How to Invest in 20s | 20ರ ವಯಸ್ಸಿನಿಂದ ಹೂಡಿಕೆ ಮಾಡುವುದು ಹೇಗೆ?
Info Mind 2531
Watch Video
ಚಿನ್ನ(gold) ಸಾರ್ವಕಾಲಿಕ ಗರಿಷ್ಠದಲ್ಲಿದೆ(all time high), ಬೆಳ್ಳಿ(silver) ಸಾರ್ವಕಾಲಿಕ ಗರಿಷ್ಠದಲ್ಲಿದೆ, ಸೆನ್ಸಕ್ಸ್ ನಿಫ್ಟಿ(sensex, nifty) ಸಾರ್ವಕಾಲಿಕ ಗರಿಷ್ಠದಲ್ಲಿದೆ, ಆಗಿದ್ದರೆ ಎಲ್ಲಿ ಹೂಡಿಕೆ ಮಾಡಬೇಕು? ಹಿಂದಿನ 100 ವರ್ಷದಲ್ಲಿ ಕೇವಲ 2 ಬಾರಿ ಈ ದೊಡ್ಡ ಸ್ವತ್ತುಗಳು(assets), ಸಾರ್ವಕಾಲಿಕ ಗರಿಷ್ಠದಲ್ಲಿವೆ, ಇದು 3ನೇ ಬಾರಿ ಆಗಿದೆ. ಆಗಿದ್ದರೆ ನೀವು ಯಾವ ರೀತಿ ಹೂಡಿಕೆ ಮಾಡಬೇಕು. ನಿಮ್ಮ ಮೆದುಳನ್ನು ಈ ಏಳುಬೀಳುವಿನಲ್ಲಿ(up downs) ಶಾಂತವಾಗಿ ಹೇಗೆ ಇಟ್ಟುಕೊಳ್ಳಬೇಕು?
ನಿಮ್ಮ ಹತ್ತಿರ 10 ಲಕ್ಷವಿದೆ ಎಂದುಕೊಳ್ಳಿ. ಆಗಿದ್ದರೆ ಇದನ್ನು ಹೂಡಿಕೆ ಮಾಡಲು ನೀವು 3 ಅಪಾಯದ ಮಾದರಿಯಾಗಿ(risk pattern) ಭಾಗ ಮಾಡಿ. ಅದರಲ್ಲಿ ಮೊದಲನೆಯದ್ದು ಸಂಪ್ರದಾಯವಾದಿ ಅಪಾಯ ತೆಗೆದುಕೊಳ್ಳುವವರು(conservative risk taker), ಅಂದರೆ ನಿಮಗೆ ಸ್ಟಾಕ್ನಲ್ಲಿ ಅಧಿಕ ಹಣ ಹೂಡಿಕೆ ಮಾಡಿದರೆ ಭಯವಾಗುತ್ತದೆ. ಎರಡನೇಯದಾಗಿ ಮಧ್ಯಮ ಅಪಾಯ(medium risk appetite), ಮೂರನೇಯದಾಗಿ ಆಕ್ರಮಣಕಾರಿ ಅಪಾಯವಾಗಿದೆ(aggressive risk appetite). ಈಗ ನಾವು 3 ರೀತಿಯಲ್ಲಿ ಇವುಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ತಿಳಿಸುವೆವು. ಆದರೆ ನೀವು ಇದನ್ನು ನೋಡಿ ಒಮ್ಮೆಲ್ಲೇ ಫಾಲೋ ಮಾಡಬೇಡಿ, ಬದಲಿಗೆ ನಿಮ್ಮ ಸ್ವಂತ ಯೋಜನೆಗೆ(planning) ಇರುವ ತಂತ್ರವೆಂದುಕೊಳ್ಳಿ(strategy). ಇದನ್ನು ನಾವು ವೃತ್ತಿಪರರು(professional) ತಿಳಿಸಿದ ಯೋಜನೆಯಿಂದಲೇ ಮಾಡಿದ್ದೇವೆ. ಆದರೆ ನೀವು ಹೂಡಿಕೆ ಮಾಡುವ ಮೊದಲು ನಿಮ್ಮದೇ ಆದ ಮನೆಗೆಲಸ (homework) ಮಾಡುವುದು ಸೂಕ್ತವಾಗಿದೆ.
ಇದನ್ನು ಓದಿ: ನಿಮ್ಮ ಸಂಬಳವನ್ನು ಟಾಪ್ 1% ನಂತೆ ನಿರ್ವಹಿಸಿ
ಈ ಯೋಜನೆಯ ಪ್ರಕಾರ ಸಂಪ್ರದಾಯವಾದಿ ಅಪಾಯ ತೆಗೆದುಕೊಳ್ಳುವವರು 6 ಲಕ್ಷವನ್ನು ದೊಡ್ಡ ಕ್ಯಾಪ್ನಲ್ಲಿ(large cap) ಹೂಡಿಕೆ ಮಾಡಬೇಕು. ಇದು ಏಕೆಂದರೆ ದೊಡ್ಡ ಕ್ಯಾಪ್ ಯಾವುದೇ ವಿಪತ್ತು(disaster) ಆದಾಗ ಮಧ್ಯ ಕ್ಯಾಪ್(mid cap) ಮತ್ತು ಸಣ್ಣ ಕ್ಯಾಪ್ನಷ್ಟು(small cap) ಬೀಳುವುದಿಲ್ಲ. ಇದಕ್ಕಾಗಿ quant large cap, sbi large & midcap, hdfc flexi cap ಮತ್ತು kotak multi cap ಆಯ್ಕೆಯಾಗಿದೆ. ಇದರ ನಂತರ 3 ಲಕ್ಷವನ್ನು ಸಾಲ ನಿಧಿಯಲ್ಲಿ(debt fund) ಹೂಡಿಕೆ ಮಾಡಿ ಮತ್ತು ಉಳಿದ 1 ಲಕ್ಷವನ್ನು ಚಿನ್ನದ ಇಟಿಎಫ್ನಲ್ಲಿ(gold etf) ಹಾಕಿ. ಇದಕ್ಕಾಗಿ icici pru nifty sdl december 2028 index fund, kotak nifty sdl plus aaa psu bond july 2028 60:40 index fund ಅಥವಾ sbi arbitrage fund ಆಯ್ಕೆಯಾಗಿದೆ.
ಈ ಸಾಲ ನಿಧಿಗಳು ಸ್ಥಿರ ಠೇವಣಿಯ(fixed deposit) ರೀತಿಯಾಗಿದೆ. ಇದರಲ್ಲಿ ನೀವು ಬ್ಯಾಂಕುಗಳಿಗೆ ಹಣವನ್ನು ನೀಡುವ ಬದಲು, ಸರ್ಕಾರ(government) ಇಲ್ಲ ಸಂಸ್ಥೆಗೆ(corporate) ಹಣ ನೀಡುತ್ತೀರಾ. ಇದರಲ್ಲಿ ಸ್ಥಿರ ಠೇವಣಿಗಿಂತ ಹೆಚ್ಚಿನ ರಿಟರ್ನ್ ಸಿಗುತ್ತದೆ. ಚಿನ್ನದ ಇಟಿಎಫ್ ಅನೇಕವಿದೆ. ಉದಾಹರಣೆಗೆ, nippon gold savings fund, gold bees, ಇತ್ಯಾದಿಗಳಿವೆ.
ನೀವು ಮಧ್ಯಮ ಅಪಾಯ ತೆಗೆದುಕೊಳ್ಳುವವರಾಗಿದ್ದರೆ ಷೇರಿನಲ್ಲಿ(equity) 7 ಲಕ್ಷವನ್ನು ಹೂಡಿಕೆ ಮಾಡಿ. ಸಾಲ ನಿಧಿಯಲ್ಲಿ 2 ಲಕ್ಷ ಮತ್ತು ಚಿನ್ನದ ಇಟಿಎಫ್ನಲ್ಲಿ 1 ಲಕ್ಷವನ್ನು ಹೂಡಿಕೆ ಮಾಡಿ. 7 ಲಕ್ಷದ ಷೇರಿನ ಹೂಡಿಕೆಗೆ 50 - 55% ದೊಡ್ಡ ಕ್ಯಾಪ್ನಲ್ಲಿ ಹೂಡಿಕೆ ಮಾಡಿ 20 - 25% ಮಧ್ಯ ಕ್ಯಾಪ್ ಮತ್ತು ಉಳಿದದ್ದನ್ನು ಚಿಕ್ಕ ಕ್ಯಾಪ್ನಲ್ಲಿ ಹೂಡಿಕೆ ಮಾಡಿ. ಷೇರಿಗಾಗಿ, dsp large & midcap, kotak multi cap, invesco small cap, hdfc flexi cap, kotak midcap, icici pru dividend yield ಆಯ್ಕೆಯಾಗಿದೆ. ಇನ್ನು ಸಾಲ ನಿಧಿ ಮತ್ತು ಚಿನ್ನದ ಇಟಿಎಫ್ನಲ್ಲಿ, hdfc nifty g-sec jul 2031 index fund, icici pru nifty g-sec dec 2030 index fund ಅಥವಾ sbi arbitrage fund ಆಯ್ಕೆಯಾಗಿದೆ.
ಒಂದು ವೇಳೆ ನೀವು ಅಪಾಯ ತೆಗೆದುಕೊಳ್ಳಲು ತಯಾರಿದ್ದು ಆಕ್ರಮಣಕಾರಿ ಹೂಡಿಕೆದಾರನಾಗಿದ್ದರೆ, ಷೇರಿನಲ್ಲಿ 8 ಲಕ್ಷವನ್ನು ಹೂಡಿಕೆ ಮಾಡಿ, ಸಾಲ ನಿಧಿಯಲ್ಲಿ 1 ಲಕ್ಷ ಮತ್ತು ಚಿನ್ನದ ಇಟಿಎಫ್ನಲ್ಲಿ 1 ಲಕ್ಷವನ್ನು ಹೂಡಿಕೆ ಮಾಡಿ. ಇದರಲ್ಲಿ ಷೇರಿನ 8 ಲಕ್ಷ 50 - 55% ದೊಡ್ಡ ಕ್ಯಾಪ್, 20 - 25% ಮಧ್ಯ ಕ್ಯಾಪ್ ಮತ್ತು ಉಳಿದಿರುವುದನ್ನು ಚಿಕ್ಕ ಕ್ಯಾಪ್ನಲ್ಲಿ ಹೂಡಿಕೆ ಮಾಡಿ. ಇದಕ್ಕಾಗಿ quant large cap, sbi large & midcap, canara rob multicap, invesco small cap, hdfc flexi cap, kotak midcap, icici pru focused equity ಆಯ್ಕೆಯಾಗಿದೆ. ಇನ್ನು ಸಾಲ ನಿಧಿ ಮತ್ತು ಚಿನ್ನದ ಇಟಿಎಫ್ನಲ್ಲಿ axis crisil ibx sdl june 2034 debt index fund, hdfc nifty g-sec jun 2036 index fund, sbi arbitrage fund ಆಯ್ಕೆಯಾಗಿದೆ.
ಇದನ್ನು ಓದಿ: ಆರಂಭಿಕರಿಗಾಗಿ ಸಂಪೂರ್ಣ ಹೂಡಿಕೆ ಮತ್ತು ಷೇರು ಮಾರುಕಟ್ಟೆ ಮಾರ್ಗದರ್ಶಿ
2 ನೇ ಯೋಜನೆ ಪ್ರಕಾರ ನೀವು ಸಂಪ್ರದಾಯವಾದಿ ಅಪಾಯ ತೆಗೆದುಕೊಳ್ಳುವವರಾಗಿದ್ದರೆ ಷೇರಿನಲ್ಲಿ 3 ಲಕ್ಷವನ್ನು ಹೂಡಿಕೆ ಮಾಡಿ. ಮಿಶ್ರತಳಿಯಲ್ಲಿ(hybrid) 3 ಲಕ್ಷವನ್ನು ಹೂಡಿಕೆ ಮಾಡಿ. ಮಿಶ್ರತಳಿ ಎಂದರೆ ಷೇರು ಮತ್ತು ಸಾಲದ ಸಂಯೋಜನೆಯಾಗಿದೆ ಮತ್ತು ಉಳಿದ 4 ಲಕ್ಷವನ್ನು ಸಾಲ ನಿಧಿಯಲ್ಲಿ ಹೂಡಿಕೆ ಮಾಡಿ. ಇದರಲ್ಲಿ ದೊಡ್ಡ ಕ್ಯಾಪ್ಗೆ nippon large cap, hdfc large cap ಆಯ್ಕೆಯಾಗಿದೆ. ಮಿಶ್ರತಳಿಗಾಗಿ hdfc balanced advantage fund, sbi balance advantage fund. ಸಾಲ ನಿಧಿಗಾಗಿ kotak income plus arbitrage omni fof(fund of funds), icici pru arbitrage fund ಆಯ್ಕೆಯಾಗಿದೆ.
ನೀವು ಮಧ್ಯಮ ಅಪಾಯ ತೆಗೆದುಕೊಳ್ಳಲು ತಯಾರಿದ್ದರೆ ಷೇರಿನಲ್ಲಿ 5 ಲಕ್ಷವನ್ನು ಹೂಡಿಕೆ ಮಾಡಿ. ಮಿಶ್ರತಳಿಯಲ್ಲಿ 2 ಲಕ್ಷ, ಸಾಲ ನಿಧಿಯಲ್ಲಿ 2 ಲಕ್ಷ ಮತ್ತು ರಿಟ್ಸ್ನಲ್ಲಿ(reit) 1 ಲಕ್ಷವನ್ನು ಹೂಡಿಕೆ ಮಾಡಿ. ರಿಟ್ಸ್ ಎಂದರೆ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್(real estate investment trust). ಇದರಲ್ಲಿ ನೀವು ಜಮೀನಿನಲ್ಲಿ ಹೂಡಿಕೆ ಮಾಡುತ್ತೀರಾ. ಆದರೆ ಭೂಮಿ ಖರೀದಿಸುವ ಬದಲು ಅದರ ಸ್ಟಾಕ್ಸ್ ಖರೀದಿಸುತ್ತೀರಾ. ಆ ಜಮೀನಿನ ಬಾಡಿಗೆ ಇಳುವರಿ(rental yield) ಮೇಲೆ ನಿಮ್ಮ ರಿಟರ್ನ್ ಉತ್ಪಾದನೆಯಾಗುತ್ತದೆ. ಇದರಲ್ಲಿ ದೊಡ್ಡ ಕ್ಯಾಪ್ಗೆ nippon large cap, hdfc flexi cap ಬರುತ್ತದೆ. ಮಿಶ್ರತಳಿಯಲ್ಲಿ icici pru equity & depth fund, hdfc balanced advantage fund. ಸಾಲ ನಿಧಿಯಲ್ಲಿ kotak income plus arbitrage omni fof, icici pru arbitrage fund ಆಯ್ಕೆಯಾಗಿದೆ.
ನೀವು ಆಕ್ರಮಣಕಾರಿ ಹೂಡಿಕೆದಾರನಾಗಿದ್ದರೆ ಷೇರಿನಲ್ಲಿ 6 ಲಕ್ಷವನ್ನು ಹೂಡಿಕೆ ಮಾಡಿ, ಮಿಶ್ರ ತಳಿಯಲ್ಲಿ 1.5 ಲಕ್ಷ ಮತ್ತು ಸಾಲ ನಿಧಿಯಲ್ಲಿ 1 ಲಕ್ಷ, ಚಿನ್ನ/ಬೆಳ್ಳಿ/ರಿಟ್ಸ್ನಲ್ಲಿ 1.5 ಲಕ್ಷವನ್ನು ಹೂಡಿಕೆ ಮಾಡಿ. ಷೇರಿಗಾಗಿ hdfc flexi cap fund, invesco india midcap fund, bandhan small cap fund, mirae asset metal etf. ಮಿಶ್ರ ತಳಿಯಲ್ಲಿ icici pru equity and debt fund, edelweiss aggressive hybrid fund ಆಯ್ಕೆಯಾಗಿದೆ ಮತ್ತು ಸಾಲ ನಿಧಿಯಲ್ಲಿ kotak income plus arbitrage omni fof, icici pru arbitrage fund ಆಯ್ಕೆಯಾಗಿದೆ.
ಇದನ್ನು ಓದಿ: ಬಹು ಹಂತಗಳಲ್ಲಿ ಹೂಡಿಕೆದಾರರಿಗೆ ಲಾಭದಾಯಕತೆಯನ್ನು ಹೆಚ್ಚಿಸುವುದೇಗೆ?
3 ನೇ ಯೋಜನೆ ಪ್ರಕಾರ ನೀವು ಸಂಪ್ರದಾಯವಾದಿ ಅಪಾಯ ತೆಗೆದುಕೊಳ್ಳುವವರಾಗಿದ್ದರೆ ಷೇರಿನಲ್ಲಿ 4 ಲಕ್ಷವನ್ನು ಹೂಡಿಕೆ ಮಾಡಿ. ಸಾಲ ನಿಧಿಯಲ್ಲಿ 5 ಲಕ್ಷ ಮತ್ತು ಚಿನ್ನದಲ್ಲಿ 1 ಲಕ್ಷವನ್ನು ಹೂಡಿಕೆ ಮಾಡಿ. ಇದರಲ್ಲಿ ಷೇರಿಗೆ sbi focused fund, icici pru large cap fund, canara robeo large & midcap ಆಯ್ಕೆಯಾಗಿದೆ. ಸಾಲ ನಿಧಿಯಲ್ಲಿ fixed deposit direct high rated bonds, icici pru short term. ಚಿನ್ನಕ್ಕಾಗಿ nippon gold savings fund ಆಯ್ಕೆಯಾಗಿದೆ.
ನೀವು ಮಧ್ಯಮ ಅಪಾಯ ತೆಗೆದುಕೊಳ್ಳಲು ತಯಾರಿದ್ದರೆ ಷೇರಿನಲ್ಲಿ 6 ಲಕ್ಷ, ಸಾಲ ನಿಧಿಯಲ್ಲಿ 3 ಲಕ್ಷ ಮತ್ತು ಚಿನ್ನದಲ್ಲಿ 1 ಲಕ್ಷ ಹೂಡಿಕೆ ಮಾಡಿ. ಷೇರಿಗಾಗಿ invesco india large & midcap, parag parikh flexi cap ಮತ್ತು nippon india growth midcap ಆಯ್ಕೆಯಾಗಿದೆ. ಸಾಲ ನಿಧಿಗಾಗಿ icici pru short term, axis strategic bond, direct bonds ಆಯ್ಕೆಗಳಾಗಿವೆ. ಚಿನ್ನಕ್ಕಾಗಿ nippon gold savings fund ಆಯ್ಕೆಯಾಗಿದೆ.
ನೀವು ಆಕ್ರಮಣಕಾರಿ ಹೂಡಿಕೆದಾರನಾಗಿದ್ದರೆ ಷೇರಿನಲ್ಲಿ 7.5 ಲಕ್ಷವನ್ನು ಹೂಡಿಕೆ ಮಾಡಿ. ಸಾಲ ನಿಧಿಯಲ್ಲಿ 1.5 ಲಕ್ಷ ಮತ್ತು ಚಿನ್ನದಲ್ಲಿ 1 ಲಕ್ಷವನ್ನು ಹೂಡಿಕೆ ಮಾಡಿ. ಷೇರಿಗಾಗಿ sbi focused, nippon india growth midcap, bandhan small cap ಆಯ್ಕೆಗಳಾಗಿವೆ. ಸಾಲ ನಿಧಿಯಲ್ಲಿ direct bonds, credit the mod funds ಆಯ್ಕೆಯಾಗಿದೆ. ಚಿನ್ನಕ್ಕಾಗಿ nippon gold savings fund ಆರಿಸಿಕೊಳ್ಳಬಹುದು.
ಇದನ್ನು ಓದಿ: ಹೂಡಿಕೆ ಮಾಡುವ ಮುನ್ನ ತೆಗೆದುಕೊಳ್ಳಬೇಕಾದ ಸ್ಟೆಪ್ಗಳು
ಅನೇಕರು ಎಸ್ಐಪಿ(sip) ಬದಲು ಒಮ್ಮೆಲೇ(lumpsum) ಹೂಡಿಕೆ ಮಾಡಲು ಬಯಸುತ್ತಾರೆ. ಆಗಿದ್ದರೆ ನೀವು ಒಮ್ಮೆಲೇ ಹೂಡಿಕೆ ಮಾಡಲು ಬಯಸಿದ್ದು 100 ರೂ ಹೂಡಿಕೆ ಮಾಡುತ್ತಿದ್ದರೆ, 25 ರೂ ಅನ್ನು ಈಗಲೇ ಒಮ್ಮೆಲೇ ಹೂಡಿಕೆ ಮಾಡಿ ಮತ್ತು ಉಳಿದ 75 ರೂ ಅನ್ನು 6 ರಿಂದ 12 ತಿಂಗಳ ಕಂತುಗಳಲ್ಲಿ(installments) ಹೂಡಿಕೆ ಮಾಡಿ.
ಚಿನ್ನ ಮತ್ತು ಬೆಳ್ಳಿಯಲ್ಲಿ ಅಧಿಕ ಉದ್ವಿಗ್ನ(volatile) ಕಾಣುವ ಅವಕಾಶವಿದೆ. ಹೀಗಾಗಿ ನೀವು ಇದರಲ್ಲಿ ಹೂಡಿಕೆ ಮಾಡಲು ಬಯಸಿದ್ದರೆ ದಶಕದ ನೋಟದಲ್ಲಿ(decade view) ಯೋಚಿಸಿ. ಅಂದರೆ 10 ವರ್ಷದ ಹೂಡಿಕೆ ರೀತಿ ನೋಡಿ ಹೊರತು 1 ವರ್ಷದಲ್ಲಿ ಮಾರಿ ಬಿಡುವೆ ಎನ್ನಬೇಡಿ.
ಒಂದು ವೇಳೆ 2 ಇಲ್ಲ 3 ವರ್ಷದ ನಂತರ ನಿಮ್ಮ ಓದು, ಮದುವೆ ಇಲ್ಲ ಇತರ ವಿಷಯಕ್ಕೆ ಹಣ ಬೇಕಿದ್ದು, ನೀವು ಈಗ ಹೂಡಿಕೆ ಮಾಡಲು ಬಯಸಿದ್ದಾರೆ ಸ್ಟಾಕ್ನಲ್ಲಿ ಹೂಡಿಕೆ ಮಾಡಬೇಡಿ. 3 ವರ್ಷದ ನಂತರ ನಿಮ್ಮ ಹೂಡಿಕೆ ನಿಮ್ಮ ಖರ್ಚುಗಳಿಗೆ ಗ್ಯಾರಂಟಿಯಾಗಿ ಬೇಕಿದ್ದರೆ ಸಾಲ ನಿಧಿ ಮ್ಯೂಚುಯಲ್ ಫಂಡ್ನಲ್ಲಿ ಮಾತ್ರ ಹೂಡಿಕೆ ಮಾಡಿ. ಇದರಲ್ಲಿ ನಿಮಗೆ ಸ್ಥಿರ ಲಾಭದ ದರ(fixed rate of return) ಸಿಗುತ್ತದೆ ಮತ್ತು ನೀವು ನಿಮ್ಮ ರಿಟರ್ನ್ ಅನ್ನು ಊಹಿಸಬಹುದು(predict).
ನೀವು ಎಲ್ಲಿಯಾದರೂ ಸಣ್ಣ ಇಲ್ಲ ಮಧ್ಯ ಕ್ಯಾಪ್ನಲ್ಲಿ ಹೂಡಿಕೆ ಮಾಡುತ್ತಿದ್ದರೆ, 5 ರಿಂದ 10 ವರ್ಷದ ದೃಷ್ಟಿ(horizon) ಇಟ್ಟುಕೊಳ್ಳಿ. ಇದು ಏಕೆಂದರೆ ಮಿಡ್ ಕ್ಯಾಪ್ ಮತ್ತು ಸಣ್ಣ ಕ್ಯಾಪ್ ಮಾರುಕಟ್ಟೆ ತಿದ್ದುಪಡಿಯಾದಾಗ(correction) ಇಲ್ಲ ಕೆಳಗೆ ಹೋದಾಗ ತುಂಬಾನೇ ಬೀಳುತ್ತದೆ. ಆ ಸಮಯದಲ್ಲಿ ಅನೇಕರು ಭಯಗೊಂಡು ನಷ್ಟದಲ್ಲಿ ಅದನ್ನು ಮಾರಿ ಬಿಡುತ್ತಾರೆ. ಈ ರೀತಿ ನೀವು ಮಾಡಬೇಡಿ.
ಈಗ ನಿಮಗೆ ಹೂಡಿಕೆ ತಂತ್ರ(investment strategy) ಬಗ್ಗೆ ತಿಳಿಯಿತು ಎಂದು ಭಾವಿಸುವೆನು. ಮೊದಲಿಗೆ ಸಂಪ್ರದಾಯವಾದಿ, ಮಧ್ಯಮ ಮತ್ತು ಆಕ್ರಮಣಕಾರಿ ಯಾವುದೆಂಬುದನ್ನು ಆಯ್ಕೆ ಮಾಡಿ. ಅದರ ಮೇಲೆ ಭಾಗ ಮಾಡಿ ಹೂಡಿಕೆ ಮಾಡಿ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.