Watch Video
ಜೇಡದ(spider) ಮೇಲಿನ ಈ ಪ್ರಯೋಗದ ಬಗ್ಗೆ ನಿಮಗೆ ತಿಳಿದಿದೆಯೇ? ಇದರಲ್ಲಿ ಜೇಡವೂ ವೆಬ್(web) ಮಾಡುತ್ತಿತ್ತು. ವಿಜ್ಞಾನಿಗಳು ಒಂದು ಚುಚ್ಚುಕ(fork) ತೆಗೆದುಕೊಂಡು ವೆಬ್ ಹತ್ತಿರ ಕಂಪಿಸುತ್ತಿದ್ದರು(vibrate). ಸಾಮಾನ್ಯವಾಗಿ ವೆಬ್ ಮಾಡುವಾಗ ಜೇಡಕ್ಕೆ ಈ ರೀತಿ ಕಂಪಿಸುವುದು ಕೇಳಿದರೆ ಅದಕ್ಕೆ ಬೇಟೆ ಸಿಕ್ಕಿದೆ ಎಂದರ್ಥ. ವಿಜ್ಞಾನಿಗಳು ಈ ರೀತಿ ಕಂಪನ್ನು ಮಾಡಿದಾಗಲೂ ಜೇಡವು ಸಕ್ರಿಯವಾಗಿ ಆ ಜಾಗಕ್ಕೆ ಹೋಗುತ್ತಿತ್ತು. ಮೊದಲೆರಡು ಬಾರಿ ಆ ರೀತಿ ಮಾಡಿತು, ನಂತರ ಅದಕ್ಕೆ ಅದರಿಂದ ಏನೂ ಪ್ರಯೋಜನವಿಲ್ಲವೆಂದು ತಿಳಿಯಿತು. ಆ ಧ್ವನಿ ಕೇವಲ ಆದರ ಶಕ್ತಿಯನ್ನು ಕುಗ್ಗಿಸುತ್ತಿದೆ.
ಈ ಸರಳವಾದ ಜೇಡದ ತಂತ್ರವನ್ನು ನಮ್ಮ ಜೀವನದಲ್ಲೂ ತೊಂದರೆಗೊಳಗಗದಿರಲು(disturb) ಬಳಸಬೇಕು. ಇಂದು ಪ್ರತಿಯೊಬ್ಬರು ನಿಮ್ಮ ಗಮನವನ್ನು ಪಡೆಯಲು ಹೋರಾಡುತ್ತಿದ್ದಾರೆ, ಇದು ನಿಮಗೆ ಒಳ್ಳೆಯದಲ್ಲ. ಇದು ನಿಮ್ಮ ಶಕ್ತಿಯನ್ನು ಕುಗ್ಗಿಸುತ್ತಿದೆ. ಜೇಡದ ತಂತ್ರವು 3 ಸುವರ್ಣ(golden) ನಿಯಮಗಳ ಬಗ್ಗೆ ತಿಳಿಸುತ್ತದೆ.
ನಿಮಗೆ ಒಂದು ವಸ್ತುವಿನಿಂದ ಪ್ರಯೋಜನವಿಲ್ಲವೆಂದೆನಿಸಿದರೆ, ಅದರಿಂದ ಗಮನವನ್ನು ಹೊರ ತನ್ನಿ.
ನಿಮ್ಮನ್ನು ತಬ್ಬಿಬ್ಬು(distract) ಮಾಡುತ್ತಿರುವ ವಸ್ತುಗಳು ಯಾವುವು? ಅವುಗಳನ್ನು ಗುರುತಿಸಲು ಪ್ರಾರಂಭಿಸಿ.
ಒಮ್ಮೆ ನಿಮಗೆ ತೊಂದರೆ(disturb) ಮಾಡುತ್ತಿರುವ ವಸ್ತುಗಳ ಬಗ್ಗೆ ತಿಳಿದ ನಂತರ ಅವುಗಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿ.
ನಿಮ್ಮ ಜೀವನದ ವ್ಯಾಕುಲತೆಗಳ ಬಗ್ಗೆ ನನಗೆ ತಿಳಿದಿಲ್ಲ. ನನಗೆ ವಿಷಯ ರಚನೆ(content create) ಮಾಡಲು ಅಧಿಕ ವಿಷಯಗಳನ್ನು ನೋಡುವುದೇ ವ್ಯಾಕುಲತೆಯಾಗಿದೆ. ಇದೇ ರೀತಿ ನಿಮಗೂ ಅನೇಕ ವ್ಯಾಕುಲತೆಗಳಿರುತ್ತವೆ. ನೀವು ಯಾವ ವ್ಯಾಕುಲತೆಯನ್ನು ತೆಗೆಯಬೇಕು, ಯಾವುದರ ಮೇಲೆ ಗಮನ ಹರಿಸಬೇಕು ಎಂಬುದನ್ನು ನಾನು ನಿಖರವಾಗಿ(exactly) ಹೇಳಲು ಸಾಧ್ಯವಿಲ್ಲ. ಆದರೆ ನಾನು ಕೆಲವೊಂದಿಷ್ಟು ಅಭ್ಯಾಸಗಳ ಬಗ್ಗೆ ತಿಳಿಸುವೆನು, ಇದು ನಿಮ್ಮನ್ನು ವ್ಯಾಕುಲತೆ, ದೌರ್ಬಲ್ಯ ಮತ್ತು ಸಮಸ್ಯೆಯಿಂದ ಉಳಿಸುತ್ತದೆ. ಇಂದು ನಾವು ಅಧಿಕ ವ್ಯಾಕುಲತೆಗೆ ಒಳಗಾಗುತ್ತಿರುವುದರಿಂದ top 1% ನಲ್ಲಿ ಬರಲು ಸಾಧ್ಯವಾಗುತ್ತಿಲ್ಲ.
ನಾವು ಅನೇಕ ವಿಷಯಗಳ ಮೇಲೆ ಮಾತನಾಡಲು ಪ್ರಾರಂಭಿಸುತ್ತಿದ್ದೇವೆ. ಇದರಿಂದಾಗಿ ಈ ವ್ಯಾಕುಲತೆಯಿಂದ ಉಳಿದುಕೊಳ್ಳುವುದು ಮುಖ್ಯವಾಗಿದೆ. ಹೀಗಾಗಿ ನಾವು ತಿಳಿಸುವ ಈ ಹವ್ಯಾಸಗಳನ್ನು ಫಾಲೋ ಮಾಡಿ. ನಮಗೆ ಅಧಿಕ ವಿಷಯಗಳನ್ನು ನೋಡುವುದು ವ್ಯಾಕುಲತೆಯಾಗಿರಬಹುದು. ಆದರೆ ವಿಷಯ ರಚನೆ ಮಾಡಲು ಅದು ಮುಖ್ಯವಾಗಿದೆ. ಆದರೆ ನಿಮಗೆ ಇದು ವ್ಯಾಕುಲತೆಯಾಗಿರಬಹುದು. ಹೀಗಾಗಿ ನಾನು ತೊಂದರೆ ಬಿಟ್ಟು ಕೆಲವು ಹವ್ಯಾಸಗಳ ಬಗ್ಗೆ ತಿಳಿಸಲಿದ್ದೇನೆ. ಹವ್ಯಾಸಗಳನ್ನು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ತೊಂದರೆಯಿಂದ ಉಳಿದುಕೊಳ್ಳುವಿರಿ.
ಹವ್ಯಾಸದಲ್ಲೂ ಜನರದು ತಪ್ಪು ಕಲ್ಪನೆ ಇದೆ. ನಾವು ದೊಡ್ಡ ದೊಡ್ಡ ಹವ್ಯಾಸಗಳನ್ನು ಫಾಲೋ ಮಾಡಬೇಕೆಂದುಕೊಳ್ಳುತ್ತಾರೆ. ಉದಾಹರಣೆಗೆ ಜಿಮ್ಗೆ ಹೋಗುವುದು, ಅನೇಕ ಪುಸ್ತಕಗಳನ್ನು ಓದುವುದು, ಈ ರೀತಿಯ ಕಠಿಣ(tough) ಹವ್ಯಾಸಗಳನ್ನು ಮಾಡುವುದರಿಂದ ಅವುಗಳನ್ನು ನಮಗೆ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ದೊಡ್ಡ ದೊಡ್ಡ ಹವ್ಯಾಸಗಳ ಬದಲು ಚಿಕ್ಕ ಚಿಕ್ಕ ಹವ್ಯಾಸಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಅವು ನಿಮ್ಮ ಗುರಿಗೆ ದೊಡ್ಡ ಪ್ರಭಾವವನ್ನು(impact) ಬೀರುತ್ತದೆ. ನಾವು ಈ ಲೇಖನದಲ್ಲಿ ತಿಳಿಸುವ 20 ಚಿಕ್ಕ ಹವ್ಯಾಸಗಳಲ್ಲಿ ನೀವು ಯಾವುದನ್ನು ಫಾಲೋ ಮಾಡುತ್ತಿರೆಂಬುದನ್ನು ಕಮೆಂಟ್ನಲ್ಲಿ ತಿಳಿಸಿ.
ಇದನ್ನು ಓದಿ: ಕಡಿಮೆ ಮಾತನಾಡುವ ಜನರ 5 ಗುಣಗಳುನನಗೆ ಇತ್ತೀಚಿಗೆ ಹೊರಗೆ ಹೋಗಬೇಕಿತ್ತು. ಮಳೆ ಬರುತ್ತಿದ್ದ ಕಾರಣ ಛತ್ರಿಯಾ ಅವಶ್ಯಕತೆ ಇತ್ತು. ಆಗ ನಾನು ಛತ್ರಿಯನ್ನು ಹುಡುಕಲು ತುಂಬಾ ಸಮಯ ತೆಗೆದುಕೊಂಡೆ. ನಿಮಗೂ ಈ ರೀತಿ ಆಗಿರಬಹುದು. ನಿಮ್ಮ ವ್ಯಾಲೆಟ್, ಕೀಗಳನ್ನು ಎಲ್ಲೆಲ್ಲೋ ಇಟ್ಟು ಅವುಗಳನ್ನು ಹುಡುಕಲು ನಿಮ್ಮ ಅಧಿಕ ಸಮಯ ಹೋಗುತ್ತದೆ. ಇದು ನಿಮಗೆ ಅಷ್ಟು ದೊಡ್ಡದಾಗಿ ಕಾಣದಿರಬಹುದು. ಆದರೆ ಒಂದು ಅಧ್ಯಯನದ ಪ್ರಕಾರ ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸರಾಸರಿ 6.5 ತಿಂಗಳುಗಳನ್ನು ವಸ್ತುಗಳನ್ನು ಹುಡುಕುವುದರಲ್ಲೇ ಕಳೆದುಕೊಳ್ಳುತ್ತಾನೆ ಎಂದು ತಿಳಿಸಿದೆ. ಹೀಗಾಗಿ ಈ ಗ್ರಂಥಪಾಲಕ ಹವ್ಯಾಸವನ್ನು ಅನುಸರಿಸುವುದರಿಂದ ಇದು ನಮ್ಮ 6.5 ತಿಂಗಳನ್ನು ಉಳಿಸುತ್ತದೆ. ಹಾಗಿದ್ದರೆ ಗ್ರಂಥಪಾಲಕ ಎಂದರೇನು?
ನೀವು ಔಷಧಾಲಯ(pharmacy) ಇಲ್ಲ ಗ್ರಂಥಪಾಲಕನ(librarian) ಹತ್ತಿರ ಹೋದಾಗ ಅವರ ಹತ್ತಿರ ನೂರಾರು ಔಷಧಿ ಇಲ್ಲ ಪುಸ್ತಕಗಳು ಇರುತ್ತವೆ. ಆಗಿದ್ದರೆ ಅವರು ಒಂದು ನಿರ್ದಿಷ್ಟವಾದ ಪುಸ್ತಕವನ್ನು ಹುಡುಕಿ ಅದನ್ನು ತಕ್ಷಣವೇ ಹೇಗೆ ನೀಡುತ್ತಾರೆ. ಇದು ಏಕೆಂದರೆ ಅವರು ಪ್ರತಿಯೊಂದು ವಸ್ತುವನ್ನು ಸರಿಯಾದ ಸ್ಥಳದಲ್ಲಿ ಇಟ್ಟಿರುತ್ತಾರೆ. ಮುಂದಿನ ಬಾರಿ ಔಷಧಾಲಯಕ್ಕೆ ಹೋದಾಗ ಅವರು ಹೇಗೆ ಗುರುತು ಪಟ್ಟಿ(label) ಮಾಡಿ ಔಷಧಿಗಳನ್ನು ಇಟ್ಟಿರುತ್ತಾರೆ ಎಂಬುದನ್ನು ನೋಡಿ. ಇದೇ ರೀತಿ ನೀವು ಕೂಡ ಅಧಿಕ ಬಳಸುವ ವಸ್ತುಗಳನ್ನು ಸರಿಯಾಗಿ ಒಂದು ಜಾಗದಲ್ಲಿ ಇಡಿ. ಎಲ್ಲೆಲ್ಲೋ ಬಿಸಾಡುವ ಬದಲು ಒಂದು ಸರಿಯಾದ ಜಾಗದಲ್ಲಿ ಇಡುವುದರಿಂದ ಇದು ನಿಮ್ಮ 6.5 ತಿಂಗಳನ್ನು ಉಳಿಸುತ್ತದೆ.
ಇದನ್ನು ಓದಿ: "Good Vibes Good Life" ಪುಸ್ತಕದ ವಿವರಣೆನಾವು ಆರಾಮ ವಲಯದಲ್ಲಿ(comfort zone) ಇರಬಾರದು ಎಂದು ನೀವು ಅನೇಕ ಬಾರಿ ಕೇಳಿರುತ್ತೀರಾ. ನಮ್ಮ ಮನಸ್ಸು ಮತ್ತು ದೇಹಕ್ಕೆ ಸವಾಲು ನೀಡುತ್ತಿರಬೇಕು. ಹಾಗಿದ್ದರೆ ಇದನ್ನು ಮಾಡುವುದು ಹೇಗೆ? ನಿಮಗೆ ಸವಾಲು ನೀಡಲು ಪಾರ್ಕಿನ್ಸನ್ ನಿಯಮವನ್ನು(parkinson law) ಬಳಸಬಹುದು. ಇದರ ಬಗ್ಗೆ ಎಲೋನ್ ಮಸ್ಕ್(elon musk) ಅಧಿಕ ಭಾರಿ ಮಾತನಾಡಿದ್ದಾರೆ. ಈ ನಿಯಮದ ಪ್ರಕಾರ ನೀವು ಒಂದು ಕೆಲಸಕ್ಕೆ ಎಷ್ಟು ಸಮಯ ನೀಡುತ್ತೀರೋ ಅದನ್ನು ಮುಗಿಸಲು ಅದು ಅಷ್ಟೇ ಸಮಯವನ್ನು ತೆಗೆದುಕೊಳ್ಳುತ್ತದೆ.
ಉದಾಹರಣೆಗೆ ಒಂದು ಕಾರ್ಯವನ್ನು(assignment) ಮುಗಿಸಲು ನೀವು 6 ತಿಂಗಳನ್ನು ನೀಡಿದರೆ, ಅದು 6 ತಿಂಗಳು ತೆಗೆದುಕೊಳ್ಳುತ್ತದೆ. ಅದೇ ನೀವು 6 ವಾರ ನೀಡಿದರೆ 6 ವಾರದಲ್ಲೇ ಮುಗಿಸಬಹುದು. ಹೀಗಾಗಿ ನಿಮಗಾಗಿ ಸವಾಲನ್ನು ನೀಡಲು ಗಡುವುಗಳನ್ನು(deadlines) ನೀಡಿ. ಯಾವುದಾದರೂ ಕೆಲಸವನ್ನು ಮುಗಿಸಲು 10 ದಿನಗಳು ಬೇಕಿದ್ದರೆ 2 ದಿನದಲ್ಲಿ ಮುಗಿಸಲು ಪ್ರಯತ್ನಿಸಿ. ಈ ಸರಳವಾದ ಹವ್ಯಾಸ ನಿಮ್ಮ ಅಧಿಕ ಸಮಯವನ್ನು ಉಳಿಸುವುದಲ್ಲದೆ ಹೆಚ್ಚು ಉತ್ಪಾದಕ ಮಾಡುತ್ತದೆ.
ನನ್ನ ಬದುಕನ್ನು ಬದಲಿಸಿದ ಒಂದು ಪುಸ್ತಕ ತಿಳಿಸಬೇಕೆಂದರೆ ಅದು "rich dad poor dad" ಆಗಿದೆ ಈ ಪುಸ್ತಕವೂ ಹಣಕಾಸಿನ ಸಾಕ್ಷಾರತೆಯಾ(financial literacy) ಮೇಲಾಗಿದೆ. ಹಣವು ನಮ್ಮನ್ನು ಪ್ರೇರೇಪಿಸುತ್ತದೆ. ಆದರೆ ನಮಗೆಲ್ಲರಿಗೂ ಹಣವನ್ನು ಯಾವ ರೀತಿ ನಿಭಾಯಿಸಬೇಕು ಎಂಬುದು ತಿಳಿದಿಲ್ಲ. ಸ್ವತ್ತು(assets) ಮತ್ತು ಬಾಧ್ಯತೆಗಳ(liabilities) ಬಗ್ಗೆಯೂ ತಿಳಿದಿಲ್ಲ. ಆದರೆ ಇವುಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಹೀಗಾಗಿ ಎಷ್ಟು ಸಾಧ್ಯವೊ ಅಷ್ಟು ಹಣದ ಬಗ್ಗೆ ಕಲಿಯುತ್ತೀರಿ.
ಫ್ರಾನ್ಸ್ನಲ್ಲಿ(france) 20 ವರ್ಷಗಳಿಗೆ ಒಂದು ಅದ್ಯಾಯನವನ್ನು ಮಾಡಲಾಗಿತ್ತು. ಅದರಲ್ಲಿ 65 ವರ್ಷಕ್ಕೂ ಅಧಿಕ ಇರುವ 3,600 ಪ್ರತಿಸ್ಪರ್ಥಿಗಳಿಗೆ ಚೆಸ್, ಸುಡೋ ರೀತಿಯ ಬೋರ್ಡ್ ಗೇಮ್ಸ್ ಆಡಲು ತಿಳಿಸಲಾಯಿತು. ಇದು ಅವರ ಅರಿವಿನ ಕ್ರಿಯಾತ್ಮಕತೆಯನ್ನು(cognitive functionality) ಹೆಚ್ಚಿಸಿತು. ಅವರ ಸ್ಮರಣೆ ವೇಗವಾಗಿತ್ತು, 15 ರಷ್ಟು ಖಿನ್ನತೆ ಕಡಿಮೆಯಾಯಿತು. ಹೀಗಾಗಿ ನೀವು ಕೂಡ ಕೆಲಸವನ್ನು ಮಾಡುತ್ತೀರಿ, ಆದರೆ ಕೆಲವೊಮ್ಮೆ ಆಟವನ್ನು ಆಡಲು ಪ್ರಾರಂಭಿಸಿ. ಇಂದು ನಮಗೆ ಉಚಿತ ಸಮಯ ಸಿಕ್ಕಾಗಲಿಲ್ಲ ರೀಲ್ಸ್ ಅನ್ನು ಸ್ಕ್ರೋಲ್ ಮಾಡುತ್ತಿರುತ್ತೇವೆ. ಇದು ನಮ್ಮ ಮೆದುಳಿಗೆ ಒಳ್ಳೆಯದಲ್ಲ. ನೀವು ಒಗಟಿನ(puzzle) ರೀತಿಯ ಗೇಮ್ಸ್ ಆಡುವುದರಿಂದ ಇದು ನಿಮ್ಮ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ನೀಡುವುದಲ್ಲದೆ, ಅದರ ಅರಿವಿನ ಕ್ರಿಯಾತ್ಮಕತೆಯನ್ನು ಹೆಚ್ಚಿಸುತ್ತದೆ. ಆದರೆ ದಿನವಿಡಿ ಇದನ್ನೇ ಆಡುತ್ತಾ ಕೂಡಬೇಡಿ.
ಇದನ್ನು ಓದಿ: 10 ಹೆಚ್ಚುವರಿ ಆದಾಯದ ಐಡಿಯಾಗಳುನಮ್ಮ ಹತ್ತಿರ ಇರುವ ಅಮೂಲ್ಯವಾದ ಆಸ್ತಿಯು(asset) ಸಮಯವಾಗಿದೆ, ಅದು ನಿಯಮಿತವಾಗಿದೆ. ನಮ್ಮ ಹತ್ತಿರ ಬಂಗಾರ(gold) ಇದ್ದರೆ, ಅದನ್ನು ತುಂಬಾ ಸುರಕ್ಷಿತವಾಗಿ ಇಡುತ್ತೇವೆ. ಆದರೆ ಬಂಗಾರಕ್ಕಿಂತ ಅಮೂಲ್ಯವಾದ ನಮ್ಮ ಸಮಯವನ್ನು ನಾವು ವ್ಯರ್ಥ ಮಾಡುತ್ತೇವೆ. ಹೀಗಾಗಿ ನಮ್ಮ ಸಮಯವನ್ನು ಯೋಜನೆ ಮಾಡುವುದು ಉತ್ತಮವಾಗಿದೆ. ಸಮಯ ನಿರ್ವಹಣೆಗೆ ಸಂಬಂಧಿಸಿದಂತೆ ಅನೇಕ ಲೇಖನಗಳನ್ನು ನಾವು ಬರೆದಿದ್ದೇವೆ. ಪ್ರಾರಂಭದಲ್ಲಿ ನೀವು ತುಂಬಾ ವಿವರವಾಗಿ ಯೋಜನೆ ಮಾಡಬೇಕಿಲ್ಲ. ನೀವು ಚಿಕ್ಕ ಯೋಜನೆ ಮಾಡಿದರು ಅದು ಅಧಿಕವಾಗಿದೆ. "a bad plan is better than a no plan" ಎಂದು ಹೇಳಲಾಗುತ್ತದೆ. ಹೀಗಾಗಿ ನಿಮ್ಮ ಸಮಯಕ್ಕೆ ಏನಾದರೂ ಯೋಜನೆ ಮಾಡುತ್ತಲೇ ಇರಿ.
ಈ ಹವ್ಯಾಸ ನಿಮಗೆ ಯೋಜನೆಯನ್ನು(plan) ಮಾಡಲು ಸಹಕರಿಸುತ್ತದೆ. "eat that frog" ಒಂದು ಆಸಕ್ತಿಕರ ಪುಸ್ತಕವಾಗಿದ್ದು, ಇದರಲ್ಲಿ ಬ್ರಿಯಾನ್ ಟ್ರೇಸಿ(brain trecy) ಅವರು ದಿನವೂ ಕಪ್ಪೆಯನ್ನು(frog) ತಿನ್ನಲು ಹೇಳುತ್ತಾರೆ. ಇದರಲ್ಲಿ ಕಪ್ಪೆ ಎಂದರೆ ನಿಮ್ಮ ಕಠಿಣ ಮತ್ತು ಪ್ರಮುಖ ಕಾರ್ಯವನ್ನು ಮುಗಿಸುವುದಾಗಿದೆ. ಇದು ಏಕೆಂದರೆ ನಾವು ಬೆಳಗ್ಗೆ ಎದ್ದ ತಕ್ಷಣ ರಾತ್ರಿಗೆ ಹೋಲಿಸಿದರೆ ಅಧಿಕ ಪ್ರೇರಣೆ ಮತ್ತು ಶಕ್ತಿ ಇರುತ್ತದೆ. ಈ ಶಕ್ತಿಯನ್ನು ಅಧಿಕ ಆದ್ಯತೆ(priority) ಮತ್ತು ಕಠಿಣವಿರುವ ಕೆಲಸವನ್ನು ಮುಗಿಸಲು ಬಳಸಬೇಕು.
ಇದನ್ನು ಓದಿ: ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಣ ಮಾಡುವುದು ಹೇಗೆ?ನೀವು ನಿಯೋಜಿಸುವ(delegate) ಇಲ್ಲ ಸ್ವಯಂಚಾಲಿತ(automate) ಮಾಡಬಹುದಾದ ವಸ್ತುಗಳಿದ್ದರೆ ಅದನ್ನು ಮೊದಲು ಸ್ವಯಂಚಾಲಿತ ಮಾಡಿ. ಉದಾಹರಣೆಗೆ ಕ್ರೆಡಿಟ್ ಕಾರ್ಡ್ ಪಾವತಿ, ದಿನಸಿ ಶಾಪಿಂಗ್, ಯುಟಿಲಿಟಿ ಪಾವತಿ ಇತ್ಯಾದಿ. ಒಂದು ಸಾಫ್ಟ್ವೇರ್ ಮೂಲಕ ಇವುಗಳನ್ನು ನೀವು ಸ್ವಯಂಚಾಲಿತ ಮಾಡಬಹುದೆಂದರೆ ಮಾಡಿಬಿಡಿ. ದೀರ್ಘಾವಧಿಯಲ್ಲಿ ಇವೆಲ್ಲವೂ ಅಧಿಕ ಸಹಕರಿಸುತ್ತವೆ.
ನಾವು ಯಾವಾಗಲೂ ಆದ್ಯತೆ(priority) ಇರುವ ಕೆಲಸದ ಮೇಲೆ ಗಮನ ಹರಿಸುತ್ತೇವೆ. ಆದರೆ ಲೇಖಕರು ನೀವು ಕೇವಲ ಆದ್ಯತೆ ಇರುವ ಕೆಲಸವನ್ನು ಮಾಡುತ್ತಿದ್ದರೆ ಆ ಜಾಗದಲ್ಲೇ ಇರುತ್ತೀರ ಎಂದು ಹೇಳುತ್ತಾರೆ. ಹೀಗಾಗಿ ಇದರ ಬದಲು ನಾಳೆ ನಿಮ್ಮ ಸಮಯವನ್ನು ಉಳಿಸುವ ಗಮನಾರ್ಹ(significant) ಕೆಲಸವನ್ನು ಮಾಡಿ. ಉದಾಹರಣೆಗೆ ನಾನು ದಿನವೂ ಎಡಿಟಿಂಗ್ ಮಾಡುತ್ತಿದರೆ, ಇದು ನನ್ನ ಆದ್ಯತೆಯಾ ಕಾರ್ಯವಾಗುತ್ತದೆ. ನಾನು ಇದರ ಬದಲು ಒಬ್ಬರನ್ನು ಮಜೂರಿ(hire) ನೀಡಿದರೆ, ಮುಂದಿನ ಅಧಿಕ ಸಮಯ ಉಳಿಯುತ್ತದೆ. ಹೀಗಾಗಿ ನೀವು ಕೂಡ ನಿಮ್ಮ ಮುಂದಿನ ಸಮಯವನ್ನು ಉಳಿಸುವ ಕೆಲಸವನ್ನು ಮಾಡಿ ಇದಕ್ಕೆ ಸ್ವಯಂಚಾಲನೇ ಮತ್ತು ನಿಯೋಜನೆ ತುಂಬಾನೇ ಸಹಕರಿಸುತ್ತದೆ.
ಸ್ಟೀವ್ ಜಾಬ್ಸ್(steve jobs) ಮತ್ತು ಮಾರ್ಕ್ ಜುಕರ್ಬರ್ಗ್(mark zuckerberg) ರೀತಿಯ ಶ್ರೀಮಂತರ ಹತ್ತಿರ ಕೋಟಿಗಟ್ಟಲೆ ಹಣವಿದೆ. ಆದರೂ ಅವರು ಒಂದೇ ತರಹದ ಬಟ್ಟೆಗಳನ್ನು ದಿನವು ಧರಿಸುತ್ತಾರೆ. ಇದು ಏಕೆ? ಇದು ಏಕೆಂದರೆ ಅವರ ನಿರ್ಧಾರದ ಆಯಾಸವನ್ನು(decision fatigue) ನಂಬುತ್ತಾರೆ.
ಬೆಳಗ್ಗೆ ನಿಮ್ಮಗೆ ನಿರ್ಧಾರ ತೆಗೆದುಕೊಳ್ಳಬೇಕಿದ್ದರೆ ದೊಡ್ಡ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಾ. ಆದರೆ ರಾತ್ರಿಯಾಗುತ್ತಾ ನಮ್ಮ ನಿರ್ಧಾರ ತೆಗೆದುಕೊಳ್ಳುವ ಪ್ರಮಾಣವು ಕುಗ್ಗುತ್ತದೆ. ಆ ಸಮಯದಲ್ಲಿ ನಮ್ಮ ಹತ್ತಿರ ಏನಾದರೂ ಒಳ್ಳೆಯದನ್ನು ಇಟ್ಟರೆ ಅದರ ಮೇಲೆ ಆಕರ್ಷಿತರಾಗುತ್ತೇವೆ. ಏಕೆಂದರೆ ಆ ಸಮಯದಲ್ಲಿ ನಮ್ಮ ಸಂಕಲ್ಪ ಶಕ್ತಿ(will power) ಕಡಿಮೆ ಇರುತ್ತದೆ. ಹೀಗಾಗಿ ಈ ದೊಡ್ಡ ಜನರು, "ನಾವು ಅನೇಕ ನಿರ್ಧಾರ ತೆಗೆದುಕೊಳ್ಳುವುದರಿಂದ ನಿರ್ಧಾರದ ಆಯಾಸವಾಗುತ್ತದೆ ಎಂದು ನಂಬಿರುತ್ತಾರೆ. ಈಗಾಗಿ ನೀವು ತಿರಸ್ಕರಿಸಬಹುದಾದ ನಿರ್ಧಾರಗಳನ್ನು ತಿರಸ್ಕರಿಸಿ, ಉದಾಹರಣೆಗೆ ಯಾವ ಬಟ್ಟೆಯನ್ನು ಧರಿಸಬೇಕು? ಇತ್ಯಾದಿ.
ಇದನ್ನು ಓದಿ: ಈ ಸರಳ ತಂತ್ರದ ಮೂಲಕ ಮಾರುಕಟ್ಟೆಯನ್ನು ಸೋಲಿಸಿಈ ಹವ್ಯಾಸದಲ್ಲೂ ನಾನು ಹಿಂದೆ ಇದ್ದೇನೆ. ನಾನು ಕೆಲವೊಮ್ಮೆ ಜನರಿಗೆ "ಇಲ್ಲ" ಎನ್ನಲು ಸಾಧ್ಯವಾಗುವುದಿಲ್ಲ.
"the difference between unsuccessful and really successful person is almost always say no to everything" ಎಂದು ಇದಕ್ಕೆ ಸಂಬಂದಿಸಿದ ಉಲ್ಲೇಖವಿದೆ(quote).
ಬದಲಿಗೆ ವಾರೆನ್ ಬಫೆಟ್(warren buffet) ಈ ರೀತಿ ಹೇಳುತ್ತಾರೆ, "ನಾನು ಒಳ್ಳೆಯ ಸ್ಟಾಕ್ ಖರೀದಿಸಿದರಿಂದ ಶ್ರೀಮಂತನಾಗಿಲ್ಲ, ಬದಲಿಗೆ ನಾನು ತಿರಸ್ಕರಿಸಿದ್ದ 99 ರಷ್ಟು ಕೆಟ್ಟ ಸ್ಟಾಕ್ಗಳಿಂದ ನಾನು ಶ್ರೀಮಂತನಾದೆ". ಇಂದು ಗೊಂದಲಗಳು ಅಧಿಕವಿದೆ ನಾವು ಯಾವುದರಲ್ಲಾದರೂ ನಿರತವಿರುತ್ತೇವೆ. ಈ ಗೊಂದಲಗಳಿಂದ ಉಳಿದು ನಮ್ಮ ಗುರಿಯ ಕಡೆಗೆ ಹೋಗಬೇಕಿದ್ದರೆ "ಇಲ್ಲ" ಎನ್ನಲು ಕಲಿಯಬೇಕು.
ಸ್ಟೀವ್ ಜಾಬ್ಸ್ ಅವರು ಅನೇಕ ಬಾರಿ ಸಿಲಿಕಾನ್ ವ್ಯಾಲಿಯಲ್ಲಿ(silicon valley) ನಡೆದಾಡುತ್ತಿದ್ದರು. ಅನೇಕ ಬಾರಿ ಅವರು ಅವರ ಸಹೋದ್ಯೋಗಿಗಳನ್ನು(collegues) ಕರೆದುಕೊಂಡು ನಡೆದಾಡುತ್ತಿದ್ದರು. ಇದರಿಂದ ಅವರ ಆರೋಗ್ಯ ಚೆನ್ನಾಗಿರುತ್ತಿತ್ತು ಮತ್ತು ಅವರ ಅನೇಕ ಕೆಲಸ ಮತ್ತು ಮೀಟಿಂಗ್ ಕೂಡ ಆಗುತ್ತಿತ್ತು. ಇದೇ ರೀತಿ ಜೇಮ್ಸ್ ಕ್ಲಿಯರ್(james clear) ಅವರು ಆಟೋಮಿಕ್ ಹ್ಯಾಬಿಟ್ಸ್(atomic habits) ಪುಸ್ತಕದಲ್ಲಿ "club your good habit with a bad one" ಎಂದು ಹೇಳುತ್ತಾರೆ. ಏಕೆಂದರೆ ಕೆಲವೊಮ್ಮೆ ಒಳ್ಳೆಯ ಹವ್ಯಾಸಗಳನ್ನು ಪಾಲಿಸುವುದರಿಂದ ಕೆಲಸ ಆಗುವುದಿಲ್ಲ. ಬದಲಿಗೆ ಒಳ್ಳೆಯ ಹವ್ಯಾಸಗಳನ್ನು ಕೆಟ್ಟ ಹವ್ಯಾಸಗಳ ಜೊತೆಗೆ ಸಂಘಟಿಸುವುದರಿಂದ ಅದು ಸುಲಭವಾಗುತ್ತದೆ. ಉದಾಹರಣೆಗೆ ನೀವು ರೀಲ್ಸ್ ನೋಡುತ್ತಿದ್ದರೆ ನಿಮ್ಮ ಮೆದುಳು ಹಾಳಾಗುತ್ತದೆ ಮತ್ತು ನೀವು ದೈಹಿಕವಾಗಿ ಕೂಗುತ್ತೀರಾ. ಹೀಗಾಗಿ ನಿಮಗೆ ರೀಲ್ಸ್ ನೋಡಬೇಕಿದ್ದರೆ ಎದ್ದು ನಿಂತು ನಡೆದಾಡುತ್ತಾ ನೋಡಿ.
ಇದನ್ನು ಓದಿ: ಈ 12 ತತ್ವಗಳನ್ನು ಕಲಿಯಲು ಜನರು ಜೀವಿತಾವಧಿಯನ್ನು ತೆಗೆದುಕೊಳ್ಳುತ್ತಾರೆಪ್ರತಿಯೊಬ್ಬರು ಒಂದು ಒಳ್ಳೆಯ ದೇಹ ಮಾಡಬೇಕೆನ್ನುತ್ತಾರೆ. ಆದರೆ ನಿಯಮಿತವಾಗಿ ಅವರಿಗೆ ಜಿಮ್ಗೆ(gym) ಹೋಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ನೀವು ದಿನದಲ್ಲಿ ತುಂಬಾ ಶಕ್ತಿಯುತ ಇರುವ ಒಂದು ವ್ಯಾಯಾಮವನ್ನು ಮಾಡಿ. ನೀವು ಕೇವಲ 1 ನಿಮಿಷ ವ್ಯಾಯಾಮ ಮಾಡಿ. ಪ್ಲಾಂಕ್, ಪುಶಪ್ಸ್, ಸೂರ್ಯನಮಸ್ಕಾರ ರೀತಿಯ ವ್ಯಾಯಾಮವನ್ನು ಮಾಡಿ. ನಿಮ್ಮ ದೇಹದ ಅನೇಕ ಭಾಗಗಳು ಪ್ರಯೋಜನವನ್ನು ತೆಗೆದುಕೊಳ್ಳುವ ವ್ಯಾಯಮವನ್ನು ಮಾಡಿ. ಇದರಿಂದ ಕನಿಷ್ಠ ಸಮಯದಲ್ಲಿ ಅಧಿಕ ಲಾಭವನ್ನು ಪಡೆಯಬಹುದು.
ಜನರು ಗುರಿಯ ನಿರ್ಧಾರವನ್ನು ಮಾಡುವಾಗ ಅವರು ಏನೇನು ಮಾಡಬೇಕೆಂಬುದನ್ನು ನೋಡುತ್ತಾರೆ. ಆದರೆ ಇಂದು ಮಾಡೋಕೆ ಅನೇಕ ವಿಷಯಗಳಿವೆ. ಇದರ ಬದಲಿಗೆ ನಾವು ಯಾವುದನ್ನು ಮಾಡಬಾರದು ಎಂಬುದರ ಮೇಲೆ ಗಮನ ಹರಿಸಬೇಕು. ಉದಾಹರಣೆಗೆ ರೀಲ್ಸ್ ನೋಡುವುದಿಲ್ಲ, ಅಧಿಕ ಸಕ್ಕರೆ ತಿನ್ನುವುದಿಲ್ಲ, ಈ ರೀತಿಯಾಗಿ "do not eat list" ಅನ್ನು ಮಾಡಬಹುದು. ಭಾರತದಲ್ಲಿ ಹತ್ತರಲ್ಲಿ ಒಬ್ಬರಿಗೆ ಮಧುಮೇಹವಿದೆ(diabites) ಮತ್ತು ನಾಲ್ಕರಲ್ಲಿ ಒಬ್ಬರಿಗೆ ರಕ್ತದೊತ್ತಡವಿದೆ(blood pressure). ಹೀಗಾಗಿ "make a do not eat list" ಮಾಡುವುದನ್ನು ಗಂಭೀರವಾಗಿ ಪರಿಗಣಿಸಿ. ನೀವು ಯಾವುದನ್ನು ತಿನ್ನಬಾರದು ಎಂಬ ಒಂದು ಪಟ್ಟಿಯನ್ನು ಮಾಡಿ. ಒಮ್ಮೆಲೇ ಈ ಪಟ್ಟಿಯನ್ನು ಮಾಡುವ ಅವಶ್ಯಕತೆ ಇಲ್ಲ. ನಿಧಾನವಾಗಿ ಪ್ರತಿದಿನ ಯೋಚಿಸುತ್ತಾ ಈ ಪಟ್ಟಿಯನ್ನು ಮಾಡಿ.
ಉದಾಹರಣೆಗೆ "ನಾನು ಚೈನೀಸ್ ಆಹಾರವನ್ನು ತಿನ್ನುವುದಿಲ್ಲ, ಏಕೆಂದರೆ ಅನೇಕ ಡಾಕ್ಟರ್ಗಳು ಅದು ಆರೋಗ್ಯಕ್ಕೆ ಹಾಳುಮಾಡುತ್ತದೆ ಎನ್ನುತ್ತಾರೆ". ನೀವು "ಇಲ್ಲ" ಎನ್ನಬಹುದಾದ ಒಂದನ್ನು ಈ ಪಟ್ಟಿಯಲ್ಲಿ ಹಾಕಿ ಮತ್ತು ಪ್ರತಿವಾರ ಇಲ್ಲ ತಿಂಗಳು ಈ ಪಟ್ಟಿಯಲ್ಲಿ ಇನ್ನಷ್ಟು ಆಹಾರಗಳನ್ನು ಸೇರಿಸಬಹುದು. ಇದನ್ನು ಮಾಡುತ್ತಿರುವುದರಿಂದ ನಿಮ್ಮ ಆಹಾರ ಯೋಜನೆ(diet plan) ಸೃಷ್ಟಿಯಾಗುತ್ತದೆ. ಇದನ್ನು ನಿಮ್ಮ ಗುರಿಗೂ ಪರಿಗಣಿಸಬಹುದು.
ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳುತುಂಬಾ ಜನ ಇಂದಿಗೂ ಹಳೆಯ ವ್ಯವಹಾರ(old business) ತಂತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ವರ್ಷಗಳಿಂದ ಅವರು ಆ ರೀತಿಯ ತಂತ್ರದಲ್ಲೇ ಕೆಲಸ ಮಾಡುತ್ತಿದ್ದಾರೆ. ಇದರಿಂದ ಒಬ್ಬ ಹೊಸ ವ್ಯಕ್ತಿ ಬಂದು ಹೊಸದಾದ ರೀತಿಯಲ್ಲಿ ಕೆಲಸ ಮಾಡಿ ಅವರನ್ನು ಹಿಂತಿರುಗಿಸುತ್ತಾನೆ. ಉದಾಹರಣೆಗೆ ಮೊದಲಿಗೆ ಅಧಿಕ ವ್ಯವಹಾರಗಳು ನಡೆಯುತ್ತಿದ್ದವು, ಆದರೆ ಇಂದು ಆನ್ಲೈನ್ ಇರುವ ವ್ಯವಹಾರಗಳು ಮಾತ್ರ ನಡೆಯುತ್ತೀವೆ. ಏಕೆಂದರೆ ಈ ವ್ಯವಹಾರಗಳು ನಂಬಿಕೆಯನ್ನು ಗಳಿಸುತ್ತೀವೆ. ಇದನ್ನೆಲ್ಲ ತಿಳಿದ ನಂತರ ಅನೇಕ ಜನರು ಅವರ "ಡಾರ್ಲಿಂಗ್" ಎಂದರೆ ಅವರ ಹಳೆಯ ತಂತ್ರಗಳನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನೀವು ಮಾಡುತ್ತಿರುವ ಕೆಲಸದಲ್ಲಿ ಉಪಯುಕ್ತವಿಲ್ಲದ ಒಂದನ್ನು ಬಿಡಲು ಪ್ರಯತ್ನಿಸಿ.
ನಾವು ಭಾರತೀಯರು ಸಾಮಾನ್ಯವಾಗಿ ಒಂದು ಕಡೆಗೆ ಸರಿಯಾದ ಸಮಯದಲ್ಲಿ ತಲುಪುವುದಿಲ್ಲ. ಆದರೆ ನಾವು ತಿಳಿಸಿದ ಈ ಚಿಕ್ಕ ಹವ್ಯಾಸವನ್ನು ಫಾಲೋ ಮಾಡುವುದರಿಂದ ತುಂಬಾನೇ ಉಪಯುಕ್ತವಾಗುತ್ತದೆ. ಅಂದರೆ ನೀವು ಯಾವುದಾದರೂ ಸೆಮಿನಾರ್(seminar) ಇಲ್ಲ, ವ್ಯಕ್ತಿಯನ್ನು ಭೇಟಿಯಾಗಲು ಹೋಗುತ್ತಿದರೆ, 5 ನಿಮಿಷ ಮುಂಚೆಯೇ ಅಲ್ಲಿ ಇರಿ. ಇದು ಒಂದು ಒಳ್ಳೆಯ ಅನಿಸಿಕೆಯನ್ನು(impression) ಸೃಷ್ಟಿಸಲು ಸಹಕರಿಸುತ್ತದೆ. ಇದು ಏಕೆಂದರೆ ಅನೇಕರು ಸಮಯಕ್ಕೆ ಸರಿಯಾಗಿ ತಲುಪುವುದಿಲ್ಲ.
ಈಗ ಡಿಜಿಟಲ್ ಹವ್ಯಾಸದ(digital habits) ಕಡೆ ಬರೋಣ. ಏಕೆಂದರೆ ಇಂದು ಅನೇಕ ಕೆಟ್ಟ ಹವ್ಯಾಸಗಳು ಡಿಜಿಟಲ್ ಹವ್ಯಾಸದಿಂದಲೇ ಆಗುತ್ತಿದೆ. ನರೇಂದ್ರ ಮೋದಿಯವರು ಡಿಜಿಟಲ್ ಉಪವಾಸವನ್ನು(digital fasting) ಮಾಡಲು ಹೇಳುತ್ತಾರೆ. ಅಂದರೆ ಮನೆಯಲ್ಲಿ ತಾಂತ್ರಿಕ ಮುಕ್ತ ವಲಯಗಳನ್ನು(tech free zones) ಮಾಡಲು ತಿಳಿಸುತ್ತಾರೆ. ಏಕೆಂದರೆ ಇದು ನಮಗೆ ಒಂದು ದೊಡ್ಡ ಸಮಸ್ಯೆಯಾಗಿದೆ. ನಾವು ತಿಳಿಸುವ ಈ ಹವ್ಯಾಸವನ್ನು ಬಳಸಿ, ನೀವು ಈ ಡಿಜಿಟಲ್ ಹವ್ಯಾಸದಿಂದ ಉಳಿಯಬಹುದು.
ಇದನ್ನು ಓದಿ: "Secrets of the Millionaire Mind" ಪುಸ್ತಕದ ಸಾರಾಂಶಇದರಲ್ಲಿ ನೀವು ವಾರ ಇಲ್ಲ ದಿನದಲ್ಲಿ, ನಿಮ್ಮ ಮೇಲ್(mail) ನೋಡಲು ಒಂದು ಸಮಯವನ್ನು ನಿಗದಿಪಡಿಸಿ. ಆ ಮೇಲ್ ಓದಲು ಹೋದಾಗ, RD4 ತಂತ್ರವನ್ನು ಬಳಸಬೇಕು. ಅಂದರೆ reply, delete, do, delegate ಮತ್ತು differ. ನೀವು ಪ್ರತ್ಯುತ್ತರ(reply) ನೀಡಿದ ತಕ್ಷಣವೇ ಕೆಲಸ ಮುಗಿಸುವುದಾದರೆ ಅದನ್ನು ಅಲ್ಲೇ ಮುಗಿಸಿಬಿಡಿ. ನಿಮಗೆ ಅವಶ್ಯಕತೆ ಇಲ್ಲದಿರುವುದನ್ನು ನಿಯೋಜಿಸಿ(delegate). ಯಾವುದಾದರೂ ತುರ್ತುವಿದ್ದು ಈಗಲೇ ಮುಗಿಸಬಹುದೆಂದರೆ ಮುಗಿಸಬಿಡಿ. ಯಾರಿಗಾದರೂ ನಿಯೋಜಿಸಬಹುದೆಂದರೆ ನಿಯೋಜಿಸಿಬಿಡಿ. ಇದರ ಜೊತೆಗೆ ಎಲ್ಲಾ ರೀತಿಯ ಅನಗತ್ಯ ಮೇಲ್ ಚಂದಾದಾರಿಕೆಯನ್ನು(unwanted mail subscription) ನಿರ್ಲಕ್ಷಿಸಿ. ಏಕೆಂದರೆ ಇವುಗಳು ಅನಗತ್ಯವಾಗಿ ನಿಮ್ಮ ಸಮಯವನ್ನು ತೆಗೆದುಕೊಳ್ಳುತ್ತದೆ.
ಈ ತಂತ್ರದ ಪ್ರಕಾರ ನೀವು ಒಬ್ಬ ವ್ಯಕ್ತಿಗೆ ಸಂದೇಶದ ಮೂಲಕ ವಿಷಯ ತಿಳಿಸಲು ಸಾಧ್ಯವಿಲ್ಲದಿದ್ದಾಗ ಆಡಿಯೋ ಸಂದೇಶವನ್ನು ಕಳಿಸಿ ಬಿಡಿ. ಏಕೆಂದರೆ ಪಠ್ಯ ಸಂದೇಶದಿಂದ(text message) ತಪ್ಪು ತಿಳುವಳಿಕೆ(misunderstanding) ಆಗಬಹುದು. ಇಲ್ಲ 10 ಸೆಕೆಂಡ್ನಲ್ಲಿ ಹೇಳಿ ಮುಗಿಸಬಹುದಾದ ವಿಷಯಕ್ಕೆ 1 ನಿಮಿಷ ತೆಗೆದುಕೊಳ್ಳುತ್ತದೆ. ಹೀಗಾಗಿ ಆಡಿಯೋ ನೋಟ್ಸ್ ಇಲ್ಲ, ಕರೆ ಮಾಡುವ ಮೂಲಕ ನಿಮ್ಮ ಸಮಯವನ್ನು ಉಳಿಸಿ, ಇದು ಕೆಲವು ಅಂತರ್ಮುಖಿಗಳಿಗೆ(introvert) ಅಸಂಬದ್ಧವೆನಿಸಬಹುದು. ಆದರೆ ಇದು ನಿಮ್ಮ ಸಮಯವನ್ನು ಉಳಿಸುವುದಲ್ಲದೆ, ಉತ್ತಮವಾದ ಸಂವಹನವನ್ನು ಮಾಡಲು ಸಹಕರಿಸುತ್ತದೆ.
ಇದನ್ನು ಓದಿ: 30 ದಿನದಲ್ಲಿ ನಿಮ್ಮ ಜೀವನವನ್ನು ಬದಲಿಸಿಕೊಳ್ಳುವುದು ಹೇಗೆ?ನನಗೆ ಕೆಲವು ವಿಷಯಗಳನ್ನು ಬೆಳಗ್ಗೆ ಮಾಡಲು ಆಸಕ್ತಿ ಇರುತ್ತದೆ. ಇದೇ ರೀತಿ ಎಲ್ಲರ ಜೀವನದಲ್ಲೂ ಹಸಿರು, ಹಳದಿ ಮತ್ತು ಕೆಂಪು ವಲಯಗಳು ಇರುತ್ತದೆ. ಅಂದರೆ ಕೆಲವು ಕೆಲಸಗಳನ್ನು ರಾತ್ರಿಯಲ್ಲಿ ಮಾಡಲು ಸಾಧ್ಯವಾಗುವುದಿಲ್ಲ, ಉದಾಹರಣೆಗೆ ಸ್ಕ್ರಿಪ್ಟ್ ಬರೆಯುವುದು. ನನಗೆ ಬೆಳಗ್ಗೆ ಒಳ್ಳೆಯ ಸ್ಕ್ರಿಪ್ಟ್ ಬರೆಯಲು ಸಾಧ್ಯವಾಗುತ್ತದೆ. ಇದೇ ರೀತಿ ನೀವು ನಿಮ್ಮ ಯಾವ ಕೆಲಸ ಯಾವ ವಲಯಕ್ಕೆ ಹೋಗುತ್ತದೆ ಎಂಬುದನ್ನು ನೋಡಿ ಮತ್ತು ಅದಕ್ಕೆ ಹೊಂದಿಸಿ. ಕೆಲವರಿಗೆ ಕಷ್ಟಕರವಾದ ಕೆಲಸವನ್ನು ರಾತ್ರಿಯಲ್ಲಿ ಮಾಡಲು ಇಷ್ಟವಾಗುತ್ತದೆ. ನೀವು "eat that frog" ತಂತ್ರ ಕೆಲಸ ಮಾಡುತ್ತಿದೆಯೇ ಎಂದು ನೋಡಿ. ಒಂದು ವೇಳೆ ಕೆಲಸ ಮಾಡುತ್ತಿಲ್ಲವೆಂದರೆ ಈ ತಂತ್ರವನ್ನು ಒಮ್ಮೆ ಪ್ರಯತ್ನಿಸಿ. ನಿಮ್ಮ ಪ್ರತಿಯೊಂದು ಕೆಲಸಕ್ಕೂ ಹಸಿರು, ಹಳದಿ ಮತ್ತು ಕೆಂಪು ವಲಯವನ್ನು ನೀಡಿ. ಸಂಜೆಯ ಸಮಯದಲ್ಲಿ ನೀವು ಅಷ್ಟು ಸೃಜನಶೀಲವಾಗಿ ಇರುವುದಿಲ್ಲ. ಹೀಗಾಗಿ ಆ ಸಮಯದಲ್ಲಿ ಅಧಿಕ ಬುದ್ಧಿ ಖರ್ಚಾಗದ ವಿಷಯಗಳನ್ನು ಮಾಡಿ.
ನಾವು ಪ್ರಮುಖ ಕೆಲಸವನ್ನು ಮಾಡಲು ಕೂತಾಗ ಹಠಾತ್ ಆಗಿ ಒಂದು ನೋಟಿಫಿಕೇಶನ್ ಇಲ್ಲ ಕರೆ ಬರುತ್ತದೆ. ಇವು ನಮ್ಮನ ವ್ಯಾಕುಲ ಮಾಡುತ್ತದೆ, ನಮಗೆ ಪ್ರಾರಂಭದಲ್ಲಿ ಗಮನಹರಿಸಲು ಎಷ್ಟೋ ನಿಮಿಷಗಳು ಬೇಕಾಗುತ್ತದೆ. ಹೀಗಾಗಿ ನೀವು ಪ್ರಮುಖ ಕೆಲಸ ಮಾಡುವಾಗ ಸಾಧ್ಯವಾದರೆ ನೋಟಿಫಿಕೇಶನ್ ಆಫ್ ಮಾಡಿ. "do not a disturb mode" ಹಾಕಿ, ಫೋನನ್ನು ಬದಿಯಲ್ಲಿ ಇಡಿ. ಪೊಮೊಡೊರೊ(pomodoro) ತಂತ್ರದ ಮೂಲಕ ಕೆಲವು ಸಮಯವನ್ನು ಆ ಕೆಲಸಕ್ಕೆ ನೀಡಿ. ಇದುವೇ ಝೆನ್ ಮೋಡ್(zen mode) ಆಗಿದೆ.
ಇದನ್ನು ಓದಿ: ಆರಂಭಿಕ ಆರ್ಥಿಕ ಸ್ವತಂತ್ರಕ್ಕಾಗಿ 5 ನಿಯಮಗಳುಕೆಲವೊಂದು ಅಪ್ಲಿಕೇಶನ್ ನಿಮ್ಮ ಆಧ್ಯಾತ್ಮಿಕತೆಗೆ(sprituality) ಸಹಕರಿಸುತ್ತವೆ. ಕೆಲವೊಮ್ಮೆ ನಾನು ತುಂಬಾ ಒತ್ತಡದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ಇದರಿಂದ ಹೋರಾಡಲು ಉತ್ಪಾದಕತೆ ಅಪ್ಲಿಕೇಶನ್ಗಳು ಸಹಕರಿಸುತ್ತವೆ. ಇದರಿಂದ ಅವುಗಳನ್ನು ಬಳಸಬೇಕ ಅಥವಾ ಇಲ್ಲವೇ ಎಂಬ ಸ್ಪಷ್ಟತೆ ಸಿಗುತ್ತದೆ. ಇಂತಹ ಅಪ್ಲಿಕೇಶನ್ಗಳಿಂದ ಸಾಕಷ್ಟು ಸಮಯ ಉಳಿಯುತ್ತದೆ.
ನಾನು ಏನಾದರೂ ಕಲಿಯಬೇಕಿದ್ದರೆ ಅನೇಕ ಮಾಹಿತಿಗಳನ್ನು(data) ಸಂಗ್ರಹಿಸಿ ಇಟ್ಟುಕೊಂಡಿರುತ್ತೇನೆ. ಮುಂಚೆ ಅವುಗಳನ್ನು ಡೌನ್ಲೋಡ್ ಮಾಡಿ ಫೋಲ್ಡರ್ನಲ್ಲಿ ಹಾಕುತ್ತಿದೆ. ಆದರೆ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಕೇವಲ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ನಾವು ಅನೇಕ ಪುಸ್ತಕಗಳನ್ನು ಖರೀದಿಸುತ್ತೇವೆ, ಆದರೆ ಅವುಗಳನ್ನು ಓದುವುದಿಲ್ಲ. ಅನೇಕ ಪಠ್ಯಕ್ರಮಗಳನ್ನು(course) ಖರೀದಿಸುತ್ತೇವೆ, ಆದರೆ ಅವುಗಳನ್ನು ಸಂಪೂರ್ಣವಾಗಿ ಮುಗಿಸುವುದಿಲ್ಲ.
ಹೀಗಾಗಿ ಮೊದಲಿಗೆ ನೀವು ನಿಮ್ಮ ಹತ್ತಿರ ಇರುವ ವಸ್ತುಗಳನ್ನು ಸಂಪೂರ್ಣವಾಗಿ ಮುಗಿಸಲು ಪ್ರಯತ್ನಿಸಿ. ನಿಮಗೆ ಆಸಕ್ತಿ ಎನಿಸುವ ವಸ್ತುಗಳಿದರೆ ಅವುಗಳನ್ನು ಖರೀದಿಸಿ. ಆದರೆ ಅದನ್ನು ಖರೀದಿಸಿದ ನಂತರ ಬಳಸಿ ಇಲ್ಲ ಓದಿ. ಕನಿಷ್ಠ ಅದಕ್ಕಾಗಿ 1 ರಿಂದ 2 ಗಂಟೆಯಷ್ಟು ಸಮಯ ನೀಡಿ. ಒಂದು ವೇಳೆ ಅಷ್ಟು ಸಮಯ ನೀಡಲು ಸಾಧ್ಯವಾಗುತ್ತಿಲ್ಲವೆಂದರೆ ಅದನ್ನು ನಿರ್ಲಕ್ಷಿಸಿ. ಏಕೆಂದರೆ ಮುಂದೆಯು ನೀವು ಅದನ್ನು ಮಾಡಲು ಸಾಧ್ಯವಾಗುವುದಿಲ್ಲ.
ನಾವು ಅನೇಕ ವಿಷಯಗಳನ್ನು ಕಲಿಯುತ್ತೇವೆ. ಆದರೆ ಅವುಗಳನ್ನು ಕಾರ್ಯಗತಗೊಳಿಸುವುದಿಲ್ಲ. ನಾನು ತಿಳಿಸಿದ 20 ಹವ್ಯಾಸಗಳನ್ನು ಪಾಲಿಸಲು ನಿಮಗೆ ಸಾಧ್ಯವಿಲ್ಲ. ಹೀಗಾಗಿ ಇವುಗಳಲ್ಲಿ ನಿಮಗೆ ಪ್ರಮುಖವೆನಿಸುವ 3 ಹವ್ಯಾಸಗಳನ್ನು ತಿಳಿದು, ಅನ್ವಯಿಸಲು ಪ್ರಯತ್ನಿಸಿ. ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡ ನಂತರ ಮುಂದಿನ ಹವ್ಯಾಸವನ್ನು ಕಲಿಯಲು ಗಮನ ಆರಿಸಿ. ನೀವು ಇಂದಿನಿಂದಲೇ ಪಾಲಿಸುವ 3 ಹವ್ಯಾಸ ಯಾವುದು ಎಂಬುದನ್ನು ಕಮೆಂಟ್ ಭಾಗದಲ್ಲಿ ತಿಳಿಸಿ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
Mahithi Thana 918
Mahithi Thana 1040
See all comments...