Website designed by @coders.knowledge.

Website designed by @coders.knowledge.

10 Deadliest Creatures You’ll Find in the Ocean | ಸಾಗರದಲ್ಲಿ ನೀವು ಕಾಣುವ ಹತ್ತು ಮಾರಕ ಜೀವಿಗಳು

 0

 Add

Please login to add to playlist

Watch Video

ಭೂಮಿಯ ಮೇಲ್ಮೈ 70%ಕ್ಕಿಂತಲೂ ಹೆಚ್ಚು ನೀರಿನಿಂದ ಆವೃತ್ತವಾಗಿದೆ ಮತ್ತು ಇದರ ಬಹುಪಾಲು ನಮ್ಮ ಸಾಗರ ಮತ್ತು ಸಮುದ್ರದಿಂದ ಬಂದಿದೆ. ವಾಸ್ತವವಾಗಿ ಪೆಸಿಫಿಕ್ ಮಹಾಸಾಗರವು ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದ್ದನ್ನು ತೆಗೆದುಕೊಳ್ಳುತ್ತದೆ.

ಸಾಗರವನ್ನು ತಮ್ಮ ಮನೆ ಎಂದು ಕರೆಯುವ 10 ಲಕ್ಷಕ್ಕಿಂತಲೂ ಹೆಚ್ಚು ವಿಭಿನ್ನ ಜಾತಿಯ ಜೀವಿಗಳಿವೆ. ಆದರೆ ವಿಜ್ಞಾನಿಗಳು ಅಂದಾಜು ಮಾಡಿರುವ ಪ್ರಕಾರ ಇನ್ನು 90 ಲಕ್ಷ ಜಾತಿಗಳು ಪತ್ತೆಯಾಗಿಲ್ಲ.

ಸಾಗರವು ವಾಸಿಸಲು ಬಹಳ ಅಪಾಯಕಾರಿ ಸ್ತಳವಾಗಿದೆ, ಇದಕ್ಕೆ ಕಾರಣ ಅಲ್ಲಿ ಇರುವ ಪ್ರಾಣಾಂತಿಕ ಜೀವಿಗಳು. ಸಾಗರದಲ್ಲಿ ನೀವು ಎದುರಿಸಬಹುದಾದ ಹತ್ತು ಮಾರಣಾಂತಿಕ ಜೀವಿಗಳ ನೋಟ ಇಲ್ಲಿದೆ.

ಇದನ್ನು ಓದಿ: ನಿಮಗೆ ಸಾಗರದ ಬಗ್ಗೆ ಗೊತ್ತಿರದ ಏಳು ಗುಪ್ತ ಸಂಗತಿಗಳು

1. ಪಫರ್ ಫಿಶ್.

dangerous puffer fish in kannada
puffer fish

ಪಫರ್ ಫಿಶ್ ಅಪಾಯಕಾರಿ ಇಲ್ಲದಂತೆ ತೋರುತ್ತದೆಯಾದರು ಅವು ಹೊಂದಿರುವ ಟೆಟ್ರೊಡೊಟಾಕ್ಸಿನ್ ಪ್ರಮಾಣದಿಂದಾಗಿ ಅವು ನಿಜಕ್ಕೂ ಅಪಾಯಕಾರಿಯಾಗಿದೆ. ಟೆಟ್ರೊಡೊಟಾಕ್ಸಿನ್ ಮೀನುಗಳನ್ನು ತಿನ್ನಲು ಮಾರಕವಾಗಿಸುವ ವಸ್ತುವಾಗಿದೆ.

ಒಂದು ಪಫರ್ ಫಿಶ್ 30 ವಯಸ್ಕರನ್ನು ಕೊಲ್ಲುವಷ್ಟು ವಿಷವನ್ನು ಒಯ್ಯಬಲ್ಲದು ಮತ್ತು ಈ ವಿಷವೂ ಸೈನೈಡ್ಗಿಂತ 1,200 ಪಟ್ಟು ಹೆಚ್ಚು ಮಾರಕವೆಂದು ನಂಬಲಾಗಿದೆ.

ಇದನ್ನು ಓದಿ: ಭೂಮಿಯ ಏಳು ಅತಿದೊಡ್ಡ ಬಗೆಹರಿಯದ ರಹಸ್ಯಗಳು

2. ನೀಲಿ ಉಂಗುರದ ಆಕ್ಟೋಪಸ್ (ಬ್ಲ್ಯೂ ರಿಂಗ್ಡ್ ಆಕ್ಟೋಪಸ್).

blue ringed octopus venum potency in kannada
blue ringed octopus

ಆಸ್ಟ್ರೇಲಿಯಾ ಮತ್ತು ಜಪಾನ್‌ನ ಸಾಗರಗಳಲ್ಲಿ ಕಂಡುಬರುವ ಬ್ಲ್ಯೂ ರಿಂಗ್ಡ್ ಆಕ್ಟೋಪಸ್ ಅದ್ಭುತವೆನಿಸಿದರು ಅಪಾಯಕಾರಿಯಾಗಿದೆ. ಇವುಗಳನ್ನು ಪ್ರಚೋದಿಸಿದ ಪ್ರಕಾಶಮಾನವಾದ ನಿಯಾನ್ ನೀಲಿ ಬಣ್ಣವನ್ನು ಮಿನುಗಲು ಪ್ರಾರಂಭಿಸುತ್ತದೆ.

ಇದು ಬೆರಗುಗೊಳಿಸುವ ದೃಶ್ಯವಾಗಿದರು, ಒಂದು ಕಚ್ಚುವಿಕೆಯ ಮನುಷ್ಯನನ್ನು ಕೊಲ್ಲುತ್ತದೆ. ಇದರ ವಿಷವೂ ಸೈನೈಡ್ಗಿಂತ 10,000 ಪಟ್ಟು ಹೆಚ್ಚು ಮಾರಕವಾಗಿದೆ ಮತ್ತು ಇದಕ್ಕೆ ಯಾವುದೇ ಆ್ಯಂಟಿಡಟ್ ಇಲ್ಲ.

ಇದನ್ನು ಓದಿ: ಬೇವಿನ ಪ್ರಯೋಜನ ಮತ್ತು ಉಪಯೋಗಗಳು

3. ಕಲ್ಲಿನ ಮೀನು (ಸ್ಟೋನ್ ಫಿಶ್).

dangerous stone fish in kannada
stone fish

ಸ್ಟೋನ್ ಫಿಶ್ ಕಲ್ಲಿನ ರೀತಿ ಕಾಣುವ ಸಾಮರ್ಥ್ಯವನ್ನು ಹೊಂದಿದೆ. ಇದು 40cm ಉದ್ದದವರೆಗೆ ಬೆಳೆಯಲು ಸಾಧ್ಯವಿದೆ. ಅದರ 13 ಸ್ಪೇನ್‌ಗಳಲ್ಲಿ ವಿಷ ಇರುತ್ತದೆ. ನೀವು ಈ ಮೀನುಗಳ ನಿಕಟ ಸಂಪರ್ಕಕ್ಕೆ ಬಂದರೆ ಕುಟುಕುವುದನ್ನು ತಪ್ಪಿಸಲು ಯಾವುದೇ ಮಾರ್ಗವಿಲ್ಲ.

ಸಾಮಾನ್ಯವಾಗಿ ಅವುಗಳು ಬೇಟೆಯಾಡಲು ವಿಷವನ್ನು ಬಳಸುವುದಿಲ್ಲ. ಅದರ ಬೇಟೆಯು ಹತ್ತಿರ ಬರುವವರೆಗೂ ಕಾದು ಆಕ್ರಮಣ ಮಾಡುತ್ತದೆ.

ಇದನ್ನು ಓದಿ: ಮಹಾತ್ಮಾ ಗಾಂಧಿಯವರ ಬಗ್ಗೆ ನಿಮಗೆ ಗೊತ್ತಿರದ 20 ಸಂಗತಿಗಳು

4. ದೊಡ್ಡ ಬಿಳಿ ಶಾರ್ಕ್ (ಗ್ರೇಟ್ ವೈಟ್ ಶಾರ್ಕ್).

how much harmful the white great shark in kannada
great white shark

ಈ ಶಾರ್ಕನ್ನು ನೀವು ಸ್ಟೀವನ್ ಸ್ಪೀಲ್ಬರ್ಗ್ ಅವರ ಜಾವ್ಸ್(Jaws) ಚಲನಚಿತ್ರದಲ್ಲಿ ನೋಡಬಹುದು. ಇದಕ್ಕೆ ಮಾನವರು ಆದ್ಯತೆಯ ಬೇಟೆಯಲ್ಲ. ಆದರೂ ವೈಟ್ ಶಾರ್ಕ್ ಅಪಾಯಕಾರಿ ಮತ್ತು ಹೆಚ್ಚಿನ ಸಂಖ್ಯೆಯ ಅಪ್ರಚೋದಿತ ದಾಳಿಗೆ ಕಾರಣವಾಗಿದೆ.

ಈ ಶಾರ್ಕ್ ಫುಡ್‌  ಚೈನಿನ ಮೇಲ್ಭಾಗದಲ್ಲಿ ಆರಾಮವಾಗಿ ಕೂರುತ್ತದೆ. ಇದರ ತೀಕ್ಷವಾದ ಹಲ್ಲುಗಳಿಂದ ಒಂದು ಕಚ್ಚುವಿಕೆಯ ಮಾರಕವಾಗಿದೆ.

ಇದನ್ನು ಓದಿ: ಉತ್ತಮ ಆರೋಗ್ಯಕ್ಕೆ ಆರೋಗ್ಯಕರ ಸಲಹೆಗಳು ಭಾಗ- 1

5. ಲಯನ್ ಫಿಶ್.

lion fish venum in kannada
lion fish

ಹೆಚ್ಚು ವಿಷಪೂರಿತವಾಗಿರುವ ಲಯನ್ ಫಿಶ್ ಅನೇಕ ಮೊನಚಾದ ಪಿನ್ ಕಿರಣಗಳಿಗೆ ಹೆಸರುವಾಸಿಯಾಗಿದೆ. ಕೆರಿಬಿಯನ್ ಮತ್ತು ಈಸ್ಟರ್ನ್ ಅಟ್ಲಾಂಟಿಕ್ ಸಾಗರಗಳಲ್ಲಿ ಕಂಡುಬರುವ ಲಯನ್ ಫಿಶ್ ತೊಂದರೆಗೊಳಗಾದರೆ ಪ್ರಬಲವಾಗಿ ಕುಟುಕುತ್ತದೆ. ಅದರ ಕುಟುಕು ಮನುಷ್ಯರಿಗೆ ಮಾರಕವಾಗಿರಬಹುದು, ಆದರೆ ಖಂಡಿತವಾಗಿಯೂ ನೋವಿನಿಂದ ಕೂಡಿದೆ.

ಇದನ್ನು ಓದಿ: ಬಾಹ್ಯಾಕಾಶದ ಒಂಬತ್ತು ಭಯಾನಕ ಸಂಗತಿಗಳು

6. ಬಾಕ್ಸ್ ಜೆಲ್ಲಿಫಿಶ್.

can a box jellyfish can kill you in kannada
box jelly fish

ಬಾಕ್ಸ್ ಜೆಲ್ಲಿಫಿಶ್ ಆಸ್ಟ್ರೇಲಿಯಾ ಖಂಡದಲ್ಲಿ ಶಾರ್ಕಿಗಿಂತ ಹೆಚ್ಚು ಮಾನವನ ಸಾವು ನೋವಿಗೆ ಕಾರಣವಾಗಿದೆ. ಇವುಗಳು ಸಾಗರದಲ್ಲಿ ಸಂಚರಿಸುವ ಅತ್ಯಂತ ಉಗ್ರ ಜೀವಿಗಳಲ್ಲಿ ಒಂದಾಗಿದೆ.

ಬಾಕ್ಸ್ ಜೆಲ್ಲಿಫಿಶಿನ ಒಂದು ಕುಟುಕು ಅತ್ಯಂತ ಅಹಿತಕರವಾಗಿರುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಮನುಷ್ಯರಿಗೆ ಮಾರಕವಾಗಬಹುದು.

ಇದನ್ನು ಓದಿ: ತೀವ್ರವಾದ ಆಸ್ತಮಕ್ಕೆ ಹದಿಮೂರು ನೈಸರ್ಗಿಕ ಪರಿಹಾರಗಳು

7. ಟೈಗರ್ ಶಾರ್ಕ್.

why are tiger sharks are so aggressive in kannada
tiger shark

ಟೈಗರ್ ಶಾರ್ಕ್ 5ಮೀವರೆಗೆ ಬೆಳೆಯಬಹುದು. ಇದು ಸಮುದ್ರದಲ್ಲಿ ದೊಡ್ಡ ಪರಭಕ್ಷಕವಾಗಿದೆ. ಸೀಲ್, ಪಕ್ಷಿ ಮತ್ತು ಆಮೆಯನ್ನು ಆಹಾರವಾಗಿ ಸೇವಿಸುವ ಟೈಗರ್ ಶಾರ್ಕ್ ಹೆಚ್ಚು ವೈವಿಧ್ಯಮಯ ಆಹಾರವನ್ನು ಹೊಂದಿದೆ. ಆದ್ದರಿಂದ ಇದು ಮಾರಕ ಬೆದರಿಕೆಯಾಗಿದೆ.

ಇದನ್ನು ಓದಿ: ವಿದ್ಯುತ್ ಶಕ್ತಿಯ ಮೇಲೆ ಹನ್ನೆರಡು ಕೂಲ್ ಸಂಗತಿಗಳು

8. ಸಮುದ್ರ ಹಾವುಗಳು (ಸಿ ಸ್ನೇಕ್ಸ್).

are sea snakes are dangerous to humans in kannada
sea snakes

ಇಂಡಿಯನ್ ಮತ್ತು ಫೆಸಿಫಿಕ್ ಸಾಗರಗಳಲ್ಲಿ ಕಂಡುಬರುವ ಸುಮಾರು 50 ವಿವಿಧ ಜಾತಿಯ ಸಮುದ್ರ ಹಾವುಗಳಿವೆ. ಆ ಅವುಗಳಲ್ಲಿ ಅತ್ಯಂತ ವಿಷಕಾರಿ ಪ್ರಬೇಧವೆಂದರೆ ಕೊಕ್ಕಿನ ಸಮುದ್ರ ಹಾವಾಗಿದೆ.

ಇದರ ವಿಷವೂ ಕೋಬ್ರಾಕ್ಕಿಂತ 8 ಪಟ್ಟು ಹೆಚ್ಚು ವಿಷಕಾರಿಯಾಗಿದೆ. ಇದರ 1.5 ಮಿಲಿಗ್ರಾಂ ವಿಷವೂ 8 ಮನುಷ್ಯರನ್ನು ಕೊಲ್ಲುತ್ತದೆ. ಅದೃಷ್ಟವಶಾತ್, ಇವುಗಳಿಗೆ ಮನುಷ್ಯರ ಮೇಲೆ ಆಕ್ರಮಣ ಮಾಡುವುದು ತಿಳಿದಿಲ್ಲ. ಆದರು ಅವುಗಳನ್ನು ಪ್ರಚೋದಿಸದಿರುವುದೇ ಒಳ್ಳೆಯದು.

ಇದನ್ನು ಓದಿ: ರಾತ್ರಿ ಪದೇಪದೇ ಎಚ್ಚರವಾಗುತ್ತಾ? ಸುಖನಿದ್ರೆಗೆ ಇಲ್ಲಿದೆ ಸಿಂಪಲ್ ಟಿಪ್ಸ್

9. ಸ್ಟಿಂಗ್ರೇಸ್.

are stringrays aggressive in kannada
string rays

ಸ್ಟಿಂಗ್ರೇ ಅದರ ಪ್ಯಾಸಿವ್ ವರ್ತನೆಗೆ ಹೆಸರುವಾಸಿಯಾಗಿದೆ ಮತ್ತು ಸಾಮಾನ್ಯವಾಗಿ ದಾಳಿ ಮಾಡುವುದಿಲ್ಲ. ಡೈವರ್ ಅಥವಾ ಈಜುಗಾರರು ಆಕಸ್ಮಿಕವಾಗಿ ಅದರ ಮೇಲೆ ಹೆಜ್ಜೆ ಹಾಕಿದಾಗ ಹೆಚ್ಚಿನ ವರದಿ ಪ್ರಕರಣಗಳು ಸಂಭವಿಸಿವೆ.

ಬೆದರಿಕೆ ಹಾಕಿದಾಗ ಸ್ಟಿಂಗ್ರೇ ಬಾಲದಲ್ಲಿರುವ ಸ್ಟಿಂಗರನ್ನು ವಿಪ್ ಆಪ್ ಮಾಡುತ್ತದೆ. ಇದರ ದಾಳಿಯು ವಿಷ ಮತ್ತು ಸಾವನ್ನು ಹೊಂದಿರಬಹುದು.

ಇದನ್ನು ಓದಿ: ಮೊಡವೆಗಳಿಂದ ಶಾಶ್ವತ ಪರಿಹಾರಕ್ಕೆ 14 ಸಲಹೆಗಳು

10. ಗ್ರೇಟ್ ಬರ್ರಾಕುಡಾ.

how dangerous is great barracuda in kannada
great barracuda

6 ಅಡಿಗಳಷ್ಟು ಇರುವ ಬರ್ರಾಕುಡಾ ತನ್ನ ಬೇಟೆಯನ್ನು ಹಿಡಿಯಲು ಮಿಂಚಿನ ವೇಗ ಮತ್ತು ಹೊಂಚು ದಾಳಿಯ ತಂತ್ರಗಳನ್ನು ಬಳಸುತ್ತದೆ. ಬರ್ರಾಕುಡಾ ಪಿರಾನಾ ಮೀನಿಗೆ ಹೋಲುವ ಹಲ್ಲುಗಳನ್ನು ಹೊಂದಿದೆ. ಈ ಮೀನುಗಳು ನೀರಿನಿಂದ ಜಿಗಿದು ಬೋಟರ್ಗಳನ್ನು ಗಾಯಗೊಳಿಸಿದ ಪ್ರಕರಣಗಳು ವರದಿಯಾಗಿವೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments