How to Recover Trading Loss? | ಟ್ರೇಡಿಂಗ್ ನಷ್ಟವನ್ನು ಹೇಗೆ ಮರುಪಡೆಯುವುದು?

Watch Video

ಯಾವುದೇ ಹಣದ ನೋಟನ್ನು ಎರಡು ಭಾಗ ಮಾಡಿದರೆ ಯಾರು ಅದನ್ನು ತೆಗೆದುಕೊಳ್ಳುವುದಿಲ್ಲ. ಅದಕ್ಕೆ ಮೌಲ್ಯ(value) ಇರುವುದಿಲ್ಲ. ನಿಮ್ಮ ಪ್ರಕಾರ ಅದಕ್ಕೆ ಯಾವುದೇ ಮೌಲ್ಯವಿಲ್ಲ. ಇದೇ ರೀತಿ ಜನರು ಟ್ರೇಡಿಂಗ್ನಲ್ಲಿ(trading) ತಮ್ಮ ಬಂಡವಾಳವನ್ನು(capital) ಕಳೆದುಕೊಳ್ಳುತ್ತಾರೆ ಮತ್ತು ಇಲ್ಲಿನಿಂದ ನಷ್ಟವನ್ನು ಚೇತರಿಸಿಕೊಳ್ಳಲು(recover) ಸಾಧ್ಯವಿಲ್ಲವೆಂದು ಭಾವಿಸುತ್ತಾರೆ. ಆದರೆ ಈ ನೋಟಿನ ಎರಡರ ಬದಲು ಮೂರು ಭಾಗ ಆಗಿ, ನಿಮ್ಮ ಹತ್ತಿರ ಆ ಮೂರು ಭಾಗವಿದ್ದರೆ, ನೀವು ಬ್ಯಾಂಕಿಗೆ(bank) ಹೋಗಿ ಠೇವಣಿ(deposit) ಮಾಡಬಹುದು. ಒಂದು ದಿನದಲ್ಲಿ ಈ ರೀತಿಯ 20 ನೋಟುಗಳನ್ನು ನೀವು ಬ್ಯಾಂಕಿಗೆ ನೀಡಬಹುದು. ಆದರೆ ಅನೇಕರಿಗೆ ಇದು ತಿಳಿದಿರುವುದಿಲ್ಲ ಮತ್ತು ಅವರು ನೋವು ಅನುಭವಿಸುತ್ತಾರೆ. ಅದೇ ರೀತಿ ನೀವು ಈ ಲೇಖನದಲ್ಲಿ ನಾವು ತಿಳಿಸುವ ವಿಷಯಗಳು ಎಷ್ಟೋ ಜನರಿಗೆ ತಿಳಿದಿರುವುದಿಲ್ಲ. ಅಂದರೆ ನಷ್ಟವನ್ನು(loss) ಯಾವ ರೀತಿ ಚೇತರಿಸಿಕೊಳ್ಳುವುದು. ಈ ಲೇಖನದಲ್ಲಿ ನೀವು ನಿಮ್ಮ ನಷ್ಟವನ್ನು ಬೇಗನೆ ಚೇತರಿಸಿಕೊಳ್ಳಲು ಇರುವ ಹಂತಗಳನ್ನು ತಿಳಿಸಲಿದ್ದೇವೆ.

ಟ್ರೇಡಿಂಗ್ನಲ್ಲಿ 10 ರಲ್ಲಿ 9 ಜನರಿಗೆ ನಷ್ಟವಾಗುತ್ತದೆ ಎಂದು ಸೆಬಿ(sebi) ಹೇಳುತ್ತದೆ. 90% ಜನರು ನಷ್ಟ ಅನುಭವಿಸುತ್ತಾರೆ, ಆದರೆ 10% ಸ್ಥಿರವಾಗಿ(consistent) ಮಾರುಕಟ್ಟೆಯಿಂದ ಲಾಭ ಯಾವ ರೀತಿ ಗಳಿಸುತ್ತಾರೆ? ಅಪ್ರಾಪ್ತ ಟ್ರೇಡರ್(immature trader) ನಂಬಿಕೆಯ ಮೇಲೆ ಟ್ರೇಡ್ ಮಾಡುತ್ತಾರೆ. ಅದೇ ವೃತ್ತಿಪರ ಟ್ರೇಡರ್(professional trader) ಹಿಂಬಾಲಿಸುತ್ತಾರೆ(track), ತಿರುಚುತ್ತಾರೆ(tweak), ಅವರು ಟ್ರೇಡಿಂಗ್ ಅನ್ನು ಜೂಜಾಟದ(gambling) ರೀತಿ ನೋಡುವುದಿಲ್ಲ. ಬದಲಿಗೆ ವ್ಯವಹಾರದ(business) ರೀತಿ ನೋಡುತ್ತಾರೆ. ವ್ಯವಹಾರದಲ್ಲಿ ಇರುವ ವೆಚ್ಚಗಳು(expenses) ಇದರಲ್ಲಿ ನಷ್ಟವಾಗಿದೆ, ಅದೇ ಆದಾಯ(revenue) ಇದರಲ್ಲಿ ಲಾಭವಾಗಿದೆ.

ಇದನ್ನು ಓದಿ: ನೀವು ಹೇಗೆ ಹೂಡಿಕೆ ಮಾಡಬೇಕು, ಹೂಡಿಕೆ ತಂತ್ರ

1. Trading journal

what is a trading journal in kannada
trading journal

ನಿಮ್ಮ ನಷ್ಟವನ್ನು ಚೇತರಿಸಲು ದಿನಚರಿ ಮುಖ್ಯವಾಗಿದೆ. ನೀವು ಯಾವುದೇ ಬಾಕ್ಸರ್(boxer) ನೋಡಿದರೆ ಬಾಕ್ಸಿಂಗ್ ಮೊದಲು ಅವರು ತರಬೇತಿ(training) ಪಡೆಯುತ್ತಾರೆ. ಆದರೆ ಪಂದ್ಯದ(match) ಮೊದಲು ಇತರ ಬಾಕ್ಸರ್ನ ಬಾಕ್ಸಿಂಗ್ ದೃಶ್ಯಾವಳಿಗಳನ್ನು(footage) ಮತ್ತೆ ಮತ್ತೆ ನೋಡುತ್ತಾರೆ. ಇದರಿಂದ ಅವರ ತಪ್ಪಿನ ಬಗ್ಗೆ ತಿಳಿಯುತ್ತದೆ. ಇದೇ ರೀತಿ ವೃತ್ತಿಪರ ಟ್ರೇಡರ್ ಗೆ ತನ್ನ ಕಾರ್ಯಕ್ಷಮತೆಯನ್ನು(performance) ಒಲಂಪಿಕ್ ಕ್ರೀಡಾಪಟುವಿನ(olympic athlete) ರೀತಿಯೇ ಟ್ರ್ಯಾಕ್ ಮಾಡುವುದು ಮುಖ್ಯವಾಗಿದೆ. ಜರ್ನಲಿಂಗ್(journaling) ನಿಮ್ಮ ಕುರುಡು ಚುಕ್ಕೆಗಳನ್ನು(blind spot) ಗುರುತಿಸಲು(identify) ಪ್ರಾಮಾಣಿಕ ಪ್ರತಿಕ್ರಿಯೆ(feedback) ನೀಡುತ್ತದೆ ಮತ್ತು ನೀವು ಟ್ರೇಡಿಂಗ್ನಲ್ಲಿ ಲಾಭ ಗಳಿಸಲು ಒಂದು ತೀಕ್ಷ್ಣವಾದ ಅಂಚನ್ನು(sharp edge) ನೀಡುತ್ತದೆ.

ಟ್ರೇಡಿಂಗ್ ಜರ್ನಲ್ ಎಂದರೆ ಲಾಭ ನಷ್ಟ ಹೇಳಿಕೆ(profit loss statement) ಅಷ್ಟೇ ಆಗಿಲ್ಲ. ಇದರಲ್ಲಿ ನಾಲ್ಕು ಮುಖ್ಯ ವಿಷಯಗಳು ಇರುತ್ತವೆ. ಅದರಲ್ಲಿ ಮೊದಲನೆಯದ್ದು,

ಇದನ್ನು ಓದಿ: ಆರಂಭಿಕರಿಗಾಗಿ ಸಂಪೂರ್ಣ ಹೂಡಿಕೆ ಮತ್ತು ಷೇರು ಮಾರುಕಟ್ಟೆ ಮಾರ್ಗದರ್ಶಿ

1. Trade details

how do you write a trading journal in kannada
trade details

ಅಂದರೆ ನೀವು ಯಾವ ಸ್ಟಾಕ್ ತೆಗೆದುಕೊಂಡಿರುವಿರಾ? ಇಂಡೆಕ್ಸ್(index) ಹೆಸರು ಏನು? ದಿನಾಂಕ ಏನು? ಪ್ರವೇಶ ಬೆಲೆ(entry price) ಏನು? ಸ್ಥಾನದ ಬೆಲೆ(position price) ಎಷ್ಟಿದೆ? ಎಷ್ಟು ಷೇರುಗಳನ್ನು ತೆಗೆದುಕೊಂಡಿರುವಿರಾ? ಸ್ಟಾಪ್ಲಾಸ್(stoploss) ಎಷ್ಟಿದೆ? ಈ ಎಲ್ಲಾ ಡೇಟಾ ನಿಮ್ಮ ಸೆಟಪ್ಗೆ ಅಡಿಪಾಯವಾಗಿದೆ(foundation), ಎರಡನೇಯದ್ದು,

2. Set up

ನೀವು ಟ್ರೇಡ್ ಹೇಗೆ ಖರೀದಿಸಿದ್ದೀರಿ? ಅದು ಬ್ರೇಕ್ಔಟ್(breakout) ಆಗಿತ್ತೆ, ಫುಲ್ಬ್ಯಾಕ್(pull back) ಆಗಿತ್ತೆ, ತಿರುವುಮುರುವು(reversal) ಆಗಿತ್ತೇ, ಕಾರಣವಿಲ್ಲದೆ ಟ್ರೇಡ್ ಮಾಡುವುದು ನಿಮಗೆ ಆಸಕ್ತಿಕರವೆನಿಸುತ್ತದೆ. ಆದರೆ ಅದು ಲಾಭದಾಯಕ ಇರುವುದಿಲ್ಲ, ಮೂರನೇದಾಗಿ,

3. Market context

ಅಂದರೆ ಟ್ರೇಡ್ ತೆಗೆದುಕೊಳ್ಳುವಾಗ ಮಾರುಕಟ್ಟೆಯ ಒಟ್ಟಾರೆ ಪ್ರವೃತ್ತಿ(overall trend) ಏನಿತ್ತು. ಯಾವುದಾದರೂ ಸುದ್ಧಿ ಇಲ್ಲ, ವೇಗವರ್ಧಕ(catalyst) ಇತ್ತೇ. ಅಂದರೆ ಫೆಡ್ ಸಭೆ(fed meeting), ಬಜೆಟ್ ಬಜೆಟ್ ಘೋಷಣೆ(budget announcement) ಇತ್ತೇ, ಇಲ್ಲ ಕಂಪನಿಯ ಗಳಿಕೆಯ ವರದಿ(earnings report) ಬಂದಿತ್ತೇ. ಮಾರುಕಟ್ಟೆ ಪರಿಸ್ಥಿತಿ ನಿಮ್ಮ ತಂತ್ರ(strategy) ಸೋತಿದೆಯೇ ಇಲ್ಲ ಮಾರುಕಟ್ಟೆಯ ಸ್ಥಿತಿಯು ಪ್ರತಿಕೂಲವಾಗಿದೆಯೇ(unfavorable) ಎಂಬುದನ್ನು ತಿಳಿಸುತ್ತದೆ. ಉದಾಹರಣೆಗೆ ನೀವು ನಿಮ್ಮ ತಂತ್ರದ ಮೇಲೆ ಟ್ರೇಡ್ ತೆಗೆದುಕೊಳ್ಳುವಿರಿ, ಆದರೆ ಇಂದು ಬಜೆಟ್ ಘೋಷಣೆ ಇರುತ್ತದೆ. ಇದು ದೊಡ್ಡ ಸುದ್ಧಿಯಾಗಿದೆ. ಆ ದಿನ ನಿಮ್ಮ ಟ್ರೇಡ್ ನಷ್ಟವನ್ನು ನೀಡಿದರೆ ಅದು ಕೆಟ್ಟ ಟ್ರೇಡ್ ಆಗಿಲ್ಲ. ಒಂದು ವೇಳೆ ನೀವು ಸೆಟ್ಆಫ್ ರೀತಿಯಲ್ಲಿ ಟ್ರೇಡ್ ತೆಗೆದುಕೊಂಡಿಲ್ಲದಿದ್ದರೆ, ಅದು ಕೆಟ್ಟ ಟ್ರೇಡಿಂಗ್ ಆಗಿದೆ, ನಾಲ್ಕನೆಯದಾಗಿ,

4. Emotion & execution

ಇದರಲ್ಲಿ ಟ್ರೇಡ್ ತೆಗೆದುಕೊಳ್ಳುವಾಗ ನಿಮಗೆ ಎಷ್ಟು ವಿಶ್ವಾಸವಿತ್ತು(confidence). ಇದನ್ನು ನೀವು 1 ರಿಂದ 10 ಅಳತೆಯಲ್ಲಿ(scale) ಪ್ರಮಾಣ ನೀಡಿ. ನೀವು ನಿಯಮ ಫಾಲೋ ಮಾಡಿದ್ದೀರಾ ಇಲ್ಲ, ಆತಂಕದಲ್ಲಿ(fomo) ಪ್ರವೇಶ ನೀಡಿದ್ದೀರಾ ಎಂಬುದನ್ನು ನೋಡಿ. ಅನೇಕರು ಬೆಳ್ಳಿಯು(silver) ಮೇಲೋಗುತ್ತಿದೆ ಎಂದು ತಿಳಿದು ಟ್ರೇಡ್ ತೆಗೆದುಕೊಂಡರು. ಆದರೆ ಅವರುಗಳು ಸೆಟಪ್ ಮಾಡಿರಲಿಲ್ಲ. ನೀವು ಯಾವುದೇ ದೊಡ್ಡ ನಷ್ಟ ಇಲ್ಲ ಲಾಭ ಮಾಡಿದರೆ ಅದರ ಸ್ಕ್ರೀನ್‌ಶಾಟ್ ಅನ್ನು(screenshot) ಇಟ್ಟುಕೊಂಡಿರಿ. ಏಕೆಂದರೆ ನಮ್ಮ ನೆನಪು ವಿಶ್ವಾಸಾರ್ಹವಲ್ಲದಾಗಿರುತ್ತದೆ(unreliable). ಹೀಗಾಗಿ ಇವುಗಳು ನಿಮಗೆ ಮುಂದೆ ಕೆಲಸಕ್ಕೆ ಬರುತ್ತವೆ.

ಈ ಜರ್ನಲಿಂಗ್ ಮಾಡಲು ನಿಮಗೆ ಯಾವುದೇ ತಂತ್ರಾಂಶದ(software) ಅವಶ್ಯಕತೆ ಇಲ್ಲ. ನೀವು ಗೂಗಲ್ ಶೀಟ್ನಲ್ಲಿ(google sheet) ದತ್ತಾಂಶವನ್ನು(data) ನಿರ್ವಹಿಸಿ ಇಲ್ಲ ದೈಹಿಕ ನೋಟ್ಬುಕ್ನಲ್ಲಿ ನಿರ್ವಹಿಸಿ. ಏಕೆಂದರೆ ನೀವು ದಿನದಲ್ಲಿ ಎಷ್ಟು ಟ್ರೇಡ್ ತೆಗೆದುಕೊಳ್ಳುವಿರಾ ಎಂಬುದನ್ನು ನೋಡಬೇಕು. ಈ ಸರಳ ಹಂತವು 5 ನಿಮಿಷ ತೆಗೆದುಕೊಳ್ಳುತ್ತದೆ, ಆದರೆ ಈ 5 ನಿಮಿಷದಿಂದ ತಪ್ಪಿನಿಂದ(mistake) ಯಾವುದಾದರೂ ಮಾದರಿ(pattern) ಆಗುತ್ತಿದೆಯೇ ಎಂಬುದನ್ನು ನೋಡಬಹುದು. ಒಂದು ವೇಳೆ ಅದೇ ಮಾದರಿ ಆಗುತ್ತಿದ್ದರೆ ನೀವು ಆ ತಪ್ಪುಗಳನ್ನು ಪುನರವರ್ತಿಸುವುದಿಲ್ಲ. ಇಲ್ಲಿನಿಂದ ನಿಮ್ಮ ಲಾಭದಾಯಕ ಪ್ರಯಾಣ(profitable journey) ಪ್ರಾರಂಭಗೊಳ್ಳುತ್ತದೆ.

ಇದನ್ನು ಓದಿ: ಹೂಡಿಕೆ ಮಾಡುವ ಮುನ್ನ ತೆಗೆದುಕೊಳ್ಳಬೇಕಾದ ಸ್ಟೆಪ್ಗಳು

2. Drawdown & asymmetric recovery

what does drawdown mean in trading in kannada
drawdown

ಡ್ರಾಡೌನ್ ಟ್ರೇಡಿಂಗ್ನಲ್ಲಿ ತುಂಬಾ ಅಪಾಯಕಾರಿ ಪರಿಕಲ್ಪನೆಯಾಗಿದೆ. ಡ್ರಾಡೌನ್ ಎಂದರೆ ನೀವು ಲಾಭ ಮಾಡುತ್ತಿರುತ್ತೀರಾ, 1 ಲಕ್ಷ ರೂ ಲಾಭ ಮಾಡಿರುವಿರಾ. ಈಗ 1 ಲಕ್ಷ ರೂ ಲಾಭದಿಂದ 80,000ರೂ ಕ್ಕೆ ಬಂದಿದೆ. ಈ ಮೇಲಿನಿಂದ ಕೆಳಗೆ ನಷ್ಟವಾದ 20,000 ರೂ ಡ್ರಾಡೌನ್ ಆಗಿದೆ. ಡ್ರಾಡೌನ್ ರೇಖೀಯವಲ್ಲದಾಗಿದೆ(non linear). ಅಂದರೆ ನೀವು ಎಷ್ಟು ದೊಡ್ಡ ನಷ್ಟ ಮಾಡಿಕೊಳ್ಳುವಿರೋ ಅದರಿಂದ ಚೇತರಿಸಿಕೊಳ್ಳಲು ಅಷ್ಟೇ ಸಮಯ ಮತ್ತು ಕಷ್ಟವಾಗುತ್ತದೆ. ಇದನ್ನು ಟ್ರೇಡಿಂಗ್ ಮನೋವಿಜ್ಞಾನದಲ್ಲಿ(psycology) ಅಸಮ್ಮಿತ ಚೇತರಿಕೆ(asymmetric recovery) ಎಂದು ಕರೆಯುತ್ತಾರೆ.

ನೀವು 10% ನಷ್ಟ ಮಾಡಿಕೊಂಡರೆ. ಲಾಭಾಂಶಕ್ಕೆ(break even) ಬರಲು ನಿಮಗೆ 11.1% ನಷ್ಟು ಲಾಭ ಬೇಕಿರುತ್ತದೆ. ನಷ್ಟ ಮಾಡಿಕೊಂಡರೆ, ಅಂದರೆ 1 ಲಕ್ಷ ರೂನಿಂದ 80,000 ರೂಗೆ ಬಂದಿರಿ ಎಂದುಕೊಳ್ಳಿ, ಮತ್ತೆ 1 ಲಕ್ಷ ರೂ ಮಾಡಲು 25% ನಷ್ಟು ಲಾಭ ಬೇಕಿರುತ್ತದೆ. ನಿಮಗೆ ಅರ್ಥವಾಗಿಲ್ಲದಿದ್ದರೆ ಈ ಉದಾಹರಣೆ ಕೇಳಿ. 50% ನಷ್ಟ ಅಂದರೆ 100% ನಷ್ಟು ಲಾಭ ಬೇಕಿರುತ್ತದೆ. ಅಂದರೆ ನಿಮ್ಮ 1 ಲಕ್ಷ ರೂನ ಬಂಡವಾಳ 50,000 ರೂ ವಾಗಿದ್ದು ಮತ್ತೆ 1 ಲಕ್ಷ ರೂ ಆಗಬೇಕಿದ್ದರೆ 50,000 ರೂ ಬೇಕಿದೆ. ಇದು 100% ಲಾಭವಾಗಿದೆ.

what does 20% drawdown mean in kannada
20% drawdown

ನೀವು 90% ನಷ್ಟು ನಷ್ಟ ತೆಗೆದುಕೊಂಡಿದ್ದರೆ ಗಣಿತದ(mathematics) ಪ್ರಕಾರ ನಿಮಗೆ 1000% ರಿಟರ್ನ್ ಬೇಕಿರುತ್ತದೆ. ಇದು ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ(practically impossible). ಇನ್ನೊಂದು ಉದಾಹರಣೆ ನೋಡೋಣ, ನಿಮ್ಮ ಹತ್ತಿರ 1 ಲಕ್ಷ ರೂ ಇತ್ತು ಎಂದುಕೊಳ್ಳಿ. ಇದರಲ್ಲಿ 50% ನಷ್ಟವಾಯಿತು, ಆಗಿದ್ದರೆ 50,000 ರೂ ಉಳಿದಿದೆ. ನಿಮಗೆ ಮತ್ತೆ 50,000 ರೂ ನಿಂದ 1 ಲಕ್ಷ ರೂಗೆ ಹೋಗಬೇಕು, ಏಕೆಂದರೆ ನಷ್ಟದಲ್ಲಿ ಮಾರಲು ಇಷ್ಟವಿರುವುದಿಲ್ಲ. ಹೀಗಾಗಿ ನಿಮಗೆ 100% ಲಾಭ ಬೇಕಿದೆ. ನೀವು ಇದನ್ನು ಬಂಡವಾಳ ದುಪ್ಪಟ್ಟು(capital double) ಮಾಡುವೆನು ಎನ್ನುವಿರಾ. ಇದು ಬಂಡವಾಳ ಸಂರಕ್ಷಣೆಯಾಗಿಲ್ಲ(preservation). ನೀವು ಟ್ರೇಡಿಂಗ್ನಲ್ಲಿ ಯಶಸ್ವಿಯಾಗಲು ಬಂಡವಾಳವನ್ನು ಸಂರಕ್ಷಣೆ ಮಾಡಿಕೊಂಡಿರಬೇಕು.

ಡೇವಿಡ್ ಹೆಚ್ ಬೈಲಿ(david h bailey) ಮತ್ತು ಮಾರ್ಕೋಸ್ ಲೋಪೆಜ್ ಡಿ ಪ್ರಾಡೊ(marcos lopez de prado) ಎಂಬ 2 ಸಂಶೋಧಕರು(researcher) ಇದ್ದರು. ಅವರ ಪ್ರಕಾರ ನಿಮಗೆ ಡ್ರಾಡೌನ್ಗೆ ಬರಲು ಎಷ್ಟು ಸಮಯ ತೆಗೆದುಕೊಳ್ಳುವುದೊ ಚೇತರಿಸಿಕೊಳ್ಳಲು ಅದಕ್ಕಿಂತ 2 ರಿಂದ 3 ಪಟ್ಟು ಹೆಚ್ಚಿನ ಸಮಯ ಬೇಕಿರುತ್ತದೆ ಎನ್ನುತ್ತಾರೆ. ಅಂದರೆ ನೀವು ಒಂದು ಲಕ್ಷ ರೂನಿಂದ 50,000 ರೂ ತನಕ ನಷ್ಟ ಮಾಡಿಕೊಂಡಿದ್ದು, ಅದಕ್ಕೆ 1 ತಿಂಗಳು ತೆಗೆದುಕೊಂಡಿದ್ದರೆ ಅದನ್ನು ಚೇತರಿಸಿಕೊಳ್ಳಲು 3 ತಿಂಗಳು ತೆಗೆದುಕೊಳ್ಳುತ್ತದೆ. ಇದನ್ನು ವೃತ್ತಿಪರರು(professional) ಅರ್ಥ ಮಾಡಿಕೊಂಡಿದ್ದರೆ ಮತ್ತು ಅವರು ಅವಸರ ಮಾಡುವುದಿಲ್ಲ. ಅಪಕ್ವ(immature) ಇರುವವರು ನಷ್ಟವಾಗಿರುವುದನ್ನು ನೋಡಿ ಬೇಗನೆ ಚೇತರಿಸಿಕೊಳ್ಳಲಿ ಎಂದು ಯೋಚಿಸುತ್ತಾರೆ.

ಇತ್ತೀಚಿಗೆ ಬೆಳ್ಳಿ ಮೇಲೆ ಹೋದಾಗ ಅದನ್ನು ಖರೀದಿಸಿದವರು, ಅದು ಬಿದ್ದಾಗ ಏನು ಮಾಡಬೇಕೆಂದು ತಿಳಿಯಲಿಲ್ಲ. ಇಲ್ಲಿನಿಂದ ದಿಗಿಲಾಗಲು(panic) ಶುರುವಾಗುತ್ತದೆ. ಹೀಗಾಗಿ ನೀವು ಟ್ರೇಡಿಂಗ್ ಮನೋವಿಜ್ಞಾನ ತಿಳಿಯಲು ಈ ಲೇಖನಗಳು ಮುಖ್ಯವಾಗಿದೆ.

ಟ್ರೇಡಿಂಗ್ 80% ಮನೋವಿಜ್ಞಾನವಾಗಿದ್ದರೆ, 20% ತಂತ್ರವಾಗಿದೆ(starategy). ನಮ್ಮ ಮೆದುಳು ಸಂಭವನೀಯತೆಯ(probability) ಮೇಲೆ ನಿರ್ಧಾರ ಮಾಡುವುದಿಲ್ಲ. ಆದರೆ ಟ್ರೇಡಿಂಗ್ನಲ್ಲಿ ನಷ್ಟವಾದಾಗ ನಮ್ಮ ಮೆದುಳಿನಲ್ಲಿ ಇರುವ ಅಮಿಗ್ಡಾಲಾ(amygdala) ಭಾಗವು ಪ್ರಚೋದವಾಗುತ್ತದೆ. ಇದರಿಂದ ಕಾರ್ಟಿಸೋಲ್(cortisol) ರೀತಿಯ ಒತ್ತಡ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರಿಂದ ನಮ್ಮ ದೇಹವು ಹೋರಾಟ ಅಥವಾ ಹಾರಾಟದ ಮೋಡ್ಗೆ(fight or flight mode) ಹೋಗುತ್ತದೆ. ಆಗ ನೀವು ತಾರ್ಕಿಕ(logical) ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಟ್ರೇಡಿಂಗ್ ನ ಈ 5 ಭಾವನಾತ್ಮಕ ಬಲೆಯ(emotional trap) ಬಗ್ಗೆ ತಿಳಿಯಿರಿ. ಇದನ್ನು ಅರ್ಥ ಮಾಡಿಕೊಂಡರೆ ನೀವು ಲಾಭ ಮಾಡುವಿರಿ.

ಇದನ್ನು ಓದಿ: ದೊಡ್ಡ ಲಾಭಕ್ಕಾಗಿ ಪೆನ್ನಿ ಸ್ಟಾಕ್‌ಗಳು(Penny stocks)

1. Greed and fomo

what is a fomo in trading in kannada
greed & fomo

ಕಾಣೆಯಾಗುವ ಭಯ(fomo) ಅಂದರೆ ಬೆಳ್ಳಿಯು ದುಪ್ಪಟ್ಟು ಬೆಲೆ ಅದರೆ ಎಂಬ ಭಯವಿರುತ್ತದೆ. ನಾವು ಯಾವುದಾದರೂ ಸ್ಟಾಕ್ ಮೇಲೋಗುವುದನ್ನು ನೋಡಿದರೆ ನಮ್ಮ ಮೆದುಳಿನಲ್ಲಿ ಡೋಪಮೈನ್ ಹಿಟ್(dopamine hit) ನೀಡುತ್ತದೆ. ಅಂದರೆ, ಇಲ್ಲಿ ಖರೀದಿಸೋಣ, ಒಳ್ಳೆಯ ಹಣ ಗಳಿಸಬಹುದು ಎಂದು ತಿಳಿದು ನೀವು ಎತ್ತರದಲ್ಲಿ(peak) ಖರೀದಿ ಮಾಡುತ್ತೀರಾ. ಯಾವುದೇ ಟ್ರೇಡ್ ತೆಗೆದುಕೊಳ್ಳುವ ಮೊದಲು 2 ಸ್ವತಂತ್ರ ದೃಢೀಕರಣ ನಿಯಮಗಳನ್ನು(independent confirmation rules) ಮಾಡಿ. ನೀವು ಏಕೆ ಖರೀದಿಸಲು ಬಯಸಿರುವಿರಾ, ನಿಮ್ಮ ತಂತ್ರ ಇಲ್ಲ ಸೆಟಪ್ ಹೇಳುತ್ತಿದೆಯೇ ಎಂಬುದನ್ನು ನೋಡಿ.

2. Loss aversion buyers

ಈ ಸಿದ್ಧಾಂತದ(theory) ಪ್ರಕಾರ ನಷ್ಟದಿಂದ ಆಗುವ ಬೇಸರವು ಲಾಭದ ಖುಷಿಗಿಂತ 2 ಪಟ್ಟು ಹೆಚ್ಚು ಇರುತ್ತದೆ. ನಷ್ಟ ಹೆಚ್ಚಾದಾಗ ಹಗೆಯ ಟ್ರೇಡಿಂಗ್(revenge trading) ಮಾಡಬೇಡಿ. ಯಾವುದಾದರೂ ಒಂದು ದೊಡ್ಡ ನಷ್ಟದಿಂದ ನಾವು ಮಾರುಕಟ್ಟೆಯಿಂದ ಎಲ್ಲಾ ಹಣವನ್ನು ವಾಪಸ್ ಪಡೆಯಲು ಬಯಸುತ್ತೇವೆ.

3. Three mistake rule

ನೀವು ಒಂದು ದಿನದಲ್ಲಿ 3 ಭಾವನಾತ್ಮಕ ಟ್ರೇಡ್(emotional trade) ತೆಗೆದುಕೊಂಡು ಅದರಲ್ಲಿ ನಷ್ಟವಾಗಿದೆಯೇ? ವೃತ್ತಿಪರರು ಈ ಸಂದರ್ಭದಲ್ಲಿ ಇಂದು ಟ್ರೇಡಿಂಗ್ ನಿಲ್ಲಿಸಿ, ನಾಳೆ ಮಾಡೋಣ ಎನ್ನುತ್ತಾರೆ.

4. Overconfidence

ಇದರಲ್ಲಿ ನಮಗೆ ಷೇರು ಮಾರುಕಟ್ಟೆಯ ನಿಯಂತ್ರಣ ಸಿಕ್ಕಿದೆ ಎಂದು ಭಾಸವಾಗುತ್ತದೆ. ಕೆಲವು ಲಾಭದಾಯಕ ಟ್ರೇಡ್ ನಂತರ ನಾವು ಮಾರುಕಟ್ಟೆಯಲ್ಲಿನ ಅಪಾಯವನ್ನು ನಿರ್ಲಕ್ಷಿಸುತ್ತೇವೆ.

5. Confirmation buyers

ಇದರಲ್ಲಿ ನಾವು ಕೇವಲ ನಮ್ಮ ಪ್ರಸ್ತುತ ಟ್ರೇಡ್ ಗೆ ಸಹಕರಿಸುವ ಸುದ್ಧಿಗಳನ್ನು ಮಾತ್ರ ನೋಡುತ್ತೇವೆ. ಹೀಗಾಗಿ ನೀವು ಟ್ರೇಡ್ ಮಾಡುವ ಮೊದಲು ನೀವು ಅಂದುಕೊಂಡ ರೀತಿ ಟ್ರೇಡ್ ಆಗುವುದಿಲ್ಲ ಎಂಬ ಒಂದು ಸುದ್ಧಿಯನ್ನು ಹುಡುಕಿ. ಇದರಿಂದ ನಿಮಗೆ ಅಪಾಯದ ಬಗ್ಗೆ ತಿಳಿಯುತ್ತದೆ.

ಇದನ್ನು ಓದಿ: ನಿಮ್ಮ ಸುತ್ತಲಿರುವ ಪ್ರತಿಯೊಬ್ಬರೂ ಏಕೆ ಹೆಚ್ಚು ಶ್ರೀಮಂತರಾಗಿ ಕಾಣುತ್ತಾರೆ?

3. Risk management tools

what is risk management for trading in kannada
risk management

ನೀವು ನಿಮ್ಮ ಟ್ರೇಡಿಂಗ್ನ ಸ್ಥಾನದ ಗಾತ್ರದ(position size) ತಿಳಿಯಲು ಈ ಗಣಿತದ ಸೂತ್ರದ(formula) ಬಗ್ಗೆ ತಿಳಿಯಿರಿ.

position size = capital * risk percent

ಅಂದರೆ ನಿಮ್ಮ 1 ಲಕ್ಷ ರೂ ಇದ್ದರೆ, ಅಪಾಯ(risk) ನೀವು 10% ತೆಗೆದುಕೊಳ್ಳುತ್ತಿದರೆ, 1 ಲಕ್ಷ * 10 ಮಾಡಿ. ನೀವು 100 ರೂಗೆ ಪ್ರವೇಶ ಮಾಡಿ ಸ್ಟಾಪ್ಲಾಸ್(stoploss) 90 ರೂಗೆ ಇದೆ ಎಂದುಕೊಳ್ಳಿ. ಆಗಿದ್ದರೆ ವ್ಯತ್ಯಾಸ 10 ರೂ ಆಗುತ್ತದೆ. ನೀವು ಮುಂಚೆ ಗುಣಿಸಿರುವುದನ್ನು ಇದರಿಂದ ಭಾಗ ಮಾಡಿ. ಅಂದರೆ 1 ಲಕ್ಷ * 10 / 10. ಈ ನಿಯಮದ ಪ್ರಕಾರ ನೀವು ಮೊದಲ ಟ್ರೇಡ್ ಅನ್ನು 1 ಲಕ್ಷಕ್ಕೆ ತೆಗೆದುಕೊಳ್ಳಬಹುದು.

ಒಂದು ವೇಳೆ ನಿಮ್ಮ ಬಂಡವಾಳ 2.5 ಲಕ್ಷ ರೂ ಇದ್ದು, 5% ನಷ್ಟ ತೆಗೆದುಕೊಳ್ಳಲು ಸಿದ್ಧವಿದ್ದರೆ. 12.5 ಲಕ್ಷ ಬರುತ್ತದೆ. ನೀವು 100 ರೂಗೆ ಪ್ರವೇಶ ಮಾಡಿ ಸ್ಟಾಪ್ಲಾಸ್ 80 ರೂಗೆ ಇದ್ದರೆ ವ್ಯತ್ಯಾಸ 20 ರೂ ಆಗುತ್ತದೆ. 12.5 ಲಕ್ಷ ರೂ ಅನ್ನು 20 ರೂಯಿಂದ ಭಾಗ ಮಾಡಿ, ನಿಮ್ಮ ಸ್ಥಾನದ ಗಾತ್ರ 62,500 ರೂ ಎಂದು ನಿಮಗೆ ತಿಳಿಯುತ್ತದೆ.

4. Risk to reward ratio

ಯಾವಾಗಲೂ ನಷ್ಟಕಿಂತ 3 ಪಟ್ಟು ಹೆಚ್ಚು ಲಾಭವಿರುವ ಟ್ರೇಡ್ ತೆಗೆದುಕೊಳ್ಳಿ. ಇದರಿಂದ ನೀವು ದೀರ್ಘಾವಧಿಯಲ್ಲಿ ಟ್ರೇಡ್ನಲ್ಲಿ ಲಾಭದಾಯಕ ಇರುವಿರಾ.

ಇದನ್ನು ಓದಿ: ETF ಹೂಡಿಕೆ ತಂತ್ರ

5. Adaptive recovery rotating

what is the adaptive recovery rotating strategy in trading in kannada
adaptive recovery rotating

ಇದರಲ್ಲಿ ನೀವು ಡ್ರಾಡೌನ್ಗೆ ಹೋದರೆ ಆಕ್ರಮಣಕಾರಿ ಮೋಡ್ನಿಂದ(offensive mode) ಹೊರಗೆ ಬಂದು ರಕ್ಷಣಾತ್ಮಕ ಮೋಡ್ಗೆ(defensive mode) ಬರಬೇಕು. ನೀವು ನಷ್ಟವಾದಾಗ ಇದು ನನ್ನ ತಂತ್ರದಿಂದ ಆಯಿತಾ ಅಥವಾ ಯಾವುದಾದರೂ ಘಟನೆಯಿಂದ(event) ಆಗಿದ್ದ ಎಂಬುದನ್ನು ನೋಡಿ.

ನೀವು ಡ್ರಾಡೌನ್ನಲ್ಲಿ ಇದ್ದರೆ ಒಡ್ಡುವಿಕೆ(exposure) ಕಡಿಮೆ ಮಾಡಿ, ನೀವು ಯಾವ ಗಾತ್ರಕ್ಕೆ ತೆಗೆದುಕೊಳ್ಳುತ್ತಿರುವಿರೋ, ನಷ್ಟದ ನಂತರ ಅದರ ಅರ್ಧಕ್ಕೆ ಟ್ರೇಡ್ ತೆಗೆದುಕೊಳ್ಳಿ. ನಂತರ ನೀವು ಮಾಡಿರುವ ಜರ್ನಲ್ ನ ಲೆಕ್ಕಪರಿಶೋಧನೆ(audit) ಮಾಡಿ. ಇದರಲ್ಲಿ ಒಳ್ಳೆಯ ನಷ್ಟವಾಗಿದೆಯೇ(good loses) ಇಲ್ಲ ಕೆಟ್ಟ ನಷ್ಟವಾಗಿದೆಯೇ(bad loses) ಎಂಬುದನ್ನು ನೋಡಿ.

ಒಳ್ಳೆಯ ನಷ್ಟವೆಂದರೆ ತಂತ್ರವನ್ನು ಅನುಸರಿಸಿ ಆಗಿರುವ ನಷ್ಟವಾಗಿದೆ. ಕೆಟ್ಟ ನಷ್ಟವೆಂದರೆ ನಿಯಮವನ್ನು ಉಲ್ಲಂಘಿಸಿ(break) ಆಗಿರುವ ನಷ್ಟವಾಗಿದೆ. ಇದರ ನಂತರ ನಿಧಾನವಾಗಿ ನಿಮ್ಮ ವಿಶ್ವಾಸ(confidence) ಹೆಚ್ಚುವ ರೀತಿಯೇ ಸ್ಥಾನದ ಗಾತ್ರವನ್ನು ಹೆಚ್ಚಿಸುತ್ತ ಬನ್ನಿ. ಇದರಿಂದ ನೀವು ಒಂದು ಚೇತರಿಕೆ ವ್ಯವಸ್ಥೆಗೆ(recovery system) ಬರುವಿರಾ. ನಿಮ್ಮ ಟ್ರೇಡಿಂಗ್ ಜರ್ನಲ್ನ ವಿಶ್ಲೇಷಣೆ ಮಾಡುತ್ತಲೇ ಇರಿ. ವಾರದಲ್ಲಿ ಒಮ್ಮೆ ಇಲ್ಲ ತಿಂಗಳಲ್ಲಿ ಒಮ್ಮೆಯಾದರೂ ಅದನ್ನು ನೋಡುತ್ತೀರಿ ಮತ್ತು ನಿಮ್ಮ ಲಾಭದಾಯಕತೆಯ ಶೇಕಡಾವಾರು(profitability percentage) ಎಷ್ಟಿದೆ ಎಂಬುದನ್ನು ನೋಡಿ. ನಿಮ್ಮ ಒಟ್ಟು ಲಾಭವನ್ನು ಒಟ್ಟು ನಷ್ಟದಿಂದ ಭಾಗ ಮಾಡಿ. ಒಂದು ವೇಳೆ ಈ ಅನುಪತ 1.5 ಕ್ಕಿಂತ ಮೇಲೆ ಇದ್ದರೆ, ನಿಮ್ಮ ತಂತ್ರವು ಸರಿಯಾಗಿದೆ. ನೀವು ಇವುಗಳನ್ನು ಮಾಡುತ್ತಿಲ್ಲವೆಂದರೆ ಮಾರುಕಟ್ಟೆಯಲ್ಲಿ ಜೂಜಾಟ(gambaling) ಮಾಡುತ್ತಿರುವಿರಷ್ಟೇ. ಇದು ಏಕೆಂದರೆ ಗಂಭೀರ ಟ್ರೇಡರ್ಗಳು ಒಂದೊಂದು ಟ್ರೇಡ್ ನ ಲೆಕ್ಕ ಇಟ್ಟುಕೊಂಡಿರುತ್ತಾರೆ.

ಟ್ರೇಡಿಂಗ್ 100 ಮೀ ಓಟವಾಗಿಲ್ಲ. ಅದು ಒಂದು ಮ್ಯಾರಥಾನ್ ಆಗಿದೆ. ಇದರಲ್ಲಿ ಚಿಕ್ಕ ಚಿಕ್ಕ ನಷ್ಟವಾದರೆ ಚಿಂತೆ ಇಲ್ಲ, ಆದರೆ ಅದರಿಂದ ಪಾಠ ಕಲಿತು ನೀವು ದೀರ್ಘಾವಧಿಯ ದೃಷ್ಟಿ(vision) ಇಟ್ಟುಕೊಳ್ಳಬೇಕು.

ಈ ಲೇಖನದಲ್ಲಿ ನಾವು ಮೊದಲಿಗೆ ಟ್ರೇಡಿಂಗ್ ಜನರಲ್ ನಿರ್ವಹಣೆ ಮಾಡಲು ತಿಳಿಸಿದೆವು. ಇದು ನಿಮಗೆ ಒಂದು ಮಾರ್ಗಸೂಚಿ(roadmap) ತೋರಿಸುತ್ತದೆ. ಡ್ರಾಡೌನ್ ಗಣಿತವನ್ನು ಅರ್ಥ ಮಾಡಿಕೊಂಡೆವು. ಇದರಲ್ಲಿ ಬಂಡವಾಳ ಸಂರಕ್ಷಿಸುವುದು(prevent) ಎಷ್ಟು ಮುಖ್ಯವೆಂದು ತಿಳಿದೆವು. ನಂತರ ಮಾನಸಿಕ ಬಲೆಯ(psychological trap) ಬಗ್ಗೆ ತಿಳಿದೆವು. ಅಂದರೆ ಕಳೆದುಹೋಗುವ ಭಯ, ಹಗೆಯ ಟ್ರೇಡಿಂಗ್ ಬಗ್ಗೆ ತಿಳಿದು, ಅವುಗಳಿಂದ ಉಳಿಯುವುದೇಗೆ ಎಂಬುದನ್ನು ನೋಡಿದೆವು.

ನಿಮ್ಮ ಟ್ರೇಡಿಂಗ್ ಖಾತೆ(account) ನಿಮ್ಮ ಮನಸ್ಥಿತಿಯ ಪ್ರತಿಫಲನವಾಗಿದೆ(reflexation). ನಿಮ್ಮ ಮನಸ್ಸು ಶಿಸ್ತುಬದ್ದವಿದ್ದರೆ ನಿಮ್ಮ ಖಾತೆ ಕೂಡ ಬೆಳೆಯುತ್ತದೆ. ಅದೇ ನಿಮ್ಮ ಮನಸ್ಸು ಗೊಂದಲಕ್ಕೊಳಗಾಗಿದ್ದರೆ(puzzled) ಮಾರುಕಟ್ಟೆ ನಿಮ್ಮನ್ನು ಸ್ಫೋಟಗೊಳಿಸುತ್ತದೆ(blown up).

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.