Website designed by @coders.knowledge.

Website designed by @coders.knowledge.

"The Magic of Thinking Big" Book Summary | "The Magic of Thinking Big" ಪುಸ್ತಕದ ಸಾರಾಂಶ

Watch Video

20 ಜುಲೈ 1969 ಮನುಷ್ಯನ ಇತಿಹಾಸದಲ್ಲಿ ವಿಶೇಷ ದಿನವಾಗಿದೆ. ಏಕೆಂದರೆ ನಾವು ಮನುಷ್ಯರು ಒಂದು ದೊಡ್ಡ ಸಾಧನೆಯನ್ನು ಮಾಡಿದೆವು. ಇಡೀ ಜಗತ್ತಿನ ಗಮನ ಅದರ ಮೇಲೆ ಇತ್ತು. ಆ ಸಾಧನೆ ಏನೆಂದರೆ, ಇಬ್ಬರು ವ್ಯಕ್ತಿಗಳು ಭೂಮಿಯನ್ನು ಬಿಟ್ಟು ಚಂದ್ರನ ಮೇಲೆ ಮೊದಲ ಬಾರಿ ಕಾಲಿಟ್ಟಿದ್ದರು. ಗಗನಯಾತ್ರಿ ನೀಲ್ ಅರ್ಮ್ ಸ್ಟ್ರಾಂಗ್(neil armstrong) ಮತ್ತು ಬಜ್ ಆಲ್ಡ್ರಿನ್( buzz aldrin) ಚಂದ್ರನ ಮೇಲೆ ಲ್ಯಾಂಡ್ ಆಗಿ ಅವರ ಲುನಾರ್ ಘಟಕದ(module) ಬಾಗಿಲನ್ನು ತೆರೆಯಲು ಪ್ರಯತ್ನಿಸಿದಾಗ ಅಲ್ಲಿನ ವಿಪರೀತ ಒತ್ತಡದಿಂದ(pressure) ಬಾಗಿಲನ್ನು ತೆರೆಯಲು ಕಷ್ಟವೆನಿಸುತ್ತಿತ್ತು. ಆದರೂ ಸ್ವಲ್ಪ ಪ್ರಯತ್ನದ ನಂತರ ಬಾಗಿಲನ್ನು ತೆರೆಯಲು ಸಾಧ್ಯವಾಯಿತು ಮತ್ತು ನೀಲ್ ಅರ್ಮ್ ಸ್ಟ್ರಾಂಗ್ ಇಡೀ ಭೂಮಿಯಲ್ಲೇ ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿಯಾದರು.

ಇಷ್ಟು ದೊಡ್ಡ ಯೋಜನೆ(mission) ಹೇಗೆ ಸಾಧ್ಯವಾಯಿತು ಎಂದು ನಿಮಗೆ ತಿಳಿದಿದೆಯೇ? ಇದರ ಕಾರಣ ಅಮೆರಿಕ ಮತ್ತು ಸೋವಿಯತ್ ಯೂನಿಯನ್ ನಡೆಸುತ್ತಿರುವ ಯುದ್ಧವಾಗಿದೆ. ಆ ಸಮಯದಲ್ಲಿ ಎರಡು ದೇಶ ಕೋಲ್ಡ್ ವಾರ್(cold war) ನಡೆಸುತ್ತಿತ್ತು. ಆಗ ಮೊದಲು ಅಂತರೀಕ್ಷಕ್ಕೆ(space) ಯಾರು ಹೋಗುತ್ತಾರೆ ಎಂಬ ಪ್ರಶ್ನೆಗೆ ಸೊವೆತ್ ಯೂನಿಯನ್ ತನ್ನ ಮೊದಲ ಆರ್ಟಿಫಿಶಿಯಲ್ ಸೆಟಲೈಟ್ ಸ್ಪುಟ್ನಿಕ್(sputnik) ಅನ್ನು ಲಾಂಚ್ ಮಾಡುವ ಮೂಲಕ ಜಗತ್ತಿನಲ್ಲೇ ಅಂತರೀಕ್ಷದಲ್ಲಿ ತನ್ನ ಸ್ಥಾನವನ್ನು ಗಿಟ್ಟಿಸಿಕೊಂಡ ಮೊದಲ ದೇಶವಾಯಿತು. ಆದರೆ 1958 ರಂದು ಅಮೆರಿಕಾದವರು ತಮ್ಮ ಮೊದಲ ಸೆಟಲೈಟ್ ಅನ್ನು ಲಾಂಚ್ ಮಾಡಿದರು. ಇದಾಗಿ 1961 ರಂದು ಸೋವಿಯತ್ನ ಗಗನಯಾತ್ರಿ ಯೂರಿ ಗಗಾರಿನ್(yuri gagarin) ಭೂಮಿಯ ಕಕ್ಷೆಯನ್ನು ಬಿಟ್ಟು ಅಂತಾರೀಕ್ಷಕ್ಕೆ ಹೋದ ಮೊದಲ ವ್ಯಕ್ತಿಯಾದರು.

ಇದಾಗಿ ಒಂದು ವಾರದ ನಂತರ ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನಡಿ(john f kennedy) ಉಪಾಧ್ಯಕ್ಷರಿಗೆ ಮೆಸೇಜ್ ಬರೆಯುತ್ತಾ, "ನಾವು ಸ್ಪೇಸ್ ಪ್ರೋಗ್ರಾಮ್ನಲ್ಲಿ ಇಷ್ಟು ಹಿಂದೆ ಇರಲು ಕಾರಣವೇನು? ಯಾವ ವಿಷಯ ನಮ್ಮನ್ನು ತಡೆಯುತ್ತಿದೆ. ನಮ್ಮ ಹತ್ತಿರ ಒಳ್ಳೆಯ ಉಪಕರಣಗಳಿವೆ(equipments), ಬುದ್ದಿವಂತ ಜನರು ಇದ್ದರೆ, ನಾವು ಏನಾದರೂ ದೊಡ್ಡದನ್ನು ಸಾಧಿಸಬೇಕು. ನಾವು ಮನುಷ್ಯರನ್ನು ಚಂದ್ರನ ಮೇಲೆ ಕಳಿಸೋಣ" ಎಂದರು. ಇದರ ನಂತರ ಅವರು, "man shall put his foot on the moon" ಎಂದರು. ಇದನ್ನು ನಮ್ಮ ದೇಶವೇ ಮೊದಲು ಸಾಧಿಸುತ್ತದೆ ಎಂದರು. 25 ಮೇ 1961 ರಂದು ಅವರು ಒಂದು ಪ್ರಸಿದ್ಧ ಭಾಷಣವನ್ನು ನೀಡಿದರು. ಅವರು ಸಾರ್ವಜನಿಕವಾಗಿ(public) "ನಾವು ಒಂದು ದೊಡ್ಡ ಮಿಷನ್ ಸಾಧಿಸಲು ಹೊರಟಿದ್ದೇವೆ. ನಾವು ಮನುಷ್ಯನನ್ನು ಚಂದ್ರನ ಮೇಲೆ ಕಳುಹಿಸಲಿದ್ದೇವೆ ಮತ್ತು ಅವರನ್ನು ವಾಪಸ್ ಕರೆದುಕೊಂಡು ಬರಲಿದ್ದೇವೆ" ಎಂದರು.

ಇದನ್ನು ಮಾಡುವುದು ಎಷ್ಟು ಕಷ್ಟವೆಂದು ನಾವು ಅರಿತುಕೊಳ್ಳುವುದು(realize) ಕಷ್ಟವಾಗಿದೆ. ನಾವು ಈಗ ಬಳಸುವ ಮೊಬೈಲ್ ಫೋನ್ ಆಗಿನ ಕಂಪ್ಯೂಟರ್ಗಳಿಗಿಂತ ಒಂದು ಮಿಲಿಯನ್ ಬಾರಿಯಷ್ಟು ಉತ್ತಮವಾಗಿದೆ. ಆಗಿನ ಕಂಪ್ಯೂಟರ್ ತುಂಬಾ ನಿಧಾನವಿತ್ತು, ಅದರಲ್ಲಿ ಕಡಿಮೆ ಕಾರ್ಯಶೀಲತೆ(functionality) ಇದ್ದವು. ಆ ಕಂಪ್ಯೂಟರ್ಗಳಲ್ಲಿ ಕೇವಲ 32,768 ಬಿಟ್ಸ್ ನಷ್ಟು ram ಇತ್ತು. ಕೇವಲ 72kb rom ಬಳಸಿ ಮನುಷ್ಯನನ್ನು ಚಂದ್ರನ ತನಕ ತಲುಪಿಸಿದ್ದರು ಮತ್ತು ಮಿಷನ್ ಅನ್ನು ಯಶಸ್ವಿ ಮಾಡಿದರು.

ಅವರು ಇದನ್ನೆಲ್ಲ ಸಾಧಿಸಲು ಹೇಗೆ ಸಾಧ್ಯವಾಯಿತು ಎಂದು ನಿಮಗೆ ತಿಳಿದಿದೆಯೇ? ಇದು ಏಕೆಂದರೆ ಒಬ್ಬ ವ್ಯಕ್ತಿ ದೊಡ್ಡದಾಗಿ ಯೋಚಿಸಿದ ಜಾನ್ ಎಫ್ ಕೆನಡಿ ಉಪಾಧ್ಯಕ್ಷರಿಗೆ, " ನಾವು ದೊಡ್ಡದಾಗಿ ಯೋಚಿಸಬೇಕು. ನಾವು ದೊಡ್ಡದಾಗಿ ಯೋಚಿಸಲು ಯಾವುದು ತಡೆಯುತ್ತಿದೆ" ಎಂದು ಕೇಳಿದರು. ಇದು ತುಂಬಾ ಪ್ರಮುಖ ಪಾಠವಾಗಿದೆ, ಏಕೆಂದರೆ ನಾವು ದೊಡ್ಡದಾಗಿ ಯೋಚಿಸದಿದ್ದರೆ ದೊಡ್ಡದನ್ನು ಸಾಧಿಸಲು ಸಾಧ್ಯವಿಲ್ಲ.

"ದಿ ಮ್ಯಾಜಿಕ್ ಆಫ್ ಥಿಂಕಿಂಗ್ ಬಿಗ್"(the magic of thinking big) ಪುಸ್ತಕದ ಲೇಖಕ ಡೇವಿಡ್ ಶ್ವಾರ್ಟ್ಜ್(david schwartz), " ನಿಮ್ಮ ಬ್ಯಾಂಕ್ ಖಾತೆಯಾ ಗಾತ್ರ ನಿಮ್ಮ ಯೋಚನೆಯ ಗಾತ್ರದಷ್ಟು ಇರುತ್ತದೆ" ಎಂದು ಹೇಳುತ್ತಾರೆ. ಎಷ್ಟು ದೊಡ್ಡದಾಗಿ ನೀವು ಯೋಚಿಸುತ್ತಿರೋ, ಅಷ್ಟು ದೊಡ್ಡ ದೊಡ್ಡ ವಿಷಯಗಳನ್ನು ನೀವು ಸಾಧಿಸುತ್ತೀರಾ ಮತ್ತು ಇದನ್ನು ಇತಿಹಾಸದಲ್ಲೂ ಅನೇಕರು ಸಾಬೀತುಪಡಿಸಿದ್ದಾರೆ. ಹೀಗಾಗಿ ನೀವು ದೊಡ್ಡದಾದದ್ದನ್ನು ಸಾಧಿಸಲು ದೊಡ್ಡದಾಗಿ ಯೋಚಿಸಿ. ಹಾಗಿದ್ದರೆ ನೀವು ದೊಡ್ಡದಾಗಿ ಯೋಚಿಸುವುದು ಹೇಗೆ? ಲೇಖಕರು ಇದಕ್ಕೆ ಉತ್ತರ ನೀಡಿದ್ದಾರೆ. ಈ ಲೇಖನದಲ್ಲಿ ನಿಮಗೆ ದೊಡ್ಡದಾಗಿ ಯೋಚಿಸಲು ಸಹಾಯ ಮಾಡುವ 5 ಪ್ರಮುಖ ಪಾಠಗಳ ಬಗ್ಗೆ ತಿಳಿಸಲಿದ್ದೇವೆ. ಇದು ನಿಮಗೆ ಖಂಡಿತವಾಗಿಯೂ ಸಹಾಯ ಮಾಡುತ್ತದೆ.

ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳು

1. Thinking big makes it possible.

the power of thinking big in kannada
think big

ಬೆಂಚ್ ವಾಟ್ಜ್(bench watz) ಎಂಬುವರು ಒಂದು ಪ್ರಯೋಗವನ್ನು ಮಾಡಿದ್ದರು. ಅದರಲ್ಲಿ ಅವರು ಮಕ್ಕಳಿಗೆ, "ನಾವು ಜೈಲು ವ್ಯವಸ್ಥೆಯನ್ನು ಪೂರ್ತಿಯಾಗಿ ತೆಗೆದುಹಾಕುವುದು ಹೇಗೆ?" ಎಂದು ಕೇಳಿದರು. ಈ ಪ್ರಶ್ನೆ ಕೇಳಿದ ನಂತರ ಎಲ್ಲ ವಿದ್ಯಾರ್ಥಿಗಳು ಗೊಂದಲದಲಿದ್ದರು. ಅವರೆಲ್ಲರೂ ಜಗಳವಾಡಲು ಪ್ರಾರಂಭಿಸಿದರು. ಗರಿಷ್ಠ ವಿದ್ಯಾರ್ಥಿಗಳು "ಇದು ಸಾಧ್ಯವಿಲ್ಲ" ಎಂದರು. ಆಗ ಅವರು ವಿದ್ಯಾರ್ಥಿಗಳಿಗೆ, "ಕನಿಷ್ಠ ಇದರ ಬಗ್ಗೆ ಯೋಚಿಸಲು ಪ್ರಾರಂಭಿಸಿ, ನಿಮ್ಮ ಮೆದುಳಿನಲ್ಲಿ ಬರುವ ಸೃಜನಾತ್ಮಕ ಕಲ್ಪನೆಗಳನ್ನು ಹೊರತನ್ನಿ. ಏಕೆಂದರೆ ನಮ್ಮ ಮನಸ್ಸು(mind) ಪ್ಯಾರಾಶೂಟ್ ಇದ್ದ ಹಾಗೆ. ಅದು ನಾವು ನೆಗೆಯುವವರೆಗೂ ತೆರೆದುಕೊಳ್ಳುವುದಿಲ್ಲ. ಅಂದರೆ ನಾವು ಅದನ್ನು ಬಳಸುವವರೆಗೂ ಅದು ಕೆಲಸ ಮಾಡುವುದಿಲ್ಲ" ಎಂದರು.

ಹೀಗೆ ಒಬ್ಬೊಬ್ಬ ವಿದ್ಯಾರ್ಥಿ ಯೋಚಿಸಲು ಪ್ರಾರಂಭಿಸಿದರು ಮತ್ತು ಒಬ್ಬೊಬ್ಬರು ಸಹಕರಿಸಿ(collaborate), ಅನೇಕ ಐಡಿಯಾಗಳನ್ನು ತಂದರು. ಅವರ ಐಡಿಯಾಗಳು ಕಾರ್ಯರೂಪಕ್ಕೆ(practical) ತರುವಂತೆ ಇದ್ದವು. ನೆದರ್ಲ್ಯಾಂಡ್ಸ್ನಲ್ಲಿ ಯಾವುದೇ ರೀತಿಯ ಜೈಲು ಇಲ್ಲ ಮತ್ತು ಅಲ್ಲಿನ ಹಳೆಯ ಜೈಲುಗಳನ್ನು ಮುಚ್ಚಲಾಗುತ್ತಿದೆ.

ಇದೇ ರೀತಿ ಎಲೋನ್ ಮಸ್ಕ್(elon musk) ಸ್ಪೇಸ್ ಎಕ್ಸ್(spacex) ಪ್ರಾರಂಭಿಸಿದಾಗ, ಎಲ್ಲರೂ ಅವರನ್ನು ಹುಚ್ಚ ಎನ್ನುತ್ತಿದ್ದರು. ಏಕೆಂದರೆ ಆ ಸಮಯದಲ್ಲಿ ಸ್ಪೇಸ್ಗೆ ಸಂಬಂಧಿಸಿದ ಖಾಸಗಿ ಕಂಪನಿ(private company) ಇರಲಿಲ್ಲ. ನಾಸಾ(nasa) ರೀತಿಯ ದೊಡ್ಡ ದೊಡ್ಡ ಸರ್ಕಾರಿ ಸಂಸ್ಥೆಗಳು ಸ್ಪೇಸ್ ಪ್ರೋಗ್ರಾಮ್ ನಡೆಸುತ್ತಿದ್ದವು. ಆದರೂ ಎಲೋನ್ ಮಸ್ಕ್ ಬಿಟ್ಟುಕೊಡಲಿಲ್ಲ ಮತ್ತು ಇಂದು ಸ್ಪೇಸ್ ಎಕ್ಸ್ ಎಷ್ಟು ದೊಡ್ಡ ರಿಯಾಲಿಟಿ ಆಗಿದೆ ಎಂದು ನಿಮಗೆ ತಿಳಿದಿದೆ.

ಹೀಗಾಗಿ ಲೇಖಕರು, "streach your mind to think big" ಎಂದು ಹೇಳುತ್ತಾರೆ. ಆಗಂತ ಇದರರ್ಥ ನೀವು ದೊಡ್ಡ ದೊಡ್ಡ ಕನಸುಗಳನ್ನು ಈಗಲೇ ಕಾಣಿರಿ ಎಂದು ಹೇಳುತ್ತಿಲ್ಲ. ಎಲೋನ್ ಮಸ್ಕ್ ರೀತಿ ಕನಸು ಕಾಣಿರಿ ಎಂದು ಹೇಳುತ್ತಿಲ್ಲ. ನೀವು ನಿಮ್ಮ ಬದುಕಿನ ಮೇಲು ದೊಡ್ಡ ಕನಸನ್ನು ಇಟ್ಟುಕೊಳ್ಳಬಹುದು. ಉದಾಹರಣೆಗೆ ಒಬ್ಬ ಆಟೋ ಡ್ರೈವರ್ಗೆ ತನ್ನ ಮಗನಿಗೆ ವಿದ್ಯಾಭ್ಯಾಸ ಕೊಡಿಸುವುದು ದೊಡ್ಡ ಯೋಚನೆಯಾಗಿದೆ. ಒಂದು ದೊಡ್ಡ ಫ್ಲ್ಯಾಟ್ ಖರೀದಿಸುವ ಬದಲು ಒಂದು ಬಂಗಲೆ ನಿರ್ಮಿಸುವ ಕನಸು ಕೂಡ ದೊಡ್ಡದಾಗಿದೆ. ಹೀಗೆ ನೀವು ನಿಮ್ಮ ಜೀವನದ ಮೇಲೆ ಆಧರಿಸಿ ದೊಡ್ಡ ಕನಸನ್ನು ಕಾಣಿರಿ ಮತ್ತು ನಂತರ ಈ ಎರಡನೇ ಪಾಠವನ್ನು ಅನ್ವಯಿಸಿಕೊಳ್ಳಿ.

ಇದನ್ನು ಓದಿ: ಅನ್‌ಫಕ್ ಯುವರ್ಸೆಲ್ಫ್ - ನಿಮ್ಮ ಬದುಕನ್ನು ಬದಲಾಯಿಸುವ ಪುಸ್ತಕ

2. Progress happens step by step.

how can i improve my progress in kannada
progress step by step

ಲೇಖಕರು ಇದರಲ್ಲಿ ಎರಿಕ್ ಸೆವರಿಡ್(eric severeid) ಎಂಬುವರ ಉದಾರಣೆ ನೀಡುತ್ತಾರೆ. ಎರಿಕ್ ಸೆವರಿಡ್ ಒಬ್ಬ ಲೇಖಕ ಮತ್ತು ರೀಡರ್ಸ್ ಡಿಜೆಸ್ಟ್ನ(readers digest) ಸದಸ್ಯ ಕೂಡ ಆಗಿದ್ದರು. ಅವರಿಗೆ 2ನೇ ವಿಶ್ವ ಯುದ್ಧದಲ್ಲಿ ಒಂದು ಕೆಟ್ಟ ಘಟನೆ ನಡೆಯಿತು. ಅದರಲ್ಲಿ ಅವರಿಗೆ ಅವರ ಗೆಳೆಯರ ಜೊತೆಗೆ ಚಾಪರ್ನಿಂದ ಕಾಡಿನ ಒಳಗೆ ಜಂಪ್ ಮಾಡಬೇಕಾಯಿತು. ಆ ಕಾಡು ತುಂಬಾ ಅಪಾಯಕಾರಿಯಾಗಿತು. ಕೆಳಗೆ ಇಳಿದ ನಂತರ ರಕ್ಷಣಾ ತಂಡಕ್ಕೆ(rescue team) ಅವರ ಹತ್ತಿರ ತಲುಪಲು ವಾರಗಟ್ಟಲೇ ಸಮಯ ಆಗಬಹುದು ಎಂದು ತಿಳಿದಿತ್ತು. ಆ ಸಮಯದಲ್ಲಿ ಅವರು ಸಾಯಬಹುದು. ಹೀಗಾಗಿ ಅವರು ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡರು. ಅವರು 140 ಮೈಲ್ಸ್ ಅನ್ನು ಮೆಲ್ಲ ಸಾಗುವ(trek) ಬಗ್ಗೆ ಯೋಚಿಸಿದರು. ಇದು ಅವರ ಬದುಕುವ ಅವಕಾಶವನ್ನು ಹೆಚ್ಚಿಸಲು ಮಾಡಲೇಬೇಕಿತ್ತು.

ಅವರಿಗೆ ಇದನ್ನು ಮಾಡುವುದು ಕಷ್ಟವೆನಿಸುತ್ತಿತ್ತು. ಏಕೆಂದರೆ ಮೊದಲ ದಿನವೇ ಅವರಿಗೆ 140 ಮೈಲ್ಸ್ ಮುಗಿಸುವುದು ಎಷ್ಟು ಕಠಿಣವೆಂದು ತಿಳಿಯಿತು. ಏಕೆಂದರೆ ಅವರ ಹತ್ತಿರ ತಿನ್ನಲು ಅಧಿಕವೇನು ಇರಲಿಲ್ಲ ಮತ್ತು ಅನೇಕರಿಗೆ ಗಾಯಗಳು ಆಗಿದ್ದವು. ಆದರೂ ಅವರು ಇದನ್ನು ಮಾಡಲು ಪ್ರಾರಂಭಿಸಿದರು. ಅವರು ಆಗ "ನಾನು ಈಗ ಈ ಮರದಿಂದ ಆ ಮರದವರೆಗೆ ಮಾತ್ರ ಹೋಗುವೆ" ಮತ್ತು ಆ ಮರದ ಹತ್ತಿರ ತಲುಪಿದ ನಂತರ, "ನಾನು ಈ ಮರದಿಂದ ಆ ಕಲ್ಲಿನ ತನಕ ಹೋಗುವೆ" ಎಂದು ನಿರ್ಧರಿಸಿದ್ದರು. ಈ ರೀತಿ ಪದೇ ಪದೇ ನಿರ್ಧಾರ ಮಾಡಿ ಅವರು 100 ಮೈಲ್ಸ್ ನಷ್ಟು ಜರ್ನಿಯನ್ನು ಮುಗಿಸಿದರು.

"a journey of thousand miles begins with one step" ಎಂದು ಇದಕ್ಕೆ ರಿಲೇಟ್ ಆಗಿರುವ ಒಂದು ಥಾಟ್ ಕೂಡ ಇದೆ.

ಎಲೋನ್ ಮಸ್ಕ್ ಸ್ಪೇಸ್ಎಕ್ಸ್(spacex) ಬಗ್ಗೆ ಯೋಚಿಸಿದಾಗ ಪ್ರಾರಂಭದಲ್ಲೇ, ಮಂಗಳನ(mars) ಮೇಲೆ ಹೋಗಿ ಮನೆ ಮಾಡುವ ಬಗ್ಗೆ ಯೋಚಿಸಿರಲಿಲ್ಲ. ಅವರು ಮಂಗಳಕ್ಕೆ ಹೋಗಿ ಸಸ್ಯಗಳನ್ನು ಬೆಳೆಸುವ ಬಗ್ಗೆ ಯೋಚಿಸಿದರು. ಒಂದು ಒಳ್ಳೆಯ ಫೋಟೋ ತೆಗೆಯಲು ಚೇಂಬರ್ ಮಾಡುವ ಬಗ್ಗೆ ಯೋಚಿಸಿದರು. ಆದರೆ ಬರಬರುತ್ತಾ ನಾಸಾ ಕೂಡ ಅವರಿಗೆ ದೊಡ್ಡ ದೊಡ್ಡ ಒಪ್ಪಂದಗಳನ್ನು(contract) ನೀಡಲು ಪ್ರಾರಂಭಿಸಿತು ಮತ್ತು ಇದರಿಂದ ಎಷ್ಟೋ ವಿಷಯಗಳು ಆಗುವ ಸಾಧ್ಯತೆ ಮುಂಚಿಗಿಂತ ಹೆಚ್ಚಾಗಿದೆ. ಇಂದು ಸ್ಪೇಸ್ಎಕ್ಸ್ ನ ನಿವ್ವಳ ಮೌಲ್ಯಮಾಪನ(net valuation) 127 ಬಿಲಿಯನ್ ಡಾಲರ್ ಕ್ಕಿಂತ ಹೆಚ್ಚಿದೆ.

ಇದೇ ರೀತಿ ಟೆಸ್ಲಾ(tesla) ಮಾಡಿದಾಗಲೂ ಅವರು ಮೊದಲ ದಿನವೇ ಎಲ್ಲರೂ ಕೊಂಡುಕೊಳ್ಳಬಹುದಾದ(afford) ಕಾರ್ ಮಾಡುತ್ತೇವೆ ಎಂದು ಯೋಚಿಸಿರಲಿಲ್ಲ. ಇದು ಅವರ ನೋಟ(vision) ಆಗಿರಬಹುದು, ಅದರೆ ಅವರ ಚಿಕ್ಕ ಗುರಿಗಳು ಒಂದು ಐಷಾರಾಮಿ(luxurious) ಕಾರು ಮಾಡಿ, ಶ್ರೀಮಂತರಿಗೆ ಸರ್ವಿಸ್ ನೀಡಿ, ಲಾಭ ಗಳಿಸಿ, ನಿಧಾನವಾಗಿ ಕೊಂಡುಕೊಳ್ಳಬಹುದಾದ ಕಾರ್ ಮಾಡೋಣ ಎಂಬುದಾಗಿತ್ತು. ಹೀಗಾಗಿ ಎರಡನೇ ಹಂತವೆನೆಂದರೆ(step) ಒಂದು ದೊಡ್ಡ ಗುರಿಯನ್ನು ಇಟ್ಟುಕೊಳ್ಳಿ ಮತ್ತು ಆ ಗುರಿಯನ್ನು ತಲುಪಲು ಚಿಕ್ಕ ಚಿಕ್ಕ ಹಂತಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿ. ಚಿಕ್ಕ ಚಿಕ್ಕ ಗುರಿಯನ್ನು ಸಾಧಿಸುವ ಮೂಲಕ ನಿಮ್ಮ ಗುರಿಯನ್ನು ಸಾಧಿಸಿರಿ. ಇದರ ನಂತರ ನೀವು ಈ 3ನೇ ಪಾಠವನ್ನು ಅರ್ಥಮಾಡಿಕೊಳ್ಳಬೇಕು, ಅದುವೇ,

ಇದನ್ನು ಓದಿ: "Secrets of the Millionaire Mind" ಪುಸ್ತಕದ ಸಾರಾಂಶ

3. Believe you can do bigger things.

how do i believe in my goals in kannada
believe in you

ಒಬ್ಬ ನಿಮ್ಮನ್ನು ಹಿಡಿದು ಒಂದು ಪೆಟ್ಟಿಗೆಯಲ್ಲಿ(box) ಹಾಕುತ್ತಾನೆ ಎಂದು ಕಲ್ಪನೆ(imagination) ಮಾಡಿಕೊಳ್ಳಿ. ಅವನು, 'ನೀವು ಎಷ್ಟೇ ಪ್ರಯತ್ನ ಮಾಡಿದರು, ಈ ಪೆಟ್ಟಿಗೆಯಿಂದ ಹೊರಬರಲು ಸಾಧ್ಯವಿಲ್ಲ. ನೀನು ಜೀವಂತವಾಗಿರಲು ಆಹಾರವನ್ನು ನೀಡುವೆನು. ಬದುಕಲು ಬೇಕಿರುವ ಎಲ್ಲವನ್ನು ನಿನಗೆ ನೀಡುವೆ. ಆದರೆ ನೀನು ಈ ಪೆಟ್ಟಿಗೆಯಿಂದ ಹೊರಬರಲು ಸಾಧ್ಯವಿಲ್ಲ" ಎನ್ನುತ್ತಾನೆ.

ನೀವು ಆ ವ್ಯಕ್ತಿಯ ಮಾತನ್ನು ನಂಬಿದರೆ ಆ ಪೆಟ್ಟಿಗೆಯಿಂದ ಹೊರಬರಲು ಪ್ರಯತ್ನಿಸುವುದಿಲ್ಲ. "ನಿಮಗೆ ಆಹಾರ ಸಿಗುತ್ತಿದೆ, ನಾನು ಬದುಕಿದ್ದೇನೆ" ಎಂದು ಅನಿಸುತ್ತದೆ. ಅದೇ ನೀವು ಅವರ ಮಾತನ್ನು ನಂಬುವ ಬದಲು ಆ ಪೆಟ್ಟಿಗೆಯಿಂದ ಹೊರ ಬರಬಹುದು ಎಂದು ನಂಬಿದ್ದಾರೆ, ನೀವು ಆ ಪೆಟ್ಟಿಗೆಯನ್ನು ಹರಿದು ಹಾಕಲು ಪ್ರಯತ್ನಿಸುತ್ತೀರಾ, ಇಲ್ಲ ಆ ವ್ಯಕ್ತಿಗೆ ಪ್ರಶ್ನೆ ಕೇಳಲು ಪ್ರಾರಂಭಿಸುತ್ತೀರಾ, ಆ ಪೆಟ್ಟಿಗೆಯ ಅಗಲವನ್ನು ಪರಿಶೀಲಿಸುತ್ತೀರಾ. ಇದು ನಿಮ್ಮ ಹೊರಬರುವ ಸಾಧ್ಯತೆಯನ್ನು(probability) ಹೆಚ್ಚಿಸುತ್ತದೆ. ಯಾವ ವಿಧಾನ(approach) ಸರಿ ಇದೆ ಎಂದು ನೀವು ತಿಳಿಸಿ. "ನನ್ನಿಂದ ಏನು ದೊಡ್ಡದನ್ನು ಸಾಧಿಸಲು ಸಾಧ್ಯವಿಲ್ಲ"ವೆಂದು ಯೋಚಿಸುವುದು ಸರಿಯೇ ಇಲ್ಲ, "ದೊಡ್ಡದನ್ನು ಸಾಧಿಸಬಹುದು ಎಂದು ಪ್ರಯತ್ನಿಸುವುದು ಸರಿಯೇ". ಖಂಡಿತವಾಗಿಯೂ 2ನೇ ಆಯ್ಕೆ ಸರಿಯಾಗಿದೆ. ನೀವು ದೊಡ್ಡದನ್ನು ಸಾಧಿಸಬಹುದು ಎಂಬುದನ್ನು ನಂಬಿಕೆ ಇಡುವುದು ಸರಿಯಾಗಿದೆ. ಏಕೆಂದರೆ ನಾವು ನಂಬಿಕೆ ಇಟ್ಟುಕೊಂಡಾಗಲೇ ದೊಡ್ಡದನ್ನು ಸಾಧಿಸಲು ಸಾಧ್ಯವಾಗುತ್ತದೆ. ಆಗ ನಾವು ತೆಗೆದುಕೊಳ್ಳುವ ಕ್ರಮದಿಂದ ನಮ್ಮ ಗುರಿಯು ರಿಯಾಲಿಟಿ ಆಗುತ್ತದೆ.

ನಾವು ಬದುಕಿನಲ್ಲಿ ಕೆಲವೊಮ್ಮೆ "ಅದನ್ನು ಸಾಧಿಸಲು ಸಾಧ್ಯ" ಎಂಬ ನಂಬಿಕೆಯನ್ನು ಇಟ್ಟುಕೊಂಡಿರುವುದಿಲ್ಲ. ಆದರೆ ಲೇಖಕರು ನೀವು ಏನನ್ನಾದರೂ ಸಾಧಿಸಬಹುದು ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ, ಎಷ್ಟೋ ಅಸಾಧ್ಯವಾದ ವಿಷಯಗಳು ಸಾಧ್ಯವಾಗುತ್ತದೆ. ಹೀಗಾಗಿ 3ನೇ ಪ್ರಮುಖ ಪಾಠವೇನೆಂದರೆ, ನೀವು ದೊಡ್ಡದನ್ನು ಸಾಧಿಸಬಹುದು ಎಂಬುದರ ಮೇಲೆ ನಂಬಿಕೆ ಇಟ್ಟುಕೊಳ್ಳಿ ಮತ್ತು ಈಗ ತಿಳಿಸುವ ಈ 4ನೇ ಕಥೆಯ ಮೇಲೂ ಗಮನ ಆರಿಸಿ.

ಇದನ್ನು ಓದಿ: How to Change Your Life in 30 Days

4. Build a good network.

is networking a development goal in kannada
build network

ಒಂದು ಮೊಲ(rabbit) ಕಾಡಿನ ಮಧ್ಯದಲ್ಲಿ ಕೂತು ಕ್ಯಾರೆಟ್ ತಿನ್ನುತ್ತಿತ್ತು. ಆಗ ಅಲ್ಲಿ ಒಂದು ತೋಳ ಬಂದು ಅದಕ್ಕೆ, "ನೀನು ಇಲ್ಲಿ ಇಷ್ಟು ಆರಾಮಾಗಿ ಕೂತು ಕ್ಯಾರೆಟ್ ತಿನ್ನುತ್ತಿದ್ದೀಯಲ್ಲ. ನಿನಗೆ ಭಯವಿಲ್ಲವೇ? ನಿನ್ನನ್ನು ಯಾರಾದರೂ ಸುಲಭವಾಗಿ ಸಾಯಿಸುತ್ತಾರೆ. ನಿನ್ನನ್ನು ನಾನೇ ತಿನ್ನುವೆನು" ಎಂದು ಹೇಳುತ್ತದೆ. ತೋಳದ ಈ ಮಾತನ್ನು ಕೇಳಿ ಆ ಮೊಲವು, "ನೀನು ನನ್ನನ್ನು ಸಾಯಿಸಲು ಸಾಧ್ಯವಿಲ್ಲ. ನಿನ್ನಲ್ಲಿ ಅಷ್ಟು ಶಕ್ತಿ(dum) ಇಲ್ಲ. ಒಂದು ವೇಳೆ ನಿನ್ನಲ್ಲಿ ಅಷ್ಟು ಶಕ್ತಿ ಇದ್ದರೆ, ಆ ಗುಹೆಯೊಳಗೆ ಬಾ. ಅಲ್ಲಿ ನಾವಿಬ್ಬರೂ ಹೋರಾಡೋಣ ಮತ್ತು ಯಾರು ಗೆಲ್ಲುತ್ತಾರೆ ಎಂದು ನೋಡೋಣ". ತೋಳವು ಸಿಟ್ಟಿಗೆ ಬಂದು, "ಈ ಚಿಕ್ಕ ಮೊಲವು ನನಗೆ ಚಾಲೆಂಜ್ ಮಾಡುತ್ತದೆ" ಎಂದು ಹೇಳಿ ಗುಹೆಯೊಳಗೆ ಹೋಗುತ್ತದೆ. ಇದಾಗಿ ಸ್ವಲ್ಪ ಸಮಯದ ನಂತರ ಆ ಮೊಲವು ಆ ತೋಳದ ಮೂಳೆಯನ್ನು ಹೊರ ತೆಗೆದುಕೊಂಡು ಬರುತ್ತದೆ. ಮತ್ತೆ ಕಾಡಿನ ಮಧ್ಯದಲ್ಲಿ ಮತ್ತೊಮ್ಮೆ ಕ್ಯಾರೆಟ್ ತಿನ್ನಲು ಹೋಗುತ್ತದೆ.

ಹೀಗೆ ತಿನ್ನುವಾಗ ಅಲ್ಲಿ ಒಂದು ಕಾಡುನಾಯಿ ಬರುತ್ತದೆ. ಅದು ಕೂಡ ಮೊಲವು ಇಷ್ಟು ಆರಾಮಾಗಿ ತಿನ್ನುತ್ತಿರುವುದನ್ನು ನೋಡಿ ಆಘಾತವಾಗಿ(shock), "ನಿನ್ನನ್ನು ತಿನ್ನುವೆ" ಎನ್ನುತ್ತದೆ. ಆಗ ಮೊಲವು, "ನೀನು ನನ್ನನ್ನು ಕೊಲ್ಲಲು ಸಾಧ್ಯವಿಲ್ಲ. ಒಂದು ವೇಳೆ ನಿನ್ನಲ್ಲಿ ಶಕ್ತಿ ಇದ್ದಾರೆ, ನನ್ನ ಜೊತೆ ಆ ಗುಹೆಯೊಳಗೆ ಬಾ, ಅಲ್ಲಿ ಹೋರಾಡೋಣ. ನಾನು ನಿನಗೆ ಅಲ್ಲಿ ಸೋಲಿಸಿ ತೋರಿಸುವೆನು". ಕಾಡು ನಾಯಿ ಜೋಶ್ನಲ್ಲಿ ಅಲ್ಲಿಗೆ ಹೋಗುತ್ತದೆ ಮತ್ತು ಮೊಲವು ಸ್ವಲ್ಪ ಸಮಯದ ನಂತರ ಅದರ ಮೂಳೆಯನ್ನು ಹೊರ ತೆಗೆದುಕೊಂಡು ಬರುತ್ತದೆ.

ಇವೆಲ್ಲವನ್ನೂ ಅಲ್ಲೇ ಇದ್ದ ಇನ್ನೊಂದು ಮೊಲವು ನೋಡುತ್ತಿರುತ್ತದೆ. ಅದು ಆ ಮೊಲದ ಹತ್ತಿರ ಹೋಗಿ, "ನೀನು ಇಷ್ಟು ದೊಡ್ಡ ಪ್ರಾಣಿಗಳನ್ನು ಕರೆದುಕೊಂಡು ಹೋಗಿ ಹೇಗೆ ಸಾಯಿಸುತಿದ್ದೀಯಾ?". ಅದಕ್ಕೆ ಆ ಮೊಲವು, "ಗುಹೆಯೊಳಗೆ ಒಂದು ಸಿಂಹವಿದೆ. ನನ್ನ ಮತ್ತು ಸಿಂಹದ ಒಂದು ಒಪ್ಪಂದವಾಗಿದೆ. ನನ್ನಲ್ಲಿ ಅಧಿಕ ಮಾಂಸ ಇಲ್ಲದ ಕಾರಣ, ಅದಕ್ಕೆ ಹೊಟ್ಟೆ ತುಂಬುವುದಿಲ್ಲ. ಹೀಗಾಗಿ ನಾನು ಅದಕ್ಕೆ ಬೇಟೆಯನ್ನು ತಂದು ಕೊಡುವೆನು. ಅದಕ್ಕೆ ಅದು ನನಗೆ ರಕ್ಷೆ ನೀಡುತ್ತದೆ" ಎಂದಿತು. ಮೊಲವು ಇದರಲ್ಲಿ ಎರಡು ಕೆಲಸದ ಮೇಲೆ ಗಮನ ಹರಿಸಿತು, ಒಂದು ಸ್ಮಾರ್ಟ್ ವರ್ಕ್ ಮತ್ತು ಇನ್ನೊಂದು ನೆಟ್ವರ್ಕ್(network). ಮೊಲವು ಚಿಕ್ಕದಿರಬಹುದು, ಆದರೆ ಅದು ತುಂಬಾ ಶಕ್ತಿಶಾಲಿ ಆಗಿರುವ ಸಿಂಹದ ಜೊತೆ ಗೆಳೆತನದಲ್ಲಿತ್ತು. ಇದುವೇ 4ನೇ ಪಾಠವಾಗಿದೆ.

ತೈ ಲೋಪೆಜ್(tai lopez) ಅವರು, "ನೀವು ದೈತ್ಯರ(giants) ಜೊತೆ ನಿಂತರೆ ದೊಡ್ಡದನ್ನು ಆಲೋಚಿಸಬಹುದು" ಎನ್ನುತ್ತಾರೆ. ಹೀಗಾಗಿ ನೀವು ದೊಡ್ಡ ದೊಡ್ಡ ವ್ಯಕ್ತಿಗಳ ಜೊತೆ ಇದ್ದಷ್ಟು, ಇದು ನಿಮ್ಮನ್ನು ಅಧಿಕ ಶಕ್ತಿಶಾಲಿಯನ್ನಾಗಿ ಮಾಡುತ್ತದೆ. ಹಾಗಿದ್ದರೆ ನೆಟ್ವರ್ಕ್ ನಿರ್ಮಾಣ ಮಾಡುವುದು ಹೇಗೆ? ನೀವು ಈ 7 ಹಂತಗಳನ್ನು ಪಾಲಿಸಿದಲ್ಲಿ, ಒಂದು ನೆಟ್ವರ್ಕ್ ನಿರ್ಮಿಸಬಹುದು. ಆಗಿದ್ದರೆ ಆ 7 ಹಂತಗಳು ಯಾವುವು?

 • • Remember peoples name,
 • • Introduce yourself to right people,

ಅಧಿಕರು ಅವರನ್ನು ಪರಿಚಯಿಸಿಕೊಳ್ಳಲು ಹಿಂಜರಿಯುತ್ತಾರೆ. ನೀವು ಆ ರೀತಿ ಮಾಡಬಾರದು.

 • • Appreciate and compliment people,
 • • Dress well,
 • • Be a good listener,
 • • Maintain eye contact,
 • • Talk about common interest.

ಅಂದರೆ ನಿಮ್ಮ ಮಧ್ಯೆ ಇರುವ ಹೋಲಿಕೆಗಳ(similarities)ಬಗ್ಗೆ ಮಾತನಾಡಿ. ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ, ಸಾಮಾನ್ಯವಾಗಿ ಜಗಳವಾಗುತ್ತದೆ. ಇವೆಲ್ಲವನ್ನೂ ಮಾಡಿ ಮತ್ತು 5ನೇ ಪಾಠದ ಮೇಲೂ ಗಮನವಿರಲಿ.

ಇದನ್ನು ಓದಿ: Sip vs Lumpsum ಹೂಡಿಕೆಗೆ ಯಾವುದು ಉತ್ತಮ?

5. Do more not less(but a take time to think).

what is do more not less in kannada
do more not less

1999 ಅಮಿತಾಬ್ ಬಚ್ಚನ್ ಅವರಿಗೆ ಕೆಟ್ಟ ವರ್ಷವಾಗಿತ್ತು. ಅವರ ಹಲವು ಮಲ್ಟಿಪಲ್ ಕಂಪನಿಗಳು ಹೊಡೆದು ಹೋಗುತ್ತಿದ್ದವು. ಇದರಿಂದ ಅವರ ಬ್ಯಾಂಕ್ ಖಾತೆಯು ಸೊನ್ನೆಗೆ ಬಂದಿತ್ತು. ಅವರಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಈ ಮಾತು ದಿರುಬಾಯ್ ಅಂಬಾನಿವರೆಗೂ(dirubai ambani) ಹೋಯಿತು. ಆಗ ಅವರು ಅನಿಲ್ ಮತ್ತು ಮುಕೇಶ್ ಅಂಬಾನಿಗೆ, "ಅಮಿತಾಬ್ ತೊಂದರೆಯಲ್ಲಿದ್ದರೆ, ನೀವು ಅವರಿಗೆ ಸಹಾಯ ಮಾಡಬೇಕು ಎನ್ನುತ್ತಾರೆ". ಅವರು, "ಅಮಿತಾಬ್ ಸಾಲವನ್ನು ತೀರಿಸಲು ಹಣವನ್ನು ನೀಡಬೇಕು" ಎನ್ನುತ್ತಾರೆ. ಆದರೆ ಅವರು ಈ ಕೊಡುಗೆಯ ಬಗ್ಗೆ ಅಮಿತಾಬ್ಗೆ ತಿಳಿಸಿದಾಗ, ಅಮಿತಾಬ್ ಬಚ್ಚನ್ ಹಣವನ್ನು ಸ್ವೀಕರಿಸಲು ನಿರಾಕರಿಸಿದರು ಮತ್ತು ಅವರು ಮತ್ತೊಮ್ಮೆ ಕೆಲಸ ಮಾಡಲು ಪ್ರಾರಂಭಿಸಿದರು.

ಇದರ ನಂತರ ಅವರು ಕೆಬಿಸಿ(kbc) ಮಾಡಿದರು. ಅದು ತುಂಬಾ ಹಿಟ್ ಆಯಿತು ಮತ್ತು ಇದಾಗಿ ಸ್ವಲ್ಪ ವರ್ಷದ ನಂತರವೇ ಅವರು ತಮ್ಮ ಸಾಲವನ್ನು ತೀರಿಸಿದರು. ಇದು ತುಂಬಾ ಪ್ರಭಾವಶಾಲಿಯಾಗಿತ್ತು(impressive). ಹೀಗಾಗಿ ದಿರುಬಾಯ್ ಅಂಬಾನಿ ಅವರನ್ನು ಪಾರ್ಟಿಗೆ ಆಹ್ವಾನಿಸಿದರು. ಅಲ್ಲಿ ಫೈನಾನ್ಸ್ ಜಗತ್ತಿನ ದಿಗ್ಗಜರು ಇದ್ದರು. ಅಂಬಾನಿ, ಅಮಿತಾಬ್ ಬಚ್ಚನ್ ಅವರನ್ನು ಕರೆದು, " ಈ ಮಗು ಪೂರ್ತಿಯಾಗಿ ಒಡೆದು ಹೋಗಿತ್ತು. ಆದರೆ ತನ್ನ ಸ್ವಂತ ಬಲದಿಂದ ಮತ್ತೊಮ್ಮೆ ಸಾಧಿಸಿದೆ". ಈ ಮಾತನ್ನು ಕೇಳಿ ಅಮಿತಾಬ್ ಬಚ್ಚನ್ ಅವರ ಕಣ್ಣಿನಲ್ಲಿ ನೀರು ಬಂತು.

ಇಂದು 80 ವರ್ಷದಲ್ಲೂ ಅಮಿತಾಬ್ ಬಚ್ಚನ್ ಪರಿಶ್ರಮಿಸುತ್ತಾರೆ. ಅವರು ಅವರನ್ನು ಯಾವಾಗಲೂ ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅವರು ಸುಮ್ಮನೆ ಕೂತಿರುವುದಿಲ್ಲ. ಅವರು ಬೇರೆ ಜನರ ರೀತಿ ನಾನು ಯಾವಾಗಲೂ ನಾಯಕನಾಗಿರಬೇಕು(hero) ಎಂದು ಯೋಚಿಸಲಿಲ್ಲ. ಅವರ ಜೀವನವೂ ಸಾಗುತ್ತಿರುವುರಿಂದ ಬೇರೆ ಬೇರೆ ರೀತಿಯ ಪಾತ್ರವನ್ನು(role) ಮಾಡಬೇಕೆಂದು ತಿಳಿದರು. ಅವರು ಯಾವತ್ತು ನಿಲ್ಲಲಿಲ್ಲ ಮತ್ತು ಕ್ರಮವನ್ನು ತೆಗೆದುಕೊಳ್ಳುತ್ತಿದ್ದರು. ಇದು ತುಂಬಾ ಮುಖ್ಯವಾಗಿದೆ.

ರಸ್ತೆಯಲ್ಲಿ ಹೋಗುತ್ತಿರುವ ವ್ಯಕ್ತಿಗಳು ದೊಡ್ಡ ದೊಡ್ಡ ಮಾತನ್ನು ಮಾತನಾಡುತ್ತಾರೆ. ಆದರೆ ನಿಜವಾದ ಶಕ್ತಿ(dum) ಕ್ರಮವನ್ನು ತೆಗೆದುಕೊಂಡು ಫಲಿತಾಂಶವನ್ನು ತರುವವರ ಮೇಲೆ ಇರುತ್ತದೆ. ಇದುವೇ ತುಂಬಾ ಮುಖ್ಯವಾಗಿದೆ. ನೀವು ಎಷ್ಟೇ ದೊಡ್ಡದಾದನ್ನು ಯೋಚಿಸಿ, ಎಷ್ಟೇ ಪ್ಲಾನ್ ಮಾಡಿದರು, ಕ್ರಮವನ್ನು ತೆಗೆದುಕೊಳ್ಳುವವರೆಗೂ ನೀವು ಏನನ್ನು ಮಾಡಲು ಸಾಧ್ಯವಿಲ್ಲ. ದಿನವಿಡೀ ಸಮಯವನ್ನು ಹಾಳು ಮಾಡುವ ಬದಲು, ನಿಮ್ಮ ಜೀವನದ ಮೇಲೆ ಕೆಲಸ ಮಾಡಲು ಪ್ರಾರಂಭಿಸಿ. ಇದು ಈ ಲೇಖನದ ಕೊನೆಯ ಪಾಠವಾಗಿದೆ.

Summary

ಈಗ ಈ ಲೇಖನದ ಸಾರಾಂಶ ತಿಳಿಸಿದರೆ,

 • • stretch your mind to think big,
 • • remember progress happens step by step,
 • • believe you can do big things,
 • • build a good network,
 • • do always more, not less.

ಇವೆಲ್ಲವನ್ನೂ ನೀವು ಯೋಚಿಸಿಯೇ ಮಾಡಬೇಕು. ನೀವು ಸಮಯದ ಜೊತೆಗೆ ಬುದ್ಧಿವಂತಿಕೆಯಿಂದ ಕ್ರಮವನ್ನು ತೆಗೆದುಕೊಳ್ಳುತ್ತಿರಬೇಕು. ಇದುವೇ "ದಿ ಮ್ಯಾಜಿಕ್ ಆಫ್ ತಿಂಕಿಂಗ್ ಬಿಗ್" ಪುಸ್ತಕದ ಕೆಲವು ಮುಖ್ಯ ಪಾಠಗಳಾಗಿದೆ. ಈ ರೀತಿಯ ಸಾರಾಂಶಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಕೆಳಗೆ ಇರುವ ಲಿಂಕ್ಗೆ ಹೋಗಿ.

ಇದನ್ನು ಓದಿ: Book Summaries

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments