Website designed by @coders.knowledge.

Website designed by @coders.knowledge.

Get rich by investing(Not buying stocks) | ಷೇರುಗಳನ್ನು ಖರೀದಿಸದೆ ಶ್ರೀಮಂತರಾಗಿ

Watch Video

ನೀವೇ ಸ್ವಯಂ ಆಗಿ ಕೂತು ಸ್ಟಾಕ್ ಅನ್ನು ಆಯ್ಕೆ ಮಾಡಲು ಸಮಯವಿಲ್ಲದಿದ್ದರೆ ಮತ್ತು ನಿಮ್ಮ ಹೂಡಿಕೆಯ ಹಣ ದೇಶದ ದೊಡ್ಡ ಕಂಪನಿಗಳ ಭಾಗವಾಗಲು ಬಯಸಿದರೆ ಇಂಡೆಕ್ಸ್ ಫಂಡ್(index fund) ನಿಮಗೆ ಸೂಕ್ತವಾಗಿದೆ. ಇದರಿಂದ ನೀವು ನಿಮ್ಮ ಕೆಲಸದಲ್ಲಿ ನಿರತರಾಗಬಹುದು ಮತ್ತು ಸ್ಟಾಕ್ ಬಗ್ಗೆ ಯಾವುದೇ ರೀತಿಯ ಒತ್ತಡವನ್ನು ತೆಗೆದುಕೊಳ್ಳಬೇಕಿಲ್ಲ.

ಈ ಲೇಖನದಲ್ಲಿ ನಾವು ಇಂಡೆಕ್ಸ್ ಫಂಡ್ನಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಬೆಳೆಸಬಹುದು ಎಂಬುದನ್ನು ತಿಳಿಸುತ್ತೇವೆ. ಈ ಲೇಖನವನ್ನು ಕೊನೆವರೆಗೂ ನೀವು ನೋಡಿದರೆ ಇದಕ್ಕೆ ಸಂಬಂಧಿಸಿದ ಇತರೆ ಲೇಖನಗಳನ್ನು ನೋಡುವ ಅವಶ್ಯಕತೆ ಇರುವುದಿಲ್ಲ.

ಇದನ್ನು ಓದಿ: ಅನುಭವಿ ಹೂಡಿಕೆದಾರನ ಹೂಡಿಕೆಯ ಪಾಠಗಳು

1. Gotrocks family

gotrocks family index investing story in kannada
gotrocks family

ಅಮೇರಿಕಾದಲ್ಲಿ ಗೊಟ್ರೋಕ್ಸ್(gotrocks) ಎಂಬ ಕುಟುಂಬವಿತ್ತು. ಇದರಲ್ಲಿ ಅನೇಕ ಕುಟುಂಬ ಸದಸ್ಯರು ಇದ್ದರು. ಅಮೆರಿಕದ ಎಲ್ಲಾ ರೀತಿಯ ಸ್ಟಾಕ್ ಈ ಕುಟುಂಬದ ಹತ್ತಿರವಿತು. ಇದರಿಂದ ಎಲ್ಲಾ ಲಾಭಾಂಶ(dividends) ಇವರಿಗೆ ಸಿಗುತ್ತಿತ್ತು ಮತ್ತು ಷೇರಿನ ಬೆಲೆ ಹೆಚ್ಚಿದರು ಇವರಿಗೆ ಲಾಭವಾಗುತ್ತಿತ್ತು. ಈ ಕುಟುಂಬಕ್ಕೆ ಸಹಾಯ ಮಾಡಲು ಕೆಲವು ಸಹಾಯಕರು(helper) ಬಂದರು. ಅವರೆಲ್ಲ ಐಐಟಿ(iit) ಮಟ್ಟದಷ್ಟು ಓದಿದ್ದರು. ಅವರು ಈ ಕುಟುಂಬದ ಕೆಲವು ಸದಸ್ಯರಿಗೆ, "ನೀವು ಇತರ ಕುಟುಂಬ ಸದಸ್ಯರೊಂದಿಗೆ ಷೇರನ್ನು ಖರೀದಿಸಬೇಕು. ಆದರೆ ನನಗೆ ಇದರಲ್ಲಿ ಸ್ವಲ್ಪ ಪಾಲು(commision) ನೀಡಿ" ಎಂದು ಮನವರಿಕೆ ಮಾಡಿದರು. ಹೀಗೆ ಅಲ್ಲಿ ಅನೇಕ ಸಹಾಯಕರು ಬರಲು ಪ್ರಾರಂಭಿಸಿದರು.

ಈ ಕುಟುಂಬದ ಸದಸ್ಯರು ವಾರ್ಷಿಕ ಸಭೆಯಲ್ಲಿ(annual meeting) ಒಂದಾದಾಗ, ಈ ಸಹಾಯಕರು ಬಂದ ನಂತರ ಕುಟುಂಬದ ಸಂಪತ್ತು ಕಡಿಮೆಯಾಗುತ್ತಿರುವುದನ್ನು ನೋಡಿದರು ಮತ್ತು ಲಾಭ ಕೂಡ ಮುಂಚಿಗಿಂತ ತುಂಬಾ ಕಡಿಮೆ ಇತ್ತು. ಆದರೆ ಈ ಸಹಾಯಕರು ತಮ್ಮದೇ ಆದ ಸ್ವಂತ ಮನೆಯನ್ನು ಖರೀದಿಸಿದ್ದರು, ಕಾರನ್ನು ಖರೀದಿಸಿದ್ದರು, ಫಾರ್ಮ್ ಹೌಸ್ ತೆಗೆದುಕೊಂಡಿದ್ದರು ಮತ್ತು ಅನೇಕ ವಾಪ್ಯಾರಗಳನ್ನು ಪ್ರಾರಂಭಿಸಿದ್ದರು. ಇದರಿಂದ ಆ ಕುಟುಂಬ ಸಲ್ಪ ದಿಗಿಲುಗೊಂಡಿತು(panic). ಇದು ಏಕೆಂದರೆ ಅವರು ಎಷ್ಟೋ ವರ್ಷಗಳಿಂದ ಲಾಭವನ್ನೇ ನೋಡುತ್ತಿದ್ದರು. ಅವರಿಗೆ ಎಂದಿಗೂ ನಷ್ಟವಾಗಿರಲಿಲ್ಲ. ಆದರೆ 2 ರಿಂದ 3 ತಿಂಗಳಲ್ಲಿ ಇಷ್ಟು ನಷ್ಟವನ್ನು ನೋಡುವುದು ಅವರಿಗೆ ಗಾಬರಿ ನೀಡಿತು.

ಪೂರ್ತಿ ಅಮೆರಿಕದ ಮಾರುಕಟ್ಟೆ ಅವರ ಹಿಡಿತದಲ್ಲಿ ಇರುವುದರಿಂದ ಪ್ರತಿದಿನ ಸಾವಿರಾರು ಕೋಟಿಯಷ್ಟು ನಷ್ಟವಾಗುತ್ತಿತು. ಆಗ ಕುಟುಂಬ ಜಗತ್ತಿನ ಅತ್ಯುತ್ತಮ ನಿಧಿ ವ್ಯವಸ್ಥಾಪಕನನ್ನು(best fund manager) ಮಜೂರಿ(hire) ಮಾಡುವ ಬಗ್ಗೆ ಯೋಚಿಸಿತು. ಅವರು ಎಲ್ಲಾ ಸಹಾಯಕರನ್ನು ತೆಗೆದುಹಾಕಿ, ನಿಧಿ ವ್ಯವಸ್ಥಾಪಕರಿಗೆ ಕೇಳಿದಷ್ಟು ಸಂಬಳವನ್ನು ನೀಡಲು ಪ್ರಾರಂಭಿಸಿದರು. ಇದರ 2- 3 ವರ್ಷದ ನಂತರ ಕುಟುಂಬ ಮತ್ತೊಮ್ಮೆ ಸಂಪತ್ತನ್ನು ಪರಿಶೀಲಿಸಿದಾಗ ಅವರು ಇನ್ನಷ್ಟು ನಷ್ಟದಲ್ಲಿ ಇದ್ದರು. ಆಗ ಕುಟುಂಬದ ಹಿರಿಯ ಸದಸ್ಯ, "ಸಕ್ರಿಯ ಟ್ರೇಡಿಂಗ್(active trading) ಬಿಡಬೇಕು" ಎಂದು ತಿಳಿಸುತ್ತಾರೆ. ಅಂದರೆ ಮತ್ತೆ ಮತ್ತೆ ಸ್ಟಾಕ್ ಅನ್ನು ಖರೀದಿ ಮತ್ತು ಮಾರಾಟ(buy and sell) ಮಾಡುವುದನ್ನು ನಿಲ್ಲಿಸಬೇಕು ಮತ್ತು ಮುಂಚಿನ ರೀತಿ ನಿಷ್ಕ್ರಿಯ ಹೂಡಿಕೆ(passive investing) ಮಾಡಬೇಕು ಎಂದುಕೊಂಡರು. ಅಂದರೆ ಷೇರುಗಳನ್ನು ದೀರ್ಘವದಿವರೆಗೆ ಹಿಡಿದಿಟ್ಟುಕೊಳ್ಳುವುದಾಗಿದೆ. ಗೊಟ್ರೋಕ್ಸ್ ಕುಟುಂಬ ಇದನ್ನು ಫಾಲೋ ಮಾಡಿತು ಮತ್ತು ನಿಧಾನವಾಗಿ ಲಾಭವನ್ನು ಗಳಿಸಿತು.

ನಿಮಗೆ ಪ್ಯಾಸಿವ್ ಆದಾಯದ ಶಕ್ತಿಯ ಬಗ್ಗೆ ತಿಳಿಸಲು ನಾವು ಈ ಕಾಲ್ಪನಿಕ ಕಥೆಯನ್ನು ತಿಳಿಸಿದೆವು. ಅಮೆರಿಕಾದಲ್ಲಿ ಪ್ಯಾಸಿವ್ ಹೂಡಿಕೆ ತುಂಬಾ ಪ್ರಸಿದ್ಧವಾಗಿದೆ ಮತ್ತು ಭಾರತದಲ್ಲಿ ಪ್ರಸಿದ್ಧವಾಗುತ್ತಿದೆ. ಪ್ಯಾಸಿವ್ ಹೂಡಿಕೆಯಲ್ಲಿ ಇಂಡೆಕ್ಸ್ ಫಂಡ್ನಲ್ಲಿ ಹಣವನ್ನು ಹೂಡಿಕೆ ಮಾಡುತ್ತೀರಾ. ಹಾಗಿದ್ದರೆ ಇಂಡೆಕ್ಸ್ ಫಂಡ್ನಲ್ಲಿ ಇಂಡೆಕ್ಸ್(index) ಎಂದರೇನು?

ಇದನ್ನು ಓದಿ: "The Education of a Value Investor" ಪುಸ್ತಕದ ಸಾರಾಂಶ

2. What is index?

what is meant by index in stock market in kannada
index

ಹಣಕಾಸು(finance) ಮತ್ತು ಅರ್ಥಶಾಸ್ತ್ರದಲ್ಲಿ(economics) ಇಂಡೆಕ್ಸ್ ಅಂಕಪಟ್ಟಿಯ(scorecard) ರೀತಿ ಇರುತ್ತದೆ. ಇದು ಒಂದು ವಸ್ತು ಯಾವ ರೀತಿ ನಿರ್ವಹಿಸುತ್ತಿದೆ ಎಂಬುದನ್ನು ತಿಳಿಸುತ್ತದೆ. ಇದೇ ರೀತಿ ಷೇರು ಮಾರುಕಟ್ಟೆ ಹೇಗೆ ನಿರ್ವಹಿಸುತ್ತಿದೆ ಎಂಬುದನ್ನು ಇಂಡೆಕ್ಸ್ ತಿಳಿಸುತ್ತದೆ.

ಏಕೆಂದರೆ ಷೇರು ಮಾರುಕಟ್ಟೆಯಲ್ಲಿ ಸಾವಿರಕ್ಕೂ ಹೆಚ್ಚು ಕಂಪನಿಗಳು ಪಟ್ಟಿ ಆಗಿವೆ. ಆಗಿದ್ದರೆ ನಮಗೆ ಇಂದಿನ ಷೇರು ಮಾರುಕಟ್ಟೆಯ ಪ್ರದರ್ಶನದ ತಿಳಿಯುವುದೇಗೆ? ಇದಕ್ಕಾಗಿ ನೀವು ಎಲ್ಲಾ ಕಂಪನಿಯ ಷೇರು ಬೆಲೆಯನ್ನು ನೋಡಬೇಕು. ಹಿಂದಿನ ದಿನದ ಷೇರು ಬೆಲೆಯ ಜೊತೆ ಹೋಲಿಕೆ ಮಾಡಬೇಕು ಮತ್ತು ಇಷ್ಟೊಂದು ಕಂಪನಿಗಳ ಮಾಹಿತಿ ವಿಶ್ಲೇಷಣೆ(data analysis) ಮಾಡುವುದು ತುಂಬಾನೇ ಸಂಕೀರ್ಣ(complex) ಮತ್ತು ಸಮಯ ತೆಗೆದುಕೊಳ್ಳುತ್ತದೆ.

ಇದಕ್ಕೆ ನಮಗೆ ಇಂಡೆಕ್ಸ್ ಸಹಾಯ ಮಾಡುತ್ತದೆ. ಬಾಂಬೆ ಷೇರು ವಿನಿಮಯದ(bombay stock exchange) ಇಂಡೆಕ್ಸ್ ಸೆನ್ಸಕ್ಸ್(sensex) ಆಗಿದೆ. ಇದು ಭಾರತದ ಟಾಪ್ 30 ಕಂಪನಿಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಷೇರು ವಿನಿಮಯದ(national stock exchange) ಇಂಡೆಕ್ಸ್ ನಿಫ್ಟಿ(nifty) ಆಗಿದೆ. ಇದನ್ನು ನಿಫ್ಟಿ 50(nifty 50) ಎಂದು ಕರೆಯಲಾಗುತ್ತದೆ. ಇದು ಭಾರತದ ಟಾಪ್ 50 ಕಂಪನಿಗಳನ್ನು ಒಳಗೊಂಡಿದೆ.

what is difference between sensex and nifty in kannada
sensex and nifty

5 ಜನವರಿ 2024 ರಂದು ಸೆನ್ಸೆಕ್ಸ್ 72,000 ವಿತ್ತು. ಅಂದರೆ ತನ್ನ ಹಿಂದಿನ ದಿನಕ್ಕಿಂತ 0.25% ನಷ್ಟು ಮೇಲೆ ಮುಚ್ಚಿದೆ. ನಿಫ್ಟಿ 50, 5 ಜನವರಿ 2024 ರಂದು 21,700 ಇತ್ತು. ಅಂದರೆ ತನ್ನ ಹಿಂದಿನ ದಿನಕ್ಕಿಂತ 0.24% ಮೇಲೆ ಮುಚ್ಚಿದೆ. ಈಗ ಯಾರಾದರೂ ನಿಮಗೆ ಹಿಂದಿನ ಒಂದು ವರ್ಷದಲ್ಲಿ ಷೇರು ಮಾರುಕಟ್ಟೆ ಎಷ್ಟು ರಿಟರ್ನ್ ನೀಡಿದೆ ಎಂದು ಕೇಳಿದರೆ ನೀವು ಸೆನ್ಸೆಕ್ಸ್, ನಿಫ್ಟಿ ಇಂಡೆಕ್ಸ್ನ 1 ವರ್ಷದ ರಿಟರ್ನ್ ತಿಳಿಸಬಹುದು. ಸೆನ್ಸೆಕ್ಸ್ ಹಿಂದಿನ 1 ವರ್ಷದಲ್ಲಿ 18.57% ನಷ್ಟು ರಿಟರ್ನ್ ನೀಡಿದೆ. ಅದೇ ನಿಫ್ಟಿ 19.94% ನಷ್ಟು ರಿಟರ್ನ್ ನೀಡಿದೆ. ಸೆನ್ಸೆಕ್ಸ್ ಹಿಂದಿನ 5 ವರ್ಷದಲ್ಲಿ 100% ನಷ್ಟು ರಿಟರ್ನ್ ನೀಡಿದೆ. ಅದೇ ನಿಫ್ಟಿ 101% ನಷ್ಟು ರಿಟರ್ನ್ ನೀಡಿದೆ.

ನೀವು ಈಗ ಸೆನ್ಸೆಕ್ಸ್ ನಲ್ಲಿ ಟಾಪ್ 30 ಕಂಪನಿಗಳಿವೆ, ನಿಫ್ಟಿ 50 ಯಲ್ಲಿ ಟಾಪ್ 50 ಕಂಪನಿಗಳಿವೆ. ಆಗಿದ್ದರೆ ಇದನ್ನು ಯಾವ ರೀತಿ ನಿರ್ಧಾರ ಮಾಡಲಾಗುತ್ತದೆ ಮತ್ತು ಈ ಇಂಡೆಕ್ಸ್ ಮಾರುಕಟ್ಟೆಯ ಭಾವನೆಯನ್ನು(sentiment) ತಿಳಿಸಲು ಹೇಗೆ ಸಾಧ್ಯವಾಗುತ್ತದೆ? ಎಂದು ಕೇಳಬಹುದು. ಭಾರತದಲ್ಲಿ ನಿಫ್ಟಿ 50 ಮಾರುಕಟ್ಟೆ ಬಂಡವಾಳದ(market capitalization) ಪಾಲು 47% ನಷ್ಟು ಇದೆ. ಅಂದರೆ ಪೂರ್ತಿ ಭಾರತದ ಮಾರುಕಟ್ಟೆಯಲ್ಲಿ ಈ 50 ಕಂಪನಿಗಳ ಮಾರುಕಟ್ಟೆ ಪಾಲು 47% ನಷ್ಟು ಇದೆ. ಇದರಿಂದ ಈ ಕಂಪನಿಗಳ ಪ್ರದರ್ಶನದ ಮೇಲೆ ನಮಗೆ ಷೇರು ಮಾರುಕಟ್ಟೆಯಲ್ಲಿ ಐಡಿಯಾ ಸಿಗುತ್ತದೆ. ಇದರಲ್ಲಿ ಇರುವ ಒಂದೊಂದು ಕಂಪನಿಗಳು ಆ ಉದ್ಯಮದ(industry) ಟಾಪ್ ಕಂಪನಿಗಳಾಗಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಫ್ರೀ ಫ್ಲೋಟ್ ಮಾರುಕಟ್ಟೆ ಬಂಡವಾಳೀಕರದ(free float market capitalization) ಮೇಲೆ ಕಂಪನಿಯನ್ನು ಪಟ್ಟಿ ಮಾಡಲಾಗುತ್ತದೆ. ಅಂದರೆ ಪ್ರಚಾರಕರು(promoters) ಮತ್ತು ಸರ್ಕಾರದ(government) ಷೇರುಗಳನ್ನು ತೆಗೆದು ಉಳಿದ ಷೇರು ಫ್ರೀ ಫ್ಲೋಟ್ ಮಾರುಕಟ್ಟೆ ಬಂಡವಾಳೀಕರಣವಾಗಿದೆ.

ಇದನ್ನು ಓದಿ: ಹಣವನ್ನು ನಿರ್ವಹಿಸಲು ಜಪಾನಿಯರ ರಹಸ್ಯ

3. Market capitalization

what is market capitalization in stocks in kannada
market capitalization

ಫ್ರೀ ಫ್ಲೋಟ್ ಮಾರುಕಟ್ಟೆ ಬಂಡವಾಳೀಕರಣವನ್ನು ತಿಳಿಯಲು ಮಾರುಕಟ್ಟೆ ಬಂಡವಾಳೀಕರಣವನ್ನು ಅರ್ಥ ಮಾಡಿಕೊಳ್ಳಬೇಕು.

total outstanding shere * price of each share

ಮಾಡಿದರೆ ನಮಗೆ ಮಾರುಕಟ್ಟೆ ಬಂಡವಾಳೀಕರಣ ಸಿಗುತ್ತದೆ. ಇದು ನಿಮಗೆ ಅಷ್ಟು ತಲೆಗೆ ಹೋಗದೆ ಇರಬಹುದು. ಹೀಗಾಗಿ ಉದಾಹರಣೆಯ ಮೂಲಕ ತಿಳಿಸುತ್ತೇವೆ.

ನೀವು ನಿಮ್ಮ ಗೆಳೆಯರು ಪಿಜ್ಜಾ ತಿನ್ನಲು ಹೋಗಿದ್ದೀರಾ ಎಂದುಕೊಳ್ಳಿ. ಆ ಪಿಜ್ಜಾದಲ್ಲಿ 4 ತುಂಡು ಇದ್ದವು. ಪ್ರತಿ ತುಂಡಿನ ಬೆಲೆ 30 ರೂ ಇರುತ್ತದೆ. ನೀವು 4 ಜನ ಒಂದೊಂದು ತುಂಡನ್ನು ತಿಂದು 30 ರೂ ಕೊಟ್ಟಿರಿ. ಇದರಲ್ಲಿ number of shares 4 ತುಂಡಾಗಿದೆ ಮತ್ತು price of each share 30 ರೂ ಆಗಿದೆ. ಅಂದರೆ ಈ ಪಿಜ್ಜಾದ ಮಾರುಕಟ್ಟೆ ಬಂಡವಾಳೀಕರಣ 120 ರೂ ಆಗಿದೆ.

reliance share market in kannada
reliance industry

ನಾವು ರಿಲಿಯನ್ಸ್ ನ ಮಾರುಕಟ್ಟೆ ಬಂಡವಾಳೀಕರಣದ ಬಗ್ಗೆ ನೋಡೋಣ. ಈ ಕಂಪನಿಯ ಒಟ್ಟು ಬಾಕಿ ಪಾಲು(total outstanding share) ಇದರ ಆಯವ್ಯಯ ಪಟ್ಟಿಯಲ್ಲಿ(balance sheet) ಸಿಗುತ್ತದೆ. ರಿಲಿಯನ್ಸ್ ಹತ್ತಿರ 745 ಕೋಟಿಯಷ್ಟು ಷೇರುಗಳಿದೆ ಮತ್ತು ರಿಲಿಯನ್ಸ್ ನ ಒಂದು ಷೇರಿನ ಬೆಲೆ 5 ಜನವರಿ 2024 ರಂದು 2,609 ರೂ ಇದೆ. ನೀವು 745 ಕೋಟಿಯನ್ನು 2,609 ರೂ ಯಿಂದ ಗುಣಿಸಿದರೆ ನಿಮಗೆ ರಿಲಿಯನ್ಸ್ ಉದ್ಯಮದ ಮಾರುಕಟ್ಟೆ ಬಂಡವಾಳೀಕರಣದ ಬಗ್ಗೆ ತಿಳಿಯುತ್ತದೆ. 5 ಜನವರಿ 2024 ರಂದು ರಿಲಿಯನ್ಸ್ ನ ಮಾರುಕಟ್ಟೆ ಬಂಡವಾಳೀಕರಣ 17.63 ಲಕ್ಷ ಕೋಟಿಯಾಷ್ಟಿದೆ. ಆದರೆ ಫ್ರೀ ಫ್ಲೋಟ್ ಮಾರುಕಟ್ಟೆ ಬಂಡವಾಳೀಕರಣದಲ್ಲಿ ಕಂಪನಿಯ ಮಾಲೀಕರು(owner) ಮತ್ತು ಸರ್ಕಾರದ ಷೇರನ್ನು ತೆಗೆದುಹಾಕಿ ಉಳಿದ ಷೇರುಗಳು ಇರುತ್ತದೆ.

ಉದಾಹರಣೆಗೆ ಆ ಪಿಜ್ಜಾದ ಅಂಗಡಿ ನಿಮ್ಮ ಕುಟುಂಬದ ಸದಸ್ಯರದ್ದು ಎಂದುಕೊಳ್ಳಿ. ಹೀಗಾಗಿ ನೀವು ನಿಮ್ಮ ತುಂಡಿನ ಹಣವನ್ನು ನೀಡುವ ಅವಶ್ಯಕತೆ ಇಲ್ಲ. ಇದರಿಂದ ಆ ಪೀಜಾದ ಫ್ರೀ ಫ್ಲೋಟ್ ಮಾರುಕಟ್ಟೆ ಬಂಡವಾಳೀಕರಣ 30 ರೂ * 3 ತುಂಡು= 90 ರೂ ಆಗುತ್ತದೆ. ರಿಲಿಯನ್ಸ್ ನ ಪ್ರಮೋಟರ್ನ ಒಟ್ಟು ಹಿಡಿತ 49.11% ನಷ್ಟು ಇದೆ. ಈ ಷೇರುಗಳು ವ್ಯಾಪಾರವಾಗುವುದಿಲ್ಲ(trade) ರಿಲಿಯನ್ಸ್ ನ ಫ್ರೀ ಫ್ಲೋಟ್ ಮಾರುಕಟ್ಟೆ ಬಂಡವಾಳೀಕರಣ 7 ಲಕ್ಷ ಕೋಟಿಯಾಷ್ಟಿದೆ. ಇದರಲ್ಲಿ ಪ್ರಮೋಟರ್ನ 49% ಷೇರುಗಳನ್ನು ಸೇರಿಸಿಲ್ಲ.

ಈ ಕಂಪನಿಗಳ ಪರಿಮಾಣ(volume) ಕೂಡ ಅಧಿಕವಿರುತ್ತದೆ. ಅಂದರೆ ನೀವು ಕಂಪನಿಗಳ ಷೇರುಗಳನ್ನು ಮಾರಿದರೆ ಅದನ್ನು ಖರೀದಿಸಲು ಖರೀದಿದಾರರು(buyers) ಇದ್ದೇ ಇರುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಪರಿಮಾಣ ಎಂದರೆ ಷೇರನ್ನು ಎಷ್ಟು ಬಾರಿ ಖರೀದಿ ಮತ್ತು ಮಾರಲಾಗಿದೆ ಎಂದರ್ಥ.

ಉದಾಹರಣೆಗೆ ಕಂಪನಿ xyzನ 100 ಷೇರುಗಳನ್ನು ಖರೀದಿಸಲಾಗಿದೆ ಮತ್ತು ಅಷ್ಟೇ ಷೇರುಗಳನ್ನು ಮಾರಲಾಗಿದೆ. ಹಾಗಿದ್ದರೆ ಆ ಕಂಪನಿಯ ಆ ದಿನದ ಟ್ರೇಡಿಂಗ್ ಪರಿಮಾಣ 200 ಆಗಿದೆ. ಇಂಡೆಕ್ಸ್ ನಲ್ಲಿ ಅತಿಹೆಚ್ಚು ಟ್ರೇಡಿಗ್ ಪರಿಮಾಣ ಇರುವ ಸ್ಟಾಕ್ಗಳನ್ನು ತೆಗೆದುಕೊಳ್ಳಲಾಗುತ್ತದೆ. ರಿಲಿಯನ್ಸ್ ಇಂಡಸ್ಟ್ರಿಯ ಟ್ರೇಡಿಗ್ ಪರಿಮಾಣ 5 ಜನವರಿ 2024ರಂದು 40 ಲಕ್ಷದಷ್ಟಿತ್ತು.

ಇಂಡೆಕ್ಸ್ ನಲ್ಲಿ ಇರುವ ಕಂಪನಿಗಳನ್ನು ವರ್ಷದಲ್ಲಿ 2 ಬಾರಿ ಪರಿಶೀಲಿಸಲಾಗುತ್ತದೆ. ಇದರಿಂದ ಯಾವುದಾದರೂ ಕಂಪನಿ ಚೆನ್ನಾಗಿ ನಿರ್ವಹಿಸುತ್ತಿಲ್ಲವೆಂದರೆ ಅದನ್ನು ಬದಲಿಸಿ ಉತ್ತಮ ಕಂಪನಿಯನ್ನು ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಇಂದು ಇಂಡೆಕ್ಸ್ ನಲ್ಲಿ ಇರುವ ಕಂಪನಿ ಯಾವಾಗಲೂ ಅದರಲ್ಲಿ ಇರುತ್ತದೆ ಎಂದಿಲ್ಲ. ಅದು ಚೆನ್ನಾಗಿ ನಿರ್ವಹಿಸುತ್ತಿಲ್ಲದಿದ್ದರೆ ಅದನ್ನು ತೆಗೆದು ಹಾಕಲಾಗುತ್ತದೆ ಮತ್ತು ಉತ್ತಮವಾದ ಕಂಪನಿಯ ಜೊತೆಯಲಿ ಬದಲಿಸಲಾಗುತ್ತದೆ.

ನೀವು ಇಂಡೆಕ್ಸ್ ಎಂದರೇನು ಎಂಬುದನ್ನು ತಿಳಿದುಕೊಂಡಿರಿ ಎಂದು ಭಾವಿಸುತ್ತೇವೆ. ಈಗ ಇಂಡೆಕ್ಸ್ ಫಂಡ್(index fund) ಎಂದರೆ ಏನೆಂದು ತಿಳಿಯೋಣ.

ಇದನ್ನು ಓದಿ: Sip vs Lumpsum ಹೂಡಿಕೆಗೆ ಯಾವುದು ಉತ್ತಮ?

4. What is index fund?

ಯಾವುದಾದರೂ ಮ್ಯೂಚುಯಲ್ ಫಂಡ್(mutual fund) ಇಂಡೆಕ್ಸ್ ಅನ್ನು ನಕಲಿಸಿದರೆ(copy) ಅದನ್ನು ಇಂಡೆಕ್ಸ್ ಫಂಡ್ ಏನ್ನಲಾಗುತ್ತದೆ. ಇಲ್ಲಿ ನಕಲಿ ಎಂದರೆ ಇಂಡೆಕ್ಸ್ನಲ್ಲಿ ಇರುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದಾಗಿದೆ ಮತ್ತು ಯಾವುದಾದರೂ ಕಂಪನಿ ಇಂಡೆಕ್ಸ್ ನಲ್ಲಿ ಬದಲಿಸಿದರೆ ಇಂಡೆಕ್ಸ್ ಫಂಡ್ ವ್ಯವಸ್ಥಾಪಕ(manager) ಕೂಡ ಅದನ್ನೇ ಮಾಡುತ್ತಾರೆ.

how to invest in passive index funds in kannada
index fund

ನಿಫ್ಟಿ 50 ಯಲ್ಲಿ ಎಚ್ಡಿಎಫ್ಸಿ ಬ್ಯಾಂಕಿನ(hdfc bank) ತೂಕ(weightage) 13% ನಷ್ಟು ಇದೆ, ರಿಲಿಯನ್ಸ್ ಇಂಡಸ್ಟ್ರಿ(reliance industry) 9%, ಐಸಿಐಸಿಐ ಬ್ಯಾಂಕ್(icici bank) 7% ಇದೆ. ಈಗ ಒಂದು ಇಂಡೆಕ್ಸ್ ಫಂಡ್ ಉದಾಹರಣೆ ತೆಗೆದುಕೊಳ್ಳೋಣ. ಇದು ಯಾವುದೇ ರೀತಿಯ ಶಿಫಾರಸು ಆಗಿಲ್ಲ. ನಾವು "uti nifty 50 index fund direct growth" ಉದಾಹರಣೆ ತೆಗೆದುಕೊಳ್ಳುತ್ತೇವೆ. ಇದು ನಿಫ್ಟಿ 50 ಯನ್ನು ನಕಲಿಸುತ್ತದೆ. ಇದರ ಸ್ಟಾಕ್ ತೂಕದಲ್ಲಿ(stock weightage) ಎಚ್ಡಿಎಫ್ಸಿ ಬ್ಯಾಂಕ್ 13%, ರಿಲಿಯನ್ಸ್ 9%, ಐಸಿಐಸಿಐ ಬ್ಯಾಂಕ್ 7% ನಷ್ಟೇ ಇದೆ.

ನೀವು ಇಂಡೆಕ್ಸ್ ಫಂಡ್ನಲ್ಲಿ ಹೂಡಿಕೆ ಮಾಡುವುದರಿಂದ ಒಮ್ಮೆಲೇ ಬಹು ಕಂಪನಿಗಳಲ್ಲಿ ಹೂಡಿಕೆ ಮಾಡುತ್ತೀರಾ. ಇದೇ ರೀತಿ ಬೇರೆ ಬೇರೆ ರೀತಿಯ ವಲಯದ ಇಂಡೆಕ್ಸ್ ಇರುತ್ತದೆ. ಉದಾಹರಣೆಗೆ ರಾಷ್ಟ್ರೀಯ ಷೇರು ವಿನಿಮಯದಲ್ಲಿ(national stock exchange) nifty 50, nifty bank, nifty mid cap 100, nifty next 50, nifty 100, nifty 200, nifty 500, nifty small cap 100, nifty midcap 50 ಇದೆ. ಬಾಂಬೆ ಷೇರು ವಿನಿಮಯದಲ್ಲಿ(national stock exchange) sensex, bsc 100, bse 200, bse 500 ಇವೆ. ಈಗ ನಿಮಗೆ ಇಂಡೆಕ್ಸ್ ಫಂಡ್ ಎಂದರೆ ಏನೆಂದು ತಿಳಿಯಿತು ಎಂದು ಭಾವಿಸುತ್ತೇವೆ.

ಇದನ್ನು ಓದಿ: ಆರ್ಥಿಕವಾಗಿ ಸ್ವತಂತ್ರಗೊಳಿಸುವ 14 ಸ್ವತ್ತುಗಳು

5. Advantages of index fund

what are the advantages of index investing in kannada
advantages

ಈಗ ಇಂಡೆಕ್ಸ್ ಫಂಡ್ ನಲ್ಲಿ ಹೂಡಿಕೆ ಮಾಡುವುದರಿಂದ ಇರುವ ಅನುಕೂಲ ಬಗ್ಗೆ ತಿಳಿಯೋಣ.

1. Easy and time savings

ಇಂಡೆಕ್ಸ್ ಫಂಡ್ನಲ್ಲಿ ಹೂಡಿಕೆ ಮಾಡುವುದರಿಂದ ನೀವು ಸ್ಟಾಕ್ನ ಬುಟ್ಟಿಯಲ್ಲಿ(basket) ಹೂಡಿಕೆ ಮಾಡಿದಂತಾಗಿದೆ. ಇದು ಒಂದೇ ಸ್ಟಾಕ್ ಆಯ್ಕೆ ಮಾಡುವುದಕ್ಕಿಂತ ಉತ್ತಮವಾಗಿದೆ. ಉದಾಹರಣೆಗೆ ನೀವು 5 ಕಂಪನಿಗಳನ್ನು ಆರಿಸಿಕೊಳ್ಳಲು ಅಧಿಕ ಅಧ್ಯಯನ ಮಾಡಬೇಕು. ಅದೇ ನೀವು ಇಂಡೆಕ್ಸ್ ಫಂಡ್ ನಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಅಧಿಕ ಸಮಯ ಉಳಿಯುತ್ತದೆ.

2. Low cost

ಮ್ಯೂಚುಯಲ್ ಫಂಡ್ ಕಂಪನಿ ವೆಚ್ಚದ ಅನುಪಾತದ(expense ratio) ಶುಲ್ಕ ವಿಧಿಸುತ್ತದೆ. ಅದು ವರ್ಷದ ವಾರ್ಷಿಕ ನಿರ್ವಹಣಾ ವೆಚ್ಚ(annual operating cost), ಸಂಬಳ, ನಿರ್ವಹಣೆ(management) ತೆಗೆದುಕೊಳ್ಳುತ್ತದೆ. ಸಕ್ರಿಯವಾಗಿ ನಿರ್ವಹಿಸಲಾದ ನಿಧಿಯಲ್ಲಿ(actively managed fund) ನಿಧಿ ವ್ಯವಸ್ಥಾಪಕ(fund manager) ಯಾವ ಸ್ಟಾಕ್ ಇರಬೇಕು ಯಾವುದು ಇರಬಾರದು ಎಂಬುದನ್ನು ನಿರ್ಧಾರ ಮಾಡುತ್ತಾರೆ. ಇದರಿಂದ ಸಕ್ರಿಯವಾಗಿ ನಿರ್ವಹಿಸಲಾದ ನಿಧಿಯ ವೆಚ್ಚದ ಅನುಪಾತವೂ ಅಧಿಕವಿರುತ್ತದೆ. ಅದು 0.5 ಯಿಂದ 1% ಒಳಗೆ ಇರುತ್ತದೆ. ಆದರೆ ಇಂಡೆಕ್ಸ್ ಫಂಡ್ ನಲ್ಲಿ ನಿಧಿ ವ್ಯವಸ್ಥಾಪಕ ಅಧಿಕ ಅಧ್ಯಯನ ಮಾಡದ ಕಾರಣ ಇದರ ವೆಚ್ಚದ ಅನುಪಾತವೂ ಕಡಿಮೆ ಇರುತ್ತದೆ.

uti nifty 50 index fund ನ ವೆಚ್ಚದ ಅನುಪಾತವೂ 0.1% ನಷ್ಟು ಇದೆ. hdfc index fund nifty 50 plan ನ ವೆಚ್ಚದ ಅನುಪಾತವೂ 0.2% ಇದೆ. ಅಂದರೆ ಸರಾಸರಿ 0.2 ಯಿಂದ 0.5% ನಷ್ಟು ಒಳಗೆ ಇರುತ್ತದೆ.

what is a good expense ratio for a mutual fund in kannada
expense ratio

ಇನ್ನು ಲಾರ್ಜ್ ಕ್ಯಾಪ್ ಮ್ಯೂಚುಯಲ್ ಫಂಡ್ನ(large cap mutual fund) ವೆಚ್ಚದ ಅನುಪಾತ ನೋಡಿದರೆ, icici pru bluechip fundನ ವೆಚ್ಚದ ಅನುಪಾತವೂ 1.01% ನಷ್ಟು ಇದೆ. sbi bluechip fund ನ ವೆಚ್ಚದ ಅನುಪಾತವೂ 0.87% ನಷ್ಟು ಇದೆ. ಕಾಂಪೌಂಡಿಂಗ್(compounding) ಡಾರ್ಕ್ಸೈಡ್ ಬಗ್ಗೆ ತಿಳಿದಂತೆ ಅದು ವೆಚ್ಚದ ಅನುಪಾತಕ್ಕೂ ಅನ್ವಯಿಸುತ್ತದೆ. ನಿಮಗೆ 1% ವೆಚ್ಚದ ಅನುಪಾತವೂ ಅಧಿಕ ಎನಿಸದೆ ಇರಬಹುದು. ನೀವು ಪ್ರತಿ ತಿಂಗಳು 1% ವೆಚ್ಚದ ಅನುಪಾತ ಇರುವ ಮ್ಯೂಚುವಲ್ ಫಂಡ್ ನಲ್ಲಿ 5000 ರೂ ಹೂಡಿಕೆ ಮಾಡುತ್ತಿದ್ದಾರೆ. 30 ವರ್ಷದ ನಂತರ 34 ಲಕ್ಷದಷ್ಟು ವೆಚ್ಚದ ಅನುಪಾತವನ್ನು ನೀಡಿದಂತಾಗುತ್ತದೆ. ಅದೇ ನೀವು ಇಂಡೆಕ್ಸ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ದು, ವೆಚ್ಚದ ಅನುಪಾತವೂ 0.2% ನಷ್ಟು ಇದ್ದರೆ, 30 ವರ್ಷದ ನಂತರ ನೀವು 7 ಲಕ್ಷವನ್ನು ವೆಚ್ಚದ ಅನುಪಾತವಾಗಿ ನೀಡಿರುತ್ತೀರಾ. ಇಂಡೆಕ್ಸ್ ಫಂಡ್ ನಲ್ಲಿ ಕಡಿಮೆ ವೆಚ್ಚ ಇರುವುದೇ ಇದರ ಅನುಕೂಲತೆಯಾಗಿದೆ.

3. Diversification

ಇಂಡಕ್ಸ್ ಫಂಡ್ ನಲ್ಲಿ ಹಣವನ್ನು ಹೂಡಿಕೆ ಮಾಡುವುದು ಅನೇಕ ವಿವಿಧ ವಲಯಗಳಲ್ಲಿ ಹೂಡಿಕೆ ಮಾಡಿದಂತಾಗುತ್ತದೆ. ಇದರಿಂದ ನಿಮ್ಮ ಅಪಾಯ(risk) ಕಡಿಮೆಗೊಳ್ಳುತ್ತದೆ.

ಇದನ್ನು ಓದಿ: "Secrets of the Millionaire Mind" ಪುಸ್ತಕದ ಸಾರಾಂಶ

6. Difference between index, etf and mutual fund

which is better index mutual fund or etf in kannada
index, etf, mutual fund

ಈ ಇಂಡಕ್ಸ್ ಫಂಡ್, ಇಟಿಎಫ್(etf) ಮತ್ತು ಮ್ಯೂಚಯಲ್ ಫಂಡ್ ನಲ್ಲಿ ಇರುವ ವ್ಯತ್ಯಾಸದ ಬಗ್ಗೆ ತಿಳಿಯೋಣ. ಇದರಿಂದ ನೀವು ನಿಮಗಾಗಿ ಸರಿಯಾದ ಹೂಡಿಕೆಯನ್ನು ಆಯ್ಕೆ ಮಾಡಬಹುದು.

ಇಂಡಕ್ಸ್ ಫಂಡ್ ಸಕಾರತ್ಮಕ(positive) ಆಗಿರುವುದರಿಂದ ಇದರ ನಿಧಿ ವ್ಯವಸ್ಥಾಪಕ ಅಧ್ಯಯನ ಮಾಡುವುದಿಲ್ಲ. ಆದರೆ ಮ್ಯೂಚುಯಲ್ ಫಂಡ್ ನಲ್ಲಿ ನಿಧಿ ವ್ಯವಸ್ಥಾಪಕ ಇದ್ದು, ಯಾವ ಸ್ಟಾಕ್, ಬಾಂಡ್ಸ್ ಮತ್ತು ಅಸೆಟ್ನಲ್ಲಿ ಹೂಡಿಕೆ ಮಾಡಬೇಕೆಂಬುದನ್ನು ನೋಡುತ್ತಾರೆ. ಅಂದರೆ ಅವರು ಸಕ್ರಿಯ ಹೂಡಿಕೆಯನ್ನು(active investing) ಫಾಲೋ ಮಾಡುತ್ತಾರೆ. ಹಾಗಿದ್ದರೆ ಈಟಿಎಫ್(etf) ಎಂದರೇನು?

ಇಟಿಎಫ್ ಎಂದರೆ "exchange traded fund" ಆಗಿದೆ. ಇದು ಕೂಡ ಇಂಡಕ್ಸ್ ಫಂಡ್ ರೀತಿಯೇ ನಿಷ್ಕ್ರಿಯ ಹೂಡಿಕೆಯನ್ನು(passive investing) ಫಾಲೋ ಮಾಡುತ್ತದೆ. ಆದರೆ ಇದು ಷೇರುಗಳ ರೀತಿ ಷೇರು ಮಾರುಕಟ್ಟೆಯಲ್ಲಿ ಟ್ರೇಡ್ ಆಗುತ್ತಿರುತ್ತದೆ. ನಿಮಗೆ ಇಂಡಕ್ಸ್ ಫಂಡ್ ಮತ್ತು ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್(demat) ಖಾತೆ ಬೇಕಾಗಿರುವುದಿಲ್ಲ. ಏಕೆಂದರೆ ಎಎಂಸಿಯಲ್ಲಿ(asset management company) ಹೂಡಿಕೆ ಮಾಡುತ್ತಿರುವಿರಾ. ಆದರೆ ಇಟಿಎಫ್ ನಲ್ಲಿ ಹೂಡಿಕೆ ಮಾಡಲು ನಿಮಗೆ ಡಿಮ್ಯಾಟ್ ಖಾತೆಯ ಅವಶ್ಯಕತೆ ಇದೆ. ಇಂಡೆಕ್ಸ್ ಮತ್ತು ಮ್ಯೂಚುಯಲ್ ಫಂಡ್ನಲ್ಲಿ ದ್ರವ್ಯತೆ(liquidity) ಅಧಿಕವಿರುತ್ತದೆ. ಅಂದರೆ ನೀವು ಇದನ್ನು ಯಾವಾಗ ಬೇಕಾದರೂ ಖರೀದಿ ಇಲ್ಲ ಮಾರಬಹುದು. ಇಟಿಎಫ್ನಲ್ಲಿ ದ್ರವ್ಯತೆ ಕಡಿಮೆ ಇರುತ್ತದೆ. ಇದು ಷೇರು ಮಾರುಕಟ್ಟೆಯಲ್ಲಿ ಟ್ರೇಡ್ ಆಗುತ್ತಿರುವ ಕಾರಣ ಇದನ್ನು ಖರೀದಿಸಲು ಖರೀದಿದಾರರು(buyers) ಇರಲೇಬೇಕಾಗುತ್ತದೆ. ಆರಂಭಿಗರಿಗೆ(beginner) ಇಂಡಕ್ಸ್ ಫಂಡ್ ಸೂಕ್ತವಾಗಿದೆ.

ಇದನ್ನು ಓದಿ: ಶ್ರೀಮಂತರಿಗೆ ತಿಳಿದಿರುವ ಮತ್ತು ಬಡವರಿಗೆ ತಿಳಿದಿರದ ಹಣದ 5 ನಿಯಮಗಳು

7. How to choose index fund?

how do i choose an index fund for investment in kannada
choose index fund

ಇಂಡಕ್ಸ್ ಫಂಡ್ ಆಯ್ಕೆ ಮಾಡಲು ನೀವು 5 ಅಂಶಗಳ ಮೇಲೆ ಗಮನ ಹರಿಸಬೇಕು.

1. Good branding identity

ಅಂದರೆ ನೀವು ಆಯ್ಕೆ ಮಾಡುತ್ತಿರುವ ಇಂಡೆಕ್ಸ್ ಫಂಡ್ ಕಂಪನಿಯ ಗುರುತು(brand image) ಚೆನ್ನಾಗಿರಬೇಕು.

2. Good asset under management

ಎಯುಎಂ(amu) ಎಂದರೆ ಒಂದು ಫಂಡ್ ಎಷ್ಟು ಹಣವನ್ನು ನಿರ್ವಹಿಸುತ್ತಿದೆ ಎಂಬುದಾಗಿದೆ.

3. Lower expense ratio

ಅಂದರೆ ನೀವು ಆಯ್ಕೆ ಮಾಡುತ್ತಿರುವ ಇಂಡೆಕ್ಸ್ ಫಂಡ್ ವೆಚ್ಚದ ಅನುಪಾತವೂ ಕಡಿಮೆ ಇರಬೇಕು. ಇದರಿಂದ ದೀರ್ಘವಧಿಯಲ್ಲಿ ನೀವು ಸಂಪತ್ತನ್ನು ಮಾಡಬಹುದು.

4. Lower tracking error

ಟ್ರ್ಯಾಕಿಂಗ್ ದೋಷ ಎಂದರೆ ಒಂದು ಫಂಡ್ ತನ್ನ ಮಾನದಂಡಗಳಿಗೆ(benchmark) ಹೋಲಿಸಿದರೆ ಎಷ್ಟು ರಿಟರ್ನ್ ನೀಡಿದೆ ಎಂಬುದಾಗಿದೆ. ಟ್ರ್ಯಾಕಿಂಗ್ ದೋಷ ಕಡಿಮೆ ಇದರೆ ಆ ಫಂಡ್ನ ಮಾನದಂಡಕ್ಕೆ ಸಮವಿದೆ ಎಂದರ್ಥ. ಇಂಡೆಕ್ಸ್ ಫಂಡ್ ಹೂಡಿಕೆಯಲ್ಲಿ ಮ್ಯೂಚುಯಲ್ ಫಂಡ್ಗೆ ಹೋಲಿಸಿದರೆ ಟ್ರ್ಯಾಕಿಂಗ್ ದೋಷ ಕಡಿಮೆ ಇರುತ್ತದೆ.

5. CAGR returns

ಅಂದರೆ compound annual growth rate ಆಗಿದೆ. ಇದಕ್ಕಾಗಿ ನೀವು ಹಿಂದಿನ 5 ಇಲ್ಲ 10 ವರ್ಷದ ಸಿಎಜಿಆರ್ ರಿಟರ್ನ್ ಅನ್ನು ಹೋಲಿಕೆ ಮಾಡಬಹುದು.

ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳು

8. Last talk

ಇಂಡೆಕ್ಸ್ ಫಂಡ್ನಲ್ಲಿ ಹೂಡಿಕೆ ಮಾಡುವುದರಿಂದ ನೀವು ನಿಮ್ಮ ಕೆಲಸದ ಮೇಲೆ ಗಮನ ಹರಿಸಬಹುದು. ಇದರಿಂದ ನೀವು ಒತ್ತಡ ಮುಕ್ತ(stressfree), ಸಾಧಾರಣ ರಿಟರ್ನ್(modest return) ಅನ್ನು ಪಡೆಯುತ್ತೀರಾ ಮತ್ತು ಬದುಕಿನ ಇತರ ಭಾಗವನ್ನು ಆನಂದಿಸುತ್ತೀರಾ. ಇದರಲ್ಲಿ ನೀವು ಯಾವಾಗಲೂ ಷೇರು ಮಾರುಕಟ್ಟೆಯ ಬಗ್ಗೆ ಯೋಚಿಸುತ್ತಿರುವುದಿಲ್ಲ. ವಾರೆನ್ ಬಫೆಟ್(warren buffet) ಕೂಡ ಇಂಡೆಕ್ಸ್ ಫಂಡ್ ಗರಿಷ್ಠ ಜನಗಳಿಗೆ ಸರಿಯಾಗಿದೆ ಎಂದು ಹೇಳುತ್ತಾರೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments