Website designed by @coders.knowledge.

Website designed by @coders.knowledge.

Why 99.6% of You will Never be Rich | 99.6% ಏಕೆ ಎಂದಿಗೂ ಶ್ರೀಮಂತರಾಗುವುದಿಲ್ಲ

 0

 Add

Please login to add to playlist

Watch Video

99.6 ರಷ್ಟು ಜನರು ಎಂದಿಗೂ ಶ್ರೀಮಂತರಾಗುವುದಿಲ್ಲ. ಇದು ಏಕೆ ಎಂಬುದನ್ನು ತಿಳಿಸುತ್ತೇವೆ. ಈ ವಿಷಯದ ಮೇಲೆ ಅನೇಕ ಲೇಖನಗಳು ಇರುತ್ತವೆ, ಆದರೆ ಇವುಗಳಲ್ಲಿ ಜೀವನವನ್ನು ಬದಲಾಯಿಸುವ(life changing) ಸಲಹೆಗಳು ಇರುವುದಿಲ್ಲ. ಅನೇಕ ಮಧ್ಯಮ ವರ್ಗದ ಬಲೆಯ(middle class trap) ವೀಡಿಯೋ/ಲೇಖನಗಳಲ್ಲಿ ಶಿಕ್ಷಣ ವ್ಯವಸ್ಥೆಯನ್ನು(education system) ಇದಕ್ಕೆ ಕಾರಣ ಎಂದು ತಿಳಿಸಲಾಗಿದೆ. ಆದರೆ 99.6 ರಷ್ಟು ಜನರು ಶ್ರೀಮಂತರಾಗದೆ ಇರಲು ಇರುವ ಮುಖ್ಯ ಕಾರಣ ಮನಸ್ಥಿತಿ(mindset) ಆಗಿದೆ. ಮದ್ಯಮ ವರ್ಗದವರ ಮನಸ್ಥಿತಿ ದೊಡ್ಡ ಸಮಸ್ಯೆಯಾಗಿದೆ. ಅದು ಅವರನ್ನು ಶ್ರೀಮಂತರಾಗಲು ಬಿಡುತ್ತಿಲ್ಲ. ನಾವೆಲ್ಲರೂ ಕಳಪೆ ಮನಸ್ಥಿತಿಯನ್ನು(poor mentality) ದ್ವೇಷಿಸಬೇಕು. ಈ ಮನಸ್ಥಿತಿಗೆ ಇರುವ 7 ಅಂಶಗಳನ್ನು ಈ ಲೇಖನದಲ್ಲಿ ನಾವು ತಿಳಿಸಲಿದ್ದೇವೆ. ಇದುವೇ ಅನೇಕರನ್ನು ಬಡವರನ್ನಾಗಿ ಮಾಡುತ್ತಿದೆ.

ಒಬ್ಬ ಯುವ ಸನ್ಯಾಸಿ(young monk) ಈಗ ತಾನೇ ಯೋಗ ಸಭೆಗೆ(session) ಸೇರಿದರು. ಸಭೆಯ ಅಂತ್ಯದಲ್ಲಿ ಹಿರಿಯ ಸನ್ಯಾಸಿ ಧ್ಯಾನದ ಬಗ್ಗೆ ಕೇಳಿದಾಗ, ಆತ, "ನನಗೆ ಧ್ಯಾನವನ್ನು ಮಾಡಲು ತುಂಬಾ ಕಷ್ಟವಾಗುತ್ತಿದೆ. ನನ್ನ ಸುತ್ತಮುತ್ತಲಿನ ಜನರು ತುಂಬಾ ಶಬ್ದವನ್ನು ಮಾಡುತ್ತಾರೆ ಇವುಗಳಿಂದ ನಾನು ಗಮನ ಹರಿಸಿ ಧ್ಯಾನವನ್ನು ಮಾಡಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ. ಅದಕ್ಕೆ ಹಿರಿಯ ಸನ್ಯಾಸಿ, "do you know what exactly making you angry" ಎಂದು ಕೇಳಿದರು. ಅದಕ್ಕೆ ಆತ, "ತಿಳಿಸಿದ ಎಲ್ಲಾ ವಿಷಯ" ಎಂದು ಹೇಳುತ್ತಾನೆ. ಮುಂದಿನ ದಿನ ಆ ಸನ್ಯಾಸಿ ಒಂದು ನದಿಯ ಹತ್ತಿರ ಹೋಗಿ ಧ್ಯಾನವನ್ನು ಮಾಡಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ಅಲ್ಲಿ ಪಕ್ಷಿಗಳು ಬಂದವು. ಅವು ಶಬ್ದ ಮಾಡಲು ಪ್ರಾರಂಭಿಸಿತು. ಇದರಿಂದ ಆ ಸನ್ಯಾಸಿಗೆ ಅಧಿಕ ಕೋಪ ಬಂತು. ಆತ ನದಿಯ ಮಧ್ಯದಲ್ಲಿ ಹೋಗಿ ಧ್ಯಾನವನ್ನು ಮಾಡುವ ಬಗ್ಗೆ ಯೋಚಿಸಿದ.

ಮುಂದಿನ ದಿನ ಒಂದು ದೋಣಿಯನ್ನು(boat) ತೆಗೆದುಕೊಂಡು ನದಿಯ ಮಧ್ಯದಲ್ಲಿ ಹೋಗಿ ಕೂತು ಧ್ಯಾನವನ್ನು ಮಾಡುತ್ತಿದ. ಮೊದಲನೇ ದಿನ ಕಳೆಯಿತು. ಎರಡನೇ ದಿನ ಧ್ಯಾನವನ್ನು ಮಾಡುವಾಗ ಆತನ ದೋಣಿಯು ಅಲ್ಲಾಡುತ್ತಿರುವುದನ್ನು ಗಮನಿಸಿದ. ಆತ ಕಣ್ಣು ತೆರೆದು ನೋಡಿದಾಗ ಇನ್ನೊಂದು ದೋಣಿಯು ಅವನ ಹತ್ತಿರವೇ ಬರುತ್ತಿತ್ತು. ಆಗ ಸನ್ಯಾಸಿ, "ನಿನ್ನ ದೋಣಿಯನ್ನು ಬೇರೆ ಎಲ್ಲಿಯಾದರೂ ತೆಗೆದುಕೊಂಡು ಹೋಗು. ಇಲ್ಲಿಗೆ ತರಬೇಡ" ಎಂದು ಚೀರಿದ. ಆದರೆ ಆ ದೋಣಿಯಿಂದ ಯಾವುದೇ ಶಬ್ದ ಬರಲಿಲ್ಲ. ಆತ ಕೋಪದಲ್ಲಿ, "ನೀನು ಆ ರೀತಿ ಏಕೆ ಮಾಡುತ್ತಿರುವೇ, ನಾವು ಡಿಕ್ಕಿ ಹೊಡೆಯಬಹುದು" ಎಂದನು. ಆದರೂ ಅಲ್ಲಿಂದ ಯಾವುದೇ ಪ್ರತ್ಯುತ್ತರ(reply) ಬರಲಿಲ್ಲ.

ಆಗ ಆತ ತನ್ನ ದೋಣಿಯನ್ನು ಬದಿಗೆ ತಂದು ಆ ದೋಣಿಯಲ್ಲಿ ಇರುವವನ ಜೊತೆ ಜಗಳವಾಡಲು ನಿಂತ. ಆತ ಆ ದೋಣಿಯನ್ನು ನೋಡಿದಾಗ ಅದರಲ್ಲಿ ಯಾರೂ ಕೂಡ ಇರಲಿಲ್ಲ. ಅದು ಗಾಳಿಯಿಂದ ಆ ಸನ್ಯಾಸಿ ಕಡೆಗೆ ಬರುತ್ತಿತ್ತು. ಸನ್ಯಾಸಿಗೆ ಈ ವಿಷಯದ ಬಗ್ಗೆ ಅರಿವಾದಾಗ ಆತನ ಕೋಪ ಕಡಿಮೆಗೊಂಡಿತು. ಆಗ ಅವನಿಗೆ ಆ ಹಿರಿಯ ಸನ್ಯಾಸಿಯ ಪ್ರೆಶ್ನೆ ನೆನಪಿಗೆ ಬಂತು, ಅದುವೇ, "do you know what exactly makes you angry", ಆತನಿಗೆ ಜನರು, ಪಕ್ಷಿಗಳು ಮತ್ತು ದೋಣಿಯೂ ಕೋಪಕ್ಕೆ ಕಾರಣವಲ್ಲ. ಅದು ಆತನ ಒಳಗಿನಿಂದ ಬರುತ್ತಿತ್ತು. ಇಲ್ಲಿಂದಲೇ ಪ್ರಾರಂಭವಾಗುತ್ತದೆ ಮುಖ್ಯ ಮೂಲ(main root) ಅದುವೇ ಸಮಸ್ಯೆ(problems).

ಇದನ್ನು ಓದಿ: ಪೂರ್ ಚಾರ್ಲಿಸ್ ಆಲಮನಕ್ ಪುಸ್ತಕದ ಸಾರಾಂಶ

1. Blame game

what is a blame game in kannada
blame game

ಮಧ್ಯಮ ವರ್ಗದ ಜನರು ದೂಷಿಸುವ ಆಟವನ್ನು ಚೆನ್ನಾಗಿ ಆಡುತ್ತಾರೆ. ಅವರಿಗೆ ಯಾವುದಾದರೂ ವಿಷಯಕ್ಕೆ ಯಾರಿಗಾದರೂ ದೂಷಿಸಲೇಬೇಕು. "ಸರ್ಕಾರ ಸರಿ ಇಲ್ಲದ ಕಾರಣ ನಾನು ಜೀವನದಲ್ಲಿ ಬೆಳೆಯಲು ಸಾಧ್ಯವಾಗುತ್ತಿಲ್ಲ", "ನನ್ನ ತಂದೆ ತಾಯಿ ಶ್ರೀಮಂತರಲ್ಲದ ಕಾರಣ, ನಾನು ಅಷ್ಟು ಹಣವನ್ನು ಗಳಿಸಲು ಸಾಧ್ಯವಾಗುತ್ತಿಲ್ಲ", "ನನ್ನ ಹತ್ತಿರ ಒಳ್ಳೆಯ ಜಾಲಬಂಧ(network) ಇಲ್ಲದ ಕಾರಣ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ" ಎಂದು ಯೋಚಿಸುತ್ತಾರೆ. ಆಗ ಸನ್ಯಾಸಿಗೆ ಆತನ ಕೋಪ ಆತನದ್ದೆ ಪ್ರತಿಕ್ರಿಯೆ(reaction) ಆಗಿದೆ ಎಂದು ತಿಳಿಯಿತು. ಇಲ್ಲಿಂದಲೇ ನಮ್ಮ ಮೊದಲನೇ ಮೂಲ ಕಾರಣ ಪ್ರಾರಂಭವಾಗುತ್ತದೆ. ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಸಮಸ್ಯೆಗಳಿವೆ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಆದರೆ ಆ ಶಿಕ್ಷಣ ವ್ಯವಸ್ಥೆಯಿಂದಲೇ ಅನೇಕರು ಹೊರಬಂದು ಶ್ರೀಮಂತರಾಗಿದ್ದಾರೆ. ಹೀಗಾಗಿ ಈ ದೂಷಿಸವ ಆಟವನ್ನು ಆಡುವುದನ್ನು ನಿಲ್ಲಿಸಿ.

ಇದನ್ನು ಓದಿ: ಶ್ರೀಮಂತರ 10 ಚಿಹ್ನೆಗಳು

2. The problem of overthinking

overthinking to what extent can it damage your life in kannada
overthinking

ಒಬ್ಬ ವ್ಯಕ್ತಿ ಆತನ ಬದುಕಿನಲ್ಲಿ ಅಧಿಕ ಹೋರಾಟ(struggle) ಮಾಡುತ್ತಿದ. ಆತ ಏನೇ ಮಾಡಿದರು ದೊಡ್ಡದನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಯಾರೇ ಏನೇ ಅಂದರು, ಅವನು ಅಧಿಕ ಯೋಚಿಸುತ್ತಿದ್ದ. ಒಳ್ಳೆಯದ್ದು, ಕೆಟ್ಟದ್ದು ಏನೇ ಹೇಳಿದರು ಅದರ ಬಗ್ಗೆ ಯೋಚಿಸುತ್ತಿದ. ಹೀಗೆ ದಿನವಿಡೀ ಯೋಚಿಸುತ್ತಲೇ ಇರುತ್ತಿದ. ಇದರಿಂದ ಅವನಿಗೆ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆತ ಅನೇಕ ವಿಷಯಗಳಿಂದ ಗೊಂದಲಗೊಂಡಿದ.

ಈ ಅತಿಯಾದ ಚಿಂತನೆಯಿಂದ(overthinking) ಆತನನ್ನು ದ್ವೇಷಿಸಲು ಪ್ರಾರಂಭಿಸಿದ. ಇದಕ್ಕಾಗಿ ಅವನ ಗೆಳೆಯ, "ನನ್ನ ಹಳ್ಳಿಯಲ್ಲಿ ಒಬ್ಬ ಸನ್ಯಾಸಿ ಬಂದಿದ್ದಾರೆ, ಅವರು ಅನೇಕ ಜನರ ಸಮಸ್ಯೆಯನ್ನು ನಿವಾರಿಸುತ್ತಿದ್ದಾರೆ. ನೀನು ಹೋಗಿ ಕೇಳು" ಎಂದನು. ಇದನ್ನು ಆತ ಅಷ್ಟು ನಂಬುತ್ತಿರಲಿಲ್ಲ ಮತ್ತೆ ಚಿಂತಿಸಲು ಪ್ರಾರಂಭಿಸಿದ. ಆದರೆ ಆತನ ಗೆಳೆಯ ಒತ್ತಾಯ ಮಾಡಿ ಅಲ್ಲಿಗೆ ಕರೆದುಕೊಂಡು ಹೋದ. ಆ ವ್ಯಕ್ತಿ ಆ ಸನ್ಯಾಸಿಗೆ ತನ್ನ ಎಲ್ಲ ಸಮಸ್ಯೆಯನ್ನು ವಿವರಿಸಿದನು. ಇದನ್ನು ಕೇಳಿದ ನಂತರ ಆ ಸನ್ಯಾಸಿ ಅಲ್ಲಿಂದ ಎದ್ದು ಕೊಠಡಿಗೆ ಹೋದರು. ಇದನ್ನು ನೋಡಿ ಇಬ್ಬರು ಸನ್ಯಾಸಿ ಏಕೆ ಒಳಗೆ ಹೋದರು ಎಂದು ಅತಿಯಾಗಿ ಯೋಚಿಸಲು ಪ್ರಾರಂಭಿಸಿದರು. ಸನ್ಯಾಸಿ ಹೊರಗೆ ಬಂದಾಗ ಆತನ ಕೈಯಲ್ಲಿ ಒಂದು ಕಲ್ಲು ಇತ್ತು. ಅದನ್ನು ಆ ವ್ಯಕ್ತಿಗೆ ತೋರಿಸಿ, "ಇದರ ತೂಕ ಎಷ್ಟಿರಬಹುದು" ಎಂದು ಕೇಳಿದ. ಅದಕ್ಕೆ ಆ ವ್ಯಕ್ತಿ, "ಗೊತ್ತಿಲ್ಲ, 100 ಇಲ್ಲ 200 ಗ್ರಾಂ ಇರಬಹುದು" ಎಂದನು. ಆಗ ಸನ್ಯಾಸಿ, "ಈ ಕಲ್ಲು 100- 200 ಗ್ರಾಂನಷ್ಟು ಇದೆ. ಇದನ್ನು ನಾನು ನನ್ನ ಕೈಯ ಮೇಲೆ ಇಟ್ಟುಕೊಳ್ಳಬಹುದು. ಆದರೆ ಇದನ್ನು 5 ನಿಮಿಷ ಇಟ್ಟುಕೊಂಡರೆ ಏನಾಗುತ್ತದೆ". ಅದಕ್ಕೆ ಆತ, "ಏನು ಆಗುವುದಿಲ್ಲ" ಎನ್ನುತ್ತಾನೆ. ಆಗ ಸನ್ಯಾಸಿ, "ನಾನು ಇದನ್ನು ಅರ್ಧ ಗಂಟೆ ಹಿಡಿದಿಟ್ಟುಕೊಂಡರೆ ಏನಾಗುತ್ತದೆ" ಎಂದು ಕೇಳಿದನು. ಆಗ ಆ ವ್ಯಕ್ತಿ, "ಅರ್ಧ ಗಂಟೆ ಹಿಡಿದಿಟ್ಟುಕೊಂಡರೆ ನಿಮ್ಮ ಕೈಗೆ ನೋವಾಗುತ್ತದೆ" ಎಂದನು. ಆಗ ಸನ್ಯಾಸಿ, "ಒಂದು ಗಂಟೆ ಹಿಡಿದಿಟ್ಟುಕೊಂಡರೆ ಏನಾಗುತ್ತದೆ" ಎಂದು ಕೇಳಿದರು. ಅದಕ್ಕೆ ಆ ವ್ಯಕ್ತಿ, "ಇನ್ನಷ್ಟು ನೋವಾಗುತ್ತದೆ, ನಿಮಗೆ ಕೈ ಏತ್ತಲು ಸಾಧ್ಯವಾಗದಿರಬಹುದು" ಎಂದನು. ಆಗ ಸನ್ಯಾಸಿ "ಈ ರೀತಿಯೇ ಆಗುತ್ತದೆ" ಎಂದರು.

ಜೀವನದಲ್ಲಿ ನಾವು ಚಿಕ್ಕ ಅಥವಾ ದೊಡ್ಡ ವಸ್ತುವನ್ನು ನಮ್ಮ ಹತ್ತಿರವೇ ಇಟ್ಟುಕೊಂಡಿರುತ್ತೇವೆ. ಒಂದು ಕಲ್ಲನ್ನು ಕೆಲವು ಸಮಯ ಹಿಡಿದಿಟ್ಟುಕೊಂಡರೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಅದನ್ನು ತುಂಬಾ ಸಮಯ ಹಿಡಿದಿಟ್ಟುಕೊಂಡರೆ ನಮ್ಮ ಕೈಗೆ ನೋವಾಗುತ್ತದೆ. ಈ 100- 200 ಗ್ರಾಂ ಕಲ್ಲು, ಎಷ್ಟೋ ಕೆಜಿಯಷ್ಟು ಎನಿಸುತ್ತದೆ. ಇದೇ ರೀತಿ ನೀವು ಒಂದು ವಿಷಯದ ಬಗ್ಗೆ ಯೋಚಿಸಲು ಪ್ರಾರಂಭಿಸಿ, ಯೋಚಿಸುತ್ತಲೇ ಇದ್ದರೆ, ಇದು ಚಿಕ್ಕ ವಿಷಯವನ್ನು ದೊಡ್ಡದಾಗಿ ಮಾಡುತ್ತದೆ ಮತ್ತು ನಿಮ್ಮ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಇದರಿಂದ ನೀವು ಖುಷಿಯಾಗಿರಲು ಸಾಧ್ಯವಾಗುವುದಿಲ್ಲ ಮತ್ತು ನಿಮ್ಮ ಶಕ್ತಿಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಇಂದು ಅನೇಕರು ಅತಿಯಾಗಿ ಯೋಚಿಸುತ್ತಿದ್ದಾರೆ. ಸಮಯ(time), ಶಕ್ತಿ(energy) ಎಲ್ಲವನ್ನು ವ್ಯರ್ಥ ಮಾಡುತ್ತಿದ್ದಾರೆ. ಈ ಅತಿಯಾಗಿ ಯೋಚಿಸುವ ಸಮಸ್ಯೆ ಹೆಚ್ಚುತ್ತಲೇ ಇದೆ. ಇದರಿಂದ ಗೊಂದಲ(confusion), ಅನಿರ್ಧಾರ(indecision), ಜನರ ಜೀವನದ ಗುಣಮಟ್ಟ(quality of life) ಕೆಡುತ್ತಿದೆ. ಇದಕ್ಕಾಗಿ, "don't believe everything you think" ಎಂಬ ಪುಸ್ತಕವಿದೆ. ಇದರ ಸಾರಾಂಶ ಬೇಕಿದ್ದಲಿ ಕೆಳಗೆ ಕಮೆಂಟ್ನಲ್ಲಿ ತಿಳಿಸಿ.

ಮಧ್ಯಮ ವರ್ಗದವರು ಯಾವುದೇ ವಿಷಯದ ಮೇಲೆ ಅಧಿಕ ಯೋಚಿಸುತ್ತಾರೆ. ಎಲ್ಲಿಯಾದರೂ ಕೊಳ್ಳಾಟ(shopping) ಮಾಡಲು ಹೋದರೆ ಕಡಿಮೆ ಬೆಲೆಗೆ ಹೇಗೆ ಖರೀದಿಸಲಿ ಎಂದು ಯೋಚಿಸುತ್ತಾರೆ. 5 ರೂಪಾಯಿ ಉಳಿಸಲು ಡಿಮಾರ್ಟ್ಗೆ(dmart) ಹೋಗುತ್ತಾರೆ ಆದರೆ 100 ರೂಪಾಯಿಯ ಖರ್ಚು ಮಾಡುತ್ತಾರೆ. ಅಧಿಕ ಯೋಚನೆ ಮಾಡಬೇಕೆಂದಿರದ ವಿಷಯದ ಮೇಲೂ ಅಧಿಕ ಯೋಚನೆ ಮಾಡುತ್ತಾರೆ. ಸಾಧಿಸುವವರು ಅಧಿಕ ಯೋಚಿಸುವುದಿಲ್ಲ. ಅವರ ಯೋಚಿಸುವವರ(thinkers) ಬದಲು ಮಾಡುವವರಾಗಿರುತ್ತಾರೆ(doers). ಅವರು ಏನನ್ನಾದರೂ ಮಾಡುತ್ತಿರುತ್ತಾರೆ. ಈ ಪ್ರಕ್ರಿಯೆಯಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತಾರೆ, ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಅವರು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಗೆಲ್ಲುವ ಸಾಧ್ಯತೆ ಅಧಿಕವಿರುತ್ತದೆ ಮತ್ತು ಅವರು ಅಧಿಕ ಹಣ ಗಳಿಸುವ 1% ಗೆ ಬರುತ್ತಾರೆ.

ಇದನ್ನು ಓದಿ: 21 ಸಣ್ಣ ಅಭ್ಯಾಸದಿಂದ ವಾರದಲ್ಲಿ 21+ ಗಂಟೆಗಳನ್ನು ಉಳಿಸಿ

3. Having low self-esteem/low self-image

what is having a low self esteem in kannada
self image

ಇಬ್ಬರು ಗೆಳೆಯರು ಕಾಲೇಜಿನಲ್ಲಿ ಇದ್ದರು. ಒಬ್ಬ ಸ್ನೇಹಿತ ತುಂಬಾ ನಾಚಿಕೆ(shy) ಸ್ವಭಾವದವನಾಗಿದ. ಜನಗಳ ಜೊತೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಇನ್ನೊಬ್ಬ ಸ್ನೇಹಿತ ಬಹಿರ್ಮುಖಿ(extrovert) ಆಗಿದ. ಯಾರ ಹತ್ತಿರವಾದರೂ ಮಾತನಾಡುತ್ತಿದ. ಆದರೆ ನಾಚಿಕೆ ಸ್ವಭಾವದವನು ಎಷ್ಟೇ ಪ್ರಯತ್ನ ಮಾಡುತ್ತಿದ್ದರು ಇತರೊಂದಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಈ ನಾಚಿಕೆ ಸ್ವಭಾವ ಇರುವವನಿಗೆ ಒಂದು ಹುಡುಗಿ ಇಷ್ಟವಾಗಿದ್ದಳು. ಅವನು ಅಧಿಕ ಪ್ರಯತ್ನಿಸಿದ ನಂತರವೂ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕಾಗಿ ಅವನು ಆತನ ಸ್ನೇಹಿತನಿಗೆ, "ನೀನು ಇಷ್ಟೊಂದು ಜನ ಹುಡುಗಿಯರ ಜೊತೆ ಸ್ವತಂತ್ರವಾಗಿ ಮಾತನಾಡಲು ಹೇಗೆ ಸಾಧ್ಯವಾಗುತ್ತದೆ? ನಾನು ಆ ಹುಡುಗಿ ಹತ್ತಿರ ಹೋದಾಗ ಎಷ್ಟು ಅಸ್ಥಿರಗೊಳ್ಳುತ್ತೇನೆಂದರೆ(nervous) ಮಾತೇ ಬರೋದಿಲ್ಲ" ಎಂದು ಹೇಳುತ್ತಾನೆ. ಇದಕ್ಕೆ ಇನ್ನೊಬ್ಬ ಸ್ನೇಹಿತ, "ಏನು ಇಲ್ಲ ಇದು ತುಂಬಾ ಸಾಮಾನ್ಯವಾಗಿದೆ. ಇದನ್ನು ನೀನು ಮಾಡಬಹುದು" ಎಂದು ಹೇಳಿದನು.

ಅದಕ್ಕೆ ಆತ, "ಇದಕ್ಕೆ ಏನಾದರೂ ಉಪಾಯ(trick) ಇದೇ ಇರುತ್ತದೆ. ಅದು ನಿನ್ನನ್ನು ಇಷ್ಟು ಆತ್ಮವಿಶ್ವಾಸಿ(confident) ಮಾಡಿದೆ" ಎಂದು ಹೇಳಿದನು. ಆಗ ಇನ್ನೊಬ್ಬ ಸ್ನೇಹಿತ, "ನಾನೊಂದು ವಿಷಯವನ್ನು ಮಾಡುತ್ತೇನೆ. ಅದು ನನಗೆ ಇಷ್ಟು ಆತ್ಮವಿಶ್ವಾಸ ನೀಡಿದೆ. ಇದರಿಂದಲೇ ನಾನು ಯಾರ ಜೊತೆಯಾದರೂ ಇಷ್ಟು ಆರಾಮಾಗಿ ಮಾತನಾಡುತ್ತೇನೆ" ಎಂದು ಹೇಳಿದನು. ಅದಕ್ಕೆ ಮೊದಲನೇ ಸ್ನೇಹಿತ, "ನೀನು ಏನು ಮಾಡುವೇ" ಎಂದು ಕೇಳುತ್ತಾನೆ. ಅದಕ್ಕೆ ಆತ, "ನನಗೆ ಒಬ್ಬರ ಜೊತೆ ಮಾತನಾಡಬೇಕಿದ್ದಾಗ ಒಂದು ಪೆದ್ದ(silly) ವಿಷಯವನ್ನು ಮಾಡುತ್ತೇನೆ. ನಾನು ಇಡೀ ಕಾಲೇಜು ನಂದೇ ಎಂದು ಭಾವಿಸುತ್ತೇನೆ, ನಾನು ಇಲ್ಲಿನ ಮಾಲೀಕ ಇತರರು ನನ್ನ ಪ್ರಜೆಗಳು ಎಂದು ಭಾವಿಸುತ್ತೇನೆ. ಅಂದರೆ ನಾನು ನನ್ನ ದೃಷ್ಟಿಯಲ್ಲಿ ಮೇಲೆ ತೆಗೆದುಕೊಂಡು ಹೋಗುತ್ತೇನೆ ಮತ್ತು ಉಳಿದವರನ್ನು ಚಿಕ್ಕವರೆಂದು ಭಾವಿಸುವೆನು. ಇದನ್ನು ಕೇಳಲು ಚೆನ್ನಾಗಿ ಅನಿಸದಿರಬಹುದು. ಆದರೆ ನನಗೆ ಇದು ಬೆರಗು(wonder) ಮಾಡುತ್ತದೆ. ನಾನು ನನ್ನ ಸ್ವಯಂ ಚಿತ್ರವನ್ನು(self image) ಇಷ್ಟು ಮೇಲೆ ತೆಗೆದುಕೊಂಡು ಹೋದರೆ ಆತ್ಮವಿಶ್ವಾಸ ಬರುತ್ತದೆ. ನಾವು ಚಿಕ್ಕವರೊಂದಿಗೆ ಮಾತನಾಡುವಾಗ ಗಾಬರಿಯಾಗುವುದಿಲ್ಲ. ಅದೇ ದೊಡ್ಡವರೊಂದಿಗೆ ಮಾತನಾಡುವಾಗ ಅಸ್ಥಿರಗೊಳ್ಳುತ್ತೇವೆ. ಇದು ಏಕೆಂದರೆ ನಾವು ನಮ್ಮ ಆತ್ಮಾಭಿಮಾನವನ್ನು ಚಿಕ್ಕದಾಗಿಟ್ಟುಕೊಂಡಿರುತ್ತೇನೆ. ನಾನಿದನ್ನು ಅರ್ಥ ಮಾಡಿಕೊಂಡಾಗ ಈ ಸರಳ ಉಪಾಯವನ್ನು ಬಳಸಲು ಪ್ರಾರಂಭಿಸಿದೆ ಮತ್ತು ಒಳ್ಳೆಯ ಫಲಿತಾಂಶವನ್ನು ನೀಡಿತು" ಎಂದು ಹೇಳಿದ.

ಮಧ್ಯಮ ವರ್ಗದ ಜನರಲ್ಲಿ ನಾವು ಇದನ್ನು ಪರಿಶೀಲಿಸಬಹುದು. ಅವರು ಒಳ್ಳೆಯವರಾಗಿರುತ್ತಾರೆ, ಆದರೆ ಒಂದು ತಪ್ಪನ್ನು ಮಾಡುತ್ತಾರೆ. ಅವರು ಯಾವುದೇ ಸಾಧಿಸಿದವರನ್ನು ನೋಡಿದಾಗ ಅವರ ವ್ಯಕ್ತಿತ್ವವನ್ನು ಅವನಿಗಿಂತ ದೊಡ್ಡದಾಗಿ ಮಾಡುತ್ತಾರೆ. ಇದರಿಂದ ನೇರವಾಗಿ(directly) ಅಥವಾ ಪರೋಕ್ಷವಾಗಿ(indirectly) ಅವರ ಚಿತ್ರವನ್ನು ಕೆಳಗೆ ತರುತ್ತಾರೆ. ಒಬ್ಬ ಕ್ರಿಕೆಟರ್ ದೊಡ್ಡ ಕ್ರಿಕೆಟರ್ ಆದರೂ, ಒಬ್ಬ ನಟ ದೊಡ್ಡ ನಟನಾದರೆ, ಅವರ ಮಂದಿರ ಮಾಡುತ್ತಾರೆ, ಪೂಜೆ ಮಾಡುತ್ತಾರೆ. ಇದರಿಂದ ಆ ವ್ಯಕ್ತಿಯ ವ್ಯಕ್ತಿತ್ವ ಹೆಚ್ಚಿಸುತ್ತಿದ್ದಾರೆ, ಆದರೆ ತನ್ನ ಸ್ವಂತ ವ್ಯಕ್ತಿತ್ವವನ್ನು ಬೀಳಿಸಿಕೊಳ್ಳುತ್ತಿದ್ದಾರೆ. ಅವರಿಗೆ ದೊಡ್ಡದನ್ನು ಸಾಧಿಸುವುದು ಸಾಧ್ಯವಿಲ್ಲವೆನ್ನಿಸುತ್ತದೆ. "ಆ ವ್ಯಕ್ತಿಯಲ್ಲಿ ಏನೋ ವಿಶೇಷವಿದೆ. ಹೀಗಾಗಿ ಅವನು ಮಾತ್ರ ಅದನ್ನು ಸಾಧಿಸಲು ಸಾಧ್ಯವಾಯಿತು". ಇದು ನಿಜವಾಗಿ ಅವರಿಗೆ ಮತ್ತು ಇತರರಿಗೆ ಸರಿಯಲ್ಲ, ಏಕೆಂದರೆ ಇದು ಅವರ ಮತ್ತು ಇತರರ ವ್ಯಕ್ತಿತ್ವವನ್ನು ಹಾಳು ಮಾಡುತ್ತಿದೆ.

ಇದನ್ನು ಓದಿ: ಬದುಕಿನಲ್ಲಿ ನಿಶ್ಚಲತೆಯನ್ನು ಸಾಧಿಸುವುದು ಹೇಗೆ?

4. Lack of consistency

what does lack of consistency mean in kannada
consistency

ಇದನ್ನು ಪ್ರಾರಂಭಿಸುವ ಮೊದಲು ನಿಮಗೆ ಒಂದು ಪ್ರೆಶ್ನೆಯನ್ನು ಕೇಳುತ್ತೇನೆ. ನಿಮಗೆ ಒಂದು ಸುತ್ತಿಗೆ ನೀಡಿ ಮುಂದಿರುವ ದೊಡ್ಡ ಬಂಡೆಯನ್ನು ತುಂಡು ಮಾಡಬೇಕೆಂದಿದ್ದರೆ, ನಿಮಗೆ ಮಾಡಲು ಸಾಧ್ಯವೇ? ಈ ಕೆಳಗಿನ ವೀಡಿಯೋವನ್ನು ನೋಡಿ,

ಆ ವ್ಯಕ್ತಿಯು ಹಲವು ಸಮಯದಿಂದ ಆ ಕಲ್ಲಿಗೆ ಹೊಡೆಯುತ್ತಿದ್ದಾನೆ. ಅದು ಕೊನೆಯಲ್ಲಿ ತುಂಡಾಗುತ್ತದೆ. ಅವನು ಇದರಲ್ಲಿ ಒಂದು ತಂತ್ರವನ್ನು ಬಳಸಿದ್ದಾನೆ. ನೀರಿನ ಹನಿ ಕೂಡ ಒಂದು ಕಲ್ಲಿನ ಮೇಲೆ ಬೀಳುತ್ತಲೇ ಇದ್ದರೆ, ಆ ಕಲ್ಲಿನ ಒಳಗೆ ರಂದ್ರವನ್ನು ಮಾಡಬಹುದು. ಅಂದರೆ ನೀವು ಸ್ಥಿರತೆಯಿಂದಿರಬೇಕು(consistency) ಎಂಬುದು ಇಲ್ಲಿನ ಪಾಠವಾಗಿದೆ.

ಸ್ಥಿರತೆಯ ಶಕ್ತಿಯಿಂದ ನೀವು ನೀರಿನ ಹನಿಯಿಂದ ಕಲ್ಲನ್ನು ತುಂಡು ಮಾಡಬಹುದು. ಆದರೆ ಅನೇಕ ಬಡ ಮತ್ತು ಮಧ್ಯಮ ವರ್ಗದವರು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಉದಾಹರಣೆಗೆ ಆ ದೊಡ್ಡ ಕಲ್ಲು ಗುರಿಯಾಗಿದ್ದು, ಆ ಸುತ್ತಿಗೆ ಕ್ರಮ ಆಗಿದ್ದು, ಅವರು ಒಂದೊಂದಾಗಿ ಅದನ್ನು ತೆಗೆದುಕೊಳ್ಳುವ ಪ್ರಾರಂಭಿಸಿದಾಗ ಏನು ಆಗುವುದಿಲ್ಲ. ಇದರ ನಂತರ ಅವರು ಬಿಟ್ಟುಕೊಡುತ್ತಾರೆ. ಆದರೆ ಅವರು ಸ್ಥಿರತೆಯೊಂದಿಗೆ ಆ ಕಲ್ಲಿಗೆ ಹೊಡೆಯುತ್ತಿದರೆ, ಮಾರ್ಗದರ್ಶಕರಿಂದ(mentors) ತಂತ್ರಗಳನ್ನು ಕಲಿಯುತ್ತಿದ್ದಾರೆ, ಅವರು ದೊಡ್ಡ ಕಲ್ಲನ್ನು ಎರಡು ಭಾಗ ಮಾಡಬಹುದು.

ಆದರೆ ಬಡ ಮತ್ತು ಮಧ್ಯಮ ವರ್ಗದವರು ಈ ಸ್ಥಿರತೆಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಇದರಿಂದಲೇ ಅವರು ಶ್ರೀಮಂತರಾಗಲು ಸಾಧ್ಯವಾಗುವುದಿಲ್ಲ. ಅದೇ ಶ್ರೀಮಂತರು ಎಷ್ಟು ಸ್ಥಿರತೆಯಿಂದ ಇರುತ್ತೇವೋ ಅಷ್ಟು ಇಂದು ಇಲ್ಲ ನಾಳೆ ಫಲಿತಾಂಶ ಸಿಕ್ಕೇ ಸಿಗುತ್ತದೆ ಎಂದು ನಂಬಿರುತ್ತಾರೆ. ಎಷ್ಟೇ ದೊಡ್ಡ ಕಲ್ಲು ಆಗಿದ್ದರು, ಸುತ್ತಿಗೆಯಿಂದ ಹೊಡೆಯುತ್ತಿದರೆ ಇಂದು ಇಲ್ಲ ನಾಳೆ ಮುರಿಯುತ್ತದೆ.

5. Low expectations

"shoot for the moon, even if you miss you'll reach the stars", ಎಂಬ ಉಲ್ಲೇಖವಿದೆ.

99 ರಷ್ಟು ಜನ ದೊಡ್ಡ ಕನಸನ್ನು ಕಾಣುವುದಿಲ್ಲ. ಅವರು ದೊಡ್ಡ ಕನಸನ್ನು ಕಾಣಲು ಹೆದರುತ್ತಾರೆ. ಇದರಿಂದ 99 ರಷ್ಟು ಜನರು ಶ್ರೀಮಂತರಾಗಲು ಸಾಧ್ಯವಾಗುವುದಿಲ್ಲ.

ಇದನ್ನು ಓದಿ: ಬದುಕನ್ನು ಬದಲಾಹಿಸುವ 12 ನಿಯಮಗಳು[BRAIN RULES]

6. Lack of focus(Fomo syndrone)

why do I struggle to focus in kannada
focus

ನೀವು ನೂರು ಜನಗಳಿಗೆ ಜೀವನದಲ್ಲಿ ಏನನ್ನು ಸಾಧಿಸಲು ಬಯಸಿದ್ದೀರಾ ಎಂದು ಕೇಳಿದರೆ, ಕಷ್ಟದಲ್ಲಿ ಒಬ್ಬ ವ್ಯಕ್ತಿ ಅವನ ಬದುಕಿನ ದೊಡ್ಡ ಗುರಿಯ ಬಗ್ಗೆ ತಿಳಿಸಬಹುದು. ಅದಕ್ಕಾಗಿ ಅವನು ಯಾವ ರೀತಿಯ ಹಂತಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ತಿಳಿಸಬಹುದು. ಇಂದಿನ ರೀಲ್ಸ್(reels) ಜಗತ್ತಿನಲ್ಲಿ ಜನರು ಬೇರೆ ಬೇರೆಯದನ್ನು ಸಾಧಿಸುವುದನ್ನು ನೋಡಿದಾಗ, ನಮಗೆ ಅವೆಲ್ಲವನ್ನು ಮಾಡೋಣ ಎನಿಸುತ್ತದೆ. ಈ ಕಾರಣದಿಂದಲೇ ಜನರಿಗೆ ದೊಡ್ಡ ಕನಸನ್ನು ಕಾಣಲು ಸಾಧ್ಯವಾಗುತ್ತಿಲ್ಲ. ಅವರು ಒಂದು ವಿಷಯದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಜನರಿಗೆ ನಾನು ಇದನ್ನು ಮಾಡಬಲ್ಲೆ, ಚಿತ್ರಕಲೆ(painting) ಮಾಡಬಲ್ಲೆ, ನೃತ್ಯ(dancing) ಮಾಡಬಲ್ಲೆ ಅನಿಸುತ್ತದೆ. ಆದರೆ ಟಾಪ್ 1% ನಲ್ಲಿರುವವರು 100 ವಿಷಯಗಳನ್ನು ಮಾಡುವುದರಿಂದ ಶ್ರೀಮಂತರಾಗಿಲ್ಲ. ಅವರು ಒಂದು ಕೆಲಸವನ್ನು 100 ಬಾರಿ ಪುನರಾವರ್ತಿಸಿದ ಕಾರಣ ಶ್ರೀಮಂತರಾದರು.

"I fear not the man who has practice 10,000 kick once. But I fear the man who has practiced one kick 10,000 times", ಎಂದು ಇದಕ್ಕೆ ಸಂಬಂಧಿಸಿರುವ ಬ್ರೂಸ್ ಲೀ(bruce lee) ಅವರ ಉಲ್ಲೇಖವಿದೆ.

ಇದರಲ್ಲೂ ಸ್ಥಿರತೆ ಮತ್ತು ಗಮನ ಹರಿಸುವ ಅವಶ್ಯಕತೆ ಇದೆ. ಅದು ಅನೇಕ ಜನಗಳಲ್ಲಿ ಇರುವುದಿಲ್ಲ.

ಇದನ್ನು ಓದಿ: ನೀರಸವಾದ ಕೆಲಸಗಳನ್ನು ಮಾಡಲು ಮೆದುಳನ್ನು ಮೋಸಗೊಳಿಸುವುದು ಹೇಗೆ?

7. Lack of discipline

what does lack of discipline mean in kannada
discipline

ಗೇಬ್ರಿಯಲ್ ಓಟಿಂಗನ್(gabriele oettingen) ಎಂಬುವರು ಒಂದು ಅಧ್ಯಯನ ಮಾಡಿದ್ದರು. ಇದರಲ್ಲಿ ಅವರು 3 ಗುಂಪುಗಳನ್ನು ಮಾಡಿದ್ದರು. ಮೊದಲನೇ ಗುಂಪಿಗೆ ಅವರ ಗುರಿಯನ್ನು ದೃಶ್ಯೀಕರಿಸಲು ತಿಳಿಸಿದರು. ಉದಾಹರಣೆಗೆ ನಿಮಗೆ ಸಿಕ್ಸ್ ಪ್ಯಾಕ್(six pack) ಬರುತ್ತಿದೆ ಎಂದು ದೃಶ್ಯೀಕರಿಸಿ, ಒಂದು ಮ್ಯಾರಥಾನ್(marathon) ಮುಗಿಸಿದಂತೆ ಇತ್ಯಾದಿ. ಇನ್ನೊಂದು ಗುಂಪಿಗೂ ದೃಶ್ಯೀಕರಿಸಲು ತಿಳಿಸಿದರು. ಆದರೆ ಸಮಸ್ಯೆಗಳನ್ನು(problem) ದೃಶ್ಯೀಕರಿಸಬೇಕಿತು. ಅಂದರೆ ಯಾವ ಸಮಸ್ಯೆಯಿಂದ ಸಿಕ್ಸ್ ಪ್ಯಾಕ್ ಮಾಡಲು ಸಾಧ್ಯವಾಗುತ್ತಿಲ್ಲ?, ನಿಮಗೆ ಏಕೆ ಶ್ರೀಮಂತರಾಗಲು ಸಾಧ್ಯವಾಗುತ್ತಿಲ್ಲ? ಮೂರನೇ ಗುಂಪಿಗೆ ವ್ಯತಿರಿಕ್ತ(contrast) ಮಾಡಲು ಹೇಳಿದರು. ಅಂದರೆ ಅವರಿಗೆ ಅಂತಿಮ ಫಲಿತಾಂಶಗಳನ್ನು ದೃಶ್ಯೀಕರಿಸಲು ಹೇಳಿದರು. ನೀವು ಸಾಧಿಸಬೇಕೆಂದಿರುವ ಗುರಿಯ ಬಗ್ಗೆ ದೃಶ್ಯೀಕರಿಸಿ, ನಂತರ ನಿಮ್ಮ ಪ್ರಸ್ತುತ ಸನ್ನಿವೇಶವನ್ನು ದೃಶ್ಯೀಕರಿಸಿ, ಯಾವ ಸ್ಥಿತಿಯಲ್ಲಿ ಇರುವಿರೆಂಬುದನ್ನು ತಿಳಿದುಕೊಳ್ಳಿ. ನಂತರ ನಿಮ್ಮ ಪ್ರಸ್ತುತ ಸನ್ನಿವೇಶದಿಂದ ಅಂತಿಮ ಫಲಿತಾಂಶದ ಮಧ್ಯ ಬರುವ ಎಲ್ಲಾ ರೀತಿಯ ಅಡೆತಡೆಗಳ(obstacles) ಬಗ್ಗೆ ಬರೆಯಿರಿ. ಈ ಅಧ್ಯಯನದ ಫಲಿತಾಂಶದಲ್ಲಿ 3ನೇ ಗುಂಪಿನವರು ತಮ್ಮ ಗುರಿಯನ್ನು ಸಾಧಿಸಲು ಸಾಧ್ಯವಾಯಿತು. ಆದರೆ ಈ ರೀತಿ ಏಕೆ ಆಯಿತು?

ನೀವು ಒಬ್ಬ ವ್ಯಕ್ತಿಗೆ ಒಳ್ಳೆಯ ವಿಷಯಗಳನ್ನು ದೃಶ್ಯೀಕರಿಸಲು ಹೇಳಿದರೆ ಅವನು ಮಾಡುತ್ತಾನೆ. ಕೆಟ್ಟದ್ದನ್ನು ದೃಶ್ಯೀಕರಿಸಲು ಹೇಳದೆ ಇದ್ದರೂ ಅವನು ಅದನ್ನು ದೃಶ್ಯೀಕರಿಸುತ್ತಾನೆ. ಅದೇ ನಾವು ಯಾವುದಾದರೂ ವ್ಯಕ್ತಿಗೆ ವ್ಯತಿರಿಕ್ತ(contrast) ಮಾಡಲು ಹೇಳಿದರೆ, ಅಂದರೆ ನೀವು ಆ ಗುರಿಯನ್ನು ಸಾಧಿಸಲೇಬೇಕು ಮತ್ತು ನೀವು ಈಗ ಎಲ್ಲಿದ್ದೀರಾ ಅಲ್ಲಿಂದ ಯಾವ ಹಂತಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನೋಡಿ.

ಒಬ್ಬ ವ್ಯಕ್ತಿಗೆ ಈ ವಿಷಯಗಳನ್ನು ಮಾಡಲು ಶಿಸ್ತಿನ(discipline) ಅಗತ್ಯವಿದೆ. ಅವನು ನಿಯಮಿತವಾಗಿ ಇದನ್ನು ಮಾಡುವುದರಿಂದ ಅವನಲ್ಲಿ ಶಿಸ್ತು ಬೆಳೆಯುತ್ತದೆ. ಅವನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಕುರುಡಾಗಿ ಆಶಾವಾದಿ(optimistic) ಇರುವುದಿಲ್ಲ. ಅವನು ತಿಳಿದುಕೊಂಡು ಆಶಾವಾದಿ ಆಗುತ್ತಾನೆ. ಇದರಿಂದ ಅವನು ಶಿಸ್ತಿನಿಂದ ಕ್ರಮಗಳನ್ನು ತೆಗೆದುಕೊಳ್ಳಬಹುದು.

99 ರಷ್ಟು ಮಧ್ಯಮ ವರ್ಗದ ಜನರಲ್ಲಿ ಶಿಸ್ತು ಇರುವುದಿಲ್ಲ. ಬಾಲ್ಯದಿಂದಲೂ ನಮಗೆ ಶಿಸ್ತಾಗಿ ಇರುವುದು ಬೇಸರವೆನಿಸುತ್ತದೆ. ಶಿಸ್ತನ್ನು ಅನ್ನು ನಾವು ನಕಾರಾತ್ಮಕವಾಗಿ(negative) ನೋಡುತ್ತೇವೆ. ಗಂಭೀರ ಜನಗಳು ಮಾತ್ರ ಶಿಸ್ತನ್ನು ಫಾಲೋ ಮಾಡುತ್ತಾರೆ ಎಂದು ನಾವು ನಂಬುತ್ತೇವೆ. ಆದರೆ ಬದುಕಿನಲ್ಲಿ ಸಾಧಿಸಿದವರು ಶಿಸ್ಥಿನಿಂದ ಇರುವುದರಿಂದ ಅದು ಸಾಧ್ಯವಾಗಿದೆ. ಅವರು ಒಂದೇ ಕೆಲಸವನ್ನು ಬಾರಿ ಬಾರಿ ಮಾಡುತ್ತಾರೆ. ಅವರಿಗೆ ಇಷ್ಟವಿದ್ದರೂ ಇಲ್ಲದಿದ್ದರೂ ಮಾಡುತ್ತಾರೆ. ಇದುವೇ ಶಿಸ್ಥಿನ ಅರ್ಥ ಕೂಡವಾಗಿದೆ. ಅದೆಂದರೆ, "doing something whether you like it or not". ಇದಾಗಿತ್ತು ಗರಿಷ್ಠ ಜನರನ್ನು ಶ್ರೀಮಂತರಾಗುವುದರಿಂದ ತಡೆಯುವ 7 ಕಾರಣ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments