Website designed by @coders.knowledge.

Website designed by @coders.knowledge.

How to Trick Brain to Like Doing Boring Things | ಮೆದುಳನ್ನು ಮೋಸಗೊಳಿಸುವುದು ಹೇಗೆ?

 0

 Add

Please login to add to playlist

Watch Video

ನಿಮಗೆ ವಿಡಿಯೋ ಗೇಮ್ಸ್ ಆಡಲು ಮತ್ತು ಸಾಮಾಜಿಕ ಮಧ್ಯಮದಲ್ಲಿ ಬ್ರೌಸ್ ಮಾಡಲು ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಮತ್ತು ನೀವು ಖಂಡಿತವಾಗಿಯೂ ಈ ಎರಡು ಚಟುವಟಿಕೆಯನ್ನು(activity) ಎಷ್ಟು ಗಂಟೆಯಾದರೂ, ನಿಮ್ಮ ಏಕಾಗ್ರತೆಯು ಮುರಿಯದೆ ಮಾಡಬಹುದು. ಅದೇ ಅರ್ಧ ಗಂಟೆ ಓದಬೇಕಿದರೆ ನಿಮ್ಮ ಅನಿಸಿಕೆ ಏನು? ಅದು ಕಠಿಣವಿರಬಹುದು ಅಥವಾ ನಿಮ್ಮ ಅಡ್ಡ ವ್ಯಾಪಾರದ ಮೇಲೆ ಒಂದು ಗಂಟೆ ಕೆಲಸ ಮಾಡುವುದರ ಮೇಲೆ ನಿಮ್ಮ ಅನಿಸಿಕೆ ಏನು? ಅದು ಕೂಡ ಒಪ್ಪುವ ರೀತಿ ಅನಿಸುತ್ತಿಲ್ಲ. ಪುಸ್ತಕ ಓದುವುದು, ವ್ಯಾಯಾಮ ಮಾಡುವುದು, ಅಡ್ಡ ವ್ಯಾಪಾರದ ಮೇಲೆ ಏಕಾಗ್ರತೆಯನ್ನು ವಹಿಸುವುದು ದೀರ್ಘಾವಧಿಯಲ್ಲಿ ನಿಮಗೆ ಅಧಿಕ ಲಾಭವನ್ನು ನೀಡುತ್ತದೆ ಎಂದು ತಿಳಿದಿದ್ದರು, ನೀವು ಟಿವಿ, ವಿಡಿಯೋ ಗೇಮ್ಸ್ ಆಡುವುದರಲ್ಲೇ ಸಮಯ ಕಳೆಯುತ್ತೀರಾ.

ಒಬ್ಬರು ಈ ರೀತಿ ಏಕೆ ಆಗುತ್ತದೆ ಎಂದು ಕೇಳಬಹುದು. ಒಂದು ಚಟುವಟಿಕೆ ತುಂಬಾ ಸುಲಭವಿದ್ದು, ಅಧಿಕ ಪ್ರಯತ್ನ ಬೇಕಿಲ್ಲ. ಇನ್ನೊಂದು ಚಟುವಟಿಕೆ ಕಠಿಣವಿದ್ದು, ಅಧಿಕ ಪ್ರಯತ್ನ ಬೇಕು. ಸ್ವಲ್ಪ ಜನಗಳಿಗೆ ಓದು, ವ್ಯಾಯಾಮ, ಅವರ ಅಡ್ಡ ವ್ಯಾಪಾರದ ಮೇಲೆ ದಿನನಿತ್ಯ ಕೆಲಸ ಮಾಡಲು ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಇದು ಒಂದು ಪ್ರಶ್ನೆಗೆ ಕಾರಣವಾಗುತ್ತದೆ, ಅದೆಂದರೆ, ಕೆಲವೊಬ್ಬರು ಕಠಿಣ ಚಟುವಟಿಕೆ ಮೇಲೆ ಕಾರ್ಯ ನಿರ್ವಹಿಸಲು ಹೇಗೆ ಸಾಧ್ಯವಾಗುತ್ತದೆ? ಮತ್ತು ಅದನ್ನು ಸುಲಭಗೊಳಿಸಲು ಯಾವುದಾದರೂ ಮಾರ್ಗವಿದೆಯೇ?

ಇದನ್ನು ಅರ್ಥ ಮಾಡಿಕೊಳ್ಳಲು ನಾವು ಮೆದುಳಿನ ಈ ಕಳಿಸುಗದ(transmitter) ಬಗ್ಗೆ ತಿಳಿದುಕೊಳ್ಳಬೇಕು, ಅದುವೇ ಡೋಪಮೈನ್(dopamine). ಡೋಪಮೈನನ್ನು ಸಂತೋಷದ ಅಣು(pleasure molecule) ಎಂದು ಪರಿಗಣಿಸಲಾಗಿದೆ. ಆದರೆ ಅದು ಅದಕ್ಕೆ ಮಾತ್ರ ಸೀಮಿತವಾಗಿಲ್ಲ. ಡೋಪಮೈನ್ ನಮ್ಮಲ್ಲಿ ಆಸೆಗಳನ್ನು ಹುಟ್ಟಿಸುತ್ತದೆ ಮತ್ತು ಆ ಆಸೆ ನಮಗೆ ಪ್ರೇರಣೆಯನ್ನು ನೀಡುವ ಕಾರ್ಯಗಳನ್ನು ಮಾಡುವಂತೆ ಮಾಡುತ್ತದೆ.

ಇದನ್ನು ಓದಿ: How to Change Your Life in 30 Days

1. Dopamine experiment on rat.

what is the experiment on a rat about dopamine in kannada
dopamine experiment

ಈ ಡೋಪಮೈನ್ ಶಕ್ತಿಯ ಬಗ್ಗೆ ತಿಳಿದುಕೊಳ್ಳಲು ನರ ವಿಜ್ಞಾನಿಗಳು(neuro scientists) ನಡೆಸಿದ ಪ್ರಯೋಗದ ಬಗ್ಗೆ ತಿಳಿಯೋಣ. ಸಂಶೋಧಕರು ಎಲೆಕ್ಟ್ರೋಟ್ಗಳನ್ನು ಇಲಿಗಳ ಮೆದುಳಿನಲ್ಲಿ ಹಾಕಿದರು. ಇಲಿಯು ಲಿವರ್ ಅನ್ನು ಎಳೆದಾಗ, ಅದು ಇಲಿಯ ಮೆದುಳಿನಲ್ಲಿ ಬಹುಮಾನ ನೀಡುವಂತೆ ಮಾಡಲಾಗಿತು. ಇದರಿಂದ ಆ ಇಲಿಯು ಲಿವರನ್ನು ಎಷ್ಟೋ ಗಂಟೆಗಳ ಕಾಲ ಎಳೆಯುತ್ತಿತ್ತು, ಅದು ನಿದ್ದೆ ಕೂಡ ಮಾಡದೆ ಶಕ್ತಿ ಕುಗ್ಗುವವರೆಗೂ ಲಿವರನ್ನು ಎಳೆಯುತ್ತಿತ್ತು. ನಂತರ ಈ ಪ್ರಕ್ರಿಯೆಯನ್ನು ವಿರುದ್ಧವಾಗಿ ಮಾಡಲಾಯಿತು.

ಸಂಶೋಧಕರು ಆ ಇಲಿಗಳ ಮೆದುಳಿನ ಒಳಗೆ ಡೋಪಮೈನ್ ಅನ್ನು ಬಿಡುವುದನ್ನು ನಿಲ್ಲಿಸಿದರು. ಆಗ ಇಲಿಗೆ ಎದ್ದು ಹೋಗಿ ನೀರು ಕುಡಿಯುವಷ್ಟು ಶಕ್ತಿಯು ಇರಲಿಲ್ಲ, ಅವುಗಳಿಗೆ ಏನನ್ನು ತಿನ್ನಲು ಆಸೆ ಇರಲಿಲ್ಲ, ಒಡನಾಡುತ್ತಿರಲಿಲ್ಲ(mate), ಹಾತೊರೆಯುತ್ತಿರಲಿಲ್ಲ, ಅವು ಆಸಕ್ತಿಯನ್ನು ಕಳೆದುಕೊಂಡಿದವು. ಆಹಾರವನ್ನು ಅವುಗಳ ಬಾಯಿಯ ಹತ್ತಿರ ಇಟ್ಟರೆ, ಅದನ್ನು ತಿಂದು ಆನಂದಿಸುತ್ತಿದ್ದವು. ಆದರೆ ಅವುಗಳಿಗೆ ಎದ್ದು ಅದನ್ನು ಮಾಡಲು ಪ್ರೇರಣೆ ಇರಲಿಲ್ಲ. ನೀವು ಬಾಯಾರಿಕೆ ಮತ್ತು ಹಸಿವು ನಮಗೆ ತಿನ್ನಲು ಪ್ರೇರಣೆ ನೀಡುತ್ತದೆ ಎನ್ನಬಹುದು. ಆದರೆ ಇದರಲ್ಲಿ ಡೋಪಮೈನ್ ಕೂಡ ಮುಖ್ಯ ಪಾತ್ರವನ್ನು ವಹಿಸುತ್ತಿದೆ.

ಇದನ್ನು ಓದಿ: ಯಶಸ್ವಿಯಾಗಲು ಸ್ವಯಂ ಶಿಸ್ತಿನ 4 ಅಭ್ಯಾಸಗಳು

2. Examples of dopamine.

what is the function of dopamine example in kannada
dopamine examples

ಆ ಇಲಿಗಳ ಮೇಲಿನ ಪ್ರಯೋಗವು ಅತಿರೇಕವಾಗಿರಬಹುದು. ನೀವು ಅದೇ ರೀತಿಯ ಡೋಪಮೈನ್ ಪರಿಣಾಮವನ್ನು ನಿಮ್ಮ ಮೆದುಳು ಮತ್ತು ದಿನನಿತ್ಯದ ಬದುಕಿನಲ್ಲಿ ಗಮನಿಸಿರಬಹುದು. ನಿಮ್ಮ ಮೆದುಳು ಅದಕ್ಕೆ ಎಷ್ಟು ಡೋಪಮೈನ್ ಸಿಗುತ್ತದೆಯೋ, ಅದರ ಮೇಲೆ ಆದ್ಯತೆಯನ್ನು(priority) ನೀಡುತ್ತದೆ. ಒಂದು ಚಟುವಟಿಕೆ ಕಡಿಮೆ ಡೋಪಮೈನ್ ಬಿಡುಗಡೆ ಮಾಡುತ್ತಿದ್ದರೆ, ನಿಮಗೆ ಅದನ್ನು ಮಾಡಲು ಪ್ರೇರಣೆ ಇರುವುದಿಲ್ಲ. ಅದೇ ಒಂದು ಚಟುವಟಿಕೆ ಅಧಿಕ ಡೋಪಮೈನ್ ಅನ್ನು ಬಿಡುಗಡೆ ಮಾಡಿದರೆ, ನೀವು ಅದನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತೀರಾ.

ಯಾವುದೇ ಚಟುವಟಿಕೆಯಿಂದ ಡೋಪಮೈನ್ ಅಧಿಕ ಬಿಡುಗಡೆಯದರೆ, ನಿಮಗೆ ಅದನ್ನು ಮಾಡಲು ಪ್ರೇರಣೆ ಇರುತ್ತದೆ. ಅದೇ ಒಂದು ಚಟುವಟಿಕೆಯಿಂದ ತಕ್ಷಣವೇ ಬಹುಮಾನ ಸಿಗದಿದ್ದರೆ, ನಿಮ್ಮ ಮೆದುಳು ಆ ಡೋಪಮೈನ್ ಅನ್ನು ಬಿಡುಗಡೆ ಮಾಡುವುದಿಲ್ಲ. ಉದಾಹರಣೆಗೆ ನೀವು ಕೇಕನ್ನು ತಿನ್ನುವಾಗ ನಿಮ್ಮ ಮೆದುಳು ಡೋಪಮೈನನ್ನು ಬಿಡುಗಡೆ ಮಾಡುತ್ತದೆ. ಏಕೆಂದರೆ ನೀವು ಅದನ್ನು ಇಷ್ಟಪಡುತ್ತೀರಾ, ಒಂದು ವೇಳೆ ಅದರ ರುಚಿ ಚೆನ್ನಾಗಿಲ್ಲವೆಂದರು ಮೆದುಳು ಅದಕ್ಕೆ ಕಾಳಜಿ ವಹಿಸುವುದಿಲ್ಲ. ಏಕೆಂದರೆ ಅದಕ್ಕೆ ಅಧಿಕ ಡೋಪಮೈನ್ ಬೇಕೇ ಬೇಕು.

ಇದಕ್ಕೆ ಇನ್ನೊಂದು ಉದಾಹರಣೆ ಡ್ರ್ಯಾಗ್ ವ್ಯಸನಿ(drag addict) ಆಗಿದ್ದಾನೆ. ಅವನಿಗೆ ಅವನು ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿದಿದೆ. ಆದರೂ ಅವನಿಗೆ ಆ ಡ್ರಗ್ ಬೇಕೇ ಬೇಕು. ಕೊಕೇನ್(cocaine) ಅಧಿಕ ಡೋಪಮೈನನ್ನು ಬಿಡುಗಡೆ ಮಾಡುತ್ತವೆ. ಇದು ನಿಮ್ಮನ್ನು ಅದಕ್ಕೆ ಅಧಿಕ ಆಕರ್ಷಿಸುತ್ತದೆ. ಎಲ್ಲವೂ ಸ್ವಲ್ಪ ಪ್ರಮಾಣದಲ್ಲಿ ಡೋಪಮೈನನ್ನು ಬಿಡುಗಡೆ ಮಾಡುತ್ತವೆ. ನಿಮಗೆ ಬಾಯಾರಿಕೆಯಾದಾಗ ನೀರು ಕುಡಿಯುವುದು ಡೋಪಮೈನನ್ನು ಬಿಡುಗಡೆ ಮಾಡುತ್ತದೆ. ಇದು ಕಡಿಮೆ ಡೋಪಮೈನನ್ನು ಬಿಡುಗಡೆ ಮಾಡುತ್ತದೆ. ಇದಕ್ಕೆ ಇನ್ನೊಂದು ಉದಾಹರಣೆ ಕೆಸಿನೋದಲ್ಲಿರುವ ಸ್ಲಾಟ್ ಮಷೀನ್ನಲ್ಲಿ(slot machine) ಆಡುವುದಾಗಿದೆ. ಇಲ್ಲಿ ನೀವು ಅಧಿಕ ಹಣವನ್ನು ಕಳೆದುಕೊಂಡರು, ದೊಡ್ಡ ಬಹುಮಾನಕ್ಕಾಗಿ ಕಾಯುತ್ತಿರುತ್ತೀರಾ, ಅದು ಯಾವಾಗ ಆಗುತ್ತದೆ ಎಂದು ನಿಮಗೆ ತಿಳಿದಿರುವುದಿಲ್ಲ.

ಇಂದಿನ ಸಮಾಜದಲ್ಲಿ ನಾವು ನಮ್ಮ ಮೆದುಳಿನಲ್ಲಿ ಸಾಕಷ್ಟು ಡೋಪಮೈನ್ ಬಿಡುಗಡೆ ಆಗುವಂತೆ ಮಾಡುತ್ತಿದ್ದೇವೆ. ಅಧಿಕ ಡೋಪಮೈನ್ ಬಿಡುಗಡೆಯಾಗುವ ಚಟುವಟಿಕೆಗಳೆಂದರೆ ಸಾಮಾಜಿಕ ಮಧ್ಯಮವನ್ನು ನೋಡುವುದು, ವಿಡಿಯೋ ಗೇಮ್ಸ್ ಆಡುವುದು, ಅಂತರ್ಜಾಲದಲ್ಲಿ ಅಶ್ಲೀಲತೆ(pornography) ನೋಡುವುದು ಇತ್ಯಾದಿ. ನಮಗೆ ಇವೆಲ್ಲದರಲ್ಲೂ ಒಂದು ಬಹುಮಾನ ಸಿಕ್ಕೆ ಸಿಗುತ್ತದೆ. ಹೀಗಾಗಿ ನಾವು ನಿರಂತರವಾಗಿ ಫೋನನ್ನು ನೋಡುತ್ತೇವೆ. ಟೆಕ್ಸ್ಟ್ ಮೆಸೇಜ್(text message) ಇಲ್ಲ, ನೋಟಿಫಿಕೇಶನ್ಗಾಗಿ ಕಾಯುತ್ತಿರುತ್ತೇವೆ. ಯಾವಾಗ ಅದು ಬಂದೇ ಬರುತ್ತದೆ ಎಂದು ನಮಗೆ ನಂಬಿಕೆ ಬರುತ್ತದೆಯೋ, ನಾವು ಇಲಿಯ ರೀತಿ ಲಿವರ್ ಎಳೆಯುತ್ತಾ, ಅಧಿಕ ಡೋಪಮೈನ್ ಬಿಡುಗಡೆ ಆಗುವಂತೆ ಮಾಡುತ್ತೇವೆ. ನೀವು, "ಇದು ನನಗೆ ಅಷ್ಟು ಹಾನಿ ಮಾಡುತ್ತಿಲ್ಲ" ಎನ್ನಬಹುದು. ಆದರೆ ನೀವು ತಪ್ಪಾಗಿದ್ದೀರಾ!

ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳು

3. Relationship between dopamine and our body.

what does dopamine do to your body in kannada
dopamine and body

ನಮ್ಮ ದೇಹಕ್ಕೆ ಹೋಮೇಸ್ಟಾಟಿಸ್(homeostatis) ಎಂಬ ಜೈವಿಕ ವ್ಯವಸ್ಥೆಯಿದೆ. ಅಂದರೆ ನಮ್ಮ ದೇಹವು ದೇಹದಲ್ಲಿನ ರಾಸಾಯನಿಕ ಚಟುವಟಿಕೆಯನ್ನು ಸಮತೋಲನದಲ್ಲಿ ಇಡಲು ನೋಡುತ್ತದೆ. ಒಂದು ವೇಳೆ ಇದರಲ್ಲಿ ಅಸಮತೋಲನವಾದರೆ ನಮ್ಮ ದೇಹವು ಅದಕ್ಕೆ ಸರಿಹೊಂದಿಸಿಕೊಳ್ಳುತ್ತದೆ. ಇದಕ್ಕೆ ಉದಾಹರಣೆ ತಿಳಿಸುತ್ತೇವೆ, ಹೊರಗಡೆ ತಣ್ಣಗಿದರೆ ನಮ್ಮ ದೇಹದ ತಾಪಮಾನ ಕುಗ್ಗುತ್ತದೆ. ಇದರಿಂದ ನಾವು ನಡುಗಿ, ದೇಹದಲ್ಲಿ ಶಾಖ ಉತ್ಪತ್ತಿಯಾಗುತ್ತದೆ. ಅದೇ ಹೊರಗಡೆ ತುಂಬಾ ಬಿಸಿಲಿದರೆ ನಮ್ಮ ದೇಹದ ತಾಪಮಾನ ಹೆಚ್ಚುತ್ತದೆ. ನಾವು ಆ ಶಾಖದಿಂದ ಉಳಿಯಲು ಬೆವರಲು ಪ್ರಾರಂಭಿಸುತ್ತೇವೆ. ನಮ್ಮ ದೇಹವು 32° C ನಷ್ಟು ತಾಪಮಾನವನ್ನು ಪೋಷಿಸಲು ಪ್ರಯತ್ನಿಸುತ್ತದೆ. ಆದರೆ ಹೋಮೇಸ್ಟಾಟಿಸ್, ಸಹಿಷ್ಣುತೆಯಿಂದ(tolerance) ಅದನ್ನು ಸಾಮಾನ್ಯ ಮಾಡಿಕೊಳ್ಳುತ್ತದೆ.

ಉದಾಹರಣೆಗೆ, ಯಾರಾದರೂ ಅಪರೂಪಕ್ಕೆ ಮದ್ಯಪಾನ(alcohol) ಮಾಡಿದರೆ, ಅದನ್ನು ಬೇಗನೆ ಕುಡಿಯುತ್ತಾರೆ. ಅದೇ ಯಾರಾದರೂ ಅದನ್ನು ನಿಯಮಿತವಾಗಿ ಕುಡಿಯುತ್ತಿದರೆ, ಅವರು ಅದಕ್ಕೆ ಸರಿಹೊಂದಿಸಿಕೊಂಡಿರುತ್ತಾರೆ. ಇದರಿಂದ ಅವರು ಅಧಿಕ ಮದ್ಯಪಾನ ಮಾಡಬೇಕಾಗುತ್ತದೆ. ಇದು ಡೋಪಮೈನ್ ವಿಷಯದಲ್ಲೂ ವಿರುದ್ಧವಾಗಿಲ್ಲ. ನಿಮ್ಮ ಮೆದುಳು ಅಧಿಕ ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತಿದ್ದರೆ, ಅದು ನಿಮಗೆ ಸಾಮಾನ್ಯವಾಗಿ ಬಿಡುತ್ತದೆ. ಇದು ಡೋಪಮೈನ್ ಸಹಿಷ್ಣುತೆ ಬೆಳೆಯಲು ಕಾರಣವಾಗಿದೆ. ಇದರಿಂದ ನಿಮಗೆ ಕಡಿಮೆ ಡೋಪಮೈನ್ ಬಿಡುಗಡೆಯಾಗುವ ವಿಷಯಗಳಿಂದ ಉತ್ಸಾಹವಿರುವುದಿಲ್ಲ ಮತ್ತು ನಿಮಗೆ ಅವುಗಳನ್ನು ಮಾಡಲು ಇನ್ನಷ್ಟು ಕಠಿಣವೆನಿಸುತ್ತದೆ. ನಿಮಗೆ ಅದು ನೀರಸವೆನ್ನಿಸುತ್ತದೆ. ಇದರಿಂದಲೇ ಅನೇಕರು ವಿಡಿಯೋ ಗೇಮ್ಸ್ ಮತ್ತು ಇಂಟರ್ನೆಟ್ನಲ್ಲಿ ಬ್ರೌಸ್ ಮಾಡಲು ಆದ್ಯತೆ ನೀಡುತ್ತಾರೆ. ವೀಡಿಯೋ ಗೇಮ್ ಅನ್ನು ನಾವು ಆರಾಮದಾಯಕವಾಗಿ ಆಡುವುದರಿಂದ ಅಧಿಕ ಡೋಪಮೈನ್ ಬಿಡುಗಡೆಯಾಗುತ್ತದೆ. ಅದೇ ಓದುವುದು, ಕಷ್ಟಪಡುವುದು ಕಡಿಮೆ ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತವೆ.

ಇದರಿಂದಲೇ ಮಾದಕ ವ್ಯಸನಿಗಳು(drug addict) ಅದನ್ನು ಬಿಟ್ಟು, ಸಾಮಾನ್ಯ ಬದುಕಿಗೆ ಬರಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಅವರ ಡೋಪಮೈನ್ ಸಹಿಷ್ಣುತೆ ಅಧಿಕವಿದ್ದು, ಸಾಮಾನ್ಯ ಬದುಕಿಗೆ ಸರಿಹೊಂದಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವರು ಒಂದು ರೀತಿ ಹಿಂದಿನ ಉದಾರಣೆಯಲ್ಲಿ ನೀಡಿದ ಇಲಿಗಳ ರೀತಿ ಆಗುತ್ತಾರೆ. ಇದರಿಂದ ಅವರಿಗೆ ಏನಾದರೂ ಹೊಸದನ್ನು ಮಾಡಲು ಆಸಕ್ತಿ ಇರುವುದಿಲ್ಲ. ಇದು ಮಾದಕ ವ್ಯಸನಿಗಲಿಗಷ್ಟೇ ಅಲ್ಲದೆ, ವೀಡಿಯೋ ಗೇಮ್, ಸಾಮಾಜಿಕ ಮಧ್ಯಮ, ಇಂಟರ್ನೆಟ್ ಅಶ್ಲೀಲತೆಗೆ ವ್ಯಸನಿಯಾಗಿರುವವರು ಅನುಭವಿಸುತ್ತಾರೆ.

ಇದನ್ನು ಓದಿ: "Atomic Habits" ಪುಸ್ತಕದ ವಿವರಣೆ

4. Dopamine detox method.

how do you dopamine detox in kannada
dopamine detox

ಹಾಗಿದ್ದರೆ ಇದನ್ನು ತಡೆಯಲು ಯಾವುದಾದರು ಮಾರ್ಗವಿದೆಯೇ? ಇದಕ್ಕೆ ನೀವು ಡೋಪಮೈನ್ ಡಿಟಾಕ್ಸ್(dopamine detox) ಅನ್ನು ಮಾಡಬೇಕು. ಇದರಲ್ಲಿ ನೀವು ಕೆಲವು ದಿನಗಳನ್ನು ಆರಿಸಿಕೊಂಡು, ಅತಿಯಾಗಿ ಡೋಪಮೈನ್ ಅನ್ನು ಬಿಡುಗಡೆ ಮಾಡುವ ಚಟುವಟಿಕೆಗಳನ್ನು ಬಿಡಬೇಕು. ಇದರಿಂದ ನಿಮ್ಮ ಡೋಪಮೈನ್ ರಿಸೆಪ್ಟರ್ಗಳು ಗುಣಮುಖವಾಗುತ್ತವೆ. ಒಂದು ವೇಳೆ ನೀವು ಮಾದಕ ವ್ಯಸನಿಗಳಾಗಿದ್ದರೆ ವೈದ್ಯರನ್ನು ಭೇಟಿ ಮಾಡುವುದು ಸೂಕ್ತವಾಗಿದೆ.

ಆ ಒಂದು ದಿನ ನೀವು ತಮಾಷೆಯಾಗಿ ಇರುವುದನ್ನು ಕಡಿಮೆ ಮಾಡಿ. ಇಂಟರ್ನೆಟ್, ಫೋನ್ ಮತ್ತು ಕಂಪ್ಯೂಟರ್ ಅನ್ನು ಬಳಸುವಾಗಿಲ್ಲ ಮತ್ತು ಯಾವುದೇ ರೀತಿಯ ಹಾಡನ್ನು ಕೇಳಬಾರದು, ಹಸ್ತಮೈಥುನ(masterbation) ಮಾಡಬಾರದು, ಯಾವುದೇ ರೀತಿಯ ಜಂಕ್ ಆಹಾರಗಳನ್ನು(junk food) ತಿನ್ನಬಾರದು. ಅಂದರೆ ಪೂರ್ತಿ ದಿನ ಬಾಹ್ಯ ಆನಂದವನ್ನು(external pleasure) ಕೊಡುವ ಎಲ್ಲವನ್ನು ನೀವು ಕಡಿಮೆ ಮಾಡಿ. ನಿಮಗೆ ಇದರಿಂದ ತುಂಬಾ ಬೇಸರವಾಗುತ್ತದೆ.

ನೀವು ಬೇಕಾದರೆ ಹೊರಗಡೆ ನಡೆಯಬಹುದು, ಧ್ಯಾನ ಮಾಡಬಹುದು, ನಿಮ್ಮ ಬದುಕನ್ನು ಪ್ರತಿಬಿಂಬಿಸಬಹುದು, ಪತ್ರಿಕೆಯನ್ನು(journal) ಓದಬಹುದು. ಇವೆಲ್ಲ ಬೇಸರ ಮಾಡಬಹುದು. ಆದರೆ ನೀವು ಆಮೂಲಾಗ್ರ ಫಲಿತಾಂಶವನ್ನು(radical result) ಪಡೆಯಲು ಆಮೂಲಾಗ್ರ ಕ್ರಮವನ್ನು(radical actions) ತೆಗೆದುಕೊಳ್ಳಬೇಕು. ಇವು ಖಂಡಿತವಾಗಿಯೂ ಕೆಲಸ ಮಾಡುತ್ತದೆಯೇ ಎಂದು ನೀವು ಕೇಳಬಹುದು.

ಇದನ್ನು ನೀವು ಈ ರೀತಿಯಾಗಿ ಯೋಚಿಸಿ, ನೀವು ಪ್ರತಿದಿನ ಒಳ್ಳೆಯ ರೆಸ್ಟೋರೆಂಟ್ನಲ್ಲಿ ಊಟ ಮಾಡುತ್ತಿರುತ್ತೀರಿ. ಇದರಿಂದ ಆ ರುಚಿಕರವಾಗಿರುವ ಊಟ ನಿಮಗೆ ಸಾಮಾನ್ಯವಾಗಿರುತ್ತದೆ. ಈಗ ಯಾರಾದರೂ ನಿಮಗೆ ಒಂದು ಬಟ್ಟಲಿನಷ್ಟು(bowl) ಅಕ್ಕಿಯನ್ನು ನೀಡಿದರೆ ಅದನ್ನು ಬೇಡವೆನ್ನುತ್ತೀರಾ. ಏಕೆಂದರೆ ಅದು ರೆಸ್ಟೋರೆಂಟ್ನ ಊಟದಷ್ಟು ರುಚಿ ಕೊಡುವುದಿಲ್ಲ. ಅದೇ ನೀವು ಒಂದು ಬಂಜರು ಭೂಮಿಯಲ್ಲಿ ಇದ್ದು, ಹೊಟ್ಟೆ ಹಸಿದಿದ್ದರೆ ಆಗ ನೀವು ಆ ಅಕ್ಕಿಯನ್ನು ಬೇಡವೆನ್ನುವುದಿಲ್ಲ. ಇದನ್ನೇ ಡೋಪಮೈನ್ ಡಿಟಾಕ್ಸ್ ಮಾಡುತ್ತದೆ. ಇದು ನಿಮಗೆ ಸಿಗುವ ಎಲ್ಲಾ ಆನಂದದಿಂದ ಹಸಿವಾಗುವಂತೆ ಮಾಡುತ್ತದೆ ಮತ್ತು ಕಡಿಮೆ ತೃಪ್ತಿಪಡಿಸುವ ಚಟುವಟಿಕೆಗಳನ್ನು ಅಧಿಕ ಅಪೇಕ್ಷಣೀಯವಾಗಿ(desirable) ಮಾಡುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ಡೋಪಮೈನ್ ಡಿಟಾಕ್ಸ್ ನಿಮಗೆ ಎಷ್ಟು ನೀರಸ ಮಾಡುತ್ತದೆ ಎಂದರೆ ನೀವು ನೀರಸೆ ನೀಡುವ ವಸ್ತುಗಳಿಂದಲೇ, ತಮಾಷೆಯಿಂದಿರಲು ಪ್ರಾರಂಭಿಸುತ್ತೀರಾ.

ನೀವು ಈ ರೀತಿಯ ವಿಪರೀತವಾದ ಪ್ರಯೋಗವನ್ನು ಮಾಡಲು ಬಯಸಿಲ್ಲದಿದ್ದರೆ, ಸಣ್ಣ ಡೋಪಮೈನ್ ಡಿಟಾಕ್ಸ್ ಅನ್ನು ಅಭ್ಯಾಸ ಮಾಡಿ. ನೀವು ವಾರದಲ್ಲಿ ಒಂದು ದಿನ ಅತಿಯಾಗಿ ಡೋಪಮೈನ್ ಬಿಡುಗಡೆ ಮಾಡುವ ಒಂದು ಚಟುವಟಿಕೆಯನ್ನು ತಪ್ಪಿಸಿ. ಆ ಚಟುವಟಿಕೆ ಯಾವುದಾದರೂ ಆಗಿರಬಹುದು. ಉದಾರಣೆಗೆ, ನಿಮ್ಮ ಫೋನ್ ಅನ್ನು ಪರಿಶೀಲಿಸುವುದು, ವೀಡಿಯೋ ಗೇಮ್ಸ್ ಆಡುವುದು, ಟಿವಿ ನೋಡುವುದು, ಜಂಕ್ ಫುಡ್ ತಿನ್ನುವುದು, ಅಶ್ಲೀಲತೆ ನೋಡುವುದು ಇತ್ಯಾದಿ. ಇಂದಿನಿಂದ ವಾರದಲ್ಲಿ ಒಂದು ದಿನ ನೀವು ಈ ರೀತಿಯ ಚಟುವಟಿಕೆಯನ್ನು ತಪ್ಪಿಸಬೇಕು. ನೀವು ಇತರ ಚಟುವಟಿಕೆಯನ್ನು ಆರಿಸಿಕೊಳ್ಳಬಹುದು, ಅದು ನಿಮ್ಮ ಮಿತಿಯ ಮೇಲೆ ನಿಂತಿದೆ. ಇದರಿಂದ ನಿಮಗೆ ಬೇಸರವಾಗುತ್ತದೆ. ಆದರೆ ನಿಮ್ಮ ಡೋಪಮೈನ್ ರಿಸೆಪ್ಟರ್ಗಳು(receptor) ಗುಣಮುಖವಾಗಲು ಇದನ್ನು ಮಾಡಲೇಬೇಕು. ನಿಮ್ಮ ಬೇಸರವನ್ನು ಕಳೆಯಲು ನೀವು ಸಾಮಾನ್ಯವಾಗಿ ತಿರಸ್ಕರಿಸುವ ಚಟುವಟಿಕೆಗಳ ಮೇಲೆ ಗಮನ ಹರಿಸಿ. ನಿಮಗೆ ಈಗ ಬೇಸರವಾಗಿರುವುದರಿಂದ ಅದನ್ನು ಮಾಡಲು ಸುಲಭವಾಗಿದೆ.

ಒಂದೇ ಅತಿಯಾದ ಡೋಪಮೈನ್ ಚಟುವಟಿಕೆಯನ್ನು ಒಮ್ಮೊಲೇ ತಪ್ಪಿಸುವುದು ಸರಿ. ಆದರೆ ನೀವು ಒಮ್ಮೆಲೇ ಎಲ್ಲಾ ಅತಿಯಾದ ಡೋಪಮೈನ್ ಬಿಡುವುದನ್ನು ತಪ್ಪಿಸಲು ಪ್ರಯತ್ನಿಸಿ. ಇದರ ಬದಲಿಗೆ ನಿಮಗೆ ಲಾಭ ನೀಡುವ ವಸ್ತುಗಳ ಮೇಲೆ ಕಾರ್ಯನಿರ್ವಹಿಸಿ. ಈ ಕಡಿಮೆ ಡೋಪಮೈನ್ ಚಟುವಟಿಕೆಗಳು ದೀರ್ಘಾವಧಿಯಲ್ಲಿ ಒಳ್ಳೆಯ ಲಾಭವನ್ನು ನೀಡುತ್ತವೆ. ನೀವು ಅತಿಯಾದ ಡೋಪಮೈನ್ ಚಟುವಟಿಕೆಯನ್ನು ಕಷ್ಟಕರವಾದ ಕೆಲಸಗಳನ್ನು ಮುಗಿಸಿದ್ದಕ್ಕೆ ಬಹುಮಾನದ ರೀತಿ ತೆಗೆದುಕೊಳ್ಳಬಹುದು. ಉದಾಹರಣೆಗೆ ಮನೆ ಕೆಲಸ, ಪುಸ್ತಕ ಓದುವುದು, ವ್ಯಾಯಾಮ ಮಾಡುವುದು, ಈ ರೀತಿಯ ಕಡಿಮೆ ಡೋಪಮೈನ್ ಬಿಡುವ ಕೆಲಸವನ್ನು ಮಾಡಿ. ಇದು ಆದ ನಂತರ ಅತಿಯಾದ ಡೋಪಮೈನ್ ನೀಡುವ ಕೆಲಸಗಳನ್ನು ಮಾಡಿ.

ನೀವು ಮುಂಚೆಯೇ ಅತಿಯಾದ ಡೋಪಮೈನ್ ಬಿಡುವ ಕೆಲಸಗಳನ್ನು ಮಾಡಿದರೆ, ನಂತರ ಕಡಿಮೆ ಡೋಪಮೈನ್ ಬಿಡುವ ಕೆಲಸಗಳನ್ನು ಮಾಡಲು ಆಸಕ್ತಿ ಇರುವುದಿಲ್ಲ. ನೀವು 1 ಗಂಟೆ ಕಡಿಮೆ ಡೋಪಮೈನ್ ಬಿಡುವ ಕೆಲಸವನ್ನು ಮಾಡಿದರೆ, 15 ನಿಮಿಷ ಅತಿಯಾದ ಡೋಪಮೈನ್ ಬಿಡುವ ಕೆಲಸವನ್ನು ಮಾಡಿ. ನೀವು ಬೇಕಾದರೆ ಈ ಅನುಪಾತವನ್ನು ಬದಲಿಸಬಹುದು. ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾದ ನಡವಳಿಕೆಯನ್ನು ಬಹುಮಾನದ ರೀತಿ ತೆಗೆದುಕೊಳ್ಳಬೇಡಿ. ಬದಲಿಗೆ ನಿಮಗೆ ಹಾನಿ ಮಾಡದಿರುವ ಅತಿಯಾದ ಡೋಪಮೈನ್ ಚಟುವಟಿಕೆಗಳನ್ನು ಹುಡುಕಿ.

ಇದನ್ನು ಓದಿ: ವೀರ್ಯಗಳ ಸಂಖ್ಯೆಯನ್ನು ಸ್ವಾಭಾವಿಕವಾಗಿ ಹೆಚ್ಚಿಸಿಕೊಳ್ಳುವುದು ಹೇಗೆ?

5. Conclusion.

what is dopamine and why is it important in addiction in kannada
summary

ಈ ಲೇಖನವನ್ನು ಮುಗಿಸಿದರೆ, ಕಠಿಣವಿರುವ ಚಟುವಟಿಕೆಗಳನ್ನು ಮಾಡಲು ನಮಗೆ ಸುಲಭವಾಗುತ್ತದೆ. ಆದರೆ ನಿಮ್ಮ ಮೆದುಳಿಗೆ ಡೋಪಮೈನ್ ಪ್ರತಿ ಬಾರಿ ಸಿಗುತ್ತಿದ್ದರೆ, ನೀವು ಕಠಿಣವಿಲ್ಲದ ಚಟುವಟಿಕೆಗಳನ್ನು ಮಾಡಲು ಹುಡುಕುತ್ತೀರಾ. ಹೀಗಾಗಿ ನೀವು ಈ ರೀತಿಯ ಅತಿಯಾದ ಡೋಪಮೈನ್ ಬಿಡುವ ನಡವಳಿಕೆಗಳನ್ನು ತಪ್ಪಿಸಬೇಕು. ಡೋಪಮೈನ್ ಡಿಟಾಕ್ಸ್ ಅನ್ನು ಬಳಸಿ, ಅತಿಯಾದ ಡೋಪಮೈನ್ ಬಿಡುವ ಚಟುವಟಿಕೆಗಳನ್ನು ತಪ್ಪಿಸಿ, ಇಲ್ಲ ಅದಕ್ಕೆ ಕಡಿಮೆ ಪ್ರದರ್ಶಿಸಿ. ಇದರಿಂದ ಕಡಿಮೆ ಡೋಪಮೈನ್ ಬಿಡುವ ಚಟುವಟಿಕೆಗಳು ನಿಮಗೆ ಪ್ರಚೋದಿಸುತ್ತವೆ ಮತ್ತು ನೀವು ಅದನ್ನು ದೀರ್ಘಾವಧಿಗೆ ಮಾಡಬಹುದು. ನಾವೆಲ್ಲರೂ ಡೋಪಮೈನ್ಗೆ ವ್ಯಸನಿಯಾಗಿದ್ದೇವೆ. ಅದು ಒಳ್ಳೆಯದೇ, ಏಕೆಂದರೆ ಡೋಪಮೈನ್ ನಮ್ಮ ಗುರಿಯನ್ನು ಸಾಧಿಸಲು ಪ್ರೇರಣೆ ನೀಡುತ್ತದೆ. ಆದರೆ ಎಲ್ಲಿಂದ ಡೋಪಮೈನ್ ಸಿಗಬೇಕು ಎಂಬುದು ನಿಮ್ಮ ನಿಯಂತ್ರಣದಲ್ಲಿ ಇರುತ್ತದೆ. ಅಂದರೆ ನಿಮಗೆ ಲಾಭ ನೀಡುವ ಚಟುವಟಿಕೆಗಳಿಂದ ಅದನ್ನು ಪಡೆಯುತ್ತೀರಾ ಇಲ್ಲ, ನಿಮಗೆ ಲಾಭ ನೀಡದ ಚಟುವಟಿಕೆಗಳಿಂದ ಅದನ್ನು ಪಡೆಯುವಿರ, ಇದು ನಿಮ್ಮ ಆಯ್ಕೆ ಆಗಿದೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments