How Scary Space is? ಬಾಹ್ಯಾಕಾಶದ ಒಂಬತ್ತು ಭಯಾನಕ ಸಂಗತಿಗಳು
Info Mind 3624
Watch Video
ಭೂಮಿಯಿಂದ ಸೂರ್ಯ ಹೇಗೆ ಕಾಣುತ್ತಾನೆ. ಆಶ್ಚರ್ಯ ಪಡಬೇಕಿಲ್ಲ, ನಾವು ಕೇವಲ ಆಕಾಶದತ್ತ ದೃಷ್ಟಿ ಹಾಯಿಸಿ 93 ದಶಲಕ್ಷ ಮೈಲಿ ದೂರದಲ್ಲಿರುವ ಸೂರ್ಯನನ್ನು ನೋಡಬಹುದು. ಇತರ ಗ್ರಹಗಳಿಂದ ಸೂರ್ಯನ ನೋಟ ಹೇಗಿರುತ್ತದೆ?
ವಿಶಾಲವಾದ ಮತ್ತು ವಿಭಿನ್ನವಾದ ದೂರವನ್ನು ಗಮನಿಸಿದರೆ ಅದರ ಇಮ್ಯಾಜಿನೇಷನ್ ಅಷ್ಟು ಸುಲಭವಲ್ಲ. ವರ್ಜಿನಿಯ ಮೂಲದ ಸಚಿತ್ರಕಾರ ರಾನ್ ಮಿಲ್ಲರ್ ಅವರು ರಚಿಸಿದ ಡಿಜಿಟಲ್ ಬಾಹ್ಯಾಕಾಶವನ್ನು ನಾವು ನಿಮಗೆ ಇಲ್ಲಿ ತೋರಿಸುತ್ತಿದ್ದೇವೆ. ಈ ಸುಂದರವಾದ ಚಿತ್ರಗಳು ನಿಮ್ಮನ್ನು ದೂರದ ಪ್ರಪಂಚಗಳಿಗೆ ಸಾಗಿಸುತ್ತವೆ.
ಇದನ್ನು ಓದಿ: ಬಾಹ್ಯಾಕಾಶದ ಒಂಬತ್ತು ಭಯಾನಕ ಸಂಗತಿಗಳುಮರ್ಕ್ಯೂರಿಯಿಂದ ಸೂರ್ಯ ಈ ರೀತಿ ಕಾಣುತ್ತಾನೆ. ಇದು ಸೂರ್ಯನಿಂದ ಸುಮಾರು 36 ಮಿಲಿಯನ್ ಮೈಲಿಗಳು ಅಥವಾ ಭೂಮಿಯಿಂದ ಸೂರ್ಯನ 39% ದೂರದಲ್ಲಿದೆ. ಮರ್ಕ್ಯೂರಿಯಲ್ಲಿ ಸೂರ್ಯನು ಭೂಮಿಯಲ್ಲಿ ಇರುವುದಕ್ಕಿಂತ ಮೂರು ಪಟ್ಟು ದೊಡ್ದದಾಗಿ ಕಾಣುತ್ತಾನೆ.
ಇದನ್ನು ಓದಿ: ಕರ್ನಾಟಕದ ಮೇಲೆ ಎಂಟು ಆಸಕ್ತಿದಾಯಕ ಸಂಗತಿಗಳುವೀನಸ್ನಲ್ಲಿ ಸೂರ್ಯನು ಭೂಮಿಯ ಆಕಾಶದಲ್ಲಿ ಗೋಚರಿಸುವುದಕ್ಕಿಂತ ಅರ್ಧದಷ್ಟು ದೊಡ್ಡದಾಗಿದೆ. ಇದು ಸೂರ್ಯನಿಂದ ಸುಮಾರು 67 ಮಿಲಿಯನ್ ಮೈಲಿ ದೂರದಲ್ಲಿದೆ. ವೀನಸ್‌ನ ದಟ್ಟವಾದ ಸಲ್ಫ್ಯೂರಿಕ್ ಆಸಿಡ್ ತುಂಬಿದ ಮೋಡಗಳ ಕೆಳಗೆ ಸೂರ್ಯನು ಶಾಶ್ವತ ಮೋಡ ಕವಿದ ವಾತಾವರಣದಲ್ಲಿ ಮಂದ ಹೊಳೆಯುವ ಪ್ಯಾಚ್ಗಿಂತ ಹೆಚ್ಚಿಲ್ಲ.
ಇದನ್ನು ಓದಿ: ಕರ್ನಾಟಕದಲ್ಲಿ ನೋಡಬೇಕಾದ ಹತ್ತು ತಾಣಗಳುಭೂಮಿಯು ಸೂರ್ಯನಿಂದ 93 ದಶಲಕ್ಷ ಮೈಲಿ ದೂರದಲ್ಲಿದೆ. ಸೂರ್ಯ ಮತ್ತು ನಮ್ಮ ಗ್ರಹದ ನಡುವೆ ಚಂದ್ರ ಹಾದುಹೋದಾಗ ಈ ರೀತಿ ಕಾಣುತ್ತದೆ. ಇದು ಸೂರ್ಯಗ್ರಹಣವಾಗಿದೆ.
ಇದನ್ನು ಓದಿ: ಭೂಮಿಯ ಜನ್ಮದಿಂದ ಜೀವಿಗಳ ಅಸ್ತಿತ್ವದ ತನಕಮಂಗಳ ಗ್ರಹವು ಭೂಮಿಗೆ ಹೋಲಿಸಿದರೆ ಸೂರ್ಯನಿಂದ ಒಂದೂವರೆ ಪಟ್ಟು ದೂರದಲ್ಲಿರುವುದರಿಂದ ಗ್ರಹದ ದೂಳಿನ ಆಕಾಶದಲ್ಲಿ ಸೂರ್ಯನ ಚಿಕ್ಕದಾಗಿ ಕಾಣುತ್ತಾನೆ. ಸೂರ್ಯನಿಂದ 142 ದಶಲಕ್ಷ ಮೈಲಿ ದೂರದಲ್ಲಿರುವ ಮಂಗಳ ಗ್ರಹದಿಂದ ಸೂರ್ಯ ಈ ರೀತಿ ಕಾಣುತ್ತಾನೆ.
ಗುರುಗ್ರಹದ ಚಂದ್ರಗಳಲ್ಲಿ ಒಂದಾದ ಯುರೋಪದಿಂದ ಸೂರ್ಯ ಈ ರೀತಿ ಕಾಣುತ್ತಾನೆ. ಗುರುಗ್ರಹವು ಸೂರ್ಯನಿಂದ ಸುಮಾರು 484 ದಶಲಕ್ಷ ಮೈಲಿ ದೂರದಲ್ಲಿದೆ. ಇಲ್ಲಿ ಗುರು ಗ್ರಹ ಭೂಮಿಯಿಂದ ನೋಡುವುದಕ್ಕಿಂತ ಐದು ಪಟ್ಟು ಚಿಕ್ಕದಾದ ಸೂರ್ಯನನ್ನು ಹಾದು ಹೋಗುತ್ತಿರುವುದನ್ನು ನೋಡುತ್ತಿದ್ದೇವೆ. ಇದು ಕೆಂಪು ಬೆಳಕಿನ ಉಂಗುರದಂತೆ ಕಾಣುತ್ತದೆ.
ಇದನ್ನು ಓದಿ: ಕಳೆದುಹೋದ ಪ್ರಾಚೀನ ಭಾರತದ ಐದು ತಂತ್ರಜ್ಞಾನಗಳುಶನಿ ಗ್ರಹದಿಂದ ಸೂರ್ಯ ಈ ರೀತಿ ಕಾಣುತ್ತಾನೆ. ಈ ಗ್ರಹವು ಸೂರ್ಯನಿಂದ ಸುಮಾರು 888 ದಶಲಕ್ಷ ಮೈಲಿ ದೂರದಲ್ಲಿದೆ, ಅದು ಭೂಮಿಯಿಂದ ಸೂರ್ಯನಿಗೆ ಇರುವ ದೂರಕ್ಕಿಂತ ಪಟ್ಟು 9.5 ಹೆಚ್ಚು. ಇಲ್ಲಿ ನೀರಿನ ಕ್ರಿಸ್ಟಲ್ ಮತ್ತು ಅಮೋನಿಯ ಸೇರಿದಂತೆ ಹೆಚ್ಚಿನ ಅನಿಲಗಳು ಸೂರ್ಯನ ಬೆಳಕನ್ನು ರಿಫ್ರಕ್ಟ್ ಮಾಡುತ್ತವೆ. ಆಲೋಸ್ ಮತ್ತು ಸನ್ಡಾಗ್‌ಳಂಥಹ ಆಪ್ಟಿಕಲ್ ಪರಿಣಾಮಗಳನ್ನು ಸೃಷ್ಟಿಸುತ್ತದೆ. ಭೂಮಿಯ ಮೇಲೆ ಹೋಲಿಸಿದರೆ, ಶನಿಗ್ರಹದಲ್ಲಿ ಸೂರ್ಯನ ಬೆಳಕು ನೂರುಪಟ್ಟು ಮಂದವಾಗಿರುತ್ತದೆ.
ಯುರೇನಸ್ ಚಂದ್ರನಲ್ಲಿ ಒಂದಾದ ಏರಿಯಲ್ನಿಂದ ಸೂರ್ಯ ಈ ರೀತಿ ಕಾಣುತ್ತಾನೆ. ಯುರೇನಸ್ ಸೂರ್ಯನಿಂದ ಸುಮಾರುವ1.8 ಶತಕೋಟಿ ಮೈಲಿ ದೂರದಲ್ಲಿದೆ ಅಥವಾ ಭೂಮಿಯಿಂದ ಸೂರ್ಯನಿಗೆ ಇರುವ ದೂರಕ್ಕಿಂತ ಹತ್ತೊಂಬತ್ತು ಪಟ್ಟು ಹೆಚ್ಚಿನ ದೂರದಲ್ಲಿದೆ.
ಇದನ್ನು ಓದಿ: ಪಿರಮಿಡ್‌ಗಳನ್ನು ಏಕೆ ಮತ್ತು ಹೇಗೆ ಮಾಡಲಾಯಿತು?ನೆಪ್ಚೂನ್ ಚಂದ್ರಗಳಲ್ಲಿ ಒಂದಾದ ಟ್ರಿಟಾನ್ನಿಂದ ಸೂರ್ಯ ಈ ರೀತಿ ಕಾಣುತ್ತಾನೆ. ನೆಪ್ಚೂನ್ ಸೂರ್ಯನಿಂದ ಸುಮಾರು 2.8 ಶತಕೋಟಿ ಮೈಲಿ ದೂರದಲ್ಲಿದೆ. ಅದು ಭೂಮಿಗೆ ಹೋಲಿಸಿದರೆ ಮೂವತ್ತು ಪಟ್ಟು ಹೆಚ್ಚು. ಟ್ರಿಟಾನ್ನ ಶಕ್ತಿಯುತ ಕ್ರೈಯೋಜಿಸರ್ಗಳಲ್ಲಿನ ಧೂಳು ಮತ್ತು ಅನಿಲದ ಮೋಡಗಳು ಸಣ್ಣದಾಗಿ ಕಾಣುವ ಸೂರ್ಯನನ್ನು ಭಾಗಶಃ ಅಸ್ಪಷ್ಟಗೊಳಿಸುತ್ತಿವೆ.
ಪ್ಲೂಟೊ ಸೂರ್ಯನಿಂದ ಸರಾಸರಿ 3.7 ಶತಕೋಟಿ ಮೈಲುಗಳಷ್ಟು ದೂರವನ್ನು ಹೊಂದಿದೆ. ಐಎಯು ಪ್ರಕಾರ ಪ್ಲೂಟೊ ಒಂದು 'ಡಾರ್ಪ್ ಪ್ಲಾನೆಟ್' ಆಗಿದೆ. ಪ್ಲೂಟೊ ಗ್ರಹದಿಂದ ಸೂರ್ಯ ಈ ರೀತಿ ಕಾಣುತ್ತಾನೆ. ಇಲ್ಲಿ ಸೂರ್ಯನ ಬೆಳಕು ಭೂಮಿಗೆ ಹೋಲಿಸಿದರೆ 1,600 ಪಟ್ಟು ಮಂದವಾಗಿರುತ್ತದೆ.
ಬಾಹ್ಯಾಕಾಶದ ಈ ಲೇಖನ ನಿಮಗೆ ಇಷ್ಟವಾಯಿತೇ? ಆಗಿದ್ದರೆ ಇದನ್ನು ಶೇರ್ ಮಾಡಿ ಸಹಕರಿಸಿ. ಇದೇ ರೀತಿ ಇನ್ನಷ್ಟು ಮಾಹಿತಿಯನ್ನು ತಿಳಿಯಲು ನಮ್ಮ ವೆಬ್‌ಸೈಟ್‌ಗೆ ರಿಜಿಸ್ಟರ್ ಆಗಿ. ಈ ಲೇಖನದ ಮೇಲಿನ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
Info Mind 3624
Info Mind 3317
See all comments...
anilkumar • January 17th,2022
Nyc