Website designed by @coders.knowledge.

Website designed by @coders.knowledge.

One Up On Wall Street Book Summary Part 1 | One Up On Wall Street ಪುಸ್ತಕದ ಸಾರಾಂಶ

Watch Video

ಇಂದು ನಾವು ನಿಮ್ಮನ್ನು ಷೇರು ಮಾರುಕಟ್ಟೆಯಲ್ಲಿ ಉನ್ನತ ಮಟ್ಟಕ್ಕೆ(pro level) ತೆಗೆದುಕೊಂಡು ಹೋಗುವ ಪುಸ್ತಕದ ಸಾರಾಂಶ ತಿಳಿಸಲಿದ್ದೇವೆ. ನೀವು ಇಲ್ಲಿಯವರೆಗೂ ಷೇರು ಮಾರುಕಟ್ಟೆಯ ಬಗ್ಗೆ ತಿಳಿಯದಿದ್ದರೂ ಕೇವಲ ಈ ಒಂದು ಲೇಖನದಿಂದ ಅಧಿಕ ಕಲಿಯಬಹುದು. ಇಂದು ನಾವು ಪೀಟರ್ ಲಿಂಚ್(peter lynch) ಅವರು ಬರೆದಿರುವ "ಒನ್ ಅಪ್ ಆನ್ ವಾಲ್ ಸ್ಟ್ರೀಟ್"(one up on wall street) ಪುಸ್ತಕದ ಸಾರಾಂಶ ತಿಳಿಸಲಿದ್ದೇವೆ. ಮೊದಲು ಲೇಖಕರ ಬಗ್ಗೆ ತಿಳಿಯೋಣ,

ಪೀಟರ್ ಲಿಂಚ್ ಪ್ರಸಿದ್ಧ(legendary) ಹೂಡಿಕೆದಾರರಾಗಿದ್ದು, ಷೇರು ಮಾರುಕಟ್ಟೆಯಿಂದ ಹಣ ಮತ್ತು ಹೆಸರನ್ನು ಗಳಿಸಿದ್ದಾರೆ. 1966 ರಂದು ಫಿಡಿಲಿಟಿ ಹೂಡಿಕೆಗಳಲ್ಲಿ(fidelity investments) ಇಂಟರ್ನಾಗಿ(intern) ಸೇರಿಕೊಂಡ ಇವರು 1977 ರಂದು ಮೆಗೆಲ್ಲನ್ ನಿಧಿ ವ್ಯವಸ್ಥಾಪಕನಾದರು(magellen fund manager). ಈ ಫಂಡನ್ನು ಇವರು 13 ವರ್ಷಗಳಿಗೆ ನಿರ್ವಹಿಸಿದರು. ಅದು ಸರಾಸರಿ ಆಗಿ 29.2 ರಷ್ಟು ವಾರ್ಷಿಕ ರಿಟರ್ನ್ ನೀಡಿತು. ಇದು ಮ್ಯೂಚುಯಲ್ ಫಂಡ್ ಇತಿಹಾಸದಲ್ಲಿ ಅತೀ ಹೆಚ್ಚಿನ ರಿಟರ್ನ್ ಆಗಿದೆ. ಈ ಪುಸ್ತಕವನ್ನು ಮೂರು ಭಾಗ ಮಾಡಲಾಗಿದೆ ಅದರಲ್ಲಿ,

Part 1: Introduction to investing and development of an investors minds.

ಇದರಲ್ಲಿ ಹೂಡಿಕೆಯನ್ನು ಏಕೆ ಶುರು ಮಾಡಬೇಕು ಮತ್ತು ಷೇರು ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ನಿಮ್ಮ ಮನಸ್ಥಿತಿ ಹೇಗೆ ಇರಬೇಕು ಎಂಬುದನ್ನು ತಿಳಿಯಲಿದ್ದೇವೆ.

Part 2: Step by step to pick stocks.

ಇದರಲ್ಲಿ ವಿವಿಧ ಸ್ಟಾಕ್ಗಳನ್ನು ವಿಶ್ಲೇಷಿಸುವುದು ಹೇಗೆ ಮತ್ತು ಒಂದು ಸ್ಟಾಕ್ ಅನ್ನು ಆರಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಲಿದ್ದೇವೆ.

Part 3: Long term view to investing and portfolio.

ಇದರಲ್ಲಿ ನಾವು ದೀರ್ಘಾವಧಿ ಹೂಡಿಕೆಯಲ್ಲಿ ಏನೇನು ಮಾಡಬೇಕೆಂದು ತಿಳಿಯಲಿದ್ದೇವೆ.

Part 1: Preparing to invest

Chapter 1: The making of a stock picker

how do you make a stock pick in kannada
stockpicker

1950 ರಂದು ಅಮೆರಿಕಾದಲ್ಲಿ ಪ್ರತಿಯೊಬ್ಬರಿಗೂ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹಾಕುವುದು ಹಣವನ್ನು ವ್ಯರ್ಥ ಮಾಡಿದಂತೆ ಅಂದುಕೊಳ್ಳುತ್ತಿದ್ದರು ಮತ್ತು ಇದೇ ಮನಸ್ಥಿತಿಯನ್ನು ಪೀಟರ್ ಲಿಂಚ್ ಅವರ ಕುಟುಂಬದವರು ಹೊಂದಿದ್ದರು. ಅಲ್ಲಿ ಪ್ರತಿಯೊಬ್ಬರು ಷೇರು ಮಾರುಕಟ್ಟೆಯ ಬಗ್ಗೆ ಮಾತನಾಡುವ ಬಗ್ಗೆ ತಪ್ಪಿಸುತ್ತಿದ್ದರು(avoid). ಆದರೆ ಪೀಟರ್ ಲಿಂಚ್ ಗಾಲ್ಫ್ ತರಬೇತಿಯಲ್ಲಿ(golf coach) ಕ್ಯಾಡಿಯಾಗಿ(caddy) ಕೆಲಸಕ್ಕೆ ಸೇರಿಕೊಂಡರು. ಕ್ಯಾಡಿ ಎಂದರೆ ಗಾಲ್ಫ್ ಬ್ಯಾಗ್ ಇಡಿದುಕೊಳ್ಳುವವರಾಗಿರುತ್ತಾರೆ. ಗಾಲ್ಫ್ ಶ್ರೀಮಂತರ ಗೇಮ್ ಆಗಿರುವುದರಿಂದ, ಅವರ ಬ್ಯಾಗ್ಗಳನ್ನೇ ಪೀಟರ್ ಲಿಂಚ್ ಹಿಡಿದುಕೊಳ್ಳುತ್ತಿದ್ದರು. ಅಲ್ಲಿ ಆ ಶ್ರೀಮಂತರು ಸ್ಟಾಕ್ ಬಗ್ಗೆ ಮಾತನಾಡುತ್ತಿರುವುದನ್ನು ಅವರು ಗಮನಿಸಿದರು.

ಕೆಲವೊಮ್ಮೆ ಮಲ್ಟಿ ಬ್ಯಾಗರ್ ರಿಟರ್ನ್ ಬಂದಿರುವುದರಿಂದ ಆಚರಣೆ(celebrate) ಕೂಡ ಮಾಡುತ್ತಿದ್ದರು. ಇಲ್ಲಿ ಪೀಟರ್ ಲಿಂಚ್, "ನನ್ನ ಕುಟುಂಬ ಷೇರು ಮಾರುಕಟ್ಟೆಯಿಂದ ದೂರವಿರಲು ಹೇಳುತ್ತಾರೆ. ಅದೇ ಈ ಶ್ರೀಮಂತರು ತನ್ನ ಕುಟುಂಬ ವರ್ಷಗಟ್ಟಲೆ ಕಷ್ಟಪಟ್ಟರು ಗಳಿಸಿದಷ್ಟು ಹಣವನ್ನು ಗಳಿಸುತ್ತಿದ್ದಾರೆ" ಎಂದು ಯೋಚಿಸಿದರು. ಪೀಟರ್ ಲಿಂಚ್ ಅವರು ಬೋಸ್ಟನ್(boston) ಕಾಲೇಜಿನಲ್ಲಿ ಓದಿದ್ದರು. ಅಲ್ಲಿ ಅವರು ಇತಿಹಾಸ, ಮನೋವಿಜ್ಞಾನ, ರಾಜಕೀಯ, ವಿಜ್ಞಾನ, ಮೀಮಾಂಸೆ(meta physics), ತರ್ಕದ ರೀತಿಯ ವಿಷಯಗಳಲ್ಲಿ ಅಧಿಕ ಅಂಕಗಳನ್ನು ತೆಗೆದುಕೊಂಡಿದ್ದರು. ಆದರೆ ಅವರಿಗೆ ಇತಿಹಾಸ ಮತ್ತು ಮನೋವಿಜ್ಞಾನ ತುಂಬಾ ಸಹಾಯ ಮಾಡಿತು ಎಂದು ಪುಸ್ತಕದಲ್ಲಿ ತಿಳಿಸಿದ್ದಾರೆ. ಷೇರು ಮಾರುಕಟ್ಟೆಗೆ ಬೇಕಿರುವ ಗಣಿತವನ್ನು ನೀವು ನಾಲ್ಕನೇ ತರಗತಿಯಲ್ಲೇ ಕಲಿತಿರುತ್ತೀರಾ.

ಪೀಟರ್ ಲಿಂಚ್ ಅವರು 1963 ರಲ್ಲಿ ತಮ್ಮ ಮೊದಲ ಸ್ಟಾಕ್ ಅನ್ನು ಆಯ್ಕೆ ಮಾಡುತ್ತಾರೆ ಮತ್ತು ಕೇವಲ 2 ವರ್ಷದಲ್ಲೇ ಆ ಸ್ಟಾಕ್ 5ರಷ್ಟು ರಿಟರ್ನ್ ನೀಡಿತು. ಇದರಿಂದ ಅವರು ಕಾಲೇಜಿನ ಶುಲ್ಕವನ್ನು ಪಾವತಿಸಿದರು. ಎರಡನೇ ವರ್ಷದಲ್ಲಿ ಅವರು ಫಿಡಿಲಿಟಿ ಮ್ಯೂಚುಯಲ್ ಫಂಡ್ ಕಂಪನಿಯಲ್ಲಿ ಇಂಟರ್ನ್ಶಿಪ್ ದೊರೆಯಿತು. ಅದು ಆ ಸಮಯದ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ಮ್ಯೂಚುಯಲ್ ಫಂಡ್ ಕಂಪನಿಯಾಗಿತ್ತು.

ಇದನ್ನು ಓದಿ: ಷೇರು ಮಾರುಕಟ್ಟೆಯಿಂದ ಉತ್ತಮ ರಿಟರ್ನ್ಸ್ ಪಡೆಯುವುದು ಹೇಗೆ?

Chapter 2: The wall street oxymorons

wall street oxymorons examples in kannada
wall street

ಈ ಚಾಪ್ಟರ್ನಲ್ಲಿ ವೈಯಕ್ತಿಕ ಹೂಡಿಕೆದಾರನ ಹತ್ತಿರ ಪ್ರೊಫೆಷನಲ್ ಮತ್ತು ಸಾಂಸ್ಥಿಕ(institutional) ಹೂಡಿಕೆದಾರರಿಗಿಂತ ಅಧಿಕ ಅನುಕೂಲ(advantage) ಇರುತ್ತದೆ ಎಂದು ತಿಳಿಸಿದ್ದಾರೆ. ಏಕೆಂದರೆ ಪ್ರೊಫೆಷನಲ್ ಹೂಡಿಕೆದಾರರಿಗೆ ಹಲವು ರೀತಿಯ ಅನುಮೋದನೆಗಳ(approvals) ಅವಶ್ಯಕತೆ ಇರುತ್ತದೆ. ಅದೇ ನಮ್ಮ ನಿಮ್ಮ ರೀತಿಯ ವೈಯಕ್ತಿಕ ಹೂಡಿಕೆದಾರರು ಯಾವಾಗ ಬೇಕೋ ಆಗ ಆಯ್ಕೆ ಮಾದಿದ ಕಂಪನಿಯ ಷೇರನ್ನು ಯಾರದೇ ಅನುಮೋದನೆಯಿಲ್ಲದೆ ಖರೀದಿಸಬಹುದು.

Chapter 3: Is this gambling or what?

is stocks and shares gambling in kannada
is stock gambling

ಇದರಲ್ಲಿ ಪೀಟರ್ ಲಿಂಚ್ ಅವರು ಸಾಲ(debt) ಮತ್ತು ಸ್ಟಾಕ್ನ ಹೂಡಿಕೆಯಲ್ಲಿರುವ ವ್ಯತ್ಯಾಸದ ಬಗ್ಗೆ ತಿಳಿಸಿದ್ದಾರೆ. ಡೆಬ್ಟ್ನಲ್ಲಿ ಹೂಡಿಕೆ ಮಾಡುವುದೆಂದರೆ ನೀವು ಒಬ್ಬರಿಗೆ ಸಾಲ ನೀಡಿದಂತಾಗಿದೆ. ನಿಮಗೆ ಅದಕ್ಕೆ ಬಡ್ಡಿ(interest) ಸಿಗುತ್ತದೆ. ನೀವು ಬ್ಯಾಂಕಿನಲ್ಲಿ ಎಫ್ಡಿ(fd) ಇಲ್ಲ ಬಾಂಡ್ಸ್(bonds) ಖರೀದಿಸಿದರೆ ಅವರಿಗೆ ಸಾಲ ನೀಡಿದಂತಾಗಿದೆ. ಇದರಿಂದ ಅವರು ಆ ಹಣವನ್ನು ಬಳಸಿಕೊಂಡು ಇನ್ನಷ್ಟು ಹಣ ಮಾಡಿ, ರಿಟರ್ನ್ನಲ್ಲಿ ನಿಮಗೆ ಬಡ್ಡಿಯನ್ನು ನೀಡುತ್ತಾರೆ. ಲೇಖಕರು ಡೆಬ್ಟ್ನಲ್ಲಿ ಹೂಡಿಕೆ ಮಾಡುವುದರಿಂದ ಲಾಭ ಇರುವುದಿಲ್ಲವೆನ್ನುತ್ತಾರೆ. ಏಕೆಂದರೆ 1922 ರಿಂದ ಡೆಬ್ಟ್ ಕೇವಲ 5% ಗಿಂತ ಕಡಿಮೆ ರಿಟರ್ನ್ ನೀಡಿದೆ. ಹೀಗಾಗಿ ಇದರಲ್ಲಿ ನೀವು ಹಣವನ್ನು ಗಳಿಸಲು ಸಾಧ್ಯವಿಲ್ಲ. ಅದೇ ನೀವು ಸ್ಟಾಕ್ನಲ್ಲಿ ಹೂಡಿಕೆ ಮಾಡಿದರೆ ರಿಟರ್ನ್ನ ಸಾಧ್ಯತೆ ಅಧಿಕವಿರುತ್ತಾರೆ.

1927 ರಿಂದ ಅಮೆರಿಕದ ಒಂದು ಸಾಮಾನ್ಯ ಸ್ಟಾಕ್ 9.8% ನಷ್ಟು ರಿಟರ್ನ್ ನೀಡಿದೆ. ಅಪಾಯದ(risk) ವಿಷಯದ ಬಗ್ಗೆ ತಿಳಿಸಿದರೆ, ಸ್ಟಾಕ್ನಲ್ಲಿ ಅಧಿಕ ಅಪಾಯವಿದೆ. ಏಕೆಂದರೆ ಯಾವುದೇ ಕಂಪನಿ ಯಾವಾಗಲಾದರೂ ಬೀಳಬಹುದು(declain). 20 ವರ್ಷದ ಹಿಂದೆ ಟಾಪ್ 5 ನಲ್ಲಿ ಇದ್ದ ಅನೇಕ ಕಂಪನಿಗಳು ಇಂದು ಮುಚ್ಚಿ ಹೋಗಿದೆ. ಹೀಗಾಗಿ ನೀವು ಅಧಿಕ ಅಪಾಯವನ್ನು ತೆಗೆದುಕೊಂಡು ಅಧಿಕ ಹಣವನ್ನು ಗಳಿಸಲು ಬಯಸುವಿರಾ ಇಲ್ಲ ಕಡಿಮೆ ಅಪಾಯವನ್ನು ತೆಗೆದುಕೊಂಡು ಕಡಿಮೆ ಹಣವನ್ನು ಗಳಿಸಲು ಬಯಸುವಿರಾ ಎಂಬುದು ನಿಮ್ಮ ಆಯ್ಕೆ ಆಗಿದೆ.

ಇದನ್ನು ಓದಿ: ನಿಷ್ಕ್ರಿಯ ಆದಾಯದ ಮೂಲಗಳು ಯಾವುವು?

Chapter 4: Passing the mirror test

passing the mirror test one up on wall street in kannada
real estate

ಪೀಟರ್ ಲಿಂಚ್ ಪ್ರಕಾರ ನೀವು ಸ್ಟಾಕ್ನಲ್ಲಿ ಹೂಡಿಕೆ ಮಾಡುವ ಮೊದಲು ಈ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು, ಅವೆಂದರೆ,

  • • ನನ್ನ ಹತ್ತಿರ ಸ್ವಂತ ಮನೆಯಿದೆಯೇ?(do i own a house?)
  • • ನನಗೆ ಹಣದ ಅವಶ್ಯಕತೆ ಇದೆಯೇ?(do i need the money?)
  • • ಸ್ಟಾಕ್ನಲ್ಲಿ ಯಶಸ್ವಿಯಾಗಲು ನನ್ನ ಹತ್ತಿರ ಆ ಕೌಶಲ್ಯಗಳು ಇದೆಯೇ?(do i have the personal qualities it takes to succeed?)

ಮೊದಲ ಪ್ರೆಶ್ನೆ, do I own a house, ಲೇಖಕರ ಪ್ರಕಾರ ನೀವು ಸ್ಟಾಕ್ನಲ್ಲಿ ಹೂಡಿಕೆ ಮಾಡುವ ಮೊದಲು ನಿಮ್ಮದೇ ಒಂದು ಸ್ವಂತ ಮನೆಯನ್ನು ಖರೀದಿಸಬೇಕು. ಏಕೆಂದರೆ ನೀವು ಮನೆಯನ್ನು ಖರೀದಿಸಿದಾಗ ತುಂಬಾ ಸಮಯಗಳಿಗೆ ಅದನ್ನು ಹಿಡಿದಿಟ್ಟುಕೊಂಡಿರುತ್ತೀರಾ(hold). ಇದರಿಂದ ನಿಮಗೆ ಒಂದು ಮಾನಸಿಕ ಸಂತೋಷ ಸಿಗುತ್ತದೆ. ರಿಯಲ್ ಎಸ್ಟೇಟ್(real estate) ಖರೀದಿಸುವ ಮೊದಲು ನೀವು ವಾರಗಟ್ಟಲೆ ಸಂಶೋಧನೆ ಮಾಡುತ್ತೀರಾ. ಲಾಭ, ನಷ್ಟದ ಬಗ್ಗೆ ತಿಳಿದುಕೊಳ್ಳುತ್ತೀರಾ. ಅದೇ ಸ್ಟಾಕ್ನಲ್ಲಿ ಹೂಡಿಕೆ ಮಾಡುವಾಗ ನೀವು ಈ ಎಲ್ಲವನ್ನು ನೋಡುವುದಿಲ್ಲ. ಹೀಗಾಗಿ ರಿಯಲ್ ಎಸ್ಟೇಟ್ನಲ್ಲಿ ಸ್ಟಾಕ್ಗಿಂತ ಅಧಿಕ ರಿಟರ್ನ್ಸ್ ಬರುತ್ತದೆ.

"they spend more time shopping for a good microwave oven than shopping for a good investment" ಎಂದು ಲೇಖಕರು ಹೇಳುತ್ತಾರೆ.

ಇದರಲ್ಲಿ ಷೇರು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸುವ ಜನಗಳ ಬಗ್ಗೆ ತಿಳಿಸಲಾಗುತ್ತಿದೆ. ಮೈಕ್ರೋವೇವ್ ಖರೀದಿಸಲು ಸಂಶೋಧನೆ ಮಾಡಲು ತೆಗೆದುಕೊಳ್ಳುವ ಸಮಯಕ್ಕಿಂತ ಕಡಿಮೆ ಸಮಯ ಸ್ಟಾಕ್ನ ಸಂಶೋಧನೆಗೆ ನೀಡುತ್ತಾರೆ.

ಇನ್ನೂ ಎರಡನೇ ಪ್ರೆಶ್ನೆ, do I need the money?, "only invest what you could afford to lose", ಎಂದು ಲೇಖಕರು ಹೇಳುತ್ತಾರೆ. ಅಂದರೆ ನಿಮಗೆ ನಷ್ಟವಾದರೂ ದಿನನಿತ್ಯದ ಬದುಕಿನಲ್ಲಿ ಸಮಸ್ಯೆ ತರದಿರುವಷ್ಟು ಹಣವನ್ನು ಮಾತ್ರ ನೀವು ಹೂಡಿಕೆ ಮಾಡಬೇಕು.

ಇನ್ನು ಮೂರನೇ ಪ್ರಶ್ನೆ, do I have the personal qualities, it takes to succeed?, ಷೇರು ಮಾರುಕಟ್ಟೆಯಿಂದ ಶ್ರೀಮಂತನಾಗಲು ನನ್ನ ಹತ್ತಿರ ಆ ಕೌಶಲ್ಯ ಇವೆಯೇ? ಇದು ಯಾವುದೇ ಆರ್ಥಿಕ ಕೌಶಲ್ಯ, ಪ್ರತಿಭೆ ಇಲ್ಲ ನಿರ್ದಿಷ್ಟ ಡಿಗ್ರಿ ಬಗ್ಗೆ ಆಗಿಲ್ಲ. ಲೇಖಕರು ತಾಳ್ಮೆ, ಸ್ವಾವಲಂಬನೆ(self reliance) ಮತ್ತು ಸಾಮಾನ್ಯ ಜ್ಞಾನದ(common sense) ರೀತಿಯ ಕೌಶಲ್ಯದ ಅವಶ್ಯಕತೆ ಇದೆ ಎಂದು ತಿಳಿಸುತ್ತಾರೆ. ವಾರೆನ್ ಬಫೆಟ್ ಪ್ರಕಾರ, "ನಿಮ್ಮ iq 160 ಇದ್ದರೆ, ಇದರಲ್ಲಿ 30 ರಿಂದ 40 ಪಾಯಿಂಟ್ಸ್ ಅನ್ನು ಬೇರೆಯವರಿಗೆ ನೀಡಿ" ಎನ್ನುತ್ತಾರೆ. ಏಕೆಂದರೆ ಇಷ್ಟೊಂದು ಬುದ್ಧಿವಂತಿಕೆ ನಿಮಗೆ ಹೂಡಿಕೆ ಮಾಡಲು ಬೇಡ, ಬದಲಿಗೆ ಇತರರ ಆಯ್ಕೆಯಿಂದ ಬೇರ್ಪಡುವಂತ(detach) ಸ್ವಭಾವವನ್ನು ಬೆಳೆಸಿಕೊಳ್ಳಬೇಕು.

ಇದನ್ನು ಓದಿ: ಸ್ಟಾಕ್‌ನಲ್ಲಿ ಹೂಡಿಕೆ ಮಾಡುವ ಮೊದಲು ಇವುಗಳು ತಿಳಿದಿರಲಿ

Chapter 5: Is this a good market? please don't ask

is it good if the stock market goes up in kannada
good market

"ನೀವು ಷೇರು ಹೂಡಿಕೆ ಮಾಡುವಾಗ ಕಂಪನಿಯಲ್ಲಿ ಹೂಡಿಕೆ ಮಾಡುತ್ತಿರುವಿರಾ ಎಂದು ಯೋಚಿಸಬೇಕು" ಎಂದು ಲೇಖಕರು ಹೇಳುತ್ತಾರೆ. "ಇಂದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸರಿಯಾದ ಸಮಯವೇ?" ಎಂಬ ಪ್ರಶ್ನೆಯನ್ನು ಅನೇಕರು ಲೇಖಕರಿಗೆ ಕೇಳುತ್ತಾರೆ. ಇದಕ್ಕೆ ಪೀಟರ್ ಲಿಂಚ್, "ಮಾರ್ಕೆಟ್ ರೀತಿಯ ಯಾವುದೇ ವಸ್ತು ಇರುವುದಿಲ್ಲ" ಎಂದು ಸರಳವಾಗಿ ಹೇಳುತ್ತಾರೆ ಮತ್ತು ಊಹಿಸುತ್ತಿರುವವರು(predict) ಭಾರಿ ಹಣವನ್ನು ಗಳಿಸಲು ಸಾಧ್ಯವಿಲ್ಲ. ಹೀಗಾಗಿ ಹಿಂಜರಿತ, ಉತ್ಕರ್ಷದ ಮಾರುಕಟ್ಟೆ, ಹಣದುಬ್ಬರ, ಬಡ್ಡಿ, ಕೇಂದ್ರ ಬ್ಯಾಂಕ್ ನೀತಿಗಳ ಮೇಲೆ 100% ಗಮನ ಕೊಡುವುದನ್ನು ಬಿಟ್ಟು ಕಂಪನಿಗಳ ಮೇಲೆ ಗಮನ ಹರಿಸಬೇಕು. ಇದುವೇ ಪಾರ್ಟ್ 1 ಆಗಿದೆ.

Part 2: Picking winners.

Chapter 6: Stalking the tenbagger

about tenbagger stalking in one up on wall street in kannada
tenbagger

ಯಾವ ಸ್ಟಾಕ್ ಭವಿಷ್ಯದಲ್ಲಿ 10x ನಷ್ಟು ರಿಟರ್ನ್ ನೀಡಲಿದೆಯೋ ಅದನ್ನು ಟೆನ್‌ಬ್ಯಗರ್ ಸ್ಟಾಕ್ ಎನ್ನಲಾಗುತ್ತದೆ. ಈ ಚಾಪ್ಟರ್ನಲ್ಲಿ ಟೆನ್‌ಬ್ಯಗರ್ ಸ್ಟಾಕ್ಗಳನ್ನು ನೋಡಲು ಹೇಳುತ್ತಾರೆ. ಅವುಗಳ ಬಗ್ಗೆ ಓದಿ, ಅವರ ವಸ್ತುಗಳ(product) ಬಗ್ಗೆ ತಿಳಿದುಕೊಳ್ಳಿ. ಅವರ ಆಡಳಿತವನ್ನು ನೋಡಿ. ಲೇಖಕರು ಇದರಲ್ಲಿ ಒಂದು ದೊಡ್ಡ ಸಮಸ್ಯೆಯನ್ನು ಪರಿಹರಿಸಲು ಸರಳವಾದ ಪರಿಹಾರವನ್ನು ತಿಳಿಸಿದ್ದಾರೆ. "ನಾವು ಯಾವಾಗಲೂ ಯಾವ ಕಂಪನಿಯ ಸಂಶೋಧನೆ ಮಾಡಬೇಕು?", "ನಾನು ಈ ಮುಂಚೆ ಯಾವ ಕಂಪನಿಯ ಬಗ್ಗೆ ಸಂಶೋಧನೆ ಮಾಡಿಲ್ಲ?", ಹಾಗಿದ್ದರೆ "ಯಾವ ಕಂಪನಿಯಲ್ಲಿ ಹೂಡಿಕೆ ಮಾಡಬೇಕು" ಅದಕ್ಕೆ ಲೇಖಕರು, "the best place to start looking for the tenbagger is close to your home" ಎಂದು ಹೇಳುತ್ತಾರೆ. ನೀವು ದಿನನಿತ್ಯ ಬಳಸುವ ವಸ್ತುಗಳ ಕಂಪನಿಯಿಂದಲೇ ಪ್ರಾರಂಭಿಸಿ.

ಉದಾಹರಣೆಗೆ, ನೀವು ಬೆಳಗ್ಗೆ ಎದ್ದ ತಕ್ಷಣ ಕಾಫಿ, ಟೀ ಕುಡಿಯುತ್ತಿದ್ದಾರೆ ಆ ಕಾಫಿ ಅಥವಾ ಟೀ ಕಂಪನಿಯ ಶೇರ್ ಅನ್ನು ಗೂಗಲ್ನಲ್ಲಿ ಹುಡುಕಿ. ನೀವು ಟಾಟಾ ಟೀ(tata tea) ಕಂಪನಿಯ ಟೀ ಕುಡಿಯುತ್ತಿದ್ದಾರೆ, ಗೂಗಲ್ನಲ್ಲಿ ಟಾಟಾ ಕಾಂಜುಮರ್ ಲಿಮಿಟೆಡ್(tata consumer limited) ಎಂದು ಟೈಪ್ ಮಾಡಿ. 14 ಜುಲೈ 2023 ರಂದು ಇವರ ಒಂದು ಷೇರಿನ ಬೆಲೆ 852 ರೂಪಾಯಿ ಇದೆ. ಐದು ವರ್ಷದಲ್ಲಿ ಈ ಕಂಪನಿ 173.57 ರಷ್ಟು ರಿಟರ್ನ್ ನೀಡಿದೆ. ಇದೇ ರೀತಿ ನೀವು ದಿನನಿತ್ಯ ಬಳಸುವ ಪ್ರತಿಯೊಂದು ವಸ್ತುವಿನ ಕಂಪನಿಯ ಶೇರ್ ಅನ್ನು ನೋಡಲು ಪ್ರಾರಂಭಿಸಿ. ಇದರಿಂದ ನಿಮಗೆ ಷೇರು ಮಾರುಕಟ್ಟೆಯ ಮೇಲೆ ಆಸಕ್ತಿ ಬರುತ್ತದೆ. ನೀವು ವ್ಯಾಪಾರವನ್ನು ಅರ್ಥ ಮಾಡಿಕೊಳ್ಳಬಹುದಾದ ಕಂಪನಿಯಲ್ಲಿ ಮಾತ್ರ ಹೂಡಿಕೆ ಮಾಡಿ ಎಂದು ಲೇಖಕರು ಹೇಳುತ್ತಾರೆ.

ಇದನ್ನು ಓದಿ: ಈ ಸರಳ ತಂತ್ರದ ಮೂಲಕ ಮಾರುಕಟ್ಟೆಯನ್ನು ಸೋಲಿಸಿ

Chapter 7: I have got it, I have got it, what is it?

what are the 6 categories in one up on wall street in kannada
6 categories

ಹಿಂದಿನ ಚಾಪ್ಟರ್‌ನಲ್ಲಿ ಲೇಖಕರು ಕಠಿಣವಿರುವ ವಿಷಯವನ್ನು ಸುಲಭವಾಗಿ ವಿವರಿಸಿದ್ದಾರೆ. ಅಂದರೆ, ನೀವು ಅರ್ಥಮಾಡಿಕೊಳ್ಳುವ ಕಂಪನಿಯಲ್ಲಿ ಹೂಡಿಕೆ ಮಾಡಲು ಹೇಳಿದರು. ಹಾಗಂತ ನೀವು ಒಂದು ಚಾಕಲೇಟ್ ಇಷ್ಟ ಪಟ್ಟರೆ ಎಲ್ಲ ರೀತಿಯ ಚಾಕ್ಲೇಟ್ ಕಂಪನಿಯಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ನೀವು ಇಲ್ಲಿ ಆ ಕಂಪನಿ ಮುಂದಿನ ದಿನದಲ್ಲಿ ಬೆಳೆಯಲಿದೆಯೇ ಎಂದು ತಿಳಿದುಕೊಳ್ಳಬೇಕು. ಇದನ್ನು ಅರ್ಥ ಮಾಡಿಕೊಳ್ಳಲು ಲೇಖಕರು 6 ಗುಂಪಿನ(category) ಸ್ಟಾಕ್ಸ್ ಬಗ್ಗೆ ತಿಳಿಸಿದ್ದಾರೆ.

• The slow growers

what is a slow grower stock example in kannada
slowgrowers

ಈ ಕಂಪನಿಗಳು ತುಂಬಾ ಹಳೆಯದಾಗಿದ್ದು ತುಂಬಾ ದೊಡ್ಡದಿರುತ್ತವೆ. ಇವುಗಳು ದೇಶದ ಜಿಡಿಪಿಗಿಂತ ಬೇಗನೆ ಬೆಳೆಯುತ್ತದೆ. ಇವುಗಳ ಪ್ರಾರಂಭ ವೇಗದ ಬೆಳವಣಿಗೆಯಿಂದಾಗಿತು, ಆಗ ಇವು ಚಿಕ್ಕ ಕಂಪನಿ ಆಗಿತ್ತು, ಆದರೆ ನಿಧಾನವಾಗಿ ಮಾರುಕಟ್ಟೆಯನ್ನು ಸ್ವಾಧೀನಪಡೆಸಿಕೊಂಡವು, ವಸ್ತುವನ್ನು ಸುಧಾರಿಸಿಕೊಂಡವು, ಮಾರಾಟವನ್ನು(sales) ಹೆಚ್ಚಿಸಿಕೊಂಡವು ಮತ್ತು ತನ್ನ ಹೂಡಿಕೆದಾರರಿಗೆ ಒಳ್ಳೆಯ ರಿಟರ್ನ್ ನೀಡಿತು. ಆದರೆ ಒಂದು ನಿರ್ದಿಷ್ಟ ಉದ್ಯಮ ಮಲಗಿದರೆ(lay down) ಕಂಪನಿಗಳ ಬೆಳವಣಿಗೆ ಕೂಡ ನಿಲ್ಲುತ್ತದೆ.

ಒಂದು ಕಂಪನಿ ಅತಿ ಹೆಚ್ಚು ಡಿವಿಡೆಂಡ್ ನೀಡುತ್ತಿದರೆ, ಅದು ನಿಧಾನವಾಗಿ ಬೆಳೆಯುವ ಕಂಪನಿ ಆಗಿರುತ್ತದೆ ಎಂದು ಲೇಖಕರು ಹೇಳುತ್ತಾರೆ. ಕಂಪನಿ ಒಂದು ಹೊಸ ಮಾರ್ಗವನ್ನು ಹುಡುಕಲು ಸಾಧ್ಯವಾಗದಿದ್ದಾಗ, ಅವರ ಹಣವನ್ನು ಡಿವಿಡೆಂಡ್ ರೀತಿ ಹೂಡಿಕೆದಾರರಿಗೆ ನೀಡುತ್ತಾರೆ. ಭಾರತದಲ್ಲಿ ಕೋಲ್ ಇಂಡಿಯಾ ಲಿಮಿಟೆಡ್(coal india), ಟಾಟಾ ಸ್ಟೀಲ್(tata steel), ಹಿಂದುಸ್ತಾನ್ ಜಿಂಕ್(hindustan zinc) ನಿಧಾನವಾಗಿ ಬೆಳೆಯುವ ಸ್ಟಾಕ್ನ ಉದಾಹರಣೆಗಳಾಗಿವೆ.

ಇದನ್ನು ಓದಿ: ಪ್ರಮುಖ 7 ಹಣದ ಮೇಲಿನ ಪಾಠಗಳು

• The stalwarts

what is a stalwart in stocks in kannada
stalwarts

ಆರ್ಥಿಕವಾಗಿ ಗಟ್ಟಿ ಇರುವ ಒಳ್ಳೆಯದಾಗಿ ಸ್ಥಾಪಿಸಿರುವ, ಬ್ರಾಂಡ್ ಖ್ಯಾತಿ ಇರುವ ಕಂಪನಿಯನ್ನು ಧೀಮಂತರು(stalwarts) ಎನ್ನಲಾಗುತ್ತದೆ. ಇವರದ್ದು ದೊಡ್ಡ ಮಾರುಕಟ್ಟೆ ಶೇರ್ ಇದ್ದು ಅನೇಕ ವರ್ಷ ಸ್ಥಿರವಾದ ಬೆಳವಣಿಗೆಯನ್ನು ಸಾಧಿಸಿರುತ್ತಾರೆ. ಉದಾಹರಣೆಗೆ ರಿಲಿಯನ್ಸ್ ಇಂಡಸ್ಟ್ರಿ(reliance industry), ಟಿಸಿಎಸ್(tcs), ಎಚ್ಡಿಎಫ್ಸಿ(hdfc), ಇನ್ಫೋಸಿಸ್(infosys) ಬರುತ್ತವೆ. ಈ ರೀತಿಯ ಧೀಮಂತ ಕಂಪನಿಗಳಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಕಠಿಣ ಆರ್ಥಿಕ ಸಮಯದಲ್ಲಿ ಸಹಾಯ ಸಿಗುತ್ತದೆ ಎನ್ನುತ್ತಾರೆ. ಈ ಕಂಪನಿಗಳು ನಿಮಗೆ 10 ರಿಂದ 12 ರಷ್ಟು ರಿಟರ್ನ್ ನೀಡುತ್ತದೆ ಮತ್ತು ಸ್ಟಾಕ್ಸ್ನ ಈ ಗುಂಪಿನಿಂದ ನೀವು ಯೋಗ್ಯ(decent) ಲಾಭವನ್ನು ಗಳಿಸಬಹುದು.

• The fast growers

what is a fast growers stock example in kannada
fastgrowers

ಫಾಸ್ಟ್ ಗ್ರೋವರ್ಸ್ ಚಿಕ್ಕ ಮತ್ತು ಆಕ್ರಮಣಕಾರಿ ಕಂಪನಿಯಾಗಿರುತ್ತದೆ. ಇವು 20 ರಿಂದ 25 ರಷ್ಟು ಬೆಳೆಯಬಹುದು. ಈ ಕಂಪನಿಗಳು ಹೆಚ್ಚಾಗಿ ಬೆಳೆಯುತ್ತಿರುವ ಇಂಡಸ್ಟ್ರಿಯಲ್ಲಿ ಇರುತ್ತವೆ. ಇವುಗಳಿಗೆ ಕೆಲವು ಉದಾಹರಣೆ ತಿಳಿಸಬೇಕೆಂದರೆ ಬಜಾಜ್ ಫೈನಾನ್ಸ್(bajaj finance), ಟೈಟಾನ್(titan) ಮತ್ತು ಪೇಜ್ ಇಂಡಸ್ಟ್ರಿ(page industry) ಆಗಿವೆ. ಈ ಉದಾಹರಣೆ ಯಾವುದೇ ರೀತಿಯ ಸ್ಟಾಕ್ ಶಿಫಾರಸು ಆಗಿಲ್ಲ.

• The cyclicals

what is a cyclicals stock example in kannada
cyclicals

ಈ ರೀತಿಯ ಕಂಪನಿಗಳಲ್ಲಿ ಮಾರಾಟ ಮತ್ತು ಲಾಭ ನಿಯಮಿತವಾಗಿ ಒಮ್ಮೆಲೆ ಬೀಳುತ್ತವೆ ಇಲ್ಲ ಒಮ್ಮೆಲೆ ಏಳುತ್ತದೆ. ಉದಾಹರಣೆಗೆ ಏರ್ಲೈನ್ಸ್(airlines), ಆಟೋ ಇಂಡಸ್ಟ್ರಿ(auto industry), ಟೈಮ್ ಇಂಡಸ್ಟ್ರಿ(time industry), ಸ್ಟೀಲ್(steel) ಕಂಪನಿ ಮತ್ತು ಕೆಮಿಕಲ್(chemical) ಕಂಪನಿ ಬರುತ್ತದೆ. ಆರ್ಥಿಕತೆಯಲ್ಲಿ ಬೆಳವಣಿಗೆ ಕಂಡಾಗ ಈ ಸಿಕ್ಲಿಕಲ್ಸ್ ಕಂಪನಿಗಳು ಒಳ್ಳೆಯ ರಿಟರ್ನ್ ನೀಡುತ್ತವೆ. ಅದೇ ಆರ್ಥಿಕತೆಯಲ್ಲಿ ನಿಧಾನವಾದರೆ(slow down) ಈ ಕಂಪನಿಗಳು ಬೇಗನೇ ಬೀಳುತ್ತವೆ ಮತ್ತು ಹೂಡಿಕೆದಾರರಿಗೆ ಅಧಿಕ ನಷ್ಟವಾಗುತ್ತದೆ. ಸಿಕ್ಲಿಕಲ್ಸ್ ಕಂಪನಿಗಳಲ್ಲಿ ಹೂಡಿಕೆ ಮಾಡಲು ಸಮಯದ(timing) ಅವಶ್ಯಕತೆ ತುಂಬಾ ಇದೆ. ನೀವು ತಪ್ಪಾದ ಸಮಯದಲ್ಲಿ ಹೂಡಿಕೆ ಮಾಡಿದರೆ ನಿಮ್ಮ ನಷ್ಟವನ್ನು ಗುಣಮುಖ(recover) ಮಾಡಲು ಎಷ್ಟೋ ವರ್ಷಗಳು ಬೇಕಾಗುತ್ತದೆ.

ಇದನ್ನು ಓದಿ: ಆರಂಭಿಕ ಆರ್ಥಿಕ ಸ್ವತಂತ್ರಕ್ಕಾಗಿ 5 ನಿಯಮಗಳು

• The turnarounds

what is a turnarounds stock example in kannada
turnarounds

ಈ ಸ್ಟಾಕ್ಗಳು ಈಗ ಹೋರಾಟ ಮಾಡುತ್ತಿರುತ್ತವೆ, ಆದರೆ ಭವಿಷ್ಯದಲ್ಲಿ ಸುಧಾರಿಸಿಕೊಳ್ಳುವ ಅಧಿಕ ಸಂಭಾವ್ಯ(potensial) ಇರುತ್ತವೆ, ಅದು ಆಡಳಿತದ ತಂತ್ರ ಅಥವಾ ಮಾರುಕಟ್ಟೆಯ ಸ್ಥಿತಿಯಿಂದಾಗಿರಬಹುದು. ಲೇಖಕರು ಈ ರೀತಿಯ ಸ್ಟಾಕ್ನಿಂದ ದೂರವಿರಲು ಹೇಳುತ್ತಾರೆ. ಏಕೆಂದರೆ ತುಂಬಾ ಕಡಿಮೆ ಕಂಪನಿಗಳು ಮತ್ತೊಮ್ಮೆ ಗುಣಮುಖವಾಗಲು ಸಾಧ್ಯವಾಗುತ್ತದೆ.

• The asset play

what is an asset play in stocks in kannada
asset play

ಈ ರೀತಿಯ ಕಂಪನಿಗಳಲ್ಲಿ ತುಂಬಾ ಬೆಲೆಬಾಳುವ(valuable) ಒಂದು ಅಸೆಟ್ ಇರುತ್ತದೆ. ಅದು ಅವರಿಗೆ ಭವಿಷ್ಯದಲ್ಲಿ ಸ್ಪರ್ಧಾತ್ಮಕ ಅನುಕೂಲತೆ(competative advantage) ನೀಡುತ್ತದೆ. ಅದು ವೆಚ್ಚ, ಹೂಡಿಕೆಯಾ ಆಸ್ತಿ, ಯಂತ್ರ ಯಾವುದಾದರೂ ಆಗಿರಬಹುದು. ಈ ಕಂಪನಿಗಳು ಸದ್ಯಕ್ಕೆ ಕಡಿಮೆ ಮೌಲ್ಯಯುತವಾಗಿರುತ್ತದೆ(undervalued) ಮತ್ತು ಅನೇಕರು ಇದರ ಬಗ್ಗೆ ತಿಳಿದುಕೊಂಡಿರುವುದಿಲ್ಲ.

Chapter 8: The perfect stock, what a deal

perfect stock one up on wall street in kannada
perfect stock

ಒಬ್ಬ ಮೂರ್ಖ(idiot) ಕಂಪನಿಯನ್ನು ನಿಭಾಯಿಸಿ ವ್ಯಾಪಾರ ಬೆಳೆಯುತ್ತಿದ್ದಾರೆ, ಅದು ಒಂದು ಪರಿಪೂರ್ಣ(perfect) ಸ್ಟಾಕ್ ಆಗಿದೆ ಮತ್ತು "ನಾನು ಆ ರೀತಿಯ ಕಂಪನಿಗಳಲ್ಲೇ ಹೂಡಿಕೆ ಮಾಡುವ ಕನಸನ್ನು ಕಾಣುವೆನು" ಎಂದು ಲೇಖಕರು ಹೇಳುತ್ತಾರೆ. ಒಂದು ಕಂಪನಿ ಪರಿಪೂರ್ಣವಾಗಿರಲು ಈ 13 ಗುಣಗಳು ಇರಬೇಕು ಎಂದು ಪೀಟರ್ ಲಿಂಚ್ ಹೇಳುತ್ತಾರೆ.

• It sounds dull or even better, ridiculous

ಒಂದು ಪರಿಪೂರ್ಣ ಸ್ಟಾಕ್ ಇಲ್ಲ ಕಂಪನಿ ಒಂದು ಸರಳವಾದ ಪರಿಪೂರ್ಣ ವ್ಯಾಪಾರವನ್ನು ಮಾಡುತ್ತಿರಬೇಕು. ಅದರ ಹೆಸರು ತುಂಬಾ ನೀರಸವಾಗಿರಬೇಕು(boring). ಉದಾಹರಣೆಗೆ ಏಷಿಯನ್ ಪೇಂಟ್ಸ್(asian paints), ಹೆಚ್ಡಿಎಫ್ಸಿ ಬ್ಯಾಂಕ್(hdfc bank).

ಇದನ್ನು ಓದಿ: Sip vs Lumpsum ಹೂಡಿಕೆಗೆ ಯಾವುದು ಉತ್ತಮ?

• It does something dull

ನೀರಸವಾದ ಕಂಪನಿ, ನೀರಸ ಹೆಸರಿನ ಜೊತೆಗೆ ನೀರಸ ಕೆಲಸಗಳನ್ನು ಮಾಡುತ್ತಿದ್ದರೆ ಅದು ಪರಿಪೂರ್ಣ ಹೊಂದಾಣಿಕೆಯಾಗಿದೆ.

• It does something disagreeable

ಅಂದರೆ ಪ್ರತಿಯೊಬ್ಬರಿಗೂ ಸಾಧ್ಯವಾಗದನ್ನು ಆ ಕಂಪನಿ ಮಾಡುತ್ತಿರುವುದಾಗಿದೆ.

• It is a spinoff

ಒಂದು ಕಂಪನಿ, ಇನ್ನೊಂದು ಸ್ವತಂತ್ರ ಕಂಪನಿಯನ್ನು ಪ್ರಾರಂಭಿಸಿದ್ದಾರೆ. ಅದು ಸ್ಪಿನ್ ಆಫ್ ಕಂಪನಿಯಾಗಿದೆ. ಉದಾಹರಣೆಗೆ ಮಾರುತಿ ಸುಜುಕಿ(maruthi suzuki). ಮುಂಚೆ ಈ ಕಂಪನಿ ಸರ್ಕಾರದ ಸ್ವಾಧೀನದಲ್ಲಿತ್ತು, ಅದನ್ನು ಆಗ ಮಾರುತಿ ಉದ್ಯೋಗ ಲಿಮಿಟೆಡ್(maruthi udyog limited) ಎಂದು ಕರೆಯಲಾಗುತ್ತಿತ್ತು. ಆದರೆ 2003 ರಂದು ಸರ್ಕಾರ ಇದರ ಗರಿಷ್ಠ ರಾಶಿಯನ್ನು(stacks) ಜಪಾನಿನ ವಾಹನ ತಯಾರಕ ಕಂಪನಿಯಾದ ಸುಜುಕಿ ಮೋಟಾರ್ ಕಾರ್ಪೊರೇಷನ್ಗೆ(suzuki motor corporation) ಮಾರಿತು. ಆ ಕಂಪನಿ ನಂತರ ತನ್ನದೇ ಆದ ಸಾರ್ವಜನಿಕವಾಗಿ ಪಟ್ಟಿಮಾಡಲಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್(maruthi suzuki india limited) ಕಂಪನಿಯನ್ನು ಮಾಡಿತು. ಪೀಟರ್ ಲಿಂಚ್ ಈ ರೀತಿಯ ಸ್ಪಿನ್ ಆಫ್ ಕಂಪನಿಗಳನ್ನು ಉಲ್ಲೇಖಿಸುತ್ತಾರೆ.

ಇದನ್ನು ಓದಿ: How to Invest in 20s

• The institutions do not own it and the analyst do not follow it

ಒಂದು ಕಂಪನಿಯ ಸ್ಟಾಕ್ ಸಂಸ್ಥೆ ಅಥವಾ ಆರ್ಥಿಕ ವಿಶ್ಲೇಷಕರ ಹತ್ತಿರ ಇಲ್ಲವಾದಲ್ಲಿ ಅವುಗಳಲ್ಲಿ ನಾವು ಸಾಮಾನ್ಯ ವ್ಯಕ್ತಿಗಳು ಒಳ್ಳೆಯ ರಿಟರ್ನ್ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.

• The rumors around: it is involved with toxic waste and the mafia

ಒಂದು ಕಂಪನಿಯ ತಪ್ಪಾದ ವದಂತಿಗಳು ಹರಡಿದರೆ, ಜನರು ಅದರಲ್ಲಿ ಹೂಡಿಕೆ ಮಾಡುವುದಿಲ್ಲ. ಆದರೆ ಆ ಕಂಪನಿ ನಿಜವಾದ(genuine) ವ್ಯಾಪಾರವನ್ನು ಮಾಡುತ್ತಿದ್ದಾರೆ, ಅದು ನಿಮಗೆ ಒಂದು ಅವಕಾಶವಾಗಿದೆ.

• There's something depressing about it

ಅಂದರೆ ಆ ಕಂಪನಿ ನಿರುತ್ಸಾಹ ಇರುವ ಕೆಲಸವನ್ನು ಮಾಡುವುದಾಗಿದೆ. ಉದಾರಣೆಗೆ ಅಂತಿಮ ಸಂಸ್ಕಾರ ಮಾಡುವುದಾಗಿದೆ.

• It is a no growth industry

ಆ ಇಂಡಸ್ಟ್ರಿಯಲ್ಲಿ ಸದ್ಯಕ್ಕೆ ಅತಿ ಹೆಚ್ಚು ಬೆಳವಣಿಗೆ ಕಾಣಿಸುತ್ತಿರುವುದಿಲ್ಲ. ಏಕೆಂದರೆ ಬಹಳಷ್ಟು ಬಾರಿ ಹೆಚ್ಚಿನ ಬೆಳವಣಿಗೆ ಇರುವ ಇಂಡಸ್ಟ್ರಿಗಳಲ್ಲಿ ಹೂಡಿಕೆ ಮಾಡುವುದರಿಂದ ಭಾರೀ ಕುಸಿತ ಕಾಣುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಲೇಖಕರು ಸದ್ಯಕ್ಕೆ ಬೆಳವಣಿಗೆಯ ಸಾಮರ್ಥ್ಯ ಕಡಿಮೆ ಇರುವ ಇಂಡಸ್ಟ್ರಿಗಳನ್ನು ಆಯ್ಕೆ ಮಾಡುತ್ತಾರೆ.

ಇದನ್ನು ಓದಿ: "Secrets of the Millionaire Mind" ಪುಸ್ತಕದ ಸಾರಾಂಶ

• It got a niche

ಅಂದರೆ ಆ ಕಂಪನಿಯ ಕೆಲವು ನೈಚೆ ಇದೆ. ಉದಾಹರಣೆಗೆ ಮೊಬೈಲ್ ಇಂಟರ್ನೆಟ್ ಬಗ್ಗೆ ತಿಳಿಸಿದ್ದಾರೆ ಭಾರತದಲ್ಲಿ ಎರಡು ಮುನ್ನಡೆಯುತ್ತಿರುವ ಕಂಪನಿಗಳು ಇದೆ, ಅದೆಂದರೆ ಏರ್ಟೆಲ್ ಮತ್ತು ಜಿಯೋ. ಲೇಖಕರ ಪ್ರಕಾರ ನೈಚೆ ವ್ಯಾಪಾರದಲ್ಲಿ ಅಧಿಕ ಗಳಿಸಲಾಗುತ್ತದೆ. ಏಕೆಂದರೆ ಇದರಲ್ಲಿ ಪ್ರತಿಸ್ಪರ್ಧಿ ಬೇಗನೆ ಬರುವುದಿಲ್ಲ. ಬಂದರು ಅಧಿಕ ದಿನ ಉಳಿಯಲು ಸಾಧ್ಯವಾಗುವುದಿಲ್ಲ.

• People have to keep buying it

ಜನರು ದಿನನಿತ್ಯ ಬಳಸುವಂತಹ ವಸ್ತುಗಳನ್ನು ಆ ವ್ಯಾಪಾರದಲ್ಲಿ ಹುಡುಕಬೇಕು. ಲೇಖಕರು, "ತಂಪು ಪಾನೀಯ, ಲೇಸರ್ ಬ್ಲೇಡ್ ಮತ್ತು ಸಿಗರೇಟ್ ಕಂಪನಿಗಳಲ್ಲಿ ಹೂಡಿಕೆ ಮಾಡಲು ಬಯಸುತ್ತೇನೆ ಹೊರತು ತಿಂಗಳು ಇಲ್ಲ ವರ್ಷದಲ್ಲಿ ಒಮ್ಮೆ ಕಂಪನಿಯ ವಸ್ತುಗಳನ್ನು ಖರೀದಿಸುವ ಕಂಪನಿಯಲಲ್ಲ" ಎಂದು ಹೇಳುತ್ತಾರೆ.

• It is a user of technology

ಕಂಪನಿ ನೈಸರ್ಗಿಕ ಸಂಪನ್ಮೂಲಗಳ(natural resources) ಬದಲು ತಂತ್ರಜ್ಞಾನವನ್ನು(technology) ಬಳಸುತ್ತಿದ್ದಾರೆ ಅದು ಉತ್ತಮ ಕಂಪನಿಯಾಗಿದೆ. ಇದು ಏಕೆಂದರೆ ತಂತ್ರಜ್ಞಾನ ಸಮಯದ ಜೊತೆ ಇನ್ನಷ್ಟು ಉತ್ತಮವಾಗುತ್ತಿದೆ ಮತ್ತು ನೈಸರ್ಗಿಕ ಸಂಪನ್ಮೂಲಗಳು ಕಡಿಮೆಗೊಳ್ಳುತ್ತಿದೆ. ಹೀಗಾಗಿ ದೀರ್ಘಾವಧಿಯಲ್ಲಿ ತಂತ್ರಜ್ಞಾನವನ್ನು ತನ್ನ ವ್ಯಾಪಾರದಲ್ಲಿ ಅಳವಡಿಸಿಕೊಂಡ ಕಂಪನಿಗಳು ಮಾತ್ರ ಉಳಿಯುತ್ತವೆ.

• The insiders are buying

ಅಂದರೆ ಆ ಕಂಪನಿಯ ಉದ್ಯೋಗಿಗಳು ಅದರ ಶೇರ್ಗಳನ್ನು ಖರೀದಿಸುತ್ತಿದ್ದಾರೆ. ಆ ಕಂಪನಿ ಮುಂದೆ ಬೆಳೆಯಲಿದೆ ಎಂಬುದಕ್ಕೆ ಒಂದು ಸೂಚನೆಯಾಗಿದೆ.

ಇದನ್ನು ಓದಿ: ಶ್ರೀಮಂತರಿಗೆ ತಿಳಿದಿರುವ ಮತ್ತು ಬಡವರಿಗೆ ತಿಳಿದಿರದ ಹಣದ 5 ನಿಯಮಗಳು

• The company is buying back shares

ಕಂಪನಿ ತನ್ನದೇ ಷೇರನ್ನು ಖರೀದಿಸಿದರೆ ಅದು ಹೂಡಿಕೆದಾರನಿಗೆ ಒಂದು ಒಳ್ಳೆಯ ಸುದ್ದಿಯಾಗಿದೆ. ಇದರಿಂದ ಷೇರಿನ ಸಂಖ್ಯೆ ಕಡಿಮೆಯಾಗಿ, ಇಪಿಎಸ್(eps) ಹೆಚ್ಚುತ್ತಾ ಹೋಗುತ್ತದೆ. ಇದರಿಂದ ಸ್ಟಾಕ್ ಬೆಲೆ ಕೂಡ ಹೆಚ್ಚುತ್ತದೆ.

ಪರಿಪೂರ್ಣ ಸ್ಟಾಕ್ನಲ್ಲಿ ಇರುವ 13 ಗುಣಗಳು ಇವುಗಳಾಗಿವೆ. ಉಳಿದ ಚಾಪ್ಟರ್ನ ಸಾರಾಂಶವನ್ನು ನಾವು ಪಾರ್ಟ್ 2 ನಲ್ಲಿ ಮುಂದುವರೆಸಲಿದ್ದೇವೆ. ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments