Website designed by @coders.knowledge.

Website designed by @coders.knowledge.

Inventions that Changed the World Part- 2 | ಜಗತ್ತನ್ನು ಬದಲಿಸಿದ ಹತ್ತು ಆವಿಷ್ಕಾರಗಳು

 0

 Add

Please login to add to playlist

Watch Video

ನಿಮ್ಮ ಟ್ಯಾಬ್ಲೆಟ್, ಕಂಪ್ಯೂಟರ್ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ನೀವು ಭಾವಿಸಬಹುದು. ಆದರೆ ಅವುಗಳಿಗಿಂತ ಮುಂಚೆ ಬಂದ ಆವಿಷ್ಕಾರಗಳ ಬಗ್ಗೆ ನೀವು ಏನು ಭಾವಿಸುತ್ತೀರಾ?

ನಾವು ಇಂದು ಇರುವ ಸ್ಥಳಕ್ಕೆ ನಮ್ಮನ್ನು ಕರೆದೊಯ್ಯಲು ಮಾನವರು ಹೊಸತನವನ್ನು ತೋರಿಸುತ್ತಿದ್ದಾರೆ. ಮೊದಲ ಚಕ್ರದ ಆವಿಷ್ಕಾರದಿಂದ ಈಗಿನ ಇಂಟರ್ನೆಟ್‌ವರೆಗೂ, ಪ್ರತಿ ಆವಿಷ್ಕಾರವೂ ವಿಶೇಷವಾಗಿ ಕ್ರಾಂತಿಕಾರಿಯಾಗಿದೆ. ಜಗತ್ತನ್ನು ಆಳವಾಗಿ ಬದಲಿಸಿದ ನೂರಾರು ಆವಿಷ್ಕಾರಗಳಲ್ಲಿ ಕೇವಲ ಹತ್ತು ಇಲ್ಲಿವೆ.

ಇದನ್ನು ಓದಿ: ಜಗತ್ತನ್ನು ಬದಲಿಸಿದ ಹತ್ತು ಆವಿಷ್ಕಾರಗಳು Part- 1

1. ಲೈಟ್ ಬಲ್ಬ್.

when was the light bulb invented in kannada
Light bulb

ಮನೆ ಮತ್ತು ಕಚೇರಿಯಲ್ಲಿ ನಾವು ಇಂದು ಬಳಸುವ ಶಕ್ತಿಯು, 150ಕ್ಕೂ ಹೆಚ್ಚು ವರ್ಷಗಳ ಹಿಂದಿನ ಒಂದು ಪ್ರಕಾಶಮಾನವಾದ ಕಲ್ಪನೆಯಾಗಿದೆ. ಹಂಫ್ರಿ ಡೇವಿ 19ನೇ ಪ್ರವರ್ತಿಸಿದ ವಿದ್ಯುತ್ ದೀಪಗಳು, 1800ರ ದಶಕದಲ್ಲಿ ಅಭಿವೃದ್ಧಿಗೊಂಡವು. ಲೈಟ್ ಬಲ್ಬ್ ಎಲ್ಲ ಕಾಲದ ಅತ್ಯಂತ ಪ್ರಭಾವಶಾಲಿ ಮತ್ತು ಶ್ರೇಷ್ಠ ಆವಿಷ್ಕಾರಗಳಲ್ಲಿ ಒಂದಾಗಿದೆ. ಎಡಿಸನ್ ಮತ್ತು ಸ್ವಾನ್ 1879 ಮತ್ತು 1880ರಲ್ಲಿ ಮೊದಲ ಲೈಟ್ ಬಲ್ಬ್ಗೆ ಪೇಟೆಂಟ್ ಪಡೆದರು.

1980ರ ದಶಕದ ಆರಂಭದಲ್ಲಿ ಸಿಎಫ್ಎಲ್ ಬಲ್ಬ್ ಮಾರುಕಟ್ಟೆಗೆ ಬಂದವು. ಆದರೆ ಅದರ ಹೆಚ್ಚಿನ ವೆಚ್ಚ, ಕಡಿಮೆ ಬೆಳಕಿನ ಉತ್ಪಾದನೆಯಿಂದಾಗಿ ಅದಕ್ಕೆ ಅಷ್ಟು ಪ್ರಾಮುಖ್ಯತೆ ಸಿಗಲಿಲ್ಲ. ಈಗಿನ ಎಲ್ಇಡಿ ಬಲ್ಬ್ ಕರೆಂಟ್ ಉಳಿಸುವಲ್ಲಿ ಉಳಿತಾಯವನ್ನು ನೀಡುತ್ತಿವೆ.

2. ವಿದ್ಯುತ್ ಶಕ್ತಿ (ಎಲೆಕ್ಟ್ರಿಸಿಟಿ).

who discovered electricity in kannada
electricity

ವಿದ್ಯುತ್ ಶಕ್ತಿ ದಿನನಿತ್ಯ ಜೀವನದ ಮೂಲಭೂತ ಅಗತ್ಯವಾಗಿದೆ. ಅನೇಕರು ಇಂದು ವಿದ್ಯುತ್ ಬಳಸುತ್ತಿದ್ದಾರೆ, ಆದರೆ ನಿಮ್ಮಲ್ಲಿ ಎಷ್ಟು ಜನರಿಗೆ ಅದರ ವಿಕಾಸದ ಬಗ್ಗೆ ತಿಳಿದಿದೆ!!

ಅಲೆಕ್ಸಾಂಡ್ರೊ ವೋಲ್ಟಾ‌ , ವಿದ್ಯುತ್ ಉತ್ಪಾದಿಸುವ ಪ್ರಾಯೋಗಿಕ ವಿಧಾನವನ್ನು ಕಂಡುಹಿಡಿದರು. 1831ನ್ನು ವಿದ್ಯುತ್ ಶಕ್ತಿಯ ಪ್ರಗತಿಯ ವರ್ಷವೆಂದು ಗುರುತಿಸಲಾಗಿದೆ. ಬ್ರಿಟಿಷ್ ವಿಜ್ಞಾನಿ ಮೈಕೆಲ್ ಫ್ಯಾರಡೆ ವಿದ್ಯುತ್ ಉತ್ಪಾದನೆಯ ಮೂಲ ತತ್ವಗಳನ್ನು ಕಂಡುಹಿಡಿದರು. ಎಲೆಕ್ಟ್ರೋಮ್ಯಾಗ್ನೆಟಿಕ್ ಇಂಡಕ್ಷನ್ ಆವಿಷ್ಕಾರವು ಶಕ್ತಿಯ ಬಳಕೆಯಲ್ಲಿ ಕ್ರಾಂತಿ ಉಂಟುಮಾಡಿತು.

ಬೀದಿ ದೀಪಗಳು ಮೊದಲಿಗೆ ಗಮನ ಸೆಳೆಯುವ ಸಾಧನಗಳಾಯಿತು. ವಿದ್ಯುತ್ ಉಪಯುಕ್ತತೆಯ ಏರಿಕೆಯೊಂದಿಗೆ, ಈಗ ಅದು ಆಧುನಿಕ ಕೈಗಾರಿಕಾ ಸಮಾಜದ ಬೆನ್ನೆಲುಬಾಗಿ ನಿಂತಿದೆ.

ಇದನ್ನು ಓದಿ: ಷೇರು ಮಾರುಕಟ್ಟೆಯಿಂದ ಉತ್ತಮ ರಿಟರ್ನ್ಸ್ ಪಡೆಯುವುದು ಹೇಗೆ?

3. ಬ್ಯಾಟರಿ.

who first invented the battery in kannada
battery

ಬ್ಯಾಟರಿಯು ಪಾರ್ಥಿಯನ್ ಸಾಮ್ರಾಜ್ಯದ ಹಿಂದಿನದ್ದಾಗಿದ್ದು, ಅದು ಎರಡು ಸಾವಿರ ವರ್ಷಗಳಷ್ಟು ಹಳೆಯದಾಗಿರಬಹುದು. ಹಳೆಯ ಬ್ಯಾಟರಿಯು ವಿನೆಗರ್ ಸಲೂಷನ್ನಿಂದ ತುಂಬಿದ ಜೇಡಿಮಣ್ಣಿನ ಜಾರನ್ನು ಒಳಗೊಂಡಿದ್ದು, ತಾಮ್ರದ ಸಿಲಿಂಡರ್ ಸುತ್ತಲೂ ಕಬ್ಬಿಣದ ರಾಡನ್ನು ಸೇರಿಸಲಾಗಿತು. ಈ ಬ್ಯಾಟರಿ ಸಿಲ್ವರನ್ನು ಎಲೆಕ್ಟ್ರೋಪ್ಲೇಟ್ ಮಾಡಲು ಬಳಸಲಾಗುತ್ತಿತು.

ಮೊದಲ ವಿದ್ಯುತ್ ಬ್ಯಾಟರಿಯ ಆವಿಷ್ಕಾರಕ ಅಲೆಕ್ಸಾಂಡ್ರೊ ವೊಲ್ಟಾ, ಎಲೆಕ್ಟ್ರೋಕೆಮಿಸ್ಟ್ರಿಗೆ ಅಡಿಪಾಯ ಹಾಕಿದರು. ಮೊದಲ ವಿದ್ಯುತ್ ಬ್ಯಾಟರಿಯ ಮಾಸ್ ಪ್ರೊಡಕ್ಷನ್ಸ್ 1802ರಲ್ಲಿ ವಿಲಿಯಂ ಕ್ರೂಕ್ಶಾಂಕ್ ಅವರಿಂದ ಪ್ರಾರಂಭವಾಯಿತು. ನಿಕಲ್ ಕ್ಯಾಡ್ಮಿಯಂ ಬ್ಯಾಟರಿಯನ್ನು 1899ರಲ್ಲಿ ವಾಲ್ಢೆಮರ್ ಜಂಗ್ನಾರ್ ಪರಿಚಯಿಸಿದರು.

4. ಪ್ರಿಂಟಿಂಗ್ ಪ್ರೆಸ್(ಮುದ್ರಣಾಲಯ).

777888889
printing press

ಮಾಹಿತಿಯನ್ನು ಹರಡುವ ಇಂಟರ್ನೆಟ್ ಸಾಮರ್ಥ್ಯದ ಮೊದಲು ಪ್ರಿಂಟಿಂಗ್ ಪ್ರೆಸ್ ಮಾಹಿತಿಯನ್ನು ಜಗತ್ತಿನಾದ್ಯಂತ ಹರಡಲು ಸಹಾಯ ಮಾಡಿತು. ಜರ್ಮನಿಯ ಮೇಜ್ನಲ್ಲಿ ಸುಮಾರು 1406ರಲ್ಲಿ ಜಾಹನ್ನೆಸ್ ಗುಟೆನ್ಬರ್ಗ್ನ ಯಂತ್ರವೂ ಸುಧಾರಿಸಿತು. 1500ರ ಹೊತ್ತಿಗೆ ಗುಟೆನ್ಬರ್ಗ್ ಪ್ರೆಸ್‌, ವೆಸ್ಟ್ರನ್ ಯುರೋಪಿನಾದ್ಯಂತ 2 ಕೋಟಿಯಷ್ಟು ಪ್ರತಿಗಳ ಉತ್ಪಾದನೆಯೊಂದಿಗೆ ಕಾರ್ಯನಿರ್ವಹಿಸುತ್ತಿದವು. 1600ರ ಹೊತ್ತಿಗೆ ಅವರು 20 ಕೋಟಿಗೂ ಹೆಚ್ಚು ಹೊಸ ಪುಸ್ತಕಗಳನ್ನು ಮುದ್ರಿಸಿದ್ದರು.

ಇದನ್ನು ಓದಿ: ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ?

5. ಸ್ಟೀಲ್.

what was the impact of the invension of printing press in kannada
cement

ಆರಂಭಿಕ ಯುಗದಲ್ಲಿ ಕಲ್ಲು, ಬ್ರೊನ್ಜ್ ಮತ್ತು ಕಬ್ಬಿಣವನ್ನು ಬಳಸುತ್ತದರು, ಸ್ಟೀಲ್ ಬಂದು ಕೈಗಾರಿಕಾ ಕ್ರಾಂತಿಯನ್ನು ಹಾರಿಸಿತು. ಆರ್ಕಿಯಾಲಾಜಿಕಲ್ ಎಕ್ಸ್ವೇಷನ್ ಪ್ರಕಾರ ಸ್ಟೀಲ್‌ನ ಆರಂಭಿಕ ಉತ್ಪಾದನೆಯು ನಾಲ್ಕು ಸಾವಿರ ವರ್ಷಗಳ ಹಿಂದಿನಿಂದ ಪ್ರಾರಂಭವಾಗಿತ್ತು.

ಕರಗಿದ ಪಿಗ್ ಕಬ್ಬಿಣವನ್ನು ಬಳಸಿ ಸ್ಟೀಲ್ ತಯಾರಿಸುವ ಬೇಸಿಮರ್ ಪ್ರಕ್ರಿಯೆಯು ಸ್ಟೀಲ್‌ನ ಮಾಸ್ ಪ್ರೊಡಕ್ಷನಿಗೆ ದಾರಿ ಮಾಡಿಕೊಟ್ಟಿತು. ಸೇತುವೆಗಳಿಂದಿಡಿದು, ಗಗನಚುಂಬಿ ಕಟ್ಟಡಗಳವರೆಗೆ ಎಲ್ಲದರ ಸೃಷ್ಟಿಯಲ್ಲಿ ಈಗ ಸ್ಟೀಲನ್ನು ಬಳಸಲಾಗುತ್ತದೆ.

6. ಟ್ರಾನ್ಸಿಸ್ಟರ್.

who invented steel and when in kannada
transistor

ಪ್ರತಿಯೊಂದು ಮಾಡರ್ನ್ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಲ್ಲಿ ಟ್ರಾನ್ಸಿಸ್ಟರ್ ಅತ್ಯಗತ್ಯ ಅಂಶವಾಗಿದೆ. 1926ರಲ್ಲಿ ಜೂಲಿಯಸ್ ಲಿಲಿಯನ್ಪೇಲ್ಡ್ ಅವರು ಟ್ರಾನ್ಸಿಸ್ಟರಿಗೆ ಪೇಟೆಂಟ್ ಪಡೆದರು. 1947ರಲ್ಲಿ ಜಾನ್ ಬಾರ್ಡಿಯಾನ್, ವಾಲ್ಟಾರ್ ಬ್ರಾಟೆನ್ ಮತ್ತು ವಿಲಿಯಮ್ ಶಾಕ್ಲಿ ಬೇಲ್ ಲ್ಯಾಬೋರೇಟರಿಯಲ್ಲಿ ಮೊದಲ ಪ್ರಾಯೋಗಿಕ ಸಾಧನವನ್ನು ಅಭಿವೃದ್ಧಿಪಡಿಸಿದರು. ಇದರಿಂದ ಈ ಮೂವರಿಗೆ 1956ರಂದು ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು. ಸೆಲ್ಫೋನ್ ಮತ್ತು ಕಂಪ್ಯೂಟರ್‍ಗಳು ಸೇರಿದಂತೆ ಎಷ್ಟೋ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಟ್ರಾನ್ಸಿಸ್ಟರ್ ಮೂಲಭೂತ ಭಾಗವಾಗಿ ಮಾರ್ಪಟ್ಟಿವೆ.

ಇದನ್ನು ಓದಿ: ರೋಗಗಳನ್ನು ತಪ್ಪಿಸಲು ಹತ್ತು ಆರೋಗ್ಯಕರ ಅಭ್ಯಾಸಗಳು

7. ಆ್ಯಂಟಿಬಾಡಿಸ್.

who firat discovered antibodies in kannada
antibodies

ಆ್ಯಂಟಿಬಾಡಿಸ್ ಹಾನಿಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕೊಂದು ತಡೆಯುವ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸುತ್ತಿವೆ. ಲೂಯಿಸ್ ಪಾಶ್ಚರ್ ಮತ್ತು ರಾಬರ್ಟ್‌ ಕೋಚ್ 1928ರಲ್ಲಿ ಮೊದಲ ಆ್ಯಂಟಿಬಾಡಿಯನ್ನು ವಿವರಿಸಿದರು. 1928ರಲ್ಲಿ ಅಲೆಕ್ಸಾಂಡರ್ ಪ್ಲೇಮಿಂಗ್, ಆ್ಯಂಟಿಬಾಡಿ ಗುಣಲಕ್ಷಣಗಳನ್ನು ಹೊಂದಿರುವ ಕೆಮಿಕಲ್ ಸಂಯುಕ್ತವಾದ ಪೆನಿಸಿಲಿನ್‌ ಗುರುತಿಸಿ ನಿಗದಿಪಡಿಸಿದರು. 20ನೇ ಶತಮಾನದುದ್ದಕ್ಕೂ ಆ್ಯಂಟಿಬಾಡಿ ವೇಗವಾಗಿ ಹರಡಿತು. ಆ್ಯಂಟಿಬಾಡಿಸ್ ತಿಳಿದಿರುವ ಪ್ರತಿಯೊಂದು ರೀತಿಯ ಸೋಂಕಿನ ವಿರುದ್ಧ ಹೋರಾಡುತ್ತದೆ ಮತ್ತು ಜನರ ಆರೋಗ್ಯವನ್ನು ರಕ್ಷಿಸುತ್ತದೆ.

8. ಎಕ್ಸರೇ.

what is the history of x-ray in kannada
x-ray

ಎಕ್ಸರೇ ನೈಸರ್ಗಿಕ ಪ್ರಪಂಚದ ಒಂದು ವಿದ್ಯಮಾನವಾಗಿದೆ. ಆದ್ದರಿಂದ ಅದನ್ನು ಕಂಡುಹಿಡಿಯಲು ಸಾಧ್ಯವಿಲ್ಲ, ಅದು ಆಕಸ್ಮಿಕವಾಗಿ ಪತ್ತೆಯಾಗಿತ್ತು. ಅದೃಶ್ಯವಾಗಿರುವ ಎಕ್ಸ್ರೇಯನ್ನು 1895ರಲ್ಲಿ ಗೋಚರಿಸಲಾಯಿತು.

ವಿಲ್ಹೆಲ್ಮ್ ಕಾನ್ರಾಡ್ ರೊಂಟ್ಜೆನ್, ಅವರು ಕ್ಯಾಥೋಡ್ ಕಿರಣಗಳು ಗಾಜಿನ ಮೂಲಕ ಹಾದು ಹೋಗಬಹುದೇ ಎಂದು ಪರೀಕ್ಷಿಸುವಾಗ, ಹತ್ತಿರದ ರಾಸಾಯನಿಕ ಲೇಪಿತ ಪರದೆಯಿಂದ ಒಂದು ಹೊಳಪು ಬರುತ್ತಿರುವುದನ್ನು ಗಮನಿಸಿದರು. ಅದರ ಅಪರಿಚಿತ ಸ್ವಭಾವದಿಂದಾಗಿ ಅವರು ಅದಕ್ಕೆ "ಎಕ್ಸರೇ" ಎಂದು ಹೆಸರು ನೀಡಿದರು. ಎಕ್ಸರೇ ಮಾನವ ಮಾಂಸಕ್ಕೆ ತೋರಿಕೊಂಡಾಗ, ಅವುಗಳನ್ನು ಫೋಟೋಗ್ರಾಫ್ ಮಾಡಬಹುದೆಂದು ರೊಂಟ್ಜೆನ್ ಅವಲೋಕನದ ಮೂಲಕ ತಿಳಿದುಕೊಂಡರು.

ಇದನ್ನು ಓದಿ: ಭೂಮಿಯ ಜನ್ಮದಿಂದ ಜೀವಿಗಳ ಅಸ್ತಿತ್ವದ ತನಕ

9. ರೆಫ್ರಿಜರೇಟರ್.

who first invented refrigerator in kannada
refrigerator

ಕಳೆದ 150 ವರ್ಷಗಳಲ್ಲಿ ರೆಫ್ರಿಜಿರೇಟರ್ ಆಹಾರ, ಔಷಧಿ ಮತ್ತು ಇತರ ಹಾಳಾಗುವ ವಸ್ತುಗಳನ್ನು ಸಂರಕ್ಷಿಸುವ ಮಾರ್ಗಗಳನ್ನು ನೀಡಿದೆ. ಅದರ ಪರಿಕಲ್ಪನೆಯ ಮೊದಲು ಜನರು ತಮ್ಮ ಆಹಾರವನ್ನು ಐಸ್ಕ್ರೀಂ ಮತ್ತು ಹಿಮದಿಂದ ತಂಪಾಗಿಸುತ್ತಿದ್ದರು.

ಜೇಮ್ಸ್ ಹ್ಯಾರಿಸನ್ ಮೊದಲ ಪ್ರಾಯೋಗಿಕ ರೆಫ್ರಿಜರೇಟರ್ ವ್ಯವಸ್ಥೆಯನ್ನು ನಿರ್ಮಿಸಿದ್ದರು. ಆದರೆ ಈಗಿರುವ ರೆಫ್ರಿಜಿರೇಟರ್ 1927ರ ಜನರಲ್ ಎಲೆಕ್ಟ್ರಿಕ್ "ಮಾನಿಟರ್-ಟಾಪ್" ರೆಫ್ರಿಜರೇಟರ್ ಆಗಿದೆ. ರೆಫ್ರಿಜಿರೇಟರ್ ಮೊದಲಿಗೆ ಕೈಗಾರಿಕಾ ಪುನರುಜ್ಜೀವನಗೊಳಿಸಲು ಸಹಾಯ ಮಾಡಿದರು, ಈಗ ಅದುವೇ ಉದ್ಯಮವಾಗಿ ಮಾರ್ಪಟ್ಟಿದೆ.

10. ದೂರದರ್ಶನ(ಟೆಲಿವಿಷನ್).

when was the television invented in kannada
television

ಟೆಲಿವಿಷನ್ ಮನರಂಜನೆ ಮತ್ತು ಕಮ್ಯುನಿಕೇಷನ್ಗಳನ್ನು ಶಾಶ್ವತವಾಗಿ ಬದಲಿಸಿದ ಪೆಟ್ಟಿಗೆಯಾಗಿದೆ. ಟೆಲಿವಿಷನ್ ಆವಿಷ್ಕಾರವು ಅನೇಕ ವ್ಯಕ್ತಿಗಳ ಕೆಲಸವಾಗಿತ್ತು. ನಮ್ಮ ದೈನಂದಿನ ಜೀವನದಲ್ಲಿ ಟಿವಿ ಪ್ರಮುಖ ಪಾತ್ರ ವಹಿಸುತ್ತಿದ್ದರು, ಇದು 19 ಮತ್ತು 20ನೇ ಶತಮಾನದಲ್ಲಿ ವೇಗವಾಗಿ ಅಭಿವೃದ್ಧಿಗೊಂಡಿತು.

ಮೊದಲ ಟೆಲಿವಿಷನ್ಅನ್ನು ಇಬ್ಬರು ಬೇರೆ ವ್ಯಕ್ತಿಗಳು ಕಂಡು ಹಿಡಿದಿದ್ದರು, ಅವರೆ ವ್ಲಾಡಿಮಿರ್ ಜ್ವರಿಕಿನ್ ಮತ್ತು ಫಿಲೋ ಟೈಲರ್. 1884ರಲ್ಲಿ ಪಾವ್ಲ್ ಗಾಟ್ಲೀಬ್ ನಿಪ್ಕೊ ಅವರು ಮೊದಲ ಟಿವಿಯನ್ನು ರಚಿಸಿ ಅದರ ಪೇಟೆಂಟ್ ಪಡೆದರು. ಅದಕ್ಕೆ ಅವರು "ಎಲೆಕ್ಟ್ರೋ ಮೆಕ್ಯಾನಿಕಲ್ ಟೆಲಿವಿಷನ್" ಎಂದು ಕರೆದರು. ಕಲರ್ ಟಿವಿ ಹೊಸ ಆಲೋಚನೆಯಲ್ಲದಿದ್ದರೂ, 1925ರಲ್ಲಿ ಜ್ವರಿಕಿನ್ ಕಲರ್ ಟೆಲಿವಿಷನ್ಗೆ ಪೇಟೆಂಟ್ ಪಡೆದರು.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

commenters

sushma • December 15th,2022

Great information.