Website designed by @coders.knowledge.

How Warren Buffet got Rich(From $114 to $149 Billion) | ವಾರೆನ್ ಹೇಗೆ ಶ್ರೀಮಂತರಾದರು?

Watch Video

ಸುದ್ಧಿಪತ್ರಿಕೆ(newspaper) ಮಾರುತಿದ್ದ ಬಾಲಕ ಮುಂದೆ ಆ ಸುದ್ಧಿಪತ್ರಿಕೆ ಕಂಪನಿಯನ್ನೇ ಖರೀದಿಸಿದ, ಪ್ರತಿ ದಿನ 2$ ಗೆ ಕೋಕಾ ಕೋಲಾ ಮಾರುತಿದ್ದ, ಮುಂದೆ ಆ ಕಂಪನಿಯಿಂದಲೇ 100 ಕೋಟಿಗಿಂತ ಅಧಿಕ ಲಾಭಾಂಶ(dividend) ಆದಾಯ ಪಡೆದ, ಪುಸ್ತಕಗಳನ್ನು ಬಾಡಿಗೆಗೆ ತೆಗೆದುಕೊಂಡು ಓದುತ್ತಿದ್ದ ಆ ಬಾಲಕನನ್ನು ಜಗತ್ತು ಇಂದು "ಸಾರ್ವಕಾಲಿಕ ಶ್ರೇಷ್ಠ ಹೂಡಿಕೆದಾರ"(greatest investor of all time) ಎನ್ನುತ್ತಿದೆ. ವಾರೆನ್ ಬಫೆಟ್(warren buffet) ಅವರ ನಿವ್ವಳ ಮೌಲ್ಯ(networth) 149B$ ಆಗಿದೆ, ಅಂದರೆ 13 ಲಕ್ಷ ಕೋಟಿಯಾಗಿದೆ. ಆದರೆ ಇಷ್ಟು ದೊಡ್ಡ ಸಾಮ್ರಾಜ್ಯ ಕೇವಲ $114 ನಿಂದ ಪ್ರಾರಂಭವಾಗಿತ್ತು ಎಂಬುದು ಅನೇಕರಿಗೆ ತಿಳಿದಿಲ್ಲ.

at what age did warren buffett get rich in kannada
88999999

ಪ್ರತಿಯೊಬ್ಬ ಮಧ್ಯ ವರ್ಗದ(middle class) ವ್ಯಕ್ತಿಯು ಹಣ ಮತ್ತು ಆರ್ಥಿಕ ಸ್ವತಂತ್ರವನ್ನು(financial freedom) ಬಯಸುತ್ತಾನೆ. ಇದಕ್ಕಾಗಿ ನೀವು ವಾರೆನ್ ಬಫೆಟ್ ಅವರ ಪಾಠಗಳನ್ನು ಅನುಸರಿಸಿ. ಏಕೆಂದರೆ ಅವರು ಹಣ(money), ನಡವಳಿಕೆ(behaviour), ಹೂಡಿಕೆ(investing) ಮತ್ತು ಸಂಯುಕ್ತಗೊಳಿಸುವಿಕೆಯ(compounding) ಬಗ್ಗೆ ತಿಳಿಸಿದ ಪಾಠಗಳು ಎಷ್ಟು ಸುಲಭವಿದೆ ಎಂದರೆ, ಯಾರು ಬೇಕಾದರೂ ಅದನ್ನು ಅನುಸರಿಸಬಹುದು. ಯಾರು ಅದನ್ನು ಅನುಸರಿಸಿರುವರೋ ಅವರ ಆದಾಯ(wealth) ಅಧಿಕವಾಗಿದೆ. ಎಷ್ಟೋ ಜನರು ಅವರನ್ನು ಅನುಸರಿಸಿ ಕೋಟ್ಯಾಧಿಪತಿ(billionaire) ಕೂಡ ಆಗಿದ್ದಾರೆ.

ಆಗಿದ್ದಾರೆ ಓಮಹದ ಒಬ್ಬ ಬಾಲಕ $114 ನಿಂದ $149B ಆಗಿ ಹೇಗೆ ಬದಲಾಯಿಸಿದರು? ಅವರು ಈ ಪಾಠಗಳನ್ನು ಎಲ್ಲಿಂದ ಕಲಿತರು? ಅವರ ಜೀವನದ ಯಾವ ಆಯ್ಕೆ ಅವರನ್ನು ಯಶಸ್ವಿ ಮಾಡಿತು? ಮಾರುಕಟ್ಟೆ ಕುಸಿತದ(market crash) ನಂತರ ಅವರು ಹೇಗೆ ಆದಾಯವನ್ನು ಸೃಷ್ಟಿ ಮಾಡುತ್ತಾ ಇದ್ದರು, ಸಂಯುಕ್ತದ ಶಕ್ತಿ(power of compounding) ಹೂಡಿಕೆ ಅಷ್ಟೇ ಅಲ್ಲದೆ ಸಂಬಂಧ(relation), ಖ್ಯಾತಿ(reputation), ಜ್ಞಾನದಲ್ಲಿ(knowledge) ಹೇಗೆ ಕೆಲಸ ಮಾಡುತ್ತದೆ? ಎಂಬುದನ್ನು ನೋಡಲಿದ್ದೇವೆ.

ಇದನ್ನು ಓದಿ: ಪೂರ್ ಚಾರ್ಲಿಸ್ ಆಲಮನಕ್ ಪುಸ್ತಕದ ಸಾರಾಂಶ

ವಾರೆನ್ ಬಫೆಟ್ 1930 ರಂದು ಅಮೇರಿಕದ ಚಿಕ್ಕ ನಗರವಾದ ಓಮಹದಲ್ಲಿ(omaha) ಮಹಾ ಖಿನ್ನತೆ(great depression) ಸಮಯದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲಿ ಅವರಿಗೆ ಹಣ ಗಳಿಸುವ ಆಸೆ ಇತ್ತು. ಅವರು 7ನೇ ವಯಸ್ಸಿನವರಿದ್ದಾಗ ಓಮಹದ ಸಾರ್ವಜನಿಕ ಗ್ರಂಥಾಲಯದಲ್ಲಿ(public library) ಹಣ ಗಳಿಸುವ ಪುಸ್ತಕಗಳನ್ನು ಹುಡುಕುತ್ತಿದ್ದರು.

ಆಗ ಅವರಿಗೆ "thousand ways to make $1000" ಎಂಬ ಪುಸ್ತಕದ ಮೇಲೆ ಗಮನ ಹೋಯಿತು. ಆ ಸಮಯದಲ್ಲಿ $1000 ಅವರಿಗೆ ಅತಿ ದೊಡ್ಡ ಕನಸು ಆಗಿತ್ತು. ಹೀಗಾಗಿ ಅವರು ಗ್ರಂಥಾಲಯದಿಂದ ಪುಸ್ತಕವನ್ನು ಎರೆ ಪಡೆದು(borrow), ಆ ಪುಸ್ತಕದಲ್ಲಿ ಇರುವಷ್ಟು ವಿಷಯಗಳನ್ನು ನೆನಪಿರುವಷ್ಟು ಓದಿದರು. ಏಕೆಂದರೆ ಆ ಪುಸ್ತಕದಲ್ಲಿ ಹದಿಹರೆಯದವರು(teenager) ಶಾಲೆಯ ನಂತರ ವ್ಯವಹಾರ(business) ಮಾಡಿ ಹಣ ಗಳಿಸಲು ಇರುವ ಅನೇಕ ನಿಜವಾದ ಪ್ರಕರಣಗಳು(real case) ಇದ್ದವು.

ಇಲ್ಲಿಂದಲೇ ವಾರೆನ್ ಬಫೆಟ್ ಅವರಿಗೆ ಸಂಯುಕ್ತಗೊಳಿಸುವಿಕೆ(compounding) ಅಂದರೆ ಏನೆಂದು ತಿಳಿಯಿತು ಮತ್ತು ಚಿಕ್ಕ ಪುಟ್ಟ ವಿಷಯಗಳು ಸಮಯದ ಜೊತೆ ದೊಡ್ಡದಾಗುತ್ತವೆ ಎಂಬುದು ತಿಳಿಯಿತು. ಈ ಪುಸ್ತಕದಿಂದಲೇ ಸ್ಫೂರ್ತಿಯಾಗಿ ಅವರು ಚಿಕ್ಕ ವ್ಯವಹಾರವನ್ನು ಪ್ರಾರಂಭಿಸಿದರು. ಅವರು ಮನೆ ಮನೆಗೆ ಹೋಗಿ ಕೋಕಾ ಕೋಲ, ಚಿಂಗಮ್ಗಳನ್ನು ಮಾರುತ್ತಿದ್ದರು. ಇದರಿಂದ ಅವರಿಗೆ 2 ಸೆಂಟ್ಸ್ನಷ್ಟು(2 cents) ಲಾಭ ಸಿಗುತ್ತಿತ್ತು. ಅವರು ಕಸದ ಬುಟ್ಟಿಯಲ್ಲಿ(dust bin) ಖಾಲಿ ಕೋಕಾ ಕೋಲಾದ ಬಾಟಲಿ ನೋಡಿ ಯಾವ ಸ್ವಾದ(flavor) ಅಧಿಕ ಮಾರಾಟವಾಗುತ್ತಿದೆ? ಯಾವ ಸ್ಥಳದಲ್ಲಿ ಅಧಿಕ ಬೇಡಿಕೆ(demand) ಇದೆ, ಯಾವುದು ಬೇಗನೆ ಮಾರಾಟವಾಗುತ್ತಿದೆ ಎಂಬುದನ್ನು ವಿಶ್ಲೇಷಣೆ ಮಾಡುತ್ತಿದ್ದರು. ಇದರಿಂದ ಅವರಿಗೆ ಕಾರ್ಯನಿರತ ಬಂಡವಾಳ(working capital) ಮುಕ್ತವಾಗಲು ದಾಸ್ತಾನು(inventory) ಬೇಗನೆ ಖಾಲಿ ಮಾಡುವ ಬಗ್ಗೆ ತಿಳಿಯಿತು. ಅಂದರೆ 7 ವಯಸ್ಸಿನಲ್ಲಿ ಅವರು ನಗದು ಪರಿವರ್ತನೆ ಚಕ್ರದ(cash conversion cycle) ಪ್ರಮುಖ ಪಾಠವನ್ನು ಕಲಿತಿದ್ದರು.

which stocks did warren buffet buy in childhood in kannada
warren buffet

ವಾರೆನ್ ಬಫೆಟ್ 11 ವರ್ಷದವರಿದ್ದಾಗ ತಮ್ಮ ಬದುಕಿನ ಮೊದಲ ಸ್ಟಾಕ್ ಅನ್ನು ಖರೀದಿಸಿದರು. ಅಷ್ಟು ಸಮಯದಲ್ಲಿ ಅವರು $114 ಉಳಿಸಿದ್ದರು ಮತ್ತು ಆ ಹಣವನ್ನು ನಗರ ಸೇವಾ ನಿಗಮದ(city service corp) ಸ್ಟಾಕ್ನಲ್ಲಿ ಹಾಕಿದರು. ಅವರು ಅದನ್ನು $38 ಗೆ ಖರೀದಿಸಿದ್ದರು. ಇದನ್ನು ಖರೀದಿಸಿದ ನಂತರ ಅವರಿಗೆ ಹೂಡಿಕೆಯ ಮೊದಲ ಪಾಠದ ಬಗ್ಗೆ ತಿಳಿಯಿತು. ಅದೆಂದರೆ ಷೇರು ಮಾರುಕಟ್ಟೆ ಅಧಿಕ ಮೇಲೆ ಮತ್ತು ಕೆಳಗೆ(up & down) ಹೋಗುತ್ತದೆ. ಇದನ್ನು ಅವರು ಭವಿಷ್ಯದಲ್ಲಿ ಅವರ ಗುರುಗಳಾದ ಬೆಂಜಮಿನ್ ಗ್ರಹಾಂನಿಂದ(benjamin graham) ಕಲಿಯಲಿದ್ದರೂ. ಅದುವೇ ಮಿಸ್ಟರ್ ಮಾರ್ಕೆಟ್(mr market) ಭಾವನಾತ್ಮಕ(emotional) ವ್ಯಕ್ತಿಯಾಗಿದ್ದಾರೆ.

ಅವರ $38 ನ ಹೂಡಿಕೆ $27 ಗೆ ಬರುತ್ತದೆ ಮತ್ತು ವಾರೆನ್ ಬಫೆಟ್ ಅವರ ತಾಳ್ಮೆಯ ಪರೀಕ್ಷೆಯಾಗುತ್ತದೆ. ಅವರು ಆ ಸ್ಟಾಕ್ ಅನ್ನು ಹಿಡಿದಿಟ್ಟುಕೊಳ್ಳುತ್ತಾರೆ(hold) ಮತ್ತು ಅದು $40 ಆದಾಗ ಅದನ್ನು ಮಾರಿ, ಒಂದು ಚಿಕ್ಕ ಲಾಭವನ್ನು ಗಳಿಸುತ್ತಾರೆ. ಆದರೆ ಅವರು ಆ ಸ್ಟಾಕ್ ಅನ್ನು ಮಾರಿದ ನಂತರ, ಆ ಸ್ಟಾಕ್ನ ಬೆಲೆ ರಾಕೆಟ್ ರೀತಿ $200 ಗಿಂತ ಮೇಲೆ ಹೋಗುತ್ತದೆ. ಇದರಿಂದ ವಾರೆನ್ ಅವರಿಗೆ ವಿಷಾದವಾಗುತ್ತದೆ(regret) ಮತ್ತು ಷೇರು ಮಾರುಕಟ್ಟೆಯಿಂದ ನಾವು ಹಣ ಗಳಿಸಬಹುದು ಆದರೆ ಮೊದಲಿಗೆ ನಾನು ಅದನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಯುತ್ತಾರೆ. ನಂತರ ಅವರ ಕುತೂಹಲ ಮಟ್ಟ(curiosity level) ಹೆಚ್ಚುತ್ತಾ ಹೋಯಿತು ಮತ್ತು ಅವರು ಷೇರು ಮಾರುಕಟ್ಟೆಯ ಎಲ್ಲಾ ಪುಸ್ತಕಗಳನ್ನು ಓದಲು ಪ್ರಾರಂಭಿಸಿದರು.

ಇದನ್ನು ಓದಿ: ಥಿಂಕ್ ಮತ್ತು ಗ್ರೋ ರಿಚ್ ಪುಸ್ತಕದ ಸಾರಾಂಶ

ಸ್ಟಾಕ್ ಬೆಲೆ ಹೇಗೆ ಚಲಿಸುತ್ತದೆ? ಯಾರು ಇದನ್ನು ಚಲಿಸುತ್ತಿದ್ದಾರೆ ಮತ್ತು ಈ ಮಾರುಕಟ್ಟೆ ಈ ರೀತಿ ಏಕೆ ವರ್ತಿಸುತ್ತಿದೆ. ಇದರ ಜೊತೆಗೆ ಅವರು ಚಿಕ್ಕ ಪುಟ್ಟ ವ್ಯವಹಾರ ಮಾಡುತ್ತಿದ್ದರು. ಇದರಿಂದ ಅವರ ಬಂಡವಾಳ(capital) ಕೂಡ ಬೆಳೆಯುತ್ತಿತ್ತು. ಇದರ ನಂತರ ಅವರು ಆತನ ಗೆಳೆಯನ ಜೊತೆ ಪಾಲುದಾರಿಕೆ(partership) ಮಾಡಿ $50 ಗೆ ಬಳಸಿದ ಪಿನ್‌ಬಾಲ್ ಯಂತ್ರ(pinball machine) ಖರೀದಿಸಿ, ಒಂದು ಕ್ಷೌರಿಕ ಅಂಗಡಿಯಲ್ಲಿ(cutting shop) ಇಟ್ಟರು. ಅವರ ಐಡಿಯ ತುಂಬಾ ಸುಲಭವಿತ್ತು, ಯಾರೆಲ್ಲಾ ಕೂದಲು ಕತ್ತರಿಸಿಕೊಳ್ಳಲು ಕಾಯುತ್ತಿರುವರೋ ಬೇಸರವಾಗಿ(bore) ಗೇಮ್ ಆಡುವರು ಮತ್ತು ಅವರಿಗೆ ಲಾಭ ಸಿಗುತ್ತದೆ.

ಅವರ ಈ ಐಡಿಯ ಕೆಲಸ ಮಾಡಿತು ಮತ್ತು ಬಾಲ್ಯದಿಂದಲೇ ನಿಷ್ಕ್ರಿಯ ಆದಾಯ(passive income) ಉತ್ಪತ್ತಿಯಾಗಲು ಪ್ರಾರಂಭವಾಯಿತು. ಇಂದು ಅನೇಕರಿಗೆ 50 ವರ್ಷದ ನಂತರ ನಿಷ್ಕ್ರಿಯ ಆದಾಯವೆಂದರೆ ಏನೆಂದು ತಿಳಿದಿರುವುದಿಲ್ಲ. ಆದರೆ ವಾರೆನ್ ಬಫೆಟ್ ಅವರು 15 ನೇ ವಯಸ್ಸಿನಲ್ಲಿ ನಿಷ್ಕ್ರಿಯ ಆದಾಯ ಗಳಿಸುತ್ತಿದ್ದರು. ಇದರ ನಂತರ ಅವರು ಅದರ ಲಾಭದಲ್ಲಿ ಇನ್ನಷ್ಟು ಪಿನ್‌ಬಾಲ್ ಯಂತ್ರವನ್ನು ಖರೀದಿಸಿ, ಇನ್ನಷ್ಟು ಸ್ಥಳಗಳಲ್ಲಿ ಇಟ್ಟರು. ಜೊತೆಗೆ ಬಿಡುವಿನ ಸಮಯದಲ್ಲಿ ಸುದ್ಧಿ ಪತ್ರಿಕೆ ವಿತರಣೆ(delivery) ಕೂಡ ಮಾಡಿ, ಅಧಿಕ ಸಕ್ರಿಯ ಆದಾಯ(active income) ಗಳಿಸುತ್ತಿದ್ದರು.

when did warren buffett file his first tax return in kannada
income tax

15 ವರ್ಷದಲ್ಲೇ ಅವರು ಬಹು ಆದಾಯದ ಮೂಲಗಳನ್ನು(multiple income source) ಮಾಡಿದ್ದರು. ಇದರಿಂದಲೇ ಅವರು ಅವರ ಮೊದಲ $7 ನ ಆದಾಯ ತೆರಿಗೆಯನ್ನು(income tax) ಸಲ್ಲಿಸಿದರು. ಇದು ಏಕೆಂದರೆ ಆ ಸಮಯದಲ್ಲಿ ಅಮೆರಿಕದಲ್ಲಿ ಯಾರ ಆದಾಯ $500 ಗಿಂತ ಅಧಿಕವಿದೆಯೋ ಆದಾಯ ತೆರಿಗೆ ಸಲ್ಲಿಸುವುದು ಅನಿವಾರ್ಯವಾಗಿತ್ತು. ಐಟಿಆರ್(itr) ಸಲ್ಲಿಕೆಯಲ್ಲಿ ವಾರೆನ್ ಅವರು ತಮ್ಮ ವ್ಯವಹಾರದಲ್ಲಿ ಬಳಸಿದ $35 ಸೈಕಲ್ ಬಗ್ಗೆಯೂ ಹಕ್ಕೊತ್ತಾಯ(claim) ಮಾಡಿದರು. ನೀವು ನಿಮ್ಮ ವ್ಯವಹಾರದಲ್ಲಿ ಇರುವ ಎಲ್ಲಾ ಖರ್ಚುಗಳನ್ನು ಹೊಂದಿಸಿ ತೆರಿಗೆಯನ್ನು ಕಡಿಮೆ ಮಾಡಬಹುದು. ಅದೇ ನೀವು ದೀರ್ಘಾವಧಿಯ ವೆಚ್ಚ(long term expense) ಮಾಡಿದಾಗ ಅಂದರೆ 5 ರಿಂದ 10 ವರ್ಷಗಳಿಗೆ ಬಳಸುವ ಸೈಕಲ್, ಅದರ ಪೂರ್ತಿ ವೆಚ್ಚವನ್ನು ಒಂದು ವರ್ಷದಲ್ಲಿ ಅಲ್ಲದೆ 5 ವರ್ಷದಲ್ಲಿ ಭಾಗ ಮಾಡಿ ನೋಡಲಾಗುತ್ತದೆ. ಇದಕ್ಕೆ ಸವಕಳಿ(depreciation) ಎನ್ನುತ್ತಾರೆ.

ಇದನ್ನು ಓದಿ: ಡೇವಿಡ್ ಗಾಗಿನ್ಸ್ ಅವರ "Can't Hurt Me" ಪುಸ್ತಕದ ಸಾರಾಂಶ

ಇಂದು 15 ವರ್ಷದ ಮಕ್ಕಳು ಸೈಕಲ್ ಇಲ್ಲ, ಐಫೋನ್ ಅನ್ನು ಅವರ ತಂದೆಗೆ ಕೇಳುತ್ತಾರೆ. ಆದರೆ ವಾರೆನ್ ಅವರು ಅವರ ಸ್ವಂತ ಹಣದಲ್ಲೇ ಸೈಕಲ್ ಖರೀದಿಸಿದ್ದರು, ತೆರಿಗೆಯನ್ನು ಸಲ್ಲಿಸಿದ್ದರು ಮತ್ತು ಸವಕಳಿ ಬಳಸಿಕೊಂಡು ತೆರಿಗೆಯನ್ನು ಉಳಿಸಿದರು. ನಂತರ ವಾರೆನ್ ಮತ್ತು ಅವರ ಗೆಳೆಯ ಪಿನ್‌ಬಾಲ್ ವ್ಯವಹಾರವನ್ನು $1200 ಗೆ ಮಾರಿದರು. ಇದರ ಲಾಭ ಮತ್ತು ಇತರ ಅಡ್ಡ ವ್ಯವಹಾರದಿಂದ ವಾರೆನ್ ಅವರು ಮೊದಲ ಬಾರಿಗೆ $1000 ಮೈಲಿಗಲ್ಲನ್ನು(milestone) ಸಾಧಿಸಿದರು. ಇದರ ನಂತರ ಅವರು ಅನೇಕ ಚಿಕ್ಕ ಪುಟ್ಟ ವ್ಯವಹಾರಗಳನ್ನು ಪ್ರಾರಂಭಿಸಿದರು. ಅವೆಂದರೆ ಬಳಸಿದ ಗಾಲ್ಫ್ ಬಾಲ್(gulf ball) ಮಾರುವುದು, ಸ್ಟಾಂಪ್ ವ್ಯಾಪಾರ(stamp trade) ಮಾಡುವುದು, ಕಾರು ಹೊಳಪಿಸುವ(car polishing) ವ್ಯವಹಾರವನ್ನು ಮಾಡುವುದು, ಸುದ್ದಿಪತ್ರಿಕೆ ಮತ್ತು ಮುದ್ರಣಗಳನ್ನು(magazine) ವಿತರಣೆ ಮಾಡುವುದು.

ಆಶ್ಚರ್ಯಕರವಾಗಿ ಎಲ್ಲ ವ್ಯವಹಾರದಿಂದಲೂ ಅವರಿಗೆ ಲಾಭ ದೊರೆಯಿತು ಮತ್ತು 16ನೇ ವಯಸ್ಸಿನಲ್ಲಿ ಅವರು $1200 ನಲ್ಲಿ 40 ಎಕರೆ ಕೃಷಿ ಭೂಮಿಯನ್ನು(agriculture land) ಖರೀದಿಸಿದರು. ಅದನ್ನು ಬೇಗನೆ ಬಾಡಿಗೆಗೆ ಹಾಕಿ, ನಿಷ್ಕ್ರಿಯ ಆದಾಯ ಗಳಿಸಲು ಪ್ರಾರಂಭಿಸಿದರು. ನಂತರ 18 ನೇ ವಯಸ್ಸಿನಲ್ಲಿ ಅವರ ಬ್ಯಾಚುಲರ್ ಡಿಗ್ರಿ ಮುಗಿಯಿತು ಮತ್ತು ಬಹು ಅಡ್ಡ ವ್ಯವಹಾರದಿಂದಾಗಿ ಅವರ ನಿವ್ವಳ ಮೌಲ್ಯ(networth) $5000 ನಷ್ಟು ಇತ್ತು. ಅದು ಇಂದಿನ ಭಾರತೀಯ ಸನ್ನಿವೇಶದಲ್ಲಿ(context) 4 ಲಕ್ಷವಾಗಿದೆ.

ಇದರ ಪ್ರಕಾರ ವಾರೆನ್ ಅವರ ಆರಂಭಿಕ ಬಂಡವಾಳ(initial capital) ಕಠಿಣ ಪರಿಶ್ರಮ ಮತ್ತು ನೂಕು ನುಗ್ಗಲಿನಿಂದ(hustle) ಆಗಿತ್ತು. ಏಕೆಂದರೆ ಸ್ಟಾಕ್ಸ್ನಿಂದ ಅವರು ಇನ್ನೂ ಅಧಿಕ ಲಾಭ ಗಳಿಸಿರಲಿಲ್ಲ. ಆದರೆ ಈ ಸಮಯದಲ್ಲಿ ಅವರು ಷೇರು ಮಾರುಕಟ್ಟೆಗೆ ಸಂಬಂಧಿಸಿದ ಎಲ್ಲ ಪುಸ್ತಕಗಳನ್ನು ಓದಿದ್ದರು. ಇದರ ನಂತರವೂ ಅವರಿಗೆ ಷೇರು ಮಾರುಕಟ್ಟೆಯ ಬಗ್ಗೆ ಅರ್ಥವಾಗಿರಲಿಲ್ಲ. ಅವರು ಚಾರ್ಟ್ ಮಾದರಿ(chart pattern), ಟ್ರೇಡಿಂಗ್ ಪುಸ್ತಕ(trading book), ತಾಂತ್ರಿಕ ವಿಶ್ಲೇಷಣೆ(technical analysis) ಎಲ್ಲವನ್ನು ಕಲಿತಿದ್ದರು. ಆದರೆ ನಿಜ ಬದುಕಿನಲ್ಲಿ ಇವು ಅವರಿಗೆ ಕೆಲಸಕ್ಕೆ ಬರುತ್ತಿರಲಿಲ್ಲ. ಆಗ ಅವರಿಗೆ ಸ್ಟಾಕ್ ಟ್ರೇಡಿಂಗ್ ಒಂದು ರೀತಿ ಹಗರಣವಾಗಿದೆ(scam) ಎಂದು ತಿಳಿಯುತ್ತದೆ. ಇದರ ನಂತರ ವಾರೆನ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ(harvard university) ಮಾಸ್ಟರ್ ಡಿಗ್ರಿಗಾಗಿ ಅರ್ಜಿ ಸಲ್ಲಿಸಿದರು. ಆದರೆ ಅವರನ್ನು ತಿರಸ್ಕರಿಸಲಾಯಿತು (reject). ಇದು ಅವರ ಜೀವನದ ತಿರುವು(turning point) ಆಗಿತ್ತು.

1949 ರಂದು ಬೆಂಜಮಿನ್ ಗ್ರಹಾಂ ಅವರು ಅವರ ಇಂಟೆಲಿಜೆಂಟ್ ಇನ್ವೆಸ್ಟರ್(intelligent invester) ಪುಸ್ತಕವನ್ನು ಪ್ರಕಟಿಸಿದರು. ವಾರೆನ್ ಅವರ ಪುಸ್ತಕವನ್ನು ತಕ್ಷಣವೇ ಓದಿ, ಈ ಪುಸ್ತಕವು ಹೂಡಿಕೆಯ ಮೇಲೆ ಬರೆದ ಉತ್ತಮ ಪುಸ್ತಕವಾಗಿದೆ ಎಂದರು (this is the best book ever return on investing).

ಈ ಪುಸ್ತಕದ ಲೇಖಕರಿಗೆ ವಯಸ್ಸಾಗಿರಬಹುದು, ಇಲ್ಲ ಸತ್ತಿಬಹುದು ಎಂದು ವಾರೆನ್ ಎಂದುಕೊಂಡಿದ್ದರು. ಆದರೆ ನಂತರ ಅವರಿಗೆ ಬೆಂಜಮಿನ್ ಗ್ರಹಾಂ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ(columbia university) ಪ್ರಾಧ್ಯಾಪಕರಾಗಿರುವ(professor) ಬಗ್ಗೆ ತಿಳಿಯುತ್ತದೆ. ಇದು ತಿಳಿದ ನಂತರವೇ ವಾರೆನ್ ಅವರು ಆ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ಸ್ ಡಿಗ್ರಿಗೆ ಅರ್ಜಿ ಸಲ್ಲಿಸಿದರು ಮತ್ತು 2 ವರ್ಷ ಮೌಲ್ಯ ಹೂಡಿಕೆ ಪಿತಾಮಹರಿಂದ (value investing father) ನೇರವಾಗಿ ಶಿಕ್ಷಣ ಪಡೆದುಕೊಂಡರು. ಅವರು ಬೆಂಜಮಿನ್ ಗ್ರಹಾಂ ಜೊತೆ ಇದ್ದಾಗ ಷೇರು ಮಾರುಕಟ್ಟೆಯ ನಿಜವಾದ ಆಟದ ಬಗ್ಗೆ ತಿಳಿದುಕೊಂಡರು. ಅವರು ಆಂತರಿಕ ಮೌಲ್ಯ(intrinsic valuation), ಷೇರು ಮಾರುಕಟ್ಟೆ ಮನೋವಿಜ್ಞಾನ(stock market psychology), ಸುರಕ್ಷತೆಯ ಅಂಚು(margin of safety), ಮತ್ತು ಇತರ ಮುಖ್ಯ ವಿಷಯಗಳನ್ನು ಕಲಿತರು.

was benjamin graham warren buffett mentor in kannada
graham & warren

ಇದರ ನಂತರ ಅವರಿಗೆ ಬೆಂಜಮಿನ್ ಗ್ರಹಾಂ ಅವರು ಶಿಕ್ಷಕರು ಅಷ್ಟೇ ಅಲ್ಲದೆ ಪೂರ್ಣಾವಧಿ ಒಂದು ನಿಧಿಯನ್ನು(fund) ನಡೆಸುತ್ತಿದ್ದರೆ ಎಂದು ತಿಳಿಯುತ್ತದೆ. ಇದರಲ್ಲಿ ಅವರು ಆ ತಂತ್ರಗಳನ್ನು ಬಳಸಿಕೊಂಡು ಶ್ರೀಮಂತ ಜನರ ಹಣವನ್ನು ನಿರ್ವಹಣೆ ಮಾಡುತ್ತಾರೆ. "ವಾರೆನ್ ಅವರು ತುಂಬಾ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು(bright student) ಯಾವಾಗಲೂ ಮೊದಲನೇ ಬೆಂಚ್ನಲ್ಲಿ ಕೂರುತ್ತಿದ್ದರು. ಗ್ರಹಾಂ ಅವರು ಪ್ರೆಶ್ನೆ ಕೇಳಿದಾಗ ವಾರೆನ್ ಅವರು ಮೊದಲಿಗೆ ಕೈ ಎತ್ತುತ್ತಿದ್ದರು, ಇದು ಅವರ ಶಿಕ್ಷಕರಿಗೂ ಇಷ್ಟವಾಗುತ್ತಿತ್ತು" ಎಂದು ಅವರ ಗೆಳೆಯರು ಹೇಳುತ್ತಾರೆ.

ಇದನ್ನು ಓದಿ: ಶಿಸ್ತುಬದ್ಧವಾಗಿರಲು ಇರುವ ಹಂತಗಳು

ವಾರೆನ್ ಅವರು ತಮ್ಮ ಮಾಸ್ಟರ್ ಡಿಗ್ರಿಯನ್ನು A+ ದರ್ಜೆಯಲ್ಲಿ ಪೂರ್ಣ ಮಾಡಿದರು. ಇದರ ನಂತರ 21 ನೇ ವಯಸ್ಸಿನಲ್ಲಿ ಅವರು ಬೆಂಜಮಿನ್ ಗ್ರಹಾಂ ಅವರ ಕಂಪನಿಯಲ್ಲಿ ಕೆಲಸಕ್ಕೆ ಅರ್ಜಿ ಹಾಕಿದರು ಮತ್ತು ಯಾವುದೇ ಸಂಬಳವಿಲ್ಲದೆ ಕೆಲಸ ಮಾಡಲು ಕೇಳಿಕೊಂಡರು. ಏಕೆಂದರೆ ಅಲ್ಲಿ ಕಲಿಯುವ ಪಾಠಗಳು ಸಂಬಳಕ್ಕಿಂತ ಅಧಿಕವಿರುತ್ತದೆ ಎಂಬುದು ಅವರಿಗೆ ತಿಳಿದಿತ್ತು. ಆದರೆ ಬೆಂಜಮಿನ್ ಗ್ರಹಾಂ ಅವರು ಅವರನ್ನು ತಿರಸ್ಕರಿಸಿದರು. ಏಕೆಂದರೆ ಅವರ ಕಂಪನಿಯಲ್ಲಿ ಯಾವುದೇ ಖಾಲಿ ಹುದ್ದೆ(vacancy) ಇರಲಿಲ್ಲ. ಆದರೆ 3 ವರ್ಷದ ನಂತರ, ಅಂದರೆ 1954 ರಲ್ಲಿ ಗ್ರಹಾಂ ಅವರು ಖುದ್ದಾಗಿ ಕರೆ ಮಾಡಿ ಅವರ ಕಂಪನಿಯಲ್ಲಿ ಸೇರಿಕೊಳ್ಳಲು ಕೇಳುತ್ತಾರೆ. ಆದರೆ ಈ 3 ವರ್ಷದ ಅವಧಿಯಲ್ಲಿ ವಾರೆನ್ ವಾಲ್ ಸ್ಟ್ರೀಟ್ಗೆ(wall street) ಸೇರಲು ಬಯಸಿದ್ದರು. ಆದರೆ ಅವರ ತಂದೆ ಮತ್ತು ಗ್ರಹಾಂ ಇದಕ್ಕೆ ಬೇಡ ಎಂದರು.

ಅಂದರೆ ವಾಲ್ ಸ್ಟ್ರೀಟ್ನಿಂದ ದೂರವಿರು. ಅಲ್ಲಿನ ತಪ್ಪು ರೀತಿಗಳು ಅವರ ಬುದ್ದಿವಂತಿಕೆಯನ್ನು ಹಾಳು ಮಾಡಬಹುದು. ಇದರಿಂದಾಗಿ ವಾರೆನ್ ಅವರು ಅವರ ತಂದೆಯ ಕಂಪನಿಯಲ್ಲಿ ಮಾರಾಟಗಾರನಾಗಿ(salesman) ಕೆಲಸ ಮಾಡಿದರು. ಈ ಸಮಯದಲ್ಲಿ ಅವರು ಡೇಲ್ ಕಾರ್ನೆಗೀ(dale carnegie) ಅವರ ಸಾರ್ವಜನಿಕ ಭಾಷಣ ಕೋರ್ಸನ್ನು(public speaking course) ತೆಗೆದುಕೊಂಡರು. ಇದು ಏಕೆಂದರೆ ಅವರಿಗೆ ವೇದಿಕೆಯ ಭಯವಿತ್ತು(stage fear) ಮುಂದೆ ವಾರೆನ್ ಅವರು ಈ ಕೋರ್ಸ್ ಅನ್ನು ಅವರ ಉತ್ತಮ ಹೂಡಿಕೆಯಾಗಿದೆ ಎಂದು ತಿಳಿಸಿದರು.

about warren buffet wife in kannada
warren & susan

1952 ರ 22 ನೇ ವಯಸ್ಸಿನಲ್ಲಿ ಅವರು ಸುಶನ್(susan) ಎಂಬುವ ಒಂದು ಹುಡುಗಿಯ ಜೊತೆ ಮದುವೆಯಾದರು. ವಾರೆನ್ ಅವರು ಅವರ ರೀತಿ ಸರಳ ವಸ್ತುಗಳ ಮೇಲೆ ನಂಬಿಕೆ ಇಡುವ ಸಂಗತಿಯನ್ನು(partner) ಆಯ್ಕೆ ಮಾಡಿದ್ದರು. ಅನುಪಯುಕ್ತ ಐಷಾರಾಮಿ ವಸ್ತುಗಳಿಂದ ದೂರವಿರುತ್ತಿದ್ದಳು ಮತ್ತು ಕನಿಷ್ಠ ಜೀವನ ಶೈಲಿಯನ್ನು(minimalist lifestyle) ಅನುಸರಿಸುತ್ತಿದ್ದಳು. ಸುಶನ್ ಮನೆ ನೋಡಿಕೊಳ್ಳುವುದು, ಓದುವುದು ಮತ್ತು ಹೂಡಿಕೆಯ ಹವ್ಯಾಸವನ್ನು ಪ್ರೋತ್ಸಾಹಿಸುತ್ತಿದ್ದಳು(encourage) ಮತ್ತು ಯಾವುದೇ ರೀತಿಯ ಏರಿಳಿತಗಳಲ್ಲಿ(ups and downs) ಅವರ ಜೊತೆ ನಿಂತಿರುತ್ತಿದ್ದಳು. 1954 ರಲ್ಲಿ ಗ್ರಹಂ ವಾರನ್ ಅವರಿಗೆ ಉದ್ಯೋಗದ ಆಫರ್ ನೀಡಿದಾಗ ಅವರಿಗೆ $12000 ಸಂಬಳ ದೊರೆಯಿತು. ಅದು ಆ ಸಮಯದಲ್ಲಿ ಒಂದು ಒಳ್ಳೆಯ ಮೊತ್ತವಾಗಿತ್ತು.

ವಾರೆನ್ ಅವರು ಕೇವಲ 2 ವರ್ಷ ಮಾತ್ರ ಗ್ರಹಂ ಜೊತೆ ಕೆಲಸ ಮಾಡಿದರು. 1956 ರಂದು ಗ್ರಹಂ ಅವರು ನಿವೃತ್ತಿ ಹೊಂದು(retire) ತಮ್ಮ ಕಂಪನಿಯನ್ನು ನಿಲ್ಲಿಸಿದರು. ಆದರೆ ಆ 2 ವರ್ಷ ವಾರೆನ್ ಜೀವನದ ಮೌಲ್ಯಯುತ ವರ್ಷಗಳಾಗಿದೆ. ಅವರು ಕೆಲಸ ತೊರೆದ ನಂತರವೇ ಹೂಡಿಕೆ ಸಂಸ್ಥೆಯನ್ನು(investment firm) ಪ್ರಾರಂಭಿಸಿದರು. ವಾರೆನ್ ಬಫೆಟ್ ಪ್ರಕಾರ ಗ್ರಹಂ ಅವರ ಹೂಡಿಕೆಯ ತಂತ್ರ ನಿಜವಾದ ತಂತ್ರವಾಗಿದೆ, ಮೌಲ್ಯ ಹೂಡಿಕೆ(value investing) ಸರಿಯಾಗಿದೆ.

ಈ ತಂತ್ರವು ತುಂಬಾ ಸುಲಭವಿತ್ತು, ಕಂಪನಿಯ ನಿಜವಾದ ಮೌಲ್ಯವನ್ನು ಗುರುತಿಸಿ ಮತ್ತು ಅದಕ್ಕಿಂತ ಕಡಿಮೆ ಬೆಲೆಗೆ ಅದನ್ನು ಖರೀದಿಸಿ. ಇದಕ್ಕಾಗಿ ಅವರು ಸಿಗರೇಟ್ ಬಟ್ ಹೂಡಿಕೆಯನ್ನು(cigar butt investing) ಅನುಸರಿಸುತ್ತಿದ್ದರು. ಅಂದರೆ ಬಳಸಿ ಖಾಲಿಯಾಗಿರುವ ಸಿಗರೇಟ್ಅನ್ನು ಕಸದ ಬುಟ್ಟಿಯಲ್ಲಿ ಹಾಕಿರುತ್ತಾರೆ. ಆದರೆ ಅದರಲ್ಲಿ ಇನ್ನೂ ಕೊನೆಯ ಪಫ್ ಇರುತ್ತದೆ. ಇದೇ ರೀತಿ ದಿವಾಳಿಯಾದ(bankrupt) ನಂತರ ಸತ್ತಿರುವ ಕಂಪನಿಯು ಕಡಿಮೆ ಮೌಲ್ಯದಲ್ಲಿ ದೊರೆತರೆ, ಅದು ಕೊನೆಯ ಲಾಭದಾಯಕ ಪಫ್ ಆಗುತ್ತದೆ ಮತ್ತು ಗ್ರಹಂ ಅವರು ಇದೇ ಕೊನೆಯ ಪುಫ್ನ ಲಾಭ ತೆಗೆದುಕೊಳ್ಳುತ್ತಿದ್ದರು.

ಇದನ್ನು ಓದಿ: ನಿಮ್ಮ ಸಂಬಳವನ್ನು ಟಾಪ್ 1% ನಂತೆ ನಿರ್ವಹಿಸಿ

1956 ರಂದು ಬಫೆಟ್ ಪಾಲುದಾರಿಕೆ ಸಂಸ್ಥೆಯ(buffet partnership firm) ಪ್ರಾರಂಭವಾಯಿತು. ಇದು ಎಂತಹ ಪಾಲುದಾರಿಕೆ ಎಂದರೆ ಭವಿಷ್ಯದಲ್ಲಿ ಶತಮಾನದವರೆಗೂ ನೆನಪಿಟ್ಟುಕೊಳ್ಳುವಂತಿತ್ತು. 1957 ರಿಂದ ವಾರೆನ್ ಬಫೆಟ್ ಅವರು ತಮ್ಮ ಹೂಡಿಕೆದಾರರಿಗೆ ಪತ್ರ ಬರೆಯಲು ಪ್ರಾರಂಭಿಸಿದರು. ಪ್ರಾರಂಭದಲ್ಲಿ ಪತ್ರವು ತುಂಬಾ ಚಿಕ್ಕದಿರುತ್ತಿತ್ತು, ಅಂದರೆ ಮಾರುಕಟ್ಟೆ ಟ್ರೆಂಡ್ಸ್, ಚಿಕ್ಕ ನವೀಕರಣೆ(updates) ಇತ್ಯಾದಿ. ಆದರೆ 1960 ರ ನಂತರ ಅವರ ಪತ್ರವು ಕಾಲಾತೀತವಾದವು(timeless) ತುಂಬಾನೇ ಮೌಲ್ಯಯುತ ಮತ್ತು ಬುದ್ಧಿವಂತಿಕೆಯಿಂದ(wisdom) ಕೂಡಿತ್ತು.

what was warren buffett first shareholder letter in kannada
newsletter

ವಾರೆನ್ ಬಫೆಟ್ ಅವರು ತಮ್ಮ ಹೂಡಿಕೆಯ ತತ್ವಶಾಸ್ತ್ರವನ್ನು(philosophy) ಹಂಚಿಕೊಂಡಿದ್ದರು. ಯಾವ ಸ್ಟಾಕ್ ಅನ್ನು ಅವರು ಖರೀದಿಸಿದರು, ಖರೀದಿಸುವಾಗ ಅವರು ಏನು ಯೋಚಿಸುತ್ತಿದ್ದರು. ಎಲ್ಲವನ್ನು ತೆರೆದ ಪುಸ್ತಕದ ಸ್ಟೈಲಿನಲ್ಲಿ ಹೇಳುತ್ತಿದ್ದರು. ಆರಂಭಿಕ ಪಾಲುದಾರಿಕೆ ಸಂಸ್ಥೆಯನ್ನು ಪ್ರಾರಂಭಿಸಿದಾಗ ಅವರು $100 ಮಾತ್ರ ಹೂಡಿಕೆ ಮಾಡಿದ್ದರು ಮತ್ತು $100000 ಅನ್ನು ತಮ್ಮ ಅಕ್ಕ, ಆಂಟಿ ಮತ್ತು ಆತ್ಮೀಯರಿಂದ ತೆಗೆದುಕೊಂಡಿದ್ದರು. ಇದರಲ್ಲಿ ಕ್ರೇಜಿ ಭಾಗವೆಂದರೆ ಅವರ ಶುಲ್ಕ ರಚನೆಯಾಗಿದೆ(fees structure). ಅವರು ಶೂನ್ಯ ನಿರ್ವಹಣಾ ಶುಲ್ಕ(management fee) ತೆಗೆದುಕೊಳ್ಳುತ್ತಿದ್ದರು ಮತ್ತು ಮೊದಲ 6% ಲಾಭದ ಮೇಲೂ ಶೂನ್ಯ ಶುಲ್ಕ ತೆಗೆದುಕೊಳ್ಳುತ್ತಿದ್ದರು. ಇದರ ಮೇಲೆ ಆಗುವ ಲಾಭದ ಮೇಲೆ ಮಾತ್ರ 25% ತೆಗೆದುಕೊಳ್ಳುತ್ತಿದ್ದರು. ಅಂದರೆ ಫಂಡ್ 6% ನಷ್ಟು ರಿಟರ್ನ್ ನೀಡದಿದ್ದರೆ ವಾರೆನ್ ಪೂರ್ತಿ ವರ್ಷ ಒಂದು ರೂಪಾಯಿಯನ್ನು ಗಳಿಸುವುದಿಲ್ಲ. ಅದೇ ತುಂಬಾ ಚೆನ್ನಾಗಿ ನಿರ್ವಹಿಸಿದರೆ (perform), ವಾರೆನ್ ಅವರಿಗೆ ಮೇಲಿನ 25% ಲಾಭ ದೊರೆಯುತ್ತದೆ.

ಇದು ಅವರಿಗೆ ಗೆಲುವು-ಗೆಲುವು ಪರಿಸ್ಥಿತಿ(win-win situation) ರೀತಿಯಾಗಿತ್ತು. ಫಂಡ್ ಚೆನ್ನಾಗಿ ಕೆಲಸ ಮಾಡಿದರೆ ಅವರು ಮತ್ತು ಅವರ ಹೂಡಿಕೆದಾರರು ಅಷ್ಟೇ ಗಳಿಸುತ್ತಾರೆ. ಈ ಸಮಯದಲ್ಲಿ ವಾರೆನ್ ಅವರು ನಿಜವಾದ ಕಠಿಣ ಪರಿಶ್ರಮ(hardwork) ಹಾಕಲು ಪ್ರಾರಂಭಿಸಿದರು. ಅವರು ಒಂದು ಕೈಪಿಡಿ(manual) ತೆಗೆದುಕೊಂಡು ಮೊದಲಿನಿಂದ ಕೊನೆಯವರೆಗೂ ಪಟ್ಟಿಯಾಗಿರುವ ಎಲ್ಲಾ ಕಂಪನಿಯನ್ನು ಓದುತ್ತಿದ್ದರು.

ಆ ಸಮಯದಲ್ಲಿ ಅಂತರ್ಜಾಲ(internet) ಇರಲಿಲ್ಲ, ಸ್ಕ್ರೀನರ್(screener) ಇರಲಿಲ್ಲ. ಕೇವಲ ಪುಸ್ತಕ, ಪೆನ್ನು ಮತ್ತು ಹುಚ್ಚುತನದ ಸಮರ್ಪಣೆ(insane dedication) ಮಾತ್ರವಿತ್ತು. ಅವರು ಸಾವಿರಾರು ಕಂಪನಿಗಳನ್ನು ಓದುತ್ತಿದ್ದರು ಮತ್ತು ಆಳವಾಗಿ ಕಡಿಮೆ ಅಂದಾಜು ಮಾಡಲಾಗಿರುವ(deeply undervalued) ಸ್ಟಾಕ್ ಸಿಗುವವರೆಗೂ ನಿಲ್ಲುತ್ತಿರಲಿಲ್ಲ. ಅವರ ಫಂಡ್ ಚೆನ್ನಾಗಿ ಪ್ರದರ್ಶನ ನೀಡುತ್ತಿತ್ತು. ಇದರಿಂದ ಅನೇಕ ಜನರು ಹೂಡಿಕೆ ಮಾಡಿದರು ಮತ್ತು ನಿಧಾನವಾಗಿ ಅವರ ನಿವ್ವಳ ಮೌಲ್ಯ(networth) ಕೂಡ ಸ್ಫೋಟಿಸಲು(explode) ಪ್ರಾರಂಭಿಸಿತು.

does warren buffet own his house in kannada
first house

ಈ ಸಮಯದಲ್ಲೇ ವಾರೆನ್ ಅವರು ಒಂದು ಮನೆ ಖರೀದಿಸುವ ಬಗ್ಗೆ ಯೋಚಿಸಿದರು. ಈ ನಿರ್ಧಾರಕ್ಕೆ ಅವರ ಹತ್ತಿರ ಒಂದು ಕಾರಣ ಕೂಡ ಇತ್ತು. ಇದು ಏಕೆಂದರೆ ಒಮ್ಮೆ ಬರ್ಕ್‌ಷೈರ್ ಹ್ಯಾಥ್‌ವೇ ಸಭೆಯಲ್ಲಿ(berkshire hathaway meeting) ಒಬ್ಬರು ಅವರಿಗೆ, "ಮನೆ ಖರೀದಿಸಲು ಉತ್ತಮ ಸಮಯ ಯಾವಾಗ ಇರುತ್ತದೆ. ನಾವು ಯಾವ ವಯಸ್ಸಿನಲ್ಲಿ ಮನೆ ಖರೀದಿಸಬೇಕು" ಎಂದು ಕೇಳಿದರು. ಇದಕ್ಕೆ ಅವರು ಈ ರೀತಿ ಉತ್ತರಿಸಿದ್ದರೂ, 1952 ರಂದು ಮದುವೆಯಾದ ನಂತರ ಅವರ ಹೆಂಡತಿ ಸುಶನ್ ಮನೆ ಖರೀದಿಸಲು ಬಯಸಿದ್ದಳು. ಆದರೆ ಆ ಸಮಯದಲ್ಲಿ ಅವರ ಹತ್ತಿರ ಇದ್ದ ಬಂಡವಾಳದಿಂದ ಅವರು ಒಂದು ಮನೆ ಖರೀದಿಸಬಹುದು, ಇಲ್ಲ ಸ್ಟಾಕ್ನಲ್ಲಿ ಹೂಡಿಕೆ ಮಾಡಬಹುದಿತ್ತು.

ಒಂದು ವೇಳೆ ಅವರು ಮನೆ ಖರೀದಿಸಿದ್ದಾರೆ, ಹೂಡಿಕೆ ಮಾಡಲು ಅವರ ಹತ್ತಿರ ಹಣವು ಉಳಿಯುತ್ತಿರಲಿಲ್ಲ. ಅದೇ ಸ್ವಲ್ಪ ಕಾದರೆ ನಂತರ ಮನೆಯು ಸಿಗುತ್ತದೆ ಮತ್ತು ಹೂಡಿಕೆಗೂ ಬಂಡವಾಳವಾಗುತ್ತದೆ ಎಂದು ತಿಳಿದಿತ್ತು. ಸುಶನ್ ಇದಕ್ಕೆ ಅವರಿಗೆ ಬೆಂಬಲ ನೀಡಿದಳು ಮತ್ತು ಅವರು ಮನೆ ಖರೀದಿಸುವುದನ್ನು ವಿಳಂಬ(delay) ಮಾಡಿದರು ಮತ್ತು ಕೊನೆಗೆ 1958 ರ 28ನೇ ವಯಸ್ಸಿನಲ್ಲಿ ವಾರೆನ್ ಅವರು ಓಮಹದಲ್ಲಿ ಸರಳವಾದ 5 ಕೋಣೆಯ ಮನೆ ಖರೀದಿಸಿದರು. ಇಂದು ಕೂಡ ಅವರು ಈ ಮನೆಯಲ್ಲೇ ಇದ್ದಾರೆ. ಇದು ಏಕೆಂದರೆ ಅವರ ಭಾವನೆ(emotion) ಮತ್ತು ನೆನಪುಗಳು(memory) ಎಲ್ಲವೂ ಈ ಮನೆಯಿಂದಲೇ ಕೂಡಿದೆ.

ವಾರೆನ್ ಅವರು ಮನೆ ಖರೀದಿಸಲು ಸಾಲ(loan) ತೆಗೆದುಕೊಂಡರೋ ಅಥವಾ ಇಲ್ಲವೇ ಎಂಬುದು ತಿಳಿಯುವುದಿಲ್ಲ. ಆದರೆ ಅವರು ಈ ಮನೆಯನ್ನು ನಗದಲ್ಲೇ(cash) ಖರೀದಿಸಬಹುದು. ಇದು ಏಕೆಂದರೆ ಆ ಸಮಯದಲ್ಲಿ ಅವರ ನಿವ್ವಳ ಮೌಲ್ಯ $5 ಲಕ್ಷ ಆಗಿತ್ತು. ಇದರಲ್ಲಿ ಅನೇಕ ಅವರ ಹೂಡಿಕೆಯ ಫಂಡ್ ಲಾಭದಿಂದ ಬಂದಿತ್ತು ಮತ್ತು ಅವರ ಮನೆಯು ಕೇವಲ $31500 ನಷ್ಟು ಆಗಿತ್ತು. ಅದು ಅವರ ನಿವ್ವಳ ಮೌಲ್ಯಕ್ಕೆ ಹೋಲಿಸಿದರೆ ತುಂಬಾ ಸಣ್ಣ ಮೊತ್ತವಾಗಿದೆ. ಇದರಿಂದಾಗಿ ಅವರಿಗೆ ಇಎಂಐನ(emi) ತಲೆನೋವು ಇರಲಿಲ್ಲ ಮತ್ತು ಯಾವುದೇ ಒತ್ತಡವು ಇರಲಿಲ್ಲ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದರ ಲಾಭ ಪಡೆದುಕೊಂಡರು. ಇದರಲ್ಲಿನ ಪಾಠವೆಂದರೆ ಅವಸರದಲ್ಲಿ ಮನೆಯನ್ನು ಖರೀದಿಸಬೇಡಿ. ಕೆಲವೊಮ್ಮೆ ಮನೆಯು ನಿಮ್ಮ ಸಂಭಾವ್ಯವನ್ನು(potential) ತಡೆಯಬಹುದು. ಇದು ಏಕೆಂದರೆ, "a house can be a nightmare if the buyer's eyes are bigger than his wallet" ಎಂದು ವಾರೆನ್ ಬಫೆಟ್ ಹೇಳುತ್ತಾರೆ.

ಇದನ್ನು ಓದಿ: ಜೀವನ ಸುಲಭಗೊಳಿಸುವ 12 ಮಾನಸಿಕ ಸಂಗತಿಗಳು

ವಾರೆನ್ ಅವರು 30 ವರ್ಷದವರಾದಾಗ ಶಾಂತವಾಗಿ ತಮ್ಮ ಜೀವನದ ಮೈಲಿಗಲ್ಲನ್ನು(milestone) ದಾಟಿದರು. ಅವರು ಆ ಸಮಯದಲ್ಲಿ ಲಕ್ಷಧಿಪತಿಯಾಗಿದ್ದರು(millionaire). ಇದು ಯಾವುದೇ ಅದೃಷ್ಟ, ಆನುವಂಶಿಕತೆ(inheritence) ಅಥವಾ ರಾತ್ರಿಯ ಯಶಸ್ಸು(overnight success) ಆಗಿಲ್ಲ. ಇವೆಲ್ಲ ಅವರ ಫಂಡ್ ಹೂಡಿಕೆದಾರರಿಗೆ ವರ್ಷನು ವರ್ಷ ಸಂಯೋಜಿತ ರಿಟರ್ನ್(compounded return) ಕೊಟ್ಟಿರುವುದರಿಂದ ಸಾಧ್ಯವಾಯಿತು. ಮೊದಲಿಗೆ ಕೇವಲ $1000 ಕೊಡುತ್ತಿತ್ತು ನಂತರ ದಶಲಕ್ಷದಷ್ಟು(millons) ರಿಟರ್ನ್ ಕೊಡಲು ಪ್ರಾರಂಭಿಸಿತು. ಇವೆಲ್ಲ ಶಿಸ್ತು(discipline), ಮೌಲ್ಯ ಹೂಡಿಕೆ ಮತ್ತು ಬೆನ್ ಗ್ರಹಾಂ ಅವರ ತಂತ್ರದಿಂದ ಸಾಧ್ಯವಾಯಿತು. ವಾರೆನ್ ಅವರು ಅವರ ಸಮಯದ ಎಲ್ಲಾ ಹಣಕಾಸು ಪುಸ್ತಕಗಳನ್ನು ಓದಿದ್ದರು.

ಅವರ ಸಂಪತ್ತಿನ ಮೇಲಿನ ಅಂತ್ಯವಿಲ್ಲದ ಹುಡುಕಾಟ(endless search) ಕೊನೆಗೂ ಪ್ರತಿಫಲವನ್ನು(payoff) ನೀಡುತ್ತಿತ್ತು. 30 ರ ವಯಸ್ಸಿನಲ್ಲಿ ಅವರ ಉದ್ಯೋಗ ಮಾಡುವ ಅವಶ್ಯಕತೆ ಇಲ್ಲದ ಸ್ಥಾನಕ್ಕೆ ತಲುಪಿದರು. ಗಟ್ಟಿ ಹೂಡಿಕೆ ಅವರ ಕುಟುಂಬವನ್ನು ಸುರಕ್ಷಿತ(secure) ಮಾಡಿತ್ತು. 30 ರ ವಯಸ್ಸಿನಲ್ಲೇ ವಾರೆನ್ ಅವರು ಅನೇಕರು ಜೀವನದಲ್ಲಿ ತಲುಪಲು ಕಷ್ಟ ಇರುವ ಮಟ್ಟವನ್ನು ತಲುಪಿದ್ದರು, "money works for you, you don't work for money". ಆಸಕ್ತಿಕರ ವಿಷಯವೆಂದರೆ ಆರ್ಥಿಕ ಸ್ವತಂತ್ರ ಸಾಧಿಸಿದ ನಂತರವೂ ವಾರೆನ್ ಬಫೆಟ್ ಕೆಲಸ ಮಾಡುತ್ತಿದ್ದರು.

what is warren buffett favorite food in kannada
warren burger

ಅನೇಕರು 70 ವಯಸ್ಸಿನಲ್ಲಿ ಬಿಲಿಯನ್ ಡಾಲರ್ ಗಳಿಸಿ ಏನು ಪ್ರಯೋಜನ ಎಂದು ಕೇಳಬಹುದು. ಇದನ್ನು ಹೇಗೆ ಆನಂದಿಸಬೇಕು. ಆದರೆ ಹಣದ ನಿಜವಾದ ಬಹುಮಾನ, ಸ್ವಾತಂತ್ರ್ಯ(freedom) ನೀಡುವುದಾಗಿದೆ. ದಿನವಿಡೀ ಏನು ಮಾಡಬೇಕೆನ್ನುವ ಸ್ವಾತಂತ್ರ್ಯ ಮತ್ತು ವಾರೆನ್ ಅವರು ಈ ಸ್ವಾತಂತ್ರ್ಯವನ್ನು ಅವರ ಪೂರ್ತಿ ಜೀವನ ಅನುಭವಿಸಿದರು. ಇಂದು 95+ ವಯಸ್ಸಿನಲ್ಲೂ ಅವರು ಮಕ್ಕಳ ರೀತಿ ಬರ್ಗರ್(burger) ತಿನ್ನುತ್ತಿದ್ದಾರೆ, ಸಕ್ಕರೆ ಇರುವ ಕೋಕ್(cock) ಕುಡಿಯುತ್ತಿದ್ದಾರೆ, ಆದರೂ ಇಷ್ಟು ಸಕ್ರಿಯವಿದ್ದಾರೆ. ಆದರೆ ಭಾರತದಲ್ಲಿ 50 - 60 ವರ್ಷದ ಜನರು ಹೃದಯ ಸಮಸ್ಯೆ(heart issue), ಮಧುಮೇಹದಂತಹ(diabeties), ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಹೊರಗಡೆ ತಿನ್ನುವುದು ಬಿಡಿ ಜನರಿಗೆ ಮನೆಯಲ್ಲಿ ತಿನ್ನಲು ಸಾಧ್ಯವಾಗುತ್ತಿಲ್ಲ.

ಆದರೆ ಸತ್ಯವೆಂದರೆ ನಿಜವಾದ ಕೊಲೆಗಾರ ಆಹಾರವಾಗಿಲ್ಲ ಬದಲಿಗೆ ಒತ್ತಡವಾಗಿದೆ(stress). ಒತ್ತಡ ಬರಲು ಮುಖ್ಯ ಕಾರಣ ಹಣವೇ ಆಗಿದೆ. 2012 ರಂದು ಅವರಿಗೆ ಕ್ಯಾನ್ಸರ್ ಆದಾಗ ಜಗತ್ತಿನ ಉತ್ತಮ ಡಾಕ್ಟರ್ನಿಂದ ಚಿಕಿತ್ಸೆ(treatment) ತೆಗೆದುಕೊಂಡರು. ಹಣವು ಅವರ ಆರೋಗ್ಯಕ್ಕೆ ಬೆನ್ನೆಲುಬು(backbone) ರೀತಿ ಕೆಲಸ ಮಾಡುತ್ತಿತ್ತು. ಹೀಗಾಗಿ ನೀವು 20s - 30s ನಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ, ಸರಿಯಾಗಿ ಹೂಡಿಕೆ ಮಾಡಿದರೆ ಮತ್ತು ಬೇಗನೆ ಆರ್ಥಿಕ ಸ್ವತಂತ್ರ ಸಾಧಿಸಿದರೆ, ಜೀವನವು ಆನಂದಿತ ಮೋಡ್ನಲ್ಲಿ(enjoy mode) ಹೋಗುತ್ತಿರುತ್ತದೆ.

ಇದನ್ನು ಓದಿ: ಬ್ಯಾಬಿಲೋನ್ನ ಶ್ರೀಮಂತ ವ್ಯಕ್ತಿ ಪುಸ್ತಕದ ಸಾರಾಂಶ

ಇದನ್ನು ಕೇಳಲು ಅನ್ಯಾಯವೆನ್ನಿಸುತ್ತದೆ. ಆದರೆ ಈ ಆಟ ಈ ರೀತಿಯಲ್ಲೇ ಕೆಲಸ ಮಾಡುತ್ತದೆ. ಯಾವ ವ್ಯಕ್ತಿಗೆ ಆರ್ಥಿಕ ಒತ್ತಡ ಇರುವುದಿಲ್ಲವೋ ಆತನ ಬದುಕು ಸಂತೋಷಭರಿತ, ಆರೋಗ್ಯಕರ ಮತ್ತು ದೀರ್ಘಾವಧಿಯಾಗಿರುತ್ತದೆ. ಏಕೆಂದರೆ ಇಂದು ಮಧ್ಯಮ ವರ್ಗದಲ್ಲಿ ಹಣವನ್ನು ಯಾವ ರೀತಿ ಉಳಿಸಲಿ ಎಂಬ ತಲೆನೋವು ಇರುತ್ತದೆ. ಕಷ್ಟದ ಸಮಯವನ್ನು ಯಾವ ರೀತಿ ಎದುರಿಸುವುದು ಮತ್ತು ಅವರ ಮಕ್ಕಳು ದುಬಾರಿ ಉಡುಗೊರೆ ಕೇಳಿದಾಗ, "ಮಗು ಹಣವು ಮರದಲ್ಲಿ ಬೆಳೆಯುವುದಿಲ್ಲ" ಎನ್ನುತ್ತಾರೆ. ಇದೇ ವ್ಯಕ್ತಿಗಳು ವಾರೆನ್ ಅವರನ್ನು 90 ರ ವಯಸ್ಸಿನಲ್ಲಿ ಕೋಟ್ಯಧಿಪತಿಯಾಗಿ ನೋಡಿದಾಗ, "ಇಷ್ಟು ವಯಸ್ಸಿನಲ್ಲಿ ಇಷ್ಟೊಂದು ಹಣದ ಅವಶ್ಯಕತೆ ಏನಿದೆ" ಎನ್ನುತ್ತಾರೆ. ಆದರೆ ವಾರೆನ್ ಅವರು 20s ನಲ್ಲೇ ಸ್ವತಂತ್ರ ಸಾಧಿಸಿದ್ದರು ಮತ್ತು ನಂತರ ಈ ಕಾಂಪೌಂಡಿಂಗ್ ತಾನಾಗಿ ಆಯಿತು ಎಂಬುದನ್ನು ಅನೇಕರು ಅರ್ಥ ಮಾಡಿಕೊಳ್ಳುವುದಿಲ್ಲ. ಅಂದರೆ ಹಣವು ಅವರ ಮರದಲ್ಲಿ ಬೆಳೆಯುತ್ತಿತ್ತು.

1969 ರಂದು ವಾರೆನ್ ಅವರು ಅವರ ಫಂಡನ್ನು ಶಾಶ್ವತವಾಗಿ ಮುಚ್ಚಿದರು. ಇದು ಏಕೆಂದರೆ ಅವರ ಫಂಡ್ನ ಬೆಲೆ $100 ಮಿಲಿಯನ್ ದಾಟಿತು. ಇದರಿಂದ ಅವರಿಗೆ ಅನೇಕ ಅಗ್ಗದ ಸ್ಟಾಕ್(cheap stock) ಹುಡುಕಿ ಹೂಡಿಕೆ ಮಾಡಬೇಕಿತ್ತು. ಆ ಸಮಯದಲ್ಲಿ ಅವರ ನಿವ್ವಳ ಮೌಲ್ಯ $25 ಮಿಲಿಯನ್ನಷ್ಟು ಆಗಿತ್ತು ಮತ್ತು ಅವರು 39 ವರ್ಷದವರಾಗಿದ್ದರು. ಅಂದರೆ ಅವರಿಗೆ ಬಿಲ್ಲಿನಿಯರ್ ಆಗಲು ಇನ್ನು ಅಧಿಕ ಸಮಯ ಉಳಿದಿತ್ತು. ಈ ಸಮಯದಲ್ಲಿ ಅವರ ಬದುಕಿನಲ್ಲಿ ಒಂದು ತಿರುವು(turning point) ಬರುತ್ತಿತ್ತು. ಅದುವೇ ಅವರ ಉತ್ತಮ ಸ್ನೇಹಿತ ಚಾರ್ಲಿ ಮಂಗರ್(charlie munger).

who is warren buffett closest friend in kannada
charlie munger

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

;