ಈ ಲೇಖನದಲ್ಲಿ ತಿಳಿಸುವ ಮಾಹಿತಿಯು ಮೂಲಭೂತ ಪರಿಕಲ್ಪನೆಯಾಗಿದೆ(fundamental concept). ಇವುಗಳನ್ನು ನಾವು ಅನೇಕ ಮೂಲಗಳಿಂದ(sources) ಸಂಗ್ರಹಿಸಿ ಮಾಡಿದ್ದೇವೆ. ಈ ಪರಿಕಲ್ಪನೆಗಳನ್ನು ಕುರುಡಾಗಿ(blind) ಅನುಸರಿಸಬೇಡಿ ಮತ್ತು ನಿಮ್ಮದೇ ಸ್ವಂತ ಅಧ್ಯಯನ ಮಾಡಿ ಪ್ರಯತ್ನಿಸಿ.
1. Introduction
ಈ ಲೇಖನದಲ್ಲಿ ತಿಳಿಸುವ ಪರಿಕಲ್ಪನೆ ದೊಡ್ಡದು ಮತ್ತು ಆಳವಾಗಿದೆ. ಅನೇಕರು ಇಂದು ಷೇರು ಮಾರುಕಟ್ಟೆಯಲ್ಲಿ(share market) ಹೂಡಿಕೆ ಮಾಡುತ್ತಾರೆ, ಆದರೆ ಮೂಲಭೂತ ಪರಿಕಲ್ಪನೆಯ ಬಗ್ಗೆ ತಿಳಿದಿರುವುದಿಲ್ಲ. ಇದಕ್ಕಾಗಿ ಈ ಲೇಖನ ನಿಮಗೆ ಸಹಕರಿಸುತ್ತವೆ. ಇವು ಹೊಸ ಪರಿಕಲ್ಪನೆಯಾಗಿಲ್ಲ(original concept). ಇವುಗಳನ್ನು ನಾವು ಅಂತರ್ಜಾಲದ(internet) ಅಧಿಕ ಮೂಲಗಳಿಂದ ಸಂಗ್ರಹ ಮಾಡಿ ಮಾಡಿದ್ದೇವೆ. ಇವುಗಳಲ್ಲಿ ಕೆಲವೊಂದನ್ನು ನಾವು ವಿವರಿಸುತ್ತೇವೆ, ಕೆಲವೊಂದನ್ನು ನೀವೇ ಮನೆಕೆಲಸ(homework) ಮಾಡಬೇಕು. ಈ ಪರಿಕಲ್ಪನೆಗಳನ್ನು ಜಗತ್ತಿನಾದ್ಯಂತ ಇರುವ ವೃತ್ತಿಪರ ವ್ಯಾಪಾರಿಗಳು(pro traders) ಮತ್ತು ಹೂಡಿಕೆದಾರರು(investors) ಬಳಸುತ್ತಿದ್ದಾರೆ. ಹೀಗಾಗಿ ಈ ಪರಿಕಲ್ಪನೆಗಳನ್ನು ನೀವು ತಿಳಿಯುವುದರಿಂದ ಅವರ ರೀತಿಯ ಯೋಚನೆ ನಿಮಗೂ ಬರುತ್ತದೆ.
ಇದನ್ನು ಓದಿ: ಹೂಡಿಕೆ ಮಾಡುವ ಮುನ್ನ ತೆಗೆದುಕೊಳ್ಳಬೇಕಾದ ಸ್ಟೆಪ್ಗಳು2. Structural principles(SP)
ಈ ತತ್ವಗಳು ಮಾರುಕಟ್ಟೆಯ ಎಲ್ಲಾ ಕಡೆ ಕೆಲಸ ಆಗುವುದರಿಂದ ರಚನಾತ್ಮಕ ತತ್ವಗಳು ಎಂದು ಕರೆಯುತ್ತಾರೆ. ಈ ತತ್ವಗಳನ್ನು ಹೂಡಿಕೆದಾರರು ಅಥವಾ ವ್ಯಾಪಾರಿ ಯಾರು ಬೇಕಾದರೂ ಬಳಸಬಹುದು. ಈ ತತ್ವಗಳು 1800 ರಿಂದಲೂ ಇದೇ ಹೊರತು ಈಗ ಹೊಸದಾಗಿ ಮಾಡಿರುವುದಲ್ಲ. ಭೂಮಿಯ ಮೇಲಿನ ಗುರುತ್ವಾಕರ್ಷಣೆಯಂತೆ ಈ ತತ್ವಗಳು ಕೂಡ ಮೂಲಭೂತ ಪರಿಕಲ್ಪನೆಯಾಗಿದೆ. ಈ ತತ್ವಗಳು ಬೆಲೆ ಕ್ರಮಗಳಿಗೆ(price action) ಅಂತರ್ಗತ(inherent) ಮಾಡುವ ರೀತಿಯಿಂದಾಗಿ ರಚನಾತ್ಮಕವಾಗಿದೆ. ಏಕೆಂದರೆ ಬೇಡಿಕೆ ಪೂರೈಕೆ(demand supply) ಈ ರೀತಿಯಲ್ಲೇ ಸಂವಹನ ನಡೆಸುತ್ತವೆ. ಇವುಗಳು ಕೇವಲ ಪ್ರವೃತ್ತಿ(tendency) ಆಗಿದೇ ಹೊರತು ನಿಖರ ಸೂತ್ರವಲ್ಲ(exact formula). ಇವುಗಳು ನಿಮ್ಮ ಲಾಭದಾಯಕತೆಯ ಅವಕಾಶವನ್ನು ಹೆಚ್ಚಿಸಲು ಇವೆ.
1. Catalyst
ಮಾರುಕಟ್ಟೆಯಲ್ಲಿ ಯಾವುದೇ ದೊಡ್ಡ ನಡೆಯಿದ್ದರು ಅದನ್ನು ಒಂದು ವೇಗವರ್ಧಕ ಪ್ರಾರಂಭಿಸಿರುತ್ತದೆ. ವೇಗವರ್ಧಕದಲ್ಲಿ 2 ವಿಧಗಳಿವೆ, ಅವೆಂದರೆ,
- • Earnings catalyst
- • News catalyst
ಉದಾಹರಣೆಗೆ, ನಿಮಗೆ ಓಲೆಕ್ಟ್ರಾ(olectra) ಸ್ಟಾಕ್ ಚಾರ್ಟ್ ಕಾಣಿಸುತ್ತಿರಬಹುದು. ಈ ಸ್ಟಾಕ್ ಕೆಳಗೆ ಹೋಗುತ್ತಿತ್ತು, ಆದರೆ 24 ಫೆಬ್ರವರಿ 2023 ರಂದು ಮೇಲಿನ ಟ್ರೆಂಡ್ ತೋರಿಸಿತು. ಏಕೆಂದರೆ ಅಂದು ಈ ಕಂಪನಿ ಅನೇಕ ಬಸ್ಸುಗಳನ್ನು ಮೊದಲಿಗೆ ಮಾಡಲಿದೆ ಎಂಬ ಸುದ್ದಿ ಬಂದಿತು. ಇದರಿಂದ 480 ರಲ್ಲಿ ಇದ್ದ ಸ್ಟಾಕ್ 1400 ತನಕ ಹೋಯಿತು. ಇದು ಸುದ್ದಿ ವೇಗವರ್ಧಕದ ಉದಾಹರಣೆಯಾಗಿದೆ.
ನಿಮಗೆ ಅಪಾರ್ಯ(apar) ಸ್ಟಾಕ್ ಚಾರ್ಟ್ ಕಾಣಿಸುತ್ತಿರಬಹುದು. ಈ ಸ್ಟಾಕ್ ಮೇಲಿನ ಟ್ರೆಂಡ್ನಲ್ಲೇ ಇತ್ತು, ಆದರೆ ತಿದ್ದುಪಡಿಯಾಗುತ್ತಿತ್ತು(correction). 31 ಜನವರಿ 2023 ರಂದು ಈ ಕಂಪನಿ ಒಳ್ಳೆಯ ಗಳಿಕೆಯ ವರದಿಯನ್ನು ಬಿಡುಗಡೆ ಮಾಡಿತು. ಇದರಿಂದ ಆ ಸ್ಟಾಕ್ 1700 ರಿಂದ 5400 ತನಕ ಹೋಯಿತು. ಇದು ಗಳಿಕೆಯ ವೇಗವರ್ಧಕದ ಉದಾಹರಣೆಯಾಗಿದೆ.
ನಿಮಗೆ ಪ್ರತಿದಿನ ಹಲವಾರು ವೇಗವರ್ಧಕ ಸಿಗುತ್ತವೆ, ಹೀಗಾಗಿ ಅವುಗಳ ಶಕ್ತಿಯ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಬಲಿಷ್ಠ ವೇಗವರ್ಧಕಗಳು ಹಲವು ತಿಂಗಳಿಂದ ವರ್ಷಗಳವರೆಗೆ ಪ್ರಭಾವ ಬೀರಬಹುದು. ಸ್ಟಾಕ್ ಅಸಲಿಯೆಂದರೆ(stock genuine) ಅದು ಗಳಿಕೆಗೆ ಸಂಬಂಧಿಸಿರುತ್ತದೆ, ಕಂಪನಿಯ ನಿರ್ವಹಣೆಗೆ(management) ಸಂಬಂಧಿಸಿರುತ್ತದೆ ಅಥವಾ ಅದರ ಒಂದು ಬಲಿಷ್ಠ ಕಥೆ(story) ಇರಬಹುದು. ಕೆಲವೊಂದಿಷ್ಟು ವೇಗವರ್ಧಕಗಳು ದುರ್ಬಲ ಕೂಡ ಇರಬಹುದು, ಅವು ಕೆಲವು ದಿನಗಳವರೆಗೆ ಪ್ರಭಾವ ಬೀರಬಹುದು. ನೀವು ಯಾರಿಗಾದರೂ ಸ್ಟಾಕ್ ಬಗ್ಗೆ ಕೇಳುವಾಗ ಅದರ ವೇಗವರ್ಧಕಗಳ ಬಗ್ಗೆ ಕೇಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನೀವು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬಹುದು.
ಇದನ್ನು ಓದಿ: ದೊಡ್ಡ ಲಾಭಕ್ಕಾಗಿ ಪೆನ್ನಿ ಸ್ಟಾಕ್‌ಗಳು(Penny stocks)2. Momentum
ಆವೇಗದ ಬಗ್ಗೆ ಅಧಿಕ ಹೇಳುವ ಅವಶ್ಯಕತೆ ಇಲ್ಲವೆನಿಸುತ್ತದೆ. ಅನೇಕರು ಆವೇಗವನ್ನು ತಂತ್ರವೆಂದುಕೊಳ್ಳುತ್ತಾರೆ (strategy). ಆದರೆ ಇದು ಕೇವಲ ಪ್ರವೃತ್ತಿಯಾಗಿದ್ದು(tendency) ಇದನ್ನು ಬಳಸಿಕೊಂಡು ನೀವು ತಂತ್ರಗಳನ್ನು ಮಾಡಬಹುದು. ಆವೇಗದ ಪ್ರಕಾರ ಒಂದು ಸ್ಟಾಕ್ ತಿಂಗಳಿನಿಂದ ಒಳ್ಳೆಯ ಪ್ರದರ್ಶನ ನೀಡಿದ್ದರೆ ಅದು ಮುಂದಿನ ಒಂದು ತಿಂಗಳು ಒಳ್ಳೆಯ ಪ್ರದರ್ಶನ ನೀಡುತ್ತದೆ. ಇಲ್ಲಿ ತಿಂಗಳು ಅಷ್ಟೇ ಅಲ್ಲದೆ ವಾರ, ವರ್ಷ, ದಶಕಗಳು(decade) ಕೂಡ ಬರುತ್ತದೆ.
ಆವೇಗವನ್ನು ಮಾರುಕಟ್ಟೆಯ ದೊಡ್ಡ ಅಸಂಗತತೆ(anomaly) ಎನ್ನಲಾಗುತ್ತದೆ. ಏಕೆಂದರೆ ಇದನ್ನು ಜಗತ್ತಿನಾದ್ಯಂತ ಟ್ರೇಡರ್ಸ್ ದಿನವು ಮಾರುಕಟ್ಟೆಯನ್ನು ಸೋಲಿಸಲು ಬಳಸುತ್ತಿದ್ದಾರೆ. ಆವೇಗದಲ್ಲಿ ಅನೇಕ ರೀತಿಗಳಿವೆ, ಅವೆಂದರೆ,
- • ಅಲ್ಪಾವಧಿ(short term)
- • ದೀರ್ಘಾವಧಿ(long term)
- • ಬೆಲೆ/ಮೂಲಭೂತ(price/fundamental)
- • ಸಾಪೇಕ್ಷ(relative)
- • ಸಂಪೂರ್ಣ(absolute)
ಅಲ್ಪಾವಧಿ ಎಂದರೆ ನೀವು ಗಂಟೆ, ದಿನಗಳಿಗೆ ಅನ್ವಯಿಸಬಹುದು. ದೀರ್ಘಾವಧಿ ಎಂದರೆ ಅದು ಬೆಲೆ ಅಥವಾ ಮೂಲಭೂತಗಳ ಜೊತೆಗೆ ಕೂಡಿರುತ್ತದೆ. ಇಂದು ಅನೇಕ ತಂತ್ರಗಳು ಸಾಪೇಕ್ಷ ಆವೇಗದ ಮೇಲೆ ನಡೆಯುತ್ತೀವೆ. ಸಾಪೇಕ್ಷ ಆವೇಗವೆಂದರೆ ಸ್ಟಾಕ್ಗಳನ್ನು ಅವುಗಳ ಪ್ರದರ್ಶನದ ಮೇಲೆ ಶ್ರೇಣಿ(rank) ನೀಡುವುದಾಗಿದೆ.
ಉದಾಹರಣೆಗೆ, "ನಾನು ಒಂದು ಕ್ವಾಟರ್ನ ಬೆಲೆಯ ಮೇಲೆ 30 ಸ್ಟಾಕ್ಗಳಲ್ಲಿ ಹೂಡಿಕೆ ಮಾಡುವೆ, ಒಂದು ವೇಳೆ ಕೆಲವು ಕಂಪನಿಗಳು ಈ ಶ್ರೇಣಿಯಲ್ಲಿ ಇರದೇ ಹೋದರೆ ಅವುಗಳನ್ನು ತೆಗೆದು ಬೇರೆ ಕಂಪನಿಯನ್ನು ಸೇರಿಸುವೆ". ಆದರೆ ಸಾಪೇಕ್ಷದಲ್ಲಿ ತಡವಾಗಿ ತಿಳಿಯುತ್ತದೆ. ಏಕೆಂದರೆ ಒಂದು ಸ್ಟಾಕ್ ಟಾಪ್ 30 ಯಲ್ಲಿ ಬರಬೇಕೆಂದರೆ, ಅದು ಅನೇಕ ದೊಡ್ಡ ಚಲಿಸುಗಳನ್ನು ನೀಡಿರುತ್ತದೆ.
ಇದಕ್ಕಾಗಿ ಸಂಪೂರ್ಣ ಆವೇಗವಿದೆ. ಏಕೆಂದರೆ ಇದು ಒಂದು ವಲಯದ(sector) ಆವೇಗದ ಬಗ್ಗೆ ತಿಳಿಸುತ್ತದೆ. ಇದರಿಂದ ಟಾಪ್ ಕಂಪನಿಗಳ ಬಗ್ಗೆ ನಿಮಗೆ ಬೇಗನೇ ತಿಳಿಯುತ್ತದೆ.
ಇದನ್ನು ಓದಿ: ಬ್ಯಾಬಿಲೋನ್ನ ಶ್ರೀಮಂತ ವ್ಯಕ್ತಿ ಪುಸ್ತಕದ ಸಾರಾಂಶ3. Mean reversion
ಸರಾಸರಿ ಹಿಮ್ಮುಖ "trees do not grow to skies" ಎನ್ನುವ ತತ್ವದ ಮೇಲೆ ನಿಂತಿದೆ. ಏನಾದರೂ ಮೇಲೆ ಹೋದರೆ ಕೆಳಗೆ ಬರಬೇಕು, ಕೆಳಗೆ ಹೋಗಿರುವುದು ಮೇಲೆ ಬರಬೇಕು. ಹೀಗಾಗಿ ಇದನ್ನು ಎಲ್ಲಾ ಪ್ರವೃತ್ತಿಗಳ ಧರ್ಮಪಿತ(godfather) ಎನ್ನುತ್ತಾರೆ.
ಇದರ ಪ್ರಕಾರ ಒಂದು ಟ್ರೆಂಡ್ ಮೇಲ್ಮುಖವಾಗಿ(upward) ಹೋಗಿದ್ದರೆ, ಅದು ಯಾವಾಗಲೂ ಆ ದಿಕ್ಕಿನಲ್ಲೇ ಇರುವುದಿಲ್ಲ. ಒಂದು ಸಮಯದ ನಂತರ ಅದು ಕೆಳಮುಖವಾಗಿ(downward) ತೋರಿಸುತ್ತದೆ. ಇದೇ ರೀತಿ ತುಂಬಾ ಕೆಳಮುಖವಿರುವ ಟ್ರೆಂಡ್, ಮೇಲ್ಮುಖ ತೋರಿಸುತ್ತದೆ. ಈ ತತ್ವವೂ ಸೂಚ್ಯಂಕ(indices), ಸ್ಟಾಕ್ಸ್, ಬಂಡವಾಳ ಪಟ್ಟಿ(portfolio) ಮತ್ತು ಶೈಲಿಗಳಲ್ಲಿ(styles) ಕೆಲಸ ಮಾಡುತ್ತದೆ.
ನೀವು ನಿಫ್ಟಿ 50(nifty 50), s&p 500 ರೀತಿಯ ಸೂಚ್ಯಂಕಗಳ ಚಾರ್ಟ್ ನೋಡಿದರೆ ಯಾವಾಗಲೆಲ್ಲ ಈ ಸೂಚ್ಯಂಕಗಳು ಮೇಲೆ ಹೋಗಿದೆಯೋ ನಂತರ ತಿದ್ದುಪಡಿ ಅವಧಿಯನ್ನು(correction period) ನೋಡಿದೆ ಮತ್ತು ತುಂಬಾ ಬಿದ್ದಾಗ ಬೌನ್ಸ್ ಬ್ಯಾಕ್ ಅವಧಿಯನ್ನು(bounce back period) ತೋರಿಸಿದೆ. ಇವುಗಳನ್ನು ನಿಮ್ಮ ಪೋರ್ಟ್ಫೋಲಿಯೋದಲ್ಲಿರುವ ಸ್ಟಾಕ್ಗಳಲ್ಲಿ ನೋಡಿರುತ್ತೀರಾ. ನಿಮ್ಮ ಪೋರ್ಟ್ಫೋಲಿಯೋದಲ್ಲಿ ಕೆಲವು ಸ್ಟಾಕ್ ಚೆನ್ನಾಗಿ ಪ್ರದರ್ಶನ ಮಾಡುತ್ತಿದ್ದರೆ, ಕೆಲವೊಂದು ಕೆಟ್ಟದಾಗಿ ಪ್ರದರ್ಶನ ಮಾಡುತ್ತಿರುತ್ತವೆ. ನೀವು ಅವುಗಳನ್ನು ಮಾರಿದಾಗ ಒಳ್ಳೆಯ ಪ್ರದರ್ಶನ ನೀಡಲು ಪ್ರಾರಂಭಿಸುತ್ತದೆ. ಇನ್ನು ಶೈಲಿಯೆಂದರೆ ನೀವು ಸ್ಟಾಕ್ಗಳಲ್ಲಿ ಒಂದು ಶೈಲಿಯಲ್ಲಿ ನೋಡುತ್ತಿದ್ದು, ಅದು ಈಗ ಕೆಲಸ ಮಾಡುತ್ತಿರುವುದಿಲ್ಲ.
4. Volatility contraction
ಚಂಚಲತೆಯ ಸಂಕೋಚನ ಆದಾಗ ಅದು ತಲೆಕೆಳಗಾಗಿ(upside) ಅಥವಾ ಕೆಳಮುಖ ವಿಸ್ತರಣೆಗೆ(downside expansion) ಕಾರಣವಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಸಮಯ ಖರೀದಿ ಮಾರಾಟ ಆಗುತ್ತಿರುತ್ತದೆ. ಹೀಗಾಗಿ ಬೇಡಿಕೆ ಪೂರೈಕೆ ಸಮತೋಲನ(demand supply equilibrium) ಯಾವಾಗಲೂ ಸಾಧ್ಯವಿಲ್ಲ. ಇವುಗಳಲ್ಲಿ ಎಲ್ಲಾದರೂ ಸಣ್ಣ ತಳ್ಳುವಿಕೆ ದೊರೆತರೂ ಅದು ವಿಸ್ತರಣೆಗೆ ಕಾರಣವಾಗುತ್ತದೆ.
ಉದಾಹರಣೆಗೆ, ನಿಮಗೆ ಆರ್ವಿಎನ್ಎಲ್ನ(rvnl) ಚಾರ್ಟ್ ಕಾಣಿಸುತ್ತಿರಬಹುದು. ಇದರಲ್ಲಿ ನಿಮಗೆ ಹಲವಾರು ಚಂಚಲತೆಯ ಸಂಕೋಚನ ಕಾಣಿಸುತ್ತವೆ. 17 ಏಪ್ರಿಲ್ 2023 ರಂದು ಚಂಚಲತೆಯು ಬಹುತೇಕ ಶೂನ್ಯಕ್ಕೆ ಹೋಗಿದೆ. ಇದರ ನಂತರ ದೊಡ್ಡ ಚಲನೆಯು ಟ್ರಿಗರ್ ಆಗಿದೆ. ಇದನ್ನು ಅಧಿಕವಾಗಿ ಟ್ರೇಡರ್ಸ್ ಬಳಸುತ್ತಾರೆ. ಆದರೆ ಹೂಡಿಕೆದಾರರು ಇದನ್ನು ತಿಳಿಯುವುದು ಒಳ್ಳೆಯದೇ.
ಇದನ್ನು ಓದಿ: ETF ಹೂಡಿಕೆ ತಂತ್ರ5. Exhaustion
ಬಳಲಿಕೆ, ಸರಾಸರಿ ಹಿಮ್ಮುಖದ ರೀತಿಯೇ ಇದೆ, ಆದರೆ ಅದಕ್ಕಿಂತ ತೀವ್ರವಾಗಿದೆ(extreme). ಇದರ ಪ್ರಕಾರ ಯಾವುದಾದರೂ ತೀವ್ರವಾದ ಮಟ್ಟಕ್ಕೆ ಹೋಗಿದ್ದಾರೆ, ಅದರ ಇನ್ನೊಂದು ಬದಿಯನ್ನು ನೋಡಲು ನೀವು ತಯಾರಿರಬೇಕು. ಇದನ್ನು ದಿನದ ವಹಿವಾಟುದಾರರು(intraday traders) ಅಧಿಕ ಬಳಸಿ ಇದರ ಅನುಕೂಲವನ್ನು ಪಡೆಯುತ್ತಾರೆ.
ಇದನ್ನು ನೀವು ಬೆಲೆ(price), ಪರಿಮಾಣ(volume) ಮತ್ತು ವಿಸ್ತಾರದಲ್ಲಿ(breadth) ಬಳಸಬಹುದು. ಅಧಿಕ ಪರಿಮಾಣ ಇದ್ದರೆ ಒಳ್ಳೆಯದು ಎನ್ನುತ್ತಾರೆ ಆದರೆ ಚಲನೆಯ ಪರಿಮಾಣದ ಆರಂಭ ಒಳ್ಳೆಯದೇ, ಚಲನೆಯ ಪರಿಮಾಣದ ಅಂತ್ಯದ್ದು ಒಳ್ಳೆಯದಲ್ಲ. ಇನ್ನು 52 ವಾರಗಳ ಗರಿಷ್ಠ/ಕಡಿಮೆ(52 week high/low) ಈ ರೀತಿ ನೋಡುವುದನ್ನು ವಿಸ್ತಾರವೆನ್ನುತ್ತೇವೆ. ಇದರ ಮೇಲು ಬಳಲಿಕೆ ಕೆಲಸ ಆಗುತ್ತದೆ.
ಇದರ ಪ್ರಕಾರ 52 ವಾರಗಳ ಗರಿಷ್ಠದಲ್ಲಿ ಕೇವಲ 1%, 2%, 5% ಸ್ಟಾಕ್ ಉಳಿದಿದ್ದರೆ, ಅದು ಬಳಲಿಕೆ ಹಂತವಾಗಿದ್ದು, ಮಾರುಕಟ್ಟೆ ಹಿಮ್ಮುಖ ಹೋಗುವ ಅವಕಾಶವಿರುತ್ತದೆ. ಉದಾಹರಣೆಗೆ ನಿಮಗೆ irctc ಚಾರ್ಟ್ ಕಾಣಿಸುತ್ತಿರಬಹುದು. 7 ಅಕ್ಟೋಬರ್ 2021 ರ ಮೇಲ್ಮುಖವಾಗಿ ನಡೆಯು ನಿಮಗೆ ಕಾಣಿಸುತ್ತಿರಬಹುದು. ನೀವು ಇದನ್ನು ನೋಡಿದ ತಕ್ಷಣ ಬಳಲಿಕೆ ಆಗುವ ಸಾಧ್ಯತೆ ಇದೆ ಎಂಬುದನ್ನು ತಿಳಿಯಬೇಕು. ಕೇವಲ ಒಂದು ತಿಂಗಳಿನಲ್ಲೇ ಇದು ಡಬಲ್ ಸ್ಟಾಕ್ ಬೆಲೆ ತಲುಪಿದೆ, ಆ ಬಳಲಿಕೆಯ ನಂತರ 500 ರ ತನಕ ತಲುಪಿದೆ.
6. Quick 3
ತ್ವರಿತ 3, ಪ್ರಮುಖ ರಚನಾತ್ಮಕ ತತ್ವಗಳಾಗಿವೆ. ಅದರಲ್ಲಿ ಮೊದಲನೆಯದು ನಿರ್ಲಕ್ಷ್ಯ(neglect), ಇದರ ಪ್ರಕಾರ ಯಾರು ಮಾತನಾಡದೆ ಸ್ಟಾಕ್ ಒಂದು ಒಳ್ಳೆಯ ಸಂಭಾವ್ಯವನ್ನು(potensial) ಹೊಂದಿರುತ್ತದೆ. ನೀವು ವೇಗವರ್ಧಕವನ್ನು ಈ ನಿರ್ಲಕ್ಷ್ಯದ ಜೊತೆ ಹೋಲಿಸಿದರೆ, ಒಳ್ಳೆಯ ತಂತ್ರ ಸಿಗಬಹುದು. ಜನರು ಈ ನಿರ್ಲಕ್ಷ್ಯವನ್ನು ಬೆಲೆ, ಮಾಧ್ಯಮ(media), ಸಮಯ(time) ಅಥವಾ ಪರಿಸರ, ಸಾಮಾಜಿಕ ಮತ್ತು ಆಡಳಿತದಲ್ಲಿ(esg) ಕಾಣಬಹುದು. ಇತ್ತೀಚಿಗೆ ಈ ಪರಿಸರ, ಸಾಮಾಜಿಕ ಮತ್ತು ಆಡಳಿತದಿಂದ ಕೋಲ್ ಇಂಡಿಯಾ(coal india) ರೀತಿಯ ಸ್ಟಾಕ್ ಅನ್ನು ಅತಿಯಾಗಿ ನಿರ್ಲಕ್ಷ್ಯ ಮಾಡಲಾಯಿತು.
ಇನ್ನು ಎರಡನೆಯದಾಗಿ ವಯಸ್ಸು(age), ಎಲ್ಲಾ ಟ್ರೆಂಡ್ಗೆ ವಯಸ್ಸು ಇರುತ್ತದೆ. ನಿಮಗೆ ಹೊಸ ಟ್ರೆಂಡ್ ಬೇಕೆ ಹೊರತು ಹಳೆ ಟ್ರೆಂಡ್ ಅಲ್ಲ. ಏಕೆಂದರೆ ಹೊಸ ಟ್ರೆಂಡ್ನಲ್ಲಿ ನೀವು ಹಣ ಗಳಿಸುವ ಅವಕಾಶ ಅಧಿಕವಿರುತ್ತದೆ. ಇನ್ನು ಮೂರನೆಯದಾಗಿ ಗಾತ್ರ(size), ಚಿಕ್ಕ ಗಾತ್ರವಿದ್ದರೆ ಒಳ್ಳೆಯ ಚಲಿಸುವಿಕೆ ಕೊಡುವ ಅವಕಾಶವಿರುತ್ತದೆ. ದೊಡ್ಡ ಕಂಪನಿಗಳು ಬೇಗನೆ ಚಲಿಸಲು ಸಾಧ್ಯವಾಗುವುದಿಲ್ಲ, ಚಿಕ್ಕ ಕಂಪನಿಗಳು ಬೇಗನೆ ಚಲಿಸುತ್ತವೆ. ಇದರ ಅರ್ಥ ನೀವು ಸಣ್ಣ ಕ್ಯಾಪ್ನಲ್ಲಿ(small cap) ಹೂಡಿಕೆ ಮಾಡಬೇಕೆಂದಲ್ಲ, ಬದಲಿಗೆ ನಿಮ್ಮ ತಂತ್ರದ ಮೇಲೆ ನಿಂತಿದೆ.
ಇಲ್ಲಿಗೆ 6 ರಚನಾತ್ಮಕ ತತ್ವಗಳು ಮುಗಿಯಿತು. ನೀವು ಮೊದಲ 3 ರಚನಾತ್ಮಕ ತತ್ವಗಳಾದ ವೇಗವರ್ಧಕ, ಆವೇಗ ಮತ್ತು ಸರಾಸರಿ ಹಿಮ್ಮುಖವನ್ನು ನೋಡಿದರೆ ನ್ಯೂಟನ್ನ 3 ನಿಯಮದಂತೆ(newton 3 laws) ಇದೆ.
ಈ ರಚನಾತ್ಮಕ ತತ್ವಗಳ ಬಗ್ಗೆ ತಿಳಿದುಕೊಂಡು ಮಾರುಕಟ್ಟೆಗೆ ನೀವು ಹೋದರೆ, ನಿಮ್ಮ ಟ್ರೇಡಿಂಗ್ ಅಥವಾ ಹೂಡಿಕೆಯು, ಮುಂದಿನ ಹಂತಕ್ಕೆ ಹೋಗುತ್ತದೆ. ಈ ತತ್ವಗಳ ನಿಜವಾದ ಶಕ್ತಿಯು ಸಂಯೋಜಿಸುವುದರಿಂದಲೇ ಬರುತ್ತದೆ. ಅನೇಕ ಶಕ್ತಿಶಾಲಿ ಟ್ರೇಡರ್ಗಳು ಆವೇಗ, ಮತ್ತು ಚಂಚಲತೆಯ ಸಂಕೋಚನವನ್ನು ಸಂಯೋಜನೆ ಮಾಡುತ್ತಾರೆ.
ನೀವು ವೇಗವರ್ಧಕ, ಮತ್ತು ಸರಾಸರಿ ಹಿಮ್ಮುಖವನ್ನು ಸಂಯೋಜನೆ ಮಾಡಿದರೆ, ಅದು ಒಂದು ಮುಳುಗಿರುವ ಸ್ಟಾಕ್ನಲ್ಲಿ ವೇಗವರ್ಧಕ ಬಂದು ತೀವ್ರ ಚಲನೆಯನ್ನು(extreme move) ತೋರಿಸಿದಂತಾಗಿದೆ. ಇದೇ ರೀತಿ ವೇಗವರ್ಧಕವನ್ನು, ಗಾತ್ರ ಮತ್ತು ನಿರ್ಲಕ್ಷ, ಅಂದರೆ ನಿರ್ಲಕ್ಷಿಸಿರುವ ಕಂಪನಿಯಲ್ಲಿ ನಿಮಗೆ ವೇಗವರ್ಧಕದ ಬಗ್ಗೆ ತಿಳಿದರೆ ಅದು ಕೂಡ ದೊಡ್ಡ ಚಲನೆ ಕೊಡುತ್ತದೆ. ಆಗಿದ್ದರೆ ಇವುಗಳನ್ನು ಸಂಯೋಜನೆ ಮಾಡಿ ಸೆಟಪ್‌ಗಳನ್ನು ಮಾಡುವುದು ಹೇಗೆ ಎಂಬುದನ್ನು ನೋಡೋಣ.
ಇದನ್ನು ಓದಿ: ಥಿಂಕ್ ಮತ್ತು ಗ್ರೋ ರಿಚ್ ಪುಸ್ತಕದ ಸಾರಾಂಶ3. Next Big Idea - Set ups
ಇಂದು ಮಾರುಕಟ್ಟೆಯಲ್ಲಿ ಅನೇಕರು, "there is only one way to invest or trade" ಎಂದು ಹೇಳುತ್ತಾರೆ. ಕೆಲವರು ಟ್ರೇಡರ್ಗಳು ಮೂರ್ಖರು(idiots), ಕೆಲವು ಟ್ರೇಡರ್ಗಳು ಹೂಡಿಕೆದಾರರನ್ನು ಮೂರ್ಖರು ಎನ್ನುತ್ತಾರೆ. ಇದು ಮಾರುಕಟ್ಟೆಯನ್ನು ಅರ್ಥ ಮಾಡಿಕೊಳ್ಳಲು ಇರುವ ಸೀಮಿತಗೊಳಿಸುವ ಮಾರ್ಗವಾಗಿದೆ(limiting way). ಮಾರುಕಟ್ಟೆಯಲ್ಲಿ ನೂರಕ್ಕಿಂತ ಅಧಿಕ ಮಾರ್ಗದಲ್ಲಿ ಹಣ ಮಾಡಬಹುದು. ಆದರೆ, ನೀವು ಇವುಗಳಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ(personality) ಹೋಲಿಕೆಯಾಗುವ ಕೆಲವು ಮಾರ್ಗಗಳನ್ನು ಆಯ್ಕೆ ಮಾಡಬೇಕು. ನೀವು 1 ಇಲ್ಲ 2 ರಚನಾತ್ಮಕ ತತ್ವಗಳನ್ನು ಸಂಯೋಜನೆ ಮಾಡಿ ಅವುಗಳಲ್ಲಿ ಇರುವ ಪುನರಾವರ್ತನೀಯ ಮಾದರಿ(repeatable pattern) ಬಗ್ಗೆ ತಿಳಿದುಕೊಳ್ಳಿ.
ಇದರ ನಂತರ ನೀವು ಬೆಲೆ, ಆವೇಗ ಯಾವ ಮಾದರಿಯನ್ನು ನೋಡಲು ಬಯಸಿದ್ದೀರಾ ಎಂಬುದನ್ನು ತಿಳಿಯಬೇಕು. ನಂತರ ನೀವು ಯಾವಾಗ ಅದರ ಮೇಲೆ ಕಾರ್ಯ ಮಾಡುತ್ತೀರಾ ಮತ್ತು ಎಷ್ಟು ಸಮಯ ಮಾಡುತ್ತೀರಾ ಎಂಬುದನ್ನು ತಿಳಿಯಬೇಕು. ನಂತರ ಇದರಿಂದ ಹೊರ ಬರುವುದು ಯಾವಾಗ ಎಂಬುದನ್ನು ತಿಳಿಯಬೇಕು. ನೀವು ಈ ರೀತಿ ಮಾಡಿದರೆ ನಿಮ್ಮ 80 ರಿಂದ 90 ರಷ್ಟು ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತೀರಾ. ಈ ರೀತಿಯ ಸೆಟಪ್‌ಗಳನ್ನು ಮಾಡದೆ ನೀವು ಮೂರ್ಖತನದ ಆಕಸ್ಮಿಕ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ವಾರೆನ್ ಬಫೆಟ್(warren buffet) ಅವರು ನಿರ್ಲಕ್ಷ ಪ್ರವೃತ್ತಿಯನ್ನು ಬಳಸಿ ಮೌಲ್ಯಯುತ ಕಂಪನಿ ಖರೀದಿಸುತ್ತಿದ್ದಾರೆ.
ಇದನ್ನು ಓದಿ: "The Education of a Value Investor" ಪುಸ್ತಕದ ಸಾರಾಂಶ4. Building setups
ಇದಕ್ಕಾಗಿ 3 ಅಂಶಗಳಿವೆ(ingridents) ಅವುಗಳೆಂದರೆ, ಅಂಚು(edge), ಕಾಲಮಿತಿ(timeframe) ಮತ್ತು ಪ್ರಕ್ರಿಯೆ(process). ನೀವು ಒಂದು ಸೆಟಪ್ ಮಾಡುವಾಗ ಎಷ್ಟು ಕಾಲಮಿತಿಯಲ್ಲಿ ಆಡುವಿರಿ ಎಂಬುದನ್ನು ತಿಳಿಯಬೇಕು. ಇದರ ಉತ್ತರ ತಿಳಿಯದಿದ್ದರೆ ನೀವು ಮಾರುಕಟ್ಟೆಯಲ್ಲಿ ಕಾಣೆಯಾಗುತ್ತೀರಾ. ಕೆಲವರು ದಿನದೊಳಗಿನ(intraday) ಕಾಲಮಿತಿಯಲ್ಲಿ ಇರುತ್ತಾರೆ. ಕೆಲವು ಹೂಡಿಕೆದಾರರು ದಶಕಗಳ ಕಾಲಮಿತಿಯಲ್ಲಿ ಇರುತ್ತಾರೆ. ನೀವು ಯಾವ ಸೆಟಪ್ ಬಳಸುತ್ತಿರೆಂಬುದನ್ನು ಕಾಲಮಿತಿ ನಿರ್ಧಾರ ಮಾಡುತ್ತದೆ.
ನೀವು ಉದ್ಯೋಗ(job) ಮಾಡುತ್ತಿದ್ದರೆ ದಿನದೊಳಗಿನ ಟ್ರೇಡಿಂಗ್ ನಿಮಗೆ ಅಷ್ಟು ಸೂಕ್ತವಾಗಿರುವುದಿಲ್ಲ. ನಿಮಗೆ ದಿನವೂ ಮಾರುಕಟ್ಟೆಯನ್ನು ನೋಡಲು ಸಾಧ್ಯವಾಗಿಲ್ಲವೆಂದರೆ ಮ್ಯೂಚುಯಲ್ ಫಂಡ್ಸ್(mutual funds) ಸೂಕ್ತವಾಗಿದೆ. ಈ ರೀತಿಯಾಗಿ ಕಾಲಮಿತಿ ಸ್ಪಷ್ಟತೆ ನೀಡುತ್ತದೆ. ನೀವು ಮೂಲಭೂತ ಅಂಶ(fundamentals), ವ್ಯವಹಾರದ(business) ಬಗ್ಗೆ ತಿಳಿಯಲು ಇಷ್ಟಪಟ್ಟರೆ, ನಿಮ್ಮ ಸೆಟಪ್ ಬೇರೆ ರೀತಿಯಲ್ಲಿ ಇರುತ್ತದೆ. ನಿಮ್ಮ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುವ ಸೆಟಪ್ ಅನ್ನು ಆಯ್ಕೆ ಮಾಡಿ. ಏಕೆಂದರೆ ಮೂಲಭೂತ ಅಂಶಗಳನ್ನು ಇಷ್ಟಪಡುವವರಿಗೆ ಚಾರ್ಟ್ ಇಷ್ಟವಾಗದಿರಬಹುದು ಮತ್ತು ಚಾರ್ಟ್ ಇಷ್ಟಪಡುವವರಿಗೆ ಮೂಲಭೂತ ಅಂಶಗಳು ಇಷ್ಟವಾಗದಿರಬಹುದು. ಕೆಲವರು ಇವೆರಡರ ಸಂಯೋಜನೆ ಬೇಕೆನ್ನಬಹುದು, ಅದು ಕೂಡ ಸರಿಯಾಗಿದೆ.
ಒಂದು ಸಲ ನೀವು ಸೆಟಪ್ ಮಾಡಿದ ನಂತರ ಅದನ್ನು ಯಾವ ರೀತಿ ಕಾರ್ಯಗತಗೊಳಿಸುವಿರಾ ಎಂಬುದನ್ನು ತಿಳಿಯಬೇಕು. ಅದಕ್ಕೆ ಯಾವ ಯಾವ ಪರಿಕರಗಳು(tools) ಬೇಕು ಎಂಬುದನ್ನು ತಿಳಿಯಿರಿ. ಈ ಸೆಟಪ್ ಮಾಡಲು ನೀವು ನೀಡುವ ಪ್ರಯತ್ನ(effort) ಮತ್ತು ಕಠಿಣ ಪರಿಶ್ರಮದ(hardwork) ಮೇಲೆ ಷೇರು ಮಾರುಕಟ್ಟೆಯಲ್ಲಿ ಯಶಸ್ಸು ಇರುತ್ತದೆ.
ಇದನ್ನು ಓದಿ: One Up On Wall Street ಪುಸ್ತಕದ ಸಾರಾಂಶ Part- 15. Introduction to 2 setups
ನಾವು ಈಗ 2 ಸೆಟಪ್ ಬಗ್ಗೆ ತಿಳಿದುಕೊಳ್ಳೋಣ. ಅವುಗಳೆಂದರೆ ಬ್ರೇಕ್‌ಔಟ್(breakouts) ಮತ್ತು ವೇಗವರ್ಧಕ(catalyst). ಬ್ರೇಕೌಟ್ ಸೆಟಪ್ನಲ್ಲಿ ಟ್ರೇಡರ್ಗಳು 2 ರಚನಾತ್ಮಕ ತತ್ವಗಳನ್ನು ಬಳಸುತ್ತಿದ್ದರೆ, ಅವೆಂದರೆ ಆವೇಗ(momentum) ಮತ್ತು ಚಂಚಲತೆಯ ಸಂಕೋಚನ(volatility contraction) ಅಥವಾ ವೇಗವರ್ಧಕ(catalyst) ಅಥವಾ ಸರಾಸರಿ ಹಿಮ್ಮುಖ(mean reversion), ಅಂದರೆ ಪ್ರತಿಯೊಬ್ಬ ಬ್ರೇಕೌಟ್ ಟ್ರೇಡರ್ ಮೂಲಭೂತವಾಗಿ ಆವೇಗದ ಜೊತೆ ಇತರ ಪ್ರವೃತ್ತಿಯನ್ನು ನೋಡುತ್ತಾನೆ. ಟ್ರೇಡರ್ಗಳು ಬ್ರೇಕೌಟ್ನಲ್ಲಿ ಬಹು ದಿನ(multi day), ವಾರ ಅಥವಾ ವರ್ಷಗಳ ತಂತ್ರಗಳನ್ನು ಬಳಸುತ್ತಿರಬಹುದು. ಅದರ ಮೇಲೆ ಪ್ರಕ್ರಿಯೆ ಮಾಡುತ್ತಾರೆ. ಪ್ರಕ್ರಿಯೆಂದರೆ ಸ್ಟಾಕ್ ಮೇಲೆ ಶೋಧಕಗಳನ್ನು(filters) ಹಾಕುವುದಾಗಿದೆ.
ಇನ್ನೂ ವೇಗವರ್ಧಕ ಸೆಟಪ್ ಬಗ್ಗೆ ತಿಳಿಸಿದರೆ ನಿಮ್ಮ ಪ್ರತಿದಿನದ ಅತಿ ಹೆಚ್ಚು ಲಾಭ ಗಳಿಸಿದವರನ್ನು(top gainer) ನೋಡಿದರೆ, ಅದರ ಹಿಂದೆ ಇರುವ ವೇಗವರ್ಧಕದ ಬಗ್ಗೆ ತಿಳಿಯುತ್ತದೆ. ನೀವು ದಿನದೊಳಗಿನ ಟ್ರೇಡರ್ ಆಗಿದ್ದರೆ, ವಾರ್ತೆಯಲ್ಲಿ ಬರುವ ಸ್ಟಾಕ್ಗಳನ್ನು ಗಮನಿಸಿ. ವೇಗವರ್ಧಕವನ್ನು ನೀವು ಬಹು ವಾರ, ಬಹು ತಿಂಗಳು ಟ್ರೇಡ್ ಮಾಡಬಹುದು.
ಇದನ್ನು ಓದಿ: ಪ್ರಮುಖ 7 ಹಣದ ಮೇಲಿನ ಪಾಠಗಳು6. Sizing and portfolio construction
ಗಾತ್ರ ಮತ್ತು ಪೋರ್ಟ್ಫೋಲಿಯೋ ನಿರ್ಮಾಣ ಪ್ರಮುಖ ವಿಷಯಗಳಾಗಿವೆ. ಇದರ ಪ್ರಕಾರ, ಮಾರುಕಟ್ಟೆಯಲ್ಲಿ ಮುಖಬೆಲೆಯ(face value) ಮೇಲೆ ಏನನ್ನು ಖರೀದಿಸಬೇಡಿ. ನಿಮಗೆ ಹೋಲಿಕೆಯಾಗುವ ತಂತ್ರವನ್ನು ನೀವು ಹುಡುಕಲೇಬೇಕು. ಗಾತ್ರ ಮತ್ತು ಪೋರ್ಟ್ಫೋಲಿಯೋ ನಿರ್ಮಾಣ ಈ ರೀತಿಯ ಸೆಟಪ್, ಕಾಲಮಿತಿ ಮತ್ತು ಅಪಾಯದ ಪ್ರತಿಫಲದ(risk reward) ಮೇಲಿನ ಕಾರ್ಯದ ಮೇಲೆ ನಿಂತಿದೆ. ಇನ್ನು ಅಧಿಕ ತಪ್ಪುಗಳಗುವ ಬಗ್ಗೆ ತಿಳಿಸಬೇಕೆಂದರೆ ನೀವು ಒಂದೇ ಸೆಟಪ್ ಮೇಲೆ ದೊಡ್ಡ ಸ್ಥಾನದಲ್ಲಿ(big position) ಕೂರಬೇಡಿ. ಕುಸಿಯುವ(drawdown) ಸೆಟಪ್ನಲ್ಲಿ ದೊಡ್ಡ ಸ್ಥಾನದಲ್ಲಿ ಇರುವುದು ಅಪಾಯಕಾರಿಯಾಗಿದೆ.
ನೀವು ದಿನದೊಳಗಿನ ಟ್ರೇಡರ್ ಆಗಿದ್ದರೆ ಮುಂದಿನ 2 - 3 ಗಂಟೆಯ ವಿಷಯದಲ್ಲಿ ನಿಮಗೆ ಕಡಿಮೆ ಅಪಾಯವಿದೆ. ಏಕೆಂದರೆ ನಿಮ್ಮ ಸೆಟಪ್ನಿಂದ ಆ ಸಮಯದ ಐಡಿಯಾ ನಿಮಗೆ ಸಿಗುತ್ತದೆ. ಹೀಗಾಗಿ ಟ್ರೇಡರ್ಸ್ ದೊಡ್ಡ ಸ್ಥಾನವನ್ನು ತೆಗೆದುಕೊಳ್ಳಬಹುದು. ಅಪಾಯ ಕಡಿಮೆ ಇರುವ ಸೆಟಪ್ನಲ್ಲಿ ಸಣ್ಣ ಸ್ಥಾನವು ತಪ್ಪಾಗಿದೆ. ನೀವು ಯಾವುದೇ ಮಾನಸಿಕ ಒತ್ತಡದಿಂದ(psychological pressure) ಯೋಜನೆಯಿಂದ ದಾರಿ ತಪ್ಪದಿರಲು ಒಂದು ರಚನಾತ್ಮಕದಲ್ಲಿ ಯೋಜನೆ ಮಾಡುವುದೇ ಪೋರ್ಟ್ಫೋಲಿಯೋ ನಿರ್ಮಾಣವಾಗಿದೆ.
7. Market environment
ಮಾರುಕಟ್ಟೆ ಪರಿಸರ ಕೂಡ ಪ್ರಮುಖವಾಗಿದೆ ಇದು ಯಾವ ರೀತಿ ಎಂದರೆ, "you cannot make it rain without clouds", ಅಂದರೆ ಮೋಡಗಳಿಲ್ಲದೆ ನೀವು ಮಳೆ ಬರಿಸಲು ಸಾಧ್ಯವಿಲ್ಲ. ನೀವು ಯಶಸ್ವಿಯಾಗಲು ಒಳ್ಳೆಯ ಸೆಟಪ್ ಜೊತೆಗೆ ಮಾರುಕಟ್ಟೆ ಪರಿಸರ ಕೂಡ ಪ್ರಮುಖವಾಗಿದೆ. ಮೌಲ್ಯ ಹೂಡಿಕೆದಾರರಿಗೆ(value investors) ಕರಡಿ ಮಾರುಕಟ್ಟೆ(berish market) ಪರಿಸರ ಒಳ್ಳೆಯದೆನ್ನಿಸುತ್ತದೆ. ಟ್ರೇಡರ್ಗಳಿಗೆ ಗೂಳಿ ಮಾರುಕಟ್ಟೆ(bull market) ಪರಿಸರ ಒಳ್ಳೆಯದೆನ್ನಿಸುತ್ತದೆ. ಹಾಗಿದ್ದರೆ, ಮಾರುಕಟ್ಟೆ ಪರಿಸರವನ್ನು ಮೌಲ್ಯಮಾಪನ ಮಾಡುವುದೇಗೆ?
- • Based on setup
ನಿಮ್ಮ ವಿವಿಧ ಸೆಟಪ್ ಮೇಲೆ ವಿವಿಧ ಮಾರುಕಟ್ಟೆ ಪರಿಸರ ಹೇಗೆ ಪ್ರದರ್ಶನ ಮಾಡುತ್ತದೆ ಎಂಬುದನ್ನು ನೋಡಿ ಮತ್ತು ಅದರ ಮೇಲೆ ದಾಳಿ ಮಾಡಿ.
ಇದಕ್ಕಾಗಿ ನೀವು ವಿಸ್ತಾರ(breadth) ಮತ್ತು ಚಲಿಸುವ ಸರಾಸರಿ(moving average) ಪರಿಕರಗಳನ್ನು ಬಳಸಬಹುದು. ವಿಸ್ತಾರದ ಬಗ್ಗೆ ಈಗಾಗಲೇ ತಿಳಿಸಿದ್ದೇವೆ, ಅಂದರೆ 52 ವಾರಗಳ ಗರಿಷ್ಠ ಅಥವಾ ಕನಿಷ್ಠ ರೀತಿಯ ಸ್ಟಾಕ್. ವಿಸ್ತಾರ ಕಡಿಮೆ ಇದ್ದರೆ ಅದು ಬೆರಿಶ್ ಹಂತವಾಗಿದೆ(beriesh phase). ಒಂದು ವೇಳೆ ವಿಸ್ತಾರ 60%, 70% ಬುಲಿಶ್ ಹಂತದಲ್ಲಿ(bullish phase) ಇರುವಿರಾ ಎಂದರ್ಥ.
ಇನ್ನು ಚಲಿಸುವ ಸರಾಸರಿಯಲ್ಲಿ ನೀವು ಸೂಚ್ಯಂಕ(index) ನೋಡಿ. ಒಂದು ವೇಳೆ ನಿಫ್ಟಿ, ಬ್ಯಾಂಕ್(nifty bank), ಕೆಳಗಿದ್ದು, ಮಿಡ್ ಕ್ಯಾಪ್(mid cap), ಸ್ಮಾಲ್ ಕ್ಯಾಪ್(small cap) ಸೂಚ್ಯಂಕ ಮೆಲ್ಲಿದ್ದರೆ, ನೀವು ಮಿಡ್ ಕ್ಯಾಪ್ನಲ್ಲಿ ಹೂಡಿಕೆ ಮಾಡಿ. ಈ ರೀತಿಯಲ್ಲಿ ನೀವು ಮಾರುಕಟ್ಟೆ ಪರಿಸರವನ್ನು ಹಿಡಿಯುವಿರ.
ಇದನ್ನು ಓದಿ: Sip vs Lumpsum ಹೂಡಿಕೆಗೆ ಯಾವುದು ಉತ್ತಮ?8. Putting it all together
ಈಗ ಪ್ರಮುಖವಿರುವ ವಿಷಯವೆಂದರೆ ಇಲ್ಲಿಯ ತನಕ ತಿಳಿದ ಮಾಹಿತಿಯನ್ನು ಹಣವಾಗಿ ಬದಲಿಸುವುದೇಗೆ? ಮೊದಲನೆಯದಾಗಿ, ನಾವು ತಿಳಿಸಿದ ರಚನಾತ್ಮಕ ತತ್ವಗಳನ್ನು ಮಾರುಕಟ್ಟೆಯಲ್ಲಿ ಎಲ್ಲಾ ಕಡೆಯಿಂದಲೂ ನೋಡುತ್ತೀರಿ ಮತ್ತು ಅನ್ವಯಿಸಲು ಪ್ರಯತ್ನಿಸಿ.
ಎರಡನೆಯದಾಗಿ, ಆ ಬಹುಸಂಖ್ಯೆ ತತ್ವಗಳನ್ನು ನಿಮಗೆ ಅನುರಣಿಸುವ ರೀತಿ ಬಳಸಿ. ಏಕೆಂದರೆ ಸೆಟಪ್ನಲ್ಲಿ ಯಾವುದೇ ರಹಸ್ಯವಿಲ್ಲ, ಬದಲಿಗೆ ನೀವು ಆ ಸೆಟಪ್ ನಿಮಗೆ ಕೆಲಸ ಮಾಡುವ ರೀತಿ ಮಾಡುವುದರಲ್ಲಿದೆ. ನೀವು ಆ ಸೆಟಪ್ ಅನ್ನು ನಿರ್ಮಾಣ ಮಾಡಲು ಸ್ಪಷ್ಟತೆ(clarity) ಮತ್ತು ಅದರ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಅದನ್ನು ಯಾವ ಮಾರುಕಟ್ಟೆ ಪರಿಸರದಲ್ಲಿ ಬಳಸಬೇಕು ಎಂಬುದನ್ನು ತಿಳಿಯಿರಿ. ಇದು ಸುಲಭವಿದೆ ಎಂದು ಇಲ್ಲಿಯವರೆಗೆ ಯಾರು ತಿಳಿಸಲಿಲ್ಲ. ಇದಕ್ಕಾಗಿ ನೀವು ವೃತ್ತಿಪರರು(professionals) ಬಳಸುವ ಮಾರ್ಗದಲ್ಲೇ ಹೋಗಬಹುದು. ಅನೇಕ ವೃತ್ತಿಪರರ ಪ್ರಕರಣ ಅಧ್ಯಯನಗಳನ್ನು(case study) ಓದಿರಿ. ಅವುಗಳನ್ನು ಓದಿ, ನಿಮಗೆ ಹೋಲಿಕೆಯಾಗುವ ತಂತ್ರವನ್ನು ಮಾಡಿ. ಇದರಿಂದ ನಿಮ್ಮ ತಂತ್ರವು ಮುಂಚೆ ಯಾವ ರೀತಿ ಪ್ರದರ್ಶನ ಮಾಡಿತು ಎಂಬುದನ್ನು ತಿಳಿಸುತ್ತದೆ. ಇದರಿಂದ ನೀವು ಉತ್ತಮ ನಿರ್ಧಾರ ತೆಗೆದುಕೊಳ್ಳಬಹುದು.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.