Watch Video
ನಾವು ಒಬ್ಬರನ್ನ ಮೊದಲ ಬಾರಿ ಭೇಟಿಯಾದಾಗ ನಮಗೆ ಅವರ ಬಗ್ಗೆ ತಿಳಿದಿರುವುದಿಲ್ಲ. ಆ ವ್ಯಕ್ತಿಯ ವ್ಯಕ್ತಿತ್ವ ಯಾವ ರೀತಿ ಇದೆ ಎಂದು ನಮಗೆ ತಿಳಿದಿರುವುದಿಲ್ಲ. ಈಗಾಗಿ ನಾವು ಹೇಗೆ ಸಂವಹನ(communication) ಮಾಡುತ್ತೇವೆ ಎಂಬುದು ಮುಖ್ಯವಾಗಿದೆ. 55% ಗೂ ಅಧಿಕರೂ ದೇಹ ಭಾಷೆಯನ್ನು(body language) ನೋಡಿ, 38% ಧ್ವನಿಯ ಸ್ವರದಿಂದ(tone of voice) ಮತ್ತು ಕೇವಲ 7% ಕೇಳಿ, ಭೇಟಿಯಾಗುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಇದರ ಅರ್ಥ ನಾವು ಒಬ್ಬರನ್ನು ಮೊದಲ ಬಾರಿ ಭೇಟಿಯಾದಾಗ, ಅವರ ಈ ಮೂರು ಅಂಶಗಳ ಮೇಲೆ ಗಮನ ಹರಿಸಬೇಕು. ನೀವು ಒಬ್ಬರ ಗಮನವನ್ನು ಆಕರ್ಷಿಸಲು ಬಯಸಿದರೆ ಈ ಸುಳಿವುಗಳ ಮೇಲೆ ಗಮನ ಹರಿಸಿ.
ಇದನ್ನು ಓದಿ: ಉನ್ನತ ವ್ಯಕ್ತಿಯಾಗಲು ಇರುವ ಮಾರ್ಗಕಣ್ಣುಗಳನ್ನು ಮನಸ್ಸಿನ ಬಾಗಿಲು ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಗೆ ನಿಮ್ಮಿಂದ ಕಣ್ಣನ್ನು ಹೊರ ತೆರೆಯಲು ಸಾಧ್ಯವಾಗಿಲ್ಲವೆಂದರೆ, ಆತನಿಗೆ ನಿಮ್ಮ ಮೇಲೆ ಪ್ರಣಯ ಆಸಕ್ತಿ(romantic interest) ಇರಬಹುದು. ಅದೇ ನೀವು ಒಬ್ಬರ ಕಣ್ಣನ್ನು ನೋಡಿ ಅವರಿಗೆ ಆ ರೀತಿ ನೋಡಲು ಸಾಧ್ಯವಾಗದಿದ್ದಾಗ, ಅವರು ಅಸ್ಥಿರವಾಗಿದ್ದರೆ(nervous) ಇಲ್ಲ ಏನನ್ನೋ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ. ಒಬ್ಬ ವ್ಯಕ್ತಿ ಕಣ್ಣನ್ನು ಮಿಟುಕಿಸದೇ ನಿಮ್ಮ ಜೊತೆ ಮಾತನಾಡುತ್ತಿದ್ದಾರೆ, ಹೇಳಲು ಏನೋ ವಿಷಯ ಇದ್ದೇ ಇರುತ್ತದೆ ಅಥವಾ ಅವರು ನಿಮಗೆ ಸುಳ್ಳು ಹೇಳುತ್ತಿರಬಹುದು.
ಒಬ್ಬ ವ್ಯಕ್ತಿ ನಿಮ್ಮ ಹತ್ತಿರ ಎಷ್ಟು ಆರಾಮದಾಯಕವಾಗಿ ಇದ್ದಾನೆ ಎಂದು ತಿಳಿಯಲು ಅವನ ಹುಬ್ಬುಗಳನ್ನು ನೋಡಿ. ನಿಮ್ಮ ಹುಬ್ಬು ಏರಲು ಈ ಮೂರು ಭಾವನೆಗಳು ಕಾರಣವಾಗಿದೆ. ಅವೆಂದರೆ ಆಶ್ಚರ್ಯ, ಚಿಂತೆ ಮತ್ತು ಗಾಬರಿಯಲ್ಲಿರುವುದು. ನಿಮ್ಮ ಗೆಳೆಯನ ಜೊತೆ ಮಾತನಾಡುವಾಗ ಹುಬ್ಬುಗಳನ್ನು ಮೇಲೆತ್ತಲು ನಿಮಗೆ ಕಷ್ಟವೆನಿಸುತ್ತದೆ. ಒಬ್ಬರು ನಿಮ್ಮ ಜೊತೆ ಮಾತನಾಡುವಾಗ ತಮ್ಮ ಹುಬ್ಬುಗಳನ್ನು ತೆರೆದರೆ, ಅವರು ನಿಮ್ಮ ಮೇಲೆ ಅಷ್ಟು ಆಸಕ್ತಿ ಇಟ್ಟಿಲ್ಲವೆಂಬುದಾಗಿದೆ.
ಇದನ್ನು ಓದಿ: ನೀವು ಯೋಚಿಸುವುದಕ್ಕಿಂತ ಹೆಚ್ಚು ಆಕರ್ಷಕವಿರುವ 13 ರಹಸ್ಯ ಚಿಹ್ನೆಗಳುನಗುವಿನ ವಿಷಯದಲ್ಲಿ ಬಾಯಿ ಸುಳ್ಳು ಹೇಳಬಹುದು, ಆದರೆ ಕಣ್ಣು ಸುಳ್ಳು ಹೇಳಲು ಸಾಧ್ಯವಿಲ್ಲ. ಜನರು ಅವರು ಯೋಚಿಸುತ್ತಿರುವುದನ್ನು ಮುಚ್ಚಿಡಲು ನಗುತ್ತಾರೆ. ಮುಂದೆ ನಿಮಗೆ ಒಬ್ಬರು ನಿಜವಾಗಿಯೂ ನಕ್ಕಾಗ ಅವರ ಕಣ್ಣಿನ ಹತ್ತಿರ ಬರುವ ಸುಕ್ಕನ್ನು(wrinkle) ನೋಡಿ. ಒಂದು ವೇಳೆ ಅದು ಇಲ್ಲದಿದ್ದರೆ, ಆ ನಗು ಏನನ್ನೋ ಮುಚ್ಚಿಡುತ್ತಿದೆ.
ನೀವು ಒಬ್ಬರನ್ನ ಮೊದಲ ಭಾರಿ ಭೇಟಿಯಾದಾಗ, ಅವರು ಸಂಗತಿಯ ಬಗ್ಗೆ ಇಲ್ಲ, ಅವರ ಕೆಲಸದ ಸಹೋದ್ಯೋಗಿಗಳ ಬಗ್ಗೆ ಮಾತನಾಡಿದರೆ, ಅವರು ಒಬ್ಬ ಸಭ್ಯ(decent) ವ್ಯಕ್ತಿ ಆಗಿರುತ್ತಾರೆ. ಒಬ್ಬ ವ್ಯಕ್ತಿ ಇತರರ ಬಗ್ಗೆ ದಯೆ ಮತ್ತು ಸಭ್ಯತೆಯಿಂದ ಮಾತನಾಡಿದರೆ, ಅವರು ಆ ರೀತಿಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆದರೆ ಇದರ ವಿರುದ್ಧವೂ ಸತ್ಯವಿರಬಹುದು. ಯಾರಾದರೂ ಇತರರನ್ನು ಬೈಯುತ್ತಿದ್ದರೆ, ಅವರು ಆ ರೀತಿಯ ವ್ಯಕ್ತಿತ್ವವನ್ನು ಹೊಂದಿರಬಹುದು. ಇದು ಒಂದು ರೀತಿ ವ್ಯಕ್ತಿತ್ವ ಅಸ್ವಸ್ಥತೆ(personality disorder) ಆಗಿರುತ್ತದೆ.
ಪ್ಯಾರಾ ಲಾಂಗ್ವೇಜ್ ಎಂದರೆ ಮೌಖಿಕ ಸಂವಹನವಾಗಿದೆ. ಇದು ಎಲ್ಲರೂ ನಿಮ್ಮನ್ನು ನೋಡಲಿ ಎಂದು ತಿಳಿಸಲು ಇರುವ ಅಲಂಕಾರಿಕ ತಂತ್ರವಾಗಿದೆ. ಯಾರಾದರೂ ನಿಮ್ಮ ಜೊತೆ ಅಲ್ಪ ಧ್ವನಿಯಲ್ಲಿ(minor tone) ಮಾತನಾಡುತ್ತಿದ್ದಾರೆ, ನಿಮ್ಮ ಪರಿಕಲ್ಪನೆಯ(concept) ಮೇಲೆ ಅವರಿಗೆ ಅಷ್ಟು ಆಸಕ್ತಿ ಇಲ್ಲವೆಂದರ್ಥ. ಯಾರಾದರೂ ಚುಚ್ಚುಮಾತು(sarcasm) ಬಳಸಿದರೆ, ಆ ವ್ಯಕ್ತಿ ಅರ್ಥ ಮಾಡಿಸುತ್ತಿರುವ ಮತ್ತು ಅವರು ಹೇಳುವ ವಿಷಯ ಬೇರೆಯಾಗಿರುತ್ತದೆ. ಹೀಗಾಗಿ ಒಬ್ಬರು ಏನು ಹೇಳುತ್ತಿದ್ದಾರೆ ಮತ್ತು ಹೇಗೆ ಹೇಳುತ್ತಿದ್ದಾರೆ ಎಂಬುದರ ಮೇಲೆ ಗಮನ ಹರಿಸಿ. ಇದು ನಿಮಗೆ ಅವರ ನಿಜವಾದ ಉದ್ದೇಶವೇನು ಎಂಬುದರ ಮೇಲೆ ಸುಳಿವು ನೀಡುತ್ತದೆ.
ಇದನ್ನು ಓದಿ: "Good Vibes Good Life" ಪುಸ್ತಕದ ವಿವರಣೆನಿಮ್ಮನ್ನು ಭೇಟಿಯಾಗಲು ಉತ್ಸುಕರಾಗಿರುವ ವ್ಯಕ್ತಿಗಳು ಯಾವಾಗಲೂ ನಿಮ್ಮನ್ನು ನೋಡುತ್ತಿರುತ್ತಾರೆ. ಒಂದು ವೇಳೆ ಯಾರಾದರೂ ನಿಮ್ಮನ್ನು ಭೇಟಿಯಾಗಿ ಇತರರನ್ನು ನೋಡುತ್ತಿದ್ದರೆ, ಅವರು ನಿಮ್ಮಿಂದ ತಪ್ಪಿಸಿಕೊಳ್ಳಲು ಬಯಸಿರುತ್ತಾರೆ.
ತಲೆಹಡಿಸುವುದು ಒಬ್ಬರು ನಿಮ್ಮನ್ನು ಒಪ್ಪಿಕೊಂಡತಾಗಿದೆ. ಆದರೆ ಅತಿಯಾಗಿ ತಲೆಹಡಿಸುವುದು ಭಯವನ್ನು ತೋರಿಸುತ್ತದೆ. ನೀವು ಒಬ್ಬರಿಗೆ ಒಂದು ಮಾತನ್ನು ಹೇಳುವಾಗ ಅವರು ಭಯದಲ್ಲಿದ್ದರೆ, ಅವರು ನೀವು ಏನು ಎಂದುಕೊಳ್ಳುತ್ತೀರೋ ಎಂಬ ಭಯದಲ್ಲಿ ಇರುತ್ತಾರೆ. ಇನ್ನೊಂದು ಕಡೆ ಆಗಾಗ್ಗೆ ತಲೆಯಾಡಿಸುವುದು ಸನ್ನೆಯನ್ನು ತೋರಿಸಲು ಇರುವ ಮಾರ್ಗವಾಗಿದೆ. ಉದಾಹರಣೆಗೆ ಒಬ್ಬ ವ್ಯಕ್ತಿ ಅವನ ಕೈಗಡಿಯಾರವನ್ನು(watch) ಪದೇಪದೇ ನೋಡುತ್ತಿದ್ದರೆ, ಇಲ್ಲ ಕಾರಿನ ಕೀಲಿಯನ್ನು(key) ತೆಗೆದುಕೊಳ್ಳುತ್ತಿದ್ದಾರೆ ಆತ ಬೇಗನೆ ಎದ್ದು ಹೋಗಲು ಬಯಸಿರುತ್ತಾನೆ.
ಇದನ್ನು ಓದಿ: ಕಡಿಮೆ ಹಣದೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ?ಒಬ್ಬರು ಒಂದು ನಿರ್ಧಾರ ತೆಗೆದುಕೊಳ್ಳಬೇಕಾದಾಗ ಅವರ ಗಲ್ಲವನ್ನು ತಿಕ್ಕಿಕೊಳ್ಳುತ್ತಾರೆ. ಅವರು ಮೇಲೆ, ಕೆಳಗೆ ಇಲ್ಲ ಅಕ್ಕಪಕ್ಕ ನೋಡುತ್ತಿರಬಹುದು. ಇದು ಅವರು ಆಳವಾದ ಯೋಚನೆಯಲ್ಲಿ ಮುಳುಗಿದ್ದಾರೆ ಎಂದು ತಿಳಿಸುತ್ತದೆ. ದವಡೆಯನ್ನು ಹಿಸುಕುವುದು ಒತ್ತಡವಾಗಿರುವ(stress) ಬಗ್ಗೆ ತಿಳಿಸುತ್ತದೆ. ಇದು ಅಸ್ವಸ್ಥತೆಯನ್ನು ಸೂಚಿಸುತ್ತದೆ. ಅವರು ಗಾಬರಿಯಾಗುವ ವಿಷಯಕ್ಕೆ ಸಂವಹನ ಹೋಗುತ್ತಿದೆ ಅಥವಾ ಅವರು ಬೇರೆ ಏನೋ ಯೋಚಿಸುತ್ತಿರಬಹುದು.
ಒಬ್ಬರ ಭಂಗಿ ಅವರ ಆತ್ಮವಿಶ್ವಾಸದ ಬಗ್ಗೆ ತಿಳಿಸುತ್ತದೆ, ಉದಾಹರಣೆಗೆ ಒಬ್ಬರ ಭುಜವೂ ಹಿಂದೆ ಇದ್ದು, ನೇರವಾಗಿ ನೋಡುತ್ತಾ ನಡೆಯುತ್ತಿದ್ದಾರೆ, ಅವರು ಅವರ ಮೇಲೆ ಒಳ್ಳೆಯ ಭಾವನೆಯನ್ನು ಇಟ್ಟುಕೊಂಡಿದ್ದು, ಆತ್ಮ ವಿಶ್ವಾಸದಿಂದ ಇರುತ್ತಾರೆ. ಅದೇ ಯಾರಾದರೂ ನೆಲವನ್ನು ನೋಡಿಕೊಂಡು ನಡೆಯುತ್ತಿದ್ದಾರೆ, ಅದು ಅಷ್ಟು ದೊಡ್ಡ ಅನಿಸಿಕೆಯನ್ನು(impression) ನೀಡುವುದಿಲ್ಲ.
ಮೆದುಳು ಏನನ್ನು ಯೋಚಿಸುತ್ತದೆ ಎಂಬುದನ್ನು ಕೈಗಳು ಪ್ರಸಾರ ಮಾಡುತ್ತವೆ. ಒಬ್ಬ ವ್ಯಕ್ತಿ ತನ್ನ ಕೈಯನ್ನು ತಿಕ್ಕಿಕೊಳ್ಳುತ್ತಿದ್ದಾರೆ, ಅವನಿಗೆ ಒಂದು ಸಕಾರತ್ಮಕ ಭಾವನೆ ಇದೇ ಎಂದರ್ಥ. ಅವರ ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂದು ತಿಳಿದಾಗ ಈ ರೀತಿ ಮಾಡುತ್ತಾರೆ ಮತ್ತು ಅವರು ಪ್ರಚೋದಿತರಾಗಿರುತ್ತಾರೆ.
ಇದನ್ನು ಓದಿ: ವೀರ್ಯಗಳ ಸಂಖ್ಯೆಯನ್ನು ಸ್ವಾಭಾವಿಕವಾಗಿ ಹೆಚ್ಚಿಸಿಕೊಳ್ಳುವುದು ಹೇಗೆ?ಒಬ್ಬ ವ್ಯಕ್ತಿಯ ಕೈಕುಲಕುವ ರೀತಿಯಿಂದ ನೀವು ಅಧಿಕ ವಿಷಯವನ್ನು ತಿಳಿದುಕೊಳ್ಳಬಹುದು. ಮೃದುವಾಗಿ ಕೈಕುಲುಕಿದರೆ, ಅವರು ವಿನಯದಿಂದ ಕೂಡಿರುತ್ತಾರೆ. ಅದೇ ಗಟ್ಟಿಯಾಗಿ ಕೈಕುಲುಕಿದರೆ, ಅವರು ಪ್ರಭಾವ ಬೀರುವ(dominating) ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇದರಲ್ಲಿ ಕೈಕುಲುಕುವ ಸಮಯ ಕೂಡ ಮುಖ್ಯವಾಗಿದೆ. ಅಧಿಕ ಹೊತ್ತು ಕೈಕುಲುಕಿದರೆ ಅದು ವಿಚಿತ್ರವಾಗಿದೆ. ತುಂಬಾ ಅಲ್ಪವಾಧಿ ಆಗಿದ್ದರೆ ಅದು ಸಂಘರ್ಷ(conflict) ಆಗಿದೆ ಎಂದು ತಿಳಿಸುತ್ತದೆ. ಇದರ ಅರ್ಥ ಆ ವ್ಯಕ್ತಿ ನಿಮ್ಮ ಹತ್ತಿರ ಆಳವಾದ ಸಂಪರ್ಕ ಮಾಡಿಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲವೆಂದರ್ಥ ಅಥವಾ ಅವರ ಹತ್ತಿರ ಸಮಯವಿಲ್ಲ.
ಒಬ್ಬ ವ್ಯಕ್ತಿ ನಿಮ್ಮ ಮಾತುಗಳಿಗೆ ಒಲವು ತೋರಿಸುತ್ತಿದ್ದಾರೆ, ಅವರು ನಿಮ್ಮ ಮಾತಿನ ಮೇಲೆ ಆಸಕ್ತಿ ಹೊಂದಿದ್ದರೆಂರ್ಥವಾಗಿದೆ. ಆದರೆ ಅದು ಗೌರವ ನೀಡಲು ಇರುವ ಒಂದು ಗುರುತು ಕೂಡ ಆಗಿದೆ. ಒಬ್ಬ ವ್ಯಕ್ತಿ ಮಾತನಾಡುವಾಗ ಹಿಂದೆ ಹೋದರೆ ಅವರು ಸಂವಹನದಿಂದ ಸುಸ್ತಾಗಿದ್ದಾರೆ ಅಥವಾ ಕೆಲವು ಕಾರಣಗಳಿಂದ ಅಹಿತಕರ ಭಾವನೆಯಲ್ಲಿ ಇದ್ದರೆ ಎಂದರ್ಥ.
ಇದನ್ನು ಓದಿ: ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಣ ಮಾಡುವುದು ಹೇಗೆ?ಇದು ವಿಚಿತ್ರವೆನ್ನಿಸಬಹುದು, ಆದರೆ ಇದನ್ನು ನೀವು ತಿಳಿದಿರುವುದು ಉತ್ತಮವಾಗಿದೆ. ನೀವು ಮೊದಲ ಬಾರಿ ಭೇಟಿಯಾಗುವ ವ್ಯಕ್ತಿಯು ಒಂದು ತಾಯಿಯಾಗಿದ್ದರೆ, ಅವರು ತನ್ನ ಮಗುವನ್ನು ಹಿಡಿದಿಟ್ಟುಕೊಳ್ಳಲು ಯಾವ ಕೈ ಬಳಸುತ್ತಾರೆ ಎಂಬುದನ್ನು ನೋಡಿ. ಖುಷಿಯಲ್ಲಿರುವ ತಾಯಂದಿರು ಮಗುವನ್ನು ಎಡಗೈಯಿಂದ ಹಿಡಿದಿಟ್ಟುಕೊಳ್ಳುತ್ತಾರೆ ಎಂದು ಅಧ್ಯಯನಗಳು ಹೇಳುತ್ತದೆ. ಅದೇ ಒತ್ತಡ ಮತ್ತು ಖಿನ್ನತೆಯಲಿರುವ ತಾಯಂದಿರು ಅವರ ಮಗುವನ್ನು ಬಲಗೈಯಿಂದ ಹಿಡಿದಿಟ್ಟುಕೊಂಡಿರುತ್ತಾರೆ.
ನೀವು ಒಬ್ಬ ವ್ಯಕ್ತಿ ಹತ್ತಿರ ಮಾತನಾಡುವಾಗ ಅವರು ಅಡ್ಡ ತೋಳು ಹಾಕುವುದನ್ನು ಗುರುತಿಸಿದ್ದೀರಾ. ನೀವು ಮೊದಲ ಬಾರಿ ಭೇಟಿ ಮಾಡುತ್ತಿದ್ದಾರೆ, ಇಲ್ಲ ಒಂದು ಹೊಸ ಐಡಿಯಾವನ್ನು ತಿಳಿಸುತ್ತಿದ್ದಾರೆ. ಇದು ಒಂದು ಒಳ್ಳೆಯ ಚಿಹ್ನೆ ಆಗಿರುವುದಿಲ್ಲ. ಅಡ್ಡ ತೋಳು ಹಾಕುವುದು ದೈಹಿಕ ತಡೆಯಾಗಿದ್ದು, ಆ ವ್ಯಕ್ತಿಯು ನೀವು ಹೇಳುತ್ತಿರುವ ವಿಷಯದ ಮೇಲೆ ಆಸಕ್ತಿ ತೋರಿಸುತ್ತಿಲ್ಲವೆಂಬುದಾಗಿದೆ. ಅವರು ಖುಷಿಯಲ್ಲಿ ಮಾತಿನಲ್ಲಿ ತೊಡಗಿಸಿಕೊಂಡಿದ್ದರು, ಅವರ ದೈಹಿಕ ಭಾಷೆ ಎಲ್ಲವನ್ನು ತಿಳಿಸಿರುತ್ತದೆ. ಸೈಕಾಲಾಜಿ ಪ್ರಕಾರ ಅಡ್ಡ ತೋಳು ಹಾಕುವ ವ್ಯಕ್ತಿಯು ಮಾನಸಿಕವಾಗಿ(mentally), ಭಾವನಾತ್ಮಕವಾಗಿ(emotionally) ಮತ್ತು ದೈಹಿಕವಾಗಿ(physically) ತಡೆದಿರುವುದನ್ನು ಸೂಚಿಸುತ್ತದೆ. ಇದರಲ್ಲಿ ಆ ಪಾದದ ದಿಕ್ಕು ಕೂಡ ಮುಖ್ಯವಾಗಿದೆ. ಒಂದು ವೇಳೆ ಆ ವ್ಯಕ್ತಿಯ ಎರಡು ಪಾದ ನಿಮ್ಮ ಹತ್ತಿರ ಇದ್ದಾರೆ, ಅವನು ನಿಮ್ಮನ್ನು ಇಷ್ಟಪಡುತ್ತಾನೆ. ಒಂದು ವೇಳೆ ಅವನ ಪಾದ ಬಾಗಿಲ ಹತ್ತಿರ ಇದ್ದರೆ ಅವನು ನಿರ್ಗಮಿಸಲು ಬಯಸಿದ್ದಾರೆ ಎಂದರ್ಥವಾಗಿದೆ.
ಇದನ್ನು ಓದಿ: ನಿಮ್ಮನ್ನು ಚುರುಕಾಗಿಸಲು 13 ದಿನನಿತ್ಯದ ಅಭ್ಯಾಸಗಳುಒಬ್ಬ ವ್ಯಕ್ತಿಯ ಶೂಗಳು ಅವನ ವ್ಯಕ್ತಿತ್ವದ ಬಗ್ಗೆ ಅಧಿಕ ತಿಳಿಸುತ್ತದೆ. ನಾವೆಲ್ಲರೂ ಜನರ ಶೂಗಳ ಮೇಲೆ ತೀರ್ಪುನ್ನು ನೀಡುತ್ತೇವೆ. ಅಸ್ಥಿರವಿರುವವರು(nervous) ಹೊಸ ಮತ್ತು ಸ್ವಚ್ಛವಾದ ಶೂಗಳನ್ನು ಹೊಂದಿರುತ್ತಾರೆ. ಬದುಕಿನಲ್ಲಿ ಗುರಿ ಇರುವವರು ಪ್ರಾಯೋಗಿಕ(practical) ಶೂಗಳನ್ನು ಹೊಂದಿರುತ್ತಾರೆ. ಶಾಂತ ಸ್ವಭಾವದ ವ್ಯಕ್ತಿಯು ಆರಾಮದಾಯಕ ಶೂಗಳನ್ನು ಹೊಂದಿರುತ್ತಾರೆ. ಅದೇ ಆಕ್ರಮಣಕಾರಿ(aggressive) ಇರುವ ವ್ಯಕ್ತಿಗಳು ಕಣಕಾಲು(ankel) ಶೂಗಳನ್ನು ಹೊಂದಿರುತ್ತಾರೆ.
ಒಬ್ಬರು ಹೇಗೆ ಕಾಣಿಸುತ್ತಾರೆ ಮತ್ತು ಹೇಗೆ ಬಟ್ಟೆ ಧರಿಸುತ್ತಾರೆ ಎಂಬುದು ಅಧಿಕ ವಿಷಯವನ್ನು ತಿಳಿಸುತ್ತದೆ. ಒಬ್ಬ ವ್ಯಕ್ತಿಯ ಕೂದಲು ಸರಿಯಾಗಿ ಇದ್ದು, ಒಳ್ಳೆಯ ಔಪಚಾರಿಕ(formal) ಬಟ್ಟೆ ಧರಿಸಿದ್ದಾರೆ, ಅವನು ವಿವರ ಆಧಾರಿತ(detail oriented) ವ್ಯಕ್ತಿ ಆಗಿರುತ್ತಾರೆ. ಅದೇ ಒಬ್ಬ ವ್ಯಕ್ತಿ ಸಾಂದರ್ಭಿಕ(causual) ಬಟ್ಟೆ ಧರಿಸಿ, ಕೂದಲು ಗೊಂದಲವಿದ್ದು, ವಾಸನೆ ಬರುತ್ತಿದರೆ, ಆತ ನಿಜವಾಗಿಯೂ ಸೋಮಾರಿ ವ್ಯಕ್ತಿ ಆಗಿರುತ್ತಾನೆ.
ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳುನೀವು ಇದಕ್ಕಿಂತ ಮೊದಲು ವ್ಯಕ್ತಿಗಳನ್ನು ಓದಿಲಾದಿದರೆ ಇದರ ಮೇಲೆ ಗಮನ ಹರಿಸಿರುವುದಿಲ್ಲ. ಒಬ್ಬರು ನಿಮ್ಮ ದೇಹ ಭಾಷೆಯನ್ನು ಅನುಕರಿಸಿದರೆ, ಅವರು ನಿಮ್ಮನ್ನು ತುಂಬಾ ಇಷ್ಟಪಡುತ್ತಾರೆ ಎಂದರ್ಥವಾಗಿದೆ. ಇದು ಸಂವಹನ ಚೆನ್ನಾಗಿ ಆಗುತ್ತದೆ ಎಂಬುದಕ್ಕೆ ಸೂಚನೆಯಾಗಿದೆ. ಇದು ಪ್ರಜ್ಞಾಹೀನವಾಗಿ(unconscious) ಆಗುತ್ತದೆ. ಏಕೆಂದರೆ ಯಾರೂ ಕೂಡ ನಕಲು ಮಾಡಲು ಎಲ್ಲರ ಮೇಲೆ ಅಷ್ಟು ಗಮನ ಹರಿಸುವುದಿಲ್ಲ. ಆದರೆ ನಾವು ಒಬ್ಬ ವ್ಯಕ್ತಿಯ ಜೊತೆ ಆರಾಮದಾಯಕ ಭಾವನೆಯನ್ನು ಮಾಡಿಕೊಂಡಾಗ, ಅವರು ಮಾಡುವ ರೀತಿಯೇ ನಾವು ಮಾಡಲು ಪ್ರವೃತ್ತಿ(tendency) ಇರುತ್ತದೆ.
ನಮ್ಮಲ್ಲಿ ಕೆಲವರು ಇತರರು ಕೊಡುವ ಸನ್ನೆಯನ್ನು ನೋಡಿ ಅರ್ಥಮಾಡಿಕೊಳ್ಳಬಹುದು. ಆದರೆ ಕೆಲವರಿಗೆ ಇತರ ವ್ಯಕ್ತಿ ಬಂದು ಅವರ ತಲೆಯಲ್ಲಿ ಏನಿದೆ ಎಂದು ತಿಳಿಸಬೇಕು. ಜನರನ್ನು ಓದುವುದು ಕಷ್ಟ, ಆದರೆ ನೀವು ಇದನ್ನು ಕಲಿತರೆ, ಇದು ಒಂದು ಅದ್ಭುತ ಕೌಶಲ್ಯವಾಗಿದೆ. ಎಲ್ಲರೂ ಬೇರೆ ಬೇರೆ ರೀತಿಯಲ್ಲಿ ಇರುತ್ತಾರೆ, ಹೀಗಾಗಿ ಅವರ ಮಾತುಗಳನ್ನು ಅರ್ಥೈಸಿಕೊಳ್ಳುವುದು(interprete) 100% ನಿಖರವಾಗಿರುವುದಿಲ್ಲ. ಆದರೆ ಈ ಸಲಹೆಗಳನ್ನು ಬಳಸಿಕೊಂಡು ನೀವು ಇತರರನ್ನು ಚೆನ್ನಾಗಿ ಓದಬಹುದು.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
Info Mind 1776
Mahithi Thana 1424
Mahithi Thana 918
See all comments...