ಕಡಿಮೆ ಇದ್ದರೆ ಕಂಪನಿ ಹೊರಗಿನವರಿಂದ ಹಣ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದಾಗಿದೆ. ಆದರೂ ಒಂದು ವೇಳೆ ಹೊರಗಿನವರ ತುಂಬಾ ಹಣ ಇದ್ದು ಈ ಪರಿಸ್ಥಿತಿಯಿದ್ದರೆ, ಕಂಪನಿಯ ಶೇರ್ ಹೋಲ್ಡರ್ ಬೇಸ್ ಹೆಚ್ಚುತ್ತಿದೆ ಎಂದರ್ಥ.

ಇದರಿಂದ ಕಂಪನಿಯ ಗಳಿಕೆ ಅನೇಕ ಶೇರ್ ಹೋಲ್ಡರ್ ಜೊತೆಗೆ ಭಾಗವಾಗುತ್ತದೆ. ಅದು ತುಂಬಾ ಜನರಿಗೆ ಭಾಗವಾದರೆ, ಒಬ್ಬನಿಗೆ ತುಂಬಾ ಕಡಿಮೆ ಹಣ ಸಿಗುತ್ತದೆ. ಹೀಗಾಗಿ Debt to Equity Ratio ಸಮರ್ಥನೀಯವಾಗಿರಬೇಕು(sustainable). ಅದು 1 ರಿಂದ 1.7 ರ ನಡುವೆ ಇದ್ದರೆ ಆ ಕಂಪನಿ ಸೂಕ್ತವಾಗಿದೆ. ಆದರೆ ಇದು ಒಂದು ಸಂಪೂರ್ಣ(absolute) ಸಂಖ್ಯೆ ಅಲ್ಲ. ಇದನ್ನು ಕೂಡ ನೀವು ಆ ಕಂಪನಿಯ ಕಾಂಪಿಟೇಟರ್ ಮತ್ತು ಅದರ ಇಂಡಸ್ಟ್ರಿಯಲ್ ಅವರೇಜ್ ಜೊತೆಗೆ ಹೋಲಿಸಿ ನೋಡಬೇಕು.

ಇದನ್ನು ಓದಿ: ಷೇರು ಮಾರುಕಟ್ಟೆಯಿಂದ ಉತ್ತಮ ರಿಟರ್ನ್ಸ್ ಪಡೆಯುವುದು ಹೇಗೆ?

4. Return on Equity(ROE).

what is good return on equity in kannada
return on equity

ರಿಟರ್ನ್ ಆನ್ ಈಕ್ವಿಟಿ ಕಂಪನಿ ತನ್ನ ಶೇರ್ ಹೋಲ್ಡರ್ಗೆ ಎಷ್ಟು ಹಣ ಗಳಿಸಿ ಕೊಡುತ್ತಿದೆ ಎಂಬುದನ್ನು ತಿಳಿಸುತ್ತದೆ. ಈಗ ನೀವು EPS ಮತ್ತು ರಿಟರ್ನ್ ಆನ್ ಈಕ್ವಿಟಿಯಲ್ಲಿ ಏನು ವ್ಯತ್ಯಾಸವಿದೆ ಎಂದು ಕೇಳಬಹುದು. EPSನಲ್ಲಿ ನೀವು ಒಂದು ಶೇರ್‌ಗೆ ಕ್ಯಾಲ್ಕುಲೇಟ್ ಮಾಡುತ್ತೀರಾ. ಆದರೆ ರಿಟರ್ನ್ ಆನ್ ಈಕ್ವಿಟಿಯಲ್ಲಿ ಒಟ್ಟು ಶೇರ್ ತೆಗೆದುಕೊಂಡು ಕ್ಯಾಲ್ಕುಲೇಟ್ ಮಾಡುತ್ತೀರಾ. EPS ಪರ್ಸಂಟೇಜ್ನಲ್ಲಿ ಕ್ಯಾಲ್ಕುಲೇಟ್ ಆಗುತ್ತದೆ. ಆದರೆ ರಿಟರ್ನ್ ಆನ್ ಈಕ್ವಿಟಿ ಆಬ್ಸಲ್ಯೂಟ್ ಸಂಖ್ಯೆ ಆಗಿದೆ.

ಕಂಪನಿಯ ಒಟ್ಟು ಲಾಭವನ್ನು ಒಟ್ಟು ಇಕ್ವಿಟಿ ಜೊತೆ ನೀವು ಬಾಗಿಸಿದಾಗ ನಿಮಗೆ ರಿಟರ್ನ್ ಆನ್ ಈಕ್ವಿಟಿ ಸಿಗುತ್ತದೆ. ಒಂದು ಕಂಪನಿಯ ಲಾಭ ನೋಡಿ ಅದು ಚೆನ್ನಾಗಿದೆ ಎನ್ನಲು ಸಾಧ್ಯವಿಲ್ಲ. ಕಂಪನಿಯ ಲಾಭ ಎಷ್ಟು ಜನರಿಗೆ ಭಾಗವಾಗಲಿದೆ ಎಂಬುದರ ಮೇಲೆ ಕಂಪನಿ ಚೆನ್ನಾಗಿದೆಯೇ, ಇಲ್ಲವೇ ಎಂಬುದನ್ನು ನೋಡಬೇಕಾಗುತ್ತದೆ. ಉದಾಹರಣೆಗೆ ಕಂಪನಿ A ಮತ್ತು B ಎರಡು 10 ಕೋಟಿ ಲಾಭ ನೀಡಿದೆ ಎಂದುಕೊಳ್ಳಿ. ಕೇವಲ ಲಾಭದಿಂದ ಒಬ್ಬ ಶೇರ್ ಹೋಲ್ಡರ್ ಎಷ್ಟು ಹಣ ಗಳಿಸಿದ ಎಂದು ನಿಮಗೆ ತಿಳಿಯುತ್ತದೆಯೇ, ಉತ್ತರ ಇಲ್ಲ. ಕಂಪನಿಯಲ್ಲಿ ಎಷ್ಟು ಜನ ಹೂಡಿಕೆ ಮಾಡಿದ್ದಾರೆ ಎಂಬುದು ತಿಳಿದಾಗ ನಾವು ಅದನ್ನು ತಿಳಿಯಬಹುದು.

ಕಂಪನಿ A ಯಲ್ಲಿ 100 ಕೋಟಿ ಇದ್ದು, ಕಂಪನಿ B ಯಲ್ಲಿ 1000 ಕೋಟಿ ಇದೆ ಎಂದುಕೊಳ್ಳಿ. ಎರಡೂ ಕಂಪನಿಯ ಲಾಭ 10 ಕೋಟಿಯೇ ಇದೆ. ಇದರ ಅರ್ಥ ಆ ಕಂಪನಿ B ಯ ಲಾಭ ತುಂಬಾ ಜನರಿಗೆ ಭಾಗವಾಗುತ್ತದೆ ಮತ್ತು ಕಂಪನಿ A ಯ ಲಾಭ ಕಡಿಮೆ ಜನರಿಗೆ ಭಾಗವಾಗುತ್ತದೆ. ನೀವು 100% ಕಂಪನಿ A ಯನ್ನು ಆರಿಸಿಕೊಳ್ಳುತ್ತೀರಾ. ಹೀಗಾಗಿ ಕಂಪನಿ A ಯ ರಿಟರ್ನ್ ಆನ್ ಈಕ್ವಿಟಿ 10% ಇದ್ದು, ಕಂಪನಿ B ಯ ರಿಟರ್ನ್ ಆನ್ ಈಕ್ವಿಟಿ ಶೇಕಡ 1% ಇದೆ. ಹೀಗಾಗಿ ರಿಟರ್ನ್ ಆನ್ ಈಕ್ವಿಟಿ ಎಲ್ಲಿ ತುಂಬಾ ಇದೆಯೋ ಅಲ್ಲಿ ನೀವು ನಿಮ್ಮ ಹಣ ಹಾಕಲು ಬಯಸುತೀರಾ.

ಇದನ್ನು ಓದಿ: ನಿಷ್ಕ್ರಿಯ ಆದಾಯದ ಮೂಲಗಳು ಯಾವುವು?

5. Price to Book Value(P/B).

what is price to book ratio in kannada
pb ratio

P/B ratio ಕಂಪನಿಯ ಸ್ಟಾಕ್ ಹೆಚ್ಚು ಮೌಲ್ಯಯುತ ಅಥವಾ ಕಡಿಮೆ ಮೌಲ್ಯಯುತವೆ ಎಂಬುದನ್ನು ತಿಳಿಸುತ್ತದೆ. ಇದನ್ನು ನಾವು P/E ಅನುಪಾತಕ್ಕೂ ಹೇಳಿದ್ದೆವು. ಆದರೆ ಇದರಲ್ಲಿ ಸ್ವಲ್ಪ ವ್ಯತ್ಯಾಸವಿದೆ. P/B ratio ಒಂದು ಕಂಪನಿಯ ಒಂದು ಶೇರ್ ಪ್ರೆಸ್ ಅನ್ನು ಅದರ ಬುಕ್ ವ್ಯಾಲ್ಯೂ ಜೊತೆ ಬಾಗಿಸಿದಾಗ ಸಿಗುತ್ತದೆ.

ನೀವು ಕಂಪನಿಯ ಒಟ್ಟು ಆಸ್ತಿಯನ್ನು(asset) ಒಟ್ಟು ಬಾಧ್ಯತೆಗಳ(liabilities) ಜೊತೆಗೆ ಕಳೆದಾಗ ನಿಮಗೆ ಕಂಪನಿಯ ನಿವ್ವಳ ಲಾಭ(net profit) ಸಿಗುತ್ತದೆ. ಉದಾಹರಣೆಗೆ ಕಂಪನಿಯ ಒಟ್ಟು ಆಸ್ತಿ 5 ಲಕ್ಷ ಇದ್ದು, ಒಟ್ಟು ಬಾಧ್ಯತೆಗಳು 4 ಲಕ್ಷ ಇದ್ದರೆ ಅದರ ನಿವ್ವಳ ಲಾಭ 1 ಲಕ್ಷ ಆಗುತ್ತದೆ. ಇದನ್ನು ನೀವು ಒಟ್ಟು ಶೇರ್ ಜೊತೆಗೆ ಭಾಗಿಸಬೇಕು. ಉದಾಹರಣೆಗೆ ಒಟ್ಟು ಶೇರನ್ನು 1000 ಎಂದು ತೆಗೆದುಕೊಳ್ಳೋಣ. 1000 ದಿಂದ 1 ಲಕ್ಷ ಭಾಗಿಸಿದರೆ ನಿಮಗೆ 100 ಸಿಗುತ್ತದೆ. ಇದುವೇ P/B ratio ಆಗಿದೆ. ನೀವು P/B ratioವನ್ನು ಕಂಪನಿಯ ಕಾಂಪಿಟೇಟರ್ ಮತ್ತು ಇಂಡಸ್ಟ್ರಿ ಜೊತೆಗೆ ಹೋಲಿಸಿ ನೋಡಿದಾಗ ಒಳ್ಳೆಯ ಕಂಪೆನಿ ಹೌದೇ ಅಥವಾ ಇಲ್ಲವೇ ಎಂದು ತಿಳಿಯುತ್ತದೆ.

P/B ratio ಮತ್ತು ROE ಎರಡೂ ಒಟ್ಟಿಗೆ ಏರುತ್ತಿದ್ದರೆ ಕಂಪನಿ ಸರಿಯಾಗಿ ಸಾಗುತ್ತಿದೆ ಎಂದರ್ಥ. ಒಂದು ವೇಳೆ ಒಂದು ಮೇಲೆ ಹೋಗಿ ಇನ್ನೊಂದು ಕೆಳಗೆ ಹೋದರೆ ಕಂಪನಿ ಅಪಾಯಕಾರಿ ಎಂದರ್ಥ. ಏಕೆಂದರೆ ROE ಇಳಿದರೆ ಕಂಪನಿ ಲಾಭ ನೀಡುತ್ತಿಲ್ಲವೆಂದರ್ಥ. ಇಂದು ಕಂಪನಿಯನ್ನು ಮಾರಿದರೆ ಅದೆಷ್ಟು ಮೊತ್ತ(amount) ತನ್ನ ಶೇರ್ ಹೋಲ್ಡರ್ ಗೆ ನೀಡುತ್ತದೆ ಎಂಬುದನ್ನು P/B ratio ತಿಳಿಸುತ್ತದೆ.

ಇದನ್ನು ಓದಿ: 20ರ ವಯಸ್ಸಿನಲ್ಲಿ ನಿಮ್ಮ ಹಣ ಖರ್ಚಗುವ 7 ಬಲೆಗಳು

6. Current Ratio.

is a 1:1 current ratio is good in kannada
current ratio

ಕರೆಂಟ್ ರೇಶಿಯೋ ಕಂಪೆನಿಯ ಅಲ್ಪಾವಧಿ ದ್ರವ್ಯತೆ(liquidity) ಬಗ್ಗೆ ತಿಳಿಸುತ್ತದೆ. ಇದರಿಂದ ಕಂಪನಿ ಅಲ್ಪಾವಧಿ ದ್ರವ್ಯತೆಗಳನ್ನು ಈಡೇರಿಸುತ್ತಿದೆಯೇ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ನೀವು ಪ್ರಸ್ತುತ ಆಸ್ತಿಯಿಂದ(current assets) ಪ್ರಸ್ತುತ ಬಾಧ್ಯತೆಗಳನ್ನು(liabilities) ಭಾಗಿಸಿದರೆ ಕಂಪನಿಯ ಕರೆಂಟು ರೇಶಿಯೋ ಸಿಗುತ್ತದೆ. ಕರೆಂಟ್ ರೇಶಿಯೋ 1.5 ಇದರಿಂದ 2 ರ ವ್ಯಾಪ್ತಿಯಲ್ಲಿ ಇದ್ದರೆ ಒಳ್ಳೆಯ ಕಂಪನಿಯಾಗಿದೆ. ಆದರೂ ನಾವು ಈಗ ತಿಳಿಸಿದ ಸಂಖ್ಯೆ 100% ಸರಿ ಎಂದು ಹೇಳಲು ಸಾಧ್ಯವಿಲ್ಲ.

ಕರೆಂಟ್ ರೇಶಿಯೋ ಹೂಡಿಕೆಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲ್ಲು ಸೂಕ್ತವಲ್ಲ. ಉಳಿದ ರೇಶಿಯೋಗಳನ್ನು ನೋಡಬೇಕು. ಏಕೆಂದರೆ ಕರೆಂಟ್ ರೇಶಿಯೋ ಅಲ್ಪಾವಧಿ ಬಗ್ಗೆ ಮಾತ್ರ ತಿಳಿಸುತ್ತದೆ. ನೀವು ದೀರ್ಘಾವಧಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದ್ದರೆ ಕರೆಂಟ್ ರೇಶಿಯೋಗಿಂತ ನಾವು ಹೇಳಿದ ಇತರೆ ರೇಶಿಯೋ ಪ್ರಮುಖವಾಗಿದೆ.

ಇದಾಗಿತ್ತು ಫೈನಾಶಿಯಲ್ ನ 6 ಅನುಪಾತ(ratio). ನೀವು ಯಾವುದೇ ಕಂಪನಿಯಲ್ಲಿ ಹೂಡಿಕೆ ಮಾಡುವ ಮೊದಲು ಈ 6 ಅನುಪಾತಗಳನ್ನು ನೋಡಿ. ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments