Website designed by @coders.knowledge.

Website designed by @coders.knowledge.

How do You Know if You are Attractive | ನೀವು ಯೋಚಿಸುವುದಕ್ಕಿಂತ ಹೆಚ್ಚು ಆಕರ್ಷಕವಿರುವ 13 ರಹಸ್ಯ ಚಿಹ್ನೆಗಳು

 0

 Add

Please login to add to playlist

Watch Video

ಇತರರನ್ನು ಜಡ್ಜ್ ಮಾಡುವುದು ನಮಗೆ ಸುಲಭವಿರಬಹುದು. ಆದರೆ ನಮ್ಮನ್ನು ಅರಿತುಕೊಳ್ಳಲು ಹೋದಾಗ ನಮ್ಮ ಎಲ್ಲ ಜ್ಞಾನವೂ ವ್ಯರ್ಥವೆನಿಸುತ್ತದೆ. ಅನೇಕ ಅಧ್ಯಯನಗಳು ಹೆಚ್ಚಿನ ಜನರು ತಮ್ಮ ನೋಟ(looks) ಮತ್ತು ಮೌಲ್ಯದ(worth) ಮೇಲೆ ಅನುಮಾನ ಪಡುತ್ತಾರೆ ಎಂದು ಹೇಳುತ್ತದೆ. ಆದರೆ ಇತರರಿಗೆ ಅವರು ಆಕರ್ಷಕ(attractive) ಮತ್ತು ಮೌಲ್ಯಯುತವಾಗಿರುತ್ತಾರೆ.

ನೀವು ಇತರರಿಗೆ ಎಷ್ಟು ಆಕರ್ಷಕವಿದ್ದಿರೋ ಗೊತ್ತಿಲ್ಲ. ಆದರೆ ಆ ವ್ಯಕ್ತಿಯ ಗಮನ ನಿಮ್ಮ ಮೇಲೆ ಬರುತ್ತದೆ. ಗೊತ್ತಿಲ್ಲದ ವ್ಯಕ್ತಿಯು ನಿಮ್ಮನ್ನು ನೋಡುತ್ತಾರೆ ಮತ್ತು ಮಾತಾಡಿಸುತ್ತಾರೆ. ನೀವು ಅವರಿಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೂ, ನೀವು ಕಷ್ಟದಲ್ಲಿದಾಗ ಅವರು ನಿಮ್ಮ ಸಹಾಯಕ್ಕೆ ಬರುತ್ತಾರೆ. ನಿಮ್ಮ ಆಕರ್ಷಣೆಯ ಬಗ್ಗೆ ಯೋಚಿಸಿ ನೀವು ಜನಗಳಿಂದ ದೂರ ಹೋಗುತ್ತೀರಿ. ಆದರೆ ಜನರು ನಿಮ್ಮ ಜೊತೆ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ.

ಆದರೂ ಸ್ನೇಹಿತರೇ ನೀವು ಆಕರ್ಷಕವಾಗಿ ಇದ್ದಿರಾ, ಇಲ್ಲವೋ ಎಂಬ ಅನುಮಾನದಲ್ಲಿದ್ದರೆ, ಈ ವೀಡಿಯೋವನ್ನು ಕೊನೆವರೆಗೂ ನೋಡಿ. ಏಕೆಂದರೆ ಇದರಲ್ಲಿ ನಾವು, ಆಕರ್ಷಕ ಜನರ 13 ಗುಪ್ತ ಚಿಹ್ನೆಗಳ(hidden signs) ಬಗ್ಗೆ ತಿಳಿಸಲಿದ್ದೇವೆ. ಇದರಿಂದ ನೀವು ಅಂದುಕೊಳ್ಳುವುದಕ್ಕಿಂತ ಆಕರ್ಷಕವಿದ್ದಿರ ಎಂಬುದು ತಿಳಿಯುತ್ತದೆ.

ಇದನ್ನು ಓದಿ: "Good Vibes Good Life" ಪುಸ್ತಕದ ವಿವರಣೆ

1. You rarely get compliments on your looks.

how do you know if you are attractive in kannada
rarely compliment

ಜನರು ನಿಮ್ಮ ನೋಟದ ಮೆಚ್ಚುಗೆಯನ್ನು ತುಂಬಾ ಕಡಿಮೆ ಮಾಡುತ್ತಿದ್ದರೆ, ನೀವು ಬೇಸರಗೊಳ್ಳುವ ಅಗತ್ಯವಿಲ್ಲ. ಏಕೆಂದರೆ ಇದು ನೀವು ಆಕರ್ಷಕ ಇರಲು ಒಂದು ಕಾರಣವಾಗಿದೆ. ಅನೇಕ ಮಂದಿ ನೀವು ನಿಮ್ಮ ಆಕರ್ಷಣೆಯಿಂದ ತುಂಬಾ ಪ್ರಸಿದ್ಧರಾಗಿದ್ದೀರಿ ಎಂದು ಯೋಚಿಸುತ್ತಾರೆ. ಹೀಗಾಗಿ ನಿಮ್ಮ ನೋಟದ ಬಗ್ಗೆ ಮಾತನಾಡುವುದು ಅದೇ ಹಳೇ ವಿಷಯಗಳನ್ನು ತೆರೆಯುವುದಾಗಿದೆ. ಹೀಗಾಗಿ ನೀವು ಅದರಿಂದ ಬೇಸರವಾಗದಿರಲೆಂದು ಜನರು ನಿಮ್ಮ ನೋಟದ ಮೇಲೆ ಕಾಂಪ್ಲಿಮೆಂಟ್ ನೀಡುವುದಿಲ್ಲ.

2. People smile when they see you.

ಯಾವುದೇ ಆಕರ್ಷಕ ವ್ಯಕ್ತಿಯನ್ನು ನೋಡಿ ನಸುನಗುವುದು ನಮ್ಮಲ್ಲಿ ಸಾಮಾನ್ಯವಾಗಿದೆ. ಇದು ಏಕೆಂದರೆ ಸೈಕೊಲಾಜಿ ಪ್ರಕಾರ ನಾವು ನಮ್ಮ ಕಣ್ಣುಗಳಿಂದ ಸುಂದರವಾದ ವಸ್ತುಗಳನ್ನು ನೋಡಿದಾಗ ಉಪಪ್ರಜ್ಞೆಯಾಗಿ(sub consious) ನಮ್ಮ ಮುಖದಲ್ಲಿ ನಗು ಬರುತ್ತದೆ. ಹೀಗಾಗಿ ಜನರು ನಿಮ್ಮನ್ನು ನೋಡಿದ ತಕ್ಷಣ ಒಂದು ಸ್ನೇಹಪರ ನಗು(friendly smile) ನೀಡಿದರೆ, ನೀವು ಅವರಿಗೆ ಆಕರ್ಷಕವೆನ್ನಿಸುವ ಸಾಧ್ಯತೆ ಹೆಚ್ಚಿದೆ. ಕೆಲವೊಮ್ಮೆ ನಗು ಫ್ಲರ್ಟಿಂಗ್(flarting) ಮಾಡಲು ಮಾಡುತ್ತಾರೆ. ಆದರೆ ಈ ನಗುವು ಯಾವುದಾದರೂ ಆಕರ್ಷಕ ವಸ್ತು ನೋಡಿದಾಗ ಸ್ವಯಂ ಆಗಿ ಬರುತ್ತದೆ.

ಇದನ್ನು ಓದಿ: 10 ಹೆಚ್ಚುವರಿ ಆದಾಯದ ಐಡಿಯಾಗಳು

3. Strangers stare at you.

ನೀವು ಪಬ್ಲಿಕ್ ಜಾಗದಲ್ಲಿ ಹೋಗುತ್ತಿರುವಾಗ ಅಪರಿಚಿತರು ನಿಮ್ಮನ್ನು ಗುರಾಯಿಸಿದರೆ ನಿಮಗೆ ಗಾಬರಿಯಾಗಬಹುದು. ಒಂದು ವೇಳೆ ಇದು ನಿಮಗೆ ಪ್ರತಿ ಬಾರಿಯು ಅದಲ್ಲಿ ನೀವು ಆಕರ್ಷಕ ಇದ್ದೀರಾ ಎಂಬುದಕ್ಕೆ ಕಾರಣವಾಗಿದೆ. ನಮ್ಮ ಕಣ್ಣಿನ ಹತ್ತಿರ ಸುಂದರ ವಸ್ತು ಇಲ್ಲ ವ್ಯಕ್ತಿ ಬಂದಾಗ, ಸಬ್ ಕಾನ್ಷಿಯಸ್ ಆಗಿ ನಮ್ಮ ಗಮನ ಅವರ ಹತ್ತಿರವೇ ಹೋಗುತ್ತದೆ. ಇದರಿಂದಾಗಿ ಕೆಲವರು ನಿಮ್ಮನ್ನು ಗುರುತಿಸುತ್ತಾರೆ ಮತ್ತು ನೀವು ಅವರನ್ನು ನೋಡಿ ಗಾಬರಿಗೊಳ್ಳುತ್ತೀರಾ.

4. People seem to enjoy talking to you.

what makes person attractive in kannada
enjoy taking to you

ಜನರು ನಿಮ್ಮ ಹತ್ತಿರ ಬಂದು ಮಾತನಾಡಲು ಪ್ರಾರಂಭಿಸುತ್ತಾರೆಯೇ? ನೀವು ನಿಮ್ಮ ಕೆಲಸಗಳಲ್ಲಿ ನಿರತರಿದ್ದರು ಜನರು ನಿಮ್ಮ ಜೊತೆ ಮಾತನಾಡಲು ಯಾವುದಾದರೂ ದಾರಿ ಹುಡುಕುತ್ತಾರೆಯೇ? ಇದು ತಪ್ಪು ಎಂದು ಅನಿಸುತ್ತದೆ. ಆದರೆ ಅಧಿಕ ಆಕರ್ಷಕ ಇರುವವರನ್ನು ಒಳ್ಳೆಯ ರೀತಿಯಲ್ಲಿ ಚಿಕಿತ್ಸೆ(treat) ಮಾಡಲಾಗುತ್ತದೆ. ಆಕರ್ಷಕ ಜನರನ್ನು ನೋಡಿ ಅವರ ಜೊತೆ ಸಮಯ ಕಳೆಯಬೇಕೆನ್ನುವಂತೆ ಮಾಡುತ್ತದೆ.

ಇದನ್ನು ಓದಿ: ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಣ ಮಾಡುವುದು ಹೇಗೆ?

5. People raise their eyebrows when they see you.

ನಾವು ಯಾವುದೇ ಆಕರ್ಷಕ ವ್ಯಕ್ತಿಯನ್ನು ನೋಡಿದಾಗ, ನಮ್ಮ ಹುಬ್ಬು(eyebrow) ತಾನಾಗಿಯೇ ಮೇಲೆಳುತ್ತದೆ. ಇದರಿಂದ ನಮ್ಮ ಕಣ್ಣು ಅಧಿಕ ತೆರೆಯುತ್ತದೆ ಮತ್ತು ನಾವು ನಮ್ಮ ಮುಂದೆ ಇರುವ ವ್ಯಕ್ತಿಯನ್ನು ನೋಡುತ್ತೇವೆ. ಹೀಗಾಗಿ ನಿಮ್ಮ ಜೊತೆ ಮಾತನಾಡುವಾಗ ಇತರ ವ್ಯಕ್ತಿಯ ಕಣ್ಣಿನ ರೆಪ್ಪೆ ಮೇಲೆಳುತ್ತಿದ್ದರೆ ನೀವು ಯೋಚಿಸುವುದಕ್ಕಿಂತಲೂ ಹೆಚ್ಚು ಆಕರ್ಷಕವಿದ್ದೀರಾ ಎಂಬುದಾಗಿದೆ.

6. People try to get closer to you.

ನಿಮಗೆ ಸೂಕ್ತವೆನಿಸುವ ವ್ಯಕ್ತಿ ಇಲ್ಲ ನೀವು ಪ್ರೀತಿಸುವ ವ್ಯಕ್ತಿಯ ಜೊತೆ ಮಾತನಾಡುವಾಗ ನೀವು ಅವರ ಹತ್ತಿರ ಯಾವಾಗ ಹೋಗುತ್ತೀರಿ ಎಂಬುದೇ ತಿಳಿಯುವುದಿಲ್ಲ. ನಮ್ಮ ಸೈಕಾಲಜಿಯಿಂದ ನಾವು ಆಕರ್ಷಕವಿಲ್ಲದ ಜನಗಳಿಂದ ದೂರವಿರಲು ಬಯಸುತ್ತವೆ ಮತ್ತು ಆಕರ್ಷಕವಿರುವ ಜನರ ಹತ್ತಿರ ಬರಲು ಬಯಸುತ್ತೇವೆ. ಹೀಗಾಗಿ ಜನರು ನಿಮ್ಮ ಹತ್ತಿರ ಬರುತ್ತಾರೆ ಎಂದು ನಿಮಗೆ ಅನಿಸಿದರೆ, ನಿಮ್ಮನ್ನು ಸ್ಪರ್ಶಿಸಲು(touch) ಪ್ರಯತ್ನಿಸಿದರೆ, ಇದು ಕೂಡ ನೀವು ಆಕರ್ಷಕ ಇದ್ದೀರಾ ಎಂಬುದಕ್ಕೆ ಕಾರಣವಾಗಿದೆ.

ಇದನ್ನು ಓದಿ: ಯಶಸ್ವಿ ಜನರನ್ನು ಯಶಸ್ವಿಗೊಳಿಸುವ ಐದು ಸಾಮಾನ್ಯ ಲಕ್ಷಣಗಳು

7. People are surprised by your insecurities.

how do you know if you are a attractive guy in kannada
surprised by your insecurities

ನಮಗೆ ಆಕರ್ಷಕ ಅನಿಸುವ ವ್ಯಕ್ತಿ ಇಲ್ಲ ನಾವು ಯಾವಾಗಲು ಮೆಚ್ಚುಗೆ ನೀಡುವ ವ್ಯಕ್ತಿಯು ನಮ್ಮ ಮುಂದೆ ಅವರ ಅಸಮರ್ಥತೆಯ ಬಗ್ಗೆ ತಿಳಿಸಿದರೆ ಅದು ನಮಗೆ ಅಚ್ಚರಿಯ ವಿಷಯವಾಗಿದೆ. ಇದು ಏಕೆಂದರೆ ನಾವು ಆಕರ್ಷಕ ವ್ಯಕ್ತಿಗೆ ಸಿಗುವ ಗಮನವನ್ನು ನೋಡಿದಾಗ, ಆ ವ್ಯಕ್ತಿ ತುಂಬಾ ಖುಷಿಯಾಗಿದ್ದೇನೆ ಎಂದು ಅನಿಸುತ್ತದೆ. ಈತನಿಗೆ ದುಃಖವಿರಲಿ ಯಾವುದೇ ಕಾರಣವಿಲ್ಲ ಎಂದು ಅನಿಸುತ್ತದೆ. ಆದರೆ ಎಲ್ಲರ ಜೀವನದಲ್ಲಿ ಸ್ವಯಂ ಅನುಮಾನ, ಕಡಿಮೆ ಆತ್ಮವಿಶ್ವಾಸ, ಹೋರಾಟ ಇರುವುದು ತುಂಬಾ ಸಾಮಾನ್ಯವಾಗಿದೆ. ಹೀಗಾಗಿ ಜನರು ನಿಮ್ಮ ಅಭದ್ರತೆಯ ಬಗ್ಗೆ ನಂಬದಿದ್ದರೆ ಇದು ನೀವು ಆಕರ್ಷಕ ಇದ್ದೀರಾ ಎಂಬುದಕ್ಕೆ ಕಾರಣವಾಗಿದೆ.

8. People have extreme feelings for you.

ಒಬ್ಬ ವ್ಯಕ್ತಿ ಆಕರ್ಷಕವಿದ್ದರೆ, ಅವನ ಸುತ್ತಮುತ್ತ ಏರಡು ತರಹದ ಜನಗಳನ್ನು ನೀವು ನೋಡಬಹುದು. ಅದರಲ್ಲಿ ಒಬ್ಬರು ಅವರಿಗೆ ಮೆಚ್ಚುಗೆ ನೀಡುವವರು ಮತ್ತು ಇನ್ನೊಬ್ಬರು ಅವರನ್ನು ವಿಮರ್ಶೆ(critisize) ಮಾಡುವವರು. ಮೆಚ್ಚುಗೆ ನೀಡುವ ಜನರು ಅವರನ್ನು ತುಂಬಾ ಇಷ್ಟಪಡುತ್ತಾರೆ, ಅವರ ನೋಟದಿಂದ ಪ್ರಭಾವಿತರಾಗಿರುತ್ತಾರೆ ಮತ್ತು ಅವರ ಜೊತೆ ಸಮಯವನ್ನು ಕಳೆಯಲು ಬಯಸುತ್ತಾರೆ.

ಇನ್ನೊಂದು ಕಡೆ ವಿಮರ್ಶೆ ಮಾಡುವವರು, ಇವರ ಆಕರ್ಷಣೆಯಿಂದ ತುಂಬಾ ಹೊಟ್ಟೆಕಿಚ್ಚು ಪಡುತ್ತಾರೆ. ಅವರಿಗೆ ಆ ವ್ಯಕ್ತಿಗಿಂತ ಅವರೇ ಅಧಿಕ ಆಕರ್ಷಕ ಇದ್ದಾರೆ ಎಂದೆನಿಸುತ್ತದೆ. ನಿಮಗೂ ಈ ರೀತಿಯ ಜನಗಳು ಸಿಕ್ಕರೆ ನಿಮ್ಮನ್ನು ಇಷ್ಟಪಡುವ ಜನಗಳ ಮೇಲೆ ಮಾತ್ರ ಗಮನಹರಿಸಿ ಮತ್ತು ನಿಮ್ಮನ್ನು ವಿಮರ್ಶೆ ಮಾಡುವ ಜನಗಳ ಮಾತುಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವ ಯಾವುದೇ ಅವಶ್ಯಕತೆ ಇಲ್ಲ.

ಇದನ್ನು ಓದಿ: ನಿಷ್ಕ್ರಿಯ ಆದಾಯದ ಮೂಲಗಳು ಯಾವುವು?

9. People often do a double take.

ಜನರು ನಿಮ್ಮನ್ನು ಎರಡು ಬಾರಿ ನೋಡಲು ಅನೇಕ ಕಾರಣ ಇರಬಹುದು. ಆದರೆ double take ನೀವು ಆಕರ್ಷಕವಿದ್ದಿರ ಎಂಬುದಕ್ಕೆ ಒಂದು ಕಾರಣವಾಗಿದೆ. ಜನರು ನಿಮ್ಮ ಸೌಂದರ್ಯವನ್ನು ಒಮ್ಮೆಲೆ ನೋಡಲು ಸಾಧ್ಯವಾಗದಿದ್ದಾಗ, ಸಬ್ ಕಾನ್ಷಿಯಸ್ ಆಗಿ ಅವರು ಇನ್ನೊಮ್ಮೆ ನಿಮ್ಮನ್ನು ನೋಡುತ್ತಾರೆ. ಹೀಗಾಗಿ ನೀವು ಈ ರೀತಿಯ ಜನಗಳನ್ನು ಭೇಟಿ ಮಾಡುತ್ತಿದ್ದಾರೆ. ನೀವು ದೈಹಿಕವಾಗಿ ಆಕರ್ಷಕವಿದ್ದೀರಾ ಎಂದರ್ಥವಾಗಿದೆ.

10. People make duck lips.

signs that tell you are extremely attractive in kannada
people make duck lips

ಆಕರ್ಷಕ ವ್ಯಕ್ತಿಯನ್ನು ನೋಡಿ ನಾವೆಲ್ಲ ಸಾಮಾನ್ಯವಾಗಿ duck lips ಮಾಡುತ್ತೇವೆ. ಇದರಲ್ಲಿ duck lips ಎಂದರೆ ಹುಡುಗಿಯರು ಸೆಲ್ಫಿ ತೆಗೆಯುವಾಗ ಮಾಡುವ duck lips ಅಲ್ಲ. ಇಲ್ಲಿನ duck lips ಸೆಕೆಂಡಿಗಿಂತ ಕಡಿಮೆ ಸಮಯವಿರುತ್ತದೆ ಮತ್ತು ಆಕರ್ಷಕ ವ್ಯಕ್ತಿಯ ಜೊತೆ ಮಾತನಾಡುವಾಗ ಗೊತ್ತಿಲ್ಲದೆ ಅದನ್ನು ರಿಪಿಟ್ ಮಾಡುತ್ತೇವೆ.

ಸೈಕೊಲಾಜಿ ಪ್ರಕಾರ duck lips ಆ ವ್ಯಕ್ತಿಗೆ ಮುತ್ತು ನೀಡಬೇಕೆಂದು ಬಯಸಿದಾಗ ಬರುತ್ತದೆ. ಅದನ್ನು ಮಾಡಲು ಕಷ್ಟವಿರುವ ಕಾರಣ duck lips ಮಾಡಿಯೇ ತೃಪ್ತಿಪಡುತ್ತೇವೆ. ಹೀಗಾಗಿ ನಿಮಗೂ ಈ ರೀತಿಯ ಜನರ ವರ್ತನೆ ಕಂಡರೆ ನೀವು ಯೋಚಿಸುವುದಕ್ಕಿಂತಲೂ ಅಧಿಕ ಆಕರ್ಷಕ ಇದ್ದೀರಾ ಎಂದರ್ಥವಾಗಿದೆ.

ಇದನ್ನು ಓದಿ: ಒಂದು ವಾರ ನಿದ್ದೆ ಮಾಡಿಲ್ಲವೆಂದರೆ ನಿಮಗೆ ಏನಾಗುತ್ತದೆ?

11. People may act differently around you.

ಇತರರು ನಿಮ್ಮನ್ನು ನೋಡಿದಾಗ nervous ಇಲ್ಲ ಪ್ರಚೋದಿತ(excite) ಆಗುತ್ತಾರೆಯೇ? ಇಲ್ಲ ಇತರರು ನಿಮ್ಮ ಬಳಿ ಬಂದ ನಂತರ ಸ್ವಲ್ಪ ಬದಲಾಗುತ್ತಾರೆಯೇ? ಆಗಿದ್ದರೆ ಇದು ನೀವು ಆಕರ್ಷಕವಿದ್ದೀರಾ ಎಂಬುದಕ್ಕೆ ಕಾರಣವಾಗಿದೆ. ಆಕರ್ಷಕ ವ್ಯಕ್ತಿಯ ಪರ್ಸನಾಲಿಟಿ ಇತರರಿಗೆ ಗಟ್ಟಿ ಮತ್ತು ಇಂಟಿಮೇಟ್ ಎನ್ನಿಸುತ್ತದೆ. ಹೀಗಾಗಿ ಇವರ ಮುಂದೆ ರಿಲ್ಯಾಕ್ಸ್ ಮತ್ತು ಶಾಂತವಾಗಿರುವುದು ಕಷ್ಟಕರವಾಗಿರುತ್ತದೆ. ಹೀಗಾಗಿ ಜನರು ನಿಮ್ಮನ್ನು ನೋಡಿದಾಗ ಈ ರೀತಿಯ ವರ್ತನೆ ತೋರಿಸಿದರೆ, ನೀವು ಆಕರ್ಷಕ ಪರ್ಸನಾಲಿಟಿ ಹೊಂದಿದ್ದೀರ ಎಂದರ್ಥವಾಗಿದೆ.

12. People help you.

ಆಕರ್ಷಕ ವ್ಯಕ್ತಿಗೆ ಇತರರಿಂದ ಸ್ಪೆಷಲ್ ಟ್ರೀಟ್ಮೆಂಟ್ ಸಿಗುತ್ತದೆ. ಜನರು ಇವರನ್ನು ಯಾವುದೇ ಕಷ್ಟದ ಸ್ಥಿತಿಯಲ್ಲಿ ನೋಡಲು ಬಯಸುವುದಿಲ್ಲ. ಏಕೆಂದರೆ ಅವರ ನಗು ತುಂಬಾ ಶಾಂತಿಯನ್ನು ನೀಡುತ್ತದೆ. ಹೀಗಾಗಿ ನಿಮ್ಮ ಮುಖದಲ್ಲಿ ನಗುವಿಲ್ಲದಿದ್ದಾಗ, ಇಲ್ಲ ನೀವು ಸಿಟ್ಟಿನಲ್ಲಿದ್ದಾಗ, ಈ ಜನಗಳು ನೀವು ಕರೆಯದೆಯೇ ನಿಮ್ಮ ಸಮಸ್ಯೆಯನ್ನು ನಿಭಾಯಿಸಲು ಬರುತ್ತಾರೆ.

13. People easily fall in love with you.

ನಮ್ಮ ಮಾನವ ಸೈಕಾಲಜಿಯಿಂದ, ನಾವು ಆಕರ್ಷಕ ವ್ಯಕ್ತಿಯ ಮೇಲೆ ಬೇಗನೆ ಮೋಹಿತಗೊಳ್ಳುತ್ತೇವೆ. ಕೆಲವೊಮ್ಮೆ ಇದು ಪ್ರೀತಿಗೆ ಬೀಳಲು ಕಾರಣವಾಗುತ್ತದೆ. ನೀವು ಆಕರ್ಷಕ ವ್ಯಕ್ತಿಯಾಗಿದ್ದರೆ ನಿಮ್ಮ ಮೇಲೆ ಯಾರಿಗಾದರೂ ಪ್ರೀತಿ ಬಂದೇ ಬರುತ್ತದೆ, ಇಲ್ಲ ನಿಮ್ಮನ್ನು ಪ್ರೀತಿಸುವವರು ನಿಮಗೆ ಇಲ್ಲವೆನ್ನಲು ಸಾಧ್ಯವಾಗುವುದಿಲ್ಲ.

ನಿಮ್ಮ ಜೀವನದಲ್ಲಿ ಸಂಬಂಧ ಬೆಳೆಸಲು ಯಾವುದೇ ವ್ಯಕ್ತಿ ಸಿಕ್ಕಿಲ್ಲದೆ ಇರಬಹುದು. ಆದರೆ ಯಾರ ಜೊತೆ ಸಂಬಂಧ ಬೆಳೆಸಬೇಕು ಎಂಬುದು ನಿಮ್ಮ ಆಯ್ಕೆ ಆಗಿದೆ. ಇನ್ನೂ ನೀವು ಸಿಂಗಲ್ ಇರಲು ಕಾರಣ ನಿಮ್ಮನ್ನು ಯಾರು ಇಷ್ಟಪಡುವುದಿಲ್ಲವೆಂದಲ್ಲ. ನಿಮ್ಮನ್ನು ಪ್ರೀತಿಸುವವರು ಇದ್ದೇ ಇರುತ್ತಾರೆ ಮತ್ತು ಇದು ನೀವು ಆಕರ್ಷಕವಿದ್ದೀರಾ ಎಂಬುದಕ್ಕೆ ಕಾರಣವಾಗಿದೆ.

ಆಕರ್ಷಕ ಇದ್ದೀರ, ಇಲ್ಲವೇ ಎಂಬುದು ನಮ್ಮ ದೈಹಿಕ ನೋಟದಿಂದ ಮಾತ್ರ ತಿಳಿಯುವುದಿಲ್ಲ. ನಮ್ಮ behaviour, attitude, action ಕೂಡ ಇದರ ಬಗ್ಗೆ ತಿಳಿಸುತ್ತದೆ. ಆದರೆ ಈ ಲೇಖನದಲ್ಲಿ ತಿಳಿಸಿದ ವಿಷಯಗಳು ದೈಹಿಕ ಆಕರ್ಷಣೆಗೆ ಸಂಬಂಧಿಸಿದೆ. ನೀವು ಇದರಲ್ಲಿ ತಿಳಿಸಿದ್ದಕ್ಕೆ ರಿಲೇಟ್ ಮಾಡಿಕೊಳ್ಳುವುದೆಂದರೆ ನೀವು ಯೋಚಿಸುವುದಕ್ಕಿಂತ ಅಧಿಕ ಆಕರ್ಷಕವಿದ್ದೀರ ಎಂದರ್ಥವಾಗಿದೆ.

ಈ ಇಷ್ಟು ಪಾಯಿಂಟ್‌ಗಳಲ್ಲಿ ನಿಮಗೆ ಎಷ್ಟು ಮ್ಯಾಚ್ ಆಗುತ್ತದೆ ಎಂಬುದನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಮತ್ತು ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ.

Mahithi Thana

More by this author

Similar category

Explore all our Posts by categories.

commenters

hemanth k • September 18th,2022

A blog about mysteries, facts, tips, movies, health and more.